ಪುಟಗಳು

05 ನವೆಂಬರ್ 2013

ತತ್ಸಮ-ತದ್ಭವ

ತತ್ಸಮ-ತದ್ಭವ  
                                                                     [ಕೃಪೆ-ಕಣಜ.ಕಾಂ]
(ಸೂಚನೆ:- ನುಡಿ ಅಥವಾ ಬರಹ ಆನ್ ಮಾಡಿಕೊಂಡು ಯೂನಿಕೋಡ್ ಆಯ್ಕೆಮಾಡಿಕೊಳ್ಳಿ. ನಂತರ ನಿಮಗೆ ಬೇಕಾದ ಪದ ಹುಡುಕಲು ನಿಮ್ಮ ಕೀ-ಬೋರ್ಡ್ ನಲ್ಲಿ Ctrl ಮತ್ತು F ಕೀಗಳನ್ನು ಪ್ರೆಸ್ ಮಾಡಿ. ಮತ್ತು ಕನ್ನಡದಲ್ಲಿ ಟೈಪ್ ಮಾಡಿ. Enter ಒತ್ತಿರಿ)

ಸಂಸ್ಕೃತದಿಂದ ತಮ್ಮ ಮೂಲರೂಪವನ್ನು ವ್ಯತ್ಯಾಸಮಾಡಿಕೊಂಡು ಕನ್ನಡಕ್ಕೆ ಬಂದ ಶಬ್ದಗಳು
ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಹೊಂದಿದವು, ಹೆಚ್ಚು ಬದಲಾವಣೆ ಹೊಂದಿದವು ಎಂದು ಎರಡು ಭಾಗ ಮಾಡಬಹುದು.
(i) ಅಲ್ಪಸ್ವಲ್ಪ ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸೀತೆ, ಲಕ್ಷ್ಮಿ, ಮಾಲೆ, ದೇವತೆ, ರಾಜ, ಮಹ, ಯಶ, ಬೃಹತ್ತು, ಮಹತ್ತು, ವಿಪತ್ತು, ವಿಯತ್ತು, ಸರಿತ್ತು-ಇತ್ಯಾದಿಗಳು.
(ii) ಹೆಚ್ಚು ಬದಲಾವಣೆ ಹೊಂದಿ ಬಂದವುಗಳು:
ಉದಾಹರಣೆಗೆ:- ಸಕ್ಕರೆ, ಸಾವಿರ, ಬಸವ, ಸಂತೆ, ಪಟಕ, ಸರ, ತಾಣ, ದೀವಿಗೆ, ಬತ್ತಿ, ಬಸದಿ, ನಿಚ್ಚ, ಕಜ್ಜ, ಅಂಚೆ, ಕಂತೆ, ಅಜ್ಜ, ಕವಳ-ಇತ್ಯಾದಿಗಳು.
ಸಂಸ್ಕೃತದಿಂದ ಅಸಂಖ್ಯಾತ ಪದಗಳು ಕನ್ನಡಕ್ಕೆ ತದ್ಭವ ರೂಪವಾಗಿ ಬಂದಿರುವುದರಿಂದ, ಅವುಗಳು ಕನ್ನಡಕ್ಕೆ ಬಂದ ಕ್ರಮವನ್ನು ವಿಸ್ತಾರವಾಗಿಯೇ ತಿಳಿಯಬೇಕಾದುದು ಅವಶ್ಯವಾದುದು.  ಆ ಬಗೆಗೆ ಈಗ ವಿಚಾರ ಮಾಡೋಣ.

