ತತ್ಸಮ-ತದ್ಭವ
[ಕೃಪೆ-ಕಣಜ.ಕಾಂ]
(ಸೂಚನೆ:-
ನುಡಿ ಅಥವಾ ಬರಹ ಆನ್ ಮಾಡಿಕೊಂಡು ಯೂನಿಕೋಡ್ ಆಯ್ಕೆಮಾಡಿಕೊಳ್ಳಿ. ನಂತರ ನಿಮಗೆ ಬೇಕಾದ
ಪದ ಹುಡುಕಲು ನಿಮ್ಮ ಕೀ-ಬೋರ್ಡ್ ನಲ್ಲಿ Ctrl ಮತ್ತು F ಕೀಗಳನ್ನು ಪ್ರೆಸ್ ಮಾಡಿ.
ಮತ್ತು ಕನ್ನಡದಲ್ಲಿ ಟೈಪ್ ಮಾಡಿ. Enter ಒತ್ತಿರಿ)
ಸಂಸ್ಕೃತದಿಂದ ತಮ್ಮ ಮೂಲರೂಪವನ್ನು ವ್ಯತ್ಯಾಸಮಾಡಿಕೊಂಡು ಕನ್ನಡಕ್ಕೆ ಬಂದ ಶಬ್ದಗಳು
ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಹೊಂದಿದವು, ಹೆಚ್ಚು ಬದಲಾವಣೆ ಹೊಂದಿದವು ಎಂದು ಎರಡು ಭಾಗ ಮಾಡಬಹುದು.
(i) ಅಲ್ಪಸ್ವಲ್ಪ ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸೀತೆ, ಲಕ್ಷ್ಮಿ, ಮಾಲೆ, ದೇವತೆ, ರಾಜ, ಮಹ, ಯಶ, ಬೃಹತ್ತು, ಮಹತ್ತು, ವಿಪತ್ತು, ವಿಯತ್ತು, ಸರಿತ್ತು-ಇತ್ಯಾದಿಗಳು.
(ii) ಹೆಚ್ಚು ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸಕ್ಕರೆ, ಸಾವಿರ, ಬಸವ, ಸಂತೆ, ಪಟಕ, ಸರ, ತಾಣ, ದೀವಿಗೆ, ಬತ್ತಿ, ಬಸದಿ, ನಿಚ್ಚ, ಕಜ್ಜ, ಅಂಚೆ, ಕಂತೆ, ಅಜ್ಜ, ಕವಳ-ಇತ್ಯಾದಿಗಳು.
ಸಂಸ್ಕೃತದಿಂದ ಅಸಂಖ್ಯಾತ ಪದಗಳು ಕನ್ನಡಕ್ಕೆ ತದ್ಭವ ರೂಪವಾಗಿ ಬಂದಿರುವುದರಿಂದ, ಅವುಗಳು ಕನ್ನಡಕ್ಕೆ ಬಂದ ಕ್ರಮವನ್ನು ವಿಸ್ತಾರವಾಗಿಯೇ ತಿಳಿಯಬೇಕಾದುದು ಅವಶ್ಯವಾದುದು. ಆ ಬಗೆಗೆ ಈಗ ವಿಚಾರ ಮಾಡೋಣ.
[1] ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದ ಶಬ್ದಗಳನ್ನು ತಿಳಿಯಲು ಸ್ಥೂಲವಾಗಿ ಕೆಳಗಣ ವಿಷಯಗಳನ್ನು ನೆನಪಿನಲ್ಲಿಡಬೇಕು:-
(i) ಋ, ಶ, ಷ, ಕ್ಷ, ಜ್ಞ, ತ್ರ ವಿಸರ್ಗ, ಸ್ತ್ರೀ, ಸ್ತ್ರ ಅಕ್ಷರಗಳಿರುವ ಶಬ್ದಗಳು;
(ii)
ಮಹಾಭಾರತ, ರಾಮಾಯಣಗಳೇ ಮೊದಲಾದ ಪುರಾಣ ಗ್ರಂಥಗಳಲ್ಲಿ ಬರುವ ವ್ಯಕ್ತಿ, ಸ್ಥಳ,
ಪರ್ವತ, ನದಿ, ಋಷಿಗಳೇ ಮೊದಲಾದವರ ಹೆಸರುಗಳು ಮತ್ತು ಋತು, ಮಾಸ, ದಿವಸ, ನಕ್ಷತ್ರ,
ಯೋಗ, ಕರಣಗಳು;
(iii) ವಿ, ಅ,
ಅನ್, ಸು, ಸ, ನಿಸ್, ನಿರ್, ನಿಃ, ದುಃ, ದುಸ್, ದುರ್ ಇತ್ಯಾದಿ ಉಪಸರ್ಗ ಪೂರ್ವಕ
ಶಬ್ದಗಳು, ಉದಾ:-ವಿಚಲಿತ, ಅಚಲಿತ, ದುರಾಚಾರ, ಅನಗತ್ಯ, ವಿಶೇಷ … … … ಇತ್ಯಾದಿ;
(iv) ಇವಲ್ಲದೆ ಇನ್ನೂ ಅನೇಕ ಶಬ್ದಗಳಿವೆ. ಇಲ್ಲಿ ಹೇಳಿರುವುದು ಕೇವಲ ಸ್ಥೂಲಮಾತ್ರ.
[2] ಅನೇಕ ಶಬ್ದಗಳು ತದ್ಭವ ರೂಪ ಹೊಂದಿ ನೇರವಾಗಿ ಸಂಸ್ಕೃತದಿಂದಲೇ ಬಂದಿಲ್ಲ. ಪ್ರಾಕೃತ ಎಂಬ ಭಾಷೆಯಿಂದಲೂ ಬಂದಿವೆ.
ಉದಾಹರಣೆಗೆ:-
ರಾಮ, ಭೀಮ, ಕಾಮ, ವಸಂತ, ಸೋಮ, ಚಂದ್ರ, ಸೂರ್ಯ, ಗ್ರಹ, ಕರ್ತೃ, ಶತ್ರು, ಸ್ತ್ರೀ,
ಶ್ರೀ, ವನ, ಮಧು, ಕಮಲ, ಭುವನ, ಭವನ, ಶಯನ, ಶ್ರುತಿ, ಸ್ಮೃತಿ, ಶುದ್ಧಿ, ಸಿದ್ಧಿ,
ಕವಿ, ಕಾವ್ಯ, ರವಿ, ಗಿರಿ, ಲಿಪಿ, ಪಶು, ಶಿಶು, ರಿಪು, ಭಾನು, ಯತಿ, ಮತಿ, ಪತಿ,
ಗತಿ-ಇತ್ಯಾದಿ.
(೨೮) ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲಿ, ಪೂರ್ಣ ವಿಕಾರವನ್ನಾಗಲಿ, ಹೊಂದಿ ಬಂದಿರುವ ಶಬ್ದಗಳನ್ನು ತದ್ಭವಗಳೆಂದು ಕರೆಯುವರು (ತತ್ ಎಂದರೆ ಅದರಿಂದ ಎಂದರೆ ಸಂಸ್ಕೃತದಿಂದ ಭವ ಎಂದರೆ ಹುಟ್ಟಿದ ಅಥವಾ ನಿಷ್ಪನ್ನವಾದ ಎಂದು ಅರ್ಥ).(ಅಲ್ಪಸ್ವಲ್ಪ ವಿಕಾರ ಹೊಂದಿದ ಶಬ್ದಗಳನ್ನು ಸಮಸಂಸ್ಕೃತ ಎಂದು ಕರೆಯುವುದೂ ವಾಡಿಕೆ)
ಉದಾಹರಣೆಗೆ:-
ಮಾಲೆ, ಸೀತೆ, ಉಮೆ, ವೀಣೆ, ಅಜ್ಜ, ಬಂಜೆ, ಸಿರಿ, ಬಾವಿ, ದನಿ, ಜವನಿಕೆ, ನಿದ್ದೆ,
ಗಂಟೆ, ಜೋಗಿ, ರಾಯ, ಕೀಲಾರ, ಪಟಕ, ಸಂತೆ, ಪಕ್ಕ, ಪಕ್ಕಿ, ಚಿತ್ತಾರ, ಬಟ್ಟ, ಆಸೆ,
ಕತ್ತರಿ-ಇತ್ಯಾದಿ.
(i) ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳ ಪಟ್ಟಿ:-ಸಂಸ್ಕೃತ ರೂಪ | ವ್ಯತ್ಯಾಸ ರೂಪ | ಸಂಸ್ಕೃತ ರೂಪ | ವ್ಯತ್ಯಾಸ ರೂಪ |
ದಯಾ | ದಯೆ, ದಯ | ಗ್ರೀವಾ | ಗ್ರೀವೆ, ಗ್ರೀವ |
ಕರುಣಾ | ಕರುಣೆ, ಕರುಣ | ಶಮಾ | ಶಮೆ |
ನಾರೀ | ನಾರಿ | ವಧ | ವಧೆ |
ನದೀ | ನದಿ | ಅಭಿಲಾಷ | ಅಭಿಲಾಷೆ |
ವಧೂ | ವಧು | ಪ್ರಶ್ನ | ಪ್ರಶ್ನೆ |
ಸರಯೂ | ಸರಯು | ಉದಾಹರಣೆ | ಉದಾಹರಣೆ |
ಸ್ವಯಂಭೂ | ಸ್ವಯಂಭು | ಸರಸ್ವತೀ | ಸರಸ್ವತಿ |
ಮಾಲಾ | ಮಾಲೆ | ಲಕ್ಷ್ಮೀ | ಲಕ್ಷ್ಮಿ |
ಸೀತಾ | ಸೀತೆ | ಗೌರೀ | ಗೌರಿ |
ಬಾಲಾ | ಬಾಲೆ | ಭಾಮಿನೀ | ಭಾಮಿನಿ |
ಲೀಲಾ | ಲೀಲೆ | ಕಾಮಿನೀ | ಕಾಮಿನಿ |
ಗಂಗಾ | ಗಂಗೆ | ಕುಮಾರೀ | ಕುಮಾರಿ |
ನಿಂದಾ | ನಿಂದೆ | ಗೋದಾವರೀ | ಗೋದಾವರಿ |
ಶಾಲಾ | ಶಾಲೆ | ಕಾವೇರೀ | ಕಾವೇರಿ |
ರಮಾ | ರಮೆ | ಶಾಸ್ತ್ರೀ | ಶಾಸ್ತ್ರಿ |
ಉಮಾ | ಉಮೆ | ಭಿಕ್ಷಾ | ಭಿಕ್ಷಾ, ಭಿಕ್ಷೆ |
ದಮಾ | ದಮೆ | ಯಾತ್ರಾ | ಯಾತ್ರೆ |
ಕ್ಷಮಾ | ಕ್ಷಮೆ | ಜ್ವಾಲಾ | ಜ್ವಾಲೆ |
ಆಶಾ | ಆಶೆ | ರೇಖಾ | ರೇಖೆ |
ಸಂಸ್ಥಾ | ಸಂಸ್ಥೆ | ಮುದ್ರಾ | ಮುದ್ರೆ |
ನಿದ್ರಾ | ನಿದ್ರೆ | ದ್ರಾಕ್ಷಾ | ದ್ರಾಕ್ಷೆ |
ಯವನಿಕಾ | ಯವನಿಕೆ | ಮಾತ್ರಾ | ಮಾತ್ರೆ |
ದ್ರೌಪದೀ | ದ್ರೌಪದಿ | ಶಾಖಾ | ಶಾಖೆ |
ವೇಳಾ | ವೇಳೆ | ವಾಲುಕಾ | ವಾಲುಕ |
ಭಾಷಾ | ಭಾಷೆ | ಗಾಂಧಾರೀ | ಗಾಂಧಾರಿ |
-ಇತ್ಯಾದಿಗಳು |
(ii) ಶಬ್ದದ ಕೊನೆಯಲ್ಲಿರುವ ಋಕಾರವು ಅ ಅರ ಎಂದು ವ್ಯತ್ಯಾಸಗೊಳ್ಳುವುವು. ಕೆಲವು ಎಕಾರಾಂತಗಳೂ ಆಗುವುವು. ಅನಂತರ ಕನ್ನಡ ಪ್ರಕೃತಿಗಳಾಗುವುವು.
