ನನ್ನ ಪುಟಗಳು

05 ಆಗಸ್ಟ್ 2018

ಮಕ್ಕಳ ರಕ್ಷಣೆಯ ಹಕ್ಕು

ಪರಿವಿಡಿ :
ರಕ್ಷಣೆ
ಕಲ್ಪನೆ ಮತ್ತು ಸತ್ಯಾಂಶ
ಅಂಶಗಳು
ಲಿಂಗತಾರತಮ್ಯ
ಬಾಲ್ಯವಿವಾಹ
ಬಾಲಕಾರ್ಮಿಕ ಪದ್ಧತಿ
ಲೈಂಗಿಕ ದುರ್ಬಳಕೆ
ಶಾರೀರಿಕ ಶಿಕ್ಷೆಗಳು
ಪರೀಕ್ಷಾ ಒತ್ತಡ
ಬೀದಿಯ ಮತ್ತು ಓಡಿ ಬಂದ ಮಕ್ಕಳು
ಹೆಚ್ ಐ ವಿ
ಜಾತಿ ತಾರತಮ್ಯ
ಅಂಗವಿಕಲತೆ

ರಕ್ಷಣೆ

ಮಕ್ಕಳಿಗೆ ಯಾರಿಂದ ರಕ್ಷಣೆ
ನೀವು ಶಿಕ್ಷಕರಾಗಿ ನಿಮ್ಮ ವಶದಲ್ಲಿನ ಎಲ್ಲ ಮಕ್ಕಳಿಗೂ ರಕ್ಷಣೆಯ ಖಾತ್ರಿ ದೊರಕಿಸಬೇಕು. ಎಲ್ಲ ವಿಧದ
  • ಶೋಷಣೆ,
  • ಅಮಾನವೀಯವಾಗಿ ಮತ್ತು ಅವಮಾನಕಾರಿಯಾಗಿ ನಡಸಿಕೊಳ್ಳುವುದರಿಂದ,
  • ನಿರ್ಲಕ್ಷ್ಯ ಗಳಿಂದ

ರಕ್ಷಣೆ ಅಗತ್ಯ

ಎಲ್ಲ ಮಕ್ಕಳಿಗೂ ರಕ್ಷಣೆಯ ಅಗತ್ಯವಿದ್ದರೂ ಕೆಲವರು ಅವರ ಸಾಮಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ಹಿನ್ನೆಲೆಯಿಂದಾಗಿ ಇತರರಿಗಿಂತ ಹೆಚ್ಚು ತೊಂದರೆಗೆ ಈಡಾಗುವುದರಿಂದ   ,ಅವರಿಗೆ ವಿಶೇಷ ಗಮನದ ಅಗತ್ಯವಿರುತ್ತದೆ. ಇಂತಹ ಮಕ್ಕಳೆಂದರೆ
  • ಮನೆ ಇಲ್ಲದವರು( ಫುಟ್ ಪಾತ್ ನಿವಾಸಿಗಳು,ನಿರಾಶ್ರಿತರು, ಒಕ್ಕಲೆಬ್ಬಿಸಿದವರು,ನಿರ್ವಾಸಿತರು)
  • ಅಲೆಮಾರಿ ಮಕ್ಕಳು
  • ಬೀದಿ ಮಕ್ಕಳು ಮತ್ತು ಓಡಿಬಂದವರು
  • ಅನಾಥ ಮತ್ತು ತಾಯಿತಂದೆ ತೊರೆದ ಮಕ್ಕಳು
  • ಕೂಲಿಕಾರ ಮಕ್ಕಳು
  • ಬಾಲ ಭಿಕ್ಷುಕರು
  • ವೇಶ್ಯೆಯರ ಮಕ್ಕಳು
  • ಬಾಲ ವೇಶ್ಯೆಯರು
  • ಅನೈತಿಕ ಚಟುವಟಿಗೆಗಾಗಿ ಸಾಗಿಸಲಾದವರು
  • ಸಂಘರ್ಷಕ್ಕೆ ಒಳಗಾದವರು
  • ಹೆಚ್ ಐ ವಿ ಏಡ್ಸ್ (HIV AIDS) ಸೋಂಕಿತರು
  • ಮಾರಣಾಂತಿಕ ರೋಗದಿಂದ ನರಳುತ್ತಿರುವವರು
  • ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ  ಸೇರಿದವರು

ಕಲ್ಪನೆ ಮತ್ತು ಸತ್ಯಾಂಶ

ಎಲ್ಲ ವರ್ಗದ ಹೆಣ್ಣು ಮಕ್ಕಳು ಹೆಚ್ಚು ಅಸಾಹಾಯಕ.ಮಕ್ಕಳ ಶೋಷಣೆ ಮತ್ತು ದುರ್ಬಳಕೆಯ ಬಗೆಗಿನ  ಕೆಲವುಮಿಥ್ಯೆಗಳು ಹೀಗಿವೆ
  1. ಮಿಥ್ಯೆ:   ಮಕ್ಕಳು ಯಾವಾಗಲೂ ದುರ್ಬಳಕೆ ಮತ್ತು ಶೋಷಣೆಗೆ ಒಳಗಾಗಿಲ್ಲ . ಸಮಾಜ ತನ್ನ ಮಕ್ಕಳನ್ನು ಪ್ರೀತಿಸುವುದು.
    • ಸತ್ಯ:  ನಿಜ . ನಾವು  ನಮ್ಮ  ಮಕ್ಕಳನ್ನು ಪ್ರೀತಿಸುತ್ತೇವೆ. ಆದರೆ ಎಲ್ಲಿಯೋ ಏನೋ ತಪ್ಪಿಹೋಗಿದೆ.  ಭಾರತದಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಬಾಲಕಾರ್ಮಿಕರು ಇದ್ದಾರೆ.   ಹೆಚ್ಚಿನ ಸಂಖ್ಯೆಯ ಲೈಂಗಿಕ ದುರ್ಬಳಕೆಗೆ ಒಳಗಾದ ಮಕ್ಕಳಿದ್ದಾರೆ. ಗಂಡು ಹೆಣ್ಣಿನ ಪ್ರಮಾಣ ೦-೬ ವಯೋಮಾನದಲ್ಲಿ  ಅತಿ ಕನಿಷ್ಟ ವಾಗಿದೆ. ಇದು ಹೆಣ್ಣುಮಗುವಿನ ಬದುಕೆ ಅಪಾಯದಲ್ಲಿರುವುದನ್ನು ತೋರಿಸುವುದು. ಕೊನೆಗೆ ಅತಿಚಿಕ್ಕ ಹೆಣ್ಣು ಮಗುವನ್ನೂ ಕೂಡಾ ಮಾರುವರು ಇಲ್ಲವೇ ಕೊಂದು ಹಾಕುವರು.
    • ಮಕ್ಕಳ ವಿರುದ್ಧದ ಅಪರಾಧ ದಾಖಲಾತಿಯು ಅತಿ ದಾರುಣ ಕಥೆಹೇಳುತ್ತದೆ. ಸರ್ಕಾರಿ ದಾಖಲಾತಿಯ ಪ್ರಕಾರವೇ ಮಕ್ಕಳ ವಿರುದ್ಧದ ಅಪರಾಧಗಳ ಸಂಖ್ಯೆಯು  ೧೧.೧% ರಷ್ಟು ೨೦೦೨ ಮತ್ತು ೨೦೦೩ರಲ್ಲಿ ಹೆಚ್ಚಾಗಿದೆ. ವರದಿಯಾಗದ ಘಟನೆಗಳೂ ಅನೇಕ
  2. ಮಿಥ್ಯೆ:     ಮನೆಯು  ಅತಿ ಸುರಕ್ಷಿತ ಸ್ವರ್ಗ.
    • ಸತ್ಯ:    ಮನೆಯಲ್ಲಿನ ಮಕ್ಕಳ ದುರ್ಬಳಕೆಯ ಪ್ರಮಾಣವು ಈ ನಂಬಿಕೆಯನ್ನು ಸುಳ್ಳು ಎಂದು ತೋರಿಸುತ್ತದೆ.   ಅನೇಕ ಬಾರಿ ಮಕ್ಕಳನ್ನು ಅವರ ತಾಯಿತಂದೆಯರ ಖಾಸಗಿ ಆಸ್ತಿ ಎಂದುಕೊಂಡು ಅವರನ್ನು ಹೇಗೆ ಬೇಕಾದರೆ ಹಾಗೆ  (ಹೆಚ್ಚಾಗಿ ದರ್ಬಳಕೆ) ಬಳಸುವರು.
    • ತಂದೆಯಂದಿರೇ ಹೆಣ್ಣು ಮಕ್ಕಳನ್ನು  ಸ್ನೇಹಿತರಿಗೆ, ಅಪರಿಚಿತರಿಗೆ ಹಣಕ್ಕಾಗಿ ಮಾರುವುದಕ್ಕೆ ನಾವು ದಿನನಿತ್ಯ ಸಾಕ್ಷಿಗಳಾಗಿದ್ದೇವೆ. ಲೈಂಗಿಕ ದುರ್ಬಳಕೆಯ ಅಧ್ಯಯನವು, ನಿಷಿದ್ಧ ಸಂಭೋಗವು ಅತಿ ಸಾಮಾನ್ಯವಾದ ದುರ್ಬಳಕೆ ಎಂದು ತೋರಿಸಿದೆ. ಅನೇಕ ಸಲ ತಂದೇಯೇ ಮಗಳ ಮೇಲೆ ಅತ್ಯಾಚಾರ ಮಾಡಿದ ವರದಿಗಳು ಮಾಧ್ಯಮದಲ್ಲಿ ವರದಿಯಾಗಿವೆ ಅಲ್ಲದೆ ನ್ಯಾಯಾಲಯದಲ್ಲಿ ಸಾಬಿತಾಗಿವೆ. ಹೆಣ್ಣು ಶಿಶು ಹತ್ಯೆ , ಅಂದರೆ  ನವಜಾತ ಹೆಣ್ಣು ಮಗುವನ್ನು ಕೊಲ್ಲುವುದು, ಮೂಢ ನಂಬಿಕೆಯಿಂದ ಮಗುವಿನ ಬಲಿ, ಹೆಣ್ಣು ಹುಡುಗಿಯನ್ನು ದೇವರಿಗೆ ಬಿಡುವ ಪದ್ದತಿ ಮತ್ತು ಸಂಪ್ರದಾಯದ ಹೆಸರಲ್ಲಿ ಬಿಡುವುದು ,ದೇವದಾಸಿ ಮತ್ತು ಜೋಗಿನಿ ಪದ್ದತಿ ಭಾರತದ ಅನೇಕ ಕಡೆ ಜಾರಿಯಲ್ಲಿದೆ.   ಇವೆಲ್ಲ ಮನೆಯಲ್ಲಿ ನಡೆಯುವ ದೌರ್ಜನ್ಯಕ್ಕೆ ಕೆಲ ಉದಾಹರಣೆಗಳು. ಚಿಕ್ಕ ಹುಡುಗಿಗೆ ಬೇಗ ಮದುವೆ ಮಾಡುವುದು ಅವರ ಮೆಲಿನ ಪ್ರೀತಿಯಿಂದ ಅಲ್ಲ. ತಮ್ಮ ಹೊಣೆ ಕಳೆದು ಕೊಳ್ಳಲು , ಇನ್ನೊಬ್ಬರಿಗೆ  ಬೆಳಸುವ , ಕಾಪಾಡುವ ಜವಾಬ್ದಾರಿ ವರ್ಗಾಯಿಸುವ ಕ್ರಮವಾಗಿದೆ. ಅದರಿಂದ  ತಮ್ಮ ಮಗಳಿಗೆ ಆಗುವ  ಅನಾರೋಗ್ಯ ಮತ್ತು ಆಘಾತವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವುಗಳು ಅತಿ ವಿರಳ ಘಟನೆಗಳಾದರೆ ಮಗುವನ್ನು  ಕರುಣೆಯಿಲ್ಲದೆ ಹೊಡೆಯುವುದು  ಎಲ್ಲ  ಮನೆಗಳಲ್ಲಿನ ಸಮಾನ್ಯ ಅಭ್ಯಾಸವಾಗಿದೆ. ನಿರ್ಲಕ್ಷ್ಯ ಮಾಡುವದು ಬಡವ ,ಮತ್ತು ಶ್ರೀಮಂತ ಕುಟುಂಬ ಗಳೆರಡರಲ್ಲಿಯೂ ಕಂಡು ಬರುವ ಸಾಮಾನ್ಯ ಆಚರಣೆ. ಅದರಿಂದ ಮಕ್ಕಳ ವರ್ತನೆಯ ಸಮಸ್ಯೆಗಳು ಮೊದಲಾಗತ್ತವೆ, ವಿಶೆಷವಾಗಿ ಖಿನ್ನತೆಯು ಮಕ್ಕಳನ್ನು  ಕಾಡುವುದು
  3. ಮಿಥ್ಯೆ:    ಗಂಡು ಮಕ್ಕಳ ವಿಷಯದಲ್ಲಿ ಚಿಂತೆ ಮಾಡ ಬೇಕಿಲ್ಲ. ಗಂಡು ಮಕ್ಕಳಿಗೆ ಯಾವುದೇ ರಕ್ಷಣೆ ಬೇಕಿಲ್ಲ
    • ಸತ್ಯ:    ಗಂಡು ಮಗವೂ ಕೂಡಾ ಹೆಣ್ಣು ಮಗುವಿನಂತೆ  ದೈಹಿಕ, ಭಾವನಾತ್ಮಕ ದುರ್ಬಳಕೆಗೆ ಗುರಿಯಾಗುವುದು. ಹೆಣ್ಣು ಮಗುವು ಸಮಾಜದಲ್ಲಿನ  ತನ್ನ ಕೆಳ ಸ್ಥರದಿಂದಾಗಿ ಹೆಚ್ಚು ದುರ್ಬಲಳು.   ಗಂಡು ಮಗುವು  ಮನೆಯಲ್ಲಿ,  ಶಾಲೆಯಲ್ಲಿ ದೈಹಿಕ ಶಿಕ್ಷೆಗೆ  ಒಳಗಾಗುವುದು ಹೆಚ್ಚು. ಅನೇಕರನ್ನು ಕೂಲಿ  ಕೆಲಸ ಮಾಡಲು  ಕಳಹಿಸುವರು. ಅವರು ಲೈಂಗಿಕ ದುರ್ಬಳಕೆಗೆ ಗುರಿಯಾಗುವರು
  4. ಮಿಥ್ಯೆ:     ಇದು ನಮ್ಮ ಶಾಲೆಯಲ್ಲಿ / ಊರಿನಲ್ಲಿ ನೆಡೆಯುವುದಿಲ್ಲ.
    • ಸತ್ಯ:   ನಾವು ಪ್ರತಿಯೊಬ್ಬರೂ ಮಗುವಿನ ದುರ್ಬಳಕೆ  ಬೇರೆ ಎಲ್ಲಿಯೋ ನಡೆಯುವುದು  ಎಂದು ನಂಬುತ್ತೇವೆ- ನಮ್ಮ ಮನೆ , ನಮ್ಮಶಾಲೆ, ನಮ್ಮ ಊರು , ನಮ್ಮ ಸಮುದಾಯದಲ್ಲಿ ನಡೆಯುವುದಿಲ್ಲ ಎಂದು ಕೊಳ್ಳುತ್ತೇವೆ.   ಇದು ಬೇರೆ ಮಕ್ಕಳಿಗೆ ಬಾಧಿಸುತ್ತದೆ , ನಮ್ಮ ಮಕ್ಕಳಿಗೆ ಅಲ್ಲ, ಇದು ಬಡವರಲ್ಲಿ, ಕಾರ್ಮಿಕರಲ್ಲಿ, ನಿರುದ್ಯೋಗಿಗಳಲ್ಲಿ, ಅನಕ್ಷರಸ್ಥ ಕುಟುಂಬಕ್ಕೆ ಮಾತ್ರ ಸೀಮಿತ ಎಂದು ಭಾವಿಸುವೆವು. ಇದು ಮಧ್ಯಮ ವರ್ಗದ ಸಮಸ್ಯೆ ಮಾತ್ರ ,   ಇದು ನಗರ , ಪಟ್ಟಣಗಳಲ್ಲಿ ಇದೆ , ಗ್ರಾಮಾಂತರ ಪ್ರದೇಶಗಳಲ್ಲಿ ಇಲ್ಲ.  ಆದರೆ ವಾಸ್ತವವು ಈ ನಂಬಿಕೆಗೆ ವಿರುದ್ಧವಾಗಿದೆ. ದುರ್ಬಳಕೆಗೆ ಗುರಿಯಾದ ಮಕ್ಕಳು ಎಲ್ಲಾ ಕಡೆ ಇದ್ದು, ನಮ್ಮ ಬೆಂಬಲ ಮತ್ತು ಸಹಾಯದ ಅಗತ್ಯ ಅವರಿಗಿದೆ.
  5. ಮಿಥ್ಯೆ:    ದುರ್ಬಳಕೆ ಮಾಡುವವರು ಮಾನಸಿಕ ರೋಗಿಗಳು (ಸೈಕೋ ಪಾಥ್)
    • ಸತ್ಯ:  :  ದುರ್ಬಳಕೆ ಮಾಡುವವರು  ಜನ ಪ್ರಿಯ ನಂಬಿಕೆಯಂತೆ ಮನೋರೋಗಿಗಳಲ್ಲ. ಅವರು ತಮ್ಮ ಸಹಜತೆ ಮತ್ತು ವೈವಿಧ್ಯತೆಯಿಂದ ಎದ್ದು ಕಾತ್ತಾರೆ.    ಮಗುವನ್ನು ಲೈಂಗಿಕ ದುರ್ಬಳಕೆ ಮಾಡುವವರು ತಮ್ಮ ಕೃತ್ಯಯನ್ನು ವಿಭಿನ್ನ ರೀತಿಯಲ್ಲಿ  ಸಮರ್ಥಸಿಕೊಳ್ಳುವರು.  ಬಹಳ ಜನ ಆ ಕುಟುಂಬಕ್ಕೆ  ಪರಿಚಯದವರು ಮತ್ತು ಹತ್ತಿರದವರು. ಅವರ ಮೇಲಿರುವ ನಂಬಿಕೆಯನ್ನೇ ಆಯುಧವಾಗಿ ಬಳಸುವರು

