ಪುಟಗಳು

05 ಆಗಸ್ಟ್ 2018

ಬಾಲಕಾರ್ಮಿಕ ಪದ್ಧತಿ ನಿಷೇಧ

ಬಾಲದುಡಿಮೆಯನ್ನು ನಿಷೇಧಿಸಲು ಮಾರ್ಗಸೂಚಿಗಳು

  • ಬಾಲದುಡಿಮೆ (ನಿಷೇಧ ಮತ್ತು ನಿಯಂತ್ರಣ ವಿನಿಯಮ) ಅಧಿಸೂಚನೆ 1986 ರಂತೆ 15 ಉದ್ಯೋಗಗಳು ಮತ್ತು 57 ಸಂಸ್ಕರಣಾ ಉದ್ಯಮಗಳಲ್ಲಿ ಬಾಲದುಡಿಮೆಯನ್ನು ನಿಷೇಧ ಮಾಡಲಾಗಿದೆ. ಈ ವಿಷಯವಾಗಿ ಕಾರ್ಮಿಕ ಇಲಾಖೆಯು ಉದ್ಯೋಗ ನೀಡುವ ಎಲ್ಲರಿಗೂ ಹಾಗೂ ಉದ್ಯಮಿಗಳಾಗ ಬಯಸುವವರಿಗೆ ಬಿಗಿಯಾದ ಎಚ್ಚರಿಕೆ ನೀಡಬೇಕು. ಕ್ಷೇತ್ರವಾರು, ಚಲಿಸುವ ಕಾರ್ಮಿಕ ನ್ಯಾಯಾಲಯಗಳ ಮೂಲಕ ಇದನ್ನು ಒಂದು ಆಂದೋಲನದ ರೀತಿಯಲ್ಲಿ ಕೈಗೆತ್ತಿಕೊಳ್ಳಬೇಕು ಮತ್ತು ಈಗಾಗಲೇ ದಾಖಲಿಸಿರುವ ಪ್ರಕರಣಗಳನ್ನು ಸೂಕ್ತವಾಗಿ ಮುನ್ನಡೆಸಲು ಒಂದು ಕಾರ್ಯಯೋಜನೆಯನ್ನು ರೂಪಿಸಬೇಕು.
  • ಬಾಲ ನ್ಯಾಯಾಲಯ ಅಧಿನಿಯಮ 2006 ಒಂದು ಕಲ್ಯಾಣಕಾರಿ ಅಧಿನಿಯಮವಾಗಿದ್ದು ಇವನ್ನು ಅಲಕ್ಷಿತ ಬಾಲಾಪರಾಧಿಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಪುನರ್ವಸತಿಗಳನ್ನು ನೀಡಲು ಜಾರಿಗೊಳಿಸಿದ್ದು ಇದರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕರೂ ಸೇರುತ್ತಾರೆ.
  • ವಿಭಾಗ 2(d) (ia) ರಂತೆ, ’ದುಡಿಯುವ ಮಗು’, ’ರಕ್ಷಣೆ ಮತ್ತು ಪೋಷೆಯ ಅಗತ್ಯವಿರುವ ಒಂದು ಮಗು’ ವಿನ ಪರಿಭಾಷಯಲ್ಲಿ ಸೇರುತ್ತದೆ. ಜೆ.ಜೆ ಅಧಿನಿಯಮದ ವಿಭಾಗ 2(k) ದಲ್ಲಿ ’ಮಗು’ವನ್ನು ’ 18 ವರ್ಷಗಳನ್ನು ಪೂರೈಸದ ವ್ಯಕ್ತಿ’ ಎಂದು ಪರಿಭಾಷಿಸಲಾಗಿದೆ. ಇದರಿಂದಾಗಿ, 14 ವರ್ಷದವರೆಗಿನ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಳ್ಳುವುದನ್ನು ನಿಷೇಧಿಸುವ ಬಾಲದುಡಿಮೆ ಅಧಿನಿಯಮಕ್ಕಿಂತ ಈ ನಿಯಮದ ವ್ಯಾಪ್ತಿ ಹೆಚ್ಚಾಗಿದ್ದು 18 ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ರಕ್ಷಣೆ ಪೋಷಣೆ ನೀಡುವುದನ್ನು ಒಳಗೊಂಡಿದೆ. ಅಂದರೆ ಬಾಲದುಡಿಮೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗದ ಬಾಲದುಡಿಮೆ, ಜೆ.ಜೆ ಅಧಿನಿಯಮದಡಿ ನಿಷೇಧಕ್ಕೆ ಒಳಗಾಗಿದೆ.
  • ಜೀತಪದ್ಧತಿಯ ನಿಷೇಧ ಅಧಿನಿಯಮ 1976 ನ್ನು ಮಕ್ಕಳನ್ನು ದುಡಿಮೆಯೊಳಗೆ ತೊಡಗಿಸಿಕೊಳ್ಳುವ ಉದ್ದಿಮೆದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಬಳಸಲೇಬೇಕು. ಬಹಳಷ್ಟು ಮಕ್ಕಳನ್ನು ಒತ್ತೆಯಿಟ್ಟು ಅವರ ಕುಟುಂಬಗಳು ಮುಂಗಡ ಪಡೆದಿರುವ ಪ್ರಕರಣಗಳ್ನು ಗಮನಿಸಲಾಗಿದೆ. ಅಂತಹ ಮಕ್ಕಳು ಬಹುತೇಕವಾಗಿ ವಲಸಿಗರಾಗಿ ದುಡಿಯುತ್ತಿದ್ದಾರೆ. ಈ ಅಧಿನಿಯಮದ ಅಡಿಯಲ್ಲಿ ಬರುವ ಕಣ್ಗಾವಲು ಸಮಿತಿಗಳನ್ನು ಕ್ರಿಯಾಶೀಲಗೊಳಿಸಬೇಕಲ್ಲದೆ, ಕಂದಾಯ ಹಾಗೂ ಕಾರ್ಮಿಕ ಇಲಾಖೆಗಳು ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಈ ಅಧಿನಿಯಮದಡಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲು ವಯಸ್ಸಿನ ಯಾವುದೇ ನಿರ್ಬಂಧವಿಲ್ಲದಿರುವುದನ್ನು ಗುರುತಿಸಿಕೊಳ್ಳಬೇಕು ಮತ್ತು ಮುಂಗಡವಾಗಿ ಯಾವ ಸಾಲವನ್ನೂ ನೀಡಿಲ್ಲ ಎಂಬ ಪುರಾವೆಯನ್ನು ಒದಗಿಸುವ ಭಾರ ಉದ್ಯಮದಾರನದಾಗಿರುತ್ತದೆ.
  • ಜತೆಗೆ ಒಬ್ಬ ಗುತ್ತಿದೆದಾರನ ಮೂಲಕ ಬಾಲಕರನ್ನು ದುಡಿಮೆಗೆ ಹಚ್ಚಿರುವ ಪ್ರಕರಣಗಳಲ್ಲಿ ಪ್ರಧಾನ ಉದ್ದಿಮೆದಾರನನ್ನು ಬಾಲದುಡಿಮೆಯ ಗುತ್ತಿಗೆ (ನಿಷೇಧ ಮತ್ತು ನಿಯಂತ್ರಣ) ಅಧಿನಿಯಮ 1970 ರ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು. ಗುತ್ತಿಗೆದಾರರ ಮೂಲಕ ಮಕ್ಕಳನ್ನು ದುಡಿಮೆಗೆ ದೂಡುವ ಈ ಚಾಳಿಯು ಸಾಮಾನ್ಯವಾಗಿದ್ದು ಅನೇಕ ಉದ್ಯಮಿ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಈ ಮಾರ್ಗವನ್ನು ಅನುಸರಿಸುತ್ತವೆ. ಈ ಅಧಿನಿಯಮವು ’ಬದಲಿ ಹೊಣೆಗಾರಿಕೆಯ’ ನೀತಿಯನ್ನಾಧರಿಸುತ್ತವೆ ಮತ್ತು ಉದ್ಯಮ ಸಂಸ್ಥೆಗಳು ಮತ್ತು ಗುತ್ತಿದೆದಾರರನ್ನು ಬಾಲದುಡಿಮೆ ಕೈಗೊಳ್ಳದಂತೆ ನಿರ್ಬಂಧಿಸಲು ಈ ಅಧಿನಿಯಮವನ್ನು ಪರಿಣಾಮಕಾರಿಯಾಗಿ ಬಳಸಬಹುದು..

         ಈ ಮೇಲೆ ಹೇಳಿದ ಎಲ್ಲ ಅಧಿನಿಯಮಗಳನ್ನು ಒಟ್ಟಾಗಿ ಸೇರಿಸಿ ಗಮನಿಸಿದಾಗ ಬೇಸಾಯ ವೃತ್ತಿ ಮತ್ತು ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಒಳಗೊಂಡಂತೆ, ಕಾರ್ಮಿಕ ಬಲದಲ್ಲಿರುವ ಬಹುತೇಕ ಮಕ್ಕಳನ್ನು ಆವರಿಸುತ್ತವೆ ಮತ್ತು ಸಂಬಂಧಿಸಿದ ಉದ್ಯಮದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಇವುಗಳನ್ನು ಪ್ರತ್ಯೇಕವಾಗಿ ಅಥವಾ ಒಟ್ಟಾಗಿ ಬಳಸಲೇಬೇಕಾಗುತ್ತದೆ. ನಿಯಮಾವಳಿಗಳನ್ನು ಕಠಿಣವಾಗಿ ಜಾರಿಗೊಳಿಸುವುದೇ ಉದ್ಯಮದಾರರು ಅದರಿಂದ ವಿಮುಖರಾಗಲು ಕಾರಣವಾಗುವುದೆಂಬುದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಮಕ್ಕಳು ಅಗ್ಗದ ದುಡಿಮೆಗೆ ಲಭ್ಯರು ಮತ್ತು ಅವರನ್ನು ಹೆಚ್ಚು ಅವಧಿಯವರೆಗೆ ದುಡಿಸಿಕೊಳ್ಳಲು ಸಾಧ್ಯ ಎಂಬ ಅಂಶಗಳೇ ಬಾಲದುಡಿಮೆಗೆ ಕಾರಣವಾಗಿದೆ. ಇದು ಮಕ್ಕಳಿಗೆ ಉದ್ಯಮದಾರರು ಮಾಡುತ್ತಿರುವ ಉಪಕಾರವೇನೂ ಅಲ್ಲ. ಬದಲಿಗೆ ತಮ್ಮ ಖರ್ಚನ್ನು ಕಡಿಮೆ ಮಾಡಿಕೊಳ್ಳುವ ಒಂದು ಮಾರ್ಗ. ಇದಲ್ಲದೆ, ಸಾರ್ವಜನಿಕ ವಲಯದ ಎಲ್ಲ ಸಂಸ್ಥೆಗಳು, ಸರ್ಕಾರದ ಅಧೀನ ಸಂಸ್ಥೆಗಳು, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳು ತನ್ನೆಲ್ಲ ಸಿಬ್ಬಂದಿಗೆ ಮಕ್ಕಳನ್ನು ಮನೆ ಕೆಲಸಕ್ಕೆ ನೇಮಿಸದಂತೆ ಅಥವಾ ತಮ್ಮ ಕಾರ್ಯಸ್ಥಳದಲ್ಲಿ ಯಾವುದೇ ತರಹದಲ್ಲಿ ಬಾಲದುಡಿಮೆಯನ್ನು ಪ್ರೋತ್ಸಾಹಿಸದಂತೆ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಘೋಷಿಸ ಬೇಕು. ಮೇಲೆ ಹೇಳಿದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಅನುವಾಗುವಂತೆ ನಿರ್ದಿಷ್ಟ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಲು NCPCR ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ದೂರದರ್ಶನ ಕಾರ್ಯಕ್ರಮಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಭಾಗವಹಿಸುವ ಮಕ್ಕಳ ವಿಷಯಕ್ಕೆ ಸಂಬಂಧಿಸಿದ ಹಾಗೆ NCPCR ಗೆ ಒಂದು ಕಾರ್ಯಸಮೂಹವನ್ನು ನೇಮಕಮಾಡಿದೆ. ಹಿಂದಿನ ಬಾಲತಾರೆ ಸಚಿನ್ ಪಿಲಗಾಂವ್ ಕರ್ ಮತ್ತು ಜಾಹೀರಾತು ತಜ್ಞ ಪ್ರಲ್ಹಾದ ಕಕ್ಕರ್ ಅಲ್ಲದೆ ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಂದ ಪ್ರತಿನಿಧಿಗಳು ಈ ಕಾರ್ಯ ಸಮೂಹದಲ್ಲಿ ಸೇರಿದ್ದಾರೆ. ದೂರದರ್ಶನದ ಸರಣಿಗಳು, ರಿಯಾಲಿಟಿಷೋಗಳು ಮತ್ತು ಜಾಹೀರಾತುಗಳಲ್ಲಿ ಪಾಲ್ಗೊಳ್ಳುವ ಮಕ್ಕಳ ಹಕ್ಕುಗಳ ಆಬಾಧಿತ ಉಲ್ಲಂಘನೆಯನ್ನು ನಿಯಂತ್ರಿಸುವ ಅಗತ್ಯವನ್ನು ಈ ಸದಸ್ಯರು ಚರ್ಚಿಸಿದ್ದಾರೆ. NCPCR ನ ಸದಸ್ಯೆ ಸಂಧ್ಯಾ ಬಜಾಜ್ ಇಂತಹ ಮಕ್ಕಳ ಕಾರ್ಯಸ್ಥಿತಿಗಳನ್ನು ನಿಯಂತ್ರಿಸಲು ಮಾರ್ಗಸೂಚಿಕೆಗಳನ್ನು ಸಿದ್ಧಪಡಿಸಲು ಒಂದು ಪ್ರಸ್ತಾಪವನ್ನಿಟ್ಟಿದ್ದಾರೆ. ಎಲ್ಲ ದೂರದರ್ಶನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮಕ್ಕಳು ಪ್ರತೀ ದಿನ ಕೆಲಸಮಾಡಬೇಕಾದ ಒಟ್ಟು ಗಂಟೆಗಳು ಹಾಗೂ ಒಂದು ವರ್ಷದಲ್ಲಿ ಮಾಡಬಹುದಾದ ಒಟ್ಟು ಅವಧಿಯನ್ನು ನಿರ್ದಿಷ್ಟಗೊಳಿಸಬೇಕು. ಮಕ್ಕಳು ಮತ್ತವರ ಕುಟುಂಬಗಳು ದಾಖಲಿಸಿದ ದೂರುಗಳನ್ನು ನಿರ್ವಹಿಸಲು ಒಂದು ವ್ಯವಸ್ಥೆಯನ್ನು ಅಳವಡಿಸಲು ಸಹ ನಿರ್ಧರಿಸಲಾಯಿತು; ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ದೂರದರ್ಶನ ಚಾನೆಲ್ ಗಳು / ನಿರ್ಮಾಣ ಸಂಸ್ಥೆಗಳ ವಿರುದ್ಧ ಕ್ರಮಗಳನ್ನು ನಿರೂಪಿಸುವುದು; ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ ದೂರದರ್ಶನ ಕಾರ್ಯಕ್ರಮಗಳ ಆಯೋಜಕರು ಹಾಗೂ ಮಕ್ಕಳ ಪೋಷಕರ ಜವಾಬ್ದಾರಿಗಳನ್ನು ನಿರೂಪಿಸುವುದು: ಮಕ್ಕಳಿಗೆ ಸಂದಾಯವಾಗ ಬೇಕಾದ ಹಣಕ್ಕೆ ಸೂಕ್ತ ವ್ಯವಸ್ಥೆ – ಉದಾಹರಣೆಗೆ ಶೈಕ್ಷಣಿಕ ಬಾಂಡ್ ಗಳೂ/ ಸರ್ಟಿಫಿಕೇಟ್ ಗಳು ಮತ್ತು ಕೊನೆಯದಾಗಿ ಈ ಮಾರ್ಗಸೂಚಿಕೆಗಳ ಪರಿಷ್ಕರಣೆಗೆ ಒಂದು ವ್ಯವಸ್ಥೆ ರೂಪಿಸುವುದು. ಕಾರ್ಯಪಡೆಯು, ವಾರ್ತಾ ಮತ್ತು ಪ್ರಚಾರ ಇಲಾಖೆಯ ಅಧಿಕಾರಿಗಳನ್ನು ಮುಂದಿನ ಕ್ರಮಗಳಿಗಾಗಿ ಭೇಟಿಮಾಡುವರು.

ಬಾಲ ಕಾರ್ಮಿಕತೆ ನಿಷೇಧ

     ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಯುನಿಸೆಫ್ ಮತ್ತು ಐಎಲ್‌ಒ ಸಹಯೋಗದೊಂದಿಗೆ ಎಲ್ಲ ರೀತಿಯ ಬಾಲಕಾರ್ಮಿಕತೆಯನ್ನ್ನುನಿಷೇದಿಸಲು ಮತ್ತು ಪ್ರತಿ ಮಗುವೂ ಶಾಲೆಗೆ ಹೋಗುವುದನ್ನು ಖಾತ್ರಿ ಪಡಿಸಲು ರಾಜ್ಯ ಮಟ್ಟದ ಸಲಹಾ ಸಭೆಗಳ ಸರಣಿಗಳನ್ನು ನಡೆಸಲಿದೆ. ಹಕ್ಕು ಆಧಾರಿತ ದೃಷ್ಟಿಕೋನವನ್ನು ಅಳವಡಿಸಿಕೊಂಡು, ಬಾಲಕಾರ್ಮಿಕತೆಯ ಪೂರ್ಣ ನಿಷೇದ ಮತ್ತು ಔಪಚಾರಿಕ ಶಾಲೆಗಳಲ್ಲಿನ ಪೂರ್ಣಾವಧಿಯ ಶಿಕ್ಷಣದ ನಡುವಿನ ಬಿಡಿಸಿಕೊಳ್ಳಲಾಗದ ಬಂಧವನ್ನು ಎತ್ತಿ ಹಿಡಿದಿವೆ.
     ಅದು ಬಾಲ ಕಾರ್ಮಿಕತೆ ವ್ಯಾಖ್ಯೆಯಲ್ಲಿ ಬಾಲಕಾರ್ಮಿಕತೆ ಮತ್ತು ಮಕ್ಕಳ ಕೆಲಸ, ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಬಾಲಕಾರ್ಮಿಕತೆಯ ನಡುವೆ ಔಪಚಾರಿಕವಾಗಿ ವ್ಯತ್ಯಾಸ ಮಾಡದಿರುವ ಅಂಶವನ್ನು ಒತ್ತಿ ಹೇಳಿತು. ಅದು ಮಕ್ಕಳು ಮನೆಯಲ್ಲಿ ಮಾಡುವ ಕೆಲಸವನ್ನು, ಕೃಷಿ ಕೆಲಸವನ್ನು ಮತ್ತು ಅವರನ್ನು ಶಾಲೆಯಿಂದ ದೂರವಿಡುವ ಎಲ್ಲ ಚಟುವಟಿಕೆಗಳನ್ನು ಬಾಲ ಕಾರ್ಮಿಕತೆ ಎಂದೆ ಗುರುತಿಸಲು ಬಯಸಿತು. ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ (UNCRC) ದ ನಿರ್ಧಾರ ಮತ್ತು 18 ವರ್ಷದ ಒಳಗಿನ ಎಲ್ಲರೂ ಮಕ್ಕಳೇ ಎಂಬ ನಿರ್ಣಯಕ್ಕೆ ಅನುಗುಣವಾಗಿರಬೇಕು.
       ಈ ವರೆಗೆ ಜೈಪುರ, ಲಕ್ನೋ ಮತ್ತು ಬೆಂಗಳೂರುಗಳಲ್ಲಿ ಮೂರು ಸಮಾಲೋಚನೆಗಳನ್ನು ನಡೆಸಲಾಗಿದೆ. ದೇಶದ ಇತರ ಭಾಗಗಳಲ್ಲಿ ಇನ್ನೂ 9 ಸಮಾಲೋಚನೆಗಳನ್ನು ನಡೆಸಲಾಗುವುದು.ಅದರ ಅಂತಿಮ ಸಮಾವೇಶವು ಡಿಸೆಂಬರ್‌ ೧೧-೧೨ ರಂದು ನ್ಯಾಷನಲ್‌ ಫೋರಂ ನವದೆಹಲಿಯಲ್ಲಿ ಬಾಲ ಕಾರ್ಮಿಕತೆಯ ಮತ್ತು ಮಕ್ಕಳ ಶಿಕ್ಷಣದ ಹಕ್ಕಿನ ಸಾಧನೆಗಾಗಿ ನಡೆಸಲಾಗುವುದು.
      ಈ ವರೆಗೆ ನಡೆದ ಸಮಾಲೋಚನೆಗಳಲ್ಲಿ ಸರಕಾರೇತರ ಸಂಸ್ಥೆಗಳು ಮತ್ತು ಆಸಕ್ತ ನಾಗರೀಕ ಸಂಘಟನೆಗಳ ಪ್ರತಿನಿಧಿಗಳು, ಸಕ್ರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಬಾಲ ಕಾರ್ಮಿಕತೆಯನ್ನು ನಿಷೇದಿಸಲು ಮತ್ತು ಮಕ್ಕಳ ಶಿಕ್ಷಣ ಹಕ್ಕನ್ನು ನೈಜವಾಗಿಸಲು ಬಯಸಿದರು. ಮಕ್ಕಳೂ ತಾವು ಕಲ್ಲುಗಣಿಗಳಿಂದ, ಸೀರೆ ನೇಯವ ಮಗ್ಗಗಳಿಂದ ಮತ್ತು ಇತರ ಕಠಿನ ಪರಿಶ್ರಮ ಬಯಸುವ ಕೆಲಸಗಳಿಂದ ಹೊರಬಂದ ತರುವಾಯ ತಮಗೆ ದೊರಕಿದ ಅತಿ ಹೆಚ್ಚಿನ ಅವಕಾಶಗಳನ್ನು ಕುರಿತು ಮಾತನಾಡಿದರು. ಹೆತ್ತವರೂ ಕೂಡಾ ತಮ್ಮಮಕ್ಕಳಿಗೆ ದೊರೆತ ಅಪಾರ ಅವಕಾಶಗಳ ಬಗ್ಗೆ ಮಕ್ಕಳ ಅಭಿಪ್ರಾಯವನ್ನು ಅನುಮೋದಿಸಿದರು.. ವ್ಯಾಪಕವಾಗಿ ನಡೆಸಿದ ಸತತ ಸಾಮಾಜಿಕ ಕ್ರೋಢೀಕರಣದ ಪರಿಣಾಮವಾಗಿ ಬಾಲ ಕಾರ್ಮಿಕತೆಯನ್ನು ಭಾರತದಲ್ಲಿ ನಿಷೇದಿಸುವ ಅಭಿಯಾನವು ಮೊದಲಾಗಿದೆ. ಈ ಉಪಕ್ರಮಗಳು ಶಿಕ್ಷಣ ಕೇಂದ್ರಿಕೃತವಾಗಿರುವುದೆ ಮಕ್ಕಳನ್ನು ದುಡಿಮೆಯಿಂದ ದೂರವಿಡುವ ಅತಿ ಪರಿಣಾಮಕಾರಿ ತಂತ್ರವಾಗಿದೆ ಮತ್ತು ಇದು ಮಕ್ಕಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಶೋಷಿಸುವುದನ್ನು ನಿವಾರಿಸುವುದು. ಶಿಕ್ಷಣವು ಅನೇಕರಿಗೆ ದೌರ್ಜನ್ಯದಿಂದ ಬಿಡುಗಡೆ ಮಾಡಿ ಅವರಿಗೆ ಆತ್ಮಗೌರವವನ್ನು ನೀಡಿದೆ.
      2001 ರಲ್ಲಿ ನಡೆದ ಜನಗಣತಿಯ ಪ್ರಕಾರ ಐದು ವರ್ಷದ ಒಳಗಿನ 500,000 ಕ್ಕೂ ಹೆಚ್ಚು ಮಕ್ಕಳು ಮನೆಗೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡು ಬಂದಿದೆ. ಬಡಜನರಿಂದ ಬಂದ ಶಿಕ್ಷಣದ ಸಲುವಾಗಿನ ಅಭೂತ ಪೂರ್ವ ಬೇಡಿಕೆಯ ಹೊರತಾಗಿಯೂ, ಲಕ್ಷಾಂತರ ಮಕ್ಕಳು ಹೊಲಗದ್ದೆಗಳಲ್ಲಿ , ಸಿರಿವಂತರ ಮನೆಗಳಲ್ಲಿ, ಹೋಟೆಲುಗಳಲ್ಲಿ , ಖಾನಾವಳಿ ಮೊದಲಾದ ಕಡೆ ಕೆಲಸದಲ್ಲಿ ತೊಡಗಿದ್ದಾರೆ.
        ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಅಧ್ಯಕ್ಷರಾದ ಶಾಂತಾ ಸಿನ್ಹರ ಪ್ರಕಾರ ಮಕ್ಕಳು ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದಿಂದ ಮತ್ತು ದೇಶದಲ್ಲೆ ಇರುವ ವರ್ಗ ವ್ಯತ್ಯಾಸದಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಮಕ್ಕಳು ಅಭದ್ರತೆ ಮತ್ತು ಹತಾಶೆಯಿಂದ ತುಂಬಿ ತುಳುಕುವ ವಾತಾವರಣದಲ್ಲಿ ಬದುಕುವುದರಿಂದ ಕುಟುಂಬದ ಒಳಗೆ ಮತ್ತು ಹೊರಗೆ ದುರ್ಬಳಕೆಗೆ ಒಳಗಾಗುವ ವರದಿಗಳು ಹೆಚ್ಚುತ್ತಿವೆ. ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಶಾಲೆಯನ್ನು ಬಿಟ್ಟು ಕೆಲಸದಲ್ಲಿ ತೊಡಗಲು ಒತ್ತಡಕ್ಕೆ ಸಿಲುಕುವರು ಮತ್ತು ಅವರಿಗೆ ಬಿಡುವು ಅಥವ ಮನರಂಜನೆಗೆ ಸಮಯ ಇರುವುದೆ ಇಲ್ಲ. ಈ 

ಕೆಳಗೆ ಕಾಣಿಸಿದವು ಅರಿಯಲೆ ಬೇಕಾದ ಮೂರು ವಿಷಯಗಳಾಗಿವೆ..
  • ಶಾಲೆಬಿಟ್ಟ ಯಾವುದೆ ಮಗುವೂ ಬಾಲ ಕಾರ್ಮಿಕನೆ
  • ಎಲ್ಲ 18 ವರ್ಷದ ವರೆಗಿನ ಮಕ್ಕಳು ಪೂರ್ಣಾವಧಿ ಸಾಂಪ್ರದಾಯಿಕ ಶಾಲೆಗಳಿಗೆ ಹೋಗಬೇಕು.
  • ಎಲ್ಲ ಶಾಲೆಗಳೂ ಕೇಂದ್ರೀಯ ವಿದ್ಯಾಲಯಗಳ ಗುಣಮಟ್ಟದ ಹೊಂದಿರಬೇಕು.
  • ಬಾಲಕಾರ್ಮಿಕತೆಯನ್ನು ಸಂಪೂರ್ಣವಾಗಿ ನಿಷೇದಿಸಬೇಕು.




ಕೃಪೆ:- http://kn.vikaspedia.in

ಬಾಲ್ಯವಿವಾಹ ನಿಷೇಧ

ಬಾಲ್ಯ ವಿವಾಹ ನಿಷೇಧ ಕಾಯ್ದೆ

ಓದಲು ಈ ಕೆಳಗಿನ ಅಂಶಗಳನ್ನು ಆರಿಸಿ ....

 

ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು

ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಎಲ್ಲಾ ಮಕ್ಕಳಿಗೆ ಆರೈಕೆ ಮತ್ತು ಸುರಕ್ಷೆ:-
ಒಬ್ಬ ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿಯಾಗಿ ಬೆಳೆಯುವ ಹಕ್ಕು ಇದೆ. ಬಾಲ್ಯ ವಿವಾಹ ಈ ಎಲ್ಲಾ ಹಕ್ಕುಗಳನ್ನು ಅಸಹನೀಯವಾಗಿ ಉಲ್ಲಂಘಿಸುತ್ತದೆ.
ದೈಹಿಕ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು:-
  1. ವಯಸ್ಸಿಗೆ ಮೀರಿದ ಜವಾಬ್ದಾರಿ ಹೇರಿಸಿದಂತಾಗುತ್ತದೆ.
  2. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ.
  3. ವಿಕಲಾಂಗ ಮಕ್ಕಳ ಜನನವುಂಟಾಗುತ್ತದೆ.
  4. ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ.
  5. ಲೈಂಗಿಕ ಖಾಯಿಲೆಗಳಿಂದ ಹೆಚ್.ಐ,ವಿ./ಏಡ್ಸ್ ಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.
  6. ರಕ್ತ ಹೀನತೆ ಉಂಟಾಗುತ್ತದೆ ಹಾಗೂ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ ಇರುತ್ತದೆ.
  7. ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತದೆ.
  8. ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ.
  9. ಗರ್ಭಪಾತ ಹೆಚ್ಚಾಗುತ್ತದೆ.
  10. . ಗರ್ಭ ಚೀಲಕ್ಕೆ ಪೆಟ್ಟು ಬೀಳುತ್ತದೆ.
  11. ಮಾನಸಿಕ ದುಷ್ಪರಿಣಾಮಗಳು

  12. ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ.
  13. ಖಿನ್ನತೆ ಕಂಡು ಬರುತ್ತದೆ.
  14. ಭಯಭೀತ ವಾತಾವರಣ ಕಲ್ಪಸಿದಂತಾಗುತ್ತದೆ.
  15. ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವುದು.
ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಮತ್ತು ನಿಯಾಮವಳಿಗಳು 2008 ಅನುಷ್ಠಾನ:-
  1. ಈ ಕಾಯ್ದೆಯು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೇರಿ ಹೊರತು ಪಡಿಸಿ ಭಾರತದ ಎಲ್ಲಾ ನಾಗರೀಕರಿಗೆ ಅನ್ವಯಿಸುತ್ತದೆ.
  2. ಈ ಕಾಯ್ದೆಯಡಿ ಬಾಲ್ಯ ವಿವಾಹವು ಜಾಮೀನು ರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿರುತ್ತದೆ.

ಬಾಲ್ಯ ವಿವಾಹದಲ್ಲಿ ಈ ಕೆಳಗಿನವರು ತಪ್ಪಿತಸ್ಥರಾಗಿರುತ್ತಾರೆ




  • ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ.
  • ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ, ನೆರವೇರಿಸುವ ಮತ್ತು ಕುಮ್ಮಕ್ಕು ನೀಡುವ ಯಾವುದೇ ವ್ಯಕ್ತಿ/ಸಂಸ್ಥೆ.
  • ಮಗುವನ್ನು ಹೆತ್ತವರು/ಪೋಷಕರು/ಸಂರಕ್ಷಕರು.
  • ಮಗುವಿನ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ/ಸಂಸ್ಥೆಯ ನಿರ್ಲಕ್ಷ್ಯತೆಯಿಂದ ಬಾಲ್ಯ ವಿವಾಹವನ್ನು ತಡೆಯಲು ವಿಫಲರಾದವರು
  • ಬಾಲ್ಯ ವಿವಾಹದಲ್ಲಿ ಭಾಗವಹಿಸುವವರು/ಭಾಗವಹಿಸಿದವರು/ ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು.
    • ಬಾಲ್ಯ ವಿವಾಹ ಅಪರಾಧಕ್ಕೆ ನಿಗದಿಪಡಿಸಿದ ಶಿಕ್ಷೆ:-
    • ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ 1 ಲಕ್ಷ ರೂ. ವರೆಗೆ ದಂಡ ಅಥವಾ ಎರಡೂ
    • ಅಪರಾಧಿ ಮಹಿಳೆಯಾದಲ್ಲಿ ಜೈಲು ಶಿಕ್ಷೆ ವಿಧಿಸುವಂತಿಲ್ಲ

    ಬಾಲ್ಯ ವಿವಾಹ ಅನೂರ್ಜಿತ/ಅಸಿಂಧು/ಶೂನ್ಯವಾಗುವ ಸಂದರ್ಭಗಳು




  • ವಿವಾಹ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರಾಗಿದ್ದ ಯಾವುದೇ ಕರಾರು ಪಕ್ಷವು ಜಿಲ್ಲಾ ನ್ಯಾಯಾಲಯವನ್ನು ಅಸಿಂಧು ಆಜ್ಞೆಯ ಮೂಲಕ ರದ್ದುಪಡಿಸಬೇಕೆಂದು ಮನವಿ ಮಾಡಿಕೊಂಡಾಗ,(ಅಸಿಂಧು)    ಸೆಕ್ಷನ್-3.
  • ಕಾನೂನು ಬದ್ದ ಪೋಷಕರ ಬಳಿಯಿಂದ ಬಲವಂತವಾಗಿ ಒಯ್ಯಲ್ಪಟ್ಟಿರುತ್ತಾರೋ,
  • ಬಲವಂತದಿಂದ ಅಥವಾ ವಂಚನೆಯಿಂದ ಪ್ರೇರೇಪಿಸಲ್ಪಟ್ಟಿರುತ್ತಾರೋ,
  • ವಿವಾಹ ಉದ್ದೇಶದಿಂದ ಮಾರಾಟ, ವಿವಾಹದ ನಂತರ ಮಾರಾಟ (ಶೂನ್ಯ ಮತ್ತು ಅಸಿಂಧು)ಸೆಕ್ಷನ್-12.

