ನನ್ನ ಪುಟಗಳು

18 ಜುಲೈ 2018

ನಾನಾರ್ಥಕಗಳು

ಒಂದು ಪದ ಒಂದಕ್ಕಿಂತ ಹೆಚ್ಚು ಅರ್ಥವನ್ನು ಕೊಡುವಂತಿದ್ದರೆ ಅದನ್ನು ನಾನಾರ್ಥಕ ಅಥವಾ ಭಿನ್ನಾರ್ಥಕ ಪದವೆಂದು ಕರೆಯುವರು. ಕೆಲವು ಪದಗಳು ನಾಮಪದವಾಗಿಯೂ ಕ್ರಿಯಾಪದವಾಗಿಯೂ ಬಳಕೆಯಾಗುವುದುಂಟು.

ಉದಾಹರಣೆಗೆ: ಅಂಬರ ಎಂಬ ಪದವು ಆಕಾಶ ಎಂದೂ ಬಟ್ಟೆ ಎಂದೂ ಅರ್ಥ ನೀಡುತ್ತದೆ.
                  ಬಟ್ಟೆ ಎಂಬ ಪದವು ವಸ್ತ್ರ ಮತ್ತು ದಾರಿ  ಎಂಬ ಬೇರೆ ಬೇರೆ ಅರ್ಥ ನೀಡುತ್ತದೆ.

                 "ಇಂತಹ ಪದಗಳನ್ನು 'ಶ್ಲೇಷೆ' ಎಂದೂ ಕರೆಯುತ್ತಾರೆ. ಈ ಕೆಳಗೆ ಕೆಲವು ನಾನಾರ್ಥಕ ಪದಗಳನ್ನು ಸಂಗ್ರಹಿಸಿ ನೀಡಲಾಗಿದೆ.

ಅಂಕ - ಗುರುತು, ತೊಡೆ, ನಾಟಕದ ವಿಭಾಗ, ಕಲೆ, ಯುದ್ಧ, ಬಿರುದು.
ಅಂಕಕಾರ - ಮುಂದಾಳು, ಯುದ್ಧವೀರ.
ಅಂಕನ - ಗುರುತು, ಎಣಿಸುವಿಕೆ.
ಅಂಕಿತ - ರುಜು, ವಶ.
ಅಂಕೆ - ವಶ, ಸಂಖ್ಯೆಯ ಗುರುತು.
ಅಂಗ - ಶರೀರದ ಭಾಗ, ರೀತಿ, ಕ್ರಮ.
ಅಂಗವಣೆ - ಶಕ್ತಿ, ಅಭಿಪ್ರಾಯ.
ಅಂಚಲ (ಅಂಚು) - ಸೆರಗು, ಗಡಿ.
ಅಂಚೆ  - ಟಪಾಲು, ಪಕ್ಷಿ.
ಅಂಜನ - ಕಾಡಿಗೆ, ರಾತ್ರಿ.
ಅಂಡೆ - ಪಾತ್ರೆ, ಆಶ್ರಯ.
ಅಂತ - ಕೊನೆ, ಒಳಗೆ.
ಅಂಶಕ - ಭಾಗ, ದಾಯಾದಿ.
ಅಕ್ಷ - ಗಾಲಿಯ ಅಚ್ಚು, ಪಗಡೆ, ರುದ್ರಾಕ್ಷ, ಜ್ಞಾನ, ಕಣ್ಣು.
ಅಕ್ಷರ - ನಾಶವಾಗದ, ನಿತ್ಯ, ವರ್ಣ, ಬ್ರಹ್ಮ, ಆತ್ಮ.
ಅಗ - ಪರ್ವತ, ಚಲಿಸದ, ಮರ, ಹಾವು.
ಅಗಿ - ಅಗೆ, ತಿನ್ನು, ನಡುಗು, ಆನಂದಿಸು.