ಅಂಶಗಳು


ಮಗುವಿನ ದುರ್ಬಳಕೆಯು ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕ , ಜನಾಂಗಿಯ ಕುಲದ  ಎಲ್ಲ ಗುಂಪುಗಳಲ್ಲಿ ಇದೆ.
ಸಂಶೋಧನೆ, ದಾಖಲೀಕರಣ,ಮತ್ತು ಸರಕಾರದ, ನಾಗರೀಕ ಸಮಾಜದ , ಸಮುದಾಯದ  ಮಧ್ಯವರ್ತನೆಗಳು ಮಗುವಿನ ರಕ್ಷಣೆಯ ವಿಷಯಗಳನ್ನು ಗಮನಿಸಿ ಈಗಾಗಲೆ ಯಾವ ವರ್ಗದ ಮಕ್ಕಗಳಿಗೆ ವೀಶೇಷ ರಕ್ಷಣೆ ಅಗತ್ಯ  ಎಂದು ವರ್ಗೀಕರಿಸಿವೆ.
  • ಲಿಂಗ (ಜೆಂಡರ್) ತಾರತಮ್ಯ
  • ಜಾತಿ ತಾರತಮ್ಯ
  • ಅಂಗವಿಕಲತೆ
  • ಹೆಣ್ಣು ಭ್ರೂಣ ಹತ್ಯೆ
  • ಶಿಶು ಹತ್ಯೆ
  • ಗೃಹ ಹಿಂಸೆ
  • ಮಗುವಿನ ಲೈಂಗಿಕ ದುರ್ಬಳಕೆ
  • ಬಾಲ ಕಾರ್ಮಿಕರು
  • ಬಾಲ್ಯ ವಿವಾಹ
  • ಬಾಲ ವ್ಯೇಶ್ಯಯರು
  • ಮಕ್ಕಳ ಸಾಗಣೆ
  • ಮಕ್ಕಳ ಬಲಿ
  • ಶಾಲೆಯಲ್ಲಿ ದೈಹಿಕ ಶಿಕ್ಷೆ
  • ಪರೀಕ್ಷಾ ಒತ್ತಡ ಮತ್ತು ವಿದ್ಯಾರ್ಥಿಗಳ ಆತ್ಮ ಹತ್ಯೆ
  • ನೈಸರ್ಗಿಕ ವಿಕೋಪಗಳು \ ಯುದ್ಧ ಮತ್ತು ಸಂಘರ್ಷ
  • ಹೆಚ್ ಐವಿ/ ಏಡ್ಸ್ (  HIV/AIDS).
ಮಗುವಿನ ದುರ್ಬಳಕೆಯು ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕ , ಜನಾಂಗಿಯ ಕುಲದ  ಎಲ್ಲ ಗುಂಪುಗಳಲ್ಲಿ ಇದೆ.ಸಂಶೋಧನೆ, ದಾಖಲೀಕರಣ,ಮತ್ತು ಸರಕಾರದ, ನಾಗರೀಕ ಸಮಾಜದ , ಸಮುದಾಯದ  ಮಧ್ಯವರ್ತನೆಗಳು ಮಗುವಿನ ರಕ್ಷಣೆಯ ವಿಷಯಗಳನ್ನು ಗಮನಿಸಿ ಈಗಾಗಲೆ ಯಾವ ವರ್ಗದ ಮಕ್ಕಗಳಿಗೆ ವೀಶೇಷ ರಕ್ಷಣೆ ಅಗತ್ಯ  ಎಂದು ವರ್ಗೀಕರಿಸಿವೆ.ಲಿಂಗ (ಜೆಂಡರ್) ತಾರತಮ್ಯಜಾತಿ ತಾರತಮ್ಯಅಂಗವಿಕಲತೆಹೆಣ್ಣು ಭ್ರೂಣ ಹತ್ಯೆಶಿಶು ಹತ್ಯೆಗೃಹ ಹಿಂಸೆಮಗುವಿನ ಲೈಂಗಿಕ ದುರ್ಬಳಕೆಬಾಲ ಕಾರ್ಮಿಕರುಬಾಲ್ಯ ವಿವಾಹಬಾಲ ವ್ಯೇಶ್ಯಯರುಮಕ್ಕಳ ಸಾಗಣೆಮಕ್ಕಳ ಬಲಿಶಾಲೆಯಲ್ಲಿ ದೈಹಿಕ ಶಿಕ್ಷೆಪರೀಕ್ಷಾ ಒತ್ತಡ ಮತ್ತು ವಿದ್ಯಾರ್ಥಿಗಳ ಆತ್ಮ ಹತ್ಯೆನೈಸರ್ಗಿಕ ವಿಕೋಪಗಳು \ ಯುದ್ಧ ಮತ್ತು ಸಂಘರ್ಷಹೆಚ್ ಐವಿ/ ಏಡ್ಸ್ (  HIV/AIDS).

ಲಿಂಗತಾರತಮ್ಯ

  1. ಮಿಥ್ಯೆ:   :  ಬಾಲ್ಯ ವಿವಾಹವು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ.  ಅವಿವಾಹಿತ ಹುಡುಗಿಯರು  ಬಲತ್ಕಾರ ಮತ್ತು ಲೈಂಗಿಕ ದುರ್ಬಳಕೆಗೆ ಹೆಚ್ಚು ಗುರಿಯಾಗುವರು.ಆದಷ್ಟು ಬೇಗ ಅವರ ಮದುವೆ ಮಾಡುವುದ ಉತ್ತಮ.   ಹುಡುಗಿಗೆ  ವಯಸ್ಸಾದಂತೆ ವರದಕ್ಷಿಣೆ ಮತ್ತು ಒಳ್ಳೆಯ ವರ ಹುಡುಕುವುದು ಕಷ್ಟವಾಗುವುದು.
  • ಸತ್ಯ:  ಯಾವುದೆ ದುರಾಚರಣೆ ಅಥವಾ ಕೆಟ್ಟ ಪದ್ದತಿಗೆ  ಸಂಸ್ಕೃತಿಯು ಒಂದು ನೆಪ ಆಗಬಾರದು. ಬಾಲ್ಯ ವಿವಾಹವು ನಮ್ಮ ಸಂಸ್ಕೃತಿಯಾದರೆ, ಗುಲಾಮಗಿರಿ, ಜಾತಿಯತೆ, ವರದಕ್ಷಿಣೆ,ಸತಿ ಪದ್ಧತಿಗಳು ಸಹಾ ಆಗಿದ್ದವು. ಆದರೆ ಈಗ ಆ ಅಪಾಯಕಾರಿ ಪದ್ಧತಿಗಳನ್ನು ನಿಷೇಧಿಸುವ ಕಾಯಿದೆಗಳು ನಮ್ಮಲ್ಲಿ  ಬಂದಿವೆ.  ಈ ಕಾಯಿದೆಗಳು ಸಮಾಜದ ಬೇಡಿಕೆಯ ಮೇರೆಗೆ  ಜಾರಿಗೆಬಂದವು. ಅಂದರೆ ಖಚಿತವಾಗಿ ಸಂಸ್ಕೃತಿಯು ಜಡವಲ್ಲ.
  • ಅಲ್ಲದೆ  ಒಂದೆ ಭೌಗೋಳಿಕ  ಪ್ರಧೇಶದಲ್ಲಿ  ಇದ್ದರೂ,  ವಿಭಿನ್ನ ಜನರು ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವುರು.  ಭಾರತದಲ್ಲಿ ಇರುವಂತೆ. ಬಹು ಕುಲದ, ಭಾಷೆಯ, ಧರ್ಮದ ಜನರು ತಮ್ಮದೇ  ಆದ ಸಂಸ್ಕೃತಿಯನ್ನು  ಅನುಸರಿಸುವರು. ಆದ್ದರಿಂದ ಭಾರತದ ಸಂಸ್ಕೃತಿಯು ಈ ಎಲ್ಲ ಸಂಸ್ಕೃತಿಗಳ ಮಿಶ್ರಣವಾಗಿದೆ.ಮತ್ತು ಕಾಲಾನುಕಾಲಕ್ಕೆ ಬದಲಾವಣೆಯಾಗುತ್ತ ಬಂದಿದೆ.
ನಾವು ನಮ್ಮ ಮಕ್ಕಳಿಗೆ ರಕ್ಷಣೆ ಬೇಕೆಂದು ಒಪ್ಪಿಕೊಂಡರೆ ನಮ್ಮ ಸಂಸ್ಕೃತಿಯು ಅದನ್ನು ಪ್ರತಿಬಿಂಬಿಸಬೇಕು.  ಖಂಡಿತವಾಗಿಯೂ , ನಾವು ಸಾಂಸ್ಕೃತಿಕವಾಗಿ ನಮ್ಮ  ಮಕ್ಕಳನ್ನು ಪ್ರೀತಿಸತ್ತೇವೆ ಎಂದು ಹೇಳಿಕೊಳ್ಳುವುದು ಮಾತ್ರವಲ್ಲ ಅವರ ರಕ್ಷಣೆಯ ಖಾತ್ರಿಯನ್ನು ಎಲ್ಲ ಸಮಯದಲ್ಲೂ ನೀಡಬೇಕು

ಬಾಲ್ಯ ವಿವಾಹದ ಚಿಹ್ನೆಗಳು

ಹಕ್ಕುಗಳ ಉಲ್ಲಂಘನೆಯು ಮೊದಲಿನಿಂದಲೂ ಆಗುತ್ತಲೇ ಬಂದಿದೆ.   ಗಂಡು ಮಕ್ಕಳ ಬಾಲ್ಯ ವಿವಾಹವು, ಹೆಣ್ಣು ಮಕ್ಕಳ ಬಾಲ್ಯ ವಿವಾಹದಂತೆಯೇ ಅವರ ಹಕ್ಕುಗಳ ಉಲ್ಲಂಘನೆ ಆಗಿದೆ. ಅದು ಅವರ ಆಯ್ಕೆಯ ಅವಕಾಶವನ್ನು ಕಿತ್ತುಕೊಳ್ಳುತ್ತದೆ. ಅವರ ವಯಸ್ಸಿಗೆ ಮೀರಿದ ಕುಟುಂಬದ ಹೊಣೆಯನ್ನು ಹೊರಿಸುವುದು. ಆದರೆ ಹೆಣ್ಣು ಮಕ್ಕಳು ಇನ್ನೂ ಹೀನ ಪರಿಸ್ಥಿತಿಯಲ್ಲಿ ಇರುವರು ಎಂಬುದರಲ್ಲಿ ಅನುಮಾನವಿಲ್ಲ.
ಬಾಲವಧುವು ಅನೇಕ ಸಲ ಬಾಲವಿಧವೆಯಾಗಿ, ಅನೇಕ ಮಕ್ಕಳನ್ನು ನೋಡಿಕೊಳ್ಳಬೇಕಾಗುವುದು.

ನಿಮಗೆ ಗೊತ್ತೆ ?

ಜನಗಣತಿ ವರದಿ ೨೦೦೧ ಪ್ರಕಾರ ಸುಮಾರು ೩ ಲಕ್ಷ ೧೫ ವರ್ಷದೊಳಗಿನ ಹೆಣ್ಣು ಮಕ್ಕಳು ಆಗಲೇ ಕನಿಷ್ಟ ಒಂದು ಮಗುವಿಗೆ ಜನ್ಮ ನೀಡಿದ್ದಾರೆ.
ಹುಡುಗಿಯರು ೧೦-೧೪ ವರ್ಷದವರಾದರೆ ಗರ್ಭಿಣಿಯರಾಗಿದ್ದಾಗಲೇ ಇಲ್ಲವೆ ಹೆರಿಗೆ ಸಮಯದಲ್ಲಿ ಸಾಯುವ ಸಂಭವವು  ಅವರು ೨೦-೨೪ ವರ್ಷದವರಾಗಿನಕಿಂತ   ೫ ಪಟ್ಟು ಹೆಚ್ಚಾಗಿರುವುದು.
  • ಶೀಘ್ರ ಗರ್ಭಧಾರಣೆಯು ಹೆಚ್ಚಿನ ಪ್ರಮಾಣದ  ಗರ್ಭಪಾತದ ದರಕ್ಕೆ ಕಾರಣ ವಾಗಿದೆ
  • ಹದಿ ಹರೆಯದ ತಾಯಿಯ ಶಿಶುವು   ಹುಟ್ಟಿದಾಗ ಕಡಿಮೆ ತೂಕ ಇರುವ ಸಂಭವ ಹೆಚ್ಚಾಗಿದೆ
  • ಎಳೆವಯಸ್ಸಿ ತಾಯಿಗೆ  ಜನಿಸಿದ ಮಗುವು ಮೊದಲ ವರ್ಷದಲ್ಲೇ ಸಾಯುವ ಸಂಭವ ಹೆಚ್ಚು.
ಮೂಲ:  ಹದಿಹರೆಯದ ಮಹಿಳೆಯ ಪರಿಸ್ಥಿತಿ


ಬಾಲ್ಯವಿವಾಹ

  • ಕಾನೂನು ಬದ್ಧ ಮದುವೆ ಎಂದು ಹರೆಯದ ಹೆಣ್ಣನ್ನು ಇಲ್ಲಿನ ಅಥವ ಮಧ್ಯಪ್ರಾಚ್ಯದ ಮುದಿವಯಸ್ಸಿನ ಗಂಡಿನ  ಜೊತೆ ಮದುವೆ ಮಾಡಿ, ವಂಚಿಸುವರು.ಅವಳು ವೇಶ್ಯಾವೃತ್ತಿಯೂ ಸೇರಿದಂತೆ ಎಲ್ಲಾ  ತರಹದ ಶೋಷಣೆಗೆ ಗುರಿಯಾಗುವಳು.
  • ಮದುವೆಯು ಹರೆಯದ ಹೆಣ್ಣು ಮಕ್ಕಳನ್ನು ಕಾರ್ಮಿಕರನ್ನಾಗಿಸಲು, ವೇಶ್ಯಾವೃತ್ತಿಗೆ ದೂಡಲು ಹಾದಿಯಾಗಿದೆ. ಎಳೆವಯಸ್ಸಿನ ಮದುವೆಯು ಸುರಕ್ಷಿತ ಮತ್ತು ದರ್ಬಳಕೆಯ ವಿರುದ್ಧದ  ರಕ್ಷಣೆಯ ಮಾರ್ಗ ಎನ್ನುವುದು ತಪ್ಪು.     ಅದು ನೈಜವಾಗಿ ಹುಡುಗಿಯ ಮೇಲೆ ಕುಟುಂಬದ ಸದಸ್ಯರಿಂದ ಒಂದು ರೀತಿಯ  ದೌರ್ಜನ್ಯ.  ಅವಳಿಗೆ ಯಾವಗಲೂ ನಂಬಿಕೆ ಮತ್ತು  ವಿನಯದಿಂದ ಇರಲು ತಿಳಿಸುವರು. ಬಾಲ್ಯ ವಿವಾಹವು, ಬಾಲ್ಯದ ಬಲತ್ಕಾರ ಇದ್ದಂತೆ.ಆ ವಯಸ್ಸಿನಲ್ಲಿ ಮಗುವು ಕ್ರಿಯೆ ಅಥವಾ  ನಿಷ್ಕ್ರಿಯೆಯನ್ನು ಅರಿಯುವ  ಪರಿಪಕ್ವತೆ ಇರುವುದಿಲ್ಲ.
  • ಮಹಿಳೆಯು ಮದುವೆಯಾಗಿರಲಿ ಇಲ್ಲದೆ ಇರಲಿ ಹೊರಗಿನವರಿಂದ ರಕ್ಷಣೆಯ ಖಾತ್ರಿ ಇರುವುದಿಲ್ಲ.  ಎಲ್ಲ ಮಹಿಳೆಯರೂ ಮದುವೆ ಆಗಿರಲಿ ಒಂಟಿಯಾಗಿರಲಿ, ಯುವತಿಯಾಗಿರಲಿ, ವಯಸ್ಸಾದವಳಾಗಿರಲಿ, ಬುರುಖಾದಲ್ಲಿ ಇರಲಿ , ಇಲ್ಲದಿರಲಿ. ಬಲತ್ಕಾರ ಮತ್ತು ದುರ್ಬಳಕೆಗೆ ಗುರಿಯಾಗಬಹುದು.  ಮಹಿಳೆಯ ವಿರುದ್ಧದ ಅಪರಾಧಗಳು ಏರಿಕೆಯಲ್ಲಿರುವುದೆ ಇದನ್ನು ನಿರೂಪಿಸುತ್ತವೆ.
  • ನಮ್ಮ ಗ್ರಾಮದಲ್ಲಿ ಬುರುಖಾದಲ್ಲಿರುವ,ಅನಕ್ಷರಸ್ಥ ಮಹಿಳೆಯು ಬಲಾತ್ಕಾರಕ್ಕೆ ಒಳಗಾದಾಗ, ಅವಳು ಸುಶಿಕ್ಷಿತಳು ಎನ್ನುವ ಕಾರಣಕ್ಕೆ ಅಲ್ಲ , ಆದರೆ ಅವಳುನಿರ್ಧಿಷ್ಟ ಜಾತಿಗೆ ಸೇರಿದವಳು ಎನ್ನುವ ಕಾರಣಕ್ಕೆ  ಅಥವಾ ಗುಂಪಿನ ದ್ವೇಷಕ್ಕೆ ಬಲಿಯಾಗಿರುವಳು
  • ಅಂತಿಮವಾಗಿ  ಶೀಘ್ರ ಮದುವೆಯು ವರದಕ್ಷಿಣೆಯ ಸಮಸ್ಯೆಗೆ ಪರಿಹಾರ ಕೊಡುವುದೆಂಬ ಯೋಚನೆಯು ಸರಿಯಲ್ಲ.  ಪಿತೃಪ್ರಧಾನ ಸಮಾಜದಲ್ಲಿ ವರನ ಕುಟುಂಬವು ಯಾವಾಗಲೂ ವಧುವಿನ ಕುಟುಂಬಕ್ಕಿಂತ  ತುಸು ಮೇಲುಗೈ ಹೊಂದಿರುವುದು.  ಅವರಿಗೆ ಏನೇ ಅಗತ್ಯಬಿದ್ದರೂ ವಧುವಿನವರು ನೀಡಬೇಕೇಂದು ಬಯಸುವರು.  ಮದುವೆಯಲ್ಲಿ ವರದಕ್ಷಿಣೆ ತೆಗೆದು ಕೊಳ್ಳದಿದ್ದರೆ ನಂತರ ಎಲ್ಲ ರೀತಿಯ ಬೇಡಿಕೆ ಮಂಡಿಸುವರು.