  • ಸೆಕ್ಷನ್-13 ರಡಿಯಲ್ಲಿ ಹೊರಡಿಸಿದ ತಡೆಯಾಜ್ಞೆ ಉಲ್ಲಂಘಿಸಿ ನಡೆಸುವ ಬಾಲ್ಯ ವಿವಾಹ (ಪ್ರಾರಂಬದಿಂದಲೇ ಶೂನ್ಯ)ಸೆಕ್ಷನ್-

    ಬಾಲ್ಯ ವಿವಾಹದಲ್ಲಿ ಹೆಣ್ಣು ಮಗುವಿಗಿರುವ ಅವಕಾಶಗಳು




  • ಮದುವೆ ಸಮಯದಲ್ಲಿ ನೀಡಲಾದ ಹಣ, ಒಡವೆ ಮತ್ತಿತರ ಮೌಲ್ಯದ ವಸ್ತುಗಳನ್ನು ಪರಸ್ಪರ ಹಿಂದಿರುಗಿಸಲು ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-3(4)).
  • ಹುಡುಗಿ ಮರುಮದುವೆಯಾಗುವತನಕ ನಿರ್ವಹಣಾ ವೆಚ್ಚವನ್ನು ಗಂಡಿನ ಕಡೆಯವರು ನೀಡುವಂತೆ ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-4(1)).
  • ಒಂದು ಪಕ್ಷ ಹೆಣ್ಣು ಮಕ್ಕಳು ಪ್ರಕರಣವನ್ನು ದಾಖಲಿಸಿದ್ದರೆ, ಮರು ಮದುವೆಯಾಗುವ ತನಕ ಆಕೆಯ ವಾಸ್ತವ್ಯದ ಕುರಿತಂತೆ ಜಿಲ್ಲಾ ನ್ಯಾಯಾಲಯವು ಆದೇಶಿಸಬಹುದು. (ಸೆಕ್ಷನ್-4(4)).
  • ಬಾಲ್ಯ ವಿವಾಹದಿಂದ ಜನಿಸುವ ಮಗುವಿನ ನಿರ್ವಹಣಾ ವೆಚ್ಚ ನೀಡಲು ಆದೇಶ. (ಸೆಕ್ಷನ್-5(4)).

  • ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ಇರುವ ಅವಕಾಶಗಳು




  • ಬಾಲ್ಯ ವಿವಾಹಿತರಿಗೆ ಜನಿಸಿದ ಮಗು ನ್ಯಾಯಸಮ್ಮತ(ಔರಸ) ಎಂದು ಎಲ್ಲಾ ಸಂದರ್ಭಗಳಲ್ಲೂ ಪರಿಗಣಿಸಲ್ಪಡುತ್ತದೆ.ಸೆಕ್ಷನ್-(6)
  • ಜಿಲ್ಲಾ ನ್ಯಾಯಾಲಯವು ಮಗುವಿನ ಜವಾಬ್ದಾರಿ ಕುರಿತು ಆದೇಶ ಹೊರಡಿಸುವಾಗ ಮಗುವಿನ ಹಿತರಕ್ಷಣೆ ಮತ್ತು ಒಳಿತು ಪ್ರಧಾನ ಆಧ್ಯತೆಯಾಗಿರಬೇಕು. ಸೆಕ್ಷನ್-5(2).
  • ಮಗುವಿನ ಸುಪರ್ದಿ ಆಜ್ಞೆಯಲ್ಲಿ ಇನ್ನೊಂದು ಕಡೆಯವರು ಮಗುವನ್ನು ಭೆಟಿಯಾಗುವ ಅವಕಾಶ ನೀಡುವಂತಹ ನಿರ್ದೇಶನ ಒಳಗೊಂಡಿರಬೇಕು. ಸೆಕ್ಷನ್-5(3).
  • ಮದುವೆಯಾದ ವ್ಯಕ್ತಿ ಅಥವಾ ಆ ವ್ಯಕ್ತಿಯು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಅವರ ಪೋಷಕರು ಮಗುವಿನ ನಿರ್ವಹಣೆಯನ್ನು ಭರಿಸುವಂತೆ ಆದೇಶಿಸಬಹುದು. ಸೆಕ್ಷನ್-5(4).

  • ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು


    ಈ ಅಧಿನಿಯಮದ ಸೆಕ್ಷನ್ -16(1) ರನ್ವಯ ನೇಮಕವಾದ ಅಧಿಕಾರಿಗಳು:-
    ರಾಜ್ಯ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ನಿರ್ದೇಶಕರು, ಯೋಜನಾ ನಿರ್ದೇಶಕರು, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
    2. ಡೈರಕ್ಟರ್ ಜನರಲ್ ಆಫ್ ಪೋಲೀಸ್, ಇನ್ ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್.
    3. ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.
    4. ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ.
    5. ನಿರ್ದೇಶಕರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ.
    6. ಆಯುಕ್ತರು, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
    7. ಆಯುಕ್ತರು, ಕಾರ್ಮಿಕ ಇಲಾಖೆ.
    8. ಆಯುಕ್ತರು,  ಸಮಾಜ ಕಲ್ಯಾಣ ಇಲಾಖೆ.
    9. ನಿರ್ದೇಶಕರು, ಟ್ರೈಬಲ್ ವೆಲ್ ಫೇರ್ ಡಿಪಾರ್ಟಮೆಂಟ್.
    ಜಿಲ್ಲಾ ಮಟ್ಟದ  ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ಜಿಲ್ಲಾಧಿಕಾರಿಗಳು.
    2. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು.
    3. ಹಿರಿಯ ಮಕ್ಕಳ ಅಭಿವೃದ್ಧಿ  ಅಧಿಕಾರಿ, ಸ್ಪೆಷಲ್ ಜುವೆನೈಲ್ ಪೋಲೀಸ್ ಯೂನಿಟ್, ಪೋಲೀಸ್ ಇಲಾಖೆ.
    4. ಉಪ ನಿರ್ದೇಶಕರು, ನಿರೂಪಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
    5. ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.
    6. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ.
    7. ಜಿಲ್ಲಾ ಅಧಿಕಾರಿ, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
    8. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ.
    9. ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ.
    10. ಪ್ರಾಜೆಕ್ಟ್ ಡೆವಲಪ್ ಮೆಂಟ್ ಆಫೀಸರ್ ಟ್ರೈಬಲ್ ವೆಲ್ ಫೇರ್ ಡಿಪಾರ್ಟ ಮೆಂಟ್.
    11. ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

    ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ತಹಶಿಲ್ದಾರರು.
    2. ಕಾರ್ಮಿಕಾಧಿಕಾರಿಗಳು, ಕಾರ್ಮಿಕ ಇಲಾಖೆ
    3. ಕ್ಷೇತ್ರ ಶಿಕ್ಷಣಾಧಿಕಾರಿಗಳು
    4. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಂರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
    5. ತಾಲ್ಲೂಕು ವೈದ್ಯಾಧಿಕಾರಿ,  ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
    6. ಸರ್ಕಲ್ ಇನ್ ಸ್ಪೆಕ್ಟರ್, ಪೋಲೀಸ್ ಇಲಾಖೆ.
    7. ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ.
    8. ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ,
    9. ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ.
    ಗ್ರಾಮ ಪಂಚಾಯಿತಿ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಪೋಲೀಸ್ ಸಬ್ ಇನ್ ಸ್ಪೆಕ್ಟರ್.

    ಗ್ರಾಮ ಪಂಚಾಯಿತಿ ಮಟ್ಟದ/ನಗರ ಸಭೆ/ಪುರ ಸಭೆ  ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
    1. ಶಾಲಾ ಮುಖ್ಯೋಪಾಧ್ಯಾಯರು, ಕಂದಾಯ ನಿರೀಕ್ಷಕರು(ರೆವೆನ್ಯೂ ಇನ್ ಸ್ಪೆಕ್ಟರ್), ಹೆಲ್ತ್ ಇನ್ ಸ್ಪೆಕ್ಟರ್, ಕಾರ್ಮಿಕಾಧಿಕಾರಿ, ಗ್ರಾಮ ಲೆಕ್ಕಿಗರ, ಕಂದಾಯಾಧಿಕಾರಿಗಳು.

    ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ಪಾತ್ರ




  • ಬಾಲ್ಯ ವಿವಾಹದ ಮುನ್ನ ಪಾಲಕರಿಗೆ ಕಾಯ್ದೆ ಬಗ್ಗೆ ತಿಳುವಳಿಕೆ ನೀಡುವುದು.
  • ಸಾಮೂಹಿಕ ಮದುವೆ ಏರ್ಪಡಿಸುವವರು. ವಿವಾಹಕ್ಕೆ ಒಳಪಟ್ಟವರ ಅಗತ್ಯ ಮಾಹಿತಿಯುಳ್ಳ ವಹಿ ನಿರ್ವಹಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
  • ವಿವಿಧ ಕಾಯ್ದೆಯಡಿ ನೋಂದಣಿಯಾಗಿರುವ ಸಂಘ-ಸಂಸ್ಥೆಗಳ ಡೈರಿಕ್ಟರಿ ಹೊಂದಿರಬೇಕು.
  • ಬಾಲ್ಯ ವಿವಾಹ ನಡೆದ ಬಗ್ಗೆ ಪ್ರತಿ ತ್ರೈಮಾಸಿಕಕ್ಕೊಮ್ಮೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡುವುದು.
  • ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ನ್ಯಾಯಾಲಯದಿಂದ ಸೂಕ್ತ ಆದೇಶ  ಪಡೆಯಲು ಸಹಕರಿಸಬೇಕು.
  • ಬಾಲ್ಯ ವಿವಾಹವು ನಡೆಯಬಹುದೆಂದು ತಿಳಿದ ಸಮಯದಲ್ಲಿ ಅದನ್ನು ತಡೆಯಲು ಎಲ್ಲಾ ರೀತಿಯ ನೆರವನ್ನು ಒದಗಿಸುವುದು.
  • ಸಮುದಾಯಕ್ಕೆ ಬಾಲ್ಯ ವಿವಾಹ ಕಾಯ್ದೆಯಡಿ ಇರುವ ಅವಕಾಶಗಳ ಬಗ್ಗೆ ಹಾಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು.
  • ಕುಟುಂಬದ ಘನತೆ-ಗೌರವಕ್ಕೆ ಧಕ್ಕೆ ಬಾರದಂತೆ ಬಹಳ ಎಚ್ಚರಿಕೆಯಿಂದ ಕರ್ತವ್ಯವನ್ನು ನಿಭಾಯಿಸುವುದು.
  • ಬಾಲ್ಯ ವಿವಾಹವನ್ನು ತಡೆಗಟ್ಟುವುದು ಪ್ರಥಮ ಗುರಿಯಾಗಿರಬೇಕು. ಬೇರಾವುದೆ ದಾರಿ ಇಲ್ಲದಿದ್ದಾಗ ಮಾತ್ರ ಪ್ರಾಸಿಕ್ಯೂಷನ್ ಗೆ ಪ್ರಯತ್ನಿಸಬೇಕು.
  • ಬಾಲ್ಯ ವಿವಾಹ ನಿಷೇಧ ಅಧಿಕಾರಿಯು ಬಾಲ್ಯ ವಿವಾಹವನ್ನು ತಡೆಗಟ್ಟುವ ಸಲುವಾಗಿ ಸಮಾಜ ಸೇವಾ ದೃಷ್ಠಿಯಿಂದ ತನಗೆ ಸರಿ ಎನಿಸಿದ ಕ್ರಮವನ್ನು ವಹಿಸಬಹುದು. ಹೀಗೆ ಮಾಡುವಾಗ     ಸಮುದಾಯದ     ಗೌರವಾನ್ವಿತ ಸದಸ್ಯರ ಸಹಾಯವನ್ನು ಪಡೆಯಬಹುದು.
  • ಇದಲ್ಲದೆ ಸೆಕ್ಷನ್ 3, 4, 5 ಹಾಗೂ 13 ರ ಅಡಿಯಲ್ಲಿ ಆಜ್ಞೆ ಹೊರಡಿಸಲು ನ್ಯಾಯಾಲಯಕ್ಕೆ ಸಂವೇದನೆಯನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. (ಸೆಕ್ಷನ್-16(5)).
  • ಈ ಅಧಿನಿಯಮವನ್ನು ಅಥವಾ ಅದರಡಿಯಲ್ಲಿ ಮಾಡಿರುವ ನಿಯಮ/ಆದೇಶಗಳನ್ನು ಪಾಲಿಸುವ ಸದುದ್ದೇಶದಿಂದ ಮಾಡಿದ ಕೆಲಸಗಳನ್ನು ಆಧರಿಸಿ, ಬಾಲ್ಯ ವಿವಾಹ ನಿಷೇಧಾಧಿಕಾರಿಯ ಮೇಲೆ  ಯಾವುದೇ ಮೊಕದ್ದಮೆಯಾಗಲೀ/ಕಟ್ಟಳೆಯಾಗಲೀ/ಕಾನೂನು ಕ್ರಮವನ್ನಾಗಲೀ ಜರುಗಿಸುವಂತಿಲ್ಲ. (ಸೆಕ್ಷನ್-18).
  • ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕರ್ನಾಟಕ ಉಚ್ಛನ್ಯಾಯಲಯವು ರಿಟ್ ಅರ್ಜಿ ಸಂಖ್ಯೆ:1154/2006 ರಲ್ಲಿ ನೀಡಿದ ನಿರ್ದೇಶನದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಮೂರ್ತಿಗಳಾದ ಜಸ್ಟೀಸ್ ಶಿವರಾಜ್ .ವಿ.ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿಯನ್ನು ರಚಿಸಿದ್ದು, ಸದರಿ ಕೋರ್ ಕಮಿಟಿಯು ದಿನಾಂಕ:30-06-2011 ರಂದು ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ, ಸದರಿ ವರದಿಯಲ್ಲಿನ ಶಿಫಾರಸ್ಸುಗಳನ್ವಯ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.
    1. ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ:ಮಮಇ 501 ಎಸ್ ಜೆಡಿ 2011 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ    ನಿರ್ದೇಶನಾಲಯದಲ್ಲಿ 1 ಉಪ    ನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ    ಕೋಶವನ್ನು ಸ್ಥಾಪಿಸಲಾಗಿದೆ.
    2. ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅನುಷ್ಠಾನಕ್ಕಾಗಿ 2012-13ನೇ ಸಾಲಿನಲ್ಲಿ ರೂ.150.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೂ.110.62 ಲಕ್ಷಗಳನ್ನು ಇದುವರೆಗೆ ವಿವಿಧ    ಕಾರ್ಯಕ್ರಮಗಳಿಗಾಗಿ ವೆಚ್ಚ    ಮಾಡಲಾಗಿದೆ.
    3. ಬಾಲ್ಯ ವಿವಾಹ ನಿಷೇಧ ಕುರಿತಂತೆ ಆಕಾಶವಾಣಿಯಲ್ಲಿ "ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ" ಎಂಬ ಸರಣಿ ಕಾರ್ಯಕ್ರಮವನ್ನು ಪ್ರತಿ ಶುಕ್ರವಾರ ಬೆಳಿಗ್ಗೆ 7-15 ನಿಮಿಷದಿಂದ 7-30 ರವರೆಗೆ ಹಾಗೂ    ಎಫ್.ಎಂ.ರೈನ್    ಬೋದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 8-45 ರಿಂದ 9-00 ರವರೆಗೆ ಪ್ರಸಾರ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರೂ.10,80,517/- ಗಳನ್ನು ಬಿಡುಗಡೆ ಮಾಡಲಾಗಿದೆ.
    4. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ ಕಾರ್ಯಕ್ರಮದಲ್ಲಿ ಪ್ರತಿವಾರ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶೋತೃಗಳಿಗೆ ರೂ.500/- ರಂತೆ ಬಹುಮಾನ  ನೀಡಲಾಗುತ್ತಿದೆ.
    5. 01-04-2012 ರಿಂದ 31-03-2013 ರವರೆಗೆ 147 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ.
    6. 17 ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೀದಿ ನಾಟಕ, ಕಲಾ ಜಾಥಾ ಮತ್ತು ಸೈಕಲ್  ಜಾಥಾಗಳ ಮೂಲಕ ಹಮ್ಮಿಕೊಂಡು ಯಶಸ್ವಿಯಾಗಿ  ನಡೆಸಲಾಗಿದೆ. ಈ    ಕಾರ್ಯಕ್ರಮಕ್ಕಾಗಿ ರೂ.7,14,000/- ಗಳನ್ನು ಬಿಡುಗಡೆ ಮಾಡಲಾಗಿದೆ.
    7. ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ  ಬಾಲ್ಯ ವಿವಾಹದ ದುಷ್ಪರಿಣಾಮಗಳು ಮತ್ತು ಶಿಕ್ಷೆಗಳು ಕುರಿತು ಗೋಡೆ ಬರಹಗಳನ್ನು ರಾಜ್ಯಾದ್ಯಂತ ಬರೆಯಿಸಲಾಗಿದೆ. ಅನುದಾನ ರೂ.10,75,000/- ಬಿಡುಗಡೆ    ಮಾಡಲಾಗಿದೆ.
    8. ಕೋರ್ ಕಮಿಟಿಯ ವರದಿಯನ್ನು ಕನ್ನಡದಲ್ಲಿ ಭಾಷಾಂತರಿಸಲು ರೂ. 1,15,000/- ವೆಚ್ಚ ಮಾಡಲಾಗಿದೆ. 10,000 ಪ್ರತಿಗಳನ್ನು ಮುದ್ರಿಸಲಾಗಿದೆ. ರೂ. 7,94,885/- ಗಳನ್ನು ವೆಚ್ಚ ಮಾಡಲಾಗಿದೆ.
    9. ಶಾಲಾ/ಕಾಲೇಜುಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲೆಗಳಲ್ಲಿ ಮತ್ತು  ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ರೂ.17,04,900/- ಬಿಡುಗಡೆ        ಮಾಡಲಾಗಿದೆ.
    10. ಬಾಲ್ಯ ವಿವಾಹ ನಿಷೇಧ ಕುರಿತು ಬ್ರೋಷರ್ಗಳು, ಏಫ್ಎಕ್ಯೂಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.
    11. ಬಾಲ್ಯ ವಿವಾಹ ನಿಷೇಧ ಕುರಿತು ಸ್ಟಿಕ್ಕರ್ ಗಳ ಮುದ್ರಣಕ್ಕಾಗಿ ರೂ.30,29,920/-ಗಳನ್ನು ಬಿಡುಗಡೆ ಮಾಡಲಾಗಿದೆ.
    12. 30 ಜಿಲ್ಲೆಗಳ  ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ.
    13. ಯೂನಿಸೆಫ್ ವತಿಯಿಂದ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಲು 5 ಬಗೆಯ ಪೋಸ್ಟರ್ ಗಳನ್ನು ಮುದ್ರಸಿ, ಜಿಲ್ಲೆಗಳಿಗೆ ವಿತರಿಸಲಾಗಿದೆ.
    14. ಜಿಲ್ಲೆಗಳ ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ತರಬೇತಿಗಳನ್ನು ನಡೆಸಲು ರೂ.2.69 ಲಕ್ಷ ವೆಚ್ಚ ಮಾಡಲಾಗಿದೆ. ಉಳಿದ  ಜಿಲ್ಲೆಗಳಿಗೆ ತರಬೇತಿ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
    15. ಬಾಲ್ಯ ವಿವಾಹ ನಿಷೇಧ ಕುರಿತು ಕಮಲಿ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದು, ಇದಕ್ಕಾಗಿ ರೂ.1.50 ಲಕ್ಷ ವೆಚ್ಚ ಮಾಡಲಾಗಿದೆ.
    16. ರಾಜ್ಯದ ವಾರ್ತಾ ಇಲಾಖೆಯ ವಿವಿಧ ಸ್ಥಳಗಳಲ್ಲಿ 300 ಫಲಕಗಳಲ್ಲಿ (ಹೋರ್ಡಿಂಗ್ಸ್) ಬಾಲ್ಯವಿವಾಹದ ವಿರುದ್ಧ  ಜಾಹೀರಾತು ಪ್ರದರ್ಶಿಸಲಾಗಿದೆ. ಇದಕ್ಕಾಗಿ ರೂ.21,15,000/- ವೆಚ್ಚ ಮಾಡಲಾಗಿದೆ.

    ******* ಮಾಹಿತಿ ಕೃಪೆ : ವಿಕಾಸ್‌ಪೀಡಿಯಾ **********

    ಮಕ್ಕಳ ಹಕ್ಕುಗಳ ಮಸೂದೆ

    ಹದಿನೆಂಟು ವಯೋಮಾನದ ಕೆಳಗಿನ ಪ್ರತೀ ವ್ಯಕ್ತಿಯೂ ಮಗು. ಮಗುವಿನ ಪಾಲನೆ ಹಾಗೂ ಪೋಷಣೆ ತಂದೆ ತಾಯಿಯರ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ದೇಶವು ಮಗುವಿನ ಹಕ್ಕುಗಳನ್ನು ಗೌರವಿಸುವುದಲ್ಲದೆ ಸಂರಕ್ಷಿಸಲೇ ಬೇಕು.

    ಘನತೆ ಮತ್ತು ಅಭಿವ್ಯಕ್ತಿ

    • ನನ್ನ ಹಕ್ಕುಗಳ ಬಗ್ಗೆ ತಿಳಿಯಲು ನನಗೆ ಹಕ್ಕಿದೆ (ಅಧಿನಿಯಮ 42)
    • ನಾನು ಯಾರಾದರಾಗಿರಲಿ, ಎಲ್ಲೇ ಜೀವಿಸುತ್ತಲಿರಲಿ, ನನ್ನ ತಂದೆ ತಾಯಿ ಯಾರೇ ಆಗಲಿ, ನಾನು ಯಾವುದೇ ಭಾಷೆಯವನಾಗಿರಲಿ, ನಾನು ಯಾವ ಧರ್ಮಕ್ಕಾದರೂ ಸೇರಿದವನಾಗಿರಲೀ, ನಾ ಒಬ್ಬ ಹುಡುಗನಾಗಲೀ, ಹುಡುಗಿಯಾಗಲೀ, ಯಾವುದೇ ಸಂಸ್ಕೃತಿಗೆ ಸೇರಿರಲಿ, ನಾನು ವಿಕಲಚೇತನನಾಗಿರಲೀ, ನಾನು ಶ್ರೀಮಂತನಾಗಲೀ, ಬಡವನಾಗಲೀ, ಮಗುವಾಗಿ ನನಗೆ ಹಕ್ಕುಗಳಿವೆ.
    • ಯಾವುದೇ ಕಾರಣದಿಂದಲೂ ನನ್ನನ್ನು ಅನುಚಿತವಾಗಿ ನಡೆಸಿಕೊಳ್ಳಬಾರದು. ಎಲ್ಲರಿಗೂ ಇದನ್ನು ತಿಳಿದಿರುವ ಜವಾಬ್ದಾರಿ ಇದೆ (ಅಧಿನಿಯಮ 2)
    • ನನ್ನ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವ ಹಕ್ಕು ನನಗಿದೆ ಮತ್ತು ಅದನ್ನು ಗುರುತರವಾಗಿ ತೆಗೆದುಕೊಳ್ಳಬೇಕು ಮತ್ತು ಎಲ್ಲರಿಗೂ ಇತರರು ಹೇಳುವುದನ್ನು ಆಲಿಸುವ ಹೊಣೆಗಾರಿಕೆಯಿದೆ (ಅಧಿನಿಯಮ 12, 13)
    • ನನಗೆ ತಪ್ಪು ಮಾಡುವ ಹಕ್ಕು ಇದೆ ಮತ್ತು ನಮ್ಮ ತಪ್ಪಿನಿಂದಾಗಿ ನಾವು ಕಲಿಯುತ್ತೇವೆ ಎಂದು ಒಪ್ಪಿಕೊಳ್ಳುವ ಹೊಣೆಗಾರಿಕೆ ಎಲ್ಲರಿಗೂ ಇದೆ.
    • ನನ್ನ ಸಾಮರ್ಥ್ಯಗಳೇನೇ ಇದ್ದರೂ, ನಾನು ಎಲ್ಲರೊಂದಿಗೆ ಸೇರಿಕೊಳ್ಳುವ ಹಕ್ಕು ನನಗಿದೆ ಮತ್ತು ಇತರರನ್ನು ಅವರ ಭಿನ್ನತೆಗಾಗಿ ಗೌರವಿಸಬೇಕೆಂಬ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ.
    • ನನಗೆ ಉತ್ತಮ ಶಿಕ್ಷಣದ ಹಕ್ಕು ಇದೆ ಮತ್ತು ಎಲ್ಲ ಮಕ್ಕಳೂ ಶಾಲೆಗೆ ಹೋಗಬೇಕೆಂದು ಪ್ರೋತ್ಸಾಹಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 23, 28, 29)
    • ನನಗೆ ಉತ್ತಮ ಆರೋಗ್ಯ, ಆರೈಕೆಗೆ ಹಕ್ಕು ಇದೆ ಮತ್ತು ಇತರರ ಉತ್ತಮ ಆರೋಗ್ಯ ಆರೈಕೆ ಮತ್ತು ಸುರಕ್ಷಿತ ನೀರು ಪಡೆಯಲು ಸಹಾಯ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 24)
    • ನನಗೆ ಉತ್ತಮ ಆಹಾರದ ಹಕ್ಕು ಇದೆ ಮತ್ತು ಜನರು ಉಪವಾಸವಿರುವುದನ್ನು ನಿವಾರಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 24)
    • ನನಗೆ ಉತ್ತಮ ಪರಿಸರದ ಹಕ್ಕು ಇದೆ ಮತ್ತು ಅದನ್ನು ಮಲಿನಗೊಳಿಸದೇ ಇರುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 29)
    • ನನಗೆ ಆಟವಾಡುವ ಮತ್ತು ವಿಶ್ರಮಿಸುವ ಹಕ್ಕು ಇದೆ (ಅಧಿನಿಯಮ 31)
    • ಪೋಷಣೆ ಹಾಗೂ ಸಂರಕ್ಷಣೆ
    • ನನಗೆ ಪ್ರೀತಿಸಲ್ಪಡುವ ಹಕ್ಕು ಇದೆ ಮತ್ತು ಅಪಾಯ ಹಾಗೂ ದುರುಪಯೋಗದಿಂದ ರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ಪ್ರತಿಯೊಬ್ಬರಿಗೂ ಇತರರನ್ನು ಪ್ರೀತಿಸುವ ಮತ್ತು ಆದರಿಸುವ ಹೊಣೆಗಾರಿಕೆ ಇದೆ (ಅಧಿನಿಯಮ 19)
    • ನನಗೆ ಒಂದು ಕುಟುಂಬದ ಮತ್ತು ಸುರಕ್ಷಿತ, ಅನುಕೂಲವಾದ ಮನೆ ಹೊಂದುವ ಹಕ್ಕು ಇದೆ ಮತ್ತು ಎಲ್ಲ ಮಕ್ಕಳೂ ಒಂದು ಕುಟುಂಬ ಹಾಗೂ ಮನೆ ಹೊಂದಿರುವುದನ್ನು ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 9, 27)
    • ನನ್ನ ಪರಂಪರೆ ಮತ್ತು ನಂಬಿಕೆಗಳ ಪ್ರತಿ ನಾನು ಹೆಮ್ಮೆ ಪಡುವ ಹಕ್ಕು ನನಗಿದೆ ಮತ್ತು ಇತರರ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಗೌರವಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 29, 30)
    • ನಾನು ಹಿಂಸೆ ಮತ್ತು ದಂಡನೆ (ವಾಕ್, ದೈಹಿಕ ಮತ್ತು ಭಾವನಾತ್ಮಕ) ರಹಿತ ಜೀವನ ನಡೆಸುವ ಹಕ್ಕು ಹೊಂದಿದ್ದೇನೆ ಮತ್ತು ಇತರರನ್ನು ಹಿಂಸಿಸದೇ ಇರುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 2, 28, 37, 39)
    • ನನಗೆ ಆರ್ಥಿಕ ಹಾಗೂ ಲೈಂಗಿಕ ಶೋಷಣೆಯಿಂದ ಸಂರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ಯಾವುದೇ ಮಗು ದುಡಿಯಲು ಬಲಾತ್ಕರಿಸದೇ ಮುಕ್ತವಾದ ರಕ್ಷಿತ ಪರಿಸರ ಹೊಂದಲು ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 32, 34)
    • ನನಗೆ ಎಲ್ಲ ರೀತಿಯ ಶೋಷಣೆಗಳಿಂದ ಸಂರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ನನ್ನನ್ನು ಹೇಗೆ ಬೇಕಾದರೂ ಉಪಯೋಗಿಸಕೊಳ್ಳದಂತೆ ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ
    • ಮಕ್ಕಳನ್ನು ಕುರಿತಾಗಿ ತೆಗೆದುಕೊಳ್ಳುವ ಎಲ್ಲ ಕ್ರಮಗಳಲ್ಲಿಯೂ ಮಕ್ಕಳ ಅನುಕೂಲವೇ ಪ್ರಾಥಮಿಕವಾಗಿ ಪರಿಗಣಿಸಲ್ಪಡಬೇಕು.
    • ಮಕ್ಕಳ ಹಕ್ಕುಗಳ ಮೇಲಿನ ಸಂಯುಕ್ತರಾಷ್ಟ್ರಗಳ ಸಮ್ಮೇಳನ 1989 ರಲ್ಲಿ ಈ ಎಲ್ಲ ಹಕ್ಕು ಮತ್ತು ಹೊಣೆಗಾರಿಕೆಗಳುಉಲ್ಲೇಖಿಸಲ್ಪಟ್ಟಿವೆ.
    • ಪ್ರಪಂಚದೆಲ್ಲೆಡೆ ಮಕ್ಕಳು ಹೊಂದಿರುವ ಎಲ್ಲ ಹಕ್ಕುಗಳನ್ನೂ ಇದು ಹೊಂದಿದೆ. ಭಾರತ ಸರ್ಕಾರವು 1992 ರಲ್ಲಿ ಈ ದಾಖಲೆಗೆ ಸಹಿಹಾಕಿತು.
    ***********ಮಾಹಿತಿ ಕೃಪೆ: ವಿಕಾಸ್‌ಪೀಡಿಯಾ***********

    ಮಕ್ಕಳ ಹಕ್ಕುಗಳಿಗೆ ಸಂಬಧಿಸಿದಂತೆ ದೂರು ನೀಡುವ ವಿಧಾನ

    ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಗುರುತರ ಪ್ರಕರಣಗಳನ್ನು ಪ್ರಜ್ನಾಪೂರ್ವಕವಾಗಿ ಸ್ವಯಂಪ್ರೇರಿತವಾಗಿ ಆಯೋಗವು ಗುರುತಿಸಬೇಕು ಅಲ್ಲದೇ ಮಕ್ಕಳು ಹಕ್ಕುಗಳನ್ನು ಅನುಭವಿಸಲು ತಡೆಯೊಡ್ಡುವ ಅಂಶಗಳನ್ನು ಪರಿಶೀಲಿಸಬೇಕು
    • ಸಂವಿಧಾನದ 8 ನೇ ಅನುಸೂಚಿಯಲ್ಲಿನ ಯಾವುದೇ ಭಾಷೆಯಲ್ಲಿ ಆಯೋಗಕ್ಕೆ ದೂರು ನೀಡಬಹುದು
    • ಅಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ
    • ದೂರಿಗೆ ಕಾರಣವಾದ ವಿಷಯದ ಸಂಪೂರ್ಣ ಚಿತ್ರವನ್ನು ದೂರಿನಲ್ಲಿ ನೀಡಬೇಕು
    • ಅಗತ್ಯವೆನಿಸಿದಲ್ಲಿ ಆಯೋಗವು ಹೆಚ್ಚಿನ ವಿವರಗಳನ್ನು / ಶಪಥ ಪತ್ರಗಳನ್ನು ಆಯೋಗ ಕೇಳಬಹುದು
    • ದೂರು ನೀಡುವಾಗ ಇವುಗಳನ್ನು ದಯವಿಟ್ಟು ಖಾತ್ರಿ ಮಾಡಿಕೊಳ್ಳಿರಿ
    • ಸ್ಪಷ್ಟ ಮತ್ತು ಓದಲಾಗುವಂತಿರಬೇಕು, ಅಸ್ಪಷ್ಟವಾಗಿರಬಾರದು. ಅನಾಮಧೇಯ ಅಥವಾ ಬೇನಾಮಿ ದೂರು ಆಗಿರಬಾರದು
    • ಇಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ವಿಧಿಸುವಂತಿಲ್ಲ
    • ಕೈಗೆತ್ತಿಕೊಂಡ ಪ್ರಕರಣವು ಆಸ್ತಿಯ ಹಕ್ಕುಗಳು, ಗುತ್ತಿಗೆಗೆ ಸಂಬಂಧಿಸಿದ ಭಾಧ್ಯತೆಗಳಂತಹ ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರಬಾರದು.
    • ಕೈಗೆತ್ತಿಕೊಂಡ ಪ್ರಕರಣವು ಸೇವಾವಿಷಯಗಳಿಗೆ ಸಂಬಂಧಿಸಿರಬಾರದು
    • ಪ್ರಕರಣವು ಕಾನೂನಿಗೆ ಅನ್ವಯವಾಗಿ ರಚಿಸಲ್ಪಟ್ಟ ಬೇರೇ ಯಾವುದೇ ಆಯೋಗದ ಮುಂದೆ ಇರಬಾರದು ಅಥವಾ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದಲ್ಲಿ ವಿಚಾರಣಾಧೀನವಾಗಿರಬಾರದು
    • ಪ್ರಕರಣವು ಇದೇ ಆಯೋಗದಿಂದ ಈ ಮೊದಲೇ ತೀರ್ಮಾನಿಸಿದುದಾಗಿರಬಾರದು
    • ಬೇರೆ ಯಾವುದೇ ಆಧಾರದಲ್ಲಿ ಆಯೋಗದ ವ್ಯಾಪ್ತಿಯಿಂದ ಆಚೆ ಇರಬಾರದು
    ಸಂಪರ್ಕಿಸಬೇಕಾದವರ ವಿವರಗಳು
    ಹೆಸರು ಮತ್ತು ಪದನಾಮ
    ಸಂಪರ್ಕ ಸಂಖ್ಯೆ
    ಇ-ಮೇಲ್ ವಿಳಾಸ
    ಶ್ರೀಮತಿ ಶಾಂತಾ ಸಿನ್ಹಾ, ಅಧ್ಯಕ್ಷರು        
    23731583, 23731584      
    Shantha.sinha@nic.in
    ಶ್ರೀಮತಿ ಸಂಧ್ಯಾ ಬಜಾಜ್, ಸದಸ್ಯರು
    23724021
    Sandhya.bajab@nic.in
    ಶ್ರೀಮತಿ. ದೀಪಾ ದೀಕ್ಷಿತ್, ಸದಸ್ಯರು
    23724022
    Dixit.dipa@rediffmail.com
    ಶ್ರೀ. ತೆವಾರಿ, ಸದಸ್ಯ ಕಾರ್ಯದರ್ಶಿ
    23724020
    ms.ncpcr@nic.in
    ಯೇ ಪಿ ಬಿ ಎಕ್ಷ್
    23724027