[1] ಸಂಸ್ಕೃತ ಭಾಷೆಯಿಂದ ಕನ್ನಡಕ್ಕೆ ಬಂದ ಶಬ್ದಗಳನ್ನು ತಿಳಿಯಲು ಸ್ಥೂಲವಾಗಿ ಕೆಳಗಣ ವಿಷಯಗಳನ್ನು ನೆನಪಿನಲ್ಲಿಡಬೇಕು:-
(i) ಋ, ಶ, ಷ, ಕ್ಷ, ಜ್ಞ, ತ್ರ ವಿಸರ್ಗ, ಸ್ತ್ರೀ, ಸ್ತ್ರ ಅಕ್ಷರಗಳಿರುವ ಶಬ್ದಗಳು;
(ii) ಮಹಾಭಾರತ, ರಾಮಾಯಣಗಳೇ ಮೊದಲಾದ ಪುರಾಣ ಗ್ರಂಥಗಳಲ್ಲಿ ಬರುವ ವ್ಯಕ್ತಿ, ಸ್ಥಳ, ಪರ‍್ವತ, ನದಿ, ಋಷಿಗಳೇ ಮೊದಲಾದವರ ಹೆಸರುಗಳು ಮತ್ತು ಋತು, ಮಾಸ, ದಿವಸ, ನಕ್ಷತ್ರ, ಯೋಗ, ಕರಣಗಳು;
(iii) ವಿ, ಅ, ಅನ್, ಸು, ಸ, ನಿಸ್, ನಿರ್, ನಿಃ, ದುಃ, ದುಸ್, ದುರ್ ಇತ್ಯಾದಿ ಉಪಸರ್ಗ ಪೂರ್ವಕ ಶಬ್ದಗಳು, ಉದಾ:-ವಿಚಲಿತ, ಅಚಲಿತ, ದುರಾಚಾರ, ಅನಗತ್ಯ, ವಿಶೇಷ … … … ಇತ್ಯಾದಿ;
(iv) ಇವಲ್ಲದೆ ಇನ್ನೂ ಅನೇಕ ಶಬ್ದಗಳಿವೆ.  ಇಲ್ಲಿ ಹೇಳಿರುವುದು ಕೇವಲ ಸ್ಥೂಲಮಾತ್ರ.
[2] ಅನೇಕ ಶಬ್ದಗಳು ತದ್ಭವ ರೂಪ ಹೊಂದಿ ನೇರವಾಗಿ ಸಂಸ್ಕೃತದಿಂದಲೇ ಬಂದಿಲ್ಲ.  ಪ್ರಾಕೃತ ಎಂಬ ಭಾಷೆಯಿಂದಲೂ ಬಂದಿವೆ.
     (೨೭) ತತ್ಸಮಗಳು-ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸಲ್ಪಡುವ ಶಬ್ದಗಳು ತತ್ಸಮಗಳುತತ್ ಎಂದರೆ ಅದಕ್ಕೆ, ಸಮ ಎಂದರೆ ಸಮಾನವಾದುದು-ಇಲ್ಲಿ ಅದಕ್ಕೆ ಎಂದರೆ ಸಂಸ್ಕೃತಕ್ಕೆ ಸಮಾನ (ಎಂದು ಅರ್ಥ) ಇವನ್ನು ಕೆಲವರು ಸಮಸಂಸ್ಕೃತ ಗಳೆಂದೂ ಕರೆಯುವರು (ಕನ್ನಡಕ್ಕೂ ಸಂಸ್ಕೃತಕ್ಕೂ ಇವು ಸಮಾನರೂಪಗಳೆಂದು ತಾತ್ಪರ್ಯ).  ಅಲ್ಲದೆ ತದ್ಭವ ಶಬ್ದಗಳ ಸಂಸ್ಕೃತ ರೂಪಗಳನ್ನು ತತ್ಸಮ ಗಳೆಂದೇ ಕರೆಯುವುದು ರೂಢಿಗೆ ಬಂದಿದೆ.
ಉದಾಹರಣೆಗೆ:- ರಾಮ, ಭೀಮ, ಕಾಮ, ವಸಂತ, ಸೋಮ, ಚಂದ್ರ, ಸೂರ‍್ಯ, ಗ್ರಹ, ಕರ್ತೃ, ಶತ್ರು, ಸ್ತ್ರೀ, ಶ್ರೀ, ವನ, ಮಧು, ಕಮಲ, ಭುವನ, ಭವನ, ಶಯನ, ಶ್ರುತಿ, ಸ್ಮೃತಿ, ಶುದ್ಧಿ, ಸಿದ್ಧಿ, ಕವಿ, ಕಾವ್ಯ, ರವಿ, ಗಿರಿ, ಲಿಪಿ, ಪಶು, ಶಿಶು, ರಿಪು, ಭಾನು, ಯತಿ, ಮತಿ, ಪತಿ, ಗತಿ-ಇತ್ಯಾದಿ.
(೨೮) ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ವಿಕಾರವನ್ನಾಗಲಿ, ಪೂರ್ಣ ವಿಕಾರವನ್ನಾಗಲಿ, ಹೊಂದಿ ಬಂದಿರುವ ಶಬ್ದಗಳನ್ನು ತದ್ಭವಗಳೆಂದು ಕರೆಯುವರು (ತತ್ ಎಂದರೆ ಅದರಿಂದ ಎಂದರೆ ಸಂಸ್ಕೃತದಿಂದ ಭವ ಎಂದರೆ ಹುಟ್ಟಿದ ಅಥವಾ ನಿಷ್ಪನ್ನವಾದ ಎಂದು ಅರ್ಥ).
(ಅಲ್ಪಸ್ವಲ್ಪ ವಿಕಾರ ಹೊಂದಿದ ಶಬ್ದಗಳನ್ನು ಸಮಸಂಸ್ಕೃತ ಎಂದು ಕರೆಯುವುದೂ ವಾಡಿಕೆ)
ಉದಾಹರಣೆಗೆ:- ಮಾಲೆ, ಸೀತೆ, ಉಮೆ, ವೀಣೆ, ಅಜ್ಜ, ಬಂಜೆ, ಸಿರಿ, ಬಾವಿ, ದನಿ, ಜವನಿಕೆ, ನಿದ್ದೆ, ಗಂಟೆ, ಜೋಗಿ, ರಾಯ, ಕೀಲಾರ, ಪಟಕ, ಸಂತೆ, ಪಕ್ಕ, ಪಕ್ಕಿ, ಚಿತ್ತಾರ, ಬಟ್ಟ, ಆಸೆ, ಕತ್ತರಿ-ಇತ್ಯಾದಿ.
(i) ಅಲ್ಪಸ್ವಲ್ಪ ವ್ಯತ್ಯಾಸ ಹೊಂದಿ ಕನ್ನಡಕ್ಕೆ ಬಂದಿರುವ ಸಂಸ್ಕೃತ ಶಬ್ದಗಳ ಪಟ್ಟಿ:-
ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ದಯಾದಯೆ, ದಯಗ್ರೀವಾಗ್ರೀವೆ, ಗ್ರೀವ
ಕರುಣಾಕರುಣೆ, ಕರುಣಶಮಾಶಮೆ
ನಾರೀನಾರಿವಧವಧೆ
ನದೀನದಿಅಭಿಲಾಷಅಭಿಲಾಷೆ
ವಧೂವಧುಪ್ರಶ್ನಪ್ರಶ್ನೆ
ಸರಯೂಸರಯುಉದಾಹರಣೆಉದಾಹರಣೆ
ಸ್ವಯಂಭೂಸ್ವಯಂಭುಸರಸ್ವತೀಸರಸ್ವತಿ
ಮಾಲಾಮಾಲೆಲಕ್ಷ್ಮೀಲಕ್ಷ್ಮಿ
ಸೀತಾಸೀತೆಗೌರೀಗೌರಿ
ಬಾಲಾಬಾಲೆಭಾಮಿನೀಭಾಮಿನಿ
ಲೀಲಾಲೀಲೆಕಾಮಿನೀಕಾಮಿನಿ
ಗಂಗಾಗಂಗೆಕುಮಾರೀಕುಮಾರಿ
ನಿಂದಾನಿಂದೆಗೋದಾವರೀಗೋದಾವರಿ
ಶಾಲಾಶಾಲೆಕಾವೇರೀಕಾವೇರಿ
ರಮಾರಮೆಶಾಸ್ತ್ರೀಶಾಸ್ತ್ರಿ
ಉಮಾಉಮೆಭಿಕ್ಷಾಭಿಕ್ಷಾ, ಭಿಕ್ಷೆ
ದಮಾದಮೆಯಾತ್ರಾಯಾತ್ರೆ
ಕ್ಷಮಾಕ್ಷಮೆಜ್ವಾಲಾಜ್ವಾಲೆ
ಆಶಾಆಶೆರೇಖಾರೇಖೆ
ಸಂಸ್ಥಾಸಂಸ್ಥೆಮುದ್ರಾಮುದ್ರೆ
ನಿದ್ರಾನಿದ್ರೆದ್ರಾಕ್ಷಾದ್ರಾಕ್ಷೆ
ಯವನಿಕಾಯವನಿಕೆಮಾತ್ರಾಮಾತ್ರೆ
ದ್ರೌಪದೀದ್ರೌಪದಿಶಾಖಾಶಾಖೆ
ವೇಳಾವೇಳೆವಾಲುಕಾವಾಲುಕ
ಭಾಷಾಭಾಷೆಗಾಂಧಾರೀಗಾಂಧಾರಿ
-ಇತ್ಯಾದಿಗಳು
ಮೇಲಿನ ಎಲ್ಲ ಉದಾಹರಣೆಗಳಲ್ಲಿ ಮುಖ್ಯವಾಗಿ ಸಂಸ್ಕೃತದ ಆ ಕಾರಂತ ಶಬ್ದಗಳು ಎ ಕಾರಾಂತಗಳಾಗಿವೆ (ಮಾಲಾ-ಮಾಲೆ ಇತ್ಯಾದಿ); ಕೆಲವು ಅ ಕಾರಾಂತಗಳೂ ಎ ಕಾರಂತಗಳಾಗಿವೆ (ವಧ-ವಧೆ); ಕೆಲವು ದೀರ್ಘಾಂತಗಳು ಹ್ರಸ್ವಾಂತಗಳಾಗಿವೆ (ಲಕ್ಷ್ಮೀ-ಲಕ್ಷ್ಮಿ); ಕೆಲವು ಆಕಾರಂತಗಳು ಅಕಾರಾಂತಗಳಾಗಿಯೂ ಆಗಿವೆ (ದಯಾ-ದಯ); ಹೀಗೆ ಸ್ಥೂಲವಾಗಿ ತಿಳಿಯಬಹುದು.  ಹೀಗೆ ಅಲ್ಪಸ್ವಲ್ಪ ವ್ಯತ್ಯಾಸಗೊಂಡ ಮೇಲೆ ಇವು ಕನ್ನಡದ ಪ್ರಕೃತಿಗಳಾಗುವುವು.  ಇವುಗಳ ಮೇಲೆ ಕನ್ನಡದ ಪ್ರತ್ಯಯಗಳನ್ನು ಹಚ್ಚಬಹುದು. (ಇಂಥವನ್ನೇ ಸಮ ಸಂಸ್ಕೃತಗಳೆಂದು ಕೆಲವರು ಕರೆಯುವರೆಂದು ಹಿಂದೆ ತಿಳಿಸಿದೆ).
(ii) ಶಬ್ದದ ಕೊನೆಯಲ್ಲಿರುವ ಋಕಾರವು ಅ ಅರ ಎಂದು ವ್ಯತ್ಯಾಸಗೊಳ್ಳುವುವು.  ಕೆಲವು ಎಕಾರಾಂತಗಳೂ ಆಗುವುವು.  ಅನಂತರ ಕನ್ನಡ ಪ್ರಕೃತಿಗಳಾಗುವುವು.
ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ಕರ್ತೃಕರ್ತ, ಕರ್ತಾರನೇತೃನೇತಾರ
ದಾತೃದಾತ, ದಾತಾರಸವಿತೃಸವಿತಾರ
ಪಿತೃಪಿತ, ಪಿತರಭರ್ತೃಭರ್ತಾರ
ಮಾತೃಮಾತೆಹೋತೃಹೋತಾರ
(iii) ಕೆಲವು ನಕಾರಾಂತ ಶಬ್ದಗಳು ಕೊನೆಯ ನಕಾರವನ್ನು ಲೋಪ ಮಾಡಿಕೊಂಡು ಕನ್ನಡ ಪ್ರಕೃತಿಗಳಾಗುವುವು.
ಸಂಸ್ಕೃತ ರೂಪವ್ಯತ್ಯಾಸ ರೂಪಸಂಸ್ಕೃತ ರೂಪವ್ಯತ್ಯಾಸ ರೂಪ
ರಾಜನ್ರಾಜಬ್ರಹ್ಮನ್ಬ್ರಹ್ಮ
ಕರಿನ್ಕರಿಪುರೂರವನ್ಪುರೂರವ
ಆತ್ಮನ್ಆತ್ಮಯುವನ್ಯುವ
ಧಾಮನ್ಧಾಮಮೂರ್ಧನ್ಮೂರ್ಧ
(iv) ಕೆಲವು ವ್ಯಂಜನಾಂತ ಶಬ್ದಗಳು ಕೊನೆಯ ವ್ಯಂಜನವನ್ನು ಲೋಪ ಮಾಡಿಕೊಂಡಾಗಲೀ ಅಥವಾ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರದೊಡನಾಗಲೀ ವ್ಯತ್ಯಾಸಗೊಂಡು ಕನ್ನಡ ಪ್ರಕೃತಿಗಳಾಗುತ್ತವೆ.
ಸಂಸ್ಕೃತ ರೂಪ  ಬದಲಾವಣೆಯಾದ ರೂಪಗಳು
ಧನಸ್ಧನುಧನುಸ್ಸು(ಸ್ + ಉ)
ಶಿರಸ್ಶಿರಶಿರಸ್ಸು(ಸ್ + ಉ)
ಯಶಸ್ಯಶಯಶಸ್ಸು(ಸ್ + ಉ)
ಮನಸ್ಮನಮನಸ್ಸು(ಸ್ + ಉ)
ತೇಜಸ್ತೇಜತೇಜಸ್ಸು(ಸ್ + ಉ)
ವಯಸ್ವಯವಯಸ್ಸು(ಸ್ + ಉ)
ಪಯಸ್ಪಯಪಯಸ್ಸು(ಸ್ + ಉ)
ಶ್ರೇಯಸ್ಶ್ರೇಯಶ್ರೇಯಸ್ಸು(ಸ್ + ಉ)
(v) ಕೆಲವು ಸಂಸ್ಕೃತದ ಪ್ರಥಮಾವಿಭಕ್ತ್ಯಂತ ಏಕವಚನಗಳು ತಮ್ಮ ಕೊನೆಯ ವ್ಯಂಜನದೊಡನೆ ಇನ್ನೊಂದು ಅದೇ ವ್ಯಂಜನ ಮತ್ತು ಉಕಾರ ಸೇರಿಸಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.
ಸಂಸ್ಕೃತದಲ್ಲಿ  ಪ್ರಥಮಾ  ಏಕವಚನದ ರೂಪವಿಕಾರಗೊಂಡ ರೂಪ
ಪ್ರತಿಪತ್ಪ್ರತಿಪತ್ತು
ಕ್ಷುತ್ಕ್ಷುತ್ತು
ಸಂಪತ್ಸಂಪತ್ತು
ವಿಯತ್ವಿಯತ್ತು
ವಿಪತ್ವಿಪತ್ತು
ದಿಕ್ದಿಕ್ಕು
ತ್ವಕ್ಕುತ್ವಕ್
ವಾಕ್ವಾಕ್ಕು
ಸಮಿತ್ಸಮಿತ್ತು
(vi) ಸಂಸ್ಕೃತದ ಪ್ರಥಮಾವಿಭಕ್ತಿಯ ಬಹುವಚನಾಂತವಾಗಿರುವ ಕೆಲವು ಪುಲ್ಲಿಂಗ ವ್ಯಂಜನಾಂತ ಶಬ್ದಗಳು ತಮ್ಮ ಕೊನೆಯ ವಿಸರ್ಗವನ್ನು ಲೋಪಮಾಡಿಕೊಂಡು ಕನ್ನಡದ ಪ್ರಕೃತಿಗಳಾಗುತ್ತವೆ.
ಪ್ರಥಮಾ ವಿಭಕ್ತಿ ಬಹುವಚನ ರೂಪವಿಕಾರ ರೂಪ
ವಿದ್ವಾಂಸಃ     -ವಿದ್ವಾಂಸ
ಹನುಮಂತಃ   -ಹನುಮಂತ
ಶ್ವಾನಃ        -ಶ್ವಾನ
ಭಗವಂತಃ    -ಭಗವಂತ
ಶ್ರೀಮಂತಃ    -ಶ್ರೀಮಂತ