ಸಂಸ್ಕೃತ ರೂಪ | ವ್ಯತ್ಯಾಸ ರೂಪ | ಸಂಸ್ಕೃತ ರೂಪ | ವ್ಯತ್ಯಾಸ ರೂಪ |
ಕರ್ತೃ | ಕರ್ತ, ಕರ್ತಾರ | ನೇತೃ | ನೇತಾರ |
ದಾತೃ | ದಾತ, ದಾತಾರ | ಸವಿತೃ | ಸವಿತಾರ |
ಪಿತೃ | ಪಿತ, ಪಿತರ | ಭರ್ತೃ | ಭರ್ತಾರ |
ಮಾತೃ | ಮಾತೆ | ಹೋತೃ | ಹೋತಾರ |
ಸಂಸ್ಕೃತ ರೂಪ | ವ್ಯತ್ಯಾಸ ರೂಪ | ಸಂಸ್ಕೃತ ರೂಪ | ವ್ಯತ್ಯಾಸ ರೂಪ |
ರಾಜನ್ | ರಾಜ | ಬ್ರಹ್ಮನ್ | ಬ್ರಹ್ಮ |
ಕರಿನ್ | ಕರಿ | ಪುರೂರವನ್ | ಪುರೂರವ |
ಆತ್ಮನ್ | ಆತ್ಮ | ಯುವನ್ | ಯುವ |
ಧಾಮನ್ | ಧಾಮ | ಮೂರ್ಧನ್ | ಮೂರ್ಧ |
ಸಂಸ್ಕೃತ ರೂಪ ಬದಲಾವಣೆಯಾದ ರೂಪಗಳು
ಧನಸ್ | ಧನು | ಧನುಸ್ಸು | (ಸ್ + ಉ) |
ಶಿರಸ್ | ಶಿರ | ಶಿರಸ್ಸು | (ಸ್ + ಉ) |
ಯಶಸ್ | ಯಶ | ಯಶಸ್ಸು | (ಸ್ + ಉ) |
ಮನಸ್ | ಮನ | ಮನಸ್ಸು | (ಸ್ + ಉ) |
ತೇಜಸ್ | ತೇಜ | ತೇಜಸ್ಸು | (ಸ್ + ಉ) |
ವಯಸ್ | ವಯ | ವಯಸ್ಸು | (ಸ್ + ಉ) |
ಪಯಸ್ | ಪಯ | ಪಯಸ್ಸು | (ಸ್ + ಉ) |
ಶ್ರೇಯಸ್ | ಶ್ರೇಯ | ಶ್ರೇಯಸ್ಸು | (ಸ್ + ಉ) |
ಸಂಸ್ಕೃತದಲ್ಲಿ ಪ್ರಥಮಾ ಏಕವಚನದ ರೂಪ | ವಿಕಾರಗೊಂಡ ರೂಪ |
ಪ್ರತಿಪತ್ | ಪ್ರತಿಪತ್ತು |
ಕ್ಷುತ್ | ಕ್ಷುತ್ತು |
ಸಂಪತ್ | ಸಂಪತ್ತು |
ವಿಯತ್ | ವಿಯತ್ತು |
ವಿಪತ್ | ವಿಪತ್ತು |
ದಿಕ್ | ದಿಕ್ಕು |
ತ್ವಕ್ಕು | ತ್ವಕ್ |
ವಾಕ್ | ವಾಕ್ಕು |
ಸಮಿತ್ | ಸಮಿತ್ತು |
ಪ್ರಥಮಾ ವಿಭಕ್ತಿ ಬಹುವಚನ ರೂಪ | ವಿಕಾರ ರೂಪ |
ವಿದ್ವಾಂಸಃ - | ವಿದ್ವಾಂಸ |
ಹನುಮಂತಃ - | ಹನುಮಂತ |
ಶ್ವಾನಃ - | ಶ್ವಾನ |
ಭಗವಂತಃ - | ಭಗವಂತ |
ಶ್ರೀಮಂತಃ - | ಶ್ರೀಮಂತ |
(vii) ಸಂಸ್ಕೃತದ ಕೆಲವು ವ್ಯಂಜನಾಂತ ಶಬ್ದಗಳು ಆ ವ್ಯಂಜನದ ಮುಂದೆ, ಒಂದು ಅ ಕಾರದೊಡನೆ ಅಂದರೆ ಅಕಾರಾಂತಗಳಾಗಿ ಕನ್ನಡದ ಪ್ರಕೃತಿಗಳಾಗುತ್ತವೆ.
ವ್ಯಂಜನಾಂತ ಸಂಸ್ಕೃತ ಶಬ್ದ | ವಿಕಾರಗೊಂಡ ರೂಪ |
ದಿವ್ | ದಿವ |
ಚತುರ್ | ಚತುರ |
ಬುಧ್ | ಬುಧ |
ಕುಕುಭ್ | ಕುಕುಭ |
ವೇದವಿದ್ | ವೇದವಿದ |
ಸಂಪದ್ | ಸಂಪದ |
ಮರುತ್ | ಮರುತ |
ಗುಣಭಾಜ್ | ಗುಣಭಾಜ |
ಈಗ ಶಬ್ದದ ಮೊದಲು, ಮಧ್ಯದಲ್ಲಿಯೂ ಹೆಚ್ಚಾಗಿ ವಿಕಾರ ಹೊಂದಿದ ಅನೇಕ ಶಬ್ದಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
(viii) ಸಂಸ್ಕೃತದಲ್ಲಿ ಶ, ಷ ಗಳನ್ನು ಹೊಂದಿರುವ ಶಬ್ದಗಳು ಕನ್ನಡದಲ್ಲಿ ಸಕಾರವಾಗಿರುವ, ಮತ್ತು ಯಕಾರಕ್ಕೆ ಜಕಾರ ಬಂದಿರುವ ತದ್ಭವ ಶಬ್ದಗಳು (ಕನ್ನಡ ಪ್ರಕೃತಿಗಳು) ಆಗುತ್ತವೆ.
