ನನ್ನ ಪುಟಗಳು

07 ಮಾರ್ಚ್ 2023

SSCL_Result_Analysis_Software

 ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ತಂತ್ರಾಂಶ (Version: 20240510)
[ಎಷ್ಟು ಅಂಕಗಳಿಗೆ ಬೇಕಾದರೂ ಇದೇ ತಂತ್ರಾಂಶದಲ್ಲಿ ವಿಶ್ಲೇಷಣೆ ಮಾಡಬಹುದು.
ಈ ಒಂದೇ ತಂತ್ರಾಂಶದಲ್ಲಿ 750 ವಿದ್ಯಾರ್ಥಿಗಳು, 4 ಮಾಧ್ಯಮಗಳು (ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು) ಹಾಗೂ 10 ವಿಭಾಗಗಳ (A - J) ಮಾಹಿತಿ ವಿಶ್ಲೇಷಣೆ ಮಾಡಬಹುದು.]
ಕೊನೆಯದಾಗಿ ನವೀಕರಿಸಿದ ದಿನಾಂಕ : 10-05-2024
ಈ ಕೆಳಗಿನ ವೀಡಿಯೋದಲ್ಲಿ ಈ ತಂತ್ರಾಂಶವನ್ನು ಬಳಸುವ ಕ್ರಮವನ್ನು ನೋಡಿರಿ.
**************
ಈ ಕೆಳಗಿನ ಸೂಚನೆಗಳನ್ನು ಓದಿ
HOME / ಮುಖಪುಟದಲ್ಲಿ ಈ ಕೆಳಗಿನ ಮಾಹಿತಿ ನಮೂದಿಸಿ.
* ಶಾಲೆಯ ಹೆಸರು &  ಮುಖ್ಯಶಿಕ್ಷಕರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ಪರೀಕ್ಷೆಯ ವರ್ಷ &  ಭಾಷಾ ವಿಷಯಗಳನ್ನು ನಮೂದಿಸಿ.
* ಆಂತರಿಕ ಅಂಕ ಇದೆಯೇ? (YES ಅಥವಾ NO ನಮೂದಿಸಿ) (ಖಾಲಿ ಬಿಡಬಾರದು)
* ಕಡ್ಡಾಯವಾಗಿ ಪ್ರತಿ ವಿಷಯದ ಗರಿಷ್ಠ ಅಂಕ ನಮೂದಿಸಿ.
HOME / ಮುಖಪುಟದಲ್ಲಿ ಈ ಕೆಳಗಿನ ಬಟನ್ ಕ್ಲಿಕ್ ಮಾಡಿ ಮಾಹಿತಿ ನಮೂದಿಸಿ.
1. ವಿದ್ಯಾರ್ಥಿಗಳ ಹೆಸರು ಹಾಗೂ ಲಿಂಗ & ಜಾತಿ ಸಂಕೇತಗಳನ್ನು ನಮೂದಿಸಿ.
(ಮುಖಪುಟದಲ್ಲಿರುವ "ವಿದ್ಯಾರ್ಥಿಗಳ ಹೆಸರು/ಲಿಂಗ/ಜಾತಿ ನಮೂದಿಸಲು ಇಲ್ಲಿ ಕ್ಲಿಕ್‌ಮಾಡಿ" ಎಂಬ ಬಟನ್ ಮೂಲಕ)
       ಸೂಚನೆ : ಇನ್ನು ಯಾವುದೇ ಪುಟದಲ್ಲಿ ವಿದ್ಯಾರ್ಥಿಗಳ ಮಾಹಿತಿ ನಮೂದಿಸಲು ಅವಕಾಶವಿಲ್ಲ)
2. ಎಲ್ಲಾ ವಿಷಯಗಳ ಲಿಖಿತ ಮತ್ತು ಆಂತರಿಕ ಅಂಕಗಳನ್ನು ನಮೂದಿಸಿ.
(ಮುಖಪುಟದಲ್ಲಿರುವ "ಪ್ರತಿ ವಿಷಯದ ಅಂಕಗಳನ್ನು ನಮೂದಿಸಿ/ತಿದ್ದುಪಡಿಮಾಡಿ" ಎಂಬ ಬಟನ್ ಮೂಲಕ)