ಬಾಲ ಕಾರ್ಮಿಕತೆ



ಬಾಲ ಕಾರ್ಮಿಕತೆ-ಮಿಥ್ಯಗಳು ಮತ್ತು ಸತ್ಯಗಳು

  1. ಮಿಥ್ಯೆ:   :  ಬಾಲ ಕಾರ್ಮಿಕ ಸಮಸ್ಯೆಗೆ  ಪರಿಹಾರವೇ ಇಲ್ಲ.
    • ಬಡ ತಾಯಿತಂದೆಯರು  ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸುವುದಿಲ್ಲ. ಅವರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ಮನೆಗೆ ಸ್ವಲ್ಪ ಆದಾಯ ತರಲು ಬಯಸುವರು. ಈ ಮಕ್ಕಳಿಗೆ ಕೆಲಸ ಮಾಡದೆ ಬೇರೆ ಹಾದಿ ಇಲ್ಲ.  ಇಲ್ಲದಿದ್ದರೆ ಅವರ ಕುಟುಂಬವು ಉಪವಾಸ ಬೀಳುವುದು .ಅವರು ಕೆಲಸಮಾಡುವುದರಿಂದ ಭವಿಷ್ಯಕ್ಕೆ ಅಗತ್ಯವಾದ ಕೆಲವು ಕೌಶಲ್ಯಗಳನ್ನು ಪಡೆಯುವರು.
  2. ಸತ್ಯ:  ಈ ರಿತಿಯ ಮಾತನ್ನು ಕೇಳಿದಮೇಲೆ ನಾವು, ನಮಗೆ ಪ್ರಶ್ನೆ  ಹಾಕಿಕೊಳ್ಳಬೇಕು.   ಏಕೆ ಕೆಲವು ಬಡಜನರು ಎಷ್ಟೇ ತೊಂದರೆ ಇದ್ದರೂ ತಮ್ಮ ಮಕ್ಕಳನ್ನುಶಾಲೆಗೆ ಕಳುಹಿಸುವರು , ಹಾಗೆಯೇ ಕೆಲವರು ಏಕೆ ಕಳಹಿಸುವುದಿಲ್ಲ. ? ನಿಜವಾದ ಮಾತು ಎಂದರೆ ಬಡತನ ಎಂಬುದು ಮಕ್ಕಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿ ಕೊಳ್ಳಲು ಇರುವ ಒಂದು ನೆಪ ಮಾತ್ರ. ಸಾಮಾಜಿಕ ಆಂಶಗಳೂ ಬಾಲ ಕಾರ್ಮಿಕರ ಸಮಸ್ಯೆಗೆ ತಮ್ಮ ಕೊಡುಗೆ ನೀಡುತ್ತವೆ.   ಸಾಮಾಜಿಕವಾಗಿ ಮೂಲೆಗೆ ತಳ್ಳಲಾದ ಸಮುದಾಯಗಳು ಸಂಪನ್ಮೂಲಗಳ ಬಳಕೆಗೆ ಸಮಾನ ಅವಕಾಶ ಸಿಕ್ಕದೆ ಶ್ರೇಣಿ ಕೃತ ಸಮಾಜ ವ್ಯವಸ್ಥೆಗೆ ಬಲಿಯಾದವರ   ಕುಟುಂಬಗಳು ಮತ್ತು ಅವರ ಮಕ್ಕಳು ಸಹಾ ಕೆಲಸ ಮಾಡಿದರೂ ಹಸಿವಿನಿಂದ ಬಳಲುವರು ಎಂಬುದು ನಮಗೆ ಹೊತ್ತು.  ಇದಕ್ಕೆ ಕಾರಣ ಹಸಿವು .  ಸರಿಯಾಗಿರದ ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಪರಿಣಾಮ.
  • ಎಲ್ಲ ತಾಯಿತಂದೆಯರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಬಯಸುವರು. ಕನಿಷ್ಟ ಪ್ರಾಥಮಿಕ ಶಿಕ್ಷಣವಾದರೂ ಸರಿ.   ಶಿಕ್ಷಣ ಪಡೆಯದ ತಾಯಿತಂದೆಯರಿಗೆ ಪ್ರವೇಶ ಪ್ರಕ್ರಿಯೆ ತುಂಬ ಸಂಕೀರ್ಣ ವೆನಿಸುವುದು.  ಜನ್ಮ ದಿನಾಂಕ, ಜಾತಿ ಪ್ರಮಾಣ ಪತ್ರಗಳೇ ಶಾಲೆಗೆ ಪ್ರವೇಶ ಪಡೆಯಲು ದೊಡ್ಡ ತಡೆಗಳಾಗುವವು. ಮಕ್ಕಳಿಗೆ  ವಿಶೇಷವಾಗಿ ಅವರು  ಕಲಿಯುವುದರಲ್ಲಿ ಮೊದಲ ತಲೆ ಮಾರಿನವರರಾದರೆ  ಪಠ್ಯಕ್ರಮವು ತುಂಬ ಕಠಿನವೆನಿಸುವುದು.ಅವರ ತಾಯಿತಂದೆಯರು ಅಶಿಕ್ಷಿತರಾಗಿರುವುದರಿಂದ  ಮನೆಯಲ್ಲಿ ಗೃಹ ಪಾಠ ಮಾಡುವಲ್ಲಿ ಅಗತ್ಯ ಬೆಂಬಲ ನೀಡಲಾರರು. ದೈಹಿಕ ಶಿಕ್ಷೆ, ಜಾತಿ ತಾರತಮ್ಯ. ಮೂಲ ಸೌಕರ್ಯಗಳಾದ  ಕಕ್ಕಸು, ಕುಡಿಯುವ ನೀರಿನ ಕೊರತೆ ಮೊದಲಾದ ಅಂಶಗಳು ಅವರನ್ನು ಶಾಲೆಯೀಂದ ದೂರ ಇಡುತ್ತವೆ. ಹೆಣ್ಣು ಮಕ್ಕಳಿಗೆ ತಮ್ಮ ತಂಗಿಯರನ್ನು ನೋಡಿಕೊಳ್ಳುವ ಹೊಣೆಯೂ ಮೊದಲ ಆದ್ಯತೆ   ಯಾಗುವುದು. ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲೂ ಶಿಶು ಪಾಲನಾ ಸೌಕರ್ಯಗಳು ಇಲ್ಲ  ಅಲ್ಲದೆ ಜನರ ಮನದಲ್ಲಿ ಲಿಂಗಪಕ್ಷಪಾತವೂ ಬಲವಾಗಿ ನೆಲೆಯೊಡ್ಡಿದೆ.
  • ಶಾಲೆಗೆ ಹೋಗದೆ, ಕೆಲಸಕ್ಕೆ ಹೋಗುವ ಮಕ್ಕಳು ತಮ್ಮ ಜೀವನಪೂರ್ತಿ ಅನಕ್ಷರಸ್ಥರಾಗಿ, ಕುಶಲತೆಯಿಲ್ಲದ ಕಾರ್ಮಿಕರಾಗಿಯೇ ಉಳಿಯುವರು.  ಇದಕ್ಕೆ ಕಾರಣ ಬಾಲ ಕಾರ್ಮಿಕರು ಸಾಧಾರಣವಾಗಿ ಕುಶಲತೆ ಇಲ್ಲದ ಕಾರ್ಮಿಕ ಸಮೂಹದ  ಒಂದು ಭಾಗವಾಗಿರುವರು.  ಅಲ್ಲದೆ ಅವರು ರಸಾಯನಿಕ ಮತ್ತು ಇತರೆ ಅಪಾಯಕಾರಿ  ವಸ್ತುಗಳ ಸಂಪರ್ಕಕ್ಕೆ ಬರುವರು.  ಧೀರ್ಘ ಕೆಲಸದ ಅವಧಿ , ಕೆಲಸದಲ್ಲಿ ತೊಡಗಿದಾಗಿನ ಭಂಗಿ ಮೊದಲಾದವು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವವು ಮತ್ತು ಅವರ ಬೆಳವಣಿಗೆಯನ್ನು ಕುಂಠಿತ ಗೊಳಿಸುವವು.
  • ಬಾಲ ಕಾರ್ಮಿಕರು  ಇರುವುದು ಸಂವಿಧಾನದ ಅನುಚ್ಛೇದ-೨೧ಎ ಗೆ ಪೂರ್ಣ ವ್ಯತಿರಿಕ್ತತವಾಗಿದೆ.  ಅದರ ಪ್ರಕಾರ ೬-೧೪ ವಯೋಮಾನದ  ಪ್ರತಿ ಮಗುವಿಗೂ  ಕಡ್ಡಾಯ ಉಚಿತ ಪ್ರಾಥಮಿಕ ಶಿಕ್ಷಣ ಅವನ ಮೂಲಭೂತ ಹಕ್ಕು.
  • ಇನ್ನೊಂದು ಗಣನೀಯ ಅಂಶವೆಂದರೆ, ಒಂದು ಮಗುವು ಬಾಲ  ಕಾರ್ಮಿಕನಾಗುವುದು ತಪ್ಪಿದರೆ, ಒಬ್ಬ ವಯಸ್ಕನಿಗೆ ಕೆಲಸ ದೊರಕಿದಂತೆ
  • ಭಾರತದಲ್ಲಿ ನಿರುದ್ಯೋಗಿ ವಯಸ್ಕರ ಸಂಖ್ಯೆ ಬಹು ದೊಡ್ಡದು. ಅವರು ಮಕ್ಕಳ ಜಾಗದಲ್ಲಿ ಕೆಲಸ ಮಾಡಬಲ್ಲರು. ಅದರಿಂದ ಮಕ್ಕಳಿಗೆ ತಮ್ಮ ಬಾಲ್ಯವನ್ನು ಅನುಭವಿಸುವ  ಅವಕಾಶ ದೊರೆಯುವುದು.
  • ಭಾರತದಲ್ಲಿಯೇ ಅತಿ ಹೆಚ್ಚಿನ ಬಾಲ ಕಾರ್ಮಿಕರಿದ್ದಾರೆ.    ಭಾರತದ ೨೦೦೧ರ ಜನಗಣತಿಯ ಪ್ರಕಾರ  ೧.೨೫ ಕೋಟಿ  ೫-೧೪ ವ ರ್ಷ ದೊಳಗಿನ  ಮಕ್ಕಳು ವಿವಿಧ ವೃತ್ತಿಯಲ್ಲಿ ತೊಡಗಿದ್ದಾರೆ. ಸರಕಾರೇತರ ಸಂಸ್ಥೆಗಳ ಅಂದಾಜು ಇನ್ನೂ ಹೆಚ್ಚಾಗಿದೆ. ಏಕೆಂದರೆ ಬಹಳ ಮಕ್ಕಳು ಅಸಂಘಟಿತ ವಲಯಗಳಲ್ಲಿ ಮತ್ತು  ಸಣ್ಣ ಪ್ರಮಾಣದ ಗೃಹ ಘಟಕಗಳಲ್ಲಿ ಕೆಲಸ ಮಾಡುವರು.ಅಂಥಹವರೂ ಬಾಲಕಾರ್ಮಿಕರು.
  • ಮಕ್ಕಳನ್ನು ಕಾರ್ಮಿಕರಾಗಿ ದುಡಿಯಲು ನಿತ್ಯವೂ ಸಾಗಣಿಕೆ ಮಾಡಲಾಗುತ್ತಿದೆ. ದಲ್ಲಾಳಿಗಳು, ಮಧ್ಯವರ್ತಿಗಳು ಹಳ್ಳಿಗಳಿಗೆ ಆತ್ಮೀಯರಂತೆ ಹೋಗಿ ಮಕ್ಕಳನ್ನು ದೇಶದ ವಿವಿಧ ಕಡೆ ಸಾಗಿಸುವರು. ಬಿಹಾರದ , ಬಂಗಾಲದ ಮಕ್ಕಳು ಕರ್ನಾಟಕ, ಮುಂಬಯಿ , ದೆಹಲಿಯ   ಕಸೂತಿ ಘಟಕದಲ್ಲಿ ,ತಮಿಳು ನಾಡಿನಿಂದ ಉತ್ತರಪ್ರದೇಶದ ಸಿಹಿತಿಂಡಿ ಮಾಡುವ ಘಟಕದಲ್ಲಿ ಮತ್ತು  ಸೂರತ್ತಿಗೆ  ವಜ್ರ ಮತ್ತು ಹರಳುಗಳ ಪಾಲಿಷ್ ಮಾಡಲು ಬರುವರು.ನುರಾರು ಜನರು ಮಧ್ಯಮ ವರ್ಗದವರಲ್ಲಿ ಮನೆ ಕೆಲಸದವರಾಗಿರುವರು.