(vii) ಸಂಸ್ಕೃತದ ಕೆಲವು ವ್ಯಂಜನಾಂತ ಶಬ್ದಗಳು ಆ ವ್ಯಂಜನದ ಮುಂದೆ, ಒಂದು ಅ ಕಾರದೊಡನೆ ಅಂದರೆ ಅಕಾರಾಂತಗಳಾಗಿ ಕನ್ನಡದ ಪ್ರಕೃತಿಗಳಾಗುತ್ತವೆ.
ವ್ಯಂಜನಾಂತ ಸಂಸ್ಕೃತ ಶಬ್ದವಿಕಾರಗೊಂಡ ರೂಪ
ದಿವ್ದಿವ
ಚತುರ್ಚತುರ
ಬುಧ್ಬುಧ
ಕುಕುಭ್ಕುಕುಭ
ವೇದವಿದ್ವೇದವಿದ
ಸಂಪದ್ಸಂಪದ
ಮರುತ್ಮರುತ
ಗುಣಭಾಜ್ಗುಣಭಾಜ
ಈ ಮೇಲೆ ಇದುವರೆಗೆ ಹೇಳಿದ ಸಂಸ್ಕೃತದಿಂದ ಕನ್ನಡಕ್ಕೆ ಬರುವ ಶಬ್ದಗಳು ಕೊನೆಯಲ್ಲಿ ಅಲ್ಪಸ್ವಲ್ಪ ವಿಕಾರಹೊಂದಿದ ಬಗೆಗೆ ಸ್ಥೂಲವಾಗಿ ತಿಳಿದಿದ್ದೀರಿ.  ಇವನ್ನು ಅಲ್ಪಸ್ವಲ್ಪ ವಿಕಾರವನ್ನು ಕೊನೆಯಲ್ಲಿ ಹೊಂದಿದ ತದ್ಭವ ಶಬ್ದಗಳೆಂದು ಹೇಳಬೇಕು (ಇವನ್ನು ಕೆಲವರು ಸಮಸಂಸ್ಕೃತ ಎಂದೂ ಹೇಳುವರೆಂದು ಹಿಂದೆ ತಿಳಿಸಿದೆ).
ಈಗ ಶಬ್ದದ ಮೊದಲು, ಮಧ್ಯದಲ್ಲಿಯೂ ಹೆಚ್ಚಾಗಿ ವಿಕಾರ ಹೊಂದಿದ ಅನೇಕ ಶಬ್ದಗಳ ಸ್ಥೂಲ ಪರಿಚಯ ಮಾಡಿಕೊಳ್ಳೋಣ.
(viii) ಸಂಸ್ಕೃತದಲ್ಲಿ ಶ, ಷ ಗಳನ್ನು ಹೊಂದಿರುವ ಶಬ್ದಗಳು ಕನ್ನಡದಲ್ಲಿ ಸಕಾರವಾಗಿರುವ, ಮತ್ತು ಯಕಾರಕ್ಕೆ ಜಕಾರ ಬಂದಿರುವ ತದ್ಭವ ಶಬ್ದಗಳು (ಕನ್ನಡ ಪ್ರಕೃತಿಗಳು) ಆಗುತ್ತವೆ.
ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಶಶಿಸಸಿಔಷಧಔಸದಯೋಧಜೋದ
ಶಂಕಾಸಂಕೆಶೇಷಾಸೇಸೆಯುದ್ಧಜುದ್ದ
ಶಾಂತಿಸಾಂತಿಮಷಿಮಸಿಯವಾಜವೆ
ಆಕಾಶ(i) ಆಗಸ
(ii) ಆಕಾಸ
ಪಾಷಾಣಪಾಸಾಣವಿದ್ಯಾಬಿಜ್ಜೆ
ಯಶಜಸವಂಧ್ಯಾಬಂಜೆ
ಶಿರಸಿರಯವನಿಕಾಜವನಿಕೆಧ್ಯಾನಜಾನ
ಕಲಶಕಳಸಯಮಜವಯತಿಜತಿ
ಶೂಲಸೂಲಕಾರ‍್ಯಕಜ್ಜಯಂತ್ರಜಂತ್ರ
ಶುಚಿಸುಚಿಯೌವನಜವ್ವನಯುಗಜುಗ
ಅಂಕುಶಅಂಕುಸಯಾತ್ರಾಜಾತ್ರೆಯುಗ್ಮಜುಗುಮ
ಶುಂಠಿಸುಂಟಿಯೋಗಿನ್ಜೋಗಿವಿದ್ಯಾಧರಬಿಜ್ಜೋದರ
ಪಶುಪಸುರಾಶಿರಾಸಿಉದ್ಯೋಗಉಜ್ಜುಗ
ಹರ್ಷಹರುಸಶಾಣಸಾಣೆಸಂಧ್ಯಾಸಂಜೆ
ವರ್ಷವರುಸಪರಶುಪರಸುದ್ಯೂತಜೂಜು
ಭಾಷಾಬಾಸೆದಿಶಾದೆಸೆ