    *********ಮಾಹಿತಿ ಕೃಪೆ: ವಿಕಾಸ್‌ಪೀಡಿಯಾ**********










    ಮಕ್ಕಳ ರಕ್ಷಣೆಯ ಹಕ್ಕು

    ಪರಿವಿಡಿ :
    ರಕ್ಷಣೆ
    ಕಲ್ಪನೆ ಮತ್ತು ಸತ್ಯಾಂಶ
    ಅಂಶಗಳು
    ಲಿಂಗತಾರತಮ್ಯ
    ಬಾಲ್ಯವಿವಾಹ
    ಬಾಲಕಾರ್ಮಿಕ ಪದ್ಧತಿ
    ಲೈಂಗಿಕ ದುರ್ಬಳಕೆ
    ಶಾರೀರಿಕ ಶಿಕ್ಷೆಗಳು
    ಪರೀಕ್ಷಾ ಒತ್ತಡ
    ಬೀದಿಯ ಮತ್ತು ಓಡಿ ಬಂದ ಮಕ್ಕಳು
    ಹೆಚ್ ಐ ವಿ
    ಜಾತಿ ತಾರತಮ್ಯ
    ಅಂಗವಿಕಲತೆ

    ರಕ್ಷಣೆ

    ಮಕ್ಕಳಿಗೆ ಯಾರಿಂದ ರಕ್ಷಣೆ
    ನೀವು ಶಿಕ್ಷಕರಾಗಿ ನಿಮ್ಮ ವಶದಲ್ಲಿನ ಎಲ್ಲ ಮಕ್ಕಳಿಗೂ ರಕ್ಷಣೆಯ ಖಾತ್ರಿ ದೊರಕಿಸಬೇಕು. ಎಲ್ಲ ವಿಧದ
    • ಶೋಷಣೆ,
    • ಅಮಾನವೀಯವಾಗಿ ಮತ್ತು ಅವಮಾನಕಾರಿಯಾಗಿ ನಡಸಿಕೊಳ್ಳುವುದರಿಂದ,
    • ನಿರ್ಲಕ್ಷ್ಯ ಗಳಿಂದ

    ರಕ್ಷಣೆ ಅಗತ್ಯ

    ಎಲ್ಲ ಮಕ್ಕಳಿಗೂ ರಕ್ಷಣೆಯ ಅಗತ್ಯವಿದ್ದರೂ ಕೆಲವರು ಅವರ ಸಾಮಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ಹಿನ್ನೆಲೆಯಿಂದಾಗಿ ಇತರರಿಗಿಂತ ಹೆಚ್ಚು ತೊಂದರೆಗೆ ಈಡಾಗುವುದರಿಂದ   ,ಅವರಿಗೆ ವಿಶೇಷ ಗಮನದ ಅಗತ್ಯವಿರುತ್ತದೆ. ಇಂತಹ ಮಕ್ಕಳೆಂದರೆ
    • ಮನೆ ಇಲ್ಲದವರು( ಫುಟ್ ಪಾತ್ ನಿವಾಸಿಗಳು,ನಿರಾಶ್ರಿತರು, ಒಕ್ಕಲೆಬ್ಬಿಸಿದವರು,ನಿರ್ವಾಸಿತರು)
    • ಅಲೆಮಾರಿ ಮಕ್ಕಳು
    • ಬೀದಿ ಮಕ್ಕಳು ಮತ್ತು ಓಡಿಬಂದವರು
    • ಅನಾಥ ಮತ್ತು ತಾಯಿತಂದೆ ತೊರೆದ ಮಕ್ಕಳು
    • ಕೂಲಿಕಾರ ಮಕ್ಕಳು
    • ಬಾಲ ಭಿಕ್ಷುಕರು
    • ವೇಶ್ಯೆಯರ ಮಕ್ಕಳು
    • ಬಾಲ ವೇಶ್ಯೆಯರು
    • ಅನೈತಿಕ ಚಟುವಟಿಗೆಗಾಗಿ ಸಾಗಿಸಲಾದವರು
    • ಸಂಘರ್ಷಕ್ಕೆ ಒಳಗಾದವರು
    • ಹೆಚ್ ಐ ವಿ ಏಡ್ಸ್ (HIV AIDS) ಸೋಂಕಿತರು
    • ಮಾರಣಾಂತಿಕ ರೋಗದಿಂದ ನರಳುತ್ತಿರುವವರು
    • ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ  ಸೇರಿದವರು

    ಕಲ್ಪನೆ ಮತ್ತು ಸತ್ಯಾಂಶ

    ಎಲ್ಲ ವರ್ಗದ ಹೆಣ್ಣು ಮಕ್ಕಳು ಹೆಚ್ಚು ಅಸಾಹಾಯಕ.ಮಕ್ಕಳ ಶೋಷಣೆ ಮತ್ತು ದುರ್ಬಳಕೆಯ ಬಗೆಗಿನ  ಕೆಲವುಮಿಥ್ಯೆಗಳು ಹೀಗಿವೆ
    1. ಮಿಥ್ಯೆ:   ಮಕ್ಕಳು ಯಾವಾಗಲೂ ದುರ್ಬಳಕೆ ಮತ್ತು ಶೋಷಣೆಗೆ ಒಳಗಾಗಿಲ್ಲ . ಸಮಾಜ ತನ್ನ ಮಕ್ಕಳನ್ನು ಪ್ರೀತಿಸುವುದು.
      • ಸತ್ಯ:  ನಿಜ . ನಾವು  ನಮ್ಮ  ಮಕ್ಕಳನ್ನು ಪ್ರೀತಿಸುತ್ತೇವೆ. ಆದರೆ ಎಲ್ಲಿಯೋ ಏನೋ ತಪ್ಪಿಹೋಗಿದೆ.  ಭಾರತದಲ್ಲಿ ಜಗತ್ತಿನಲ್ಲೇ ಅತ್ಯಂತ ಹೆಚ್ಚಿನ ಬಾಲಕಾರ್ಮಿಕರು ಇದ್ದಾರೆ.   ಹೆಚ್ಚಿನ ಸಂಖ್ಯೆಯ ಲೈಂಗಿಕ ದುರ್ಬಳಕೆಗೆ ಒಳಗಾದ ಮಕ್ಕಳಿದ್ದಾರೆ. ಗಂಡು ಹೆಣ್ಣಿನ ಪ್ರಮಾಣ ೦-೬ ವಯೋಮಾನದಲ್ಲಿ  ಅತಿ ಕನಿಷ್ಟ ವಾಗಿದೆ. ಇದು ಹೆಣ್ಣುಮಗುವಿನ ಬದುಕೆ ಅಪಾಯದಲ್ಲಿರುವುದನ್ನು ತೋರಿಸುವುದು. ಕೊನೆಗೆ ಅತಿಚಿಕ್ಕ ಹೆಣ್ಣು ಮಗುವನ್ನೂ ಕೂಡಾ ಮಾರುವರು ಇಲ್ಲವೇ ಕೊಂದು ಹಾಕುವರು.
      • ಮಕ್ಕಳ ವಿರುದ್ಧದ ಅಪರಾಧ ದಾಖಲಾತಿಯು ಅತಿ ದಾರುಣ ಕಥೆಹೇಳುತ್ತದೆ. ಸರ್ಕಾರಿ ದಾಖಲಾತಿಯ ಪ್ರಕಾರವೇ ಮಕ್ಕಳ ವಿರುದ್ಧದ ಅಪರಾಧಗಳ ಸಂಖ್ಯೆಯು  ೧೧.೧% ರಷ್ಟು ೨೦೦೨ ಮತ್ತು ೨೦೦೩ರಲ್ಲಿ ಹೆಚ್ಚಾಗಿದೆ. ವರದಿಯಾಗದ ಘಟನೆಗಳೂ ಅನೇಕ
    2. ಮಿಥ್ಯೆ:     ಮನೆಯು  ಅತಿ ಸುರಕ್ಷಿತ ಸ್ವರ್ಗ.
      • ಸತ್ಯ:    ಮನೆಯಲ್ಲಿನ ಮಕ್ಕಳ ದುರ್ಬಳಕೆಯ ಪ್ರಮಾಣವು ಈ ನಂಬಿಕೆಯನ್ನು ಸುಳ್ಳು ಎಂದು ತೋರಿಸುತ್ತದೆ.   ಅನೇಕ ಬಾರಿ ಮಕ್ಕಳನ್ನು ಅವರ ತಾಯಿತಂದೆಯರ ಖಾಸಗಿ ಆಸ್ತಿ ಎಂದುಕೊಂಡು ಅವರನ್ನು ಹೇಗೆ ಬೇಕಾದರೆ ಹಾಗೆ  (ಹೆಚ್ಚಾಗಿ ದರ್ಬಳಕೆ) ಬಳಸುವರು.
      • ತಂದೆಯಂದಿರೇ ಹೆಣ್ಣು ಮಕ್ಕಳನ್ನು  ಸ್ನೇಹಿತರಿಗೆ, ಅಪರಿಚಿತರಿಗೆ ಹಣಕ್ಕಾಗಿ ಮಾರುವುದಕ್ಕೆ ನಾವು ದಿನನಿತ್ಯ ಸಾಕ್ಷಿಗಳಾಗಿದ್ದೇವೆ. ಲೈಂಗಿಕ ದುರ್ಬಳಕೆಯ ಅಧ್ಯಯನವು, ನಿಷಿದ್ಧ ಸಂಭೋಗವು ಅತಿ ಸಾಮಾನ್ಯವಾದ ದುರ್ಬಳಕೆ ಎಂದು ತೋರಿಸಿದೆ. ಅನೇಕ ಸಲ ತಂದೇಯೇ ಮಗಳ ಮೇಲೆ ಅತ್ಯಾಚಾರ ಮಾಡಿದ ವರದಿಗಳು ಮಾಧ್ಯಮದಲ್ಲಿ ವರದಿಯಾಗಿವೆ ಅಲ್ಲದೆ ನ್ಯಾಯಾಲಯದಲ್ಲಿ ಸಾಬಿತಾಗಿವೆ. ಹೆಣ್ಣು ಶಿಶು ಹತ್ಯೆ , ಅಂದರೆ  ನವಜಾತ ಹೆಣ್ಣು ಮಗುವನ್ನು ಕೊಲ್ಲುವುದು, ಮೂಢ ನಂಬಿಕೆಯಿಂದ ಮಗುವಿನ ಬಲಿ, ಹೆಣ್ಣು ಹುಡುಗಿಯನ್ನು ದೇವರಿಗೆ ಬಿಡುವ ಪದ್ದತಿ ಮತ್ತು ಸಂಪ್ರದಾಯದ ಹೆಸರಲ್ಲಿ ಬಿಡುವುದು ,ದೇವದಾಸಿ ಮತ್ತು ಜೋಗಿನಿ ಪದ್ದತಿ ಭಾರತದ ಅನೇಕ ಕಡೆ ಜಾರಿಯಲ್ಲಿದೆ.   ಇವೆಲ್ಲ ಮನೆಯಲ್ಲಿ ನಡೆಯುವ ದೌರ್ಜನ್ಯಕ್ಕೆ ಕೆಲ ಉದಾಹರಣೆಗಳು. ಚಿಕ್ಕ ಹುಡುಗಿಗೆ ಬೇಗ ಮದುವೆ ಮಾಡುವುದು ಅವರ ಮೆಲಿನ ಪ್ರೀತಿಯಿಂದ ಅಲ್ಲ. ತಮ್ಮ ಹೊಣೆ ಕಳೆದು ಕೊಳ್ಳಲು , ಇನ್ನೊಬ್ಬರಿಗೆ  ಬೆಳಸುವ , ಕಾಪಾಡುವ ಜವಾಬ್ದಾರಿ ವರ್ಗಾಯಿಸುವ ಕ್ರಮವಾಗಿದೆ. ಅದರಿಂದ  ತಮ್ಮ ಮಗಳಿಗೆ ಆಗುವ  ಅನಾರೋಗ್ಯ ಮತ್ತು ಆಘಾತವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವುಗಳು ಅತಿ ವಿರಳ ಘಟನೆಗಳಾದರೆ ಮಗುವನ್ನು  ಕರುಣೆಯಿಲ್ಲದೆ ಹೊಡೆಯುವುದು  ಎಲ್ಲ  ಮನೆಗಳಲ್ಲಿನ ಸಮಾನ್ಯ ಅಭ್ಯಾಸವಾಗಿದೆ. ನಿರ್ಲಕ್ಷ್ಯ ಮಾಡುವದು ಬಡವ ,ಮತ್ತು ಶ್ರೀಮಂತ ಕುಟುಂಬ ಗಳೆರಡರಲ್ಲಿಯೂ ಕಂಡು ಬರುವ ಸಾಮಾನ್ಯ ಆಚರಣೆ. ಅದರಿಂದ ಮಕ್ಕಳ ವರ್ತನೆಯ ಸಮಸ್ಯೆಗಳು ಮೊದಲಾಗತ್ತವೆ, ವಿಶೆಷವಾಗಿ ಖಿನ್ನತೆಯು ಮಕ್ಕಳನ್ನು  ಕಾಡುವುದು
    3. ಮಿಥ್ಯೆ:    ಗಂಡು ಮಕ್ಕಳ ವಿಷಯದಲ್ಲಿ ಚಿಂತೆ ಮಾಡ ಬೇಕಿಲ್ಲ. ಗಂಡು ಮಕ್ಕಳಿಗೆ ಯಾವುದೇ ರಕ್ಷಣೆ ಬೇಕಿಲ್ಲ
      • ಸತ್ಯ:    ಗಂಡು ಮಗವೂ ಕೂಡಾ ಹೆಣ್ಣು ಮಗುವಿನಂತೆ  ದೈಹಿಕ, ಭಾವನಾತ್ಮಕ ದುರ್ಬಳಕೆಗೆ ಗುರಿಯಾಗುವುದು. ಹೆಣ್ಣು ಮಗುವು ಸಮಾಜದಲ್ಲಿನ  ತನ್ನ ಕೆಳ ಸ್ಥರದಿಂದಾಗಿ ಹೆಚ್ಚು ದುರ್ಬಲಳು.   ಗಂಡು ಮಗುವು  ಮನೆಯಲ್ಲಿ,  ಶಾಲೆಯಲ್ಲಿ ದೈಹಿಕ ಶಿಕ್ಷೆಗೆ  ಒಳಗಾಗುವುದು ಹೆಚ್ಚು. ಅನೇಕರನ್ನು ಕೂಲಿ  ಕೆಲಸ ಮಾಡಲು  ಕಳಹಿಸುವರು. ಅವರು ಲೈಂಗಿಕ ದುರ್ಬಳಕೆಗೆ ಗುರಿಯಾಗುವರು
    4. ಮಿಥ್ಯೆ:     ಇದು ನಮ್ಮ ಶಾಲೆಯಲ್ಲಿ / ಊರಿನಲ್ಲಿ ನೆಡೆಯುವುದಿಲ್ಲ.
      • ಸತ್ಯ:   ನಾವು ಪ್ರತಿಯೊಬ್ಬರೂ ಮಗುವಿನ ದುರ್ಬಳಕೆ  ಬೇರೆ ಎಲ್ಲಿಯೋ ನಡೆಯುವುದು  ಎಂದು ನಂಬುತ್ತೇವೆ- ನಮ್ಮ ಮನೆ , ನಮ್ಮಶಾಲೆ, ನಮ್ಮ ಊರು , ನಮ್ಮ ಸಮುದಾಯದಲ್ಲಿ ನಡೆಯುವುದಿಲ್ಲ ಎಂದು ಕೊಳ್ಳುತ್ತೇವೆ.   ಇದು ಬೇರೆ ಮಕ್ಕಳಿಗೆ ಬಾಧಿಸುತ್ತದೆ , ನಮ್ಮ ಮಕ್ಕಳಿಗೆ ಅಲ್ಲ, ಇದು ಬಡವರಲ್ಲಿ, ಕಾರ್ಮಿಕರಲ್ಲಿ, ನಿರುದ್ಯೋಗಿಗಳಲ್ಲಿ, ಅನಕ್ಷರಸ್ಥ ಕುಟುಂಬಕ್ಕೆ ಮಾತ್ರ ಸೀಮಿತ ಎಂದು ಭಾವಿಸುವೆವು. ಇದು ಮಧ್ಯಮ ವರ್ಗದ ಸಮಸ್ಯೆ ಮಾತ್ರ ,   ಇದು ನಗರ , ಪಟ್ಟಣಗಳಲ್ಲಿ ಇದೆ , ಗ್ರಾಮಾಂತರ ಪ್ರದೇಶಗಳಲ್ಲಿ ಇಲ್ಲ.  ಆದರೆ ವಾಸ್ತವವು ಈ ನಂಬಿಕೆಗೆ ವಿರುದ್ಧವಾಗಿದೆ. ದುರ್ಬಳಕೆಗೆ ಗುರಿಯಾದ ಮಕ್ಕಳು ಎಲ್ಲಾ ಕಡೆ ಇದ್ದು, ನಮ್ಮ ಬೆಂಬಲ ಮತ್ತು ಸಹಾಯದ ಅಗತ್ಯ ಅವರಿಗಿದೆ.
    5. ಮಿಥ್ಯೆ:    ದುರ್ಬಳಕೆ ಮಾಡುವವರು ಮಾನಸಿಕ ರೋಗಿಗಳು (ಸೈಕೋ ಪಾಥ್)
      • ಸತ್ಯ:  :  ದುರ್ಬಳಕೆ ಮಾಡುವವರು  ಜನ ಪ್ರಿಯ ನಂಬಿಕೆಯಂತೆ ಮನೋರೋಗಿಗಳಲ್ಲ. ಅವರು ತಮ್ಮ ಸಹಜತೆ ಮತ್ತು ವೈವಿಧ್ಯತೆಯಿಂದ ಎದ್ದು ಕಾತ್ತಾರೆ.    ಮಗುವನ್ನು ಲೈಂಗಿಕ ದುರ್ಬಳಕೆ ಮಾಡುವವರು ತಮ್ಮ ಕೃತ್ಯಯನ್ನು ವಿಭಿನ್ನ ರೀತಿಯಲ್ಲಿ  ಸಮರ್ಥಸಿಕೊಳ್ಳುವರು.  ಬಹಳ ಜನ ಆ ಕುಟುಂಬಕ್ಕೆ  ಪರಿಚಯದವರು ಮತ್ತು ಹತ್ತಿರದವರು. ಅವರ ಮೇಲಿರುವ ನಂಬಿಕೆಯನ್ನೇ ಆಯುಧವಾಗಿ ಬಳಸುವರು

    ಅಂಶಗಳು


    ಮಗುವಿನ ದುರ್ಬಳಕೆಯು ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕ , ಜನಾಂಗಿಯ ಕುಲದ  ಎಲ್ಲ ಗುಂಪುಗಳಲ್ಲಿ ಇದೆ.
    ಸಂಶೋಧನೆ, ದಾಖಲೀಕರಣ,ಮತ್ತು ಸರಕಾರದ, ನಾಗರೀಕ ಸಮಾಜದ , ಸಮುದಾಯದ  ಮಧ್ಯವರ್ತನೆಗಳು ಮಗುವಿನ ರಕ್ಷಣೆಯ ವಿಷಯಗಳನ್ನು ಗಮನಿಸಿ ಈಗಾಗಲೆ ಯಾವ ವರ್ಗದ ಮಕ್ಕಗಳಿಗೆ ವೀಶೇಷ ರಕ್ಷಣೆ ಅಗತ್ಯ  ಎಂದು ವರ್ಗೀಕರಿಸಿವೆ.
    • ಲಿಂಗ (ಜೆಂಡರ್) ತಾರತಮ್ಯ
    • ಜಾತಿ ತಾರತಮ್ಯ
    • ಅಂಗವಿಕಲತೆ
    • ಹೆಣ್ಣು ಭ್ರೂಣ ಹತ್ಯೆ
    • ಶಿಶು ಹತ್ಯೆ
    • ಗೃಹ ಹಿಂಸೆ
    • ಮಗುವಿನ ಲೈಂಗಿಕ ದುರ್ಬಳಕೆ
    • ಬಾಲ ಕಾರ್ಮಿಕರು
    • ಬಾಲ್ಯ ವಿವಾಹ
    • ಬಾಲ ವ್ಯೇಶ್ಯಯರು
    • ಮಕ್ಕಳ ಸಾಗಣೆ
    • ಮಕ್ಕಳ ಬಲಿ
    • ಶಾಲೆಯಲ್ಲಿ ದೈಹಿಕ ಶಿಕ್ಷೆ
    • ಪರೀಕ್ಷಾ ಒತ್ತಡ ಮತ್ತು ವಿದ್ಯಾರ್ಥಿಗಳ ಆತ್ಮ ಹತ್ಯೆ
    • ನೈಸರ್ಗಿಕ ವಿಕೋಪಗಳು \ ಯುದ್ಧ ಮತ್ತು ಸಂಘರ್ಷ
    • ಹೆಚ್ ಐವಿ/ ಏಡ್ಸ್ (  HIV/AIDS).
    ಮಗುವಿನ ದುರ್ಬಳಕೆಯು ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಾಂಸ್ಕೃತಿಕ , ಜನಾಂಗಿಯ ಕುಲದ  ಎಲ್ಲ ಗುಂಪುಗಳಲ್ಲಿ ಇದೆ.ಸಂಶೋಧನೆ, ದಾಖಲೀಕರಣ,ಮತ್ತು ಸರಕಾರದ, ನಾಗರೀಕ ಸಮಾಜದ , ಸಮುದಾಯದ  ಮಧ್ಯವರ್ತನೆಗಳು ಮಗುವಿನ ರಕ್ಷಣೆಯ ವಿಷಯಗಳನ್ನು ಗಮನಿಸಿ ಈಗಾಗಲೆ ಯಾವ ವರ್ಗದ ಮಕ್ಕಗಳಿಗೆ ವೀಶೇಷ ರಕ್ಷಣೆ ಅಗತ್ಯ  ಎಂದು ವರ್ಗೀಕರಿಸಿವೆ.ಲಿಂಗ (ಜೆಂಡರ್) ತಾರತಮ್ಯಜಾತಿ ತಾರತಮ್ಯಅಂಗವಿಕಲತೆಹೆಣ್ಣು ಭ್ರೂಣ ಹತ್ಯೆಶಿಶು ಹತ್ಯೆಗೃಹ ಹಿಂಸೆಮಗುವಿನ ಲೈಂಗಿಕ ದುರ್ಬಳಕೆಬಾಲ ಕಾರ್ಮಿಕರುಬಾಲ್ಯ ವಿವಾಹಬಾಲ ವ್ಯೇಶ್ಯಯರುಮಕ್ಕಳ ಸಾಗಣೆಮಕ್ಕಳ ಬಲಿಶಾಲೆಯಲ್ಲಿ ದೈಹಿಕ ಶಿಕ್ಷೆಪರೀಕ್ಷಾ ಒತ್ತಡ ಮತ್ತು ವಿದ್ಯಾರ್ಥಿಗಳ ಆತ್ಮ ಹತ್ಯೆನೈಸರ್ಗಿಕ ವಿಕೋಪಗಳು \ ಯುದ್ಧ ಮತ್ತು ಸಂಘರ್ಷಹೆಚ್ ಐವಿ/ ಏಡ್ಸ್ (  HIV/AIDS).

    ಲಿಂಗತಾರತಮ್ಯ

    1. ಮಿಥ್ಯೆ:   :  ಬಾಲ್ಯ ವಿವಾಹವು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ.  ಅವಿವಾಹಿತ ಹುಡುಗಿಯರು  ಬಲತ್ಕಾರ ಮತ್ತು ಲೈಂಗಿಕ ದುರ್ಬಳಕೆಗೆ ಹೆಚ್ಚು ಗುರಿಯಾಗುವರು.ಆದಷ್ಟು ಬೇಗ ಅವರ ಮದುವೆ ಮಾಡುವುದ ಉತ್ತಮ.   ಹುಡುಗಿಗೆ  ವಯಸ್ಸಾದಂತೆ ವರದಕ್ಷಿಣೆ ಮತ್ತು ಒಳ್ಳೆಯ ವರ ಹುಡುಕುವುದು ಕಷ್ಟವಾಗುವುದು.
    • ಸತ್ಯ:  ಯಾವುದೆ ದುರಾಚರಣೆ ಅಥವಾ ಕೆಟ್ಟ ಪದ್ದತಿಗೆ  ಸಂಸ್ಕೃತಿಯು ಒಂದು ನೆಪ ಆಗಬಾರದು. ಬಾಲ್ಯ ವಿವಾಹವು ನಮ್ಮ ಸಂಸ್ಕೃತಿಯಾದರೆ, ಗುಲಾಮಗಿರಿ, ಜಾತಿಯತೆ, ವರದಕ್ಷಿಣೆ,ಸತಿ ಪದ್ಧತಿಗಳು ಸಹಾ ಆಗಿದ್ದವು. ಆದರೆ ಈಗ ಆ ಅಪಾಯಕಾರಿ ಪದ್ಧತಿಗಳನ್ನು ನಿಷೇಧಿಸುವ ಕಾಯಿದೆಗಳು ನಮ್ಮಲ್ಲಿ  ಬಂದಿವೆ.  ಈ ಕಾಯಿದೆಗಳು ಸಮಾಜದ ಬೇಡಿಕೆಯ ಮೇರೆಗೆ  ಜಾರಿಗೆಬಂದವು. ಅಂದರೆ ಖಚಿತವಾಗಿ ಸಂಸ್ಕೃತಿಯು ಜಡವಲ್ಲ.
    • ಅಲ್ಲದೆ  ಒಂದೆ ಭೌಗೋಳಿಕ  ಪ್ರಧೇಶದಲ್ಲಿ  ಇದ್ದರೂ,  ವಿಭಿನ್ನ ಜನರು ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವುರು.  ಭಾರತದಲ್ಲಿ ಇರುವಂತೆ. ಬಹು ಕುಲದ, ಭಾಷೆಯ, ಧರ್ಮದ ಜನರು ತಮ್ಮದೇ  ಆದ ಸಂಸ್ಕೃತಿಯನ್ನು  ಅನುಸರಿಸುವರು. ಆದ್ದರಿಂದ ಭಾರತದ ಸಂಸ್ಕೃತಿಯು ಈ ಎಲ್ಲ ಸಂಸ್ಕೃತಿಗಳ ಮಿಶ್ರಣವಾಗಿದೆ.ಮತ್ತು ಕಾಲಾನುಕಾಲಕ್ಕೆ ಬದಲಾವಣೆಯಾಗುತ್ತ ಬಂದಿದೆ.
    ನಾವು ನಮ್ಮ ಮಕ್ಕಳಿಗೆ ರಕ್ಷಣೆ ಬೇಕೆಂದು ಒಪ್ಪಿಕೊಂಡರೆ ನಮ್ಮ ಸಂಸ್ಕೃತಿಯು ಅದನ್ನು ಪ್ರತಿಬಿಂಬಿಸಬೇಕು.  ಖಂಡಿತವಾಗಿಯೂ , ನಾವು ಸಾಂಸ್ಕೃತಿಕವಾಗಿ ನಮ್ಮ  ಮಕ್ಕಳನ್ನು ಪ್ರೀತಿಸತ್ತೇವೆ ಎಂದು ಹೇಳಿಕೊಳ್ಳುವುದು ಮಾತ್ರವಲ್ಲ ಅವರ ರಕ್ಷಣೆಯ ಖಾತ್ರಿಯನ್ನು ಎಲ್ಲ ಸಮಯದಲ್ಲೂ ನೀಡಬೇಕು

    ಬಾಲ್ಯ ವಿವಾಹದ ಚಿಹ್ನೆಗಳು

    ಹಕ್ಕುಗಳ ಉಲ್ಲಂಘನೆಯು ಮೊದಲಿನಿಂದಲೂ ಆಗುತ್ತಲೇ ಬಂದಿದೆ.   ಗಂಡು ಮಕ್ಕಳ ಬಾಲ್ಯ ವಿವಾಹವು, ಹೆಣ್ಣು ಮಕ್ಕಳ ಬಾಲ್ಯ ವಿವಾಹದಂತೆಯೇ ಅವರ ಹಕ್ಕುಗಳ ಉಲ್ಲಂಘನೆ ಆಗಿದೆ. ಅದು ಅವರ ಆಯ್ಕೆಯ ಅವಕಾಶವನ್ನು ಕಿತ್ತುಕೊಳ್ಳುತ್ತದೆ. ಅವರ ವಯಸ್ಸಿಗೆ ಮೀರಿದ ಕುಟುಂಬದ ಹೊಣೆಯನ್ನು ಹೊರಿಸುವುದು. ಆದರೆ ಹೆಣ್ಣು ಮಕ್ಕಳು ಇನ್ನೂ ಹೀನ ಪರಿಸ್ಥಿತಿಯಲ್ಲಿ ಇರುವರು ಎಂಬುದರಲ್ಲಿ ಅನುಮಾನವಿಲ್ಲ.
    ಬಾಲವಧುವು ಅನೇಕ ಸಲ ಬಾಲವಿಧವೆಯಾಗಿ, ಅನೇಕ ಮಕ್ಕಳನ್ನು ನೋಡಿಕೊಳ್ಳಬೇಕಾಗುವುದು.

    ನಿಮಗೆ ಗೊತ್ತೆ ?

    ಜನಗಣತಿ ವರದಿ ೨೦೦೧ ಪ್ರಕಾರ ಸುಮಾರು ೩ ಲಕ್ಷ ೧೫ ವರ್ಷದೊಳಗಿನ ಹೆಣ್ಣು ಮಕ್ಕಳು ಆಗಲೇ ಕನಿಷ್ಟ ಒಂದು ಮಗುವಿಗೆ ಜನ್ಮ ನೀಡಿದ್ದಾರೆ.
    ಹುಡುಗಿಯರು ೧೦-೧೪ ವರ್ಷದವರಾದರೆ ಗರ್ಭಿಣಿಯರಾಗಿದ್ದಾಗಲೇ ಇಲ್ಲವೆ ಹೆರಿಗೆ ಸಮಯದಲ್ಲಿ ಸಾಯುವ ಸಂಭವವು  ಅವರು ೨೦-೨೪ ವರ್ಷದವರಾಗಿನಕಿಂತ   ೫ ಪಟ್ಟು ಹೆಚ್ಚಾಗಿರುವುದು.
    • ಶೀಘ್ರ ಗರ್ಭಧಾರಣೆಯು ಹೆಚ್ಚಿನ ಪ್ರಮಾಣದ  ಗರ್ಭಪಾತದ ದರಕ್ಕೆ ಕಾರಣ ವಾಗಿದೆ
    • ಹದಿ ಹರೆಯದ ತಾಯಿಯ ಶಿಶುವು   ಹುಟ್ಟಿದಾಗ ಕಡಿಮೆ ತೂಕ ಇರುವ ಸಂಭವ ಹೆಚ್ಚಾಗಿದೆ
    • ಎಳೆವಯಸ್ಸಿ ತಾಯಿಗೆ  ಜನಿಸಿದ ಮಗುವು ಮೊದಲ ವರ್ಷದಲ್ಲೇ ಸಾಯುವ ಸಂಭವ ಹೆಚ್ಚು.
    ಮೂಲ:  ಹದಿಹರೆಯದ ಮಹಿಳೆಯ ಪರಿಸ್ಥಿತಿ


    ಬಾಲ್ಯವಿವಾಹ

    • ಕಾನೂನು ಬದ್ಧ ಮದುವೆ ಎಂದು ಹರೆಯದ ಹೆಣ್ಣನ್ನು ಇಲ್ಲಿನ ಅಥವ ಮಧ್ಯಪ್ರಾಚ್ಯದ ಮುದಿವಯಸ್ಸಿನ ಗಂಡಿನ  ಜೊತೆ ಮದುವೆ ಮಾಡಿ, ವಂಚಿಸುವರು.ಅವಳು ವೇಶ್ಯಾವೃತ್ತಿಯೂ ಸೇರಿದಂತೆ ಎಲ್ಲಾ  ತರಹದ ಶೋಷಣೆಗೆ ಗುರಿಯಾಗುವಳು.
    • ಮದುವೆಯು ಹರೆಯದ ಹೆಣ್ಣು ಮಕ್ಕಳನ್ನು ಕಾರ್ಮಿಕರನ್ನಾಗಿಸಲು, ವೇಶ್ಯಾವೃತ್ತಿಗೆ ದೂಡಲು ಹಾದಿಯಾಗಿದೆ. ಎಳೆವಯಸ್ಸಿನ ಮದುವೆಯು ಸುರಕ್ಷಿತ ಮತ್ತು ದರ್ಬಳಕೆಯ ವಿರುದ್ಧದ  ರಕ್ಷಣೆಯ ಮಾರ್ಗ ಎನ್ನುವುದು ತಪ್ಪು.     ಅದು ನೈಜವಾಗಿ ಹುಡುಗಿಯ ಮೇಲೆ ಕುಟುಂಬದ ಸದಸ್ಯರಿಂದ ಒಂದು ರೀತಿಯ  ದೌರ್ಜನ್ಯ.  ಅವಳಿಗೆ ಯಾವಗಲೂ ನಂಬಿಕೆ ಮತ್ತು  ವಿನಯದಿಂದ ಇರಲು ತಿಳಿಸುವರು. ಬಾಲ್ಯ ವಿವಾಹವು, ಬಾಲ್ಯದ ಬಲತ್ಕಾರ ಇದ್ದಂತೆ.ಆ ವಯಸ್ಸಿನಲ್ಲಿ ಮಗುವು ಕ್ರಿಯೆ ಅಥವಾ  ನಿಷ್ಕ್ರಿಯೆಯನ್ನು ಅರಿಯುವ  ಪರಿಪಕ್ವತೆ ಇರುವುದಿಲ್ಲ.
    • ಮಹಿಳೆಯು ಮದುವೆಯಾಗಿರಲಿ ಇಲ್ಲದೆ ಇರಲಿ ಹೊರಗಿನವರಿಂದ ರಕ್ಷಣೆಯ ಖಾತ್ರಿ ಇರುವುದಿಲ್ಲ.  ಎಲ್ಲ ಮಹಿಳೆಯರೂ ಮದುವೆ ಆಗಿರಲಿ ಒಂಟಿಯಾಗಿರಲಿ, ಯುವತಿಯಾಗಿರಲಿ, ವಯಸ್ಸಾದವಳಾಗಿರಲಿ, ಬುರುಖಾದಲ್ಲಿ ಇರಲಿ , ಇಲ್ಲದಿರಲಿ. ಬಲತ್ಕಾರ ಮತ್ತು ದುರ್ಬಳಕೆಗೆ ಗುರಿಯಾಗಬಹುದು.  ಮಹಿಳೆಯ ವಿರುದ್ಧದ ಅಪರಾಧಗಳು ಏರಿಕೆಯಲ್ಲಿರುವುದೆ ಇದನ್ನು ನಿರೂಪಿಸುತ್ತವೆ.
    • ನಮ್ಮ ಗ್ರಾಮದಲ್ಲಿ ಬುರುಖಾದಲ್ಲಿರುವ,ಅನಕ್ಷರಸ್ಥ ಮಹಿಳೆಯು ಬಲಾತ್ಕಾರಕ್ಕೆ ಒಳಗಾದಾಗ, ಅವಳು ಸುಶಿಕ್ಷಿತಳು ಎನ್ನುವ ಕಾರಣಕ್ಕೆ ಅಲ್ಲ , ಆದರೆ ಅವಳುನಿರ್ಧಿಷ್ಟ ಜಾತಿಗೆ ಸೇರಿದವಳು ಎನ್ನುವ ಕಾರಣಕ್ಕೆ  ಅಥವಾ ಗುಂಪಿನ ದ್ವೇಷಕ್ಕೆ ಬಲಿಯಾಗಿರುವಳು
    • ಅಂತಿಮವಾಗಿ  ಶೀಘ್ರ ಮದುವೆಯು ವರದಕ್ಷಿಣೆಯ ಸಮಸ್ಯೆಗೆ ಪರಿಹಾರ ಕೊಡುವುದೆಂಬ ಯೋಚನೆಯು ಸರಿಯಲ್ಲ.  ಪಿತೃಪ್ರಧಾನ ಸಮಾಜದಲ್ಲಿ ವರನ ಕುಟುಂಬವು ಯಾವಾಗಲೂ ವಧುವಿನ ಕುಟುಂಬಕ್ಕಿಂತ  ತುಸು ಮೇಲುಗೈ ಹೊಂದಿರುವುದು.  ಅವರಿಗೆ ಏನೇ ಅಗತ್ಯಬಿದ್ದರೂ ವಧುವಿನವರು ನೀಡಬೇಕೇಂದು ಬಯಸುವರು.  ಮದುವೆಯಲ್ಲಿ ವರದಕ್ಷಿಣೆ ತೆಗೆದು ಕೊಳ್ಳದಿದ್ದರೆ ನಂತರ ಎಲ್ಲ ರೀತಿಯ ಬೇಡಿಕೆ ಮಂಡಿಸುವರು.