    ಸೂಚನೆ:  ಅಂಕಗಳಲ್ಲಿ ಯಾವುದೇ ತಿದ್ದುಪಡಿ ಮಾಡಲು ಅದೇ ಬಟನ್ ಬಳಸಿ . ಅಲ್ಲಿ ನಮೂದಿಸಿದ ಅಂಕಗಳು ಸ್ವಯಂಚಾಲಿತವಾಗಿ ವಿಶ್ಲೇಷಣೆಗೆ ಬಳಕೆಯಾಗುತ್ತವೆ.(ಇನ್ನೆಲ್ಲೂ ಅಂಕಗಳನ್ನು ನಮೂದಿಸಲು ಅಥವಾ ತಿದ್ದುಪಡಿಮಾಡಲು ಅವಕಾಶವಿರುವುದಿಲ್ಲ)
3. ನಿಮಗೆ ಬೇಕಾದ ಮಾಧ್ಯಮ ಮತ್ತು ವಿಭಾಗದ ಮಾಹಿತಿ ನಮೂದು. (ಮೇಲಿನ ಎರಡು ಹಂತದ ಮಾಹಿತಿಗಳನ್ನು ನಮೂದಿಸಿದ ನಂತರ)
           ಮುಖಪುಟದಲ್ಲಿರುವ "(Print/Output Section)" ನಲ್ಲಿ  ನಿಮಗೆ ಬೇಕಾದ ಮಾಧ್ಯಮ ಮತ್ತು ವಿಭಾಗದ Code ನಮೂದಿಸಿದಾಗ ವಿಭಾಗ  ಹಾಗೂ ಮಾಧ್ಯಮದ ಮಾಹಿತಿ ಸಿದ್ಧವಾಗುತ್ತದೆ.
        ಸೂಚನೆ:  ಬೇರೆ ವಿಭಾಗ ಹಾಗೂ ಮಾಧ್ಯಮದ ಮಾಹಿತಿಯನ್ನು ಪಡೆಯಬೇಕಾದಲ್ಲಿ HOME ನಲ್ಲಿ Code ಬದಲಾಯಿಸಿ ಪಡೆಯಿರಿ.
ಇತರೆ ಸೂಚನೆಗಳು
* ಯಾವುದೇ ವಿಷಯದ ಪುಟದಿಂದ ಮುಖಪುಟಕ್ಕೆ ಹಿಂದಿರುಗಲು HOME, ವಿಷಯದ ಪುಟಕ್ಕೆ ಹಿಂದಿರುಗಲು BACK ಬಟನ್ ಕ್ಲಿಕ್‌ಮಾಡಿ.
* ಈ ತಂತ್ರಾಂಶವನ್ನು ಗರಿಷ್ಟ 750 ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲಾಗಿದೆ.
* ಈಗಾಗಲೇ ಉದಾಹರಣೆಗಾಗಿ ನಮೂದಿಸಿರುವ ಮಾಹಿತಿಯನ್ನು ಅಳಿಸಿ ನಂತರ ಮಾಹಿತಿ ನಮೂದಿಸಿ
* ನಿಮ್ಮ ಶಾಲೆಯ ವಿದ್ಯಾರ್ಥಿಗಳ ಹೆಸರು ಮತ್ತಿತರೆ ಮಾಹಿತಿ ನಮೂದಿಸುವ ಮೊದಲು ಎಷ್ಟು ವಿದ್ಯಾರ್ಥಿಗಳಿರುವರೋ ಅಷ್ಟು ಕ್ರಮಸಂಖ್ಯೆಯನ್ನು ನಮೂದಿಸಿ. (ಪ್ರತಿ ಕ್ರಮ ಸಂಖ್ಯೆ ನಮೂದಿಸಿದ ನಂತರ ಒಂದು ಹೊಸ ಸಾಲು ಸೃಷ್ಟಿಯಾಗುತ್ತದೆ.)
* ಯಾವುದೇ ನಮೂದನ್ನು ಯಾವುದೇ ಕಾರಣಕ್ಕೂ CUT-Paste ಮಾಡಬೇಡಿ.
* ಯಾವುದೇ ಪುಟಕ್ಕೆ ಭೇಟಿನೀಟಿದ ಕೂಡಲೇ ಪ್ರತಿ ಸಲ Refresh ಅನ್ನು ಕ್ಲಿಕ್ ಮಾಡಿ.
* ಮಾಹಿತಿ ನಮೂದಿಸುವಾಗ ಅಲ್ಲಿ ನೀಡಲಾಗಿರುವ ಸೂಚನೆಗಳನ್ನು ಗಮನವಿಟ್ಟು ಓದಿದ ನಂತರ ಮಾಹಿತಿ ನಮೂದಿಸಿ.
******ಮಹೇಶ ಎಸ್, ಕನ್ನಡ ದೀವಿಗೆ******