ವೇಷವೇಸದಶಾದಸೆ

(ix) ವರ್ಗದ ಪ್ರಥಮಾಕ್ಷರಗಳಿಂದ ಕೂಡಿದ ಅನೇಕ ಸಂಸ್ಕೃತ ಶಬ್ದಗಳು ಅದೇ ವರ್ಗದ ಮೂರನೆಯ ವರ್ಣಗಳಾಗುತ್ತವೆ.  ಅವು ಇಂಥ ಸ್ಥಾನದಲ್ಲಿಯೇ ಇರಬೇಕೆಂಬ ನಿಯಮವಿಲ್ಲ.
ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಡಮರುಕಡಮರುಗಸೂಚಿಸೂಜಿಜಾತಿಜಾದಿ
ಆಕಾಶಆಗಸವಚಾಬಜೆವಸತಿಬಸದಿ
ದೀಪಿಕಾದೀವಿಗೆಕಟಕಕಡಗಚತುರಚದುರ
ಮಲ್ಲಿಕಾಮಲ್ಲಿಗೆಅಟವಿಅಡವಿಭೂತಿಬೂದಿ
ಪೈತೃಕಹೈತಿಗೆತಟತಡದೂತಿದೂದಿ
(x) ಸಂಸ್ಕೃತದಲ್ಲಿ ಮಹಾಪ್ರಾಣಾಕ್ಷರಗಳಿಂದ ಕೂಡಿದ ಅನೇಕ ಅಕ್ಷರಗಳು ಅಲ್ಪಪ್ರಾಣಗಳಾಗಿ ಕನ್ನಡ ಪ್ರಕೃತಿಗಳಾಗುತ್ತವೆ.
ಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪಸಂಸ್ಕೃತ ರೂಪವಿಕಾರ ರೂಪ
ಛಂದಚಂದಘಟಕಗಡಗೆಧನದನ
ಛಾಂದಸಚಾಂದಸಘೋಷಣಾಗೋಸಣೆಧೂಪದೂಪ
ಛವಿಚವಿಗೋಷ್ಠಿಗೊಟ್ಟಿನಿಧಾನನಿದಾನ
ಕಂಠಿಕಾಕಂಟಿಕೆಘೂಕಗೂಗೆಧೂಸರದೂಸರ
ಶುಂಠಿಸುಂಟಿಅರ್ಘಅಗ್ಗಧೂಳಿದೂಳಿ
ಫಾಲಪಾಲಝಟತಿಜಡಿತಿವಿಧಿಬಿದಿ
ಫಣಿಪಣಿಢಕ್ಕೆಡಕ್ಕೆಕುಸುಂಭಕುಸುಬೆ
ಘಂಟಾಗಂಟೆರೂಢಿರೂಡಿ

(xi) ಸಂಸ್ಕೃತದ ಕೆಲವು ಖಕಾರವುಳ್ಳ ಶಬ್ದಗಳು ಗಕಾರಗಳಾಗಿ ಛಕಾರದ ಒತ್ತಿನಿಂದ ಕೂಡಿದ ಅಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿ ಠಕಾರವು ಡಕಾರವಾಗಿ, ಛಕಾರವು ಸಕಾರವಾಗಿಯೂ, ಥಕಾರವು ದಕಾರವಾಗಿಯೂ ಮತ್ತು ಟಕಾರವಾಗಿಯೂ, ಹಕಾರವಾಗಿಯೂ ರೂಪಾಂತರ ಹೊಂದಿ ಕನ್ನಡ ಪ್ರಕೃತಿಗಳಾಗುತ್ತವೆ.
ಉದಾಹರಣೆಗಳು:
ಖಕಾರ ಗಕಾರವಾಗುವುದಕ್ಕೆಛಕಾರವು ಸಕಾರವಾಗಿರುವುದಕ್ಕೆಠಕಾರ ಡಕಾರವಾದುದಕ್ಕೆ
ಮುಖಮೊಗಛುರಿಕಾಸುರಿಗೆಕುಠಾರಕೊಡಲಿ
ವೈಶಾಖಬೇಸಗೆಛತ್ರಿಕಾಸತ್ತಿಗೆಮಠಮಡ

ಥಕಾರವು ದಕಾರವಾದುದಕ್ಕೆಥಕಾರವು  ಟಕಾರವಾದುದಕ್ಕೆಥಕಾರವು ಹಕಾರವಾದುದಕ್ಕೆ
ವೀಥಿಬೀದಿಗ್ರಂಥಿಗಂಟುಗಾಥೆಗಾಹೆ