    ಬಾಲ ಕಾರ್ಮಿಕತೆ



    ಬಾಲ ಕಾರ್ಮಿಕತೆ-ಮಿಥ್ಯಗಳು ಮತ್ತು ಸತ್ಯಗಳು

    1. ಮಿಥ್ಯೆ:   :  ಬಾಲ ಕಾರ್ಮಿಕ ಸಮಸ್ಯೆಗೆ  ಪರಿಹಾರವೇ ಇಲ್ಲ.
      • ಬಡ ತಾಯಿತಂದೆಯರು  ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸುವುದಿಲ್ಲ. ಅವರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿ ಮನೆಗೆ ಸ್ವಲ್ಪ ಆದಾಯ ತರಲು ಬಯಸುವರು. ಈ ಮಕ್ಕಳಿಗೆ ಕೆಲಸ ಮಾಡದೆ ಬೇರೆ ಹಾದಿ ಇಲ್ಲ.  ಇಲ್ಲದಿದ್ದರೆ ಅವರ ಕುಟುಂಬವು ಉಪವಾಸ ಬೀಳುವುದು .ಅವರು ಕೆಲಸಮಾಡುವುದರಿಂದ ಭವಿಷ್ಯಕ್ಕೆ ಅಗತ್ಯವಾದ ಕೆಲವು ಕೌಶಲ್ಯಗಳನ್ನು ಪಡೆಯುವರು.
    2. ಸತ್ಯ:  ಈ ರಿತಿಯ ಮಾತನ್ನು ಕೇಳಿದಮೇಲೆ ನಾವು, ನಮಗೆ ಪ್ರಶ್ನೆ  ಹಾಕಿಕೊಳ್ಳಬೇಕು.   ಏಕೆ ಕೆಲವು ಬಡಜನರು ಎಷ್ಟೇ ತೊಂದರೆ ಇದ್ದರೂ ತಮ್ಮ ಮಕ್ಕಳನ್ನುಶಾಲೆಗೆ ಕಳುಹಿಸುವರು , ಹಾಗೆಯೇ ಕೆಲವರು ಏಕೆ ಕಳಹಿಸುವುದಿಲ್ಲ. ? ನಿಜವಾದ ಮಾತು ಎಂದರೆ ಬಡತನ ಎಂಬುದು ಮಕ್ಕಳನ್ನು ತಮ್ಮ ಅನುಕೂಲಕ್ಕಾಗಿ ಬಳಸಿ ಕೊಳ್ಳಲು ಇರುವ ಒಂದು ನೆಪ ಮಾತ್ರ. ಸಾಮಾಜಿಕ ಆಂಶಗಳೂ ಬಾಲ ಕಾರ್ಮಿಕರ ಸಮಸ್ಯೆಗೆ ತಮ್ಮ ಕೊಡುಗೆ ನೀಡುತ್ತವೆ.   ಸಾಮಾಜಿಕವಾಗಿ ಮೂಲೆಗೆ ತಳ್ಳಲಾದ ಸಮುದಾಯಗಳು ಸಂಪನ್ಮೂಲಗಳ ಬಳಕೆಗೆ ಸಮಾನ ಅವಕಾಶ ಸಿಕ್ಕದೆ ಶ್ರೇಣಿ ಕೃತ ಸಮಾಜ ವ್ಯವಸ್ಥೆಗೆ ಬಲಿಯಾದವರ   ಕುಟುಂಬಗಳು ಮತ್ತು ಅವರ ಮಕ್ಕಳು ಸಹಾ ಕೆಲಸ ಮಾಡಿದರೂ ಹಸಿವಿನಿಂದ ಬಳಲುವರು ಎಂಬುದು ನಮಗೆ ಹೊತ್ತು.  ಇದಕ್ಕೆ ಕಾರಣ ಹಸಿವು .  ಸರಿಯಾಗಿರದ ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಪರಿಣಾಮ.
    • ಎಲ್ಲ ತಾಯಿತಂದೆಯರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಬಯಸುವರು. ಕನಿಷ್ಟ ಪ್ರಾಥಮಿಕ ಶಿಕ್ಷಣವಾದರೂ ಸರಿ.   ಶಿಕ್ಷಣ ಪಡೆಯದ ತಾಯಿತಂದೆಯರಿಗೆ ಪ್ರವೇಶ ಪ್ರಕ್ರಿಯೆ ತುಂಬ ಸಂಕೀರ್ಣ ವೆನಿಸುವುದು.  ಜನ್ಮ ದಿನಾಂಕ, ಜಾತಿ ಪ್ರಮಾಣ ಪತ್ರಗಳೇ ಶಾಲೆಗೆ ಪ್ರವೇಶ ಪಡೆಯಲು ದೊಡ್ಡ ತಡೆಗಳಾಗುವವು. ಮಕ್ಕಳಿಗೆ  ವಿಶೇಷವಾಗಿ ಅವರು  ಕಲಿಯುವುದರಲ್ಲಿ ಮೊದಲ ತಲೆ ಮಾರಿನವರರಾದರೆ  ಪಠ್ಯಕ್ರಮವು ತುಂಬ ಕಠಿನವೆನಿಸುವುದು.ಅವರ ತಾಯಿತಂದೆಯರು ಅಶಿಕ್ಷಿತರಾಗಿರುವುದರಿಂದ  ಮನೆಯಲ್ಲಿ ಗೃಹ ಪಾಠ ಮಾಡುವಲ್ಲಿ ಅಗತ್ಯ ಬೆಂಬಲ ನೀಡಲಾರರು. ದೈಹಿಕ ಶಿಕ್ಷೆ, ಜಾತಿ ತಾರತಮ್ಯ. ಮೂಲ ಸೌಕರ್ಯಗಳಾದ  ಕಕ್ಕಸು, ಕುಡಿಯುವ ನೀರಿನ ಕೊರತೆ ಮೊದಲಾದ ಅಂಶಗಳು ಅವರನ್ನು ಶಾಲೆಯೀಂದ ದೂರ ಇಡುತ್ತವೆ. ಹೆಣ್ಣು ಮಕ್ಕಳಿಗೆ ತಮ್ಮ ತಂಗಿಯರನ್ನು ನೋಡಿಕೊಳ್ಳುವ ಹೊಣೆಯೂ ಮೊದಲ ಆದ್ಯತೆ   ಯಾಗುವುದು. ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲೂ ಶಿಶು ಪಾಲನಾ ಸೌಕರ್ಯಗಳು ಇಲ್ಲ  ಅಲ್ಲದೆ ಜನರ ಮನದಲ್ಲಿ ಲಿಂಗಪಕ್ಷಪಾತವೂ ಬಲವಾಗಿ ನೆಲೆಯೊಡ್ಡಿದೆ.
    • ಶಾಲೆಗೆ ಹೋಗದೆ, ಕೆಲಸಕ್ಕೆ ಹೋಗುವ ಮಕ್ಕಳು ತಮ್ಮ ಜೀವನಪೂರ್ತಿ ಅನಕ್ಷರಸ್ಥರಾಗಿ, ಕುಶಲತೆಯಿಲ್ಲದ ಕಾರ್ಮಿಕರಾಗಿಯೇ ಉಳಿಯುವರು.  ಇದಕ್ಕೆ ಕಾರಣ ಬಾಲ ಕಾರ್ಮಿಕರು ಸಾಧಾರಣವಾಗಿ ಕುಶಲತೆ ಇಲ್ಲದ ಕಾರ್ಮಿಕ ಸಮೂಹದ  ಒಂದು ಭಾಗವಾಗಿರುವರು.  ಅಲ್ಲದೆ ಅವರು ರಸಾಯನಿಕ ಮತ್ತು ಇತರೆ ಅಪಾಯಕಾರಿ  ವಸ್ತುಗಳ ಸಂಪರ್ಕಕ್ಕೆ ಬರುವರು.  ಧೀರ್ಘ ಕೆಲಸದ ಅವಧಿ , ಕೆಲಸದಲ್ಲಿ ತೊಡಗಿದಾಗಿನ ಭಂಗಿ ಮೊದಲಾದವು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವವು ಮತ್ತು ಅವರ ಬೆಳವಣಿಗೆಯನ್ನು ಕುಂಠಿತ ಗೊಳಿಸುವವು.
    • ಬಾಲ ಕಾರ್ಮಿಕರು  ಇರುವುದು ಸಂವಿಧಾನದ ಅನುಚ್ಛೇದ-೨೧ಎ ಗೆ ಪೂರ್ಣ ವ್ಯತಿರಿಕ್ತತವಾಗಿದೆ.  ಅದರ ಪ್ರಕಾರ ೬-೧೪ ವಯೋಮಾನದ  ಪ್ರತಿ ಮಗುವಿಗೂ  ಕಡ್ಡಾಯ ಉಚಿತ ಪ್ರಾಥಮಿಕ ಶಿಕ್ಷಣ ಅವನ ಮೂಲಭೂತ ಹಕ್ಕು.
    • ಇನ್ನೊಂದು ಗಣನೀಯ ಅಂಶವೆಂದರೆ, ಒಂದು ಮಗುವು ಬಾಲ  ಕಾರ್ಮಿಕನಾಗುವುದು ತಪ್ಪಿದರೆ, ಒಬ್ಬ ವಯಸ್ಕನಿಗೆ ಕೆಲಸ ದೊರಕಿದಂತೆ
    • ಭಾರತದಲ್ಲಿ ನಿರುದ್ಯೋಗಿ ವಯಸ್ಕರ ಸಂಖ್ಯೆ ಬಹು ದೊಡ್ಡದು. ಅವರು ಮಕ್ಕಳ ಜಾಗದಲ್ಲಿ ಕೆಲಸ ಮಾಡಬಲ್ಲರು. ಅದರಿಂದ ಮಕ್ಕಳಿಗೆ ತಮ್ಮ ಬಾಲ್ಯವನ್ನು ಅನುಭವಿಸುವ  ಅವಕಾಶ ದೊರೆಯುವುದು.
    • ಭಾರತದಲ್ಲಿಯೇ ಅತಿ ಹೆಚ್ಚಿನ ಬಾಲ ಕಾರ್ಮಿಕರಿದ್ದಾರೆ.    ಭಾರತದ ೨೦೦೧ರ ಜನಗಣತಿಯ ಪ್ರಕಾರ  ೧.೨೫ ಕೋಟಿ  ೫-೧೪ ವ ರ್ಷ ದೊಳಗಿನ  ಮಕ್ಕಳು ವಿವಿಧ ವೃತ್ತಿಯಲ್ಲಿ ತೊಡಗಿದ್ದಾರೆ. ಸರಕಾರೇತರ ಸಂಸ್ಥೆಗಳ ಅಂದಾಜು ಇನ್ನೂ ಹೆಚ್ಚಾಗಿದೆ. ಏಕೆಂದರೆ ಬಹಳ ಮಕ್ಕಳು ಅಸಂಘಟಿತ ವಲಯಗಳಲ್ಲಿ ಮತ್ತು  ಸಣ್ಣ ಪ್ರಮಾಣದ ಗೃಹ ಘಟಕಗಳಲ್ಲಿ ಕೆಲಸ ಮಾಡುವರು.ಅಂಥಹವರೂ ಬಾಲಕಾರ್ಮಿಕರು.
    • ಮಕ್ಕಳನ್ನು ಕಾರ್ಮಿಕರಾಗಿ ದುಡಿಯಲು ನಿತ್ಯವೂ ಸಾಗಣಿಕೆ ಮಾಡಲಾಗುತ್ತಿದೆ. ದಲ್ಲಾಳಿಗಳು, ಮಧ್ಯವರ್ತಿಗಳು ಹಳ್ಳಿಗಳಿಗೆ ಆತ್ಮೀಯರಂತೆ ಹೋಗಿ ಮಕ್ಕಳನ್ನು ದೇಶದ ವಿವಿಧ ಕಡೆ ಸಾಗಿಸುವರು. ಬಿಹಾರದ , ಬಂಗಾಲದ ಮಕ್ಕಳು ಕರ್ನಾಟಕ, ಮುಂಬಯಿ , ದೆಹಲಿಯ   ಕಸೂತಿ ಘಟಕದಲ್ಲಿ ,ತಮಿಳು ನಾಡಿನಿಂದ ಉತ್ತರಪ್ರದೇಶದ ಸಿಹಿತಿಂಡಿ ಮಾಡುವ ಘಟಕದಲ್ಲಿ ಮತ್ತು  ಸೂರತ್ತಿಗೆ  ವಜ್ರ ಮತ್ತು ಹರಳುಗಳ ಪಾಲಿಷ್ ಮಾಡಲು ಬರುವರು.ನುರಾರು ಜನರು ಮಧ್ಯಮ ವರ್ಗದವರಲ್ಲಿ ಮನೆ ಕೆಲಸದವರಾಗಿರುವರು.

    ಲೈಂಗಿಕ ದುರ್ಬಳಕೆ

    ಮಿಥ್ಯೆ:    ಮಗುವಿನ ಲೈಂಗಿಕ ದುರ್ಬಳಕೆಯು ನಮ್ಮ ದೇಶದಲ್ಲಿ ಬಹು ವಿರಳ.  ಇದೆಲ್ಲ ಮಾಧ್ಯಮಗಳು ಹಬ್ಬಿಸಿರುವ ಹುಯಿಲು. ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಅಗುತ್ತಿದೆ. ಮಕ್ಕಳು ಮತ್ತು ಹದಿ ಹರೆಯದವರು ಕಥೆ ಕಟ್ಟಿ , ಕಲ್ಪನಾ ಲೋಕದಲ್ಲಿ ವಿಹರಿಸುವರು  .ಲೈಂಗಿಕ ದುರ್ಬಳಕೆ ಆಗಿದೆ ಎಂದು ಸುಳ್ಳು ಹೇಳುವರು. ಅದು ಏನಿದ್ದರೂ ಕೆಟ್ಟ ಮತ್ತು ನಡತೆ ಸರಿ ಇಲ್ಲದ ಹೆಣ್ಣುಗಳಿಗೆ ಮಾತ್ರ ಆಗುವುದು.
    ಸತ್ಯ:  ಕೆಲವೆ ತಿಂಗಳ, ಮತ್ತು  ಕೆಲವೇ ದಿನಗಳ  ಅತಿ ಚಿಕ್ಕ  ವಯಸ್ಸಿನ ಮಕ್ಕಳು  ಲೈಂಗಿಕ ದುರ್ಬಳಕೆಗೆ ಬಲಿಯಾಗಿದ್ದಾರೆ.  ಬಾಲಕಿಯರು ಈ ದುರ್ಬಳಕೆಗೆ  ಬೇಗ ಒಳಗಾಗುವರೆಂಬ ನಂಬಿಕೆ ಇದ್ದರೂ ಬಾಲಕರೂ ಸಹಾ ದುರ್ಬಳಕೆಗೆ  ಬಲಿಯಾಗುತ್ತಿದ್ದಾರೆ.
    ಮಾನಸಿಕ ಮತ್ತು ದೈಹಿಕ  ವಿಕಲತೆ ಇರುವವರು ಇನ್ನೂ ಹೆಚ್ಚಿನ ಅಪಾಯಕ್ಕೆ ಈಡಾಗುತ್ತಾರೆ. ಮಗುವಿನ ಲೈಂಗಿಕ ದರ್ಬಳಕೆಯ ಅಪಾಯ  ಎಲ್ಲ ಲಿಂಗ, ಜಾತಿ , ಕುಲ,ವರ್ಗ ಗಳಲ್ಲಿ ಮತ್ತು ನಗರ ಮತ್ತು ಗ್ರಾಮಾಂತರ ಪ್ರದೇಶದ ಮಕ್ಕಳಿಗೂ ವ್ಯಾಪಿಸಿದೆ.
    ಮಗುವನ್ನು  ಕೆಳಗೆ ಕಾಣಿಸಿದ ಯಾವುದೇ ವಿಧಾನದಿಂದ ದುರ್ಬಳಕೆ ಮಾಡಬಹುದು :
    • ಶಿಶ್ನ ಸೇರಿಸಿ ಲೈಂಗಿಕ  ಸಂಭೋಗ- ಬಲತ್ಕಾರ   ಅಥವ  ಯಾವುದೆ ವಸ್ತುವನ್ನು , ದೇಹದ ಯಾವುದೆ ಭಾಗದಲ್ಲಿ ಸೇರಿಸುವದು,
    • ಮಕ್ಕಳನ್ನು ಅಶ್ಲೀಲತೆಗೆ ಒಡ್ಡುವುದು ಇಲ್ಲವೆ  ಅಶ್ಲೀಲ ಸಾಮಗ್ರಿ ತಯಾರಿಕೆಗೆ ಬಳಕೆ ಮಾಡುವುದು
    • ಮಗುವಿನ ದೇಹದ ಯಾವುದೇ ಭಾಗವನ್ನು ನೇರವಾಗಿ ಇಲ್ಲವೆ ಪರೋಕ್ಷವಾಗಿ ಲೈಂಗಿಕ ತೃಪ್ತಿ ಪಡೆಯಲು ಮುಟ್ಟುವುದು.
    • ಲೈಂಗಿಕ ಉದ್ದೇಶದಿಂದ ಗುಪ್ತಾಂಗಗಳ ಪ್ರದರ್ಶನ
    • ಲೈಂಗಿಕ ಕ್ರಿಯೆಯನ್ನು ತೋರಿಸಿ   ತೃಪ್ತಿ ಪಡೆಯುವುದು ಇಲ್ಲವೆ ಇಬ್ಬರು ಅಥವ ಹೆಚ್ಚು ಮಕ್ಕಳನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಲು        ಬಲವಂತ ಮಾಡುವುದು
    • ಲೈಂಗಿಕ ಬಣ್ಣವಿರುವ ಮಾತನಾಡುವುದು ಅಥವ ಅಸಭ್ಯ , ಅಶ್ಲೀಲ ಬೈಗುಳಗಳನ್ನು ಮಗುವಿನ ಮೇಲೆ ಬಳಸುವುದು
    • ಕೊಯಿಮತ್ತೂರು: ನಗರದ ಹೊರವಲಯದ  ಮದ್ದುಕರಿ ಪ್ರಾಥಮಿಕ ಶಾಲೆಯ ಮುಖ್ಯ ಉಪಾಧ್ಯಾಯನೊಬ್ಬನನ್ನು  ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಬೈದ ಆಪಾದನೆಯ ಮೇರೆಗೆ ಬಂಧಿಸಲಾಗಿದೆ
    • ಮೂರನೆ ತರಗತಿಯ ೮ ವರ್ಷದ ಹುಡುಗಿಯ ದೂರಿನ ಮೇಲೆ ಪೋಲೀಸರು  ಅವನನ್ನು ಬಂಧಿಸಿ ವಿವಿಧ .ಪ್ರಕರಣಗಳ ಅನ್ವಯ ಮೊಕದ್ದಮೆ ದಾಖಲುಮಾಡಿದ್ದಾರೆ.ಅದರಲ್ಲಿ ಲೈಂಗಿಕ ದುರ್ಬಳಕೆಯ ಪ್ರಯತ್ನ ವೂ ಸೇರಿದೆ. ಸುಮಾರು ೧೦೦ ಜನ ವಿದ್ಯಾರ್ಥಿಗಳು ಮದುಕ್ಕರಿ ಪೋಲೀಸು ಠಾಣೆಗೆ ಹೋಗಿ  ಆರೋಪಿಯ ಮೇಲೆ ತಕ್ಷಣದ ಕ್ರಮಕ್ಕಾಗಿ ಒತ್ತಾಯಿಸಿದ್ದಾರೂ. ಆ ಮುಖ್ಯ ಉಪಾಧ್ಯಾಯನೇ  ದೂರು ನೀಡಿದರೆ. ಮಕ್ಕಳು ಗಂಭೀರ ಪರಿಣಾಮ ಎದುರಿಸಬೇಕಾಗುವುದು ಎಂದು ಹೆದರಿಸಿದ್ದಾನೆ
    ಮೂಲ: ಪಿಟಿ ಐ , 25 ಮಾರ್ಚ 2005
    ಆಕ್ರಮಣಕಾರಿಯ ಕಾಳಜಿ, ಮೃದುತ್ವ ಮತ್ತು ಪ್ರೀತಿಯು ಮಗುವಿಗೆ ಬಹಳ ಕಿರಿಕಿರಿವೆನಿಸಿಬಹುದು ಮತ್ತು ಅದರಿಂದ ಮಗುವಿನ ಆತ್ಮವಿಶ್ವಾಸ ಕುಗ್ಗಿ ,   ಅಪನಂಬಿಕೆ  ಹೆಚ್ಚಿ , ಅಪರಾಧಿ ಭಾವ ಕಾಡುವುದು.
    ಮಗುವನ್ನು ಅದಕ್ಕೆ ಗೊತ್ತಿರುವವರು ಇಲ್ಲವೆ ಅಪರಿಚಿತರು ದುರ್ಬಳಕೆ ಮಾಡಿಕೊಳ್ಳುವರು
    ಹೀಗೆ ಮಾಡುವವನು  ೯೦%  ಘಟನೆಗಳಲ್ಲಿ ಮಗುವಿಗೆ ಪರಿಚಿತರಾದ ಮತ್ತು ನಂಬಿಗೆಯ  ವ್ಯಕ್ತಿಯೇ ಆಗಿರುವನು. ದುರ್ಬಳಕೆ ಮಾಡುವವನು ನಂಬಿಕೆಯ ಸಂಬಂಧವನ್ನು ಉಲ್ಲಂಘಿಸಿ   ತನ್ನ ಅಧಿಕಾರ ಮತ್ತು ಸ್ಥಾನದ ದುರುಪಯೋಗ ಮಾಡಿಕೊಳ್ಳುವನು. ಅನೇಕ ಸಂದರ್ಭಗಳಲ್ಲಿ ಮಗುವಿಗೆ ಅತಿ ಸಮೀಪದ ವ್ಯಕ್ತಿಯೇ- ತಂದೆ, ಅಣ್ಣ, ಚಿಕ್ಕಪ್ಪ, ಮಾವ, ನೆರಮನೆಯವ ಆಗಿರಬಹುದು. ಅವನು ಕುಟುಂಬದ ಸದಸ್ಯನಾಗಿದ್ದರೆ ಅದು ನಿಷಿದ್ಧ ಗಮನವೆನಿಸುವುದು.
    ಲೈಂಗಿಕ ದುರ್ಬಳಕೆಯು ಹಿಂದಿನಿಂದಲೂ ಸಮಾಜದಲ್ಲಿದೆ. ಹೆಣ್ಣು ಮಗುವನ್ನು ವೇಶ್ಯಾ ವೃತ್ತಿಗಾಗಿ ಮಾರುವುದು, ಧರ್ಮ,  ಸಂಪ್ರದಾಯದ ಹೆಸರಲ್ಲಿ ದೇವದಾಸಿ, ಜೋಗಿನಿಯಾಗಿಸುವುದು ಇದಕ್ಕೆ ಉದಾಹರಣೆ. ಆದರೆ ಕಾಲ ಗತಿಸಿದಂತೆ ಅರಿವು ಹೆಚ್ಚುತ್ತಿದೆ. ಮಾಧ್ಯಮಗಳ ವರದಿಗಳು ಅನೇಕ ಸಲ ಸತ್ಯವನ್ನು ಮರೆಮಾಚುತ್ತವೆ.
    ದುರ್ಬಳಕೆ ಮಾಡಿಕೊಳ್ಳುವವರು ಹೆಂಡತಿಯ ಇಲ್ಲವೆ ವಯಸ್ಕ ಸಂಗಾತಿಯ ಬದಲಾಗಿ ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಅವರ ಜೊತೆ ಜೊತೆಯಾಗಿಯೇ ಈ ಕೆಲಸ ಮಾಡುವರು. ಅವರು ಮಾನಸಿಕವಾಗಿ ಅಸ್ವಸ್ಥರಲ್ಲ. ಎಲ್ಲರಂತೆಯೇ ಇರುವರು. ತಮ್ಮ  ದುಷ್ಕೃತ್ಯವನ್ನು   ಸಮರ್ಥಿಸಿಕೊಳ್ಳಲು ಕೊಡುವ ಕಾರಣಗಳಲ್ಲಿ ಇದೂ ಒಂದು ನೆಪ.. ಸ್ವಲ್ಪ ಜನ ದುರ್ಬಳಕೆಯನ್ನು  ಜನರ ಎದುರೇ ಮಾಡುವಷ್ಟು ನಾಚಿಕೆ ಇಲ್ಲದವರಾಗಿರುವರು.
    ಮಕ್ಕಳು ಯಾರಿಗೂ ದುರ್ಬಳಕೆಯ ಬಗ್ಗೆ,  ಅಶ್ಲೀಲ ಚಿತ್ರಗಳನ್ನು ನೋಡಲು ಮಾಡುವ ಒತ್ತಾಯದ ಕುರಿತು  ಹೇಳಲು ಹೆದರುವರು .ಮಗುವು ಎಷ್ಟೆ ದೊಡ್ಡವನಾಗಿದ್ದರೂ ದುರ್ಬಳಕೆ ಮಾಡುವವರು ಅವನಿಗಿಂತ ಬಲಶಾಲಿಗಳಾಗಿರುವರು. ಮಗುವು ಅವನಿಗೆ ಯಾವುದೆ ರೀತಿಯಲ್ಲಿ ಸರಿ ಸಾಟಿಯಲ್ಲ.   ದುರ್ಬಳಕೆ ಮಾಡುವವನ ವಂಚನೆಯನ್ನು ಹೇಳಲು ಅದಕ್ಕೆ ಆಗುವುದಿಲ್ಲ  ಏಕೆಂದರೆ   ಅವನು ಹತ್ತಿರದ ಬಂಧುವಾಗಿರುವನು. ತಾಯಿಗೆ  ಈ ವಿಷಯ ಗೊತ್ತಾದರೂ ಏನೂ ಮಾಡದ ಅಸಾಹಯಕ ಸ್ಥಿತಿಯಲ್ಲಿರುವಳು. ಕುಟುಂಬ ಒಡೆಯುವ ಭಯ ಇಲ್ಲವೇ ಯಾರೂ ನಂಬುವುದಿಲ್ಲ ಎಂಬ ಅನುಮಾನ ಮೌನಕ್ಕೆ ಕಾರಣ.   ತಾಯಿತಂದೆಯರು, ಕುಟುಂಬದಲ್ಲಿನ ಹಿರಿಯರು ಈ ವಿಷಯವನ್ನು ನಿರ್ಲಕ್ಷಮಾಡುವರು. ನಡೆದೆ ಇಲ್ಲ ಎಂದು ವಾದಿಸಬಹುದು.  ಮಕ್ಕಳು ತಿಳಿಸುವ ದುರ್ಬಳಕೆ ಮತ್ತು ಶೋಷಣೆಯ ವಿಷಯ ಬಹುತೇಕ ಸತ್ಯವಾಗಿರುವುದು.  ಲೈಂಗಿಕ ದುರ್ಬಳಕೆ, ನಿಷಿದ್ದ ಗಮನವನ್ನು , ಮಗುವಿನ ಸಾಗಣಿಕೆಯನ್ನು  ಭ್ರಮೆ ಎಂದು ಸಮಾಜವು ತಿರಸ್ಕಾರ ಮಾಡುವುದು.
    ಮಕ್ಕಳು ಮುಗ್ಧರು ಮತ್ತು ನಿರ್ಬಲರು. ಅವರಿಗೆ ಲೈಂಗಿಕ ತಿಳುವಳಿಕೆ ಇಲ್ಲ. ಮತ್ತು ಹಿರಿಯರ ಲೈಂಗಿಕತೆಗೆ ಮಕ್ಕಳ ವರ್ತನೆಗೆ  ಕಾರಣವಲ್ಲ. ಮಕ್ಕಳಿಗೆ ತಿಳುವಳಿಕೆ ಇದ್ದರೂ  ಅದು ಮಕ್ಕಳ ಮೇಲಿನ ನ್ಯೇತಾತ್ಮಕ ಅಭಿಪ್ರಾಯ ಮತ್ತು ಅವರನ್ನೆ ದೂಷಿಸುವುದಕ್ಕೆ ಕಾರಣವಾಗಬಾರದು. ವೇಶ್ಯೆಯೂ ಕೂಡಾ ಬಲತ್ಕಾರಕ್ಕೆ  ಹಲ್ಲೆಗೆ, ಗುರಿಯಾಗಬಹುದು. ಆಗಲೂ ಕಾನೂನು ಅವಳ ಸಹಾಯಕ್ಕೆ ಬರುವುದು. ಮಕ್ಕಳನ್ನೇ ಅವರು ಅನುಭವಿಸುವ ನೋವಿಗೆ ತೆಗಳುವುದರಿಂದ  ಘಟನೆಯ ಹೊಣೆಯನ್ನು ಮಗುವಿನ ಮೇಲೆ  ಹಾಕಿದಂತಾಗುವುದು.
    ಮಗುವಿನ ವಿಷಯದಲ್ಲಿ ಒಪ್ಪಿಗೆಯ ಮಾತೇ ಬರುವುದಿಲ್ಲ. ಕಾನೂನಿನ  ಪ್ರಕಾರ ೧೬ ವರ್ಷದ ಕೆಳಗಿನ ಹುಡುಗಿಯ ಸಂಭೋಗವು  ಬಲತ್ಕಾರ ಎನಿಸುವುದು.
    ಮಕ್ಕಳು ದುರ್ಬಳಕೆಯನ್ನು ವರದಿಮಾಡಿದಾಗ ಅವರ ನಂಬಿಕಾರ್ಹತೆಯೇ ಪ್ರಶ್ನೆಗೆ ಒಳಗಾಗುವುದು. ಅವರ ನಂಬಿಕೆ ಮತ್ತು ವಿಶ್ವಾಸವನ್ನೆ ಹಳಿಯಲಾಗುವುದು. ಮಗುವಿನ ಪಾಪ ಪ್ರಜ್ಞೆಯನ್ನೆ ಬಳಸಿಕೊಂಡು ಅವರ ವರ್ತನೆಯಿಂದಲೇ ಘಟನೆ ನೆಡೆದಿದೆ ಎಂದು ಯೋಚಿಸಲಾಗುವುದು.
    ಮೂಲ : ಅರ್ಥಕ್ಕೆ ಸಂಬಂಧಿಸಿದೆಯೋ ಅಥವ ಗಾಂಭೀರ್ಯವೋ? ಮಕ್ಕಳ ಲೈಂಗಿಕ ಶೋಷಣೆ ವಿರುದ್ಧದ ಉಪಗುಂಪು, ಮಕ್ಕಳ ಹಕ್ಕುಗಳ ಸಮಾವೇಶದ ಸರ್ಕಾರೇತರ ಸಂಸ್ಥೆಗಳ ಒಂದು ಗುಂಪು, ಜನವರಿ 2005

    ಮಗುವಿನ ಮೇಲೆ ಲೈಂಗಿಕ ದುರ್ಬಳಕೆಯ ಪರಿಣಾಮ

    ದುರ್ಬಳಕೆಯ ಪರಿಣಾಮವು  ತತಕ್ಷಣ ಅಥವ ದೂರಗಾಮಿಯೂ ಆಗಿರಬಹದು:
    • ಗಾಯ, ಕಚ್ಚಿರುವುದು.ತೆರಚು, ಗುಪ್ತಾಂಗದಲ್ಲಿ ರಕ್ತಸ್ರಾವ ಮೊದಲಾದ ದೈ ಹಿಕ  ನೋವುಗಳು
    • ಮಕ್ಕಳು  ಅನೇಕ ಸಲ ತಪ್ಪಿತಸ್ಥ ಭಾವನೆ, ಖಿನ್ನತೆ, ಆತಂಕ ಮತ್ತು ಲೈಂಗಿಕ ನಿರ್ಬಲತೆಯಿಂದ ಬಳಲುವರು. ಕುಟುಂಬದಿಂದ ಸಾವಕಾಶವಾಗಿ ದೂರವಾಗುವರು
    • ಹಲವು ಮಕ್ಕಳು ವಯಸ್ಕ  ಸಂಬಂಧಗಳಲ್ಲಿ ಸಮಸ್ಯೆ ಎದುರಿಸುವರು. ಸರಿಯಾದ ಲೈಂಗಿಕ ಸಂಬಂಧ ಹೊಂದುವಲ್ಲಿ ವಿಫಲರಾಗುವರು..
    • ಲೈಂಗಿಕ ದುರ್ಬಳಕೆಯ  ಜೊತೆ ಜೊತೆಗೆ  ವಿಶ್ವಾಸದ್ರೋಹವು ಅವರನ್ನು ಬಹಳಕಾಲ ಕಾಡುವುದು,  ಮನಶಾಸ್ತ್ರಜ್ಞರಿಂದ ಚಿಕಿತ್ಸೆ ಕೊಡಿಸದಿದ್ದರೆ ಕೆಲವು ಬಾರಿ  ಜೀವವಿರುವವರೆಗೂ ಘಾಸಿ ಮಾಡುವುದು.