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ |
ಶಶಿ | ಸಸಿ | ಔಷಧ | ಔಸದ | ಯೋಧ | ಜೋದ |
ಶಂಕಾ | ಸಂಕೆ | ಶೇಷಾ | ಸೇಸೆ | ಯುದ್ಧ | ಜುದ್ದ |
ಶಾಂತಿ | ಸಾಂತಿ | ಮಷಿ | ಮಸಿ | ಯವಾ | ಜವೆ |
ಆಕಾಶ | (i) ಆಗಸ (ii) ಆಕಾಸ | ಪಾಷಾಣ | ಪಾಸಾಣ | ವಿದ್ಯಾ | ಬಿಜ್ಜೆ |
ಯಶ | ಜಸ | ವಂಧ್ಯಾ | ಬಂಜೆ | ||
ಶಿರ | ಸಿರ | ಯವನಿಕಾ | ಜವನಿಕೆ | ಧ್ಯಾನ | ಜಾನ |
ಕಲಶ | ಕಳಸ | ಯಮ | ಜವ | ಯತಿ | ಜತಿ |
ಶೂಲ | ಸೂಲ | ಕಾರ್ಯ | ಕಜ್ಜ | ಯಂತ್ರ | ಜಂತ್ರ |
ಶುಚಿ | ಸುಚಿ | ಯೌವನ | ಜವ್ವನ | ಯುಗ | ಜುಗ |
ಅಂಕುಶ | ಅಂಕುಸ | ಯಾತ್ರಾ | ಜಾತ್ರೆ | ಯುಗ್ಮ | ಜುಗುಮ |
ಶುಂಠಿ | ಸುಂಟಿ | ಯೋಗಿನ್ | ಜೋಗಿ | ವಿದ್ಯಾಧರ | ಬಿಜ್ಜೋದರ |
ಪಶು | ಪಸು | ರಾಶಿ | ರಾಸಿ | ಉದ್ಯೋಗ | ಉಜ್ಜುಗ |
ಹರ್ಷ | ಹರುಸ | ಶಾಣ | ಸಾಣೆ | ಸಂಧ್ಯಾ | ಸಂಜೆ |
ವರ್ಷ | ವರುಸ | ಪರಶು | ಪರಸು | ದ್ಯೂತ | ಜೂಜು |
ಭಾಷಾ | ಬಾಸೆ | ದಿಶಾ | ದೆಸೆ | ||
ವೇಷ | ವೇಸ | ದಶಾ | ದಸೆ |
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ |
ಡಮರುಕ | ಡಮರುಗ | ಸೂಚಿ | ಸೂಜಿ | ಜಾತಿ | ಜಾದಿ |
ಆಕಾಶ | ಆಗಸ | ವಚಾ | ಬಜೆ | ವಸತಿ | ಬಸದಿ |
ದೀಪಿಕಾ | ದೀವಿಗೆ | ಕಟಕ | ಕಡಗ | ಚತುರ | ಚದುರ |
ಮಲ್ಲಿಕಾ | ಮಲ್ಲಿಗೆ | ಅಟವಿ | ಅಡವಿ | ಭೂತಿ | ಬೂದಿ |
ಪೈತೃಕ | ಹೈತಿಗೆ | ತಟ | ತಡ | ದೂತಿ | ದೂದಿ |
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ |
ಛಂದ | ಚಂದ | ಘಟಕ | ಗಡಗೆ | ಧನ | ದನ |
ಛಾಂದಸ | ಚಾಂದಸ | ಘೋಷಣಾ | ಗೋಸಣೆ | ಧೂಪ | ದೂಪ |
ಛವಿ | ಚವಿ | ಗೋಷ್ಠಿ | ಗೊಟ್ಟಿ | ನಿಧಾನ | ನಿದಾನ |
ಕಂಠಿಕಾ | ಕಂಟಿಕೆ | ಘೂಕ | ಗೂಗೆ | ಧೂಸರ | ದೂಸರ |
ಶುಂಠಿ | ಸುಂಟಿ | ಅರ್ಘ | ಅಗ್ಗ | ಧೂಳಿ | ದೂಳಿ |
ಫಾಲ | ಪಾಲ | ಝಟತಿ | ಜಡಿತಿ | ವಿಧಿ | ಬಿದಿ |
ಫಣಿ | ಪಣಿ | ಢಕ್ಕೆ | ಡಕ್ಕೆ | ಕುಸುಂಭ | ಕುಸುಬೆ |
ಘಂಟಾ | ಗಂಟೆ | ರೂಢಿ | ರೂಡಿ |
ಉದಾಹರಣೆಗಳು:
ಖಕಾರ ಗಕಾರವಾಗುವುದಕ್ಕೆ | ಛಕಾರವು ಸಕಾರವಾಗಿರುವುದಕ್ಕೆ | ಠಕಾರ ಡಕಾರವಾದುದಕ್ಕೆ | |||
ಮುಖ | ಮೊಗ | ಛುರಿಕಾ | ಸುರಿಗೆ | ಕುಠಾರ | ಕೊಡಲಿ |
ವೈಶಾಖ | ಬೇಸಗೆ | ಛತ್ರಿಕಾ | ಸತ್ತಿಗೆ | ಮಠ | ಮಡ |
ಥಕಾರವು ದಕಾರವಾದುದಕ್ಕೆ | ಥಕಾರವು ಟಕಾರವಾದುದಕ್ಕೆ | ಥಕಾರವು ಹಕಾರವಾದುದಕ್ಕೆ | |||
ವೀಥಿ | ಬೀದಿ | ಗ್ರಂಥಿ | ಗಂಟು | ಗಾಥೆ | ಗಾಹೆ |
ಛಕಾರದ ಒತ್ತಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿದುದಕ್ಕೆ | |
ಇಚ್ಛಾ | ಇಚ್ಚೆ |
(xii) ಇನ್ನೂ ಅನೇಕ ವಿಕಾರ ರೂಪಗಳನ್ನು ಈ ಕೆಳಗೆ ಗಮನಿಸಿರಿ:-
ಸಂಸ್ಕೃತ ರೂಪ | ವಿಕಾರ ರೂಪ | ಸಂಸ್ಕೃತ ರೂಪ | ವಿಕಾರ ರೂಪ | |||
ಕಪಿಲೆ | - | ಕವಿಲೆ | ಕುರುಂಟ | - | ಗೋರಟೆ | |
ತ್ರಿಪದಿ | - | ತಿವದಿ | ಮಾನುಷ್ಯ | - | ಮಾನಸ | |
ಪಿಶುನ | - | ಹಿಸುಣ | ಮರೀಚ | - | ಮೆಣಸು | |
ಪಿಪ್ಪಲಿ | - | ಹಿಪ್ಪಲಿ | ಅನ್ಯಾಯ | - | ಅನ್ನೆಯ | |
ಪಾದುಕಾ | - | ಹಾವುಗೆ | ಸಾಹಸ | - | ಸಾಸ | |
ಪರವಶ | - | ಹರವಸ | ಗಹನ | - | ಗಾನ | |
ಕಬಳ | - | ಕವಳ | ಕುಕ್ಕುಟ | - | ಕೋಳಿ | |
ಸಿಬಿಕಾ | - | ಸಿವಿಗೆ | ನಿಷ್ಠಾ | - | ನಿಟ್ಟೆ | |
ವಶಾ | - | ಬಸೆ | ಅಮೃತ | - | ಅಮರ್ದು | |
ವಂಚನಾ | - | ಬಂಚನೆ | ಅಂಗುಷ್ಠ | - | ಉಂಗುಟ | |
ವಸಂತ | - | ಬಸಂತ | ಪಿಷ್ಟ | - | ಹಿಟ್ಟು | |
ವೀಣಾ | - | ಬೀಣೆ | ಇಷ್ಟಕಾ | - | ಇಟ್ಟಿಗೆ | |
ವೀರ | - | ಬೀರ | ಕೂಷ್ಮಾಂಡ | - | ಕುಂಬಳ | |
ವಾಲ | - | ಬಾಲ | ದಾಡಿಮ | - | ದಾಳಿಂಬೆ | |
ಶ್ರವಣ | - | ಸವಣ | ತೃತೀಯಾ | - | ತದಿಗೆ | |
ಪ್ರಸರ | - | ಪಸರ | ಚತುರ್ಥೀ | - | ಚೌತಿ | |
ಪತಿವ್ರತೆ | - | ಹದಿಬದೆ | ವರ್ಧಮಾನ | - | ಬದ್ದವಣ (ಔಡಲ) | |
ವೇತ್ರ | - | ಬೆತ್ತ | ||||
ಸೂತ್ರಿಕಾ | - | ಸುತ್ತಿಗೆ | ವಿನಾಯಕ | - | ಬೆನಕ | |
ವೃಷಭ | - | ಬಸವ | ಸುರಪರ್ಣೀ | - | ಸುರಹೊನ್ನೆ | |
ವ್ಯಾಘ್ರ | - | ಬಗ್ಗ | ಮರುವಕ | - | ಮರುಗ | |
ರಕ್ಷಾ | - | ರಕ್ಕೆ | ಸರ್ವ | - | ಸಬ್ಬ | |
ಪಕ್ಷ | - | ಪಕ್ಕ | ಶ್ರೀಖಂಡ | - | ಸಿರಿಕಂಡ | |
ಲಕ್ಷ | - | ಲಕ್ಕ | ವೀರಶ್ರೀ | - | ಬೀರಸಿರಿ | |
ಅಕ್ಷರ | - | ಅಕ್ಕರ | ಅಂದೋಲಿಕಾ | - | ಅಂದಣ | |
ಭಿಕ್ಷಾ | - | ಬಿಕ್ಕೆ | ಬಾಹುವಲಯ | - | ಬಾಹುಬಳೆ | |
ಕ್ಷಪಣ | - | ಸವಣ | ತ್ರಿಗುಣ | - | ತಿಗುಣ | |
ಕ್ಷಾರ | - | ಕಾರ | ತ್ರಿವಳಿ | - | ತಿವಳಿ | |
ಯಮಳ | - | ಜವಳ | ವಲ್ಲಿ | - | ಬಳ್ಳಿ | |
ಚರ್ಮ | - | ಸಮ್ಮ | ವಸತಿ | - | ಬಸದಿ | |
ಚರ್ಮಕಾರ | - | ಸಮ್ಮಕಾರ | ಶೀರ್ಷಕ | - | ಸೀಸಕ | |
ಶಿಲ್ಪಿಗ | - | ಚಿಪ್ಪಿಗ | ವರ್ತಿ | - | ಬತ್ತಿ | |
ಶಷ್ಕುಲಿ | - | ಚಕ್ಕುಲಿ | ಕರ್ತರಿ | - | ಕತ್ತರಿ | |
ಹಂಸ | - | ಅಂಚೆ | ಶರ್ಕರಾ | - | ಸಕ್ಕರೆ | |
ತುಳಸಿ | - | ತೊಳಚಿ | ಕರ್ಕಶ | - | ಕಕ್ಕಸ | |
ಕಾಂಸ್ಯ | - | ಕಂಚು | ರಾಕ್ಷಸ | - | ರಕ್ಕಸ | |
ನಿತ್ಯ | - | ನಿಚ್ಚ | ಅರ್ಕ | - | ಎಕ್ಕ | |
ವಿಸ್ತಾರ | - | ಬಿತ್ತರ | ದ್ರೋಣಿ | - | ದೋಣಿ | |
ವ್ಯವಸಾಯ | - | ಬೇಸಾಯ | ಭ್ರಮರ | - | ಬವರ | |
ಶಯ್ಯಾ | - | ಸಜ್ಜೆ | ಪ್ರಭಾ | - | ಹಬೆ | |
ಜಟಾ | - | ಜಡೆ | ಪ್ರಣಿತೆ | - | ಹಣತೆ | |