ಲೈಂಗಿಕ ದುರ್ಬಳಕೆ

ಮಿಥ್ಯೆ:    ಮಗುವಿನ ಲೈಂಗಿಕ ದುರ್ಬಳಕೆಯು ನಮ್ಮ ದೇಶದಲ್ಲಿ ಬಹು ವಿರಳ.  ಇದೆಲ್ಲ ಮಾಧ್ಯಮಗಳು ಹಬ್ಬಿಸಿರುವ ಹುಯಿಲು. ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಅಗುತ್ತಿದೆ. ಮಕ್ಕಳು ಮತ್ತು ಹದಿ ಹರೆಯದವರು ಕಥೆ ಕಟ್ಟಿ , ಕಲ್ಪನಾ ಲೋಕದಲ್ಲಿ ವಿಹರಿಸುವರು  .ಲೈಂಗಿಕ ದುರ್ಬಳಕೆ ಆಗಿದೆ ಎಂದು ಸುಳ್ಳು ಹೇಳುವರು. ಅದು ಏನಿದ್ದರೂ ಕೆಟ್ಟ ಮತ್ತು ನಡತೆ ಸರಿ ಇಲ್ಲದ ಹೆಣ್ಣುಗಳಿಗೆ ಮಾತ್ರ ಆಗುವುದು.
ಸತ್ಯ:  ಕೆಲವೆ ತಿಂಗಳ, ಮತ್ತು  ಕೆಲವೇ ದಿನಗಳ  ಅತಿ ಚಿಕ್ಕ  ವಯಸ್ಸಿನ ಮಕ್ಕಳು  ಲೈಂಗಿಕ ದುರ್ಬಳಕೆಗೆ ಬಲಿಯಾಗಿದ್ದಾರೆ.  ಬಾಲಕಿಯರು ಈ ದುರ್ಬಳಕೆಗೆ  ಬೇಗ ಒಳಗಾಗುವರೆಂಬ ನಂಬಿಕೆ ಇದ್ದರೂ ಬಾಲಕರೂ ಸಹಾ ದುರ್ಬಳಕೆಗೆ  ಬಲಿಯಾಗುತ್ತಿದ್ದಾರೆ.
ಮಾನಸಿಕ ಮತ್ತು ದೈಹಿಕ  ವಿಕಲತೆ ಇರುವವರು ಇನ್ನೂ ಹೆಚ್ಚಿನ ಅಪಾಯಕ್ಕೆ ಈಡಾಗುತ್ತಾರೆ. ಮಗುವಿನ ಲೈಂಗಿಕ ದರ್ಬಳಕೆಯ ಅಪಾಯ  ಎಲ್ಲ ಲಿಂಗ, ಜಾತಿ , ಕುಲ,ವರ್ಗ ಗಳಲ್ಲಿ ಮತ್ತು ನಗರ ಮತ್ತು ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ವ್ಯಾಪಿಸಿದೆ.
ಮಗುವನ್ನು  ಕೆಳಗೆ ಕಾಣಿಸಿದ ಯಾವುದೇ ವಿಧಾನದಿಂದ ದುರ್ಬಳಕೆ ಮಾಡಬಹುದು :
  • ಶಿಶ್ನ ಸೇರಿಸಿ ಲೈಂಗಿಕ  ಸಂಭೋಗ- ಬಲತ್ಕಾರ   ಅಥವ  ಯಾವುದೆ ವಸ್ತುವನ್ನು , ದೇಹದ ಯಾವುದೆ ಭಾಗದಲ್ಲಿ ಸೇರಿಸುವದು,
  • ಮಕ್ಕಳನ್ನು ಅಶ್ಲೀಲತೆಗೆ ಒಡ್ಡುವುದು ಇಲ್ಲವೆ  ಅಶ್ಲೀಲ ಸಾಮಗ್ರಿ ತಯಾರಿಕೆಗೆ ಬಳಕೆ ಮಾಡುವುದು
  • ಮಗುವಿನ ದೇಹದ ಯಾವುದೇ ಭಾಗವನ್ನು ನೇರವಾಗಿ ಇಲ್ಲವೆ ಪರೋಕ್ಷವಾಗಿ ಲೈಂಗಿಕ ತೃಪ್ತಿ ಪಡೆಯಲು ಮುಟ್ಟುವುದು.
  • ಲೈಂಗಿಕ ಉದ್ದೇಶದಿಂದ ಗುಪ್ತಾಂಗಗಳ ಪ್ರದರ್ಶನ
  • ಲೈಂಗಿಕ ಕ್ರಿಯೆಯನ್ನು ತೋರಿಸಿ   ತೃಪ್ತಿ ಪಡೆಯುವುದು ಇಲ್ಲವೆ ಇಬ್ಬರು ಅಥವ ಹೆಚ್ಚು ಮಕ್ಕಳನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಲು        ಬಲವಂತ ಮಾಡುವುದು
  • ಲೈಂಗಿಕ ಬಣ್ಣವಿರುವ ಮಾತನಾಡುವುದು ಅಥವ ಅಸಭ್ಯ , ಅಶ್ಲೀಲ ಬೈಗುಳಗಳನ್ನು ಮಗುವಿನ ಮೇಲೆ ಬಳಸುವುದು
  • ಕೊಯಿಮತ್ತೂರು: ನಗರದ ಹೊರವಲಯದ  ಮದ್ದುಕರಿ ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯನೊಬ್ಬನನ್ನು  ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಬೈದ ಆಪಾದನೆಯ ಮೇರೆಗೆ ಬಂಧಿಸಲಾಗಿದೆ
  • ಮೂರನೆ ತರಗತಿಯ ೮ ವರ್ಷದ ಹುಡುಗಿಯ ದೂರಿನ ಮೇಲೆ ಪೋಲೀಸರು  ಅವನನ್ನು ಬಂಧಿಸಿ ವಿವಿಧ .ಪ್ರಕರಣಗಳ ಅನ್ವಯ ಮೊಕದ್ದಮೆ ದಾಖಲುಮಾಡಿದ್ದಾರೆ.ಅದರಲ್ಲಿ ಲೈಂಗಿಕ ದುರ್ಬಳಕೆಯ ಪ್ರಯತ್ನ ವೂ ಸೇರಿದೆ. ಸುಮಾರು ೧೦೦ ಜನ ವಿದ್ಯಾರ್ಥಿಗಳು ಮದುಕ್ಕರಿ ಪೋಲೀಸು ಠಾಣೆಗೆ ಹೋಗಿ  ಆರೋಪಿಯ ಮೇಲೆ ತಕ್ಷಣದ ಕ್ರಮಕ್ಕಾಗಿ ಒತ್ತಾಯಿಸಿದ್ದಾರೂ. ಆ ಮುಖ್ಯ ಉಪಾಧ್ಯಾಯನೇ  ದೂರು ನೀಡಿದರೆ. ಮಕ್ಕಳು ಗಂಭೀರ ಪರಿಣಾಮ ಎದುರಿಸಬೇಕಾಗುವುದು ಎಂದು ಹೆದರಿಸಿದ್ದಾನೆ
ಮೂಲ: ಪಿಟಿ ಐ , 25 ಮಾರ್ಚ 2005
ಆಕ್ರಮಣಕಾರಿಯ ಕಾಳಜಿ, ಮೃದುತ್ವ ಮತ್ತು ಪ್ರೀತಿಯು ಮಗುವಿಗೆ ಬಹಳ ಕಿರಿಕಿರಿವೆನಿಸಿಬಹುದು ಮತ್ತು ಅದರಿಂದ ಮಗುವಿನ ಆತ್ಮವಿಶ್ವಾಸ ಕುಗ್ಗಿ ,   ಅಪನಂಬಿಕೆ  ಹೆಚ್ಚಿ , ಅಪರಾಧಿ ಭಾವ ಕಾಡುವುದು.
ಮಗುವನ್ನು ಅದಕ್ಕೆ ಗೊತ್ತಿರುವವರು ಇಲ್ಲವೆ ಅಪರಿಚಿತರು ದುರ್ಬಳಕೆ ಮಾಡಿಕೊಳ್ಳುವರು
ಹೀಗೆ ಮಾಡುವವನು  ೯೦%  ಘಟನೆಗಳಲ್ಲಿ ಮಗುವಿಗೆ ಪರಿಚಿತರಾದ ಮತ್ತು ನಂಬಿಗೆಯ  ವ್ಯಕ್ತಿಯೇ ಆಗಿರುವನು. ದುರ್ಬಳಕೆ ಮಾಡುವವನು ನಂಬಿಕೆಯ ಸಂಬಂಧವನ್ನು ಉಲ್ಲಂಘಿಸಿ   ತನ್ನ ಅಧಿಕಾರ ಮತ್ತು ಸ್ಥಾನದ ದುರುಪಯೋಗ ಮಾಡಿಕೊಳ್ಳುವನು. ಅನೇಕ ಸಂದರ್ಭಗಳಲ್ಲಿ ಮಗುವಿಗೆ ಅತಿ ಸಮೀಪದ ವ್ಯಕ್ತಿಯೇ- ತಂದೆ, ಅಣ್ಣ, ಚಿಕ್ಕಪ್ಪ, ಮಾವ, ನೆರಮನೆಯವ ಆಗಿರಬಹುದು. ಅವನು ಕುಟುಂಬದ ಸದಸ್ಯನಾಗಿದ್ದರೆ ಅದು ನಿಷಿದ್ಧ ಗಮನವೆನಿಸುವುದು.
ಲೈಂಗಿಕ ದುರ್ಬಳಕೆಯು ಹಿಂದಿನಿಂದಲೂ ಸಮಾಜದಲ್ಲಿದೆ. ಹೆಣ್ಣು ಮಗುವನ್ನು ವೇಶ್ಯಾ ವೃತ್ತಿಗಾಗಿ ಮಾರುವುದು, ಧರ್ಮ,  ಸಂಪ್ರದಾಯದ ಹೆಸರಲ್ಲಿ ದೇವದಾಸಿ, ಜೋಗಿನಿಯಾಗಿಸುವುದು ಇದಕ್ಕೆ ಉದಾಹರಣೆ. ಆದರೆ ಕಾಲ ಗತಿಸಿದಂತೆ ಅರಿವು ಹೆಚ್ಚುತ್ತಿದೆ. ಮಾಧ್ಯಮಗಳ ವರದಿಗಳು ಅನೇಕ ಸಲ ಸತ್ಯವನ್ನು ಮರೆಮಾಚುತ್ತವೆ.
ದುರ್ಬಳಕೆ ಮಾಡಿಕೊಳ್ಳುವವರು ಹೆಂಡತಿಯ ಇಲ್ಲವೆ ವಯಸ್ಕ ಸಂಗಾತಿಯ ಬದಲಾಗಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಅವರ ಜೊತೆ ಜೊತೆಯಾಗಿಯೇ ಈ ಕೆಲಸ ಮಾಡುವರು. ಅವರು ಮಾನಸಿಕವಾಗಿ ಅಸ್ವಸ್ಥರಲ್ಲ. ಎಲ್ಲರಂತೆಯೇ ಇರುವರು. ತಮ್ಮ  ದುಷ್ಕೃತ್ಯವನ್ನು   ಸಮರ್ಥಿಸಿಕೊಳ್ಳಲು ಕೊಡುವ ಕಾರಣಗಳಲ್ಲಿ ಇದೂ ಒಂದು ನೆಪ.. ಸ್ವಲ್ಪ ಜನ ದುರ್ಬಳಕೆಯನ್ನು  ಜನರ ಎದುರೇ ಮಾಡುವಷ್ಟು ನಾಚಿಕೆ ಇಲ್ಲದವರಾಗಿರುವರು.
ಮಕ್ಕಳು ಯಾರಿಗೂ ದುರ್ಬಳಕೆಯ ಬಗ್ಗೆ,  ಅಶ್ಲೀಲ ಚಿತ್ರಗಳನ್ನು ನೋಡಲು ಮಾಡುವ ಒತ್ತಾಯದ ಕುರಿತು  ಹೇಳಲು ಹೆದರುವರು .ಮಗುವು ಎಷ್ಟೆ ದೊಡ್ಡವನಾಗಿದ್ದರೂ ದುರ್ಬಳಕೆ ಮಾಡುವವರು ಅವನಿಗಿಂತ ಬಲಶಾಲಿಗಳಾಗಿರುವರು. ಮಗುವು ಅವನಿಗೆ ಯಾವುದೆ ರೀತಿಯಲ್ಲಿ ಸರಿ ಸಾಟಿಯಲ್ಲ.   ದುರ್ಬಳಕೆ ಮಾಡುವವನ ವಂಚನೆಯನ್ನು ಹೇಳಲು ಅದಕ್ಕೆ ಆಗುವುದಿಲ್ಲ  ಏಕೆಂದರೆ   ಅವನು ಹತ್ತಿರದ ಬಂಧುವಾಗಿರುವನು. ತಾಯಿಗೆ  ಈ ವಿಷಯ ಗೊತ್ತಾದರೂ ಏನೂ ಮಾಡದ ಅಸಾಹಯಕ ಸ್ಥಿತಿಯಲ್ಲಿರುವಳು. ಕುಟುಂಬ ಒಡೆಯುವ ಭಯ ಇಲ್ಲವೇ ಯಾರೂ ನಂಬುವುದಿಲ್ಲ ಎಂಬ ಅನುಮಾನ ಮೌನಕ್ಕೆ ಕಾರಣ.   ತಾಯಿತಂದೆಯರು, ಕುಟುಂಬದಲ್ಲಿನ ಹಿರಿಯರು ಈ ವಿಷಯವನ್ನು ನಿರ್ಲಕ್ಷಮಾಡುವರು. ನಡೆದೆ ಇಲ್ಲ ಎಂದು ವಾದಿಸಬಹುದು.  ಮಕ್ಕಳು ತಿಳಿಸುವ ದುರ್ಬಳಕೆ ಮತ್ತು ಶೋಷಣೆಯ ವಿಷಯ ಬಹುತೇಕ ಸತ್ಯವಾಗಿರುವುದು.  ಲೈಂಗಿಕ ದುರ್ಬಳಕೆ, ನಿಷಿದ್ದ ಗಮನವನ್ನು , ಮಗುವಿನ ಸಾಗಣಿಕೆಯನ್ನು  ಭ್ರಮೆ ಎಂದು ಸಮಾಜವು ತಿರಸ್ಕಾರ ಮಾಡುವುದು.
ಮಕ್ಕಳು ಮುಗ್ಧರು ಮತ್ತು ನಿರ್ಬಲರು. ಅವರಿಗೆ ಲೈಂಗಿಕ ತಿಳುವಳಿಕೆ ಇಲ್ಲ. ಮತ್ತು ಹಿರಿಯರ ಲೈಂಗಿಕತೆಗೆ ಮಕ್ಕಳ ವರ್ತನೆಗೆ  ಕಾರಣವಲ್ಲ. ಮಕ್ಕಳಿಗೆ ತಿಳುವಳಿಕೆ ಇದ್ದರೂ  ಅದು ಮಕ್ಕಳ ಮೇಲಿನ ನ್ಯೇತಾತ್ಮಕ ಅಭಿಪ್ರಾಯ ಮತ್ತು ಅವರನ್ನೆ ದೂಷಿಸುವುದಕ್ಕೆ ಕಾರಣವಾಗಬಾರದು. ವೇಶ್ಯೆಯೂ ಕೂಡಾ ಬಲತ್ಕಾರಕ್ಕೆ  ಹಲ್ಲೆಗೆ, ಗುರಿಯಾಗಬಹುದು. ಆಗಲೂ ಕಾನೂನು ಅವಳ ಸಹಾಯಕ್ಕೆ ಬರುವುದು. ಮಕ್ಕಳನ್ನೇ ಅವರು ಅನುಭವಿಸುವ ನೋವಿಗೆ ತೆಗಳುವುದರಿಂದ  ಘಟನೆಯ ಹೊಣೆಯನ್ನು ಮಗುವಿನ ಮೇಲೆ  ಹಾಕಿದಂತಾಗುವುದು.
ಮಗುವಿನ ವಿಷಯದಲ್ಲಿ ಒಪ್ಪಿಗೆಯ ಮಾತೇ ಬರುವುದಿಲ್ಲ. ಕಾನೂನಿನ  ಪ್ರಕಾರ ೧೬ ವರ್ಷದ ಕೆಳಗಿನ ಹುಡುಗಿಯ ಸಂಭೋಗವು  ಬಲತ್ಕಾರ ಎನಿಸುವುದು.
ಮಕ್ಕಳು ದುರ್ಬಳಕೆಯನ್ನು ವರದಿಮಾಡಿದಾಗ ಅವರ ನಂಬಿಕಾರ್ಹತೆಯೇ ಪ್ರಶ್ನೆಗೆ ಒಳಗಾಗುವುದು. ಅವರ ನಂಬಿಕೆ ಮತ್ತು ವಿಶ್ವಾಸವನ್ನೆ ಹಳಿಯಲಾಗುವುದು. ಮಗುವಿನ ಪಾಪ ಪ್ರಜ್ಞೆಯನ್ನೆ ಬಳಸಿಕೊಂಡು ಅವರ ವರ್ತನೆಯಿಂದಲೇ ಘಟನೆ ನೆಡೆದಿದೆ ಎಂದು ಯೋಚಿಸಲಾಗುವುದು.
ಮೂಲ : ಅರ್ಥಕ್ಕೆ ಸಂಬಂಧಿಸಿದೆಯೋ ಅಥವ ಗಾಂಭೀರ್ಯವೋ? ಮಕ್ಕಳ ಲೈಂಗಿಕ ಶೋಷಣೆ ವಿರುದ್ಧದ ಉಪಗುಂಪು, ಮಕ್ಕಳ ಹಕ್ಕುಗಳ ಸಮಾವೇಶದ ಸರ್ಕಾರೇತರ ಸಂಸ್ಥೆಗಳ ಒಂದು ಗುಂಪು, ಜನವರಿ 2005

ಮಗುವಿನ ಮೇಲೆ ಲೈಂಗಿಕ ದುರ್ಬಳಕೆಯ ಪರಿಣಾಮ

ದುರ್ಬಳಕೆಯ ಪರಿಣಾಮವು  ತತಕ್ಷಣ ಅಥವ ದೂರಗಾಮಿಯೂ ಆಗಿರಬಹದು:
  • ಗಾಯ, ಕಚ್ಚಿರುವುದು.ತೆರಚು, ಗುಪ್ತಾಂಗದಲ್ಲಿ ರಕ್ತಸ್ರಾವ ಮೊದಲಾದ ದೈ ಹಿಕ  ನೋವುಗಳು
  • ಮಕ್ಕಳು  ಅನೇಕ ಸಲ ತಪ್ಪಿತಸ್ಥ ಭಾವನೆ, ಖಿನ್ನತೆ, ಆತಂಕ ಮತ್ತು ಲೈಂಗಿಕ ನಿರ್ಬಲತೆಯಿಂದ ಬಳಲುವರು. ಕುಟುಂಬದಿಂದ ಸಾವಕಾಶವಾಗಿ ದೂರವಾಗುವರು
  • ಹಲವು ಮಕ್ಕಳು ವಯಸ್ಕ  ಸಂಬಂಧಗಳಲ್ಲಿ ಸಮಸ್ಯೆ ಎದುರಿಸುವರು. ಸರಿಯಾದ ಲೈಂಗಿಕ ಸಂಬಂಧ ಹೊಂದುವಲ್ಲಿ ವಿಫಲರಾಗುವರು..
  • ಲೈಂಗಿಕ ದುರ್ಬಳಕೆಯ  ಜೊತೆ ಜೊತೆಗೆ  ವಿಶ್ವಾಸದ್ರೋಹವು ಅವರನ್ನು ಬಹಳಕಾಲ ಕಾಡುವುದು,  ಮನಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸದಿದ್ದರೆ ಕೆಲವು ಬಾರಿ  ಜೀವವಿರುವವರೆಗೂ ಘಾಸಿ ಮಾಡುವುದು.

ಶಾರೀರಿಕ ಶಿಕ್ಷೆಗಳು :

  1. ಮಕ್ಕಳನ್ನು  ಗೋಡೆಗೆ ಕುರ್ಚಿ ಕೂಡಿಸುವುದು.
  2. ಶಾಲಾ ಚೀಲವನ್ನು ಅವರ ತಲೆಯ ಮೇಲೆ ಹೊರಿಸುವುದು.
  3. ಬಿಸಿಲಲ್ಲಿ ದಿನಪೂರ್ತಿ ನಿಲ್ಲಿಸುವುದು.
  4. ಬಾಗಿ ನಿಂತು ಕೆಲಸ ಮಾಡಲು ಹೇಳುವುದು.
  5. ಬೆಂಚಿನ ಮೇಲೆ ನಿಲ್ಲಿಸುವುದು.
  6. ಕೈ ಎತ್ತಿ ನಿಲ್ಲಿಸುವುದು.
  7. ಪೆನ್ಸಿಲ್ಲನ್ನು ಬಾಯಿಯಲ್ಲಿ ಕಚ್ಚಿಸಿ  ನಿಲ್ಲಿಸುವುದು
  8. ಮೊಣ ಕಾಲು ಕೆಳಗೆ ಕೈ ಹಾಕಿ ಕಿವಿ ಹಿಡಿಸುವುದು
  9. ಕೈಕಟ್ವುವುದು
  10. ಬಸ್ಕಿ ಹೊಡೆಸುವುದು.
  11. ಬೆತ್ತದಿಂದ ಹೊಡೆಯುವುದು.
  12. ಕಿವಿ ಹಿಂಡುವುದು.