ಛಕಾರದ ಒತ್ತಕ್ಷರವು ಅಲ್ಪಪ್ರಾಣದ ಒತ್ತಿನಿಂದ ಕೂಡಿದುದಕ್ಕೆ
ಇಚ್ಛಾಇಚ್ಚೆ






(xii) ಇನ್ನೂ ಅನೇಕ ವಿಕಾರ ರೂಪಗಳನ್ನು ಈ ಕೆಳಗೆ ಗಮನಿಸಿರಿ:-
ಸಂಸ್ಕೃತ  ರೂಪ
ವಿಕಾರ ರೂಪಸಂಸ್ಕೃತ  ರೂಪ
ವಿಕಾರ ರೂಪ
ಕಪಿಲೆ-ಕವಿಲೆಕುರುಂಟ-ಗೋರಟೆ
ತ್ರಿಪದಿ-ತಿವದಿಮಾನುಷ್ಯ-ಮಾನಸ
ಪಿಶುನ-ಹಿಸುಣಮರೀಚ-ಮೆಣಸು
ಪಿಪ್ಪಲಿ-ಹಿಪ್ಪಲಿಅನ್ಯಾಯ-ಅನ್ನೆಯ
ಪಾದುಕಾ-ಹಾವುಗೆಸಾಹಸ-ಸಾಸ
ಪರವಶ-ಹರವಸಗಹನ-ಗಾನ
ಕಬಳ-ಕವಳಕುಕ್ಕುಟ-ಕೋಳಿ
ಸಿಬಿಕಾ-ಸಿವಿಗೆನಿಷ್ಠಾ-ನಿಟ್ಟೆ
ವಶಾ-ಬಸೆಅಮೃತ-ಅಮರ್ದು
ವಂಚನಾ-ಬಂಚನೆಅಂಗುಷ್ಠ-ಉಂಗುಟ
ವಸಂತ-ಬಸಂತಪಿಷ್ಟ-ಹಿಟ್ಟು
ವೀಣಾ-ಬೀಣೆಇಷ್ಟಕಾ-ಇಟ್ಟಿಗೆ
ವೀರ-ಬೀರಕೂಷ್ಮಾಂಡ-ಕುಂಬಳ
ವಾಲ-ಬಾಲದಾಡಿಮ-ದಾಳಿಂಬೆ
ಶ್ರವಣ-ಸವಣತೃತೀಯಾ-ತದಿಗೆ
ಪ್ರಸರ-ಪಸರಚತುರ್ಥೀ-ಚೌತಿ
ಪತಿವ್ರತೆ-ಹದಿಬದೆವರ್ಧಮಾನ-ಬದ್ದವಣ (ಔಡಲ)
ವೇತ್ರ-ಬೆತ್ತ
ಸೂತ್ರಿಕಾ-ಸುತ್ತಿಗೆವಿನಾಯಕ-ಬೆನಕ
ವೃಷಭ-ಬಸವಸುರಪರ್ಣೀ-ಸುರಹೊನ್ನೆ
ವ್ಯಾಘ್ರ-ಬಗ್ಗಮರುವಕ-ಮರುಗ
ರಕ್ಷಾ-ರಕ್ಕೆಸರ್ವ-ಸಬ್ಬ
ಪಕ್ಷ-ಪಕ್ಕಶ್ರೀಖಂಡ-ಸಿರಿಕಂಡ
ಲಕ್ಷ-ಲಕ್ಕವೀರಶ್ರೀ-ಬೀರಸಿರಿ
ಅಕ್ಷರ-ಅಕ್ಕರಅಂದೋಲಿಕಾ-ಅಂದಣ
ಭಿಕ್ಷಾ-ಬಿಕ್ಕೆಬಾಹುವಲಯ-ಬಾಹುಬಳೆ
ಕ್ಷಪಣ-ಸವಣತ್ರಿಗುಣ-ತಿಗುಣ
ಕ್ಷಾರ-ಕಾರತ್ರಿವಳಿ-ತಿವಳಿ
ಯಮಳ-ಜವಳವಲ್ಲಿ-ಬಳ್ಳಿ
ಚರ್ಮ-ಸಮ್ಮವಸತಿ-ಬಸದಿ
ಚರ್ಮಕಾರ-ಸಮ್ಮಕಾರಶೀರ್ಷಕ-ಸೀಸಕ
ಶಿಲ್ಪಿಗ-ಚಿಪ್ಪಿಗವರ್ತಿ-ಬತ್ತಿ
ಶಷ್ಕುಲಿ-ಚಕ್ಕುಲಿಕರ್ತರಿ-ಕತ್ತರಿ
ಹಂಸ-ಅಂಚೆಶರ್ಕರಾ-ಸಕ್ಕರೆ
ತುಳಸಿ-ತೊಳಚಿಕರ್ಕಶ-ಕಕ್ಕಸ
ಕಾಂಸ್ಯ-ಕಂಚುರಾಕ್ಷಸ-ರಕ್ಕಸ
ನಿತ್ಯ-ನಿಚ್ಚಅರ್ಕ-ಎಕ್ಕ
ವಿಸ್ತಾರ-ಬಿತ್ತರದ್ರೋಣಿ-ದೋಣಿ
ವ್ಯವಸಾಯ-ಬೇಸಾಯಭ್ರಮರ-ಬವರ
ಶಯ್ಯಾ-ಸಜ್ಜೆಪ್ರಭಾ-ಹಬೆ
ಜಟಾ-ಜಡೆಪ್ರಣಿತೆ-ಹಣತೆ
ತೈಲಿಕ-ತೆಲ್ಲಿಗಪುಸ್ತಕ-ಹೊತ್ತಗೆ
ಇಳಾ-ಎಳೆಕುಸ್ತುಂಬರ-ಕೊತ್ತುಂಬರಿ
ಸ್ಪರ್ಶ-ಪರುಸಬ್ರಹ್ಮ-ಬೊಮ್ಮ
ಸ್ಪಟಿಕ-ಪಳಿಗೆರತ್ನ-ರನ್ನ
ಶ್ಮಶಾನ-ಮಸಣಪ್ರಜ್ವಲ-ಪಜ್ಜಳ
ತಾಂಬೂಲ-ತಂಬುಲಬಿಲ್ವಪತ್ರ-ಬೆಲ್ಲವತ್ತ
ಆರಾಮ-ಅರವೆಕನ್ಯಕಾ-ಕನ್ನಿಕೆ
ಬಂಧೂಕ-ಬಂದುಗೆಮೃತ್ಯು-ಮಿಳ್ತು
ಗೋಧೂಮ-ಗೋದುವೆಕಾವ್ಯ-ಕಬ್ಬ
ಬರ್ಭೂರ-ಬೊಬ್ಬುಳಿದಂಷ್ಟ್ರ-ದಾಡೆ
ಪ್ರಯಾಣ-ಪಯಣಕಹಳಾ-ಕಾಳೆ
ದ್ವಿತೀಯಾ-ಬಿದಿಗೆಋಷಿ-ರಿಸಿ
ಅಶೋಕ-ಅಸುಗೆಮೃಗ-ಮಿಗ
ಉದ್ಯೋಗ-ಉಜ್ಜುಗಭೃಂಗಾರ-ಬಿಂಗಾರ
ಸಂಜ್ಞಾ-ಸನ್ನೆಪ್ರಗ್ರಹ-ಹಗ್ಗ
ಯಜ್ಞಾ-ಜನ್ನಆಶ್ಚರ‍್ಯ-ಅಚ್ಚರಿ
ಕ್ರೌಂಚ-ಕೊಂಚೆಸ್ವರ್ಗ-ಸಗ್ಗ
ಸುಧಾ-ಸೊದೆಜ್ಯೋತಿಷ-ಜೋಯಿಸ
ಭುಜಂಗ-ಬೊಜಂಗಅಮಾವಾಸ್ಯಾ-ಅಮಾಸೆ
ಕೌಪೀನ-ಕೋವಣಧ್ವನಿ-ದನಿ
ಮಯೂರ-ಮೋರಜ್ವರ-ಜರ
ಗೂರ್ಜರ-ಗುಜ್ಜರಸರಸ್ವತಿ-ಸರಸತಿ
ಆರ‍್ಯ-ಅಜ್ಜವರ್ಧಕಿ-ಬಡಗಿ
ವ್ಯವಹಾರ-ಬೇಹಾರಕಾಷ್ಠ-ಕಡ್ಡಿ
ನಿಯಮ-ನೇಮಚತುರ್ದಂತ-ಚೌದಂತ
ಪತ್ತನ-ಪಟ್ಟಣದೃಷ್ಟಿ-ದಿಟ್ಟ
ಅತಸೀ-ಅಗಸೆದಿಶಾಬಲಿ-ದೆಸೆಬಲಿ
ತ್ವರಿತ-ತುರಿಹಏಕಶರ-ಎಕ್ಕಸರ
ಆಜ್ಞೆ-ಆಣೆಚತುಷ್ಕ-ಚೌಕ
ಶಾಣ-ಸಾಣೆಚತುರ್ವೇದಿ-ಚೌವೇದಿ
ಜೀರಿಕಾ-ಜೀರಿಗೆಸಹದೇವ-ಸಾದೇವ
ವಿಜ್ಞಾನ-ಬಿನ್ನಣಸಹವಾಸಿ-ಸಾವಾಸಿ
ಕಲಮಾ-ಕಳವೆಮಹಾಪಾತಕ-ಮಾಪಾತಕ
ಕಂಬಲ-ಕಂಬಳಿಪಂಜರಪಕ್ಷಿ-ಹಂಜರವಕ್ಕಿ
ಅರ್ಗಲ-ಅಗುಳಿದಿಶಾಬಲಿ-ದೆಸೆವಲಿ
ಕುದ್ದಾಲ-ಗುದ್ದಲಿರತ್ನಮಣಿ-ರನ್ನವಣಿ
ದ್ಯೂತ-ಜೂಜುಅಂತಃಪುರ-ಅಂತಪುರ
ಗ್ರಂಥಿ-ಗಂಟುಅಚ್ಚಮಲ್ಲಿಕಾ-ಅಚ್ಚಮಲ್ಲಿಗೆ
ಕುಕ್ಷಿ-ಕುಕ್ಕೆಅಕ್ಷರಮಾಲಾ-ಅಕ್ಕರಮಾಲೆ
ಚರ್ಮಪಟ್ಟಿಕಾ-ಚಮ್ಮಟಿಗೆಕ್ಷೀರಾಗಾರಾ-ಕೀಲಾರ
ದೇವಕುಲ-ದೇಗುಲಗೂಢಾಗಾರ-ಗೂಡಾರ
ದೀಪಾವಳಿಕಾ-ದೀವಳಿಗೆ ಉತ್ಸಾಹ -  ಉಚ್ಚಾಹ
ಹೀಗೆ ಅನೇಕ ಸಂಸ್ಕೃತ-ಪ್ರಾಕೃತ ಭಾಷಾಶಬ್ದಗಳು ಕನ್ನಡಕ್ಕೆ ಬರುವಾಗ ರೂಪಾಂತರ ಹೊಂದಿ ಬರುವುದನ್ನು ಇದುವರೆಗೆ ಸ್ಥೂಲವಾಗಿ ಹೇಳಲಾಗಿದೆ.
ಇದುವರೆಗೆ ಸಂಸ್ಕೃತದ ಅನೇಕ ಶಬ್ದಗಳು ರೂಪಾಂತರ ಹೊಂದಿ ಕನ್ನಡಕ್ಕೆ ಬಂದ ಬಗೆಗೆ ತಿಳಿದಿರುವಿರಿ.  ಕನ್ನಡದ ಅನೇಕ ಶಬ್ದಗಳು ಕಾಲಕಾಲಕ್ಕೆ ರೂಪಾಂತರ ಹೊಂದಿವೆ.
ಹಳೆಗನ್ನಡದ ಅನೇಕ ಶಬ್ದಗಳು ಈಗಿನ ಕನ್ನಡದಲ್ಲಿ (ಹೊಸಗನ್ನಡದಲ್ಲಿ) ರೂಪಾಂತರ ಹೊಂದಿ ಪ್ರಯೋಗವಾಗುತ್ತಿವೆ.  ಅವುಗಳ ಬಗೆಗೆ ಈಗ ಸ್ಥೂಲವಾಗಿ ಮುಖ್ಯವಾದ ಕೆಲವು ಅಂಶಗಳನ್ನು ನೀವು ಅವಶ್ಯ ತಿಳಿಯಬೇಕು.
() ಪಕಾರಾದಿಯಾದ ಅನೇಕ ಶಬ್ದಗಳು ಹಕಾರಾದಿಯಾಗುತ್ತವೆ.
ಹಳಗನ್ನಡ-ಹೊಸಗನ್ನಡಹಳಗನ್ನಡ-ಹೊಸಗನ್ನಡ
ಪಾಲ್-ಹಾಲುಪಂಬಲಿಸು-ಹಂಬಲಿಸು
ಪಾವ್-ಹಾವುಪಣೆ-ಹಣೆ
ಪಾಸು-ಹಾಸುಪರಡು-ಹರಡು
ಪರಿ-ಹರಿಪರದ-ಹರದ
ಪರ್ಬು-ಹಬ್ಬುಪಲವು-ಹಲವು
ಪೊರಳ್-ಹೊರಳುಪಲ್ಲಿಲಿ-ಹಲ್ಲಿಲ್ಲದ
ಪೊಳೆ-ಹೊಳೆಪಲ್ಲಿಲಿವಾಯ್-ಹಲ್ಲಿಲದ ಬಾಯಿ
ಪೊರೆ-ಹೊರೆಪವ್ವನೆ-ಹವ್ವನೆ
ಪೂ-ಹೂಪಳ್ಳ-ಹಳ್ಳ
ಪನಿ-ಹನಿಪಕ್ಕಿ-ಹಕ್ಕಿ
ಪಿಂಡು-ಹಿಂಡುಪಗೆ-ಹಗೆ
ಪತ್ತು-ಹತ್ತುಪೊರಮಡು
ಹೊರಹೊರಡು
ಪುಲಿ-ಹುಲಿಪೆರ್ಚು-ಹೆಚ್ಚು
ಪಣ್-ಹಣ್ಣುಪುಗು-ಹುಗು
ಪಂದೆ-ಹಂದೆಪೊಗು-ಹೊಗು
ಪಂದರ-ಹಂದರಪಿಂಗು-ಹಿಂಗು
ಪಗಲ್-ಹಗಲುಪಿಂತೆ-ಹಿಂದೆ
ಪಂದಿ-ಹಂದಿಪಳಿ-ಹಳಿ
ಪಂದೆ-ಹಂದೆಪೋಳ್-ಹೋಳು
ಪೊಸ-ಹೊಸಪಲ್ಲಿ-ಹಲ್ಲಿ
ಪೋಗು-ಹೋಗುಪಲ್-ಹಲ್ಲು
ಪರ್ಚು-ಹಂಚುಪಸಿ-ಹಸಿ
ಪರಸು-ಹರಸುಪಸುರ್-ಹಸುರು
ಪೀರ್-ಹೀರುಪಾಡು-ಹಾಡು
ಪುದುಗು-ಹುದುಗುಪುರ್ಬು-ಹುಬ್ಬು
ಪಿರಿಯ-ಹಿರಿಯಪರ್ಬು-ಹಬ್ಬು
ಪದುಳ-ಹದುಳಪೆರ್ಮೆ-ಹೆಮ್ಮೆ
ಪರ್ದು-ಹದ್ದುಪಿರಿದು-ಹಿರಿದು
ಪರ್ಬುಗೆ-ಹಬ್ಬುವಿಕೆ