ತೈಲಿಕ | - | ತೆಲ್ಲಿಗ | ಪುಸ್ತಕ | - | ಹೊತ್ತಗೆ | |
ಇಳಾ | - | ಎಳೆ | ಕುಸ್ತುಂಬರ | - | ಕೊತ್ತುಂಬರಿ | |
ಸ್ಪರ್ಶ | - | ಪರುಸ | ಬ್ರಹ್ಮ | - | ಬೊಮ್ಮ | |
ಸ್ಪಟಿಕ | - | ಪಳಿಗೆ | ರತ್ನ | - | ರನ್ನ | |
ಶ್ಮಶಾನ | - | ಮಸಣ | ಪ್ರಜ್ವಲ | - | ಪಜ್ಜಳ | |
ತಾಂಬೂಲ | - | ತಂಬುಲ | ಬಿಲ್ವಪತ್ರ | - | ಬೆಲ್ಲವತ್ತ | |
ಆರಾಮ | - | ಅರವೆ | ಕನ್ಯಕಾ | - | ಕನ್ನಿಕೆ | |
ಬಂಧೂಕ | - | ಬಂದುಗೆ | ಮೃತ್ಯು | - | ಮಿಳ್ತು | |
ಗೋಧೂಮ | - | ಗೋದುವೆ | ಕಾವ್ಯ | - | ಕಬ್ಬ | |
ಬರ್ಭೂರ | - | ಬೊಬ್ಬುಳಿ | ದಂಷ್ಟ್ರ | - | ದಾಡೆ | |
ಪ್ರಯಾಣ | - | ಪಯಣ | ಕಹಳಾ | - | ಕಾಳೆ | |
ದ್ವಿತೀಯಾ | - | ಬಿದಿಗೆ | ಋಷಿ | - | ರಿಸಿ | |
ಅಶೋಕ | - | ಅಸುಗೆ | ಮೃಗ | - | ಮಿಗ | |
ಉದ್ಯೋಗ | - | ಉಜ್ಜುಗ | ಭೃಂಗಾರ | - | ಬಿಂಗಾರ | |
ಸಂಜ್ಞಾ | - | ಸನ್ನೆ | ಪ್ರಗ್ರಹ | - | ಹಗ್ಗ | |
ಯಜ್ಞಾ | - | ಜನ್ನ | ಆಶ್ಚರ್ಯ | - | ಅಚ್ಚರಿ | |
ಕ್ರೌಂಚ | - | ಕೊಂಚೆ | ಸ್ವರ್ಗ | - | ಸಗ್ಗ | |
ಸುಧಾ | - | ಸೊದೆ | ಜ್ಯೋತಿಷ | - | ಜೋಯಿಸ | |
ಭುಜಂಗ | - | ಬೊಜಂಗ | ಅಮಾವಾಸ್ಯಾ | - | ಅಮಾಸೆ | |
ಕೌಪೀನ | - | ಕೋವಣ | ಧ್ವನಿ | - | ದನಿ | |
ಮಯೂರ | - | ಮೋರ | ಜ್ವರ | - | ಜರ | |
ಗೂರ್ಜರ | - | ಗುಜ್ಜರ | ಸರಸ್ವತಿ | - | ಸರಸತಿ | |
ಆರ್ಯ | - | ಅಜ್ಜ | ವರ್ಧಕಿ | - | ಬಡಗಿ | |
ವ್ಯವಹಾರ | - | ಬೇಹಾರ | ಕಾಷ್ಠ | - | ಕಡ್ಡಿ | |
ನಿಯಮ | - | ನೇಮ | ಚತುರ್ದಂತ | - | ಚೌದಂತ | |
ಪತ್ತನ | - | ಪಟ್ಟಣ | ದೃಷ್ಟಿ | - | ದಿಟ್ಟ | |
ಅತಸೀ | - | ಅಗಸೆ | ದಿಶಾಬಲಿ | - | ದೆಸೆಬಲಿ | |
ತ್ವರಿತ | - | ತುರಿಹ | ಏಕಶರ | - | ಎಕ್ಕಸರ | |
ಆಜ್ಞೆ | - | ಆಣೆ | ಚತುಷ್ಕ | - | ಚೌಕ | |
ಶಾಣ | - | ಸಾಣೆ | ಚತುರ್ವೇದಿ | - | ಚೌವೇದಿ | |
ಜೀರಿಕಾ | - | ಜೀರಿಗೆ | ಸಹದೇವ | - | ಸಾದೇವ | |
ವಿಜ್ಞಾನ | - | ಬಿನ್ನಣ | ಸಹವಾಸಿ | - | ಸಾವಾಸಿ | |
ಕಲಮಾ | - | ಕಳವೆ | ಮಹಾಪಾತಕ | - | ಮಾಪಾತಕ | |
ಕಂಬಲ | - | ಕಂಬಳಿ | ಪಂಜರಪಕ್ಷಿ | - | ಹಂಜರವಕ್ಕಿ | |
ಅರ್ಗಲ | - | ಅಗುಳಿ | ದಿಶಾಬಲಿ | - | ದೆಸೆವಲಿ | |
ಕುದ್ದಾಲ | - | ಗುದ್ದಲಿ | ರತ್ನಮಣಿ | - | ರನ್ನವಣಿ | |
ದ್ಯೂತ | - | ಜೂಜು | ಅಂತಃಪುರ | - | ಅಂತಪುರ | |
ಗ್ರಂಥಿ | - | ಗಂಟು | ಅಚ್ಚಮಲ್ಲಿಕಾ | - | ಅಚ್ಚಮಲ್ಲಿಗೆ | |
ಕುಕ್ಷಿ | - | ಕುಕ್ಕೆ | ಅಕ್ಷರಮಾಲಾ | - | ಅಕ್ಕರಮಾಲೆ | |
ಚರ್ಮಪಟ್ಟಿಕಾ | - | ಚಮ್ಮಟಿಗೆ | ಕ್ಷೀರಾಗಾರಾ | - | ಕೀಲಾರ | |
ದೇವಕುಲ | - | ದೇಗುಲ | ಗೂಢಾಗಾರ | - | ಗೂಡಾರ | |
ದೀಪಾವಳಿಕಾ | - | ದೀವಳಿಗೆ | ಉತ್ಸಾಹ | - | ಉಚ್ಚಾಹ |
ಇದುವರೆಗೆ ಸಂಸ್ಕೃತದ ಅನೇಕ ಶಬ್ದಗಳು ರೂಪಾಂತರ ಹೊಂದಿ ಕನ್ನಡಕ್ಕೆ ಬಂದ ಬಗೆಗೆ ತಿಳಿದಿರುವಿರಿ. ಕನ್ನಡದ ಅನೇಕ ಶಬ್ದಗಳು ಕಾಲಕಾಲಕ್ಕೆ ರೂಪಾಂತರ ಹೊಂದಿವೆ.
ಹಳೆಗನ್ನಡದ ಅನೇಕ ಶಬ್ದಗಳು ಈಗಿನ ಕನ್ನಡದಲ್ಲಿ (ಹೊಸಗನ್ನಡದಲ್ಲಿ) ರೂಪಾಂತರ ಹೊಂದಿ ಪ್ರಯೋಗವಾಗುತ್ತಿವೆ. ಅವುಗಳ ಬಗೆಗೆ ಈಗ ಸ್ಥೂಲವಾಗಿ ಮುಖ್ಯವಾದ ಕೆಲವು ಅಂಶಗಳನ್ನು ನೀವು ಅವಶ್ಯ ತಿಳಿಯಬೇಕು.
(೧) ಪಕಾರಾದಿಯಾದ ಅನೇಕ ಶಬ್ದಗಳು ಹಕಾರಾದಿಯಾಗುತ್ತವೆ.
ಹಳಗನ್ನಡ | - | ಹೊಸಗನ್ನಡ | ಹಳಗನ್ನಡ | - | ಹೊಸಗನ್ನಡ |
ಪಾಲ್ | - | ಹಾಲು | ಪಂಬಲಿಸು | - | ಹಂಬಲಿಸು |
ಪಾವ್ | - | ಹಾವು | ಪಣೆ | - | ಹಣೆ |
ಪಾಸು | - | ಹಾಸು | ಪರಡು | - | ಹರಡು |
ಪರಿ | - | ಹರಿ | ಪರದ | - | ಹರದ |
ಪರ್ಬು | - | ಹಬ್ಬು | ಪಲವು | - | ಹಲವು |
ಪೊರಳ್ | - | ಹೊರಳು | ಪಲ್ಲಿಲಿ | - | ಹಲ್ಲಿಲ್ಲದ |
ಪೊಳೆ | - | ಹೊಳೆ | ಪಲ್ಲಿಲಿವಾಯ್ | - | ಹಲ್ಲಿಲದ ಬಾಯಿ |
ಪೊರೆ | - | ಹೊರೆ | ಪವ್ವನೆ | - | ಹವ್ವನೆ |
ಪೂ | - | ಹೂ | ಪಳ್ಳ | - | ಹಳ್ಳ |
ಪನಿ | - | ಹನಿ | ಪಕ್ಕಿ | - | ಹಕ್ಕಿ |
ಪಿಂಡು | - | ಹಿಂಡು | ಪಗೆ | - | ಹಗೆ |
ಪತ್ತು | - | ಹತ್ತು | ಪೊರಮಡು | ಹೊರಹೊರಡು | |
ಪುಲಿ | - | ಹುಲಿ | ಪೆರ್ಚು | - | ಹೆಚ್ಚು |
ಪಣ್ | - | ಹಣ್ಣು | ಪುಗು | - | ಹುಗು |
ಪಂದೆ | - | ಹಂದೆ | ಪೊಗು | - | ಹೊಗು |
ಪಂದರ | - | ಹಂದರ | ಪಿಂಗು | - | ಹಿಂಗು |
ಪಗಲ್ | - | ಹಗಲು | ಪಿಂತೆ | - | ಹಿಂದೆ |
ಪಂದಿ | - | ಹಂದಿ | ಪಳಿ | - | ಹಳಿ |
ಪಂದೆ | - | ಹಂದೆ | ಪೋಳ್ | - | ಹೋಳು |
ಪೊಸ | - | ಹೊಸ | ಪಲ್ಲಿ | - | ಹಲ್ಲಿ |
ಪೋಗು | - | ಹೋಗು | ಪಲ್ | - | ಹಲ್ಲು |
ಪರ್ಚು | - | ಹಂಚು | ಪಸಿ | - | ಹಸಿ |
ಪರಸು | - | ಹರಸು | ಪಸುರ್ | - | ಹಸುರು |
ಪೀರ್ | - | ಹೀರು | ಪಾಡು | - | ಹಾಡು |
ಪುದುಗು | - | ಹುದುಗು | ಪುರ್ಬು | - | ಹುಬ್ಬು |
ಪಿರಿಯ | - | ಹಿರಿಯ | ಪರ್ಬು | - | ಹಬ್ಬು |
ಪದುಳ | - | ಹದುಳ | ಪೆರ್ಮೆ | - | ಹೆಮ್ಮೆ |
ಪರ್ದು | - | ಹದ್ದು | ಪಿರಿದು | - | ಹಿರಿದು |
ಪರ್ಬುಗೆ | - | ಹಬ್ಬುವಿಕೆ |
ಈಗ ಕೊನೆಯ ವ್ಯಂಜನಗಳು ಯಾವ ಯಾವ ವ್ಯತ್ಯಾಸ ಹೊಂದುತ್ತವೆಂಬುದನ್ನು ತಿಳಿಯಿರಿ.
(೨) ನ, ಣ, ಲ, ರ, ಳ ವ್ಯಂಜನಗಳು ಅಂತ್ಯದಲ್ಲಿ ಉಳ್ಳ ಕೆಲವು ಶಬ್ದಗಳು ಉಕಾರಾಂತಗಳಾಗುತ್ತವೆ. ಕೆಲವು ಇದೇ ಇನ್ನೊಂದು ವ್ಯಂಜನದಿಂದ ಕೂಡಿ ದ್ವಿತ್ವ (ಒತ್ತಕ್ಷರ) ಗಳೆನಿಸುತ್ತವೆ. ಯಕಾರಾಂತಗಳು ಇಕಾರಾಂತಗಳಾಗುತ್ತವೆ ಮತ್ತು ದ್ವಿತ್ವವುಳ್ಳ ವುಗಳಾಗುತ್ತವೆ.