    ಶಾರೀರಿಕ ಶಿಕ್ಷೆಗಳು :

    1. ಮಕ್ಕಳನ್ನು  ಗೋಡೆಗೆ ಕುರ್ಚಿ ಕೂಡಿಸುವುದು.
    2. ಶಾಲಾ ಚೀಲವನ್ನು ಅವರ ತಲೆಯ ಮೇಲೆ ಹೊರಿಸುವುದು.
    3. ಬಿಸಿಲಲ್ಲಿ ದಿನಪೂರ್ತಿ ನಿಲ್ಲಿಸುವುದು.
    4. ಬಾಗಿ ನಿಂತು ಕೆಲಸ ಮಾಡಲು ಹೇಳುವುದು.
    5. ಬೆಂಚಿನ ಮೇಲೆ ನಿಲ್ಲಿಸುವುದು.
    6. ಕೈ ಎತ್ತಿ ನಿಲ್ಲಿಸುವುದು.
    7. ಪೆನ್ಸಿಲ್ಲನ್ನು ಬಾಯಿಯಲ್ಲಿ ಕಚ್ಚಿಸಿ  ನಿಲ್ಲಿಸುವುದು
    8. ಮೊಣ ಕಾಲು ಕೆಳಗೆ ಕೈ ಹಾಕಿ ಕಿವಿ ಹಿಡಿಸುವುದು
    9. ಕೈಕಟ್ವುವುದು
    10. ಬಸ್ಕಿ ಹೊಡೆಸುವುದು.
    11. ಬೆತ್ತದಿಂದ ಹೊಡೆಯುವುದು.
    12. ಕಿವಿ ಹಿಂಡುವುದು.

    ಭಾವನಾತ್ಮಕ  ಶಿಕ್ಷೆಗಳು:

    1. ಅನ್ಯ ಲಿಂಗಿಯರಿಂದ ಹೊಡೆಸುವುದು
    2. ಅವನ ತಪ್ಪಿಗೆ ಅನುಗುಣವಾಗಿ ಲೇಬಲ್ ಮಾಡುವುದು
    3. ಶಾಲೆಯ ಅಥವ ಆಟದ ಮೈದಾನದ ಸುತ್ತಲೂ  ಓಡಲು ತಿಳಿಸುವುದು.
    4. ತರಗತಿಯಲ್ಲಿ ಹಿಂದೆ ನಿಂತು  ಕೆಲಸ ಪೂರ್ತಿಮಾಡಲು ಹೇಳವುದು.
    5. ಕೆಲ ದಿನಗಳಿಗೆ ಶಾಲೆಯಿಂದ ಅಮಾನತ್ತು ಮಾಡುವುದು
    6. ಅವನ ಬೆನ್ನಿಗೆ “ನಾನು ಮೂರ್ಖ’  , “ನಾನು ದಡ್ಡ” , “ ನಾನು ಕತ್ತೆ”  ಎಂದು ಬರೆದ ಹಾಳೆಯನ್ನು ಹಚ್ಚುವುದು.
    7. ಪ್ರತಿ ತರಗತಿಗೆ ಅವನನ್ನು ಕರೆದೊಯ್ಯವುದು.
    8. ವಿದ್ಯಾರ್ಥಿಗಳ ಷರ್ಟು ತೆಗೆಸುವುದು

    ನ್ಯೇತ್ಯಾತ್ಮಕ  ಒತ್ತಡಗಳು :

    1. ಊಟ ,ಮತ್ತು ವಿರಾಮದ ಅವಧಿಯಲ್ಲಿ ಹೊರಗೆ  ಬಿಡದೆ ಇರುವುದು
    2. ಕತ್ತಲ ಕೋಣೆಯಲ್ಲಿ ಕೂಡಿಹಾಕುವುದು .
    3. ತಾಯಿತಂದೆಯರನ್ನು ಕರೆಸುವುದು. ಇಲ್ಲವೆ ಅವರಿಂದ ಪತ್ರ ತರಲು ಹೇಳುವುದು.
    4. ಅವರನ್ನು ಮನೆಗೆ ಕಳುಹಿಸುವುದು ಇಲ್ಲವೆ ಬಾಗಿಲ ಹೊರಗೆ ನಿಲ್ಲಿಸುವುದು.
    5. ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು.
    6. ಮಗುವಿಗೆ ಆವರಣವನ್ನು ಶುಚಿಗೊಳಿಸಲು ತಿಳಿಸುವುದು.
    7. ಶಾಲೆಯಸುತ್ತಲೂ ಇಲ್ಲವೆ ಆಟದ ಮೈದಾನದ ಸುತ್ತಲೂ ಓಡಿಸುವುದು..
    8. ಮುಖ್ಯೋಪಾಧ್ಯಾಯರ ಹತ್ತಿರ ಕಳುಹಿಸುವುದು.
    9. ತರಗತಿಯಲ್ಲಿ ಪಾಠ ಮಾಡಲು ತಿಳಿಸುವುದು.
    10. ಶಿಕ್ಷಕರು ಬರುವವರೆಗೆ ನಿಲ್ಲಿಸುವುದು.
    11. ಮೌಖಿಕ ಎಚ್ಚರಿಕೆ ನೀಡುವುದು, ದಿನಚರಿಯಲ್ಲಿ ಬರೆಯುವುದು..
    12. ಮಗುವಿಗೆ TC   ಕೊಡುವುದಿಲ್ಲವೆಂದು ಹೆದರಿಸುವುದು.
    13. ಆಟ ಮತ್ತು ಇತರ ಚಟುವಟಿಕೆಗೆ ಬಿಡದೆ ಇರುವುದು.
    14. ಅಂಕಗಳನ್ನು ಖೋತಾ ಮಾಡುವುದು.
    15. ಮೂರು ದಿನ ತಡವಾದರೆ ಒಂದುದಿನ ಶಾಲೆಗೆ ಗೈರುಹಾಜರಿ ಎಂದು ಪರಿಗಣಿಸುವುದು.
    16. ಅತಿ ಹೆಚ್ಚು ಗೃಹ ಪಾಠ ಕೊಡುವುದು.
    17. ದಂಡ ವಿಧಿಸುವುದು.
    18. ತರಗತಿಯ ಒಳಗೆ ಬಿಡದೆ ಇರುವುದು.
    19. ಒಂದು ದಿನ, ವಾರ, ತಿಂಗಳು ತರಗತಿಯಲ್ಲಿ ನೆಲದ ಮೇಲೆ ಕೂಡಿಸುವುದು .
    20. ಅವರ ಶಿಸ್ತಿನ ದಾಖಲೆಯಲ್ಲಿ ಕಪ್ಪು  ಗುರುತು ಹಾಕುವುದು. 

    ಅಪಾಯ



    ಶಾರೀರಿಕ ಶಿಕ್ಷೆಯು ಮಗುವಿಗೆ ಹೇಗೆ ಅಪಾಯ ಉಂಟುಮಾಡುವುದು?

    ಅದು ಮಗುವಿನ ಮನದ ಮೇಲೆ  ನಿಷೇಧಾತ್ಮಕ ಪರಿಣಾಮ ಬೀರುವುದು. ಸಾಮಾನ್ಯವಾಗಿ  ಎಳೆಯ ಮನದಲ್ಲಿ ದ್ವೇಷ,ಭಯ ಮತ್ತು ಉಗ್ರತೆಯ ರೂಪ ಪಡೆಯುವುದು.
    ಈ ರೀತಿಯ ಶಿಕ್ಷೆಯು ಕೋಪ , ಅಸಮಾಧಾನ ಮತ್ತು  ಕೀಳರಿಮೆಗೆ  ಕಾರಣವಾಗುವುದು. ಅದು ಅಸಹಾಯಕತೆ , ದೈನ್ಯದಭಾವನೆಗೆ  ಎಡೆಮಾಡಿ  ಮಗುವಿನ  ಆತ್ಮ ಗೌರವಕ್ಕೆ ಘಾಸಿಮಾಡುವುದು. ಇದರಿಂದ ಮಗುವು   ಹಿಂಜರಿಕೆ ಇಲ್ಲವೆ ಆಕ್ರಮಣಕಾರಿ ಮನೋಭಾವ  ಬೆಳೆಸಿಕೊಳ್ಳುವುದು.
    ಸಮಸ್ಯೆಯ ಪರಿಹಾರಕ್ಕೆ  ಅದು  ಹಿಂಸೆ  ಮತ್ತು ಪ್ರತಿಕಾರವನ್ನು ಅವಲಂಬಿಸುವುದು.
    ಮಕ್ಕಳು ಹಿರಿಯರು ಮಾಡುವುದನ್ನು ಅನುಕರಿಸಬಹುದು. ಮಕ್ಕಳು ಹಿಂಸೆ ಮಾಡುವುದ ಸರಿ ಅದರಲ್ಲಿ ಯಾವುದೆ ತಪ್ಪಿಲ್ಲ ಎಂದು ನಂಬುವರು. ಇದರಿಂದಾಗಿ ತಂದೆ ತಾಯಿ ಶಿಕ್ಷಕರಮೇಲೂ ಹಲ್ಲೆ ಮಾಡುವರು.ಬಾಲ್ಯದಲ್ಲಿ ಶಾರೀರಿಕ ಶಿಕ್ಷೆಗೆ ಬಲಿಯಾದವರು ಮುಂದೆ ವಯಸ್ಕರಾದಾಗ  ತಮ್ಮ ಸಂಗಾತಿಗಳನ್ನು, ಮಕ್ಕಳನ್ನು, ಗೆಳೆಯರನ್ನು ಹೊಡೆಯಲು ಮೊದಲು ಮಾಡುವರು.
    ಶಾರೀರಿಕ ಶಿಕ್ಷೆಯು ಶಿಸ್ತು ತರುವಲ್ಲಿ ಪರಿಣಾಮಕಾರಿಯಾದ ಸಾಧನವಲ್ಲ. ಅದು ವ್ಯಕ್ತಿಯನ್ನು ಉತ್ತೇಜಿಸುವದು ವಿರಳ. ಅದು ಮಗುವಿಗೆ ಒಳಿತಿಗಿಂತ ಕೆಡುಕು ಮಾಡುವುದೆ ಹೆಚ್ಚು..
    ಶಿಕ್ಷೆಯು  ಮಗುವು ಅಶಿಸ್ತಿನ ನಡವಳಿಕೆಯನ್ನು ಮತ್ತೆ ಮಾಡದಂತೆ ತಕ್ಕ ಮಟ್ಟಿಗೆ ತಡೆಯುವುದು. ಆದರೆ ಅದು ಅವನಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ. ಅವನನ್ನು ಹೆಚ್ಚು ಜಾಣನನ್ನಾಗಿಯೂ ಮಾಡುವುದಿಲ್ಲ.
    ಮಗುವಿನ ಮೇಲೆ ಅದು ಹಲವು ನಿಷೇಧಾತ್ಮಕ ಪರಿಣಾಮ ಬೀರಬಹುದು..
    ಅನೇಕ ಬೀದಿಬದಿಯ ಮತ್ತು  ಬಾಲ ಕಾರ್ಮಿಕರಾಗಿರುವ ಮಕ್ಕಳು  ತಾವು ಮನೆಯಿಂದ ಓಡಿಬರಲು ಶಾಲೆಯಲ್ಲಿನ, ಕುಟುಂಬದಲ್ಲಿನ,  ಶಾರೀರಿಕ ಶಿಕ್ಷೆಯೂ ಒಂದು ಕಾರಣ ಎಂದು ಹೇಳಿದ್ದಾರೆ
    ಮಕ್ಕಳಿಗೆ ಶಿಸ್ತು ಕಲಿಸುವ  ಹಕ್ಕಿಗಾಗಿ ಅವರ ಬೆಳವಣಿಗೆ ಮತ್ತು ಪಾಲ್ಗೊಳ್ಳುವಿಕೆಯನ್ನು ಕುಂಠಿತ ಗೊಳಿಸಬಾರದು. ಮಕ್ಕಳ ಪಾಲುಗೊಳ್ಳುವ ಹಕ್ಕು ಅವರ ಶಿಸ್ತಿನ ಹಾದಿಯನ್ನು ಸುಗಮಗೊಳಿಸಬಲ್ಲದು.
    ಏನೇಆದರೂ ಯಾವುದೇ ಧರ್ಮ ಅಥವ ಕಾನೂನು  ಶಾರೀರಿಕ ಶಿಕ್ಷೆಯನ್ನು ಒಪ್ಪುವುದಿಲ್ಲ.  ಯಾರಿಗೇ ಆದರೂ  ತಮಗೆ ಪರಿಸ್ಥತಿಯನ್ನು  ಬೇರೆ ವಿಧಾನದಲ್ಲಿ ನಿಭಾಯಿಸಲು  ಆಗಲಿಲ್ಲ ಎಂದು ಮಕ್ಕಳಿಗೆ ಶಾರೀರಿಕ ಶಿಕ್ಷೆ ಕೊಡುವ ಕಾನೂನಿನ ಅಥವ ನೈತಿಕ ಅಧಿಕಾರವಿಲ್ಲ
    • ಶಿಸ್ತನ್ನು  ಕಲಿಸುವುದು ಸಾಧ್ಯವಿಲ್ಲ. ಅದು ಅವರಲ್ಲಿ ಮೂಡಬೇಕು.
    • ಶಿಸ್ತು ಒಂದು ದೃಷ್ಟಿಕೋನ,  ನಡವಳಿಕೆ, ಹೊಣೆ ಅಥವ ಬದ್ಧತೆ
    • ಶಿಸ್ತು  ಮೂಲಭೂತವಾಗಿ ಆಂತರಿಕ. ಅದನ್ನು ಹೇರುವ ಪ್ರಯತ್ನವು ಹೊರಗಿನ ಪ್ರಕ್ರಿಯೆ.
    ಶಾರೀರಿಕ ಶಿಕ್ಷೆಯು ಮಗುವಿಗೆ ಹೇಗೆ ಅಪಾಯ ಉಂಟುಮಾಡುವುದು? ಅದು ಮಗುವಿನ ಮನದ ಮೇಲೆ  ನಿಷೇಧಾತ್ಮಕ ಪರಿಣಾಮ ಬೀರುವುದು. ಸಾಮಾನ್ಯವಾಗಿ  ಎಳೆಯ ಮನದಲ್ಲಿ ದ್ವೇಷ,ಭಯ ಮತ್ತು ಉಗ್ರತೆಯ ರೂಪ ಪಡೆಯುವುದು.ಈ ರೀತಿಯ ಶಿಕ್ಷೆಯು ಕೋಪ , ಅಸಮಾಧಾನ ಮತ್ತು  ಕೀಳರಿಮೆಗೆ  ಕಾರಣವಾಗುವುದು. ಅದು ಅಸಹಾಯಕತೆ , ದೈನ್ಯದಭಾವನೆಗೆ  ಎಡೆಮಾಡಿ  ಮಗುವಿನ  ಆತ್ಮ ಗೌರವಕ್ಕೆ ಘಾಸಿಮಾಡುವುದು. ಇದರಿಂದ ಮಗುವು   ಹಿಂಜರಿಕೆ ಇಲ್ಲವೆ ಆಕ್ರಮಣಕಾರಿ ಮನೋಭಾವ  ಬೆಳೆಸಿಕೊಳ್ಳುವುದು. ಸಮಸ್ಯೆಯ ಪರಿಹಾರಕ್ಕೆ  ಅದು  ಹಿಂಸೆ  ಮತ್ತು ಪ್ರತಿಕಾರವನ್ನು ಅವಲಂಬಿಸುವುದು. ಮಕ್ಕಳು ಹಿರಿಯರು ಮಾಡುವುದನ್ನು ಅನುಕರಿಸಬಹುದು. ಮಕ್ಕಳು ಹಿಂಸೆ ಮಾಡುವುದ ಸರಿ ಅದರಲ್ಲಿ ಯಾವುದೆ ತಪ್ಪಿಲ್ಲ ಎಂದು ನಂಬುವರು. ಇದರಿಂದಾಗಿ ತಂದೆ ತಾಯಿ ಶಿಕ್ಷಕರಮೇಲೂ ಹಲ್ಲೆ ಮಾಡುವರು.ಬಾಲ್ಯದಲ್ಲಿ ಶಾರೀರಿಕ ಶಿಕ್ಷೆಗೆ ಬಲಿಯಾದವರು ಮುಂದೆ ವಯಸ್ಕರಾದಾಗ  ತಮ್ಮ ಸಂಗಾತಿಗಳನ್ನು, ಮಕ್ಕಳನ್ನು, ಗೆಳೆಯರನ್ನು ಹೊಡೆಯಲು ಮೊದಲು ಮಾಡುವರು.ಶಾರೀರಿಕ ಶಿಕ್ಷೆಯು ಶಿಸ್ತು ತರುವಲ್ಲಿ ಪರಿಣಾಮಕಾರಿಯಾದ ಸಾಧನವಲ್ಲ. ಅದು ವ್ಯಕ್ತಿಯನ್ನು ಉತ್ತೇಜಿಸುವದು ವಿರಳ. ಅದು ಮಗುವಿಗೆ ಒಳಿತಿಗಿಂತ ಕೆಡುಕು ಮಾಡುವುದೆ ಹೆಚ್ಚು..ಶಿಕ್ಷೆಯು  ಮಗುವು ಅಶಿಸ್ತಿನ ನಡವಳಿಕೆಯನ್ನು ಮತ್ತೆ ಮಾಡದಂತೆ ತಕ್ಕ ಮಟ್ಟಿಗೆ ತಡೆಯುವುದು. ಆದರೆ ಅದು ಅವನಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಿಲ್ಲ. ಅವನನ್ನು ಹೆಚ್ಚು ಜಾಣನನ್ನಾಗಿಯೂ ಮಾಡುವುದಿಲ್ಲ.ಮಗುವಿನ ಮೇಲೆ ಅದು ಹಲವು ನಿಷೇಧಾತ್ಮಕ ಪರಿಣಾಮ ಬೀರಬಹುದು.. ಅನೇಕ ಬೀದಿಬದಿಯ ಮತ್ತು  ಬಾಲ ಕಾರ್ಮಿಕರಾಗಿರುವ ಮಕ್ಕಳು  ತಾವು ಮನೆಯಿಂದ ಓಡಿಬರಲು ಶಾಲೆಯಲ್ಲಿನ, ಕುಟುಂಬದಲ್ಲಿನ,  ಶಾರೀರಿಕ ಶಿಕ್ಷೆಯೂ ಒಂದು ಕಾರಣ ಎಂದು ಹೇಳಿದ್ದಾರೆ ಮಕ್ಕಳಿಗೆ ಶಿಸ್ತು ಕಲಿಸುವ  ಹಕ್ಕಿಗಾಗಿ ಅವರ ಬೆಳವಣಿಗೆ ಮತ್ತು ಪಾಲ್ಗೊಳ್ಳುವಿಕೆಯನ್ನು ಕುಂಠಿತ ಗೊಳಿಸಬಾರದು. ಮಕ್ಕಳ ಪಾಲುಗೊಳ್ಳುವ ಹಕ್ಕು ಅವರ ಶಿಸ್ತಿನ ಹಾದಿಯನ್ನು ಸುಗಮಗೊಳಿಸಬಲ್ಲದು.ಏನೇಆದರೂ ಯಾವುದೇ ಧರ್ಮ ಅಥವ ಕಾನೂನು  ಶಾರೀರಿಕ ಶಿಕ್ಷೆಯನ್ನು ಒಪ್ಪುವುದಿಲ್ಲ.  ಯಾರಿಗೇ ಆದರೂ  ತಮಗೆ ಪರಿಸ್ಥತಿಯನ್ನು  ಬೇರೆ ವಿಧಾನದಲ್ಲಿ ನಿಭಾಯಿಸಲು  ಆಗಲಿಲ್ಲ ಎಂದು ಮಕ್ಕಳಿಗೆ ಶಾರೀರಿಕ ಶಿಕ್ಷೆ ಕೊಡುವ ಕಾನೂನಿನ ಅಥವ ನೈತಿಕ ಅಧಿಕಾರವಿಲ್ಲ.
    • ಶಿಸ್ತನ್ನು  ಕಲಿಸುವುದು ಸಾಧ್ಯವಿಲ್ಲ. ಅದು ಅವರಲ್ಲಿ ಮೂಡಬೇಕು.
    • ಶಿಸ್ತು ಒಂದು ದೃಷ್ಟಿಕೋನ,  ನಡವಳಿಕೆ, ಹೊಣೆ ಅಥವ ಬದ್ಧತೆ
    • ಶಿಸ್ತು  ಮೂಲಭೂತವಾಗಿ ಆಂತರಿಕ. ಅದನ್ನು ಹೇರುವ ಪ್ರಯತ್ನವು ಹೊರಗಿನ ಪ್ರಕ್ರಿಯೆ.

    ಪರೀಕ್ಷಾ ಒತ್ತಡ


    • ಮಿಥ್ಯ:  ಭಾರತದ  ಶಿಕ್ಷಣ ಪದ್ದತಿಯು ಹೊರತರುತ್ತಿರುವ ಜಾಣರನ್ನು  ನೋಡಿ ವಿಶ್ವವು ವಿಸ್ಮಯಗೊಂಡಿದೆ.   ಭಾರತದ  ವಿದ್ವಾಂಸರು, ಇಂಜನಿಯರುಗಳು, ವಿಜ್ಞಾನಿಗಳು  ಮತ್ತು ಇತರೆ ವೃತ್ತಿಪರರು ಪಾಶ್ಚಿಮಾತ್ಯ  ದೇಶಗಳಲ್ಲಿ ನೆಲೆಸಿ ತಮಗೂ , ರಾಷ್ಟ್ರಕ್ಕೂ ಹೆಸರು ತಂದಿದ್ದಾರೆ.  ಕಠಿಣ ಶಿಸ್ತಿನಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾಪದ್ಧತಿಯಲ್ಲಿಯೂ ಗೆಲುವಿನ ದಾರಿ ತೋರಿವೆ. ಎಲ್ಲ ತಾಯಿತಂದೆಯರು ತಮ್ಮ ಮಕ್ಕಳನ್ನು ಉತ್ತಮ ಫಲಿತಾಂಶ ನೀಡುವ ಶಾಲೆಗಳಿಗೆ ಸೇರಿಸಲು ಬಯಸುವರು
    • ಸತ್ಯ :  ಭಾರತವು ವಿಶ್ವದಲ್ಲಿ ಅತಿ ಬುದ್ಧಿವಂತರನ್ನು ಸೃಷ್ಟಿಸುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ  ಆ ಕೀರ್ತಿಯು ಈಗಿನ ಶಾಲೆಗಳಿಗೆ ಮತ್ತು ಶಿಕ್ಷಣ ವ್ಯವಸ್ಥೆಗೆ ಪೂರ್ತಿಯಾಗಿ  ಸಲ್ಲವುದೆ? ಅಥವಾ ಕೆಲವು ವಿದ್ಯಾರ್ಥಿಗಳ ದೃಢ ಸಂಕಲ್ಪ, ಸಾಮಾಜಿಕ ಮತ್ತು ಕೌಟುಂಬಿಕ ಒತ್ತಡವನ್ನುಮೀರಿ ನಿಲ್ಲುವ ಶಕ್ತಿಗೆ ಸಲ್ಲಬೇಕೋ? ತೀವ್ರ ಸ್ಪರ್ಧೆ, ಹೆಚ್ಚುತ್ತಿರುವ ಮಕ್ಕಳ ಮತ್ತು ವಿದ್ಯಾರ್ಥಿಗಳ ಆಕಾಂಕ್ಷೆ, ಫಲಿತಾಂಶವೆ ಶಾಲೆಯ ಮತ್ತು ಶಿಕ್ಷಕರ  ಗೌರವದ, ಸಾಧನೆಯ ಅಳತೆಗೋಲು ಆಗಿದೆ.  ಹೆಚ್ಚುತ್ತಿರುವ ಒತ್ತಡ ನಿಭಾಯಿಸಲು ಸೂಕ್ತ  ಸಹಾಯ ಕೊಡುವಲ್ಲಿ ಶಾಲೆ ಮತ್ತು ಶಿಕ್ಷಕರು  ನಿಸ್ಸಹಾಯಕರಾಗಿರುವುದರಿಂದ  ಮಕ್ಕಳಲ್ಲಿ ಖಿನ್ನತೆ ಹೆಚ್ಚುತ್ತಿದೆ ಅದು ಅನೇಕ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಮೆದುಳುಗಳು ಮರಣಿಸುತ್ತಿವೆ. ಈ ವಾಸ್ತವಕ್ಕೆ ನಾವು ಕಣ್ಣು ತೆರೆಯದೆ ಇದ್ದರೆ  ನಾವು ಅತಿ ಬೇಗ  ಬಹು ಜಾಣರಾದ ಒಂದು ಯುವ  ಪೀಳಿಗೆಯನ್ನೆ  ಕಳೆದು ಕೊಳ್ಳಬಹುದು.
    ಕೆಲವು ಮಕ್ಕಳಿಗೆ  CBSE  ಪರೀಕ್ಷೆ ಬಿಟ್ಟರೆ ಬೇರೆ ಜೀವನವೇ ಇಲ್ಲ.
    CBSE ಯ  X ಮತ್ತು XII ತರಗತಿಯ    ಫಲಿತಾಂಶ  ಬಂದ ೫-೬ ದಿನಗಳಲ್ಲಿ ದೆಹಲಿಯಲ್ಲಿ ಅರ್ಧ ಡಜನ್ ಗೂ ಹೆಚ್ಚು ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡಿಕೊಳ್ಳತ್ತಾರೆ. ನೀವು ಇದನ್ನು ಓದುತ್ತಿರುವಾಗಲೇ  ಇನ್ನೂ ಅನೇಕರು ತಮಗೆ ಉತ್ತಮ ಫಲಿತಾಂಶ ಬಂದಿಲ್ಲ ಎಂದು  ಜೀವನ ಕೊನೆ ಗೊಳಿಸುವ ಯೋಚನೆ ಮಾಡುತ್ತಿರಬಹುದು.   ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮ ಹತ್ಯೆಯು ಗಂಭೀರ ಸಮಸ್ಯೆಯ ಸಂಕೇತ. ಈ ಮೊದಲು ಖಿನ್ನತೆ ಮತ್ತು ಹದಿಹರೆಯ ಒಟ್ಟಿಗೆ ಇರಲಾರವು ಎಂಬ ಭಾವನೆ ಇತ್ತು.    ಈಗ ಬೆಳೆಯುತ್ತಿರುವ ಭಾವನೆಯ ಪ್ರಕಾರ ಹದಿಹರೆಯದವರೂ  ಹೆಚ್ಚು ಹೆಚ್ಚಾಗಿ ಖಿನ್ನತೆಗೆ ಒಳಗಾಗುವರು, ಎಂದು ಹೇಳುತ್ತಾರೆ  ಡಾ. ಆರ್.ಸಿ ಜಿಲೋಹ, ಪ್ರಧ್ಯಾಪಕರು ಮತ್ತು ಮನೊವಿಜ್ಞಾನ  ವಿಭಾಗದ ಮುಖ್ಯಸ್ಥರು. ಜಿ.ಬಿ ಪಂತ್ ಮತ್ತು ಮೌಲಾನಾ ಅಜಾದ ಮೆಡಿಕಲ್ ಕಾಲೇಜು. ಈ ಸಮಸ್ಯೆಯು ಜಠಿಲವಾಗುತ್ತಾ ಹೋಗುವುದು.  ಎಳೆ ವಯಸ್ಸಿನ ಅವರಿಗೆ ಸೊಲನ್ನು ಎದುರಿಸುವ ಗಡಸುತನವಾಗಲೀ,  ಜೀರ್ಣಿಸಿಕೊಳ್ಳುವ ಅನುಭವವಾಗಲಿ ಇರುವುದಿಲ್ಲ.
    ಮೆ. ಶರ್ಮ , ಟೆಲಿ-ಕೌನ್ಸಿಲರ್ ಹೇಳುತ್ತಾರೆ  “ ತಾಯಿತಂದೆ ಮತ್ತು ಶಿಕ್ಷಕರು ಆಪ್ತ ಸಲಹೆಯ ಪ್ರಾಮುಖ್ಯತೆಯನ್ನು ಅರಿಯುವುದು ಅತಿ ಮುಖ್ಯ. ಪರೀಕ್ಷಾ ಫಲಿತಾಂಶವೇ ಜಗತ್ತಿನಲ್ಲಿ ಎಲ್ಲ ಅಲ್ಲ. ಅದರಿಂದ ಜಗತ್ತೇ ಕೊನೆಯಾಗುವುದಿಲ್ಲ.. ಪರೀಕ್ಷೆಯಾದ ಮೇಲೂ ಜೀವನ ಇದೆ. ನೀವು ಸರಿಯಾಗಿ,  ಪರೀಕ್ಷೆ ಬರೆಯದಿದ್ದರೂ ಸಹಾ. ಅದನ್ನು ತಾಯಿತಂದೆಯರು , ಶಿಕ್ಷಕರು ಅರ್ಥಮಾಡಿ ಕೊಳ್ಳಬೇಕು”
    ತಾಯಿತಂದೆಯರು ತಮ್ಮ ಮಕ್ಕಳನ್ನು ಉತ್ತಮ ಫಲಿತಾಂಶ ಬರುವ ಶಾಲೆಗೆ ಸೇರಿಸುವುದು ಸಹಜ. ಆದರೆ ಅವರನ್ನು ಯಾರಾದರೂ ಮಗುವಿನ ಬದುಕು ಮತ್ತು  ಕಲ್ಯಾಣಕ್ಕಿಂತ ಅದು  ಮುಖ್ಯವಾ?  ಎಂದು ಕೇಳಿದ್ದಾರಾ ? ಯಾರೂ ತಮ್ಮ ಮಗುವನ್ನು ಕಳೆದುಕೊಳ್ಳಲು ಬಯಸುವುದಿಲ್ಲ.ಇದು ತಾಯಿತಂದೆಯರಿಗೆ ಇರುವ ಆಪ್ತ ಸಲಹೆಯ ಅಗತ್ಯವನ್ನು ತೋರಿಸುತ್ತದೆ. ಶಾಲೆಯ ಒತ್ತಡವು ಹೆಚ್ಚಿದಂತೆಲ್ಲ, ಅವನ ಪ್ರಗತಿ ಪತ್ರವು ಮಗು ಎಷ್ಟುಚೆನ್ನಾಗಿ ಮಾಡಿದೆ, ಎಷ್ಟು ಚೆನ್ನಾಗಿಮಾಡಿಲ್ಲ ವೆಂಬುದನ್ನು ಮಾತ್ರ ತೀಳಿಸಿದರೆ, ತರಗತಿಯ ಶಿಕ್ಷಕರು  ಸದಾ ಒಂದು ಮಗುವನ್ನು ಇನ್ನೊಂದು ಮಗುವಿನ ಜೊತೆ ಹೋಲಿಸುತ್ತಿದ್ದರೆ, ವಿದ್ಯಾರ್ಥಿಗಳ  ಭಾವನತ್ಮಕ, ಮಾನಸಿಕ ಅಗತ್ಯಗಳನ್ನು ನಿರ್ಲಕ್ಷಿಸಿದರೆ, ಪರಿಸ್ಥಿತಿಯು ಎಂದೂ ಬದಲಾಗಲು ಅಸಾಧ್ಯ. ಶಾಲೆಗಳು ಈ ದಿಶೆಯಲ್ಲಿ ಮೊದಲು ಕ್ರಮ ತೆಗೆದುಕೊಳ್ಳ ಬೇಕು ಮತ್ತು ತಾಯಿತಂದೆಯರಿಗೆ ಅವರ ಜೊತೆಯಲ್ಲಿ ಮಕ್ಕಳಿಗೂ ಕೂಡಾ  ಆಪ್ತ ಸಲಹೆಯನ್ನು ಕೊಡಬೇಕು.

