ನನ್ನ ಪುಟಗಳು

26 ನವೆಂಬರ್ 2013

ಮಗ್ಗದ ಸಾಹೇಬ (ಗದ್ಯ-1)

*********************************************
ಲೇಖಕರು- ಬಾಗಲೋಡಿ ದೇವರಾಯ         << ಪರಿವಿಡಿಗೆ ಹಿಂದಿರುಗಿ
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿಯವರು. ಇವರ ಕಾಲ 1927.
ಇವರು ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ಆ ಕಾಲದಲ್ಲೆ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದೇಶಿ ಸೇವೆಗೆ ಆಯ್ಕೆಯಾದರು. ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. ಇವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರು. 
 ಇವರ ಪ್ರಮುಖ ಕಥಾ ಸಂಕಲನಗಳು:
'ಹುಚ್ಚುಮನಸಿನ  ಮುನಸೀಫ ಮತ್ತು ಇತರ ಕತೆಗಳು'
'ಆರಾಧನಾ'
'ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು' 
ಬಾಗಲೋಡಿ ದೇವರಾಯ ರವರ 'ಸಮಗ್ರ ಕತೆಗಳು' ಪುಸ್ತಕದ ಮುಖಪುಟ
'ಮಗ್ಗದ ಸಾಹೇಬ'  ಎಂಬ ಗದ್ಯವನ್ನು ಇವರು ಬರೆದಿರುವ 'ಸಮಗ್ರ ಕತೆಗಳು' ಎಂಬ ಕಥಾಸಂಕಲನದ 185 ರಿಂದ 189ನೇ ವರೆಗಿನ ಪುಟಗಳಿಂದ ಆರಿಸಿಕೊಳ್ಳಲಾಗಿದೆ.




ಬಾಗಲೋಡಿ ದೇವರಾಯ




















       ಸುಮಾರು ಕ್ರಿ.ಶ.1404 ರಲ್ಲಿ ದಪ್ಪ ನೂಲಿನಿಂದ ಹೊದಿಕೆಗಳಂತ ಬಟ್ಟೆಗಳನ್ನು ಹೆಣೆಯಲು ತಯಾರಿಸುವುದಕ್ಕಾಗಿ ಬಹಳ ಸರಳವಾದ ಕಯ ಮಗ್ಗವನ್ನು ಬಳಸುತ್ತಿದ್ದರು. ಇದು ಕಾಲಕಾಲಕ್ಕೆ ಅಭಿವೃದ್ಧಿ ಹೊಂದುತ್ತಾ ಸು.ಕ್ರಿ.ಶ.1838ರ ವೇಳೆಗಾಗಲೇ ಪೂರ್ಣ ಪ್ರಮಾಣದಲ್ಲಿ ನೇಯ್ಗೆಗೆ ಬಳಕೆಯಾಗತೊಡಗಿತು.
        ಪ್ರಪಂಚದಾದ್ಯಂತ ವಿವಿಧ ಮಾದರಿಯ ಕೈ ಮಗ್ಗಗಳನ್ನು ಬಳಸಿ ನೇಯ್ಗೆ ಮಾಡುತ್ತಿದ್ದರು. 



  