ಉದಾಹರಣೆಗೆ:-
(i) ನಕಾರಾಂತವು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದೊಡನೆ ಉಕಾರಾಂತ ವಾಗುವುದಕ್ಕೆ:-
ನಾನ್-ನಾನು | ನೀನ್-ನೀನು |
ಏನ್-ಏನು | ಅವನ್-ಅವನು |
ಆನ್-ಆನು | ತಿನ್-ತಿನ್ನು |
ಸೀನ್-ಸೀನು | ಪೊನ್-ಪೊನ್ನು (ಹೊನ್ನು) |
ತಾನ್-ತಾನು | ಎನ್-ಎನ್ನು |
ಕಣ್-ಕಣ್ಣು | ಪುಣ್-ಹುಣ್ಣು |
ಉಣ್-ಉಣ್ಣು | ಪಣ್-ಹಣ್ಣು |
ಮಣ್-ಮಣ್ಣು | ಮಾಣ್-ಮಾಣು |
ಪೆಣ್-ಹೆಣ್ಣು | ಕಾಣ್-ಕಾಣು |
ಬಿಲ್-ಬಿಲ್ಲು | ಅರಲ್-ಅರಲು | ಸೊಲ್-ಸೊಲ್ಲು |
ನಿಲ್-ನಿಲ್ಲು | ಸೋಲ್-ಸೋಲು | ಕಾಲ್-ಕಾಲು |
ಕಲ್-ಕಲ್ಲು | ಒರಲ್-ಒರಲು | ಪಾಲ್-ಪಾಲು |
ಪುಲ್-ಹುಲ್ಲು | ಜೋಲ್-ಜೋಲು | ಸಿಡಿಲ್-ಸಿಡಿಲು |
ಕೊಲ್-ಕೊಲ್ಲು | ನೂಲ್-ನೂಲು | ಅರಿಲ್-ಅರಿಲು |
ಮಡಿಲ್-ಮಡಿಲು | ಪೋಲ್-ಪೋಲು | ನರಲ್-ನರಲು |
ಬಳಲ್-ಬಳಲು | ಚಲ್-ಚಲ್ಲು |
ಮರಳ್-ಮರಳು | ಉಗುಳ್-ಉಗುಳು | ಉರುಳ್-ಉರುಳು |
ಮರುಳ್-ಮರುಳು | ತಳ್-ತಳ್ಳು | ಪೊರಳ್-ಪೊರಳು |
ಸೀಳ್-ಸೀಳು | ಮುಳ್-ಮುಳ್ಳು | ನುಸುಳ್-ನುಸುಳು |
ತಾಳ್-ತಾಳು | ಜೊಳ್-ಜೊಳ್ಳು | ಕೂಳ್-ಕೂಳು |
ಮುಸುಳ್-ಮುಸುಳು | ಪುರುಳ್-ಹುರುಳು | ಕೇಳ್-ಕೇಳು |
ಒರಳ್-ಒರಳು | ಆಳ್-ಆಳು | ಪಾಳ್-ಹಾಳು |
ಅರಳ್-ಅರಳು | ಬಗುಳ್-ಬಗುಳು (ಬೊಗಳು) | ಕಳ್-ಕಳ್ಳು |
ಬಾಳ್-ಬಾಳು | ಕೊಳ್-ಕೊಳ್ಳು |
ನಾರ್-ನಾರು | ಬಸಿರ್-ಬಸಿರು |
ಕಾರ್-ಕಾರು | ತಳಿರ್-ತಳಿರು |
ಸೋರ್-ಸೋರು | ಮೊಸರ್-ಮೊಸರು |
ಸೇರ್-ಸೇರು | ಬೆಮರ್-ಬೆವರು (ಬೆಮರು) |
ತೆಮರ್-ತೆವರು | ಉಸಿರ್-ಉಸಿರು |
(vi) ಯಕಾರಾಂತ ಶಬ್ದಗಳು ಇಕಾರಾಂತ ಮತ್ತು ದ್ವಿತ್ವದಿಂದ ಕೂಡಿದ ಇಕಾರಾಂತ ಗಳಾಗುವುದಕ್ಕೆ
ತಾಯ್-ತಾಯಿ | ಕಾಯ್-ಕಾಯಿ | ಬಯ್-ಬಯ್ಯಿ |
ನಾಯ್-ನಾಯಿ | ಕಯ್-ಕಯ್ಯಿ | ಪೊಯ್-ಪೊಯ್ಯಿ |
ಸಾಯ್-ಸಾಯಿ | ಮೆಯ್-ಮೆಯ್ಯಿ | ನೆಯ್-ನೆಯ್ಯಿ |
ತೋಂಟ-ತೋಟ | ನೊರಂಜು-ನೊರಜು | ಸಿಡುಂಬು-ಸಿಡುಬು |
ಕುಸುಂಬೆ-ಕುಸುಬೆ | ತುಳುಂಕು-ತುಳುಕು | ಸೇಂದು-ಸೇದು |
ಪೊಸಂತಿಲ್-ಹೊಸತಿಲು | ಬಣಂಜಿಗ-ಬಣಜಿಗ | ಕರಂಡಗೆ-ಕರಡಗೆ |
ಬಣಂಬೆ-ಬಣವೆ | ತುರುಂಬು-ತುರುಬು | ಜಿನುಂಗು-ಜಿನುಗು |
ಕೊಡಂತಿ-ಕೊಡತಿ | ನಾಂದು-ನಾದು | ಮುಸುಂಕು-ಮುಸುಗು |
ಕವುಂಕುಳ್-ಕಂಕುಳ | ಪಲುಂಬು-ಹಲುಬು | ಸೆರೆಂಗು-ಸೆರಗು |
ಒರಂತೆ-ಒರತೆ | ಮೀಂಟು-ಮೀಟು | ಬೆಡಂಗು-ಬೆಡಗು |
ತೋಂಟಿಗ-ತೋಟಿಗ |
ಕಳ್ತೆ[1]-ಕರ್ತೆ-ಕತ್ತೆ | ಎಳ್ನೆಯ್- ಎಣ್ಣೆ |
ಗಳ್ದೆ-ಗರ್ದೆ-ಗದ್ದೆ | ಬೆಳ್ನೆಯ್- ಬೆಣ್ಣೆ |
ಪೊಳ್ತು-ಪೊತ್ತು- ಹೊತ್ತು | ಕಾಣ್ಕೆ-ಕಾಣಿಕೆ |
ಅಪ್ಪುದು- ಅಹುದು- ಹೌದು | ಪೂಣ್ಕೆ-ಪೂಣಿಕೆ (ಹೂಣಿಕೆ) |
ತನತ್ತು-ತನ್ನತು- ತನ್ನ | ಬಳಲ್ಕೆ-ಬಳಲಿಕೆ |
ನಿನತ್ತು-ನಿನ್ನತು-ನಿನ್ನ | ಒರ್ಮೆ-ಒಮ್ಮೆ |
ಎನಿತ್ತು-ಎನಿತು, ಎಸುಟು-ಎಷ್ಟು | ನುರ್ಗು-ನುಗ್ಗು |
ಅನಿತ್ತು- ಅನಿತು, ಅಸುಟು- ಅಷ್ಟು | ತರ್ಗು-ತಗ್ಗು |
ಚುರ್ಚು- ಚುಚ್ಚು | ಗುರ್ದು-ಗುದ್ದು |
ಕರ್ಚು-ಕಚ್ಚು | ಪರ್ದು-ಹದ್ದು |
ಬಿರ್ದು- ಬಿದ್ದು | ತೋರ್ಪ-ತೋರುವ |
ಉರ್ದು- ಉದ್ದು | ಕಾರ್ದ-ಕಾರಿದ |
ಇರ್ಪ- ಇರುವ | ಅಲ್ಲಂ-ಅಲ್ಲ |
ಪೀರ್ದಂ-ಹೀರಿದನು | ತಣ್ಣು-ತಂಪು |
ಸೇರ್ದಂ-ಸೇರಿದನು | ತೆಳು- ತಿಳುವು |
ಕರ್ಪು-ಕಪ್ಪು | ನೇರ್ಪು- ನೇರ |
ಕೆರ್ಪು-ಕೆರ | ಕಲ್ತು-ಕಲಿತು |
ಬೆಳ್ಪು- ಬಿಳುಪು |
ಮತ್ತಷ್ಟು ಉದಾಹರಣೆಗಳು
ಅರ್ಕ-ಅಕ್ಕ ಅಕ್ಷತೆ– ಅಚ್ಚತೆ ಅಕ್ಷರ – ಅಕ್ಕರ
ಅಕ್ಷಯ – ಅಚ್ಚಯ ಅರ್ಕಶಾಲೆ– ಅಗಸಾಲೆ ಅಂದುಕ – ಅಂದುಗೆ
ಅರ್ಚಕ – ಅಚ್ಚಿಗ ಅಂಬಾ– ಅಮ್ಮ ಅಂಗರಕ್ಷಕ – ಅಂಗರೇಕು
ಅಖಿಲ – ಅಕಿಲ ಅರ್ಗಲ– ಅಗುಳೆ ಅಕ್ಷೋಟ – ಅಕ್ಕೋಟ
ಅಗ್ಗಿಷ್ಟಿಕೆ – ಅಗ್ಗಿಟಿಕೆ ಅರ್ಘ್ಯ – ಅಗ್ಗ ಅಂಗುಷ್ಟ – ಅಂಗುಟ
ಅಂಶು – ಅಂಚು ಅಧ್ಯಕ್ಷ– ಅದ್ದಿಕ ಅಕ್ಷಿ – ಅಕ್ಕಿ
ಅಗಸ್ತಿ – ಅಗಸೆ ಅಂಗಾರ– ಇಂಗಳ ಅಬ್ದಿ – ಅಬುದಿ
ಅಭಿಜ್ಞಾನ – ಅಭಿಸಂಗ ಅಭ್ಯಾಸ – ಅಬ್ಬೆಸ ಅಭ್ಯುದಯ – ಅಬ್ಯುದಯ
ಅಮಾವಾಸ್ಯೆ – ಅಮಾಸೆ ಅರೋಟಿಕಾ – ಅರೋಸಿಗೆ ಅಮೃತ – ಅಮರ್ದು
ಅಮೆಲಾ – ಅಮೇಲೆ ಅರ್ಮ – ಅರಮ ಅಯೋಗ್ಯ – ಅಯೋಗ
ಅಲಘು – ಅಲಗೆ ಅವಸರ – ಓಸರ ಅವಸಾರಕ – ಓಸರಿಗೆ
ಅರ್ಧ – ಅದ್ದ ಅರ್ಹ– ಅರುಹ ಅಲಕಾ – ಅಳಕೆ