    ಬೀದಿಯ ಮತ್ತು ಓಡಿ ಬಂದಿರುವ ಮಕ್ಕಳು. ಮಿಥ್ಯಗಳು ಮತ್ತು ಸತ್ಯಗಳು

    • ಮಿಥ್ಯೆ:    ಬಡ ಕುಟುಂಬದ ಮಕ್ಕಳು ಮಾತ್ರ  ಮನೆಯಿಂದ ಓಡಿಹೋಗಿ ಬೀದಿ ಮಕ್ಕಳಾಗುವರು. ಬೀದಿಯಲ್ಲಿನ ಮಕ್ಕಳು  ಕೆಟ್ಟವರು  ಸತ್ಯ:  ಸರಿಯಾಗಿ  ನೋಡಿಕೊಳ್ಳದಿದ್ದರೆ  ಯಾವುದೆ  ಮಗುವು  ಮನೆಯಿಂದ ಓಡಿ ಹೋಗಬಹುದು. ಮಗುವಿಗೆ ಗೌರವದಿಂದ ಬದುಕುವ ಹಕ್ಕಿದೆ. ಯಾರೇ ಆಗಲಿ ತಾಯಿತಂದೆ/ ಕುಟುಂಬ/ ಶಾಲೆ/ ಊರು ಮಕ್ಕಳಿಗೆ ಅವರ ಹಕ್ಕನ್ನು ನಿರಾಕರಿಸಿದರೆ ಅವರು ಮಕ್ಕಳ ವಿಷಯದಲ್ಲಿ ಸೋಲುತ್ತಾರೆ. ಬಹುಪಾಲು ಮಕ್ಕಳು.  ಉತ್ತಮ ಜೀವನ,  ಅವಕಾಶ ಅರಸಿ ಅಥವಾ ಮೆಟ್ರೊಗಳ ಆಕರ್ಷಣೆಗೆ ಒಳಗಾಗಿ,  ಅವರ ತಾಯಿ ತಂದೆಯರು ಒತ್ತಾಯದಿಂದ ಸೇರಿಸಿದ  ಶಿಕ್ಷಣ ವ್ಯವಸ್ಥೆಯ ಕಠೊರತೆಯನ್ನು ಸಹಿಸಲಾರದೆ  , ಗೃಹ ಕ್ರೌರ್ಯದಿಂದ ತಪ್ಪಿಸಿಕೊಳ್ಳಲು ಮನೆ ಬಿಡುವರು, ನಗರ ಪ್ರವೇಶಿಸುವರು. ಅಲ್ಲಿ ತುಂಬ ಹೀನ ಜೀವನ ನಡೆಸಬೇಕಾಗುವುದು.ಬೀದಿಯ ಮಕ್ಕಳು ಎಂದೂ  ಕೆಟ್ಟವರಲ್ಲ. ಅವರು ಇರುವ ಪರಿಸರವು ಕೆಟ್ಟದಾಗಿರುವುದು.
    • ಈ ಮಕ್ಕಳೂ ದಿನಕ್ಕೆ  ಎರಡು ಊಟ ಕಾಣುವುದೂ ಕಷ್ಟ. ಅವರು ದರ್ಬಳಕೆಯ ವಿರುದ್ಧ ಬಹಳ ಅಸಾಹಯಕರು. ಒಂದು ಸಲ ಬೀದಿಗೆ ಬಿದ್ದರೆ ಅವರು  ಶೋಷಣೆ ಮತ್ತು ಅದಕ್ಕೆ ಸಂಬಂಧಿಸದ ವಿಷಚಕ್ರದಲ್ಲಿ ಸಿಕ್ಕಿ ಬೀಳುವರು. ಇಲ್ಲವೆ ಹಿರಿಯ ಮಕ್ಕಳ ಸಂರ್ಪಕಕ್ಕೆ ಬಂದೊಡನೆ ಹೊಸ ಎಳೆಯ ಹುಡುಗರು ಚಿಂದಿ ಆಯುವ ,ಇತರ ಸುಲಭವಾಗಿ ದೊರೆಯುವ ಕೆಲಸ  ಶುರುಮಾಡುವರು, ಅಥವ ಕಾನೂನು ಬಾಹಿರ ಚಟುವಟಿಕೆಗಳಾದ ಜೇಬು ಕತ್ತರಿಸುವುದು (ಪಿಕ್ ಪ್ಯಾಕೆಟ್) ಮಾಡುವುದು, ಭಿಕ್ಷೆ ಬೇಡುವುದು, ಮಾದಕದ್ರವ್ಯ ಮಾರಾಟ ಇತ್ಯಾದಿಗಳಲ್ಲಿ ತೊಡಗುವರು.
    ಮನೆಯಿಂದ ಓಡಿಬರಲು ಮಕ್ಕಳಿಗೆ ಅನೇಕ ಕಾರಣಗಳಿವೆ :
    • ಉತ್ತಮ ಜೀವನದ ಅವಕಾಶ.
    • ಮೆಟ್ರೊಗಳ ಆಕರ್ಷಣೆ.
    • ಗೆಳೆಯರ ಒತ್ತಡ.
    • ಅನಾರೋಗ್ಯಕರ  ಕೌಟುಂಬಿಕ ಸಂಬಂಧಗಳು.
    • ತಾಯಿತಂದೆಯರೆ ತೊರೆದವರು.
    • ತಾಯಿತಂದೆ ಹೊಡೆತಕ್ಕೆ,  ಶಿ ಕ್ಷಕರ ಹೊಡೆತಕ್ಕೆ ಹೆದರಿದವರು.
    • ಲೈಂಗಿಕ ದುರ್ಬಳಕೆ.
    • ಜಾತಿ ತಾರತಮ್ಯ.
    • ಲಿಂಗ ತಾರತಮ್ಯ.
    • ವಿಕಲ ಚೇತನರು.
    • ಹೆಚ್. ಐ. ವಿ ಏಡ್ಸ್ (HIV/AIDS).ನಿಂದಾಗಿ ತಾರತಮ್ಯಕ್ಕೆ ಒಳಗಾದವರು
    , ದೀಪ್ತಿ ಪಗರೆ , ಜಿ  ಎಸ್. ಮೀನಾಸ, ಆರ್.ಸಿ ಜಿಲೊಹ ಮತ್ತು ಎಂ. ಎಂ. ಸಿಂಗ್   ಭಾರತೀಯ ಮಕ್ಕಳ ತಜ್ಞರು,ಸಮುದಾಯ ಔಷಧಿ ಮತ್ತು ಮನೋವಿಜ್ಞಾನ (ಸೈಕಿಯಾಟ್ರಿಕ್) ವಿಭಾಗ, ಮೌಲಾನಾ ಆಜಾದ್ ಮೆಡಿಕಲ್ ಕಾಲೇಜು ಅವರು ೨೦೦೩-೨೦೦೪ರಲ್ಲಿ ಒಂದು ಅಧ್ಯಯನ ಮಾಡಿದರು  ’ಬೀದಿಯ ಮಕ್ಕಳ ಲೈಂಗಿಕ ದುರ್ಬಳಕೆ, ಪರಿಶೀಲನಾ ಗೃಹ ಕರೆತರಲಾದವರು’ ಎಂಬ ವಿಷಯದಮೇಲೆ ಅವರು ದೆಹಲಿಯಲ್ಲಿ ಪರಿಶಿಲನಾಗೃಹಕ್ಕೆ ಕರೆತಂದ ಗಂಡುಮಕ್ಕಳ ಮೇಲಿನ ಲೈಂಗಿಕ ದುರ್ಬಳಕೆಯ ಪ್ರಮಾಣ ಮತ್ತು ವಿಧಾನಗಳನ್ನು ಗಮನಿಸಿದರು. ಅದರ ಪ್ರಕಾರ ಬಹುತೇಕ ಮಕ್ಕಳು ಓಡಿ ಬಂದವರು ಮತ್ತು ೩೮.೧% ಲೈಂಗಿಕ ದುರ್ಬಳಕೆ ಅನುಭವಿಸಿದವರು. ವೈದ್ಯಕೀಯ ಪರೀಕ್ಷೆಯಲ್ಲಿ ೬೧.೧% ಜನ ಅದರ ಶಾರೀರಿಕ ಕುರುಹುಗಳನ್ನು ಹೊಂದಿದ್ದರು.   ೪೦.೨% ಜನರು ವರ್ತನೆಯಲ್ಲಿ ಆ ಕುರುಹು ತೋರಿದರು. ಬಲಾತ್ಕಾರದ ಸಂಭೋಗಕ್ಕೆ ಬಲಿ ಆದವರ  ಸಂಖ್ಯೆ ೪೪.೪ % ಆಗಿತ್ತು ಮತ್ತು  ೨೫% STD ಇರುವ ಕುರಹು ಹೊಂದಿದ್ದರು.  ಅವರನ್ನು ಲೈಂಗಿಕ ದುರ್ಬಳಕೆ ಮಾಡಿದವರಲ್ಲಿ ಅಪರಿಚಿತರೇ ಹೆಚ್ಚು.

    ಹೆಚ್ ಐ ವಿ



    ಮಿಥ್ಯ ಮತ್ತು ಸತ್ಯ

    • ಮಿಥ್ಯೆ:       -ಹೆಚ್ ಐ ವಿ/ ಏಡ್ಸ್   : ಒಂದು ವಯಸ್ಕರ ವಿಷಯ. ಮಕ್ಕಳಿಗೂ ಅದಕ್ಕೂ ಏನೂ ಸಂಬಂಧ ವಿಲ್ಲ. ಅವರಿಗೆ ಹೆಚ್ ಐ ವಿ/ ಏಡ್ಸ್,  ಸಂತಾನೋತ್ಪತ್ತಿ ಆರೋಗ್ಯ, ಲೈಂಗಿಕತೆ ಮತ್ತು ಇತರ ವಿಷಯಗಳ ಬಗ್ಗೆ ತಿಳಸುವುದರಿಂದ ಅವರ ಮನಸ್ಸು ಕೆಡುತ್ತದೆ . -ಹೆಚ್ ಐ ವಿ/ ಏಡ್ಸ್ ಇರುವ ಕುಟುಂಬದಿಂದ ಮಕ್ಕಳ ವಿಷಯದಲ್ಲಿ ಎಚ್ಚರದಿಂದ ಇರಬೇಕು. ಹೆಚ್ ಐ ವಿ/ ಏಡ್ಸ್   ಹರಡುವುದನ್ನು ತಡೆಯಲು  ಅವರನ್ನು ಸಾಧ್ಯವಾದಷ್ಟು ದೂರ ಇಡಬೇಕು
    • ಸತ್ಯ: ಹೆಚ್ ಐ ವಿ/ ಏಡ್ಸ್  ಗೆ   ವಯಸ್ಸು ,ಬಣ್ಣ , ಜಾತಿ, ವರ್ಗ,ಧರ್ಮ,ಭೌಗೋಲಿಕತೆ, ನೈತಿಕತೆ , ಒಳ್ಳೆಯದು, ಕೆಟ್ಟದು ಎಂಬ ತಾರತಮ್ಯವಿಲ್ಲ. ಎಲ್ಲ ಮನುಷ್ಯರಿಗೂ ಇದು ಬರಬಹುದು.
    ಹೆಚ್ ಐ ವಿ  ಯು ಮಾನವನ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ (ಹ್ಯುಮನ್ ಇಮ್ಯುನೋ ಡಿಫಿಷಿಯನ್ಸಿ)  ವೈರಾಣುವು ಏಡ್ಸ್ಗೆ ಕಾರಣವಾಗಿದೆ.   ಅದು ಹೆಚ್ ಐ ವಿ  ಪೀಡಿತ (ಪಾಜಿಟಿವ್)  ವ್ಯಕ್ತಿಯ  ದೇಹದ  ದ್ರವಗಳಾದ  ವೀರ್ಯ,ಅದಕ್ಕೂಮೊದಲುಚಿಮ್ಮಿದ ದ್ರವ, ಯೋನಿ ದ್ರವ,  ರಕ್ತ ಅಥವಾ ಎದೆಹಾಲುಗಳ ಸಂಪರ್ಕದಿಂದ  ಮತ್ತು ಇಂಜೆಕ್ಷನ್ ನೀಡಿದ , ರಕ್ತನೀಡಿದ,   ಹಚ್ಚೆಹಾಕಿದ,ಮಾದಕ ದ್ರವ್ಯ ನೀಡಲು ಬಳಸಿದ, ಶರೀರಕ್ಕೆ ಚುಚ್ಚಿದ ಸೂಜಿಯಿಂದಲೂ ಬರಬಹುದು.
    ಹೆಚ್ ಐ ವಿ/ ಏಡ್ಸ್ ನಿಂದ ಮಿಲಿಯನ್ ಗಟ್ಟಲೆ ಮಕ್ಕಳು ಸೋಂಕಿತರಾಗಿದ್ದಾರೆ  . ಮಕ್ಕಳು ತಾಯಿತಂದೆಯರ ಅಕಾಲ ಮರಣದಿಂದ  ಅನಾಥರಾಗಿ ರಕ್ಷಣೆ ಆರೈಕೆಗಳಿಂದ ವಂಚಿತರಾಗಿದ್ದಾರೆ.
    ತಾಯಿಯಿಂದ ಮಗುವಿಗೆ ಹರಡುವ ಸೋಂಕು ಮಕ್ಕಳಲ್ಲಿ ಬಹು ಸಾಮಾನ್ಯವಾಗಿದೆ.ಹೆಚ್ಚಿನ ಮಕ್ಕಳ ಲೈಂಗಿಕ ದುರ್ಬಳಕೆ, ನಿಷಿದ್ಧ ಗಮನ ದಿಂದಾಗಿ ಬಹಳ ಮಕ್ಕಳು ಈ ಮಾರಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಲ್ಲಿ ಮತ್ತು  ಯುವಕರಲ್ಲಿ ಮಾದಕ ದ್ರವ್ಯ ಸೇವನೆಯು ಹೆದರಿಕೆ ಮೂಡಿಸಿದೆ. ಹೆಚ್ ಐ ವಿ/ ಏಡ್ಸ್ ಪೀಡಿತ ಮಕ್ಕಳಿಗೆ ಮಾಹಿತಿಯನ್ನು ನೀಡದಿದ್ದರೆ  ಅವರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಹಕ್ಕನ್ನು ಕಸಿದುಕೊಂಡಂತೆ ಆಗುವುದು.
    ಏಷಿಯಾದಲ್ಲಿ ಭಾರತವೇ ಅತ್ಯಂತ ಹೆಚ್ಚು ಹೆಚ್ ಐ ವಿ/ ಏಡ್ಸ್ ಹೊಂದಿರುವದೇಶ. ನಂತರದ ಸ್ಥಾನ ಚೀನಾದ್ದು. UNAID  ಪ್ರಕಾರ ಭಾರತದಲ್ಲಿ ೦-೧೪ ವಯೋಮಾನದ ೦.೧೬ ಮಿಲಿಯನ್ ಮಕ್ಕಳು ಹೆಚ್ ಐ ವಿ ಸೊಂಕಿತರಾಗಿದ್ದಾರೆ.
    ಒಂದು ವರದಿಯ ಪ್ರಕಾರ ಕೇರಳದ  ಪರಪ್ಪನಅಂಗಡಿಯ ಆರು ವರ್ಷದ ಬಬಿತರಾಜ್ ಎಂಬ ಮಗುವಿಗೆ  ಅವನ ತಂದೆ ಏಡ್ಸ್ (AIDS), ನಿಂದ ಮೃತನಾದ ಎಂಬಕಾರಣಕ್ಕೆ ಶಿಕ್ಷಕ ಪೋಷಕ ಸಂಘ ,ಮತ್ತು ಶಾಲಾ ಅಧಿಕಾರಿಗಳ ಪ್ರತಿಭಟನೆಮಾಡಿದ್ದರಿಂದ ಸರಕಾರಿ  ಪ್ರಾಥಮಿಕ ಶಾಲೆಯಲ್ಲಿ ಪ್ರವೇಶ ನಿರಾಕರಿಸಲಾಗಿದೆ.  ಸಮಾಜಿಕ ಕಾರ್ಯಕರ್ತರು, ಸ್ಥಳಿಯ ಸರಕಾರಿ ಅಧಿಕಾರಿಗಳು  ಮಧ್ಯ ಪ್ರವೇಶಿಸಿ , ಅವನಿಗೆ ಹೆಚ್. ಐ. ವಿ (HIV) ಇಲ್ಲ ಎಂಬ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದು ತೋರಿಸಿದ ಮೇಲೂ ಶಾಲೆಯವರು ಮಗುವನ್ನು ಪುನಃ ಸೇರಿಸಿಕೊಳ್ಳಲು ನಿರಾಕರಿಸಿದರು.
    ಮೂಲ: ತೊರೆದ ಭವಿಷ್ಯ, ಹ್ಯುಮನ್ ರೈಟ್ಸ ವಾಚ್ ;  ಪುಟ ೭೩, ೨೦೦
    ನಾವು ಸೊಂಕಿತ ವ್ಯಕ್ತಿಯನ್ನು ಮುಟ್ಟಿದರೆ, ಅವನ ಪಕ್ಕದಲ್ಲಿ ಕುಳಿತರೆ. ಅಪ್ಪಿಕೊಂಡರೆ, ಅವರ ಜತೆ ಆಟ ಆಡಿದರೆ ಅಥವ  ಮುತ್ತು ಕೊಟ್ಟರೆ ಹೆಚ್. ಐ. ವಿ (HIV) ಹರಡುವುದಿಲ್ಲ ಎಂಬುದನ್ನು ಅರಿಯಬೇಕು.
    ಮಕ್ಕಳ ಮಾಹಿತಿ ಪಡೆಯುವ ಮತ್ತು ಭಾಗವಹಿಸುವ ಹಕ್ಕು “ ಮಗುವಿನ ಹಿತಾಸಕ್ತಿ”ಯನ್ನು ಕಾಪಾಡುವುದನ್ನು ಆಧರಿಸಿದೆ. ಆದ್ದರಿಂದ ಲೈಂಗಿಕತೆ ಸಂತಾನೋತ್ಪತ್ತಿ  ಆರೋಗ್ಯ,ಹೆಚ್. ಐ. ವಿ ಏಡ್ಸ್ (HIV/AIDS) ಬಗ್ಗೆ ಚರ್ಚಿಸುವಾಗ  ಮಗುವಿನ ವಯಸ್ಸಿನ ಪರಿಗಣನೆ  ಮನದಲ್ಲಿ ಇರಬೇಕು. ವಾಸ್ತವ ಏನಂದರೆ ನಾವು ಮಾನಸಿಕವಾಗಿ ಮಗುವಿನ  ಪ್ರಶ್ನೆಗಳನ್ನು ಪರಿಗಣಿಸುವ   ತಯಾರಿ ಮಾಡಿ ಕೊಂಡಿರುವುದಿಲ್ಲ.ಅದಕ್ಕಾಗಿ ಏನೋ ನೆಪ ಹೇಳಿ ಚರ್ಚೆಮಾಡುವುದನ್ನು ತಪ್ಪಿಸಿಕೊಳ್ಳುತ್ತೇವೆ.  ನಾವು ಲೈಂಗಿಕ ಶಿಕ್ಷಣವೂ  ಸೇರಿದಂತೆ ಜೀವನ-ಕೌಶಲ್ಯ ಶಿಕ್ಷಣವನ್ನು  ನಿರಾಕರಿಸುವ ಬದಲು ಅದಕ್ಕೆ ಸಿದ್ಧರಾಗಿರುವುದು ಬಹಳ ಮುಖ್ಯ.
    ಅನೇಕ ಶಾಲೆಗಳು ಮಕ್ಕಳು  ಹೆಚ್. ಐ. ವಿ ಏಡ್ಸ್ (HIV/AIDS) ಹಿನ್ನೆಲೆ ಇರುವ ಕುಟುಂಬದಿಂದ ಬಂದಿದ್ದರೆ  ಅವರಿಗೆ  ಆ ಬಗೆಗೆ ಶಿಕ್ಷಣ ನೀಡುವ ಬದಲು  ಅವರನ್ನು ಸುಮ್ಮನೆ  ಶಾಲೆಯಿಂದ ಹೊರಹಾಕುವರು. ಅವರಿಗೆ ಹೆಚ್. ಐ. ವಿ ಏಡ್ಸ್ (HIV/AIDS) ಇದೆ ಎಂದು ಪ್ರಾಥಮಿಕ ಸೇವೆಗಳನ್ನು,ಮಾನವ ಹಕ್ಕುಗಳನ್ನು ನಿರಾಕರಿಸಿದರೆ ಅದು ತಾರತಮ್ಯ ಎನಿಸುವುದು. ಭಾರತೀಯ ಸಂವಿಧಾನವು ಸಮಾನತೆ ಮತ್ತು ತಾರತಮ್ಯರಹಿತ ಹಕ್ಕಿನ ಖಾತ್ರಿ ನೀಡಿದೆ ಮತ್ತು ಯಾರು ಅಸಮಾನತೆ ಮತ್ತು ತಾರತಮ್ಯವನ್ನು ಯಾವುದೇ ಆಧಾರದ ಮೇಲೆ ಉತ್ತೇಜಿಸಿದರೂ ಅವರು ಶಿಕ್ಷೆಗೆ ಗುರಿಯಾಗುವರು.
    ವ್ಯಕ್ತಿ  ಹೆಚ್. ಐ. ವಿ ಏಡ್ಸ್ (HIV/AIDS) ಸೊಂಕಿತ (ಪಾಜಿಟಿವ್) ಎಂದು ಅವನಿಗ ತಿಳಿದಿರುವುದು,  ಅವನು ಅದಷ್ಟು ಬೇಗ ಚಿಕಿತ್ಸೆ ಪಡೆಯಲು ಅದರಿಂದ ಹೆಚ್ಚುದಿನ ಆರೋಗ್ಯವಂತನಾಗಿರಲು ಮತ್ತು  ವೈರಾಣುವನ್ನು ಇನ್ನೊಬ್ಬರಿಗೆ ಹರಡದಿರಲು ಸಹಾಯವಾಗುವುದು  .ವಾಸ್ತವವಾಗಿ ಅಪಾಯದ ಹಂಚಿನಲ್ಲಿರುವ ಮಕ್ಕಳನ್ನುಶಾಲೆಯಿಂದ ಹೊರಹಾಕಿದರೆ ಅವರ ಆರೋಗ್ಯದ ಮೇಲುಸ್ತುವಾರಿ ಮಾಡುವ ಮತ್ತು ಅವರಿಗೆ ಅಗತ್ಯ ಸಹಾಯ ನೀಡುವ ಅವಕಾಶವೆ ಇಲ್ಲದಾಗುವುದು.    ಹೀಗೆ ಅದು ಇತರರಿಗೂ ಹೆಚ್ಚು ಅಪಾಯಕಾರಿಯಾಗಬಹುದು. ತಾರತಮ್ಯವು ಬೇಳೆಯುತ್ತಿರುವ  ಪಿಡುಗಿಗೆ ಕೊನೆ ಹೇಳುವುದಿಲ್ಲ.


    ರತಮ್ಯ

    ಜಾತಿ ತಾರತಮ್ಯ-ಮಿಥ್ಯ ಮತ್ತು ಸತ್ಯ

    • ಮಿಥ್ಯೆ: ಅಸ್ಪೃ ಶ್ಯತೆ ಮತ್ತು ಜಾತಿ ತಾರತಮ್ಯವು ಈಗ ಇತಿಹಾಸವಾಗಿದೆ. ಏನೇ ಆದರೂ ದಲಿತರು, ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಮೀಸಲಾತಿಯಿಂದಾಗಿ ತಾರತಮ್ಯವಿಲ್ಲದ ಸುಖ ಜೀವನ ಸಾಗಿಸುತ್ತಿದ್ದಾರೆ
    • ಸತ್ಯ: ಇದು ನಿಜವಲ್ಲ. ವ್ಯಕ್ತಿಯು ಮೊದಲು ಜಾತಿ ತಾರತಮ್ಯಕ್ಕೆ ಬಹುಬೇಗನೆ ಒಳಗಾಗುತ್ತಾನೆ. ಶಾಲೆಯಲ್ಲಿ, ಆಟದ ಮೈದಾನದಲ್ಲಿ, ಆಸ್ಪತ್ರೆಯಲ್ಲಿ ಹೀಗೆ ತಾರತಮ್ಯಕ್ಕೆ ಒಳಗಾಗುವ ಅವಕಾಶದ ಪಟ್ಟಿಗೆ ಕೊನೆಯಿಲ್ಲ. ನಾವು ದಲಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಡ ಪಂಗಡದ ಹಾಗೂ ಬಡ ಮತ್ತು ದುರ್ಬಲರಿಗೆ ಆಗುವ ತಾತಮ್ಯವನ್ನು, ಅವರಿಗೆ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಖಾತ್ರಿಗೋಳಿಸುವ ಮೂಲಕ ನಿವಾರಿಸಬಹುದು. ವಿಶೇಷವಾಗಿ ಶಿಕ್ಷಣ, ಆರೋಗ್ಯ ಸೇವೆ ಪಡೆಯುವ ಅವಕಾಶ ಮತ್ತು ಸಾಮಾಜಿಕ ಭದ್ರತಾ ಸೇವೆಗಳಾದ ಬಾಲಕಾರ್ಮಿಕ ನಿಷೇಧ ಕಾರ್ಯಕ್ರಮಗಳು, ಅತಿ ಹೀನವಾದ ಮಲಹೊರುವ ಪದ್ಧತಿ ನಿಷೇದಗಳನ್ನು ಖಾತ್ರಿಯಾಗಿ ಜಾರಿಗೊಳಸಬೇಕು.
    ಜಾತಿ ತಾರತಮ್ಯ-ಮಿಥ್ಯ ಮತ್ತು ಸತ್ಯಮಿಥ್ಯೆ: ಅಸ್ಪೃ ಶ್ಯತೆ ಮತ್ತು ಜಾತಿ ತಾರತಮ್ಯವು ಈಗ ಇತಿಹಾಸವಾಗಿದೆ. ಏನೇ ಆದರೂ ದಲಿತರು, ಅಥವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಮೀಸಲಾತಿಯಿಂದಾಗಿ ತಾರತಮ್ಯವಿಲ್ಲದ ಸುಖ ಜೀವನ ಸಾಗಿಸುತ್ತಿದ್ದಾರೆಸತ್ಯ: ಇದು ನಿಜವಲ್ಲ. ವ್ಯಕ್ತಿಯು ಮೊದಲು ಜಾತಿ ತಾರತಮ್ಯಕ್ಕೆ ಬಹುಬೇಗನೆ ಒಳಗಾಗುತ್ತಾನೆ. ಶಾಲೆಯಲ್ಲಿ, ಆಟದ ಮೈದಾನದಲ್ಲಿ, ಆಸ್ಪತ್ರೆಯಲ್ಲಿ ಹೀಗೆ ತಾರತಮ್ಯಕ್ಕೆ ಒಳಗಾಗುವ ಅವಕಾಶದ ಪಟ್ಟಿಗೆ ಕೊನೆಯಿಲ್ಲ. ನಾವು ದಲಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಡ ಪಂಗಡದ ಹಾಗೂ ಬಡ ಮತ್ತು ದುರ್ಬಲರಿಗೆ ಆಗುವ ತಾತಮ್ಯವನ್ನು, ಅವರಿಗೆ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಖಾತ್ರಿಗೋಳಿಸುವ ಮೂಲಕ ನಿವಾರಿಸಬಹುದು. ವಿಶೇಷವಾಗಿ ಶಿಕ್ಷಣ, ಆರೋಗ್ಯ ಸೇವೆ ಪಡೆಯುವ ಅವಕಾಶ ಮತ್ತು ಸಾಮಾಜಿಕ ಭದ್ರತಾ ಸೇವೆಗಳಾದ ಬಾಲಕಾರ್ಮಿಕ ನಿಷೇಧ ಕಾರ್ಯಕ್ರಮಗಳು, ಅತಿ ಹೀನವಾದ ಮಲಹೊರುವ ಪದ್ಧತಿ ನಿಷೇದಗಳನ್ನು ಖಾತ್ರಿಯಾಗಿ ಜಾರಿಗೊಳಸಬೇಕು.


    ಅಂಗ ವಿಕಲತೆ

    ಮಿಥ್ಯ ಮತ್ತು ಸತ್ಯ

    • ಮಿಥ್ಯೆ:   ಅಂಗವಿಕಲತೆಯು ಒಂದು ಶಾಪ. ವಿಕಲಚೇತನ ಮಗುವಿಗೆ ಯಾವುದೆ ಬೆಲೆ ಇಲ್ಲ. ಅದು ಕುಟುಂಬದ ಮೇಲೆ ಒಂದು ಹೊರೆ ಆರ್ಥಿಕವಾಗಿ ಅನುತ್ಪಾದಕ ಮತ್ತು ಶಿಕ್ಷಣವು ಅವರಿಗೆ ನಿರುಪಯುಕ್ತ.  ವಾಸ್ತವವಾಗಿ ಅಂಗ ವಿಕಲತೆಗೆ ಯಾವುದೆ ಪರಿಹಾರವಿಲ್ಲ.
    • ಸತ್ಯ:  ಅಂಗವಿಕಲತೆಯು ಯಾವುದೆ ಪಾಪದ ಫಲವಲ್ಲ. ವಿಕೃತಿಯು ತಾಯಿ ಗರ್ಭಿಣಿಯಿದ್ದಾಗ,  ಸೂಕ್ತ ಆರೈಕೆ ಇಲ್ಲದೆ  ಮತ್ತು ಕೆಲವು ಸಲ ವಂಶಪಾರಂಪರೆಯಾಗಿ ಬಂದಿರುವ ದೋಷವಾಗಿರಬಹುದು .  ಅಗತ್ಯವಿದ್ದಾಗ ಸೂಕ್ತ ಔಷಧೋಪಚಾರದ ಕೊರತೆ ಚುಚ್ಚುಮದ್ದು (ಇಮ್ಯುನೈಜೇಷನ್) ನೀಡದೆ ಇರುವುದು, ಅಪಘಾತ, ಮತ್ತು ಗಾಯಗಳಿಂದಲೂ  ಅಂಗವಿಕಲತೆ  ಆಗಬಹುದು.
    ಮಾನಸಿಕ ಮತ್ತು ದೈಹಿಕ ವಿಕಲತೆಯಿರುವ ವ್ಯಕ್ತಿಯು ಸಾಧಾರಣವಾಗಿ ಕರುಣೆಗೆ ಪಾತ್ರನಾಗುವುನು. ನಾವು ವ್ಯಕ್ತಿಯಾಗಿ ವಿಕಲಚೇತನನಿಗೂ ಹಕ್ಕುಗಳಿವೆ. ಅವನಿಗೆ  ನಮ್ಮಿಂದ ಕರುಣೆಗಿಂತ ಹೆಚ್ಚಾಗಿ ಅನುಭೂತಿಯ ಅಗತ್ಯವಿದೆ ಎಂಬುದನ್ನು ಅರಿಯಬೇಕುಮಾನಸಿಕ ಮತ್ತು ದೈಹಿಕ ವಿಕಲತೆಯಿರುವ ವ್ಯಕ್ತಿಯು ಸಾಧಾರಣವಾಗಿ ಕರುಣೆಗೆ ಪಾತ್ರನಾಗುವುನು. ನಾವು ವ್ಯಕ್ತಿಯಾಗಿ ವಿಕಲಚೇತನನಿಗೂ ಹಕ್ಕುಗಳಿವೆ. ಅವನಿಗೆ  ನಮ್ಮಿಂದ ಕರುಣೆಗಿಂತ ಹೆಚ್ಚಾಗಿ ಅನುಭೂತಿಯ ಅಗತ್ಯವಿದೆ ಎಂಬುದನ್ನು ಅರಿಯಬೇಕು
    ಬಹಳ ಸಲ ನಾವು ವಿಕಲಚೇತನತೆಯನ್ನು  ಒಂದು ಕಳಂಕ ಎಂದು ಭಾವಿಸುವೆವು. ಮಾನಸಿಕ ವಿಕಲತೆ ಇರುವ ಕುಟುಂಬವನ್ನು ಸಮಾಜವವು ಕಡೆಗಣ್ಣಿನಿಂದ ನೋಡಿ  ದೂರ ಇಡುವುದು. ಶಿಕ್ಷಣವು ಪ್ರತಿ ಮಗುವಿಗೂ ಮುಖ್ಯ. ಅದು ವಿಕಲಚೇತನನಾಗಿದ್ದರೂ ಕೂಡಾ.  ಅದರಿಂದ ಮಗುವಿನ ಸರ್ವಾಂಗಿಣ ಅಭಿವೃದ್ಧಿಯಾಗುವುದು.ಬಹಳ ಸಲ ನಾವು ವಿಕಲಚೇತನತೆಯನ್ನು  ಒಂದು ಕಳಂಕ ಎಂದು ಭಾವಿಸುವೆವು. ಮಾನಸಿಕ ವಿಕಲತೆ ಇರುವ ಕುಟುಂಬವನ್ನು ಸಮಾಜವವು ಕಡೆಗಣ್ಣಿನಿಂದ ನೋಡಿ  ದೂರ ಇಡುವುದು. ಶಿಕ್ಷಣವು ಪ್ರತಿ ಮಗುವಿಗೂ ಮುಖ್ಯ. ಅದು ವಿಕಲಚೇತನನಾಗಿದ್ದರೂ ಕೂಡಾ.  ಅದರಿಂದ ಮಗುವಿನ ಸರ್ವಾಂಗಿಣ ಅಭಿವೃದ್ಧಿಯಾಗುವುದು.
    ವಿಕಲಾಂಗ ಮಗುವಿಗೆ ವಿಶೇಷ ಅಗತ್ಯಗಳಿವೆ. ಅವುಗಳನ್ನು ನಾವು ಪೂರೈಸಬೇಕು.ಅವಕಾಶವಿದ್ದರೆ ಅವರು ಕೂಡಾ ಜೀವನಕ್ಕೆ ಆಧಾರವಾಗಬಹುದಾದ ಕೌಶಲ್ಯಗಳನ್ನು ಕಲಿಯುವರು. ವಿಕಲಚೇತನರಿಗೆ ತಮ್ಮ ಜೀವನವನ್ನು ನಡೆಸಲು ಅಗತ್ಯವಾದುದ್ದನ್ನು ಒದಗಿಸದೆ ಇದ್ದರೆ ವೈಕಲ್ಯವು ಒಂದು ದುರಂತವಾಗುವುದು.ವಿಕಲಾಂಗ ಮಗುವಿಗೆ ವಿಶೇಷ ಅಗತ್ಯಗಳಿವೆ. ಅವುಗಳನ್ನು ನಾವು ಪೂರೈಸಬೇಕು.ಅವಕಾಶವಿದ್ದರೆ ಅವರು ಕೂಡಾ ಜೀವನಕ್ಕೆ ಆಧಾರವಾಗಬಹುದಾದ ಕೌಶಲ್ಯಗಳನ್ನು ಕಲಿಯುವರು. ವಿಕಲಚೇತನರಿಗೆ ತಮ್ಮ ಜೀವನವನ್ನು ನಡೆಸಲು ಅಗತ್ಯವಾದುದ್ದನ್ನು ಒದಗಿಸದೆ ಇದ್ದರೆ ವೈಕಲ್ಯವು ಒಂದು ದುರಂತವಾಗುವುದು.
    • ಜನಗಣತಿ ೨೦೦೧ ರ ಪ್ರಕಾರ,೦-೧೯ ವಯೋಮಾನದ ಒಟ್ಟು ಜನಸಂಖ್ಯೆಯಲ್ಲಿ ೧.೬೭ %   ಜನ ವಿಕಲಚೇತನರಿದ್ದಾರೆ .ಜನಗಣತಿ ೨೦೦೧ ರ ಪ್ರಕಾರ,೦-೧೯ ವಯೋಮಾನದ ಒಟ್ಟು ಜನಸಂಖ್ಯೆಯಲ್ಲಿ ೧.೬೭ %   ಜನ ವಿಕಲಚೇತನರಿದ್ದಾರೆ .
    • ಯೋಜನಾ ಆಯೋಗದ   ಹತ್ತನೆ  ಪಂಚವಾರ್ಷಿಕ  ದಾಖಲೆಯ ಪ್ರಕಾರ  ಒಟ್ಟು  ಮಕ್ಕಳಲ್ಲಿ  ಶೆಕಡಾ೦.೫-೧.೦ ಮಕ್ಕಳು                 ಬುದ್ಧಿಮಾಂದ್ಯರಿದ್ದಾರೆಯೋಜನಾ ಆಯೋಗದ   ಹತ್ತನೆ  ಪಂಚವಾರ್ಷಿಕ  ದಾಖಲೆಯ ಪ್ರಕಾರ  ಒಟ್ಟು  ಮಕ್ಕಳಲ್ಲಿ  ಶೆಕಡಾ೦.೫-೧.೦ ಮಕ್ಕಳು     ಬುದ್ಧಿಮಾಂದ್ಯರಿದ್ದಾರೆ
    • ಶೈಕ್ಷಣಿಕ ಪದ್ಧತಿಯಲ್ಲಿ ವಿಕಲಚೇತನರಿಗೆ ಇರುವ ಅಡೆತಡೆಗಳುಶೈಕ್ಷಣಿಕ ಪದ್ಧತಿಯಲ್ಲಿ ವಿಕಲಚೇತನರಿಗೆ ಇರುವ ಅಡೆತಡೆಗಳು
    • ದೈಹಿಕ, ಮಾನಸಿಕ ವಿಕಲಚೇತನರಿಗೆ ವಿಶೇಷ ಶಾಲೆಗಳ ಕೊರತೆ.ದೈಹಿಕ, ಮಾನಸಿಕ ವಿಕಲಚೇತನರಿಗೆ ವಿಶೇಷ ಶಾಲೆಗಳ ಕೊರತೆ.
    • ವಿಕಲಚೇತನರು ಸಾಧಾರಣವಾಗಿ  ಕಲಿಯುವುದರಲ್ಲಿ ನಿಧಾನ. ಶಾಲೆಗಳಲ್ಲಿ  ಅವರ ಅಗತ್ಯಗಳಿಗೆ ಅನುಗಣವಾಗಿ ಕಲಿಸುವ ವಿಶೇಷ ಶಿಕ್ಷಕರು ಇರುವುದಿಲ್ಲ..ವಿಕಲಚೇತನರು ಸಾಧಾರಣವಾಗಿ  ಕಲಿಯುವುದರಲ್ಲಿ ನಿಧಾನ. ಶಾಲೆಗಳಲ್ಲಿ  ಅವರ ಅಗತ್ಯಗಳಿಗೆ ಅನುಗಣವಾಗಿ ಕಲಿಸುವ ವಿಶೇಷ ಶಿಕ್ಷಕರು ಇರುವುದಿಲ್ಲ..
    • ಸಹಪಾಠಿಗಳ ಸಂವೇದನಾ ರಹಿತ ನಡವಳಿಕೆಯಿಂದ.ಸಾಧಾರಣವಾಗಿ ದೈಹಿಕ ಮತ್ತು ಮಾನಸಿಕ ವಿಕಲಚೇತನರು ಅಪಹಾಸ್ಯದ ವಸ್ತುವಾಗುವರು. ಅವರ ಕಲಿಕೆಯಲ್ಲಿನ ನಿಧಾನ ಮತ್ತು ಶಾರೀರಿಕ ವಿಕೃತಿ ಅದಕ್ಕೆ ಕಾರಣ.ಸಹಪಾಠಿಗಳ ಸಂವೇದನಾ ರಹಿತ ನಡವಳಿಕೆಯಿಂದ.ಸಾಧಾರಣವಾಗಿ ದೈಹಿಕ ಮತ್ತು ಮಾನಸಿಕ ವಿಕಲಚೇತನರು ಅಪಹಾಸ್ಯದ ವಸ್ತುವಾಗುವರು. ಅವರ ಕಲಿಕೆಯಲ್ಲಿನ ನಿಧಾನ ಮತ್ತು ಶಾರೀರಿಕ ವಿಕೃತಿ ಅದಕ್ಕೆ ಕಾರಣ.
    • ವಿಕಲಚೇತನರಿಗೆ ಅನುಕೂಲಕರವಾಗಿರುವ ಮೂಲಭೂತ ಸೌಕರ್ಯಗಳಾದ  ಇಳಿಜಾರು , ಗಾಲಿಕುರ್ಚಿ,  ಕಕ್ಕಸು ಇತ್ಯಾದಿಗಳ ಕೊರತೆವಿಕಲಚೇತನರಿಗೆ ಅನುಕೂಲಕರವಾಗಿರುವ ಮೂಲಭೂತ ಸೌಕರ್ಯಗಳಾದ  ಇಳಿಜಾರು , ಗಾಲಿಕುರ್ಚಿ,  ಕಕ್ಕಸು ಇತ್ಯಾದಿಗಳ ಕೊರತೆ
    • ಸೂಕ್ತವಾದ  ತರಬೇತಿಯಂದ ವಿಕಲಚೇತನನಾದ ಮಗುವು ಕೌಶಲ್ಯಗಳನ್ನು ಕಲಿತು  ಉತ್ತಮ ಜೀವನ ನೆಡೆಸುವ ಅವಕಾಶ ಪಡೆಯಬಹುದು.ಸೂಕ್ತವಾದ  ತರಬೇತಿಯಂದ ವಿಕಲಚೇತನನಾದ ಮಗುವು ಕೌಶಲ್ಯಗಳನ್ನು ಕಲಿತು  ಉತ್ತಮ ಜೀವನ ನೆಡೆಸುವ ಅವಕಾಶ ಪಡೆಯಬಹುದು.
    • ಅಲ್ಲದೆ ಬೇಗನೆ ಗುರುತಿಸಿ ಚಿಕಿತ್ಸೆಮಾಡಿದರೆ ಬಹುತೇಕ ವಿಕಲತೆಗಳು ಗುಣವಾಗಬಹುದು ಇಲ್ಲವೆ ನಿಯಂತ್ರಣವಾಗಬಹುದು.   ಮಾನಸಿಕ ವಿಕಲತೆಯನ್ನು ಸರಿಯಾದ ಸಮಯದಲ್ಲಿನ ಮಧ್ಯಪ್ರವೇಶದಿಂದ ಚಿಕಿತ್ಸೆ ಮಾಡಿ ಗುಣಪಡಿಸಬಹುದು.ಅಲ್ಲದೆ ಬೇಗನೆ ಗುರುತಿಸಿ ಚಿಕಿತ್ಸೆಮಾಡಿದರೆ ಬಹುತೇಕ ವಿಕಲತೆಗಳು ಗುಣವಾಗಬಹುದು ಇಲ್ಲವೆ ನಿಯಂತ್ರಣವಾಗಬಹುದು.   ಮಾನಸಿಕ ವಿಕಲತೆಯನ್ನು ಸರಿಯಾದ ಸಮಯದಲ್ಲಿನ ಮಧ್ಯಪ್ರವೇಶದಿಂದ ಚಿಕಿತ್ಸೆ ಮಾಡಿ ಗುಣಪಡಿಸಬಹುದು.
    • ಸಂಘರ್ಷ ಮತ್ತು ಮಾನವ ನಿರ್ಮಿತ  ದುರ್ಘಟನೆಗಳುಸಂಘರ್ಷ ಮತ್ತು ಮಾನವ ನಿರ್ಮಿತ  ದುರ್ಘಟನೆಗಳು
    • ಸಂಘರ್ಷಗಳಾದ ರಾಜಕೀಯ ತುಮುಲ, ಯುದ್ಧ   , ನೈಸರ್ಗಿಕ ವಿಕೋಪದ ಸಮಯದಲ್ಲಿ ಪ್ರತಿ ಶಾಲೆ ಮತ್ತು ಪ್ರತಿ ಶಿಕ್ಷಕನೂ   ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ವಿಶೇಷ ರಕ್ಷಣೆ ಬೇಕು.  ಅದು ಸಮುದಾಯವು ಅರ್ಥ ಮಾಡಿಕೊಂಡಾಗ ಮಾತ್ರ ಸಾಧ್ಯ.ಸಂಘರ್ಷಗಳಾದ ರಾಜಕೀಯ ತುಮುಲ, ಯುದ್ಧ   , ನೈಸರ್ಗಿಕ ವಿಕೋಪದ ಸಮಯದಲ್ಲಿ ಪ್ರತಿ ಶಾಲೆ ಮತ್ತು ಪ್ರತಿ ಶಿಕ್ಷಕನೂ   ವಿಶೇಷ ಕಾಳಜಿ ತೆಗೆದುಕೊಳ್ಳಬೇಕು. ಈ ಪರಿಸ್ಥಿತಿಯಲ್ಲಿರುವ ಮಕ್ಕಳಿಗೆ ವಿಶೇಷ ರಕ್ಷಣೆ ಬೇಕು.  ಅದು ಸಮುದಾಯವು ಅರ್ಥ ಮಾಡಿಕೊಂಡಾಗ ಮಾತ್ರ ಸಾಧ್ಯ.