ಭಾವನಾತ್ಮಕ  ಶಿಕ್ಷೆಗಳು:

  1. ಅನ್ಯ ಲಿಂಗಿಯರಿಂದ ಹೊಡೆಸುವುದು
  2. ಅವನ ತಪ್ಪಿಗೆ ಅನುಗುಣವಾಗಿ ಲೇಬಲ್ ಮಾಡುವುದು
  3. ಶಾಲೆಯ ಅಥವ ಆಟದ ಮೈದಾನದ ಸುತ್ತಲೂ  ಓಡಲು ತಿಳಿಸುವುದು.
  4. ತರಗತಿಯಲ್ಲಿ ಹಿಂದೆ ನಿಂತು  ಕೆಲಸ ಪೂರ್ತಿಮಾಡಲು ಹೇಳವುದು.
  5. ಕೆಲ ದಿನಗಳಿಗೆ ಶಾಲೆಯಿಂದ ಅಮಾನತ್ತು ಮಾಡುವುದು
  6. ಅವನ ಬೆನ್ನಿಗೆ “ನಾನು ಮೂರ್ಖ’  , “ನಾನು ದಡ್ಡ” , “ ನಾನು ಕತ್ತೆ”  ಎಂದು ಬರೆದ ಹಾಳೆಯನ್ನು ಹಚ್ಚುವುದು.
  7. ಪ್ರತಿ ತರಗತಿಗೆ ಅವನನ್ನು ಕರೆದೊಯ್ಯವುದು.
  8. ವಿದ್ಯಾರ್ಥಿಗಳ ಷರ್ಟು ತೆಗೆಸುವುದು

ನ್ಯೇತ್ಯಾತ್ಮಕ  ಒತ್ತಡಗಳು :

  1. ಊಟ ,ಮತ್ತು ವಿರಾಮದ ಅವಧಿಯಲ್ಲಿ ಹೊರಗೆ  ಬಿಡದೆ ಇರುವುದು
  2. ಕತ್ತಲ ಕೋಣೆಯಲ್ಲಿ ಕೂಡಿಹಾಕುವುದು .
  3. ತಾಯಿತಂದೆಯರನ್ನು ಕರೆಸುವುದು. ಇಲ್ಲವೆ ಅವರಿಂದ ಪತ್ರ ತರಲು ಹೇಳುವುದು.
  4. ಅವರನ್ನು ಮನೆಗೆ ಕಳುಹಿಸುವುದು ಇಲ್ಲವೆ ಬಾಗಿಲ ಹೊರಗೆ ನಿಲ್ಲಿಸುವುದು.
  5. ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು.
  6. ಮಗುವಿಗೆ ಆವರಣವನ್ನು ಶುಚಿಗೊಳಿಸಲು ತಿಳಿಸುವುದು.
  7. ಶಾಲೆಯಸುತ್ತಲೂ ಇಲ್ಲವೆ ಆಟದ ಮೈದಾನದ ಸುತ್ತಲೂ ಓಡಿಸುವುದು..
  8. ಮುಖ್ಯೋಪಾಧ್ಯಾಯರ ಹತ್ತಿರ ಕಳುಹಿಸುವುದು.
  9. ತರಗತಿಯಲ್ಲಿ ಪಾಠ ಮಾಡಲು ತಿಳಿಸುವುದು.
  10. ಶಿಕ್ಷಕರು ಬರುವವರೆಗೆ ನಿಲ್ಲಿಸುವುದು.
  11. ಮೌಖಿಕ ಎಚ್ಚರಿಕೆ ನೀಡುವುದು, ದಿನಚರಿಯಲ್ಲಿ ಬರೆಯುವುದು..
  12. ಮಗುವಿಗೆ TC   ಕೊಡುವುದಿಲ್ಲವೆಂದು ಹೆದರಿಸುವುದು.
  13. ಆಟ ಮತ್ತು ಇತರ ಚಟುವಟಿಕೆಗೆ ಬಿಡದೆ ಇರುವುದು.
  14. ಅಂಕಗಳನ್ನು ಖೋತಾ ಮಾಡುವುದು.
  15. ಮೂರು ದಿನ ತಡವಾದರೆ ಒಂದುದಿನ ಶಾಲೆಗೆ ಗೈರುಹಾಜರಿ ಎಂದು ಪರಿಗಣಿಸುವುದು.
  16. ಅತಿ ಹೆಚ್ಚು ಗೃಹ ಪಾಠ ಕೊಡುವುದು.
  17. ದಂಡ ವಿಧಿಸುವುದು.
  18. ತರಗತಿಯ ಒಳಗೆ ಬಿಡದೆ ಇರುವುದು.
  19. ಒಂದು ದಿನ, ವಾರ, ತಿಂಗಳು ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು .
  20. ಅವರ ಶಿಸ್ತಿನ ದಾಖಲೆಯಲ್ಲಿ ಕಪ್ಪು  ಗುರುತು ಹಾಕುವುದು. 

ಅಪಾಯ



ಶಾರೀರಿಕ ಶಿಕ್ಷೆಯು ಮಗುವಿಗೆ ಹೇಗೆ ಅಪಾಯ ಉಂಟುಮಾಡುವುದು?

ಅದು ಮಗುವಿನ ಮನದ ಮೇಲೆ  ನಿಷೇಧಾತ್ಮಕ ಪರಿಣಾಮ ಬೀರುವುದು. ಸಾಮಾನ್ಯವಾಗಿ  ಎಳೆಯ ಮನದಲ್ಲಿ ದ್ವೇಷ,ಭಯ ಮತ್ತು ಉಗ್ರತೆಯ ರೂಪ ಪಡೆಯುವುದು.
ಈ ರೀತಿಯ ಶಿಕ್ಷೆಯು ಕೋಪ , ಅಸಮಾಧಾನ ಮತ್ತು  ಕೀಳರಿಮೆಗೆ  ಕಾರಣವಾಗುವುದು. ಅದು ಅಸಹಾಯಕತೆ , ದೈನ್ಯದಭಾವನೆಗೆ  ಎಡೆಮಾಡಿ  ಮಗುವಿನ  ಆತ್ಮ ಗೌರವಕ್ಕೆ ಘಾಸಿಮಾಡುವುದು. ಇದರಿಂದ ಮಗುವು   ಹಿಂಜರಿಕೆ ಇಲ್ಲವೆ ಆಕ್ರಮಣಕಾರಿ ಮನೋಭಾವ  ಬೆಳೆಸಿಕೊಳ್ಳುವುದು.
ಸಮಸ್ಯೆಯ ಪರಿಹಾರಕ್ಕೆ  ಅದು  ಹಿಂಸೆ  ಮತ್ತು ಪ್ರತಿಕಾರವನ್ನು ಅವಲಂಬಿಸುವುದು.
ಮಕ್ಕಳು ಹಿರಿಯರು ಮಾಡುವುದನ್ನು ಅನುಕರಿಸಬಹುದು. ಮಕ್ಕಳು ಹಿಂಸೆ ಮಾಡುವುದ ಸರಿ ಅದರಲ್ಲಿ ಯಾವುದೆ ತಪ್ಪಿಲ್ಲ ಎಂದು ನಂಬುವರು. ಇದರಿಂದಾಗಿ ತಂದೆ ತಾಯಿ ಶಿಕ್ಷಕರಮೇಲೂ ಹಲ್ಲೆ ಮಾಡುವರು.ಬಾಲ್ಯದಲ್ಲಿ ಶಾರೀರಿಕ ಶಿಕ್ಷೆಗೆ ಬಲಿಯಾದವರು ಮುಂದೆ ವಯಸ್ಕರಾದಾಗ  ತಮ್ಮ ಸಂಗಾತಿಗಳನ್ನು, ಮಕ್ಕಳನ್ನು, ಗೆಳೆಯರನ್ನು ಹೊಡೆಯಲು ಮೊದಲು ಮಾಡುವರು.
ಶಾರೀರಿಕ ಶಿಕ್ಷೆಯು ಶಿಸ್ತು ತರುವಲ್ಲಿ ಪರಿಣಾಮಕಾರಿಯಾದ ಸಾಧನವಲ್ಲ. ಅದು ವ್ಯಕ್ತಿಯನ್ನು ಉತ್ತೇಜಿಸುವದು ವಿರಳ. ಅದು ಮಗುವಿಗೆ ಒಳಿತಿಗಿಂತ ಕೆಡುಕು ಮಾಡುವುದೆ ಹೆಚ್ಚು..
ಶಿಕ್ಷೆಯು  ಮಗುವು ಅಶಿಸ್ತಿನ ನಡವಳಿಕೆಯನ್ನು ಮತ್ತೆ ಮಾಡದಂತೆ ತಕ್ಕ ಮಟ್ಟಿಗೆ ತಡೆಯುವುದು. ಆದರೆ ಅದು ಅವನಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ. ಅವನನ್ನು ಹೆಚ್ಚು ಜಾಣನನ್ನಾಗಿಯೂ ಮಾಡುವುದಿಲ್ಲ.
ಮಗುವಿನ ಮೇಲೆ ಅದು ಹಲವು ನಿಷೇಧಾತ್ಮಕ ಪರಿಣಾಮ ಬೀರಬಹುದು..
ಅನೇಕ ಬೀದಿಬದಿಯ ಮತ್ತು  ಬಾಲ ಕಾರ್ಮಿಕರಾಗಿರುವ ಮಕ್ಕಳು  ತಾವು ಮನೆಯಿಂದ ಓಡಿಬರಲು ಶಾಲೆಯಲ್ಲಿನ, ಕುಟುಂಬದಲ್ಲಿನ,  ಶಾರೀರಿಕ ಶಿಕ್ಷೆಯೂ ಒಂದು ಕಾರಣ ಎಂದು ಹೇಳಿದ್ದಾರೆ
ಮಕ್ಕಳಿಗೆ ಶಿಸ್ತು ಕಲಿಸುವ  ಹಕ್ಕಿಗಾಗಿ ಅವರ ಬೆಳವಣಿಗೆ ಮತ್ತು ಪಾಲ್ಗೊಳ್ಳುವಿಕೆಯನ್ನು ಕುಂಠಿತ ಗೊಳಿಸಬಾರದು. ಮಕ್ಕಳ ಪಾಲುಗೊಳ್ಳುವ ಹಕ್ಕು ಅವರ ಶಿಸ್ತಿನ ಹಾದಿಯನ್ನು ಸುಗಮಗೊಳಿಸಬಲ್ಲದು.
ಏನೇಆದರೂ ಯಾವುದೇ ಧರ್ಮ ಅಥವ ಕಾನೂನು  ಶಾರೀರಿಕ ಶಿಕ್ಷೆಯನ್ನು ಒಪ್ಪುವುದಿಲ್ಲ.  ಯಾರಿಗೇ ಆದರೂ  ತಮಗೆ ಪರಿಸ್ಥತಿಯನ್ನು  ಬೇರೆ ವಿಧಾನದಲ್ಲಿ ನಿಭಾಯಿಸಲು  ಆಗಲಿಲ್ಲ ಎಂದು ಮಕ್ಕಳಿಗೆ ಶಾರೀರಿಕ ಶಿಕ್ಷೆ ಕೊಡುವ ಕಾನೂನಿನ ಅಥವ ನೈತಿಕ ಅಧಿಕಾರವಿಲ್ಲ
  • ಶಿಸ್ತನ್ನು  ಕಲಿಸುವುದು ಸಾಧ್ಯವಿಲ್ಲ. ಅದು ಅವರಲ್ಲಿ ಮೂಡಬೇಕು.
  • ಶಿಸ್ತು ಒಂದು ದೃಷ್ಟಿಕೋನ,  ನಡವಳಿಕೆ, ಹೊಣೆ ಅಥವ ಬದ್ಧತೆ
  • ಶಿಸ್ತು  ಮೂಲಭೂತವಾಗಿ ಆಂತರಿಕ. ಅದನ್ನು ಹೇರುವ ಪ್ರಯತ್ನವು ಹೊರಗಿನ ಪ್ರಕ್ರಿಯೆ.
ಶಾರೀರಿಕ ಶಿಕ್ಷೆಯು ಮಗುವಿಗೆ ಹೇಗೆ ಅಪಾಯ ಉಂಟುಮಾಡುವುದು? ಅದು ಮಗುವಿನ ಮನದ ಮೇಲೆ  ನಿಷೇಧಾತ್ಮಕ ಪರಿಣಾಮ ಬೀರುವುದು. ಸಾಮಾನ್ಯವಾಗಿ  ಎಳೆಯ ಮನದಲ್ಲಿ ದ್ವೇಷ,ಭಯ ಮತ್ತು ಉಗ್ರತೆಯ ರೂಪ ಪಡೆಯುವುದು.ಈ ರೀತಿಯ ಶಿಕ್ಷೆಯು ಕೋಪ , ಅಸಮಾಧಾನ ಮತ್ತು  ಕೀಳರಿಮೆಗೆ  ಕಾರಣವಾಗುವುದು. ಅದು ಅಸಹಾಯಕತೆ , ದೈನ್ಯದಭಾವನೆಗೆ  ಎಡೆಮಾಡಿ  ಮಗುವಿನ  ಆತ್ಮ ಗೌರವಕ್ಕೆ ಘಾಸಿಮಾಡುವುದು. ಇದರಿಂದ ಮಗುವು   ಹಿಂಜರಿಕೆ ಇಲ್ಲವೆ ಆಕ್ರಮಣಕಾರಿ ಮನೋಭಾವ  ಬೆಳೆಸಿಕೊಳ್ಳುವುದು. ಸಮಸ್ಯೆಯ ಪರಿಹಾರಕ್ಕೆ  ಅದು  ಹಿಂಸೆ  ಮತ್ತು ಪ್ರತಿಕಾರವನ್ನು ಅವಲಂಬಿಸುವುದು. ಮಕ್ಕಳು ಹಿರಿಯರು ಮಾಡುವುದನ್ನು ಅನುಕರಿಸಬಹುದು. ಮಕ್ಕಳು ಹಿಂಸೆ ಮಾಡುವುದ ಸರಿ ಅದರಲ್ಲಿ ಯಾವುದೆ ತಪ್ಪಿಲ್ಲ ಎಂದು ನಂಬುವರು. ಇದರಿಂದಾಗಿ ತಂದೆ ತಾಯಿ ಶಿಕ್ಷಕರಮೇಲೂ ಹಲ್ಲೆ ಮಾಡುವರು.ಬಾಲ್ಯದಲ್ಲಿ ಶಾರೀರಿಕ ಶಿಕ್ಷೆಗೆ ಬಲಿಯಾದವರು ಮುಂದೆ ವಯಸ್ಕರಾದಾಗ  ತಮ್ಮ ಸಂಗಾತಿಗಳನ್ನು, ಮಕ್ಕಳನ್ನು, ಗೆಳೆಯರನ್ನು ಹೊಡೆಯಲು ಮೊದಲು ಮಾಡುವರು.ಶಾರೀರಿಕ ಶಿಕ್ಷೆಯು ಶಿಸ್ತು ತರುವಲ್ಲಿ ಪರಿಣಾಮಕಾರಿಯಾದ ಸಾಧನವಲ್ಲ. ಅದು ವ್ಯಕ್ತಿಯನ್ನು ಉತ್ತೇಜಿಸುವದು ವಿರಳ. ಅದು ಮಗುವಿಗೆ ಒಳಿತಿಗಿಂತ ಕೆಡುಕು ಮಾಡುವುದೆ ಹೆಚ್ಚು..ಶಿಕ್ಷೆಯು  ಮಗುವು ಅಶಿಸ್ತಿನ ನಡವಳಿಕೆಯನ್ನು ಮತ್ತೆ ಮಾಡದಂತೆ ತಕ್ಕ ಮಟ್ಟಿಗೆ ತಡೆಯುವುದು. ಆದರೆ ಅದು ಅವನಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ. ಅವನನ್ನು ಹೆಚ್ಚು ಜಾಣನನ್ನಾಗಿಯೂ ಮಾಡುವುದಿಲ್ಲ.ಮಗುವಿನ ಮೇಲೆ ಅದು ಹಲವು ನಿಷೇಧಾತ್ಮಕ ಪರಿಣಾಮ ಬೀರಬಹುದು.. ಅನೇಕ ಬೀದಿಬದಿಯ ಮತ್ತು  ಬಾಲ ಕಾರ್ಮಿಕರಾಗಿರುವ ಮಕ್ಕಳು  ತಾವು ಮನೆಯಿಂದ ಓಡಿಬರಲು ಶಾಲೆಯಲ್ಲಿನ, ಕುಟುಂಬದಲ್ಲಿನ,  ಶಾರೀರಿಕ ಶಿಕ್ಷೆಯೂ ಒಂದು ಕಾರಣ ಎಂದು ಹೇಳಿದ್ದಾರೆ ಮಕ್ಕಳಿಗೆ ಶಿಸ್ತು ಕಲಿಸುವ  ಹಕ್ಕಿಗಾಗಿ ಅವರ ಬೆಳವಣಿಗೆ ಮತ್ತು ಪಾಲ್ಗೊಳ್ಳುವಿಕೆಯನ್ನು ಕುಂಠಿತ ಗೊಳಿಸಬಾರದು. ಮಕ್ಕಳ ಪಾಲುಗೊಳ್ಳುವ ಹಕ್ಕು ಅವರ ಶಿಸ್ತಿನ ಹಾದಿಯನ್ನು ಸುಗಮಗೊಳಿಸಬಲ್ಲದು.ಏನೇಆದರೂ ಯಾವುದೇ ಧರ್ಮ ಅಥವ ಕಾನೂನು  ಶಾರೀರಿಕ ಶಿಕ್ಷೆಯನ್ನು ಒಪ್ಪುವುದಿಲ್ಲ.  ಯಾರಿಗೇ ಆದರೂ  ತಮಗೆ ಪರಿಸ್ಥತಿಯನ್ನು  ಬೇರೆ ವಿಧಾನದಲ್ಲಿ ನಿಭಾಯಿಸಲು  ಆಗಲಿಲ್ಲ ಎಂದು ಮಕ್ಕಳಿಗೆ ಶಾರೀರಿಕ ಶಿಕ್ಷೆ ಕೊಡುವ ಕಾನೂನಿನ ಅಥವ ನೈತಿಕ ಅಧಿಕಾರವಿಲ್ಲ.
  • ಶಿಸ್ತನ್ನು  ಕಲಿಸುವುದು ಸಾಧ್ಯವಿಲ್ಲ. ಅದು ಅವರಲ್ಲಿ ಮೂಡಬೇಕು.
  • ಶಿಸ್ತು ಒಂದು ದೃಷ್ಟಿಕೋನ,  ನಡವಳಿಕೆ, ಹೊಣೆ ಅಥವ ಬದ್ಧತೆ
  • ಶಿಸ್ತು  ಮೂಲಭೂತವಾಗಿ ಆಂತರಿಕ. ಅದನ್ನು ಹೇರುವ ಪ್ರಯತ್ನವು ಹೊರಗಿನ ಪ್ರಕ್ರಿಯೆ.