ಅವಸ್ಥಾ – ಅವತೆ ಅಶನಿ– ಅಸನಿ ಅಶ್ರದ್ಧಾ – ಅಸಡ್ಡೆ
ಅಸ್ತರಣ – ಅತ್ತರಣ ಅಸಹ್ಯ – ಅಸಯ್ಯ ಅಸ್ಥಿ – ಅಸ್ತಿ
ಅಸ್ತವ್ಯಸ್ತ – ಅತ್ತಬೆತ್ತ ಅಷ್ಟ – ಅಟ್ಟ ಅವ್ಯಾಪಾರಿನ್ – ಅಬ್ಬೇಪಾರಿ
ಅಲಘ – ಅಲಗು ಅಸಾಧ್ಯ– ಅಸದಳ ಅವಾಂತರ – ಅವಾಂತ್ರ
ಅಭ್ರಕ – ಅಂಬರಕ ಅಮೆಂಡ – ಅವುಡಲ ಅಮರೀ – ಅವರೀ
ಅರ್ಹಂತ – ಅರಿಹಂತ ಅಶೋಕ - ಅಸುಗೆ
ಅರ್ಗಲಿಕಾ - ಅಗ್ಗಳಿಕೆ | ಅಗ್ನಿ - ಅಗ್ಗಿ | ಅಂತಃಪುರ - ಅಂತಪುರ |
ಅತಸಿ - ಅಗಸೆ | ಅಂಕುಶ - ಅಂಕುಸ | ಅಗ್ರಿಗ - ಅಗ್ಗಿಗ |
ಅರ್ಗಲ - ಅಗುಳಿ | ಅಂದುಕ - ಅಂದುಗೆ | ಅಂಕನ - ಅಂಗಣ(ಅಂಗಳ) |
ಅರ್ಘ್ಯವಾಣಿ - ಅಗ್ಗವಣಿ | ಅಪ್ಸರ - ಅಚ್ಚರ | ಅಷ್ಟಮಿ - ಅಟ್ಟಮಿ |
ಅಟವೀ - ಅಡವಿ | ಅಜ್ಜುಕಾ - ಅಜ್ಜುಗೆ | ಅಟ್ಟಹಾಸ - ಅಟ್ಟಾಸ |
ಅಣಕು - ಅಣಕ | ಅತ್ತಿಕಾ - ಅತ್ತಿಗೆ | ಅಪರರಾತ್ರಿ- ಅತರಾತ್ರಿ |
ಅಭಿಲಾಷಾ - ಅಭಿಲಾಷೆ | ಅಬ್ಜಾನನೆ - ಅಬುಜಾನನೆ | ಅಂಬಷ್ಠೆ - ಅಮಟೆ |
ಅಲೇಖ - ಅಳಕ | ಅವಗ್ರಾಹ - ಅವಗಾಹ | |
ಆ | ||
ಆಂದೋಲ - ಅಂದಲ | ಆಯಾಸ - ಅಯಸ | ಆಜ್ಞಾಪನೆ - ಅಪ್ಪಣೆ |
ಆಚಾರ್ಯ - ಆಚಾರಿ | ಆಕಾರ - ಆಗಾರ | ಆತ್ಮ - ಆತುಮ |
ಆದಿತ್ಯವಾರ - ಆಯ್ತಾರ | ಆಜ್ಞಪ್ತಿ - ಅಣತಿ | ಆರ್ತ - ಅರತ |
ಆಯುಷ್ಯ - ಅಯಸ | ಆರ್ಯ - ಅಜ್ಜ | ಆಶ್ಚರ್ಯ - ಅಚ್ಚರಿ |
ಆಲಸ್ಯ - ಅಳಸೆ | ಆಶ್ರಯ - ಆಸರೆ | ಆಶ್ವಯುಜ - ಅಶ್ವೀಜ |
ಆವಲಕ - ಅಳಿಗೆ | ಆರ್ದ್ರ - ಅರಿದು | ಆಷಾಡ - ಆಸಾಡ (ಅಸಡ) |
ಆರಾಮ - ಅರವೆ | ಆಕರ್ಷಣ - ಅಕುರಸಣ | ಆಮ್ಲ - ಆಮ್ರ |
ಆಕಾಶ - ಆಗಸ | ಆಜ್ಞಾ - ಆಣೆ | |
ಇ | ||
ಇಷ್ಟಿಕಾ- ಇಟ್ಟಿಗೆ | ಇಂದ್ರ - ಇಂದಿರ | ಇಳಾ - ಇಳೆ |
ಇಕ್ಷಾಲಿಕ - ಇಕ್ಕಳಿಗೆ | ಇಂಗುದ - ಇಂಗಳ | ಇಕ್ಕುಳಿಕೆ - ಇಕ್ವಾಲಿಕೆ |
ಇಚ್ಛಾ - ಇಚ್ಚೆ | ||
ಈ | ||
ಈಶ್ವರ - ಈಸರ | ಈಶ - ಈಸ | ಈಲಿಕಾ - ಈಳಿಗೆ |
ಈಷೆ - ಈಜು | ||
ಉ | ||
ಉಚ್ವಾಸ - ಉಸ್ವಾಸ | ಉದ್ದೇಶ - ಉಗಡ | ಉತ್ಸವ - ಉಕ್ಕೆವ |
ಉತ್ಕುಣ - ಒಕ್ಕಣ | ಉಡ್ಡಯಣ - ಉಡಾವಣೆ | ಉಜ್ಜಯಿನಿ - ಉಜಿನಿ |
ಉಜ್ವಲ - ಉಜ್ಜಳ | ಉದ್ಘೋಷಣೆ - ಉಗ್ಗಡಣೆ | ಉದ್ವೇಗ - ಉಬ್ಬೆಗ |
ಉತ್ಕಟ - ಉಗ್ಗಟ | ಉನ್ಮತ್ತ - ಉಮ್ಮತ್ತ | ಉದ್ಧಿತ - ಉದ್ದಟ |
ಉಚ್ಚಶೃಂಗಿ - ಉಚ್ಚಂಗಿ | ಉತ್ಪಾತ - ಉತುಪಾದ | ಉಪ್ಪರಿಕಾ - ಉಪ್ಪರಿಗೆ |
ಉತ್ಪತ್ತಿ - ಉತುಪತಿ | ಉದ್ದಹಣ - ಉಗ್ರಾಣ | ಉಜಮ - ಉದ್ದಿಮೆ |
ಉತ್ಪಲ - ಉಪ್ಪಡ | ಉಷ್ಟ್ರ - ಒಂಟೆ | ಉತ್ಸಾಹ - ಉಚ್ಚಾಹ |
ಊ | ||
ಊನ - ಊಣ | ಊರ್ಧ್ವಶ್ವಾಸ - ಉಬ್ಬಸ | ಊರ್ಣ - ಉಣ್ಣೆ |
ಊಹಾ - ಊಹೆ | ||
ಏ-ಐ | ||
ಏಕ - ಎಕ್ಕ | ಏಕಪತ್ರ - ಎಕ್ಕಪತ್ರ | ಏಕತ್ರ - ಏಕಟ |
ಏಕಭಾಗ - ಎಕ್ಕಭಾಗ | ಏಕಶಕ್ಯತಾ - ಎಕ್ಕಸಕ್ಕತನ | ಏಕಸ್ವರ - ಎಕ್ಕಸರ |
ಏಕಾವಳಿ - ಎಕ್ಕಾವಳಿ | ಏಕಕ್ರ - ಏಕಟ | ಐಶ್ವರ್ಯ - ಐಸಿರಿ |
ಐರಾವತ - ಅಯಿರಾವತ | ಐಹಿಕ - ಆಯಿಕ | |
ಓ-ಔ | ||
ಓಲಿಕ - ಓಳಿಗ | ಓಘ - ಓಗ | ಔಷಧ - ಅವುಸದಿ |
ಔದಾರ್ಯ - ಉದಾರ | ಔದಾಸೀನ - ಉದಾಸೀನ | ಔಶೀರ - ಔಶರ |
Hi sir
ಪ್ರತ್ಯುತ್ತರಅಳಿಸಿರಾಮ,ಖಗ,ಪತಿ,ಸ್ತ್ರೀ, ಈ ಪದಗಳ ತತ್ಸಮ ತದ್ಭವ ಹೇಳಿ ಹೇಳಿ
If u know plz ans
ಅಳಿಸಿವಿನೋದ
ಅಳಿಸಿVinod tadbhav roop tilisi
ಅಳಿಸಿಧರ್ಮ ಪದದ ತತ್ಭವ ರೂಪ
ಅಳಿಸಿಖಗ - ಪಕ್ಷಿ
ಅಳಿಸಿಸುಖ ಕ್ಕೆ ತತ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಸುಖ- ಸೊಗ
ಅಳಿಸಿಮೃದು ತತ್ಬವ ತಿಳಿಸಿ
ಪ್ರತ್ಯುತ್ತರಅಳಿಸಿಮೃದು- ಮೆದು
ಅಳಿಸಿಮೃದು ತತ್ಬವ ತಿಳಿಸಿ
ಪ್ರತ್ಯುತ್ತರಅಳಿಸಿಮೆದು
ಅಳಿಸಿಕವಿ ತದ್ಭವ ರೂಪ
ಪ್ರತ್ಯುತ್ತರಅಳಿಸಿKabbiga
ಅಳಿಸಿಕಮಲ ತದ್ಭವ ರೂಪ ಹೇಳಿ
ಪ್ರತ್ಯುತ್ತರಅಳಿಸಿಕಬ್ಬಿಗೆ
ಅಳಿಸಿಸ್ತ್ರೀ ತದ್ಭಾವ
ಅಳಿಸಿಸ್ತ್ರೀ - ಸಿರಿ
ಅಳಿಸಿಸಾವಿರ
ಪ್ರತ್ಯುತ್ತರಅಳಿಸಿಸಾಸಿರ
ಅಳಿಸಿನರಕದ ತದ್ಭವ ತಿಳಿಸಿ
ಅಳಿಸಿಸಾವಿರ
ಪ್ರತ್ಯುತ್ತರಅಳಿಸಿಹ್ರದಯ ತಬ್ದವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಎದೆ
ಅಳಿಸಿಸಂಪಿಗೆ ತದ್ಬವ ರೂಪ
ಪ್ರತ್ಯುತ್ತರಅಳಿಸಿಚಂಪಕ
ಅಳಿಸಿNo
ಅಳಿಸಿಪ್ರಾಣ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಪ್ರಾಣ ತದ್ಭವ ರೂಪ?