    ಮಕ್ಕಳ ಹಕ್ಕುಗಳು

    ಪರಿವಿಡಿ:
    1. ಮಗುವೆಂದರೆ ಯಾರು ?
    2. ಮಕ್ಕಳಿಗೆ ವಿಶೇಷ ಗಮನ ಏಕೆ ಬೇಕು?
    3. ಮಕ್ಕಳ ಹಕ್ಕುಗಳು ಯಾವುವು ?

    ಮಗುವೆಂದರೆ ಯಾರು?

    ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ  ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು.  ಇದು ಜಗತ್ತಿನಾದ್ಯಂತ ಒಪ್ಪಿತವಾದ  ಮಗುವಿನ ನಿರೂಪಣೆ ಮತ್ತು ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ .(UNCRC)   ಹೊರಹೊಮ್ಮಿದೆ. ಅಂತರಾಷ್ಟ್ರೀಯ ಕಾನೂನು ಸಾಧನ, ಬಹುತೇಕ ರಾಷ್ಟ್ರಗಳ ಒಪ್ಪಿಗೆ ಮತ್ತು  ಅನುಮೋದನೆ ಪಡೆದಿದೆ ಭಾರತವು ೧೮ ವರ್ಷದೊಳಗಿನ   ವ್ಯಕ್ತಿಗಳ ಗುಂಪನ್ನು  ಸದಾ  ಕಾನೂನು ಸಮ್ಮತ  ವಿಭಿನ್ನ  ಘಟಕ ಎಂದು ಪರಿಗಣಿಸಿದೆ. ಅದಕ್ಕಾಗಿಯೇ ಅವರು  ಮತದಾನದ ಹಕ್ಕು ,ವಾಹನ ಚಾಲನಾ ಪರವಾನಿಗೆ   ಅಥವ ಕಾನೂನು ಸಮ್ಮತ  ಒಪ್ಪಂದ  ಮಾಡಿಕೊಳ್ಳಲು  ೧೮ ವರ್ಷ ಪೂರೈಸಿರಬೇಕು.  ಹುಡುಗಿಗೆ  ೧೮ ವರ್ಷ,  ಹುಡುಗನಿಗೆ ೨೧ ವರ್ಷ ಆಗದೆ ಇದ್ದರೆ ಬಾಲ್ಯವಿವಾಹ ಕಾಯಿದೆ೧೯೨೯ರ ಪ್ರಕಾರ ಮದುವೆಯಾಗುವ ಹಾಗಿಲ್ಲ. ಅದೂ ಅಲ್ಲದೆ ೧೯೯೨ ರಲ್ಲಿ UNCRC ಯನ್ನು  ಅನುಮೋದನೆ ಮಾಡಿದ ನಂತರ, ಭಾರತವು   ಬಾಲಾಪರಾಧ ನ್ಯಾಯಕ್ಕೆ  ಅನುಗುಣವಾಗಿ ಕಾಯಿದೆಯನ್ನು ಬದಲಾಯಿಸಿದೆ.ಇದರಿಂದ ೧೮ ವರ್ಷದೊಳಗಿನವರಿಗೆ ಅಗತ್ಯವಾದ  ರಕ್ಷಣೆ ಮತ್ತು ಆರೈಕೆಯನ್ನು ದೊರಕುವುದನ್ನು ಖಚಿತ ಪಡಿಸಿಕೊಳ್ಳಲು, ಮತ್ತು ಅದನ್ನು ರಾಜ್ಯದಿಂದ ಪಡೆಯಲು ಅವರಿಗೆ ಅರ್ಹತೆ ಇದೆ. ಆದರೆ ಇನ್ನೂ ಅನೇಕ ಕಾಯಿದೆಗಳು ಮಗುವನ್ನು ವಿಭಿನ್ನವಾಗಿ ಅರ್ಥೈಸಿವೆ. ಮತ್ತು ಅವೆಲ್ಲವನ್ನೂ UNCRC.ಗೆ ಅನುಗುಣವಾಗಿರುವಂತೆ ಮಾಡಬೇಕಿದೆ. ಆದರೆ , ಈ ಮೊದಲೇ ಹೇಳಿದಂತೆ ಕಾನೂನಿನ ಪ್ರಕಾರ ಪ್ರಾಪ್ತ  ವಯಸ್ಕರಾಗಲು ಗಂಡುಹುಡುಗರಿಗೆ ೨೧ ವರ್ಷ ಹೆಣ್ಣು ಹುಡುಗಿಯರಿಗೆ ೧೮ ವರ್ಷ ಅಗತ್ಯ. ಇದರಂತೆ ೧೮ ವರ್ಷದ ಕೆಳಗಿನ ಗ್ರಾಮ / ಪಟ್ಟಣ / ನಗರದಲ್ಲಿನ ಎಲ್ಲ ವ್ಯಕ್ತಿಗಳನ್ನು ಮಕ್ಕಳೆಂದು ಪರಿಗಣಿಸಬೇಕು ಮತ್ತು ನಿಮ್ಮ ಸಹಾಯ ಮತ್ತು ಆಸರೆಯ ಅವರಿಗೆ  ಅಗತ್ಯ.ಒಬ್ಬ ವ್ಯಕ್ತಿಯನ್ನು  ಮಗು ಎಂದು ಪರಿಗಣಿಸಲು ಅವನ ವಯಸ್ಸೇ ಅತಿ ಮುಖ್ಯ.  ಒಬ್ಬ ೧೮ ವರ್ಷದ ಒಳಗಿನ ವ್ಯಕ್ತಿಯು  ಮದುವೆಯಾಗಿ ಮಕ್ಕಳನ್ನು ಪಡೆದಿದ್ದರೂ ಕೂಡಾ ಅಂತರಾಷ್ಟ್ರೀಯ ಮಾಪನಕ್ಕೆ ಅನುಗುಣವಾಗಿ ಅವನನ್ನು ಮಗು ಎಂದೆ ಗುರುತಿಸಲಾಗುವುದು.ಮುಖ್ಯ ಅಂಶಗಳು ೧೮ ವರ್ಷದೊಳಗಿನ ಎಲ್ಲ ವ್ಯಕ್ತಿಗಳು  ಮಕ್ಕಳೇ. ಬಾಲ್ಯವು ಎಲ್ಲ ವ್ಯಕ್ತಿಗಳೂ ಹಾದು ಹೋಗುವ ಒಂದು ಹಂತ. ಮಕ್ಕಳಿಗೆ ಬಾಲ್ಯದಲ್ಲಿ ವಿಭಿನ್ನವಾದ ಅನುಭವಗಳಾಗುತ್ತವೆ. ಎಲ್ಲ ಮಕ್ಕಳಿಗೂ ದುರ್ಬಳಕೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆ ಬೇಕಾಗುತ್ತದೆ.

    ಮಕ್ಕಳಿಗೆ ವಿಶೇಷ ಗಮನ ಏಕೆ ಬೇಕು?

    ಮಕ್ಕಳು ತಾವು ವಾಸಿಸುವಲ್ಲಿನ ಪರಿಸ್ಥಿತಿಯಿಂದ  ವಯಸ್ಕರಿಗಿಂತ ಹೆಚ್ಚಾಗಿ ಬೇಗ ಪರಿಣಾಮಕ್ಕೆ ಒಳಗಾಗುತ್ತಾರೆ.ಅದರಿಂದ ಸರಕಾರದ ಮತ್ತು ಸಮಾಜದ ಕ್ರಿಯೆ ಅಥವ  ನಿಷ್ಕ್ರಿಯೆಯಿಂದ ಬೇರೆ ವಯೋಮಾನದವರಿಗಿಂತ  ಅವರು  ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ. ನಮ್ಮದೂ ಸೇರಿದಂತೆ ಅನೇಕ ಸಮಾಜಗಳಲ್ಲಿ ಮಕ್ಕಳು ತಾಯಿತಂದೆಯರ ಆಸ್ತಿ ಎಂಬ ಭಾವನೆ ಇದೆ ಅಥವ ಅವರು ಇನ್ನೂ ವಯಸ್ಕರಾಗಬೆಕಾದವರು, ಇಲ್ಲವೆ  ಸಮಾಜಕ್ಕೆ ಸದ್ಯಕ್ಕೆ ಯಾವುದೇ ಕೊಡುಗೆ   ನೀಡಲಾಗದವರು ಎಂಬ ಭಾವನೆ ಇದೆ. ಮಕ್ಕಳೂ ಸಹಾ ಅವರದ್ದೆ ಆದ  ಮನಸ್ಸಿರುವ, ತಮ್ಮದೆ ಅಭಿಪ್ರಾಯವಿರುವ, ಆಯ್ಕೆಯ ಸಾಮರ್ಥ್ಯವಿರುವ, ತೀರ್ಮಾನ ತೆಗೆದು ಕೊಳ್ಳುವ ಶಕ್ತಿ ಇರುವ ವ್ಯಕ್ತಿಗಳೆಂದು  ಪರಿಗಣಿಸುವುದಿಲ್ಲ. ವಯಸ್ಕರು ಅವರಿಗೆ ಮಾರ್ಗದರ್ಶನ ಮಾಡುವ ಬದಲು, ಅವರ ಜೀವನವನ್ನೇ ನಿರ್ಧರಿಸುವರು.ಮಕ್ಕಳಿಗೆ ಮತದಾನ ಮಾಡುವ ಹಕ್ಕಿಲ್ಲ,ಅಥವ ರಾಜಕೀಯ ಪ್ರಭಾವ ಇಲ್ಲ, ಆರ್ಥಿಕ ಸ್ವಾತಂತ್ರ ಇಲ್ಲ.  ಅನೇಕ ಬಾರಿ  ಅವರ  ದನಿಯನ್ನು ಕೇಳುವವರೆ ಇರುವುದಿಲ್ಲ. ಮಕ್ಕಳು ವಿಶೇಷವಾಗಿ ದುರ್ಬಳಕೆಗೆ, ಶೋಷಣೆಗೆ ಒಳಗಾಗುವ ಸ್ಥಿತಿಯಲ್ಲಿರುವರು.

    ಮಕ್ಕಳ ಹಕ್ಕುಗಳು ಯಾವುವು?

    ಎಲ್ಲ ೧೮  ವರ್ಷದ ಒಳಗಿನ ವ್ಯಕ್ತಿಗಳು ಸರರ್ಕಾರದ ಆದೇಶದಲ್ಲಿ ಜಾರಿಮಾಡಿದ ಮತ್ತು ಅಂತರಾಷ್ಟ್ರೀಯ ಕಾಯಿದೆ ಪ್ರಕಾರ ಅನುಮೋದನೆ ಮಾಡಿದ ನಿಗದಿತ ಜೀವನ ಮಟ್ಟ ಮತ್ತು ಹಕ್ಕುಗಳನ್ನು ಹೊಂದಲು ಅರ್ಹತೆ ಪಡೆದಿರುವರು.ಭಾರತೀಯ  ಸಂವಿಧಾನ ಭಾರತೀಯ  ಸಂವಿಧಾನ ಎಲ್ಲ ಮಕ್ಕಳಿಗೆ ,ಕೆಲವು ಹಕ್ಕುಗಳನ್ನು ಪ್ರದಾನ ಮಾಡಿದೆ. ಕೆಲವನ್ನು ವಿಶೇಷವಾಗಿ ಅದರಲ್ಲಿ ಸೇರಿವೆ. ಅವು ಯಾವು ಅಂದರೆ:
    • ಎಲ್ಲ ೬-೧೪ ವಯೋಮಾನದ ಮಕ್ಕಳು ಸಂವಿಧಾನದ  ( ಅನುಚ್ಛೇದ ೨೧ಎ) ಉಚಿತ ಕಡ್ಡಾಯ ಶಿಕ್ಷಣದ ಹಕ್ಕು ಇದೆ.
    • ಯಾವುದೆ ಅಪಾಯಕಾರಿ ಕೆಲಸದಲ್ಲಿ  ೧೪ ವರ್ಷ ತುಂಬುವವರೆಗೆ ತೊಡಗುವುದರಿಂದ ರಕ್ಷಿತರಾಗುವ ಹಕ್ಕು ಇದೆ( ಅನುಚ್ಛೇದ ೨೪)
    • ಆರ್ಥಿಕ ಕಾರಣಕ್ಖಾಗಿ ತಮ್ಮ ವಯಸ್ಸಿನ , ಸಾಮರ್ಥ್ಯಕ್ಕೆ ಅನುಗುಣವಲ್ಲದ ವೃತ್ತಿಯಲ್ಲಿ ತೊಡುಗುವುದನ್ನು ತಡೆಯುವ ರಕ್ಷಣೆ ಇದೆ     (ಅನುಚ್ಛೇದ ೩೯. ಇ)
    • ಆರೋಗ್ಯಕರವಾಗಿ  ಸ್ವಾತಂತ್ರ ವಾತಾವರಣದಲ್ಲಿ ಅಭಿವೃದ್ಧಿಹೊಂದಲು ಸಮಾನ ಅವಕಾಶ ಮತ್ತು ಅನುಕೂಲ, ನೈತಿಕ ಮತ್ತು ಆರ್ಥಿಕ ಶೋಷಣೆ ಇಲ್ಲದ ಬಾಲ್ಯ ಮತ್ತು ಯೌವ್ವನದ ಖಚಿತ ರಕ್ಷಣೆಯ ಹಕ್ಕು ಇದೆ(ಅನುಚ್ಛೇದ೩೯ ಎಫ್)
    ಇವಲ್ಲದೆ ಅವರಿಗೆ ಭಾರತೀಯ ಪೌರರಾಗಿ ಯಾವದೇ ಪುರುಷ ಮತ್ತು ಮಹಿಳೆಯರಿಗೆ ಇರುವ  ಸಮಾನ ಹಕ್ಕುಗಳಿವೆ.
    • ಸಮಾನತೆಯ ಹಕ್ಕು (ಅನುಚ್ಛೇದ-೧೪)
    • ತಾರತಮ್ಯದ ವಿರುದ್ಧದ ಹಕ್ಕು(ಅನುಚ್ಛೇದ೧೫)
    • ಕಾನೂನಿನ ಅಡಿಯಲ್ಲಿ ವೈಯುಕ್ತಿಕ ಸ್ವಾತಂತ್ರ್ಯ  (ಅನುಚ್ಛೇದ ೨೧)
    • ಜೀತದಾಳಾಗಲು ಸಾಗಣಿಕೆ ಮತ್ತು ಬಲವಂತದ ವಿರುದ್ಧ ರಕ್ಷಣೆಯ ಸ್ವಾತಂತ್ರ್ಯ (ಅನುಚ್ಛೇದ ೨೩)
    • ಸಾಮಾಜಿಕ ಅನ್ಯಾಯ ಮತ್ತು ಎಲ್ಲ ರೀತಿಯ ಶೋಷಣೆಯಿಂದ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ (ಅನುಚ್ಛೇದ ೪೬)
    ಅಲ್ಲದೆ ರಾಜ್ಯವು:
    • ಮಕ್ಕಳಿಗೆ ಮಹಿಳೆಯರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಬೇಕು (ಅನುಚ್ಛೇದ ೧೫-೩)
    • ಅಲ್ಪಸಂಖ್ಯಾತರ ಹಿತ ರಕ್ಷಣೆ ಮಾಡಬೇಕು. (ಅನುಚ್ಛೇದ ೨೯)
    • ದುರ್ಬಲ ವರ್ಗದ ಜನರ ಶೈಕ್ಷಣಿಕ ಅಗತ್ಯವನ್ನು ಉತ್ತೇಜಿಸಬೇಕು. (ಅನುಚ್ಛೇದ ೪೬)
    • ಜನರ ಆಹಾರದ  ಪೌಷ್ಟಿಕತೆಯ ಮಟ್ಟ ಮತ್ತು ಜೀವನ ಮಟ್ಟ, ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸಬೇಕು(ಅನುಚ್ಛೇದ ೪೭)
    ಸಂವಿಧಾನ ಮಾತ್ರವಲ್ಲದೆ, ಮಕ್ಕಳಿಗಾಗಿ ವಿಶೆಷ ಕಾಯಿದೆಗಳಿವೆ. ಜವಾಬ್ದಾರಿಯುತ ಶಿಕ್ಷಕರು ಮತ್ತು ನಾಗರೀಕರಾಗಿ ನಾವು ಅವುಗಳನ್ನು  ಮತ್ತು ಅವುಗಳ ಪ್ರಾಮುಖ್ಯತೆಯನ್ನು ಅರಿತಿರುವುದು ಅತಿ ಮುಖ್ಯ. ಅವುಗನ್ನು ಈ ಕೈಪಿಡಿಯ ವಿವಿಧ ಭಾಗಗಳಲ್ಲಿ ಅವುಗಳಿಗೆ ಸಂಬಂಧಿಸಿದ ವಿಷಯಗಳೊಡನೆ ನೀಡಲಾಗಿದೆ. ವಿಶ್ವಸಂಸ್ಥೆಯ  ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ಎಲ್ಲಕ್ಕಿಂತ ಅತಿ ಪ್ರಾಮುಖ್ಯವಾದ ಅಂತರಾಷ್ಟ್ರೀಯ ಕಾನೂನು ಎಂದರೆ ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶದಲ್ಲಿ ತಗೆದು ಕೊಂಡದ್ದಾಗಿದೆ. ಅದು ಮಕ್ಕಳ ಹಕ್ಕುಗಳ ಸಮಾವೇಶ CRC  ಎಂದೆ ಜನಪ್ರಿಯವಾಗಿದೆ. ಇದು, ನಮ್ಮ ಸಂವಿಧಾನ ಮತ್ತು ಇತರ ಕಾಯಿದೆಗಳು ಎಲ್ಲ ಮಕ್ಕಳು ಹೊಂದಿರಬೇಕಾದ  ಹಕ್ಕುಗಳನ್ನು  ಕೊಡಮಾಡುತ್ತವೆ. ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ ಎಂದರೇನು? ಮಾನವ ಹಕ್ಕುಗಳು ಎಲ್ಲರಿಗೂ ಇವೆ.    ಅವರ ವಯಸ್ಸು ಗಣನೆಗೆ ಬರುವುದಿಲ್ಲ.   ಮಕ್ಕಳು ಕೂಡಾ  ಅದರಲ್ಲಿ ಬರುವರು.   ಆದಾಗ್ಯೂ     ಅವರ ವಿಶೇಷ ಸ್ಥಾನದ ಫಲವಾಗಿ  ಅವರಿಗೆ  ಹಿರಿಯರಿಗಿಂತ  ಹೆಚ್ಚುವರಿಯಾದ ರಕ್ಷಣೆ ಮತ್ತು ಮಾರ್ಗದರ್ಶನ ಅಗತ್ಯ.  ಮಕ್ಕಳು     ತಮ್ಮದೆ ಆದ ವಿಶೇಷ ಹಕ್ಕುಗಳನ್ನು ಹೊಂದಿರುವರು.  ಅವುಗಳನ್ನು ಮಕ್ಕಳ ಹಕ್ಕು ಎನ್ನುವರು. ಇವುಗಳನ್ನು ಅಂತರಾಷ್ಟ್ರೀಯ ಸಂಸ್ಥೆಯ  (CRC) UN  ಮಕ್ಕಳ ಹಕ್ಕಿನ   ಸಮಾವೇಶದಲ್ಲಿ  ಮಂಡಿಸಲಾಗಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕಿನ  ಸಮಾವೇಶದಲ್ಲಿ(CRC)ದಲ್ಲಿ ಅತಿ ಮುಖ್ಯ ಅಂಶಗಳೆಂದರೆ :
    • ಹುಡುಗರು ಮತ್ತು  ಹುಡುಗಿಯರ ವಯಸ್ಸು ೧೮ ವರ್ಷದ  ಕೆಳಗೆ ಇದ್ದು, ಅವರಿಗೆ ಮದುವೆಯಾಗಿ ಮಕ್ಕಳಾಗಿದ್ದರೂ  ಸಹಾ ಅವರು ಮಕ್ಕಳಾಗಿ ಪರಿಗಣಿಸ್ಪಡುತ್ತಾರೆ. ಇದು ಇಬ್ಬರಿಗೂ  ಸಮಾನವಾಗಿ ಅನ್ವಯವಾಗವುದು.
    • ಸಮಾವೇಶವು   ಮಗುವಿನ ಹಿತಾಸಕ್ತಿ  ,ತಾರತಮ್ಯ ರಾಹಿತ್ಯ  ,  ಮತ್ತು  ಮಗುವಿನ ಅಭಿಪ್ರಾಯಕ್ಕೆ ಗೌರವ ದ ತತ್ವದ                      ಮೇಲೆ ಕೆಲಸ ಮಾಡುವುದು.
    • ಅದು ಕುಟುಂಬದ ಪ್ರಾಮುಖ್ಯತೆಗೆ ಒತ್ತುಕೊಡುವುದು. ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ವಾತಾವರಣದ ನಿರ್ಮಾಣದತ್ತ ಗಮನ ಹರಿಸುವುದು.
    ಮಕ್ಕಳಿಗೆ ಸಮಾಜದಲ್ಲಿ ಸಮಾನ ಮತ್ತು ಉತ್ತಮ ಸ್ಥಾನ  ದೊರಕಿಸುವ ಹೊಣೆಯನ್ನು ರಾಜ್ಯ ಗೌರವಿಸಬೇಕು ಮತ್ತು ಖಚಿತ ಪಡಿಸಬೇಕು
    • ಅದು ನಾಲ್ಕು ವಿಧದ ಹಕ್ಕುಗಳು ಬಗ್ಗೆ ಗಮನ ಸೆಳೆಯುತ್ತದೆ - ನಾಗರೀಕ, ಸಮಾಜಿಕ,ರಾಜಕೀಯ ಮತ್ತು ಸಾಂಸ್ಕೃತಿಕ
    • ಬದುಕು
    • ರಕ್ಷಣೆ
    • ಅಭಿವೃದ್ಧಿ
    • ಪಾಲುಗೊಳ್ಳುವಿಕೆ
    ಬದುಕುವ ಹಕ್ಕಿನಲ್ಲಿ ಕೆಳಗಿನವುಗಳು ಸೇರಿವ
    • ಬದುಕುವ ಹಕ್ಕು
    • ಅತ್ಯುತ್ತಮ ಮಟ್ಟದ ಆರೋಗ್ಯವನ್ನು ಹೊಂದುವುದು
    • ಪೌಷ್ಟಿಕತೆ
    • ಉತ್ತಮ ಮಟ್ಟದ ಜೀವನ ಶೈಲಿ
    • ಹೆಸರು ಮತ್ತು ರಾಷ್ಟ್ರಿಯತೆ
    ಅಭಿವೃದ್ಧಿ ಯ ಹಕ್ಕು ಈ ಕೆಳಗಿನವುಗಳನ್ನು ಒಳಗೊಂಡಿದೆ
    • ಶಿಕ್ಷಣ
    • ಬಾಲ್ಯದಲ್ಲಿ ಆರೈಕೆ ಮತ್ತು ಅಭಿವೃದ್ಧಿಗೆ ಸಹಾಯ
    • ಸಾಮಾಜಿಕ ಭದ್ರತೆ
    • ಬಿಡುವು,ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಕ್ಕು
    ರಕ್ಷಣೆಯ ಹಕ್ಕು ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು  ಒದಗಿಸುತ್ತಾ ಕೆಳಗಿನವುಗಳಿಂದ ರಕ್ಷಿಸುತ್ತದೆ
    • ಶೋಷಣೆ
    • ದುರ್ಬಳಕೆ
    • ಅಮಾನವೀಯ ಮತ್ತು ಅಪಮಾನಕಾರಿಯಾಗಿ ನೆಡೆಸಿಕೊಳ್ಳುವುದು
    • ನಿರ್ಲಕ್ಷ್ಯ
    • ವಿಶೇಷ ಸಂದರ್ಭಗಳಾದ ತುರ್ತುಪರಿಸ್ಥಿತಿ, ಸೈನಿಕ ಸಂಘರ್ಷ,ಅಸ್ಥಿರತೆ ವಿರುದ್ಧ  ವಿಶೇಷ ರಕ್ಷಣೆ  ಒದಗಿಸುವದನ್ನು ಒಳಗೊಂಡಿದೆ
    ಭಾಗವಹಿಸುವಿಕೆಯು ಕೆಳಗಿನವುಗಳನ್ನು ಒಳಗೊಂಡಿರಬೇಕು.
    • ಮಗುವಿನ ಅಭಿಪ್ರಾಯಕ್ಕೆ ಮನ್ನಣೆ
    • ಅಭಿವ್ಯಕ್ತಿ ಸ್ವಾತಂತ್ರ್ಯ
    • ಸೂಕ್ತವಾದ ಮಾಹಿತಿ ಪಡೆಯುವುದು,ಆಲೋಚನೆ, ಆತ್ಮ ಸಾಕ್ಷಿ ಮತ್ತು  ಧರ್ಮದ ಸ್ವಾತಂತ್ರ್ಯ.
    ಈ ಎಲ್ಲಾ ಹಕ್ಕುಗಳು ಪರಸ್ಪರ ಅವಲಂಬಿತವಾಗಿ ,ಬೇರ್ಪಡಿಸಲಾರದಂತಿವೆ ಅವುಗಳ ಗುಣಕ್ಕೆ ಅನುಗುಣವಾಗಿ ಎಲ್ಲ ಹಕ್ಕುಗಳನ್ನು ಹೀಗೆ ವಿಂಗಡಿಸಲಾಗಿದೆ
    • ತತಕ್ಷಣದ ಹಕ್ಕುಗಳಲ್ಲಿ (ನಾಗರೀಕ ಮತ್ತು ರಾಜಕೀಯ) ತಾರತಮ್ಯ,   ಶಿಕ್ಷೆ , ಕ್ರಿಮಿನಲ್ ಮೊಕದ್ದಮೆಗಳಲ್ಲಿ ಉತ್ತಮ ಮಂಡನೆಯ ಅವಕಾಶ ಮತ್ತು ಬಾಲಾಪರಾಧಿಗಳಿಗೆ ಪ್ರತ್ಯೇಕ ನ್ಯಾಯ ವ್ಯವಸ್ಥೆ, ಬದುಕುವ ಹಕ್ಕು, ಕುಟುಂಬದ ಜೊತೆ ಪುನರ್ ಮಿಲನದ ಹಕ್ಕು ಸೇರಿವೆ.ಬಹಳಷ್ಟು ರಕ್ಷಣೆಯ ಹಕ್ಕುಗಳು ತತಕ್ಷಣದ ಹಕ್ಕುಗಳ ಅಡಿಯಲ್ಲಿಯೇ ಬರುವವು.ಆದ್ದರಿಂದ ತಕ್ಷಣದ ಗಮನ ಮತ್ತು ಮಧ್ಯವರ್ತನೆ ಅಗತ್ಯ.
    • ಪ್ರಗತಿ ಪರ ಹಕ್ಕುಗಳಲ್ಲಿ ( ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು) ಆರೋಗ್ಯ, ಶಿಕ್ಷಣ ಮತ್ತು ಮೊದಲು ತಿಳಿಸಿದ ಗುಂಪಿನಲ್ಲಿ ಇಲ್ಲದಿರುವ ಹಕ್ಕುಗಳು ಸೇರಿವೆ ಅವೆಲ್ಲವನ್ನೂ  CRC  ಅನುಚ್ಛೇದ  ೪ ರಲ್ಲಿ ಗುರುತಿಸಲಾಗಿದೆ. ಇದರ ವ್ಯಾಖ್ಯಾನ ಹೀಗಿದೆ “ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ  ಸಂಬಂಧಿಸಿದಂತೆ, ರಾಷ್ಟ್ರವು ತನಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಸಾಧ್ಯವಾದರೆ ಅಂತರಾಷ್ಟ್ರೀಯ ಸಹಕಾರದ ಚೌಕಟ್ಟಿನಲ್ಲಿ ಗರಿಷ್ಟ ಕ್ರಮ ತೆಗೆದುಕೊಳ್ಳ ಬೇಕು.”
    ಈ  ಕೈಪಿಡಿಯಲ್ಲಿ ವಿಶೇಷವಾಗಿ ಮಕ್ಕಳ ರಕ್ಷಣೆ,  ಅದನ್ನು ಖಾತರಿಯಾಗಿ ಒದಗಿಸುವಲ್ಲಿ  ಶಿಕ್ಷಕರ ಮತ್ತು ಶಾಲೆಯ ಪಾತ್ರದ ಬಗ್ಗೆ ವಿವರಣೆ ನೀಡಲಾಗಿದೆ .
    ೯ ಗಮನಿಕೆ: ಮಕ್ಕಳು ಬೆಳೆದಂತೆ ವಿಭಿನ್ನ ಸಾಮರ್ಥ್ಯ ಮತ್ತು   ಪರಿಪಕ್ವತೆಯನ್ನು ಪಡೆಯುತ್ತಾರೆ.  ಇದರ ಅರ್ಥ ಅವರು ೧೫ ಅಥವ ೧೬ ವರ್ಷದವರಾದಾಗ ರಕ್ಷಣೆಯ ಅಗತ್ಯವಿಲ್ಲ ಎಂದಲ್ಲ.  ಉದಾಹರಣೆಗೆ-ನಮ್ಮ ದೇಶದಲ್ಲಿ ಮಕ್ಕಳಿಗೆ ೧೬ ವರ್ಷ ತುಂಬುವ ಮೊದಲೇ ಮದುವೆ ಮಾಡುವರು ಮತ್ತು ಕೆಲಸಕ್ಕೂ ಹಚ್ಚುವರು ಆದರೆ ಅವರಿಗೆ ಅದರಿಂದ  ರಕ್ಷಣೆ ಕಡಿಮೆ ಆಗಬಾರದು.  ಸಮುದಾಯವು ಅವರನ್ನು  ವಯಸ್ಕರೆಂದು,ಪಕ್ವತೆ ಇರುವವರೆಂದು ಪರಿಗಣಿಸಿದರೂ ಅವರಿಗೆ ಅತ್ಯುತ್ತಮ ರಕ್ಷಣೆ ಮತ್ತು ಸಹಾಯ  ದೊರೆಯಲೇಬೇಕು. ಅದರಿಂದ ಅವರು ಜೀವನದ ಹಾದಿಯಲ್ಲಿ  ಪ್ರೌಢತೆಯತ್ತ ಸಾಗುವಾಗ ಉತ್ತಮ ಆರಂಭ ಸಿಗುವುದು.