22 ಕಾಮೆಂಟ್‌ಗಳು:

  1. ನಿಮ್ಮ ಸೇವೆ ಹೀಗೆಯೇ ಮುಂದುವರಿಯಲಿ.
    ನಿಮ್ಮ ನಿಸ್ವಾರ್ಥ ಸೇವೆಗೆ ನಮನಗಳು

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ಆದರೆ ನಮಗೆ 50/40 ಅಂಕಗಳಿಗೆ ಒಂದು ಎಕ್ಸೆಲ್ ಶೀಟ್ ಸಿಕ್ಕಿದ್ದರೆ ಅನುಕೂಲವಾಗುತ್ತಿತ್ತು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಇದೇ ತಂತ್ರಾಂಶದಲ್ಲಿ ಎಷ್ಟು ಅಂಕಗಳಿಗೆ ಬೇಕಾದರೂ ವಿಶ್ಲೇಷಣೆ ಮಾಡಬಹುದು. ಡೌನ್‌ಲೋಡ್ ಮಾಡಿಕೊಳ್ಳಿ.
      -ಧನ್ಯವಾದಗಳು

      ಅಳಿಸಿ
  3. I m very glad to say that this is great job sir. But i m a private school. i need to fill the form in English. but its not aking.

    ಪ್ರತ್ಯುತ್ತರಅಳಿಸಿ
  4. Namasthe SSCL_Result_Analysis_Software ಅನ್ನು ಇಂಗ್ಲಿಷ್ ಮಾಧ್ಯಮದಲ್ಲಿ ತಯಾರುಮಾಡಿ‌ ತುಂಬಾ ಉಪಯೋಗವಾಗುತ್ತದೆ

    ಪ್ರತ್ಯುತ್ತರಅಳಿಸಿ
  5. Part A section ತುಂಬಾ ಚನ್ನಾಗಿದೆ ಸರ್. But Part B ಇದರ ಜೊತೆ ಸೇರಿಸಿದ್ರೆ ಅದ್ಭುತವಾದ software ಆಗುತ್ತದೆ ಸರ್

    ಪ್ರತ್ಯುತ್ತರಅಳಿಸಿ
  6. QWP ಕಂಡುಹಿಡಿಯುವ ಬಗ್ಗೆ ವಿವರಿಸಿ

    ಪ್ರತ್ಯುತ್ತರಅಳಿಸಿ
  7. ಮಹೇಶ್ ಸರ್, ಫಲಿತಾಂಶ ವಿಶ್ಲೇಷಣೆಗೆ ತುಂಬ ಸುಲಭವಾಗಿದೆ. ಶಿಕ್ಷಕರ ಪರಿಶ್ರಮ ಕಡಿಮೆಯಾಗಿದೆ. ನಿಮಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  8. ಸರ್ ತುಂಬಾ ಚನ್ನಾಗಿ ಇದೆ. ನನಗೆ ತುಂಬಾ ಉಪಯೋಗ ಆಗಿದೆ 🙏🏻

    ಪ್ರತ್ಯುತ್ತರಅಳಿಸಿ