ಪರೀಕ್ಷಾ ಒತ್ತಡ


  • ಮಿಥ್ಯ:  ಭಾರತದ  ಶಿಕ್ಷಣ ಪದ್ದತಿಯು ಹೊರತರುತ್ತಿರುವ ಜಾಣರನ್ನು  ನೋಡಿ ವಿಶ್ವವು ವಿಸ್ಮಯಗೊಂಡಿದೆ.   ಭಾರತದ  ವಿದ್ವಾಂಸರು, ಇಂಜನಿಯರುಗಳು, ವಿಜ್ಞಾನಿಗಳು  ಮತ್ತು ಇತರೆ ವೃತ್ತಿಪರರು ಪಾಶ್ಚಿಮಾತ್ಯ  ದೇಶಗಳಲ್ಲಿ ನೆಲೆಸಿ ತಮಗೂ , ರಾಷ್ಟ್ರಕ್ಕೂ ಹೆಸರು ತಂದಿದ್ದಾರೆ.  ಕಠಿಣ ಶಿಸ್ತಿನಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾಪದ್ಧತಿಯಲ್ಲಿಯೂ ಗೆಲುವಿನ ದಾರಿ ತೋರಿವೆ. ಎಲ್ಲ ತಾಯಿತಂದೆಯರು ತಮ್ಮ ಮಕ್ಕಳನ್ನು ಉತ್ತಮ ಫಲಿತಾಂಶ ನೀಡುವ ಶಾಲೆಗಳಿಗೆ ಸೇರಿಸಲು ಬಯಸುವರು
  • ಸತ್ಯ :  ಭಾರತವು ವಿಶ್ವದಲ್ಲಿ ಅತಿ ಬುದ್ಧಿವಂತರನ್ನು ಸೃಷ್ಟಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ  ಆ ಕೀರ್ತಿಯು ಈಗಿನ ಶಾಲೆಗಳಿಗೆ ಮತ್ತು ಶಿಕ್ಷಣ ವ್ಯವಸ್ಥೆಗೆ ಪೂರ್ತಿಯಾಗಿ  ಸಲ್ಲವುದೆ? ಅಥವಾ ಕೆಲವು ವಿದ್ಯಾರ್ಥಿಗಳ ದೃಢ ಸಂಕಲ್ಪ, ಸಾಮಾಜಿಕ ಮತ್ತು ಕೌಟುಂಬಿಕ ಒತ್ತಡವನ್ನುಮೀರಿ ನಿಲ್ಲುವ ಶಕ್ತಿಗೆ ಸಲ್ಲಬೇಕೋ? ತೀವ್ರ ಸ್ಪರ್ಧೆ, ಹೆಚ್ಚುತ್ತಿರುವ ಮಕ್ಕಳ ಮತ್ತು ವಿದ್ಯಾರ್ಥಿಗಳ ಆಕಾಂಕ್ಷೆ, ಫಲಿತಾಂಶವೆ ಶಾಲೆಯ ಮತ್ತು ಶಿಕ್ಷಕರ  ಗೌರವದ, ಸಾಧನೆಯ ಅಳತೆಗೋಲು ಆಗಿದೆ.  ಹೆಚ್ಚುತ್ತಿರುವ ಒತ್ತಡ ನಿಭಾಯಿಸಲು ಸೂಕ್ತ  ಸಹಾಯ ಕೊಡುವಲ್ಲಿ ಶಾಲೆ ಮತ್ತು ಶಿಕ್ಷಕರು  ನಿಸ್ಸಹಾಯಕರಾಗಿರುವುದರಿಂದ  ಮಕ್ಕಳಲ್ಲಿ ಖಿನ್ನತೆ ಹೆಚ್ಚುತ್ತಿದೆ ಅದು ಅನೇಕ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಮೆದುಳುಗಳು ಮರಣಿಸುತ್ತಿವೆ. ಈ ವಾಸ್ತವಕ್ಕೆ ನಾವು ಕಣ್ಣು ತೆರೆಯದೆ ಇದ್ದರೆ  ನಾವು ಅತಿ ಬೇಗ  ಬಹು ಜಾಣರಾದ ಒಂದು ಯುವ  ಪೀಳಿಗೆಯನ್ನೆ  ಕಳೆದು ಕೊಳ್ಳಬಹುದು.
ಕೆಲವು ಮಕ್ಕಳಿಗೆ  CBSE  ಪರೀಕ್ಷೆ ಬಿಟ್ಟರೆ ಬೇರೆ ಜೀವನವೇ ಇಲ್ಲ.
CBSE ಯ  X ಮತ್ತು XII ತರಗತಿಯ    ಫಲಿತಾಂಶ  ಬಂದ ೫-೬ ದಿನಗಳಲ್ಲಿ ದೆಹಲಿಯಲ್ಲಿ ಅರ್ಧ ಡಜನ್ ಗೂ ಹೆಚ್ಚು ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡಿಕೊಳ್ಳತ್ತಾರೆ. ನೀವು ಇದನ್ನು ಓದುತ್ತಿರುವಾಗಲೇ  ಇನ್ನೂ ಅನೇಕರು ತಮಗೆ ಉತ್ತಮ ಫಲಿತಾಂಶ ಬಂದಿಲ್ಲ ಎಂದು  ಜೀವನ ಕೊನೆ ಗೊಳಿಸುವ ಯೋಚನೆ ಮಾಡುತ್ತಿರಬಹುದು.   ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮ ಹತ್ಯೆಯು ಗಂಭೀರ ಸಮಸ್ಯೆಯ ಸಂಕೇತ. ಈ ಮೊದಲು ಖಿನ್ನತೆ ಮತ್ತು ಹದಿಹರೆಯ ಒಟ್ಟಿಗೆ ಇರಲಾರವು ಎಂಬ ಭಾವನೆ ಇತ್ತು.    ಈಗ ಬೆಳೆಯುತ್ತಿರುವ ಭಾವನೆಯ ಪ್ರಕಾರ ಹದಿಹರೆಯದವರೂ  ಹೆಚ್ಚು ಹೆಚ್ಚಾಗಿ ಖಿನ್ನತೆಗೆ ಒಳಗಾಗುವರು, ಎಂದು ಹೇಳುತ್ತಾರೆ  ಡಾ. ಆರ್.ಸಿ ಜಿಲೋಹ, ಪ್ರಧ್ಯಾಪಕರು ಮತ್ತು ಮನೊವಿಜ್ಞಾನ  ವಿಭಾಗದ ಮುಖ್ಯಸ್ಥರು. ಜಿ.ಬಿ ಪಂತ್ ಮತ್ತು ಮೌಲಾನಾ ಅಜಾದ ಮೆಡಿಕಲ್ ಕಾಲೇಜು. ಈ ಸಮಸ್ಯೆಯು ಜಠಿಲವಾಗುತ್ತಾ ಹೋಗುವುದು.  ಎಳೆ ವಯಸ್ಸಿನ ಅವರಿಗೆ ಸೊಲನ್ನು ಎದುರಿಸುವ ಗಡಸುತನವಾಗಲೀ,  ಜೀರ್ಣಿಸಿಕೊಳ್ಳುವ ಅನುಭವವಾಗಲಿ ಇರುವುದಿಲ್ಲ.
ಮೆ. ಶರ್ಮ , ಟೆಲಿ-ಕೌನ್ಸಿಲರ್ ಹೇಳುತ್ತಾರೆ  “ ತಾಯಿತಂದೆ ಮತ್ತು ಶಿಕ್ಷಕರು ಆಪ್ತ ಸಲಹೆಯ ಪ್ರಾಮುಖ್ಯತೆಯನ್ನು ಅರಿಯುವುದು ಅತಿ ಮುಖ್ಯ. ಪರೀಕ್ಷಾ ಫಲಿತಾಂಶವೇ ಜಗತ್ತಿನಲ್ಲಿ ಎಲ್ಲ ಅಲ್ಲ. ಅದರಿಂದ ಜಗತ್ತೇ ಕೊನೆಯಾಗುವುದಿಲ್ಲ.. ಪರೀಕ್ಷೆಯಾದ ಮೇಲೂ ಜೀವನ ಇದೆ. ನೀವು ಸರಿಯಾಗಿ,  ಪರೀಕ್ಷೆ ಬರೆಯದಿದ್ದರೂ ಸಹಾ. ಅದನ್ನು ತಾಯಿತಂದೆಯರು , ಶಿಕ್ಷಕರು ಅರ್ಥಮಾಡಿ ಕೊಳ್ಳಬೇಕು”
ತಾಯಿತಂದೆಯರು ತಮ್ಮ ಮಕ್ಕಳನ್ನು ಉತ್ತಮ ಫಲಿತಾಂಶ ಬರುವ ಶಾಲೆಗೆ ಸೇರಿಸುವುದು ಸಹಜ. ಆದರೆ ಅವರನ್ನು ಯಾರಾದರೂ ಮಗುವಿನ ಬದುಕು ಮತ್ತು  ಕಲ್ಯಾಣಕ್ಕಿಂತ ಅದು  ಮುಖ್ಯವಾ?  ಎಂದು ಕೇಳಿದ್ದಾರಾ ? ಯಾರೂ ತಮ್ಮ ಮಗುವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.ಇದು ತಾಯಿತಂದೆಯರಿಗೆ ಇರುವ ಆಪ್ತ ಸಲಹೆಯ ಅಗತ್ಯವನ್ನು ತೋರಿಸುತ್ತದೆ. ಶಾಲೆಯ ಒತ್ತಡವು ಹೆಚ್ಚಿದಂತೆಲ್ಲ, ಅವನ ಪ್ರಗತಿ ಪತ್ರವು ಮಗು ಎಷ್ಟುಚೆನ್ನಾಗಿ ಮಾಡಿದೆ, ಎಷ್ಟು ಚೆನ್ನಾಗಿಮಾಡಿಲ್ಲ ವೆಂಬುದನ್ನು ಮಾತ್ರ ತೀಳಿಸಿದರೆ, ತರಗತಿಯ ಶಿಕ್ಷಕರು  ಸದಾ ಒಂದು ಮಗುವನ್ನು ಇನ್ನೊಂದು ಮಗುವಿನ ಜೊತೆ ಹೋಲಿಸುತ್ತಿದ್ದರೆ, ವಿದ್ಯಾರ್ಥಿಗಳ  ಭಾವನತ್ಮಕ, ಮಾನಸಿಕ ಅಗತ್ಯಗಳನ್ನು ನಿರ್ಲಕ್ಷಿಸಿದರೆ, ಪರಿಸ್ಥಿತಿಯು ಎಂದೂ ಬದಲಾಗಲು ಅಸಾಧ್ಯ. ಶಾಲೆಗಳು ಈ ದಿಶೆಯಲ್ಲಿ ಮೊದಲು ಕ್ರಮ ತೆಗೆದುಕೊಳ್ಳ ಬೇಕು ಮತ್ತು ತಾಯಿತಂದೆಯರಿಗೆ ಅವರ ಜೊತೆಯಲ್ಲಿ ಮಕ್ಕಳಿಗೂ ಕೂಡಾ  ಆಪ್ತ ಸಲಹೆಯನ್ನು ಕೊಡಬೇಕು.

ಬೀದಿಯ ಮತ್ತು ಓಡಿ ಬಂದಿರುವ ಮಕ್ಕಳು. ಮಿಥ್ಯಗಳು ಮತ್ತು ಸತ್ಯಗಳು

  • ಮಿಥ್ಯೆ:    ಬಡ ಕುಟುಂಬದ ಮಕ್ಕಳು ಮಾತ್ರ  ಮನೆಯಿಂದ ಓಡಿಹೋಗಿ ಬೀದಿ ಮಕ್ಕಳಾಗುವರು. ಬೀದಿಯಲ್ಲಿನ ಮಕ್ಕಳು  ಕೆಟ್ಟವರು  ಸತ್ಯ:  ಸರಿಯಾಗಿ  ನೋಡಿಕೊಳ್ಳದಿದ್ದರೆ  ಯಾವುದೆ  ಮಗುವು  ಮನೆಯಿಂದ ಓಡಿ ಹೋಗಬಹುದು. ಮಗುವಿಗೆ ಗೌರವದಿಂದ ಬದುಕುವ ಹಕ್ಕಿದೆ. ಯಾರೇ ಆಗಲಿ ತಾಯಿತಂದೆ/ ಕುಟುಂಬ/ ಶಾಲೆ/ ಊರು ಮಕ್ಕಳಿಗೆ ಅವರ ಹಕ್ಕನ್ನು ನಿರಾಕರಿಸಿದರೆ ಅವರು ಮಕ್ಕಳ ವಿಷಯದಲ್ಲಿ ಸೋಲುತ್ತಾರೆ. ಬಹುಪಾಲು ಮಕ್ಕಳು.  ಉತ್ತಮ ಜೀವನ,  ಅವಕಾಶ ಅರಸಿ ಅಥವಾ ಮೆಟ್ರೊಗಳ ಆಕರ್ಷಣೆಗೆ ಒಳಗಾಗಿ,  ಅವರ ತಾಯಿ ತಂದೆಯರು ಒತ್ತಾಯದಿಂದ ಸೇರಿಸಿದ  ಶಿಕ್ಷಣ ವ್ಯವಸ್ಥೆಯ ಕಠೊರತೆಯನ್ನು ಸಹಿಸಲಾರದೆ  , ಗೃಹ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ಮನೆ ಬಿಡುವರು, ನಗರ ಪ್ರವೇಶಿಸುವರು. ಅಲ್ಲಿ ತುಂಬ ಹೀನ ಜೀವನ ನಡೆಸಬೇಕಾಗುವುದು.ಬೀದಿಯ ಮಕ್ಕಳು ಎಂದೂ  ಕೆಟ್ಟವರಲ್ಲ. ಅವರು ಇರುವ ಪರಿಸರವು ಕೆಟ್ಟದಾಗಿರುವುದು.
  • ಈ ಮಕ್ಕಳೂ ದಿನಕ್ಕೆ  ಎರಡು ಊಟ ಕಾಣುವುದೂ ಕಷ್ಟ. ಅವರು ದರ್ಬಳಕೆಯ ವಿರುದ್ಧ ಬಹಳ ಅಸಾಹಯಕರು. ಒಂದು ಸಲ ಬೀದಿಗೆ ಬಿದ್ದರೆ ಅವರು  ಶೋಷಣೆ ಮತ್ತು ಅದಕ್ಕೆ ಸಂಬಂಧಿಸದ ವಿಷಚಕ್ರದಲ್ಲಿ ಸಿಕ್ಕಿ ಬೀಳುವರು. ಇಲ್ಲವೆ ಹಿರಿಯ ಮಕ್ಕಳ ಸಂರ್ಪಕಕ್ಕೆ ಬಂದೊಡನೆ ಹೊಸ ಎಳೆಯ ಹುಡುಗರು ಚಿಂದಿ ಆಯುವ ,ಇತರ ಸುಲಭವಾಗಿ ದೊರೆಯುವ ಕೆಲಸ  ಶುರುಮಾಡುವರು, ಅಥವ ಕಾನೂನು ಬಾಹಿರ ಚಟುವಟಿಕೆಗಳಾದ ಜೇಬು ಕತ್ತರಿಸುವುದು (ಪಿಕ್ ಪ್ಯಾಕೆಟ್) ಮಾಡುವುದು, ಭಿಕ್ಷೆ ಬೇಡುವುದು, ಮಾದಕದ್ರವ್ಯ ಮಾರಾಟ ಇತ್ಯಾದಿಗಳಲ್ಲಿ ತೊಡಗುವರು.
ಮನೆಯಿಂದ ಓಡಿಬರಲು ಮಕ್ಕಳಿಗೆ ಅನೇಕ ಕಾರಣಗಳಿವೆ :
  • ಉತ್ತಮ ಜೀವನದ ಅವಕಾಶ.
  • ಮೆಟ್ರೊಗಳ ಆಕರ್ಷಣೆ.
  • ಗೆಳೆಯರ ಒತ್ತಡ.
  • ಅನಾರೋಗ್ಯಕರ  ಕೌಟುಂಬಿಕ ಸಂಬಂಧಗಳು.
  • ತಾಯಿತಂದೆಯರೆ ತೊರೆದವರು.
  • ತಾಯಿತಂದೆ ಹೊಡೆತಕ್ಕೆ,  ಶಿ ಕ್ಷಕರ ಹೊಡೆತಕ್ಕೆ ಹೆದರಿದವರು.
  • ಲೈಂಗಿಕ ದುರ್ಬಳಕೆ.
  • ಜಾತಿ ತಾರತಮ್ಯ.
  • ಲಿಂಗ ತಾರತಮ್ಯ.
  • ವಿಕಲ ಚೇತನರು.
  • ಹೆಚ್. ಐ. ವಿ ಏಡ್ಸ್ (HIV/AIDS).ನಿಂದಾಗಿ ತಾರತಮ್ಯಕ್ಕೆ ಒಳಗಾದವರು
, ದೀಪ್ತಿ ಪಗರೆ , ಜಿ  ಎಸ್. ಮೀನಾಸ, ಆರ್.ಸಿ ಜಿಲೊಹ ಮತ್ತು ಎಂ. ಎಂ. ಸಿಂಗ್   ಭಾರತೀಯ ಮಕ್ಕಳ ತಜ್ಞರು,ಸಮುದಾಯ ಔಷಧಿ ಮತ್ತು ಮನೋವಿಜ್ಞಾನ (ಸೈಕಿಯಾಟ್ರಿಕ್) ವಿಭಾಗ, ಮೌಲಾನಾ ಆಜಾದ್ ಮೆಡಿಕಲ್ ಕಾಲೇಜು ಅವರು ೨೦೦೩-೨೦೦೪ರಲ್ಲಿ ಒಂದು ಅಧ್ಯಯನ ಮಾಡಿದರು  ’ಬೀದಿಯ ಮಕ್ಕಳ ಲೈಂಗಿಕ ದುರ್ಬಳಕೆ, ಪರಿಶೀಲನಾ ಗೃಹ ಕರೆತರಲಾದವರು’ ಎಂಬ ವಿಷಯದಮೇಲೆ ಅವರು ದೆಹಲಿಯಲ್ಲಿ ಪರಿಶಿಲನಾಗೃಹಕ್ಕೆ ಕರೆತಂದ ಗಂಡುಮಕ್ಕಳ ಮೇಲಿನ ಲೈಂಗಿಕ ದುರ್ಬಳಕೆಯ ಪ್ರಮಾಣ ಮತ್ತು ವಿಧಾನಗಳನ್ನು ಗಮನಿಸಿದರು. ಅದರ ಪ್ರಕಾರ ಬಹುತೇಕ ಮಕ್ಕಳು ಓಡಿ ಬಂದವರು ಮತ್ತು ೩೮.೧% ಲೈಂಗಿಕ ದುರ್ಬಳಕೆ ಅನುಭವಿಸಿದವರು. ವೈದ್ಯಕೀಯ ಪರೀಕ್ಷೆಯಲ್ಲಿ ೬೧.೧% ಜನ ಅದರ ಶಾರೀರಿಕ ಕುರುಹುಗಳನ್ನು ಹೊಂದಿದ್ದರು.   ೪೦.೨% ಜನರು ವರ್ತನೆಯಲ್ಲಿ ಆ ಕುರುಹು ತೋರಿದರು. ಬಲಾತ್ಕಾರದ ಸಂಭೋಗಕ್ಕೆ ಬಲಿ ಆದವರ  ಸಂಖ್ಯೆ ೪೪.೪ % ಆಗಿತ್ತು ಮತ್ತು  ೨೫% STD ಇರುವ ಕುರಹು ಹೊಂದಿದ್ದರು.  ಅವರನ್ನು ಲೈಂಗಿಕ ದುರ್ಬಳಕೆ ಮಾಡಿದವರಲ್ಲಿ ಅಪರಿಚಿತರೇ ಹೆಚ್ಚು.