ಮೇಲಿನ ಉದಾಹರಣೆಗಳಲ್ಲಿ ಕೆಲವು ಕಡೆ ಅಂತ್ಯದಲ್ಲಿರುವ ಲ್ ವ್ ಎಂಬ ವ್ಯಂಜನಾಂತ ಶಬ್ದಗಳು ಉಕಾರಾಂತಗಳಾಗಿರುವುದನ್ನು ಗಮನಿಸಿರಿ.  (ಉದಾ:- ಪಾಲ್-ಹಾಲು, ಪಾವ್-ಹಾವು__ಇತ್ಯಾದಿ)
ಈಗ ಕೊನೆಯ ವ್ಯಂಜನಗಳು ಯಾವ ಯಾವ ವ್ಯತ್ಯಾಸ ಹೊಂದುತ್ತವೆಂಬುದನ್ನು ತಿಳಿಯಿರಿ.
() , , , , ಳ ವ್ಯಂಜನಗಳು ಅಂತ್ಯದಲ್ಲಿ ಉಳ್ಳ ಕೆಲವು ಶಬ್ದಗಳು ಉಕಾರಾಂತಗಳಾಗುತ್ತವೆ. ಕೆಲವು ಇದೇ ಇನ್ನೊಂದು ವ್ಯಂಜನದಿಂದ ಕೂಡಿ ದ್ವಿತ್ವ (ಒತ್ತಕ್ಷರ) ಗಳೆನಿಸುತ್ತವೆ. ಯಕಾರಾಂತಗಳು ಇಕಾರಾಂತಗಳಾಗುತ್ತವೆ ಮತ್ತು ದ್ವಿತ್ವವುಳ್ಳ ವುಗಳಾಗುತ್ತವೆ.
ಉದಾಹರಣೆಗೆ:-
(i) ನಕಾರಾಂತವು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದೊಡನೆ ಉಕಾರಾಂತ ವಾಗುವುದಕ್ಕೆ:-
ನಾನ್-ನಾನುನೀನ್-ನೀನು
ಏನ್-ಏನುಅವನ್-ಅವನು
ಆನ್-ಆನುತಿನ್-ತಿನ್ನು
ಸೀನ್-ಸೀನುಪೊನ್-ಪೊನ್ನು (ಹೊನ್ನು)
ತಾನ್-ತಾನುಎನ್-ಎನ್ನು
(ii) ಣಕಾರಾಂತಗಳು ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವದಿಂದ ಕೂಡಿದ ಉಕಾರಾಂತಗಳಾಗುವುದಕ್ಕೆ:-
ಕಣ್-ಕಣ್ಣುಪುಣ್-ಹುಣ್ಣು
ಉಣ್-ಉಣ್ಣುಪಣ್-ಹಣ್ಣು
ಮಣ್-ಮಣ್ಣುಮಾಣ್-ಮಾಣು
ಪೆಣ್-ಹೆಣ್ಣುಕಾಣ್-ಕಾಣು
(iii) ಲಕಾರಂತ ಶಬ್ದಗಳು ದ್ವಿತ್ವದಿಂದ ಕೂಡಿ ಉಕಾರಾಂತವಾಗುವುದಕ್ಕೆ ಮತ್ತು ದ್ವಿತ್ವವಿಲ್ಲದೆ ಉಕಾರಾಂತಗಳಾಗುವುದಕ್ಕೆ
ಬಿಲ್-ಬಿಲ್ಲುಅರಲ್-ಅರಲುಸೊಲ್-ಸೊಲ್ಲು
ನಿಲ್-ನಿಲ್ಲುಸೋಲ್-ಸೋಲುಕಾಲ್-ಕಾಲು
ಕಲ್-ಕಲ್ಲುಒರಲ್-ಒರಲುಪಾಲ್-ಪಾಲು
ಪುಲ್-ಹುಲ್ಲುಜೋಲ್-ಜೋಲುಸಿಡಿಲ್-ಸಿಡಿಲು
ಕೊಲ್-ಕೊಲ್ಲುನೂಲ್-ನೂಲುಅರಿಲ್-ಅರಿಲು
ಮಡಿಲ್-ಮಡಿಲುಪೋಲ್-ಪೋಲುನರಲ್-ನರಲು
ಬಳಲ್-ಬಳಲುಚಲ್-ಚಲ್ಲು
(iv) ಳಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ ಮತ್ತು ಇನ್ನೊಂದು ಳಕಾರದೊಡನೆ ಉಕಾರಾಂತಗಳಾಗುವುದಕ್ಕೆ

ಮರಳ್-ಮರಳುಉಗುಳ್-ಉಗುಳುಉರುಳ್-ಉರುಳು
ಮರುಳ್-ಮರುಳುತಳ್-ತಳ್ಳುಪೊರಳ್-ಪೊರಳು
ಸೀಳ್-ಸೀಳುಮುಳ್-ಮುಳ್ಳುನುಸುಳ್-ನುಸುಳು
ತಾಳ್-ತಾಳುಜೊಳ್-ಜೊಳ್ಳುಕೂಳ್-ಕೂಳು
ಮುಸುಳ್-ಮುಸುಳುಪುರುಳ್-ಹುರುಳುಕೇಳ್-ಕೇಳು
ಒರಳ್-ಒರಳುಆಳ್-ಆಳುಪಾಳ್-ಹಾಳು
ಅರಳ್-ಅರಳುಬಗುಳ್-ಬಗುಳು
(ಬೊಗಳು)
ಕಳ್-ಕಳ್ಳು
ಬಾಳ್-ಬಾಳುಕೊಳ್-ಕೊಳ್ಳು
(v) ರಕಾರಾಂತಗಳಾದ ಶಬ್ದಗಳು ಉಕಾರಾಂತಗಳಾಗುವುದಕ್ಕೆ

ನಾರ್-ನಾರುಬಸಿರ್-ಬಸಿರು
ಕಾರ್-ಕಾರುತಳಿರ್-ತಳಿರು
ಸೋರ್-ಸೋರುಮೊಸರ್-ಮೊಸರು
ಸೇರ್-ಸೇರುಬೆಮರ್-ಬೆವರು (ಬೆಮರು)
ತೆಮರ್-ತೆವರುಉಸಿರ್-ಉಸಿರು

(vi) ಯಕಾರಾಂತ ಶಬ್ದಗಳು ಇಕಾರಾಂತ ಮತ್ತು ದ್ವಿತ್ವದಿಂದ ಕೂಡಿದ ಇಕಾರಾಂತ ಗಳಾಗುವುದಕ್ಕೆ

ತಾಯ್-ತಾಯಿಕಾಯ್-ಕಾಯಿಬಯ್-ಬಯ್ಯಿ
ನಾಯ್-ನಾಯಿಕಯ್-ಕಯ್ಯಿಪೊಯ್-ಪೊಯ್ಯಿ
ಸಾಯ್-ಸಾಯಿಮೆಯ್-ಮೆಯ್ಯಿನೆಯ್-ನೆಯ್ಯಿ
(vii) ಅನುಸ್ವಾರದಿಂದ ಕೂಡಿದ ಎಷ್ಟೋ ಶಬ್ದಗಳು ಅದಿಲ್ಲದೆ ಹೊಸಗನ್ನಡದಲ್ಲಿ ರೂಪಾಂತರವಾಗಿವೆ.
ತೋಂಟ-ತೋಟನೊರಂಜು-ನೊರಜುಸಿಡುಂಬು-ಸಿಡುಬು
ಕುಸುಂಬೆ-ಕುಸುಬೆತುಳುಂಕು-ತುಳುಕುಸೇಂದು-ಸೇದು
ಪೊಸಂತಿಲ್-ಹೊಸತಿಲುಬಣಂಜಿಗ-ಬಣಜಿಗಕರಂಡಗೆ-ಕರಡಗೆ
ಬಣಂಬೆ-ಬಣವೆತುರುಂಬು-ತುರುಬುಜಿನುಂಗು-ಜಿನುಗು
ಕೊಡಂತಿ-ಕೊಡತಿನಾಂದು-ನಾದುಮುಸುಂಕು-ಮುಸುಗು
ಕವುಂಕುಳ್-ಕಂಕುಳಪಲುಂಬು-ಹಲುಬುಸೆರೆಂಗು-ಸೆರಗು
ಒರಂತೆ-ಒರತೆಮೀಂಟು-ಮೀಟುಬೆಡಂಗು-ಬೆಡಗು
ತೋಂಟಿಗ-ತೋಟಿಗ