ಇಲ್ಲಿ ಮಗ್ಗದ ಬಗ್ಗೆ ವೀಡಿಯೋ ಡೌನ್ ಲೋಡ್ ಮಾಡಿಕೊಳ್ಳಿ

ಇದರ ವಿವಿಧ ಮಾದರಿಗಳು ಈ ಕೆಳಗಿನಂತಿವೆ..  << ಪರಿವಿಡಿಗೆ ಹಿಂದಿರುಗಿ
ಸರಳ ಮಗ್ಗದ ಯಂತ್ರ


                                     
1785ರಲ್ಲಿ ಕಂಡುಹಿಡಿಯಲಾದ ಮಗ್ಗದ ಯಂತ್ರ
ಕೈ ಮಗ್ಗದ ಯಂತ್ರವನ್ನು ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿಪಡಿಸುತ್ತಾ ಹೋದಂತೆ ಬೇಡಿಕೆಯೂ ಹೆಚ್ಚಾಗತೊಡಗಿತು. ಕೈ ಮಗ್ಗದಲ್ಲಿ ನಿಧಾನಗತಿಯಲ್ಲಿ ಬಟ್ಟೆಯನ್ನು ತಯಾರಿಸಿ ಪೂರೈಸುವುದು ಕಷ್ಟವಾಗತೊಡಗಿತು. ಆಗ ಯಂತ್ರ ಚಾಲಿತ ಮಗ್ಗವನ್ನು ಹುಟ್ಟುಹಾಕುವ ಯೋಚನೆಯನ್ನು ಮಾಡಿದ ಮೊದಲ ವ್ಯಕ್ತಿ ಎಡ್ಮಂಡ್ ಕಾರ್ಟ್ರೈಟ್ (Edmund Cartwright). ಈತನು 1785 ರಲ್ಲಿ ಉಗಿಯಂತ್ರದಿಂದ ಕಾರ್ಯನಿರ್ವಹಿಸುವ ಮಗ್ಗವನ್ನು ಅಭಿವೃದ್ಧಪಡಿಸಿದನು. ಅಲ್ಲದೆ ಈ ಯಂತ್ರದ ಮೂಲಕ ಬಟ್ಟೆ ತಯಾರಿಸುವ ಕಾರ್ಖಾನೆಯನ್ನು ಇಂಗ್ಲೆಂಡ್ ನ ಡಾನ್ಕ್ಯಾಸ್ಟರ್ (Doncaster) ಎಂಬಲ್ಲಿ ಸ್ಥಾಪಿಸಿದನು.
ಇಂಟರ್ನೆಟ್ ನಲ್ಲಿ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ (Click here)
       ಈ ಯಂತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಪ್ರಯತ್ನದ ಫಲವಾಗಿ ಅವನು 1797ರಲ್ಲಿ ಆಲ್ಕೋಹಾಲ್ ಬಳಸಿ ಕಾರ್ಯನಿರ್ವಹಿಸುವ ಸ್ಟೀಮ್ಇಂಜಿನ್ ಹಾಗೂ ಹಗ್ಗ ನೇಯುವ ಯಂತ್ರವನ್ನು ಕಂಡುಹಿಡಿದನು.
   ಮುಂದೆ ಅನೇಕ ವಿಜ್ಞಾನಿಗಳು ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸಿದರು. ಈ ನಿಟ್ಟಿನಲ್ಲಿ ವಿಲಿಯಂ ಹೊರೋಕ್ಸ್ (William Horrocks) 1813 ರಲ್ಲಿ ಅಭಿವೃದ್ಧಿಪಡಿಸಿದ ಯಂತ್ರ ಪ್ರಸಿದ್ಧಿಯಾಯಿತು. ಆನಂತರ ಯಂತ್ರದ ವೇಗವನ್ನು ಹೆಚ್ಚು-ಕಡಿಮೆ ಮಾಡುವ ಸಲುವಾಗಿ ಅಮೆರಿಕಾದ ಫ್ರಾನ್ಸಿಸ್ ಕ್ಯಾಬೋಟ್ ಲೋವೆಲ್ (Francis Cabot Lowell) ಕಂಡುಹಿಡಿದಿದ್ದ ಒತ್ತುಗುಂಡಿಯನ್ನು 1820ರಲ್ಲಿ ಅಳವಡಿಸಲಾಯಿತು. ಅಲ್ಲಿಂದ ಮುಂದೆ ಬಟ್ಟೆ ತಯಾರಿಕೆ ಯಂತ್ರದಲ್ಲಿ, ಉದ್ಯಮದಲ್ಲಿ, ವ್ಯಾಪಾರದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗಳಾದವು. 1896 ರಲ್ಲಿ ಜಪಾನಿನ ಸಕಿಚಿ ಟೊಯೊಡ ಎಂಬಾತನು ಸ್ವಯಂಚಾಲಿತ (Automatic) ಮಗ್ಗವನ್ನು ಕಂಡುಹಿಡಿದನು ಇದು ಮಗ್ಗದ ಇತಿಹಾಸದಲ್ಲಿ ಮತ್ತಷ್ಟು ಕ್ರಾಂತಿಯನ್ನುಂಟುಮಾಡಿತು.
        