ಹೆಚ್ ಐ ವಿ



ಮಿಥ್ಯ ಮತ್ತು ಸತ್ಯ

  • ಮಿಥ್ಯೆ:       -ಹೆಚ್ ಐ ವಿ/ ಏಡ್ಸ್   : ಒಂದು ವಯಸ್ಕರ ವಿಷಯ. ಮಕ್ಕಳಿಗೂ ಅದಕ್ಕೂ ಏನೂ ಸಂಬಂಧ ವಿಲ್ಲ. ಅವರಿಗೆ ಹೆಚ್ ಐ ವಿ/ ಏಡ್ಸ್,  ಸಂತಾನೋತ್ಪತ್ತಿ ಆರೋಗ್ಯ, ಲೈಂಗಿಕತೆ ಮತ್ತು ಇತರ ವಿಷಯಗಳ ಬಗ್ಗೆ ತಿಳಸುವುದರಿಂದ ಅವರ ಮನಸ್ಸು ಕೆಡುತ್ತದೆ . -ಹೆಚ್ ಐ ವಿ/ ಏಡ್ಸ್ ಇರುವ ಕುಟುಂಬದಿಂದ ಮಕ್ಕಳ ವಿಷಯದಲ್ಲಿ ಎಚ್ಚರದಿಂದ ಇರಬೇಕು. ಹೆಚ್ ಐ ವಿ/ ಏಡ್ಸ್   ಹರಡುವುದನ್ನು ತಡೆಯಲು  ಅವರನ್ನು ಸಾಧ್ಯವಾದಷ್ಟು ದೂರ ಇಡಬೇಕು
  • ಸತ್ಯ: ಹೆಚ್ ಐ ವಿ/ ಏಡ್ಸ್  ಗೆ   ವಯಸ್ಸು ,ಬಣ್ಣ , ಜಾತಿ, ವರ್ಗ,ಧರ್ಮ,ಭೌಗೋಲಿಕತೆ, ನೈತಿಕತೆ , ಒಳ್ಳೆಯದು, ಕೆಟ್ಟದು ಎಂಬ ತಾರತಮ್ಯವಿಲ್ಲ. ಎಲ್ಲ ಮನುಷ್ಯರಿಗೂ ಇದು ಬರಬಹುದು.
ಹೆಚ್ ಐ ವಿ  ಯು ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ (ಹ್ಯುಮನ್ ಇಮ್ಯುನೋ ಡಿಫಿಷಿಯನ್ಸಿ)  ವೈರಾಣುವು ಏಡ್ಸ್ಗೆ ಕಾರಣವಾಗಿದೆ.   ಅದು ಹೆಚ್ ಐ ವಿ  ಪೀಡಿತ (ಪಾಜಿಟಿವ್)  ವ್ಯಕ್ತಿಯ  ದೇಹದ  ದ್ರವಗಳಾದ  ವೀರ್ಯ,ಅದಕ್ಕೂಮೊದಲುಚಿಮ್ಮಿದ ದ್ರವ, ಯೋನಿ ದ್ರವ,  ರಕ್ತ ಅಥವಾ ಎದೆಹಾಲುಗಳ ಸಂಪರ್ಕದಿಂದ  ಮತ್ತು ಇಂಜೆಕ್ಷನ್ ನೀಡಿದ , ರಕ್ತನೀಡಿದ,   ಹಚ್ಚೆಹಾಕಿದ,ಮಾದಕ ದ್ರವ್ಯ ನೀಡಲು ಬಳಸಿದ, ಶರೀರಕ್ಕೆ ಚುಚ್ಚಿದ ಸೂಜಿಯಿಂದಲೂ ಬರಬಹುದು.
ಹೆಚ್ ಐ ವಿ/ ಏಡ್ಸ್ ನಿಂದ ಮಿಲಿಯನ್ ಗಟ್ಟಲೆ ಮಕ್ಕಳು ಸೋಂಕಿತರಾಗಿದ್ದಾರೆ  . ಮಕ್ಕಳು ತಾಯಿತಂದೆಯರ ಅಕಾಲ ಮರಣದಿಂದ  ಅನಾಥರಾಗಿ ರಕ್ಷಣೆ ಆರೈಕೆಗಳಿಂದ ವಂಚಿತರಾಗಿದ್ದಾರೆ.
ತಾಯಿಯಿಂದ ಮಗುವಿಗೆ ಹರಡುವ ಸೋಂಕು ಮಕ್ಕಳಲ್ಲಿ ಬಹು ಸಾಮಾನ್ಯವಾಗಿದೆ.ಹೆಚ್ಚಿನ ಮಕ್ಕಳ ಲೈಂಗಿಕ ದುರ್ಬಳಕೆ, ನಿಷಿದ್ಧ ಗಮನ ದಿಂದಾಗಿ ಬಹಳ ಮಕ್ಕಳು ಈ ಮಾರಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಮತ್ತು  ಯುವಕರಲ್ಲಿ ಮಾದಕ ದ್ರವ್ಯ ಸೇವನೆಯು ಹೆದರಿಕೆ ಮೂಡಿಸಿದೆ. ಹೆಚ್ ಐ ವಿ/ ಏಡ್ಸ್ ಪೀಡಿತ ಮಕ್ಕಳಿಗೆ ಮಾಹಿತಿಯನ್ನು ನೀಡದಿದ್ದರೆ  ಅವರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಹಕ್ಕನ್ನು ಕಸಿದುಕೊಂಡಂತೆ ಆಗುವುದು.
ಏಷಿಯಾದಲ್ಲಿ ಭಾರತವೇ ಅತ್ಯಂತ ಹೆಚ್ಚು ಹೆಚ್ ಐ ವಿ/ ಏಡ್ಸ್ ಹೊಂದಿರುವದೇಶ. ನಂತರದ ಸ್ಥಾನ ಚೀನಾದ್ದು. UNAID  ಪ್ರಕಾರ ಭಾರತದಲ್ಲಿ ೦-೧೪ ವಯೋಮಾನದ ೦.೧೬ ಮಿಲಿಯನ್ ಮಕ್ಕಳು ಹೆಚ್ ಐ ವಿ ಸೊಂಕಿತರಾಗಿದ್ದಾರೆ.
ಒಂದು ವರದಿಯ ಪ್ರಕಾರ ಕೇರಳದ  ಪರಪ್ಪನಅಂಗಡಿಯ ಆರು ವರ್ಷದ ಬಬಿತರಾಜ್ ಎಂಬ ಮಗುವಿಗೆ  ಅವನ ತಂದೆ ಏಡ್ಸ್ (AIDS), ನಿಂದ ಮೃತನಾದ ಎಂಬಕಾರಣಕ್ಕೆ ಶಿಕ್ಷಕ ಪೋಷಕ ಸಂಘ ,ಮತ್ತು ಶಾಲಾ ಅಧಿಕಾರಿಗಳ ಪ್ರತಿಭಟನೆಮಾಡಿದ್ದರಿಂದ ಸರಕಾರಿ  ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ.  ಸಮಾಜಿಕ ಕಾರ್ಯಕರ್ತರು, ಸ್ಥಳಿಯ ಸರಕಾರಿ ಅಧಿಕಾರಿಗಳು  ಮಧ್ಯ ಪ್ರವೇಶಿಸಿ , ಅವನಿಗೆ ಹೆಚ್. ಐ. ವಿ (HIV) ಇಲ್ಲ ಎಂಬ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದು ತೋರಿಸಿದ ಮೇಲೂ ಶಾಲೆಯವರು ಮಗುವನ್ನು ಪುನಃ ಸೇರಿಸಿಕೊಳ್ಳಲು ನಿರಾಕರಿಸಿದರು.
ಮೂಲ: ತೊರೆದ ಭವಿಷ್ಯ, ಹ್ಯುಮನ್ ರೈಟ್ಸ ವಾಚ್ ;  ಪುಟ ೭೩, ೨೦೦
ನಾವು ಸೊಂಕಿತ ವ್ಯಕ್ತಿಯನ್ನು ಮುಟ್ಟಿದರೆ, ಅವನ ಪಕ್ಕದಲ್ಲಿ ಕುಳಿತರೆ. ಅಪ್ಪಿಕೊಂಡರೆ, ಅವರ ಜತೆ ಆಟ ಆಡಿದರೆ ಅಥವ  ಮುತ್ತು ಕೊಟ್ಟರೆ ಹೆಚ್. ಐ. ವಿ (HIV) ಹರಡುವುದಿಲ್ಲ ಎಂಬುದನ್ನು ಅರಿಯಬೇಕು.
ಮಕ್ಕಳ ಮಾಹಿತಿ ಪಡೆಯುವ ಮತ್ತು ಭಾಗವಹಿಸುವ ಹಕ್ಕು “ ಮಗುವಿನ ಹಿತಾಸಕ್ತಿ”ಯನ್ನು ಕಾಪಾಡುವುದನ್ನು ಆಧರಿಸಿದೆ. ಆದ್ದರಿಂದ ಲೈಂಗಿಕತೆ ಸಂತಾನೋತ್ಪತ್ತಿ  ಆರೋಗ್ಯ,ಹೆಚ್. ಐ. ವಿ ಏಡ್ಸ್ (HIV/AIDS) ಬಗ್ಗೆ ಚರ್ಚಿಸುವಾಗ  ಮಗುವಿನ ವಯಸ್ಸಿನ ಪರಿಗಣನೆ  ಮನದಲ್ಲಿ ಇರಬೇಕು. ವಾಸ್ತವ ಏನಂದರೆ ನಾವು ಮಾನಸಿಕವಾಗಿ ಮಗುವಿನ  ಪ್ರಶ್ನೆಗಳನ್ನು ಪರಿಗಣಿಸುವ   ತಯಾರಿ ಮಾಡಿ ಕೊಂಡಿರುವುದಿಲ್ಲ.ಅದಕ್ಕಾಗಿ ಏನೋ ನೆಪ ಹೇಳಿ ಚರ್ಚೆಮಾಡುವುದನ್ನು ತಪ್ಪಿಸಿಕೊಳ್ಳುತ್ತೇವೆ.  ನಾವು ಲೈಂಗಿಕ ಶಿಕ್ಷಣವೂ  ಸೇರಿದಂತೆ ಜೀವನ-ಕೌಶಲ್ಯ ಶಿಕ್ಷಣವನ್ನು  ನಿರಾಕರಿಸುವ ಬದಲು ಅದಕ್ಕೆ ಸಿದ್ಧರಾಗಿರುವುದು ಬಹಳ ಮುಖ್ಯ.
ಅನೇಕ ಶಾಲೆಗಳು ಮಕ್ಕಳು  ಹೆಚ್. ಐ. ವಿ ಏಡ್ಸ್ (HIV/AIDS) ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದರೆ  ಅವರಿಗೆ  ಆ ಬಗೆಗೆ ಶಿಕ್ಷಣ ನೀಡುವ ಬದಲು  ಅವರನ್ನು ಸುಮ್ಮನೆ  ಶಾಲೆಯಿಂದ ಹೊರಹಾಕುವರು. ಅವರಿಗೆ ಹೆಚ್. ಐ. ವಿ ಏಡ್ಸ್ (HIV/AIDS) ಇದೆ ಎಂದು ಪ್ರಾಥಮಿಕ ಸೇವೆಗಳನ್ನು,ಮಾನವ ಹಕ್ಕುಗಳನ್ನು ನಿರಾಕರಿಸಿದರೆ ಅದು ತಾರತಮ್ಯ ಎನಿಸುವುದು. ಭಾರತೀಯ ಸಂವಿಧಾನವು ಸಮಾನತೆ ಮತ್ತು ತಾರತಮ್ಯರಹಿತ ಹಕ್ಕಿನ ಖಾತ್ರಿ ನೀಡಿದೆ ಮತ್ತು ಯಾರು ಅಸಮಾನತೆ ಮತ್ತು ತಾರತಮ್ಯವನ್ನು ಯಾವುದೇ ಆಧಾರದ ಮೇಲೆ ಉತ್ತೇಜಿಸಿದರೂ ಅವರು ಶಿಕ್ಷೆಗೆ ಗುರಿಯಾಗುವರು.
ವ್ಯಕ್ತಿ  ಹೆಚ್. ಐ. ವಿ ಏಡ್ಸ್ (HIV/AIDS) ಸೊಂಕಿತ (ಪಾಜಿಟಿವ್) ಎಂದು ಅವನಿಗ ತಿಳಿದಿರುವುದು,  ಅವನು ಅದಷ್ಟು ಬೇಗ ಚಿಕಿತ್ಸೆ ಪಡೆಯಲು ಅದರಿಂದ ಹೆಚ್ಚುದಿನ ಆರೋಗ್ಯವಂತನಾಗಿರಲು ಮತ್ತು  ವೈರಾಣುವನ್ನು ಇನ್ನೊಬ್ಬರಿಗೆ ಹರಡದಿರಲು ಸಹಾಯವಾಗುವುದು  .ವಾಸ್ತವವಾಗಿ ಅಪಾಯದ ಹಂಚಿನಲ್ಲಿರುವ ಮಕ್ಕಳನ್ನುಶಾಲೆಯಿಂದ ಹೊರಹಾಕಿದರೆ ಅವರ ಆರೋಗ್ಯದ ಮೇಲುಸ್ತುವಾರಿ ಮಾಡುವ ಮತ್ತು ಅವರಿಗೆ ಅಗತ್ಯ ಸಹಾಯ ನೀಡುವ ಅವಕಾಶವೆ ಇಲ್ಲದಾಗುವುದು.    ಹೀಗೆ ಅದು ಇತರರಿಗೂ ಹೆಚ್ಚು ಅಪಾಯಕಾರಿಯಾಗಬಹುದು. ತಾರತಮ್ಯವು ಬೇಳೆಯುತ್ತಿರುವ  ಪಿಡುಗಿಗೆ ಕೊನೆ ಹೇಳುವುದಿಲ್ಲ.


ರತಮ್ಯ

ಜಾತಿ ತಾರತಮ್ಯ-ಮಿಥ್ಯ ಮತ್ತು ಸತ್ಯ

  • ಮಿಥ್ಯೆ: ಅಸ್ಪೃ ಶ್ಯತೆ ಮತ್ತು ಜಾತಿ ತಾರತಮ್ಯವು ಈಗ ಇತಿಹಾಸವಾಗಿದೆ. ಏನೇ ಆದರೂ ದಲಿತರು, ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಮೀಸಲಾತಿಯಿಂದಾಗಿ ತಾರತಮ್ಯವಿಲ್ಲದ ಸುಖ ಜೀವನ ಸಾಗಿಸುತ್ತಿದ್ದಾರೆ
  • ಸತ್ಯ: ಇದು ನಿಜವಲ್ಲ. ವ್ಯಕ್ತಿಯು ಮೊದಲು ಜಾತಿ ತಾರತಮ್ಯಕ್ಕೆ ಬಹುಬೇಗನೆ ಒಳಗಾಗುತ್ತಾನೆ. ಶಾಲೆಯಲ್ಲಿ, ಆಟದ ಮೈದಾನದಲ್ಲಿ, ಆಸ್ಪತ್ರೆಯಲ್ಲಿ ಹೀಗೆ ತಾರತಮ್ಯಕ್ಕೆ ಒಳಗಾಗುವ ಅವಕಾಶದ ಪಟ್ಟಿಗೆ ಕೊನೆಯಿಲ್ಲ. ನಾವು ದಲಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಡ ಪಂಗಡದ ಹಾಗೂ ಬಡ ಮತ್ತು ದುರ್ಬಲರಿಗೆ ಆಗುವ ತಾತಮ್ಯವನ್ನು, ಅವರಿಗೆ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಖಾತ್ರಿಗೋಳಿಸುವ ಮೂಲಕ ನಿವಾರಿಸಬಹುದು. ವಿಶೇಷವಾಗಿ ಶಿಕ್ಷಣ, ಆರೋಗ್ಯ ಸೇವೆ ಪಡೆಯುವ ಅವಕಾಶ ಮತ್ತು ಸಾಮಾಜಿಕ ಭದ್ರತಾ ಸೇವೆಗಳಾದ ಬಾಲಕಾರ್ಮಿಕ ನಿಷೇಧ ಕಾರ್ಯಕ್ರಮಗಳು, ಅತಿ ಹೀನವಾದ ಮಲಹೊರುವ ಪದ್ಧತಿ ನಿಷೇದಗಳನ್ನು ಖಾತ್ರಿಯಾಗಿ ಜಾರಿಗೊಳಸಬೇಕು.
ಜಾತಿ ತಾರತಮ್ಯ-ಮಿಥ್ಯ ಮತ್ತು ಸತ್ಯಮಿಥ್ಯೆ: ಅಸ್ಪೃ ಶ್ಯತೆ ಮತ್ತು ಜಾತಿ ತಾರತಮ್ಯವು ಈಗ ಇತಿಹಾಸವಾಗಿದೆ. ಏನೇ ಆದರೂ ದಲಿತರು, ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಮೀಸಲಾತಿಯಿಂದಾಗಿ ತಾರತಮ್ಯವಿಲ್ಲದ ಸುಖ ಜೀವನ ಸಾಗಿಸುತ್ತಿದ್ದಾರೆಸತ್ಯ: ಇದು ನಿಜವಲ್ಲ. ವ್ಯಕ್ತಿಯು ಮೊದಲು ಜಾತಿ ತಾರತಮ್ಯಕ್ಕೆ ಬಹುಬೇಗನೆ ಒಳಗಾಗುತ್ತಾನೆ. ಶಾಲೆಯಲ್ಲಿ, ಆಟದ ಮೈದಾನದಲ್ಲಿ, ಆಸ್ಪತ್ರೆಯಲ್ಲಿ ಹೀಗೆ ತಾರತಮ್ಯಕ್ಕೆ ಒಳಗಾಗುವ ಅವಕಾಶದ ಪಟ್ಟಿಗೆ ಕೊನೆಯಿಲ್ಲ. ನಾವು ದಲಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಡ ಪಂಗಡದ ಹಾಗೂ ಬಡ ಮತ್ತು ದುರ್ಬಲರಿಗೆ ಆಗುವ ತಾತಮ್ಯವನ್ನು, ಅವರಿಗೆ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಖಾತ್ರಿಗೋಳಿಸುವ ಮೂಲಕ ನಿವಾರಿಸಬಹುದು. ವಿಶೇಷವಾಗಿ ಶಿಕ್ಷಣ, ಆರೋಗ್ಯ ಸೇವೆ ಪಡೆಯುವ ಅವಕಾಶ ಮತ್ತು ಸಾಮಾಜಿಕ ಭದ್ರತಾ ಸೇವೆಗಳಾದ ಬಾಲಕಾರ್ಮಿಕ ನಿಷೇಧ ಕಾರ್ಯಕ್ರಮಗಳು, ಅತಿ ಹೀನವಾದ ಮಲಹೊರುವ ಪದ್ಧತಿ ನಿಷೇದಗಳನ್ನು ಖಾತ್ರಿಯಾಗಿ ಜಾರಿಗೊಳಸಬೇಕು.


