ನನ್ನ ಪುಟಗಳು

30 ಮಾರ್ಚ್ 2016

ಭೂಗೋಳ-ಸಾಮಾನ್ಯಜ್ಞಾನ

(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
Ans) ಆರ್ಯಭಟ
2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
Ans) ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ
3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
Ans) ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ
4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
Ans) ಕರ್ನಾಟಕ
5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
Ans) ಬಳ್ಳಾರಿ
6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
Ans) ಮಧ್ಯ ಪ್ರದೇಶ
7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
Ans) ಅಂಡಮಾನ್ ಮತ್ತು ನಿಕೋಬಾರ್
8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
Ans) ಹರಿಯಾಣ
9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
Ans) 1,91,791 ಚ.ಕಿ.ಮೀ.ಗಳು
10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
Ans) ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ
11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
Ans) " ಗಗನ ಚುಕ್ಕಿ " ಮತ್ತು " ಭರಚುಕ್ಕಿ"
12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
Ans) ಕನ್ನಂಬಾಡಿ ಅಣೆಕಟ್ಟು
14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
Ans) ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
15) ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
Ans) ಬೀದರ್
16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
Ans) ಚಳ್ಳಕೆರೆ (456 ಮಿ.ಮೀ)
17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
Ans) ಕರ್ನಾಟಕ
18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
Ans) ಕೊಡಗು ಜಿಲ್ಲೆಯ ನಾಗರಹೊಳೆ
19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
Ans) ಚಾಮರಾಜನಗರ
20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
Ans) ತಮಿಳುನಾಡು
(ಸಂಗ್ರಹ)

ಭಾರತದ ಭೂಗೋಳ
1. ಭಾರತವು ಏಷ್ಯಾ ಖಂಡದಲ್ಲಿದೆ.
2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.
3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.
4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.
5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.
6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.
7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.
8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.
9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)
10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.
11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.
12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.
13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.
14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.
15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.
16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.
17. ಭಾರತದಲ್ಲಿ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿವೆ.
18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.
19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.
20. ಹೊಸದಾಗಿ ರಚನೆಯಾದ ಚತ್ತೀಸಗರ್ದ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______
21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ  ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ  ಗಡಿ ಪ್ರದೇಶ.
22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ  ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ  ಪ್ರದೇಶ ಎಂದು ಕರೆಯಲಾಗಿದೆ.
23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.
25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು  ಸಮುದ್ರ ಎನ್ನುವರ.
26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.
27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ  (ಲೈನ್ ಆಪ್ ಕಂಟ್ರೋಲ್) ಎನ್ನುವರು.
28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.
29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.
30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.
31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.
32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.
33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ
 ಚಿಕ್ಕ ಜಿಲ್ಲೆ-ಪಾಂಡಿಚೇರಿ
34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ. 

12 ಕಾಮೆಂಟ್‌ಗಳು:

  1. ) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು? Tamilunadu

    ಪ್ರತ್ಯುತ್ತರಅಳಿಸಿ
  2. ಆಂಧ್ರಪ್ರದೇಶದ ರಾಜ್ಯಧಾನಿ ಅಮರಾವತಿ ತೆಲಂಗಾಣದ ರಾಜ್ಯಧಾನಿ ಹೈದರಾಬಾದ್

    ಪ್ರತ್ಯುತ್ತರಅಳಿಸಿ
  3. ಭಾರತದಲ್ಲಿ 8 ಕೇಂದ್ರಾಡಳಿತ ಪ್ರದೇಶಗಳಿವೆ.

    ಪ್ರತ್ಯುತ್ತರಅಳಿಸಿ