ಅಳಿಸಿಹರಣ
ಅಳಿಸಿಸಾಕ್ಷಿ ಇದರ ತತ್ಭವ ರೂಪ
ಪ್ರತ್ಯುತ್ತರಅಳಿಸಿಜ್ಞಾನ ಪದದ ತತ್ಬವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಗ್ಯಾನ
ಅಳಿಸಿಪುಣ್ಯ, ಬಸವ, ಹರಣ ತದ್ಭವ ರೂಪ ಹೇಳಿ
ಅಳಿಸಿಪುಣ್ಯ, ಬಸವ, ಹರಣ ತದ್ಭವ ರೂಪ ಹೇಳಿ
ಅಳಿಸಿಸಂಪಿಗೆ ತತ್ಬವ ರೂಪ ಏನು ಸರ್?
ಪ್ರತ್ಯುತ್ತರಅಳಿಸಿಚಂಪಕ
ಅಳಿಸಿಸಂಪಿಗೆ
ಅಳಿಸಿಚಂಪಕ
ಅಳಿಸಿತ್ರಿಪದಿ ಎಂಬ ಹೆಸರು....ನಿಂದ ಬಂದಿದೆ
ಪ್ರತ್ಯುತ್ತರಅಳಿಸಿತ್ರಿವದಿ
ಅಳಿಸಿSwara padada tadbava roopa tilisi
ಪ್ರತ್ಯುತ್ತರಅಳಿಸಿಕುಂಬಳ ತತ್ಸಮ ರೂಪ
ಪ್ರತ್ಯುತ್ತರಅಳಿಸಿಕೂಷ್ಮಾಂಡ
ಅಳಿಸಿದಿನಾಂಕ ಸಂಸ್ಕೃತ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಸಕ್ಕದ
ಅಳಿಸಿಸೃಷ್ಟಿ ತದ್ಭವ
ಪ್ರತ್ಯುತ್ತರಅಳಿಸಿಸೃಷ್ಟಿ ತದ್ಭವ
ಅಳಿಸಿಸೂರ್ಯ
ಪ್ರತ್ಯುತ್ತರಅಳಿಸಿಸೂರ್ಯ ತದ್ಭವ
ಪ್ರತ್ಯುತ್ತರಅಳಿಸಿತಪಸ್ಸು ತದ್ಬವ
ಪ್ರತ್ಯುತ್ತರಅಳಿಸಿಸೊಗ ತದ್ಭವ ರೂಪ ಹೇಳಿ...
ಅಳಿಸಿವಿಶೇಷ ಪದದತದ್ಭವ ರೂಪವೇನು
ಪ್ರತ್ಯುತ್ತರಅಳಿಸಿಬಣ್ಣ
ಪ್ರತ್ಯುತ್ತರಅಳಿಸಿಅಂಗಳ, ತದ್ಭವ ರೂಪಗಳು ತಿಳಸಿ
ಬಣ್ಣ-ವರ್ಣ,ಪೂಣ್ಯ-ಹೂಣ್ಯ,ಅಂಗಳ-ಅಂಗನ
ಅಳಿಸಿವರ್ಣ - ಬಣ್ಣ
ಪ್ರತ್ಯುತ್ತರಅಳಿಸಿಪುಣ್ಯ ಪದಕ್ಕೆ ತದ್ಭವ ಏನು
ಪ್ರತ್ಯುತ್ತರಅಳಿಸಿಹೂನ್ಯ
ಅಳಿಸಿಧರೆ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿಪುಣ್ಯ ತದ್ಭವ ರೂಪ ತಿಳಿಸಿ ಸರ್
ಪ್ರತ್ಯುತ್ತರಅಳಿಸಿಪಣ ಪದದ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿನಮಸ್ಕಾರ ಸರ್,
ಪ್ರತ್ಯುತ್ತರಅಳಿಸಿಪ್ರಾಣ-ತತ್ಸಮ ತಿಳಿಸೀರಿ
ಹರಣ
ಅಳಿಸಿVamsha padada tadbhava
ಅಳಿಸಿಸ್ನಾನ ತದ್ಭವ ರೂಪ ಹೇಳಿ
ಪ್ರತ್ಯುತ್ತರಅಳಿಸಿಸ್ನಾನ ತದ್ಭವ ಹೇಳಿ??
ಅಳಿಸಿದೂರೆ ತದ್ಬವ ರೂಪ ಯಾವುದು
ಪ್ರತ್ಯುತ್ತರಅಳಿಸಿವಂಶ ತಧ್ಭವ ರೂಪ
ಪ್ರತ್ಯುತ್ತರಅಳಿಸಿಬಂಚ
ಅಳಿಸಿಹಂಸ
ಅಳಿಸಿಚೂರ್ಣ ಪದದ ತದ್ಭವ ರೂಪ ತಿಳಿಸಿ,
ಪ್ರತ್ಯುತ್ತರಅಳಿಸಿಕಥೆ
ಪ್ರತ್ಯುತ್ತರಅಳಿಸಿಧರೆ ತತ್ಸಮ
ಪ್ರತ್ಯುತ್ತರಅಳಿಸಿಕಾಲಗಳಂ'
ಪ್ರತ್ಯುತ್ತರಅಳಿಸಿಪುಣ್ಯ ಪದದ ತದ್ಭವ ಪದ ಏನು?
ಪ್ರತ್ಯುತ್ತರಅಳಿಸಿನರ್ತನ ಪದದ ತದ್ಭವ ಏನೆಂದು ದಯಮಾಡಿ ತಿಳಿಸಿ.
ಪ್ರತ್ಯುತ್ತರಅಳಿಸಿ
ಪ್ರತ್ಯುತ್ತರಅಳಿಸಿದೃಶ್ಯ ಪದ ತತ್ಭವ ರೂಪ answer please
ವಸನ ಪದದ ತದ್ಬವ
ಪ್ರತ್ಯುತ್ತರಅಳಿಸಿಬಸನ
ಅಳಿಸಿಅಂಕುಶ ಪದದ ತಧ್ಬವ ?
ಪ್ರತ್ಯುತ್ತರಅಳಿಸಿಅಂಕುಶ ಪದದ ತಧ್ಬವ ?
ಪ್ರತ್ಯುತ್ತರಅಳಿಸಿಅಂಕುಸ
ಅಳಿಸಿದಿವ್ಯ ಪದದ ತತ್ಸಮ ತದ್ಭವ ತಿಳಿಸಿ
ಪ್ರತ್ಯುತ್ತರಅಳಿಸಿದಿವ್ಯ
ಪ್ರತ್ಯುತ್ತರಅಳಿಸಿದೃಷ್ಟಾ , ದೀಕ್ಷಾ,ವೀಧಿ, ವರ್ತಿ
ಪ್ರತ್ಯುತ್ತರಅಳಿಸಿದೃಷ್ಟಾ , ದೀಕ್ಷಾ,ವೀಧಿ, ವರ್ತಿ
ಪ್ರತ್ಯುತ್ತರಅಳಿಸಿಪ್ರಾಯ ಪದದ ತದ್ಭವ ರೂಪ ತಿಳಿಸಿ.
ಪ್ರತ್ಯುತ್ತರಅಳಿಸಿಹರೆಯ
ಅಳಿಸಿಲಗ್ನ ಪದದ ತತ್ಸಮ ತಿಳಿಸಿ
ಪ್ರತ್ಯುತ್ತರಅಳಿಸಿಸೂರ್ಯ ಪದದ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಸೂರ್ಯ ಪದದ ತದ್ಭವ
ಪ್ರತ್ಯುತ್ತರಅಳಿಸಿNesar
ಅಳಿಸಿಸೂರಿಯ
ಅಳಿಸಿತಾಣ ಪದದ ತದ್ಭವ ರೂಪ ಹೇಳಿ
ಪ್ರತ್ಯುತ್ತರಅಳಿಸಿವಿಳಾಸ ತದ್ಭವ?
ಪ್ರತ್ಯುತ್ತರಅಳಿಸಿವಸನ ತದ್ಭವ ರೂಪ??
ಪ್ರತ್ಯುತ್ತರಅಳಿಸಿದುಃಖ ಪದದ ತದ್ಭವ
ಪ್ರತ್ಯುತ್ತರಅಳಿಸಿಬೀಜ ತದ್ಬವ ರೂಪ ತಳಿಸಿ
ಪ್ರತ್ಯುತ್ತರಅಳಿಸಿಬಿತ್ತ
ಅಳಿಸಿಬೆತ್ತ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿವೇತ್ರ
ಅಳಿಸಿವಸನ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿವಸನ ತದ್ಭವ ರೂಪ
ಪ್ರತ್ಯುತ್ತರಅಳಿಸಿಬಿನ್ನಪ ಪದದ ತದ್ಭವ ರೂಪ ತಿಳಿಸಿ.
ಪ್ರತ್ಯುತ್ತರಅಳಿಸಿವಿಜ್ಞಾಪನೆ
ಅಳಿಸಿಬಿನ್ನಣ
ಅಳಿಸಿದು:ಖ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿಲಗ್ನ
ಪ್ರತ್ಯುತ್ತರಅಳಿಸಿಲಗ್ನ
ಪ್ರತ್ಯುತ್ತರಅಳಿಸಿಬಿನ್ನಿ ಪದದ ತದ್ಭವ ರೂಪವೇನು?
ಪ್ರತ್ಯುತ್ತರಅಳಿಸಿಪತ್ರದ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಬೆತ್ತ...ನೆತ್ತರ.