ಅಂಗ ವಿಕಲತೆ

ಮಿಥ್ಯ ಮತ್ತು ಸತ್ಯ

  • ಮಿಥ್ಯೆ:   ಅಂಗವಿಕಲತೆಯು ಒಂದು ಶಾಪ. ವಿಕಲಚೇತನ ಮಗುವಿಗೆ ಯಾವುದೆ ಬೆಲೆ ಇಲ್ಲ. ಅದು ಕುಟುಂಬದ ಮೇಲೆ ಒಂದು ಹೊರೆ ಆರ್ಥಿಕವಾಗಿ ಅನುತ್ಪಾದಕ ಮತ್ತು ಶಿಕ್ಷಣವು ಅವರಿಗೆ ನಿರುಪಯುಕ್ತ.  ವಾಸ್ತವವಾಗಿ ಅಂಗ ವಿಕಲತೆಗೆ ಯಾವುದೆ ಪರಿಹಾರವಿಲ್ಲ.
  • ಸತ್ಯ:  ಅಂಗವಿಕಲತೆಯು ಯಾವುದೆ ಪಾಪದ ಫಲವಲ್ಲ. ವಿಕೃತಿಯು ತಾಯಿ ಗರ್ಭಿಣಿಯಿದ್ದಾಗ,  ಸೂಕ್ತ ಆರೈಕೆ ಇಲ್ಲದೆ  ಮತ್ತು ಕೆಲವು ಸಲ ವಂಶಪಾರಂಪರೆಯಾಗಿ ಬಂದಿರುವ ದೋಷವಾಗಿರಬಹುದು .  ಅಗತ್ಯವಿದ್ದಾಗ ಸೂಕ್ತ ಔಷಧೋಪಚಾರದ ಕೊರತೆ ಚುಚ್ಚುಮದ್ದು (ಇಮ್ಯುನೈಜೇಷನ್) ನೀಡದೆ ಇರುವುದು, ಅಪಘಾತ, ಮತ್ತು ಗಾಯಗಳಿಂದಲೂ  ಅಂಗವಿಕಲತೆ  ಆಗಬಹುದು.
ಮಾನಸಿಕ ಮತ್ತು ದೈಹಿಕ ವಿಕಲತೆಯಿರುವ ವ್ಯಕ್ತಿಯು ಸಾಧಾರಣವಾಗಿ ಕರುಣೆಗೆ ಪಾತ್ರನಾಗುವುನು. ನಾವು ವ್ಯಕ್ತಿಯಾಗಿ ವಿಕಲಚೇತನನಿಗೂ ಹಕ್ಕುಗಳಿವೆ. ಅವನಿಗೆ  ನಮ್ಮಿಂದ ಕರುಣೆಗಿಂತ ಹೆಚ್ಚಾಗಿ ಅನುಭೂತಿಯ ಅಗತ್ಯವಿದೆ ಎಂಬುದನ್ನು ಅರಿಯಬೇಕುಮಾನಸಿಕ ಮತ್ತು ದೈಹಿಕ ವಿಕಲತೆಯಿರುವ ವ್ಯಕ್ತಿಯು ಸಾಧಾರಣವಾಗಿ ಕರುಣೆಗೆ ಪಾತ್ರನಾಗುವುನು. ನಾವು ವ್ಯಕ್ತಿಯಾಗಿ ವಿಕಲಚೇತನನಿಗೂ ಹಕ್ಕುಗಳಿವೆ. ಅವನಿಗೆ  ನಮ್ಮಿಂದ ಕರುಣೆಗಿಂತ ಹೆಚ್ಚಾಗಿ ಅನುಭೂತಿಯ ಅಗತ್ಯವಿದೆ ಎಂಬುದನ್ನು ಅರಿಯಬೇಕು
ಬಹಳ ಸಲ ನಾವು ವಿಕಲಚೇತನತೆಯನ್ನು  ಒಂದು ಕಳಂಕ ಎಂದು ಭಾವಿಸುವೆವು. ಮಾನಸಿಕ ವಿಕಲತೆ ಇರುವ ಕುಟುಂಬವನ್ನು ಸಮಾಜವವು ಕಡೆಗಣ್ಣಿನಿಂದ ನೋಡಿ  ದೂರ ಇಡುವುದು. ಶಿಕ್ಷಣವು ಪ್ರತಿ ಮಗುವಿಗೂ ಮುಖ್ಯ. ಅದು ವಿಕಲಚೇತನನಾಗಿದ್ದರೂ ಕೂಡಾ.  ಅದರಿಂದ ಮಗುವಿನ ಸರ್ವಾಂಗಿಣ ಅಭಿವೃದ್ಧಿಯಾಗುವುದು.ಬಹಳ ಸಲ ನಾವು ವಿಕಲಚೇತನತೆಯನ್ನು  ಒಂದು ಕಳಂಕ ಎಂದು ಭಾವಿಸುವೆವು. ಮಾನಸಿಕ ವಿಕಲತೆ ಇರುವ ಕುಟುಂಬವನ್ನು ಸಮಾಜವವು ಕಡೆಗಣ್ಣಿನಿಂದ ನೋಡಿ  ದೂರ ಇಡುವುದು. ಶಿಕ್ಷಣವು ಪ್ರತಿ ಮಗುವಿಗೂ ಮುಖ್ಯ. ಅದು ವಿಕಲಚೇತನನಾಗಿದ್ದರೂ ಕೂಡಾ.  ಅದರಿಂದ ಮಗುವಿನ ಸರ್ವಾಂಗಿಣ ಅಭಿವೃದ್ಧಿಯಾಗುವುದು.
ವಿಕಲಾಂಗ ಮಗುವಿಗೆ ವಿಶೇಷ ಅಗತ್ಯಗಳಿವೆ. ಅವುಗಳನ್ನು ನಾವು ಪೂರೈಸಬೇಕು.ಅವಕಾಶವಿದ್ದರೆ ಅವರು ಕೂಡಾ ಜೀವನಕ್ಕೆ ಆಧಾರವಾಗಬಹುದಾದ ಕೌಶಲ್ಯಗಳನ್ನು ಕಲಿಯುವರು. ವಿಕಲಚೇತನರಿಗೆ ತಮ್ಮ ಜೀವನವನ್ನು ನಡೆಸಲು ಅಗತ್ಯವಾದುದ್ದನ್ನು ಒದಗಿಸದೆ ಇದ್ದರೆ ವೈಕಲ್ಯವು ಒಂದು ದುರಂತವಾಗುವುದು.ವಿಕಲಾಂಗ ಮಗುವಿಗೆ ವಿಶೇಷ ಅಗತ್ಯಗಳಿವೆ. ಅವುಗಳನ್ನು ನಾವು ಪೂರೈಸಬೇಕು.ಅವಕಾಶವಿದ್ದರೆ ಅವರು ಕೂಡಾ ಜೀವನಕ್ಕೆ ಆಧಾರವಾಗಬಹುದಾದ ಕೌಶಲ್ಯಗಳನ್ನು ಕಲಿಯುವರು. ವಿಕಲಚೇತನರಿಗೆ ತಮ್ಮ ಜೀವನವನ್ನು ನಡೆಸಲು ಅಗತ್ಯವಾದುದ್ದನ್ನು ಒದಗಿಸದೆ ಇದ್ದರೆ ವೈಕಲ್ಯವು ಒಂದು ದುರಂತವಾಗುವುದು.
  • ಜನಗಣತಿ ೨೦೦೧ ರ ಪ್ರಕಾರ,೦-೧೯ ವಯೋಮಾನದ ಒಟ್ಟು ಜನಸಂಖ್ಯೆಯಲ್ಲಿ ೧.೬೭ %   ಜನ ವಿಕಲಚೇತನರಿದ್ದಾರೆ .ಜನಗಣತಿ ೨೦೦೧ ರ ಪ್ರಕಾರ,೦-೧೯ ವಯೋಮಾನದ ಒಟ್ಟು ಜನಸಂಖ್ಯೆಯಲ್ಲಿ ೧.೬೭ %   ಜನ ವಿಕಲಚೇತನರಿದ್ದಾರೆ .
  • ಯೋಜನಾ ಆಯೋಗದ   ಹತ್ತನೆ  ಪಂಚವಾರ್ಷಿಕ  ದಾಖಲೆಯ ಪ್ರಕಾರ  ಒಟ್ಟು  ಮಕ್ಕಳಲ್ಲಿ  ಶೆಕಡಾ೦.೫-೧.೦ ಮಕ್ಕಳು                 ಬುದ್ಧಿಮಾಂದ್ಯರಿದ್ದಾರೆಯೋಜನಾ ಆಯೋಗದ   ಹತ್ತನೆ  ಪಂಚವಾರ್ಷಿಕ  ದಾಖಲೆಯ ಪ್ರಕಾರ  ಒಟ್ಟು  ಮಕ್ಕಳಲ್ಲಿ  ಶೆಕಡಾ೦.೫-೧.೦ ಮಕ್ಕಳು     ಬುದ್ಧಿಮಾಂದ್ಯರಿದ್ದಾರೆ
  • ಶೈಕ್ಷಣಿಕ ಪದ್ಧತಿಯಲ್ಲಿ ವಿಕಲಚೇತನರಿಗೆ ಇರುವ ಅಡೆತಡೆಗಳುಶೈಕ್ಷಣಿಕ ಪದ್ಧತಿಯಲ್ಲಿ ವಿಕಲಚೇತನರಿಗೆ ಇರುವ ಅಡೆತಡೆಗಳು
  • ದೈಹಿಕ, ಮಾನಸಿಕ ವಿಕಲಚೇತನರಿಗೆ ವಿಶೇಷ ಶಾಲೆಗಳ ಕೊರತೆ.ದೈಹಿಕ, ಮಾನಸಿಕ ವಿಕಲಚೇತನರಿಗೆ ವಿಶೇಷ ಶಾಲೆಗಳ ಕೊರತೆ.
  • ವಿಕಲಚೇತನರು ಸಾಧಾರಣವಾಗಿ  ಕಲಿಯುವುದರಲ್ಲಿ ನಿಧಾನ. ಶಾಲೆಗಳಲ್ಲಿ  ಅವರ ಅಗತ್ಯಗಳಿಗೆ ಅನುಗಣವಾಗಿ ಕಲಿಸುವ ವಿಶೇಷ ಶಿಕ್ಷಕರು ಇರುವುದಿಲ್ಲ..ವಿಕಲಚೇತನರು ಸಾಧಾರಣವಾಗಿ  ಕಲಿಯುವುದರಲ್ಲಿ ನಿಧಾನ. ಶಾಲೆಗಳಲ್ಲಿ  ಅವರ ಅಗತ್ಯಗಳಿಗೆ ಅನುಗಣವಾಗಿ ಕಲಿಸುವ ವಿಶೇಷ ಶಿಕ್ಷಕರು ಇರುವುದಿಲ್ಲ..
  • ಸಹಪಾಠಿಗಳ ಸಂವೇದನಾ ರಹಿತ ನಡವಳಿಕೆಯಿಂದ.ಸಾಧಾರಣವಾಗಿ ದೈಹಿಕ ಮತ್ತು ಮಾನಸಿಕ ವಿಕಲಚೇತನರು ಅಪಹಾಸ್ಯದ ವಸ್ತುವಾಗುವರು. ಅವರ ಕಲಿಕೆಯಲ್ಲಿನ ನಿಧಾನ ಮತ್ತು ಶಾರೀರಿಕ ವಿಕೃತಿ ಅದಕ್ಕೆ ಕಾರಣ.ಸಹಪಾಠಿಗಳ ಸಂವೇದನಾ ರಹಿತ ನಡವಳಿಕೆಯಿಂದ.ಸಾಧಾರಣವಾಗಿ ದೈಹಿಕ ಮತ್ತು ಮಾನಸಿಕ ವಿಕಲಚೇತನರು ಅಪಹಾಸ್ಯದ ವಸ್ತುವಾಗುವರು. ಅವರ ಕಲಿಕೆಯಲ್ಲಿನ ನಿಧಾನ ಮತ್ತು ಶಾರೀರಿಕ ವಿಕೃತಿ ಅದಕ್ಕೆ ಕಾರಣ.
  • ವಿಕಲಚೇತನರಿಗೆ ಅನುಕೂಲಕರವಾಗಿರುವ ಮೂಲಭೂತ ಸೌಕರ್ಯಗಳಾದ  ಇಳಿಜಾರು , ಗಾಲಿಕುರ್ಚಿ,  ಕಕ್ಕಸು ಇತ್ಯಾದಿಗಳ ಕೊರತೆವಿಕಲಚೇತನರಿಗೆ ಅನುಕೂಲಕರವಾಗಿರುವ ಮೂಲಭೂತ ಸೌಕರ್ಯಗಳಾದ  ಇಳಿಜಾರು , ಗಾಲಿಕುರ್ಚಿ,  ಕಕ್ಕಸು ಇತ್ಯಾದಿಗಳ ಕೊರತೆ
  • ಸೂಕ್ತವಾದ  ತರಬೇತಿಯಂದ ವಿಕಲಚೇತನನಾದ ಮಗುವು ಕೌಶಲ್ಯಗಳನ್ನು ಕಲಿತು  ಉತ್ತಮ ಜೀವನ ನೆಡೆಸುವ ಅವಕಾಶ ಪಡೆಯಬಹುದು.ಸೂಕ್ತವಾದ  ತರಬೇತಿಯಂದ ವಿಕಲಚೇತನನಾದ ಮಗುವು ಕೌಶಲ್ಯಗಳನ್ನು ಕಲಿತು  ಉತ್ತಮ ಜೀವನ ನೆಡೆಸುವ ಅವಕಾಶ ಪಡೆಯಬಹುದು.
  • ಅಲ್ಲದೆ ಬೇಗನೆ ಗುರುತಿಸಿ ಚಿಕಿತ್ಸೆಮಾಡಿದರೆ ಬಹುತೇಕ ವಿಕಲತೆಗಳು ಗುಣವಾಗಬಹುದು ಇಲ್ಲವೆ ನಿಯಂತ್ರಣವಾಗಬಹುದು.   ಮಾನಸಿಕ ವಿಕಲತೆಯನ್ನು ಸರಿಯಾದ ಸಮಯದಲ್ಲಿನ ಮಧ್ಯಪ್ರವೇಶದಿಂದ ಚಿಕಿತ್ಸೆ ಮಾಡಿ ಗುಣಪಡಿಸಬಹುದು.ಅಲ್ಲದೆ ಬೇಗನೆ ಗುರುತಿಸಿ ಚಿಕಿತ್ಸೆಮಾಡಿದರೆ ಬಹುತೇಕ ವಿಕಲತೆಗಳು ಗುಣವಾಗಬಹುದು ಇಲ್ಲವೆ ನಿಯಂತ್ರಣವಾಗಬಹುದು.   ಮಾನಸಿಕ ವಿಕಲತೆಯನ್ನು ಸರಿಯಾದ ಸಮಯದಲ್ಲಿನ ಮಧ್ಯಪ್ರವೇಶದಿಂದ ಚಿಕಿತ್ಸೆ ಮಾಡಿ ಗುಣಪಡಿಸಬಹುದು.
  • ಸಂಘರ್ಷ ಮತ್ತು ಮಾನವ ನಿರ್ಮಿತ  ದುರ್ಘಟನೆಗಳುಸಂಘರ್ಷ ಮತ್ತು ಮಾನವ ನಿರ್ಮಿತ  ದುರ್ಘಟನೆಗಳು
  • ಸಂಘರ್ಷಗಳಾದ ರಾಜಕೀಯ ತುಮುಲ, ಯುದ್ಧ   , ನೈಸರ್ಗಿಕ ವಿಕೋಪದ ಸಮಯದಲ್ಲಿ ಪ್ರತಿ ಶಾಲೆ ಮತ್ತು ಪ್ರತಿ ಶಿಕ್ಷಕನೂ   ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ವಿಶೇಷ ರಕ್ಷಣೆ ಬೇಕು.  ಅದು ಸಮುದಾಯವು ಅರ್ಥ ಮಾಡಿಕೊಂಡಾಗ ಮಾತ್ರ ಸಾಧ್ಯ.ಸಂಘರ್ಷಗಳಾದ ರಾಜಕೀಯ ತುಮುಲ, ಯುದ್ಧ   , ನೈಸರ್ಗಿಕ ವಿಕೋಪದ ಸಮಯದಲ್ಲಿ ಪ್ರತಿ ಶಾಲೆ ಮತ್ತು ಪ್ರತಿ ಶಿಕ್ಷಕನೂ   ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ವಿಶೇಷ ರಕ್ಷಣೆ ಬೇಕು.  ಅದು ಸಮುದಾಯವು ಅರ್ಥ ಮಾಡಿಕೊಂಡಾಗ ಮಾತ್ರ ಸಾಧ್ಯ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