ಅಂಬರ - ಬಟ್ಟೆ, ಆಕಾಶ
ಅಂಬು - ಬಾಣ, ನೀರು
ಅಂಜು - 

199 ಕಾಮೆಂಟ್‌ಗಳು:

  1. ಪ್ರತ್ಯುತ್ತರಗಳು
    1. ದಂಡ ಪದದ ಅರ್ಥ
      ಕೆಲಸಕ್ಕೆ ಬಾರದ, ತಪ್ಪು ಮಾಡಿದ್ದಕ್ಕೆ ಕಟ್ಟಿದ ಹಣ

      ಅಳಿಸಿ
  2. ಮದುವೆ ಶುಭ ಸಮಾರಂಭಗಳಲ್ಲಿ ಮಾಡುವ ಮೆರವಣಿಗೆ ಪದದ ಸಮಾನಾರ್ಥಕ ಪದ ಯಾವುದು? ಕೊನೆ ಅಕ್ಷರ ಗ ಆಗಿರಬೇಕು

    ಪ್ರತ್ಯುತ್ತರಅಳಿಸಿ
  3. ಸಜ್ಜನರ ಸಂಗವು ಹೆಜ್ಜೇನು ಸವಿದಂತೆ ಈ ನುಡಿಗೆ ಸರಿ

    ಪ್ರತ್ಯುತ್ತರಅಳಿಸಿ
  4. ಜೀವಸೆಲೆ
    ದಯವಿಟ್ಟು ಇದರ ಅರ್ಥ ತಿಳಿಸಿ
    ಮತ್ತು ನನಾರ್ತಕ ಪದವನ್ನ ಹೇಳಿ

    ಪ್ರತ್ಯುತ್ತರಅಳಿಸಿ
  5. ಕ್ರೂರ್ಯ:ನಿರ್ದಾಯತೆ::ಅಳುವಿಕೆ:? ಉತ್ತರವೇನು 😪

    ಪ್ರತ್ಯುತ್ತರಅಳಿಸಿ
  6. ಬಲ,ಭಾವ ಪದಗಳಿಗೆ ನಾನಾರ್ಥಗಳು ಕೊಡಿ ಬೇಗ

    ಪ್ರತ್ಯುತ್ತರಅಳಿಸಿ
  7. ಮದುವೆ ಸಮಾರಂಭದ ಮೆರವಣಿಗೆ ಸಮಾನಾರ್ಥಕ ಪದವನ್ನು ತಿಳಿಸಿ

    ಪ್ರತ್ಯುತ್ತರಅಳಿಸಿ
  8. ಚಿತ್ತ ಪದದ ನಾನಾಥ೯
    ಪೊಸಗಾರ ಪದದ ನಾನಾಥ೯
    ಮಸಕಮ್ ಪದದ ನಾನಾಥ೯
    ಕೃತಾ೦ತ ಪದದ ನಾನಾಥ೯

    ಪ್ರತ್ಯುತ್ತರಅಳಿಸಿ
  9. ಕೆಲವು ಪದಗಳ ಸಮಾನಾರ್ಥಕ ಮತ್ತು ಪರ್ಯಾಯ ಪದಗಳು ದೊರೆಯುತ್ತಿಲ್ಲ ಯಾವುದು ಪ್ರಯೋಜನವಿಲ್ಲ

    ಪ್ರತ್ಯುತ್ತರಅಳಿಸಿ
  10. ಕಂದ ಪದದ ನಾನರ್ಥ ಪದ ಮತ್ತು ಭಾವ ಪದದ ನಾನಾರ್ಥ ಪದ ದಯವಿಟ್ಟು ಉತ್ತರವನ್ನು ಬೇಗ ಕಳುಹಿಸಿ

    ಪ್ರತ್ಯುತ್ತರಅಳಿಸಿ
  11. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  12. ಮೆರವಣಿಗೆ ಯ ಪರ್ಯಾಯ ಪದಗಳು ಯಾವುವು?

    ಪ್ರತ್ಯುತ್ತರಅಳಿಸಿ
  13. ರಸಮಸ್ಸು ಮತ್ತು ರವಮಸ್ಸು ಪದಗಳ ಅರ್ಥ ತಿಳಿಸಿ.

    ಪ್ರತ್ಯುತ್ತರಅಳಿಸಿ