(viii) ಇನ್ನೂ ಕೆಲವು ರೂಪಾಂತರಗಳನ್ನು ನೋಡಿರಿ.
ಕಳ್ತೆ[1]-ಕರ್ತೆ-ಕತ್ತೆಎಳ್‌ನೆಯ್- ಎಣ್ಣೆ
ಗಳ್ದೆ-ಗರ್ದೆ-ಗದ್ದೆಬೆಳ್‌ನೆಯ್- ಬೆಣ್ಣೆ
ಪೊಳ್ತು­-ಪೊತ್ತು- ಹೊತ್ತುಕಾಣ್ಕೆ-ಕಾಣಿಕೆ
ಅಪ್ಪುದು- ಅಹುದು- ಹೌದುಪೂಣ್ಕೆ-ಪೂಣಿಕೆ (ಹೂಣಿಕೆ)
ತನತ್ತು-ತನ್ನತು- ತನ್ನಬಳಲ್ಕೆ-ಬಳಲಿಕೆ
ನಿನತ್ತು-ನಿನ್ನತು-ನಿನ್ನಒರ‍್ಮೆ-ಒಮ್ಮೆ
ಎನಿತ್ತು-ಎನಿತು, ಎಸುಟು-ಎಷ್ಟುನುರ್ಗು-ನುಗ್ಗು
ಅನಿತ್ತು- ಅನಿತು, ಅಸುಟು- ಅಷ್ಟುತರ್ಗು-ತಗ್ಗು
ಚುರ್ಚು- ಚುಚ್ಚುಗುರ್ದು-ಗುದ್ದು
ಕರ್ಚು-ಕಚ್ಚುಪರ್ದು-ಹದ್ದು
ಬಿರ್ದು- ಬಿದ್ದುತೋರ್ಪ-ತೋರುವ
ಉರ್ದು- ಉದ್ದುಕಾರ್ದ-ಕಾರಿದ
ಇರ್ಪ- ಇರುವಅಲ್ಲಂ-ಅಲ್ಲ
ಪೀರ್ದಂ­-ಹೀರಿದನುತಣ್ಣು-ತಂಪು
ಸೇರ್ದಂ-ಸೇರಿದನುತೆಳು- ತಿಳುವು
ಕರ್ಪು-ಕಪ್ಪುನೇರ್ಪು- ನೇರ
ಕೆರ್ಪು-ಕೆರಕಲ್ತು-ಕಲಿತು
ಬೆಳ್ಪು- ಬಿಳುಪು

[1] ಇಲ್ಲಿಯ ಳಕಾರವು ರಳಾಕ್ಷರವಾದರೂ ಹಾಗೆ ಬರೆದಿಲ್ಲ.  ರಳ ಮತ್ತು ಕುಳಗಳ ನಿಯಮವನ್ನಾಗಲಿ, ಶಕಟರೇಫ ನಿಯಮವನ್ನಾಗಲಿ ಎಲ್ಲಿಯೂ ಪಾಲಿಸಿಲ್ಲ.  ವಿದ್ಯಾರ್ಥಿಗಳ ದೃಷ್ಟಿಯಿಂದ ಅಷ್ಟೊಂದು ಸೂಕ್ಷ್ಮವಾಗಿ ವಿಚಾರ ಮಾಡದೆ ಸ್ಥೂಲವಾಗಿ ಹೇಳುವುದೇ ಮುಖ್ಯೋದ್ದೇಶ.


 ಮತ್ತಷ್ಟು ಉದಾಹರಣೆಗಳು
ಅರ್ಕ-ಅಕ್ಕ                             ಅಕ್ಷತೆಅಚ್ಚತೆ                      ಅಕ್ಷರಅಕ್ಕರ       
ಅಕ್ಷಯಅಚ್ಚಯ                     ಅರ್ಕಶಾಲೆಅಗಸಾಲೆ               ಅಂದುಕಅಂದುಗೆ
ಅರ್ಚಕಅಚ್ಚಿಗ                      ಅಂಬಾಅಮ್ಮ                       ಅಂಗರಕ್ಷಕ ಅಂಗರೇಕು
ಅಖಿಲಅಕಿಲ                        ಅರ್ಗಲಅಗುಳೆ                     ಅಕ್ಷೋಟಅಕ್ಕೋಟ
ಅಗ್ಗಿಷ್ಟಿಕೆಅಗ್ಗಿಟಿಕೆ                    ಅರ್ಘ್ಯಅಗ್ಗ                          ಅಂಗುಷ್ಟಅಂಗುಟ
ಅಂಶುಅಂಚು                       ಅಧ್ಯಕ್ಷಅದ್ದಿಕ                        ಅಕ್ಷಿಅಕ್ಕಿ
ಅಗಸ್ತಿಅಗಸೆ                        ಅಂಗಾರಇಂಗಳ                   ಅಬ್ದಿಅಬುದಿ
ಅಭಿಜ್ಞಾನಅಭಿಸಂಗ                ಅಭ್ಯಾಸಅಬ್ಬೆಸ                     ಅಭ್ಯುದಯಅಬ್ಯುದಯ
ಅಮಾವಾಸ್ಯೆಅಮಾಸೆ              ಅರೋಟಿಕಾಅರೋಸಿಗೆ            ಅಮೃತಅಮರ್ದು
ಅಮೆಲಾಅಮೇಲೆ                   ಅರ್ಮಅರಮ                       ಅಯೋಗ್ಯಅಯೋಗ
ಅಲಘುಅಲಗೆ                       ಅವಸರಓಸರ                      ಅವಸಾರಕಓಸರಿಗೆ
ಅರ್ಧಅದ್ದ                           ಅರ್ಹಅರುಹ                        ಅಲಕಾಅಳಕೆ
ಅವಸ್ಥಾಅವತೆ                      ಅಶನಿಅಸನಿ                        ಅಶ್ರದ್ಧಾಅಸಡ್ಡೆ
ಅಸ್ತರಣಅತ್ತರಣ                    ಅಸಹ್ಯಅಸಯ್ಯ                     ಅಸ್ಥಿಅಸ್ತಿ
ಅಸ್ತವ್ಯಸ್ತಅತ್ತಬೆತ್ತ                   ಅಷ್ಟಅಟ್ಟ                           ಅವ್ಯಾಪಾರಿನ್ಅಬ್ಬೇಪಾರಿ
ಅಲಘಅಲಗು                       ಅಸಾಧ್ಯಅಸದಳ                   ಅವಾಂತರಅವಾಂತ್ರ
ಅಭ್ರಕಅಂಬರಕ                    ಅಮೆಂಡಅವುಡಲ                  ಅಮರೀಅವರೀ
ಅರ್ಹಂತಅರಿಹಂತ                 ಅಶೋಕ - ಅಸುಗೆ
ಅರ್ಗಲಿಕಾ - ಅಗ್ಗಳಿಕೆ ಅಗ್ನಿ - ಅಗ್ಗಿ ಅಂತಃಪುರ - ಅಂತಪುರ
ಅತಸಿ - ಅಗಸೆ ಅಂಕುಶ - ಅಂಕುಸ ಅಗ್ರಿಗ - ಅಗ್ಗಿಗ
ಅರ್ಗಲ - ಅಗುಳಿ ಅಂದುಕ - ಅಂದುಗೆ ಅಂಕನ - ಅಂಗಣ(ಅಂಗಳ)
ಅರ್ಘ್ಯವಾಣಿ - ಅಗ್ಗವಣಿ ಅಪ್ಸರ - ಅಚ್ಚರ ಅಷ್ಟಮಿ - ಅಟ್ಟಮಿ
ಅಟವೀ - ಅಡವಿ ಅಜ್ಜುಕಾ - ಅಜ್ಜುಗೆ ಅಟ್ಟಹಾಸ - ಅಟ್ಟಾಸ
ಅಣಕು - ಅಣಕ ಅತ್ತಿಕಾ - ಅತ್ತಿಗೆ ಅಪರರಾತ್ರಿ- ಅತರಾತ್ರಿ
ಅಭಿಲಾಷಾ - ಅಭಿಲಾಷೆ ಅಬ್ಜಾನನೆ - ಅಬುಜಾನನೆ ಅಂಬಷ್ಠೆ - ಅಮಟೆ
ಅಲೇಖ - ಅಳಕ ಅವಗ್ರಾಹ - ಅವಗಾಹ