      ಯಂತ್ರ ಚಾಲಿತ ಮಗ್ಗದಿಂದ ಬಹಳ ವೇಗವಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಮಾಣದ ಬಟ್ಟೆ ತಯಾರಿಸಲು ಸಾಧ್ಯವಾಯಿತು. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಬಟ್ಟೆಯನ್ನು ಮಾರಲು ಸಾಧ್ಯವಾಯಿತು. ಗ್ರಾಹಕನಿಗೆ ಹಾಗೂ ಯಂತ್ರಚಾಲಿತ ಮಗ್ಗದಿಂದ ಬಟ್ಟೆ ತಯಾರಿಸುವ ಕಾರ್ಖಾನೆಯ ಮಾಲೀಕರಿಗೆ ಸಂತೋಷವಾಯಿತು ನಿಜ ಆದರೆ ಕೈ ಮಗ್ಗದ ಮೇಲಾದ ಪರಿಣಾಮ ಬಹಳ ಘೋರವಾದುದು.
       ಕೈ ಮಗ್ಗದ ಬಟ್ಟೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೂ ಗ್ರಾಹಕರ ಗಮನ ಸೆಳಿದಿದ್ದು ಮಾತ್ರ ಅಗ್ಗದ ಬೆಲೆಯ ರಂಗುರಂಗಿನ ಯಂತ್ರಚಾಲಿತ ಮಗ್ಗದಿಂದ ತಯಾರಿಸಿದ ವಿಲಾಯಿತಿ ಬಟ್ಟೆಗಳು. ಯಂತ್ರ ಚಾಲಿತ ಮಗ್ಗದಿಂದ ಬಹಳ ವೇಗವಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಮಾಣದ ಬಟ್ಟೆ ತಯಾರಿಸಲು ಸಾಧ್ಯವಾಯಿತು. ಕೈಮಗ್ಗದಿಂದ ನೇಯ್ದ ಬಟ್ಟೆಗಳನ್ನು ಕೇಳುವವವರ ದಿಕ್ಕಿಲ್ಲವಾಯಿತು. ಕೈಮಗ್ಗವನ್ನು ನಂಬಿದ್ದ ಸಾವಿರಾರು ಕುಟುಂಬಗಳು ಬೀದಿಪಾಲಾದವು.
   ಭಾರತಕ್ಕೆ ವಿದೇಶೀಯರ ಜೊತೆಗೆ ಯಂತ್ರಚಾಲಿತ ಮಗ್ಗವೂ ಆಗಮಿಸಿತು. ಇಲ್ಲಿಯೂ ಕೈಮಗ್ಗದವರು ಭಿಕಾರಿಗಳಾದರು.

ಈ ಮಾಹಿತಿಯನ್ನು ಪ್ರಿಂಟ್ ಅಥವಾ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

15 ಕಾಮೆಂಟ್‌ಗಳು:

  1. ಅದ್ಭುತವಾದ ಕೆಲಸ.... ನನ್ನಂತಹ ಸಾವಿರಾರು ಶಿಕ್ಷಕರಿಗೆ ಮಾದರಿ....

    ಪ್ರತ್ಯುತ್ತರಅಳಿಸಿ
  2. ಮಾಹಿತಿ ಸಂಗ್ರಹಣೆ ತು೦ಬಾ ಚೆನ್ನಾಗಿದೆ. ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  3. ತುಂಬಾ ಉಪಯುಕ್ತ ಮಾಹಿತಿ ಇದೆ ಸರ್ ಮಕ್ಕಳ ವೀಕ್ಷಣೆಗೆ ಲಿಂಕ್ ಹೇಗೆ ಕಳಿಸೋದು ಸರ್...ದಯವಿಟ್ಟು ಲಿಂಕ್ ಇದ್ದರೆ 9916818040

    ಪ್ರತ್ಯುತ್ತರಅಳಿಸಿ
  4. ಸರ್ ನಿಜಕ್ಕೂ ಅತ್ಯದ್ಭುತವಾದ ಕಾರ್ಯ ನಿಮ್ಮದು. ಜ್ಞಾನವನ್ನು ಅರೆದು ನೋಡುವಂತೆ ವಿಷಯ ಪ್ರಸ್ತಾಪ ಇದೆ. ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  5. ಮಾಯಿತಿ ತುಂಬಾ ಸಹಾಯ ಆಗುತ್ತೆ sir ಧನ್ಯವಾದಗಳು ನಿಮಗೆ

    ಪ್ರತ್ಯುತ್ತರಅಳಿಸಿ
  6. ಶಿಕ್ಷಕರಿಗೆ ಅತಿ ಉತ್ತಮವಾದ ಸಂಪನ್ಮೂಲ ಸರ್

    ಪ್ರತ್ಯುತ್ತರಅಳಿಸಿ