ಅಳಿಸಿವೇತ್ರ
ಅಳಿಸಿವೆತ್ತರ ಬೆತ್ತ
ಪ್ರತ್ಯುತ್ತರಅಳಿಸಿಹೃದಯ ಮತ್ತು ಮಾಣಿಕ್ಯ ಪದಗಳ ತದ್ಭವ ರೂಪ ತಿಳಿಸಿ ಸರ್
ಪ್ರತ್ಯುತ್ತರಅಳಿಸಿಎದೆ
ಅಳಿಸಿಮಾಣಿಕ್ಯ - ಮಾಣಿಕ
ಅಳಿಸಿಹಕ್ಕಿ ತದ್ಭವ ರೂಪ
ಪ್ರತ್ಯುತ್ತರಅಳಿಸಿಪಕ್ಷಿ ತತ್ಸಮ ಹಕ್ಕಿ ತದ್ಭವ
ಅಳಿಸಿವಸನ
ಪ್ರತ್ಯುತ್ತರಅಳಿಸಿಪ್ರಾಣ ತತ್ಸಮ ತದ್ಭವ ಹೇಳಿ
ಮಾಣಿಕ್ಯ ಪದದ ತದ್ಭವ
ಪ್ರತ್ಯುತ್ತರಅಳಿಸಿಘಟಿಕಾ ಪದದ ತದ್ಭವ ರೂಪ ತಿಳಿಸಿ 🙏🙏🙏
ಪ್ರತ್ಯುತ್ತರಅಳಿಸಿಘಳಿಗೆ
ಅಳಿಸಿಪ್ರಾಣಿ ತತ್ವ
ಪ್ರತ್ಯುತ್ತರಅಳಿಸಿತತ್ವ
ಅಳಿಸಿಮೂಡಲ ತತ್ಸಮ ತದ್ಬವ ತಿಳಿಸಿ
ಪ್ರತ್ಯುತ್ತರಅಳಿಸಿಮೂಡಲ ಪದದ ತತ್ಸಮ ತದ್ಬವ
ಪ್ರತ್ಯುತ್ತರಅಳಿಸಿಹರಿಯ ಪದದ ತದ್ಬವ ರೂಪ ಹೇಳಿ
ಪ್ರತ್ಯುತ್ತರಅಳಿಸಿಹರೆಯ
ಅಳಿಸಿಹರೆಯ ಪದದ ತದ್ಬವ ರೂಪ ಹೇಳಿ
ಪ್ರತ್ಯುತ್ತರಅಳಿಸಿಪ್ರಾಯ
ಅಳಿಸಿವಂದ್ಯ.ಪದದ ತತ್ಬವ
ಪ್ರತ್ಯುತ್ತರಅಳಿಸಿವಂಧ್ಯಾ ಪದದ ತಧ್ಪವ
ಪ್ರತ್ಯುತ್ತರಅಳಿಸಿಬಂಜೆ
ಅಳಿಸಿಸುವರ್ಣ ಪದದ tatbhava ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಯುವಕ ಪದದ ತತ್ಸಮ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಸಂಸ್ಕೃತ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿಸಕ್ಕದ
ಅಳಿಸಿAns
ಅಳಿಸಿಸಂದೇಹ ಚೈತನ್ಯ ಪದಗಳಿಗೆ ತದ್ಭವ ರೂಪ ನೀಡಿ
ಪ್ರತ್ಯುತ್ತರಅಳಿಸಿಸಂದೇಹ ಚೈತನ್ಯ ಪದಗಳಿಗೆ ತದ್ಭವ ರೂಪ ನೀಡಿ
ಪ್ರತ್ಯುತ್ತರಅಳಿಸಿಸ್ತ್ರೀ ತದ್ಬವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಬೆತ್ತ ಪದದ ತತ್ಸಮ ರಪ
ಪ್ರತ್ಯುತ್ತರಅಳಿಸಿಹರೆಯ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿಸಂಸ್ಕೃತ ಪದದ ತದ್ಭವ ರೂಪ
ಪ್ರಾಯ-ಹರಯ
ಅಳಿಸಿಸಂಸ್ಕೃತ-ಸಕ್ಕದ
ಪ್ರಾಣ್ ತತ್ಸಮ ಹೇಳಿ
ಪ್ರತ್ಯುತ್ತರಅಳಿಸಿಗಿಳಿ ಸಂಸೃತ ರೂಪ
ಪ್ರತ್ಯುತ್ತರಅಳಿಸಿಆಗಿ ಮತ್ತು ಸಂಸ್ಕೃತ ತದ್ಭವ ರೂಪವನ್ನು ತಿಳಿಸಿ
ಪ್ರತ್ಯುತ್ತರಅಳಿಸಿಸ್ವಾಗತ-ತದ್ಭವ ರೂಪ?
ಪ್ರತ್ಯುತ್ತರಅಳಿಸಿಮೃಗ ತದ್ಭವ ರೂಪ
ಪ್ರತ್ಯುತ್ತರಅಳಿಸಿಮಿಗ
ಅಳಿಸಿಭಂಗ ಈ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿಮಕ್ಕಳ
ಪ್ರತ್ಯುತ್ತರಅಳಿಸಿಅದ್ಭುತ .ಸಾಕ್ಷಿ.ಪೊಡವಿ. ಪದದ ತದ್ಭವ
ಪ್ರತ್ಯುತ್ತರಅಳಿಸಿಅದುಬುತ.. ಸಾಕಿ.. ಅಡವಿ
ಅಳಿಸಿಹೇಳಿ ಸರ್
ಪ್ರತ್ಯುತ್ತರಅಳಿಸಿದ್ಯೊತಕ ಪದದ ತದ್ಭವ ತಿಳಿಸಿ
ಪ್ರತ್ಯುತ್ತರಅಳಿಸಿಮಿಂಚು ಪದದ ತದ್ಬವ ಪದ ಯಾವುದು?
ಪ್ರತ್ಯುತ್ತರಅಳಿಸಿಜನ್ಮ ವಿಷ ಶ್ರೀ ಧ್ವನಿ ಇದರ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಬಿತ್ತರ ಇದರ ತದ್ಬವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿವಿಸ್ತಾರ
ಪ್ರತ್ಯುತ್ತರಅಳಿಸಿದೃಶ್ಯ ಪದದ ತದ್ಭವ ರೂಪ ತಿಳಿಸಿ.
ಪ್ರತ್ಯುತ್ತರಅಳಿಸಿಸೃಷ್ಟಿ ಪದದ ತದ್ಭಮ ರೂಪ?
ಪ್ರತ್ಯುತ್ತರಅಳಿಸಿಸೃಷ್ಟಿ ಪದದ ತದ್ಭವ ರೂಪ?
ಪ್ರತ್ಯುತ್ತರಅಳಿಸಿಜುದ್ದ ಪದದ ತತ್ಸಮ ರೂಪ ಯಾವುದು ಸರ್?
ಪ್ರತ್ಯುತ್ತರಅಳಿಸಿಪ್ರಾಣ ಪದದ ತದ್ಭವ ರೂಪ ಯಾವುದು ಸರ್?
ಪ್ರತ್ಯುತ್ತರಅಳಿಸಿHarana
ಅಳಿಸಿChittara padadada tatsama tadbhava
ಪ್ರತ್ಯುತ್ತರಅಳಿಸಿಸೃಷ್ಟಿ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿHarana parade tadbava roopa
ಪ್ರತ್ಯುತ್ತರಅಳಿಸಿಪುಣ್ಯ ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿಧರ್ಮ ಪಾದದ ತದ್ಭವ ರೂಪ
ಪ್ರತ್ಯುತ್ತರಅಳಿಸಿDaruma
ಅಳಿಸಿವಿಭು ಇದರ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿವಿಭು ಪದದ ತದ್ಭವ ರೂಪ ತಿಳಿಸಿ.
ಪ್ರತ್ಯುತ್ತರಅಳಿಸಿಹರುಷ ಪದದ ತತ್ಸಮ ಅರ್ಥ ತಿಳಿಸಿ
ಪ್ರತ್ಯುತ್ತರಅಳಿಸಿಹರುಷ ಪದದ ತತ್ಸಮ
ಪ್ರತ್ಯುತ್ತರಅಳಿಸಿdrushya tathsama -tadhbava roopa???
ಪ್ರತ್ಯುತ್ತರಅಳಿಸಿಸಕ್ಕರೆ
ಪ್ರತ್ಯುತ್ತರಅಳಿಸಿಸೃಷ್ಟಿ ಪದದ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಪುಣ್ಯ ಪದದ ತದ್ಬವ ರೂಪ ಯಾವುದು
ಪ್ರತ್ಯುತ್ತರಅಳಿಸಿನರ್ತನ ಇದರ ತದ್ಭವ ರೂಪ ಏನು???
ಪ್ರತ್ಯುತ್ತರಅಳಿಸಿಭಿಕ್ಷು ಪದದ ತದ್ಭವ ರೂಪ
ಪ್ರತ್ಯುತ್ತರಅಳಿಸಿಸರ್ ಕಣಿ ಪದ್ಧತಿ ತದ್ಭವ ರೂಪ ಹೇಳಿ?
ಪ್ರತ್ಯುತ್ತರಅಳಿಸಿಜಸ,ತಾಣ ಈ ಪದದ tatsama pada tilisi sir
ಪ್ರತ್ಯುತ್ತರಅಳಿಸಿಜಾತ್ರೆ ಪದದ ತತ್ಸಮ ತದ್ಭವ ರೂಪ ಏನು
ಪ್ರತ್ಯುತ್ತರಅಳಿಸಿಸೂರ್ಯ ಇದರ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಕಳೆಯ,ಚೌಗ ಪದದ ತತ್ಸಮ ತದ್ಭವ
ಪ್ರತ್ಯುತ್ತರಅಳಿಸಿದುಃಖ ಪದದ ತದ್ಭ್ಯವ ರೂಪ
ಪ್ರತ್ಯುತ್ತರಅಳಿಸಿvaishakaa ತದ್ಬವ ರುಪ
ಪ್ರತ್ಯುತ್ತರಅಳಿಸಿvaishaka thdbhava roopa plz helli sirrrrrrrr
ಪ್ರತ್ಯುತ್ತರಅಳಿಸಿKulkarnikrishna399@Gmail.com(google)
ಪ್ರತ್ಯುತ್ತರಅಳಿಸಿKulkarnikrishna399@Gmail.com(google)
ಪ್ರತ್ಯುತ್ತರಅಳಿಸಿHasu
ಪ್ರತ್ಯುತ್ತರಅಳಿಸಿಸೀತಾ
ಪ್ರತ್ಯುತ್ತರಅಳಿಸಿಯಾತ್ರೆ ಪದದ ತದ್ಭವ ರೂಪ please!!!!
ಪ್ರತ್ಯುತ್ತರಅಳಿಸಿವಂದ್ಯಾ ಪದದ ತದ್ಭವ ರೂಪ ತಿಳಿಸಿ
ಪ್ರತ್ಯುತ್ತರಅಳಿಸಿಸಹದೇವ
ಪ್ರತ್ಯುತ್ತರಅಳಿಸಿಕ್ಷಣ ಪದದ ತದ್ಭವ ರೂಪ ಏನು?
ಪ್ರತ್ಯುತ್ತರಅಳಿಸಿ