    ರಾಷ್ಟ್ರೀಯ ಆಯೋಗ


    ಆದೇಶ

    ಅಧಿನಿಯಮದಲ್ಲಿ ಸೂಚಿಸಿದಂತೆ ಆಯೋಗದ ಕಾರ್ಯಗಳು ಈ ಕೆಳಗಿನಂತಿವೆ. ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಯಾವುದಾದರೂ ಕಾನೂನಿನಿಂದ ಅಥವಾ ಕಾನೂನಿನ ಅಡಿಯಲ್ಲಿ ಒದಗಿಸಲಾಗ ರಕ್ಷಣೆಗಳು ಪರಿಶೀಲನೆ ಮತ್ತು ಪರಿಷ್ಕರಣೆ ಮತ್ತು ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಮಗಳ ಶಿಫಾರಸು ಮತ್ತು ಈ ರಕ್ಷಣೆಗಳ ಕಾರ್ಯವಿಧಾನದ ಬಗ್ಗೆ ಕೇಂದ್ರಸರ್ಕಾರಕ್ಕೆ ವರದಿಗಳನ್ನು ನೀಡುವುದು.ಭಯೋತ್ಪಾದನೆ, ಕೋಮುಗಲಭೆ, ದಂಗೆಗಳು, ಪ್ರಾಕೃತಿಕ ವಿಕೋಪಗಳು, ಸ್ವಗೃಹದಲ್ಲಿನ ಹಿಂಸೆ, ಹೆಚ್.ಐ.ವಿ/ ಏಡ್ಸ್, ಮಕ್ಕಳ ಕಳ್ಳಸಾಗಣೆ, ಅನುಚಿತ ವರ್ತನೆ, ಹಿಂಸೆ ಮತ್ತು ಶೋಷಣೆ, ಅಶ್ಲೀಲ ಸಾಹಿತ್ಯ, ಮತ್ತು ವೇಶ್ಯಾವೃತ್ತಿಗಳಿಂದ ಪ್ರಭಾವಿತರಾಗಿ ಮಕ್ಕಳು ಹಕ್ಕುಗಳನ್ನು ಅನುಭವಿಸುವುದಕ್ಕೆ ತಡೆಯೊಡ್ಡುವಂತಹ ಎಲ್ಲ ಅಂಶಗಳನ್ನು ಪರಿಶೀಲಿಸಿ ಸೂಕ್ತಪರಿಹಾರೋಪಾಯಗಳನ್ನು ಶಿಫಾರಸು ಮಾಡುವುದು.ಸಂಕಷ್ಟದಲ್ಲಿರುವ ಮಕ್ಕಳು, ಅಲಕ್ಷ್ಯಕ್ಕೆ ಒಳಗಾದ ಮತ್ತು ಅವಕಾಶ ವಂಚಿತ ಮಕ್ಕಳು, ನಿರ್ಗತಿಕ ಮಕ್ಕಳು ಮತ್ತು ಖೈದಿಗಳ ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸಿ ಸೂಕ್ತ ಪರಿಹಾರ ವಿಧಾನಗಳನ್ನು ಶಿಫಾರಸು ಮಾಡುವುದು ಮಕ್ಕಳ ಹಕ್ಕುಗಳ ಪರಿಜ್ಞಾನವನ್ನು ಸಮಾಜದ ವಿವಿಧ ಭಾಗಗಳಲ್ಲಿ ಪ್ರಸಾರಗೊಳಿಸಿ ಮಕ್ಕಳಿಗೆ ಇರುವ ರಕ್ಷಣೆಗಳು ಮತ್ತು ಹಕ್ಕುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು.
    ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಟ್ಟ ಅಥವಾ ಯಾವುದಾದರೂ ಪ್ರಾಧಿಕಾರದ ಯಾವುದಾದರೂ ಬಾಲಾಪರಾಧಿಗೃಹ ಅಥವಾ ಯಾವುದಾದರೂ ಮಕ್ಕಳ ನಿವಾಸಕ್ಕಾಗಿ ಇರುವ ಸ್ಥಳ ಅಥವಾ ಸಂಸ್ಥೆ ಅಥವಾ ಯಾವುದಾದರೂ ಸಾಮಾಜಿಕ ಸಂಸ್ಥೆಯಿಂದ ನಡೆಸಲ್ಪಡುತ್ತಿರುವ ಮಕ್ಕಳ ಸುಧಾರಣಾ ಕೇಂದ್ರ ಇವುಗಳ ತಪಾಸಣೆ ಅಥವಾ ತಪಾಸಣೆಗೆ ಕಾರಣರಾಗುವುದು.ಮಕ್ಕಳ ಹಕ್ಕುಗಳ ಉಲ್ಲಂಘನೆಯಾದ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿ ಅಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವುದು ಮತ್ತು ಮಕ್ಕಳ ಹಕ್ಕುಗಳ ಅಪಹರಣ ಅಥವಾ ಉಲ್ಲಂಘನೆ ಮಕ್ಕಳ ಸಂರಕ್ಷಣೆ ಮತ್ತು ಬೆಳವಣಿಗೆಗೆ ಪೂರಕವಾದ ಕಾನೂನುಗಳನ್ನು ಅನುಷ್ಠಾನಕ್ಕೆ ತರದಿರುವುದು ಮಕ್ಕಳ ಕೋಟಲೆಗಳನ್ನು ಕಡಿಮೆಗೊಳಿಸುವ ಮತ್ತು ಮಕ್ಕಳ ಕಲ್ಯಾಣವನ್ನು ಖಾತ್ರಿಪಡಿಸುವ ನೀತಿ ನಿರ್ಧಾರಗಳು, ಮಾರ್ಗಸೂಚಿಗಳು ಮತ್ತು ಸೂಚನೆಗಳ ಅನುಸರಣೆ ಮಾಡದಿರುವುದು ಮತ್ತು ಅಂತಹ ಮಕ್ಕಳೀಗೆ ಪರಿಹಾರ ಒದಗಿಸುವುದು ಅಥವಾ ಅಂತಹ ವಿಷಯಗಳಿಂದ ಉದ್ಭವವಾದ ಸಮಸ್ಯೆಗಳನ್ನು ಸೂಕ್ತ ಪ್ರಾಧಿಕಾರಗಳಿಗೆ ತೆಗೆದುಕೊಂಡು ಹೋಗುವುದು.ಈ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ನಿರ್ಧಾರಗಳನ್ನು ಕೈಗೊಳ್ಳುವುದು.ಒಪ್ಪಂದಗಳು ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಅಧ್ಯಯನ ಮಾಡುವುದು,
    ಮಕ್ಕಳ ಹಕ್ಕುಗಳ ಪ್ರಸ್ತುತ ನೀತಿಗಳು, ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳ ಬಗ್ಗೆ ಆಗಾಗ್ಗೆ ಪರಿಷ್ಕರಣೆ ಕೈಗೊಳ್ಳುವುದು ಮತ್ತು ಅವುಗಳ ಪರಿಣಾಮಕಾರೀ ಅನುಷ್ಠಾನಕ್ಕೆ ಮಕ್ಕಳ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಫಾರಸುಗಳನ್ನು ಮಾಡುವುದು.ಪ್ರಸ್ತುತ ಕಾನೂನು, ನೀತಿ ಮತ್ತು ಆಚರಣೆಗಳನ್ನು ಅವುಗಳ ಅನುಸರಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ್ತು ಮಗುವಿನ ಹಕ್ಕುಗಳ ಹಿನ್ನಲೆಯಲ್ಲಿ, ವಿಶ್ಲೇಷಣೆ ಮಾಡುವುದು. ವಿಚಾರಣೆಗಳನ್ನು ಕೈಗೆತ್ತಿಕೊಂಡು ಮಕ್ಕಳ ಮೇಲೆ ಪ್ರಭಾವ ಬೀರುವ ಯಾವುದಾದರೂ ವಿಷಯಾಂಶ, ನೀತಿ ಅಥವಾ ಆಚರಣೆಯನ್ನು ಕುರಿತು ವರದಿಗಳನ್ನು ಸಿದ್ಧಪಡಿಸುವುದು ಮತ್ತು ಮಕ್ಕಳ ಹಕ್ಕುಗಳ ಹಿನ್ನಲೆಯಲ್ಲಿ ಪ್ರಸ್ತಾಪಿಸಲ್ಪಟ್ಟ ಹೊಸ ವಿಧಿವಿಧಾನಗಳ ರಚನೆಯನ್ನು ವಿಮರ್ಶಿಸುವುದು.ಮಕ್ಕಳ ವಿಷಯವಾಗಿ ಕಾರ್ಯಮಾಡುತ್ತಿರುವ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಕಾರ್ಯ ನಿರ್ವಹಣೆಯಲ್ಲಿ ಮಕ್ಕಳ ದೃಷ್ಟಿಕೋನವನ್ನು ಪರಿಗಣಿಸಿ ಅದರ ಬಗ್ಗೆ ಗೌರವತೋರುವ ಮನೋಭಾವನೆಯನ್ನು ಬೆಳೆಸುವುದು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಗಳನ್ನು ಸಿದ್ಧಪಡಿಸುವುದು ಮತ್ತು ಪ್ರಚಾರಗೊಳಿಸುವುದು ಮಕ್ಕಳ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಮತ್ತು ಶಾಲೆಯ ಪಠ್ಯಕ್ರಮ, ಶಿಕ್ಷಕರ ತರಬೇತಿ ಮತ್ತು ಮಕ್ಕಳ ವಿಷಯವಾಗಿ ಕೆಲಸ ನಿರ್ವಹಿಸುವವರ ತರಬೇತಿಗಳಲ್ಲಿ ಮಕ್ಕಳ ಹಕ್ಕುಗಳನ್ನು ಸೇರಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವುದು.

    ಸಂರಚನೆ

    ಮೂರು ವರ್ಷಗಳ ಅವಧಿಗೆ ನೇಮಕಮಾಡಿದ ಈ ಕೆಳಕಂಡ ಸದಸ್ಯರುಗಳನ್ನು ಆಯೋಗ ಹೊಂದಿರುತ್ತದೆ. ಮಕ್ಕಳ ಕಲ್ಯಾಣಕ್ಕಾಗಿ ಮುಖ್ಯವಾದ ಕೆಲಸಮಾಡಿದ ಪ್ರಸಿದ್ಧ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿಸುವುದು.ಶಿಕ್ಷಣ, ಮಕ್ಕಳ ಆರೋಗ್ಯ, ಕಲ್ಯಾಣ, ಅಭಿವೃದ್ಧಿ, ಪೋಷಣೆ, ಮಕ್ಕಳ ನ್ಯಾಯ, ನಿರ್ಲಕ್ಷಿತ ಮಕ್ಕಳ ಆರೈಕೆ, ಅಲಕ್ಷಿತ ಮಕ್ಕಳ ಸಂರಕ್ಷಣೆ, ವಿಕಲ ಚೇತನರ ಆರೈಕೆ, ಬಾಲದುಡಿಮೆಯ ನಿವಾರಣೆ, ಶಿಶು ಮನಃಶಾಸ್ತ್ರ ಮತ್ತು ಮಕ್ಕಳಿಗಾಗಿ ರಚಿತ ಕಾನೂನು ಈ ರಂಗಗಳಲ್ಲಿ ಒಂದರಲ್ಲಾದರೂ ಪರಿಣತರಾದ, ಶೇಷ್ಠ, ಪ್ರಾಮಾಣಿಕ, ಪ್ರಸಿದ್ಧ ಆರು ಜನ ಸದಸ್ಯರು ಸಹಕಾರ್ಯದರ್ಶಿಯ ದರ್ಜೆಗೆ ಕಡಿಮೆಯಿರದ ಸದಸ್ಯ ಕಾರ್ಯದರ್ಶಿ

    ಅಧಿಕಾರ

    ಒಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿವಿಲ್ ನ್ಯಾಯಾಲಯವು ಹೊಂದಿರುವ ಎಲ್ಲ ಅಧಿಕಾರಗಳನ್ನೂ ಆಯೋಗವು ಹೊಂದಿರುತ್ತದೆ ಮತ್ತು ಈ ಕೆಳಕಂಡ ಅಧಿಕಾರಗಳನ್ನು ನಿರ್ದಿಷ್ಟವಾಗಿ ಹೊಂದಿರುತ್ತದೆ ಭಾರತದ ಯಾವುದೇ ಪ್ರದೇಶದಿಂದ ಒಬ್ಬ ವ್ಯಕ್ತಿಯನ್ನು ಕರೆಸಿ ಕೊಳ್ಳುವ, ಅವರ ಹಾಜರಾತಿಯನ್ನು ಕಡ್ಡಾಯಗೊಳಿಸಿ ಪ್ರತಿಜ್ಞಾ ವಿಧಿಯನಂತರ ಅವರನ್ನು ವಿಚಾರಿಸುವುದು ಯಾವುದೇ ದಾಖಲೆಯನ್ನು ಹುಡುಕಿ ಪ್ರಸ್ತುತ ಪಡಿಸಲು ಕ್ರಮತೆಗೆದುಕೊಳ್ಳುವುದುಶಪಥ ಪತ್ರಗಳ ಮೇಲೆ ಪುರಾವೆಗಳನ್ನು ಸ್ವೀಕರಿಸುವುದು ಯಾವುದೇ ನ್ಯಾಯಾಲಯ ಕಚೇರಿಯಿಂದ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ಪ್ರತಿಯನ್ನು ತರಿಸಿಕೊಳ್ಳುವುದು ದಾಖಲೆಗಳು ಮತ್ತು ಸಾಕ್ಷೀದಾರರನ್ನು ಪರೀಕ್ಷಿಸಲು ಕಮೀಷನ್ ಗಳನ್ನು ಜಾರಿಗೊಳಿಸುವುದು ಇದೇ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಕ್ಷೇತ್ರಾಧಿಕಾರವುಳ್ಳ ಮ್ಯಾಜಿಸ್ಟ್ರೇಟರಿಗೆ ಪ್ರಕರಣವನ್ನು ಹಸ್ತಾಂತರಿಸುವುದು.ಅಂತಹ ನ್ಯಾಯಾಲಯವು ಅಪೇಕ್ಷಿಸಿದಲ್ಲಿ ಸಂಬಂಧಿಸಿದ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಅಗತ್ಯ ಆದೇಶ ಅಥವಾ ನಿರ್ದೇಶ ಅಥವಾ ಲೇಖವನ್ನು ಪಡೆಯಲು ಮೊರೆಹೋಗಬಹುದು.

    ದೂರು ನೀಡುವ ವಿಧಾನ

    ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುವ ಗುರುತರ ಪ್ರಕರಣಗಳನ್ನು ಪ್ರಜ್ನಾಪೂರ್ವಕವಾಗಿ ಸ್ವಯಂಪ್ರೇರಿತವಾಗಿ ಆಯೋಗವು ಗುರುತಿಸಬೇಕು ಅಲ್ಲದೇ ಮಕ್ಕಳು ಹಕ್ಕುಗಳನ್ನು ಅನುಭವಿಸಲು ತಡೆಯೊಡ್ಡುವ ಅಂಶಗಳನ್ನು ಪರಿಶೀಲಿಸಬೇಕು ಸಂವಿಧಾನದ 8 ನೇ ಅನುಸೂಚಿಯಲ್ಲಿನ ಯಾವುದೇ ಭಾಷೆಯಲ್ಲಿ ಆಯೋಗಕ್ಕೆ ದೂರು ನೀಡಬಹುದು ಅಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ನೀಡಬೇಕಾಗಿಲ್ಲ ದೂರಿಗೆ ಕಾರಣವಾದ ವಿಷಯದ ಸಂಪೂರ್ಣ ಚಿತ್ರವನ್ನು ದೂರಿನಲ್ಲಿ ನೀಡಬೇಕು ಅಗತ್ಯವೆನಿಸಿದಲ್ಲಿ ಆಯೋಗವು ಹೆಚ್ಚಿನ ವಿವರಗಳನ್ನು / ಶಪಥ ಪತ್ರಗಳನ್ನು ಆಯೋಗ ಕೇಳಬಹುದು ದೂರು ನೀಡುವಾಗ ಇವುಗಳನ್ನು ದಯವಿಟ್ಟು ಖಾತ್ರಿ ಮಾಡಿಕೊಳ್ಳಿರಿ ಸ್ಪಷ್ಟ ಮತ್ತು ಓದಲಾಗುವಂತಿರಬೇಕು, ಅಸ್ಪಷ್ಟವಾಗಿರಬಾರದು. ಅನಾಮಧೇಯ ಅಥವಾ ಬೇನಾಮಿ ದೂರು ಆಗಿರಬಾರದು ಇಂತಹ ದೂರುಗಳನ್ನು ನೀಡಲು ಯಾವುದೇ ಶುಲ್ಕ ವಿಧಿಸುವಂತಿಲ್ಲ
    ಕೈಗೆತ್ತಿಕೊಂಡ ಪ್ರಕರಣವು ಆಸ್ತಿಯ ಹಕ್ಕುಗಳು, ಗುತ್ತಿಗೆಗೆ ಸಂಬಂಧಿಸಿದ ಭಾಧ್ಯತೆಗಳಂತಹ ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರಬಾರದು.ಕೈಗೆತ್ತಿಕೊಂಡ ಪ್ರಕರಣವು ಸೇವಾವಿಷಯಗಳಿಗೆ ಸಂಬಂಧಿಸಿರಬಾರದು ಪ್ರಕರಣವು ಕಾನೂನಿಗೆ ಅನ್ವಯವಾಗಿ ರಚಿಸಲ್ಪಟ್ಟ ಬೇರೇ ಯಾವುದೇ ಆಯೋಗದ ಮುಂದೆ ಇರಬಾರದು ಅಥವಾ ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣದಲ್ಲಿ ವಿಚಾರಣಾಧೀನವಾಗಿರಬಾರದು ಪ್ರಕರಣವು ಇದೇ ಆಯೋಗದಿಂದ ಈ ಮೊದಲೇ ತೀರ್ಮಾನಿಸಿದುದಾಗಿರಬಾರದು ಬೇರೆ ಯಾವುದೇ ಆಧಾರದಲ್ಲಿ ಆಯೋಗದ ವ್ಯಾಪ್ತಿಯಿಂದ ಆಚೆ ಇರಬಾರದು

    ದೂರುಗಳನ್ನು ನೀಡಲು  ಸಂಪರ್ಕಿಸಿ :
    ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದ 5 ನೇ ಮಹಡಿ,
    ಚಂದೆರ್ಲೋಕ್ ಕಟ್ಟಡ, 36 ಜನಪಥ್
    ದೆಹಲಿ -೧೧೦೦೦೧

    ದೂರವಾಣಿ: 011-23478200
    ಫ್ಯಾಕ್ಸ್: 011-23724026
    ದೂರು ಜಾಲತಾಣ: www.ebaalnidan.nic.in

    ಮೂಲ : NCPCR

    ವಿಕಲಚೇತನರ ವಿದ್ಯಾರ್ಥಿವೇತನ

    ವ್ಯಾಪ್ತಿ

    ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನಗಳನ್ನು IX, X xi, xii,ತರಗತಿಯವರು ಮತ್ತು ನಂತರ ಭಾರತದಲ್ಲಿ ಮೆಟ್ರಿಕ್ಯುಲೇಷನ್ ಡಿಪ್ಲೊಮಾ  ಮತ್ತು ಬ್ಯಾಚಲರ್ ಪದವಿ ಅಥವಾ ಡಿಪ್ಲೊಮಾ ಅಧ್ಯಯನ ಮತ್ತು ಯುಜಿಸಿ ಮಾನ್ಯತೆ ಯಾವುದೇ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಇವುಗಳಲ್ಲಿ ಅಧ್ಯಯನ ಮಾಡುವ  ವಿಕಲಾಂಗತೆಗಳುಳ್ಳ ವ್ಯಕ್ತಿಗಳಿಗೆ ಲಭ್ಯವಿರುತ್ತದೆ (ಸಮಾನ ಅವಕಾಶ ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಕಾಯ್ದೆ, 1995 ಮತ್ತು ಮತ್ತು / ಅಥವಾ ಯಾವುದೇ ಸಂಬಂಧಿತ ಕಾನೂನು ಕಟ್ಟಳೆಯ ಅಡಿಯಲ್ಲಿ ಆಟಿಸಂ, ಸೆರೆಬ್ರಲ್ ಪಾಲ್ಸಿ, ಮಂದಬುದ್ಧಿ ಮತ್ತು ಬಹು ದೈಹಿಕ ಅಸಾಮರ್ಥ್ಯ ಕಾಯ್ದೆಯಡಿಯ, 1999 ವ್ಯಕ್ತಿಗಳ ಕಲ್ಯಾಣ ರಾಷ್ಟ್ರೀಯ ಟ್ರಸ್ಟ್ . ಭಾರತೀಯ ರಾಷ್ಟ್ರೀಯಯತೆಯನ್ನು ಹೊಂದಿರುವವರು ವಿದ್ಯಾರ್ಥಿವೇತನದ ಅರ್ಹತೆಯನ್ನು ಪಡೆದಿರುತ್ತಾರೆ. ಈ ಯೋಜನೆಯಡಿ ವಿದ್ಯಾರ್ಥಿ ವೇತನವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ   ಅಸಾಮರ್ಥ್ಯ ವ್ಯಕ್ತಿಗಳ ಸಬಲೀಕರಣ ಇಲಾಖೆ , ಭಾರತ ಸರ್ಕಾರ ಪ್ರದಾನ ಮಾಡುತ್ತದೆ.

    ಅರ್ಹತೆ ನಿಯಮಗಳು

    ಸಾಮಾನ್ಯ ನಿಯಮಗಳು:
    • ವಿದ್ಯಾರ್ಥಿವೇತನವು ಭಾರತದ ರಾಷ್ರತೀಯತೆ ಹೊಂದಿರುವವರಿಗೆ ಮಾತ್ರ ಮುಕ್ತವಾಗಿದೆ.
    • 40% ಕ್ಕಿಂತ  ಕಡಿಮೆ  ಅಂಗವೈಕಲ್ಯ ಹೊಂದಿರುವ (ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಸಮರ್ಥ ವೈದ್ಯಕೀಯ ಪ್ರಾಧಿಕಾರವು ಸರ್ಟಿಫೈಡ್.) ವಿದ್ಯಾರ್ಥಿಗಳು ಅರ್ಹರಲ್ಲ.
    • ಒಂದೇ ಕುಟುಂಬದ ಎರಡಕ್ಕಿಂತ ಹೆಚ್ಹು ಅಂಗವಿಕಲ ಮಕ್ಕಳು ಯೋಜನೆಯ ಲಾಭಗಳನ್ನು ಪಡೆಯಲು ಅನರ್ಹರಾಗಿರುತ್ತಾರೆ. ಅವಳಿ ಜವಳಿ  ಆದಸಂದರ್ಭದಲ್ಲಿ ಎರಡೂ  ಮಕ್ಕಳು ಈ ಯೋಜನೆಯಡಿಯಲ್ಲಿ ಅರ್ಹರಾಗುತ್ತಾರೆ
    • ಯಾವುದೇ ವರ್ಗದಲ್ಲಿ  ಅಧ್ಯಯನ ಮಾಡುತ್ತಿರುವ ವಿದ್ಯಾಥಿಗಳಿಗೆ ವಿದ್ಯಾರ್ಥಿವೇತನ ಕೇವಲ ಒಂದು ವರ್ಷದ ಅವಧಿಗೆ ಲಭ್ಯವಾಗುತ್ತದೆ. ಒಂದುವೇಳೆ ಅನುತ್ತೀರ್ಣರಾದರೆ  ಲಭ್ಯವಿರುವುದಿಲ್ಲ
    • ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನ ವನ್ನು ಪಡೆಯುತ್ತಿರುವ ವಿದ್ಯಾರ್ಥಿ ಬೇರೆ ಯಾವುದೇ ವಿದ್ಯಾರ್ಥಿವೇತನ / ಸಂಬಳ ಪಡೆಯುತ್ತಿದ್ದರೆ ಅರ್ಹರಾಗುವುದಿಲ್ಲ.  ಒಂದು ವೇಳೆ ಬೇರೆ ಯಾವುದೇ ವಿದ್ಯಾರ್ಥಿವೇತನ ವನ್ನು ಪಡೆಯುತ್ತಿದ್ದರೆ  ಅವರಿಗೆ ಹೆಚ್ಚು ಪ್ರಯೋಜನಕಾರಿ ಯಾದ  ವಿದ್ಯಾರ್ಥಿವೇತನವನ್ನು ಆಯ್ಕೆಮಾಡಿಕೊಳ್ಳುವ ಅವಕಾಶ ವಿರುತ್ತದೆ. ಅವನು/ಅವಳು ಆಯ್ಕೆಮಾಡಿದ ಸಂಸ್ಥೆಯ ವಿದ್ಯಾರ್ಥಿವೇತನವನ್ನು / ಪ್ರೋತ್ಸಾಹ ಧನ ವನ್ನು ನೀಡಲಾಗುತ್ತದೆ. ಯಾವುದೇ ವಿದ್ಯಾರ್ಥಿವೇತನವನ್ನು  ಅವನು / ಅವಳು ಸ್ವೀಕರಿಸುವ ದಿನಾಂಕದಿಂದ ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಪಾವತಿಸಲಾಗುವುದು. ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವತಿಯಿಂದ ಪುಸ್ತಕಗಳು, ವಸ್ತುಗಳ ಖರೀದಿಗಾಗಿ ಅಥವಾ ಈ ಅಡಿಯಲ್ಲಿ ಹಣ ವಿದ್ಯಾರ್ಥಿವೇತನ ಮೊತ್ತದ ಜೊತೆಗೆ ಹೆಚ್ಚಿಗೆ ವೆಚ್ಚವನ್ನು ಪಡೆಯಬಹುದು.
    • ಕೇಂದ್ರ ಸರ್ಕಾರದ / ರಾಜ್ಯ ಸರ್ಕಾರಗಳ ಆರ್ಥಿಕ ನೆರವು ಪಡೆದು ಯಾವುದೇ ಪೂರ್ವ ಪರೀಕ್ಷೆ ತರಬೇತಿ  ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ ಸ್ವೀಕರಿಸಿದದ  ವಿದ್ಯಾಥಿಗಳು ವಿದ್ಯಾರ್ಥಿವೇತವನ್ನು ಪಡೆಯಲು ಅರ್ಹರಾಗಿರುವುದಿಲ್ಲ.
    ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ
    • ಅವಳು / ಅವನು ಪೂರ್ಣ ಸಮಯದಲ್ಲಿ  ಸರ್ಕಾರಿ  ಶಾಲೆಯಲ್ಲಿ ಅಥವಾ ಸರ್ಕಾರದ ಮಾನ್ಯತೆ ಶಾಲೆಯಲ್ಲಿ ವರ್ಗ IX ಅಥವಾ ಎಕ್ಸ್ ಅಧ್ಯಯನ ಮಾಡುತ್ತಿರಬೇಕು ಅಥವಾ ಕೇಂದ್ರ / ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಮಾನ್ಯತೆ ಪಡೆದ ಶಾಲೆಯ ವಿದ್ಯಾರ್ಥಿಯಾಗಿರಬೇಕು.

    ವಿದ್ಯಾರ್ಥಿವೇತನ ಮೌಲ್ಯ



    ಪೂರ್ವ ಮೌಲ್ಯದ - ಮೆಟ್ರಿಕ್ ವಿದ್ಯಾರ್ಥಿ ವೇತನವನ್ನು ಸಂಪೂರ್ಣ ಅವಧಿಯವರೆಗೆ ಈ ಕೆಳಗಿನಂತಿದೆ :
    ವಿದ್ಯಾರ್ಥಿವೇತನ ಮತ್ತು ಗ್ರಾಂಟ್ ದರಗಳು
    ವಸ್ತುಗಳು ಡೇ ಸ್ಕಾಲರ್ ಹೊಸ್ಟೆಲ್ರ್ಸ್
    ಒಂದು ಶೈಕ್ಷಣಿಕ ವರ್ಷದಲ್ಲಿ 10 ತಿಂಗಳು ಕೊಡಬೇಕಾದ ವಿದ್ಯಾರ್ಥಿವೇತನ ದರ (ರೂ. ಪ್ರತಿ ತಿಂಗಳು) 350 600
    ಪುಸ್ತಕ ಮತ್ತು ಅನುದಾನ 750 1000

    ಭತ್ಯೆಗಳು
    ಭತ್ಯೆ

    ಮೊತ್ತ (ರೂ)
    ಕುರುಡು ವಿದ್ಯಾಥಿಗಳಿಗೆ ತಿಂಗಳ ರೀಡರ್ ಭತ್ಯೆ 160
    ಮಾಸಿಕ ಸಾರಿಗೆ ಭತ್ಯೆ, (ಇಂತಹ ವಿದ್ಯಾರ್ಥಿಗಳು ಇದು ಶೈಕ್ಷಣಿಕ ಸಂಸ್ಥೆ ಆವರಣದಲ್ಲಿ ಅಥವಾ ಹಾಸ್ಟೆಲ್ ವಾಸಿಸುತ್ತಿರದಿದ್ದರೆ) 160
    ತೀವ್ರ  ಅಂಗವೈಕಲ್ಯ ಹೊಂದಿರುವ (ಅಂದರೆ 80% ಅಥವಾ ಹೆಚ್ಚಿನ ಅಂಗವೈಕಲ್ಯ) ವಿದ್ಯಾರ್ಥಿ ಗಳಿಗೆ ಮಾಸಿಕ ಬೆಂಗಾವಲು ಪಡೆಯಲು  ದಿನ ಸ್ಕಾಲರ್ಸ್ / ಕಡಿಮೆ ಪರಮಾವಧಿಯ ಅಂಗವೈಕಲ್ಯ ವಿದ್ಯಾರ್ಥಿಗಳ ಜೊತೆ 160
    ಒಂದು ಶೈಕ್ಷಣಿಕ ಸಂಸ್ಥೆ ಹಾಸ್ಟೆಲ್ ವಾಸಿಸುವ ದೌರ್ಬಲ್ಯ ವಿದ್ಯಾರ್ಥಿಗೆ  ಸಹಾಯ ವಿಸ್ತರಿಸಲು ಸಿದ್ರಿರುವ ಹಾಸ್ಟೆಲ್‌ನ ಯಾವುದೇ ಉದ್ಯೋಗಿಗೆ  ಮಾಸಿಕ ಸಹಾಯಕ ಭತ್ಯೆ 160
    ಮಾನಸಿಕವಾಗಿ ಅನಾರೋಗ್ಯಕ್ಕೆ  ಒಳಗಾಗಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಮರೆವಿನ ಮತ್ತು ಮಾಸಿಕ ತರಬೇತಿ ಭತ್ಯೆ

    240

    ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
    ಮೂಲ: ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್