ಆಂದೋಲ - ಅಂದಲ ಆಯಾಸ - ಅಯಸ ಆಜ್ಞಾಪನೆ - ಅಪ್ಪಣೆ
ಆಚಾರ್ಯ - ಆಚಾರಿ ಆಕಾರ - ಆಗಾರ ಆತ್ಮ - ಆತುಮ
ಆದಿತ್ಯವಾರ - ಆಯ್ತಾರ ಆಜ್ಞಪ್ತಿ - ಅಣತಿ ಆರ್ತ - ಅರತ
ಆಯುಷ್ಯ - ಅಯಸ ಆರ್ಯ - ಅಜ್ಜ ಆಶ್ಚರ್ಯ - ಅಚ್ಚರಿ
ಆಲಸ್ಯ - ಅಳಸೆ ಆಶ್ರಯ - ಆಸರೆ ಆಶ್ವಯುಜ - ಅಶ್ವೀಜ
ಆವಲಕ - ಅಳಿಗೆ ಆರ್ದ್ರ - ಅರಿದು ಆಷಾಡ - ಆಸಾಡ (ಅಸಡ)
ಆರಾಮ - ಅರವೆ  ಆಕರ್ಷಣ - ಅಕುರಸಣ ಆಮ್ಲ - ಆಮ್ರ
ಆಕಾಶ - ಆಗಸ ಆಜ್ಞಾ - ಆಣೆ


ಇಷ್ಟಿಕಾ- ಇಟ್ಟಿಗೆ ಇಂದ್ರ - ಇಂದಿರ ಇಳಾ - ಇಳೆ
ಇಕ್ಷಾಲಿಕ - ಇಕ್ಕಳಿಗೆ ಇಂಗುದ - ಇಂಗಳ ಇಕ್ಕುಳಿಕೆ - ಇಕ್ವಾಲಿಕೆ
ಇಚ್ಛಾ - ಇಚ್ಚೆ



ಈಶ್ವರ - ಈಸರ ಈಶ - ಈಸ ಈಲಿಕಾ - ಈಳಿಗೆ
ಈಷೆ - ಈಜು



ಉಚ್ವಾಸ - ಉಸ್ವಾಸ ಉದ್ದೇಶ - ಉಗಡ ಉತ್ಸವ - ಉಕ್ಕೆವ
ಉತ್ಕುಣ - ಒಕ್ಕಣ ಉಡ್ಡಯಣ - ಉಡಾವಣೆ ಉಜ್ಜಯಿನಿ - ಉಜಿನಿ
ಉಜ್ವಲ - ಉಜ್ಜಳ ಉದ್ಘೋಷಣೆ - ಉಗ್ಗಡಣೆ ಉದ್ವೇಗ - ಉಬ್ಬೆಗ
ಉತ್ಕಟ - ಉಗ್ಗಟ ಉನ್ಮತ್ತ - ಉಮ್ಮತ್ತ ಉದ್ಧಿತ - ಉದ್ದಟ
ಉಚ್ಚಶೃಂಗಿ - ಉಚ್ಚಂಗಿ ಉತ್ಪಾತ - ಉತುಪಾದ ಉಪ್ಪರಿಕಾ - ಉಪ್ಪರಿಗೆ
ಉತ್ಪತ್ತಿ - ಉತುಪತಿ ಉದ್ದಹಣ - ಉಗ್ರಾಣ ಉಜಮ - ಉದ್ದಿಮೆ
ಉತ್ಪಲ - ಉಪ್ಪಡ ಉಷ್ಟ್ರ - ಒಂಟೆ ಉತ್ಸಾಹ - ಉಚ್ಚಾಹ


ಊನ - ಊಣ ಊರ್ಧ್ವಶ್ವಾಸ - ಉಬ್ಬಸ ಊರ್ಣ - ಉಣ್ಣೆ
ಊಹಾ - ಊಹೆ


ಏ-ಐ
ಏಕ - ಎಕ್ಕ ಏಕಪತ್ರ - ಎಕ್ಕಪತ್ರ ಏಕತ್ರ - ಏಕಟ
ಏಕಭಾಗ - ಎಕ್ಕಭಾಗ ಏಕಶಕ್ಯತಾ - ಎಕ್ಕಸಕ್ಕತನ ಏಕಸ್ವರ - ಎಕ್ಕಸರ
ಏಕಾವಳಿ - ಎಕ್ಕಾವಳಿ ಏಕಕ್ರ - ಏಕಟ ಐಶ್ವರ್ಯ - ಐಸಿರಿ
ಐರಾವತ - ಅಯಿರಾವತ ಐಹಿಕ - ಆಯಿಕ

ಓ-ಔ
ಓಲಿಕ - ಓಳಿಗ ಓಘ - ಓಗ ಔಷಧ - ಅವುಸದಿ
ಔದಾರ್ಯ - ಉದಾರ ಔದಾಸೀನ - ಉದಾಸೀನ ಔಶೀರ - ಔಶರ

390 ಕಾಮೆಂಟ್‌ಗಳು:

  1. Hi sir
    ರಾಮ,ಖಗ,ಪತಿ,ಸ್ತ್ರೀ, ಈ ಪದಗಳ ತತ್ಸಮ ತದ್ಭವ ಹೇಳಿ ಹೇಳಿ

    ಪ್ರತ್ಯುತ್ತರಅಳಿಸಿ
  2. ತ್ರಿಪದಿ ಎಂಬ ಹೆಸರು....ನಿಂದ ಬಂದಿದೆ

    ಪ್ರತ್ಯುತ್ತರಅಳಿಸಿ
  3. ನಮಸ್ಕಾರ ಸರ್,
    ಪ್ರಾಣ-ತತ್ಸಮ ತಿಳಿಸೀರಿ

    ಪ್ರತ್ಯುತ್ತರಅಳಿಸಿ
  4. ನರ್ತನ ಪದದ ತದ್ಭವ ಏನೆಂದು ದಯಮಾಡಿ ತಿಳಿಸಿ.

    ಪ್ರತ್ಯುತ್ತರಅಳಿಸಿ
  5. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  6. ಹೃದಯ ಮತ್ತು ಮಾಣಿಕ್ಯ ಪದಗಳ ತದ್ಭವ ರೂಪ ತಿಳಿಸಿ ಸರ್

    ಪ್ರತ್ಯುತ್ತರಅಳಿಸಿ
  7. ಘಟಿಕಾ ಪದದ ತದ್ಭವ ರೂಪ ತಿಳಿಸಿ 🙏🙏🙏

    ಪ್ರತ್ಯುತ್ತರಅಳಿಸಿ
  8. ಮೂಡಲ ತತ್ಸಮ ತದ್ಬವ ತಿಳಿಸಿ

    ಪ್ರತ್ಯುತ್ತರಅಳಿಸಿ
  9. ಸಂದೇಹ ಚೈತನ್ಯ ಪದಗಳಿಗೆ ತದ್ಭವ ರೂಪ ನೀಡಿ

    ಪ್ರತ್ಯುತ್ತರಅಳಿಸಿ
  10. ಸಂದೇಹ ಚೈತನ್ಯ ಪದಗಳಿಗೆ ತದ್ಭವ ರೂಪ ನೀಡಿ

    ಪ್ರತ್ಯುತ್ತರಅಳಿಸಿ
  11. ಹರೆಯ ಪದದ ತದ್ಭವ ರೂಪ
    ಸಂಸ್ಕೃತ ಪದದ ತದ್ಭವ ರೂಪ

    ಪ್ರತ್ಯುತ್ತರಅಳಿಸಿ
  12. ಆಗಿ ಮತ್ತು ಸಂಸ್ಕೃತ ತದ್ಭವ ರೂಪವನ್ನು ತಿಳಿಸಿ

    ಪ್ರತ್ಯುತ್ತರಅಳಿಸಿ
  13. ಜನ್ಮ ವಿಷ ಶ್ರೀ ಧ್ವನಿ ಇದರ ತದ್ಭವ ರೂಪ ತಿಳಿಸಿ

    ಪ್ರತ್ಯುತ್ತರಅಳಿಸಿ
  14. ಬಿತ್ತರ ಇದರ ತದ್ಬವ ರೂಪ ತಿಳಿಸಿ

    ಪ್ರತ್ಯುತ್ತರಅಳಿಸಿ
  15. ಜುದ್ದ ಪದದ ತತ್ಸಮ ರೂಪ ಯಾವುದು ಸರ್?

    ಪ್ರತ್ಯುತ್ತರಅಳಿಸಿ
  16. ಕಳೆಯ,ಚೌಗ ಪದದ ತತ್ಸಮ ತದ್ಭವ

    ಪ್ರತ್ಯುತ್ತರಅಳಿಸಿ