ಹದಿನೆಂಟು ವಯೋಮಾನದ ಕೆಳಗಿನ ಪ್ರತೀ ವ್ಯಕ್ತಿಯೂ ಮಗು. ಮಗುವಿನ ಪಾಲನೆ ಹಾಗೂ ಪೋಷಣೆ
ತಂದೆ ತಾಯಿಯರ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ. ದೇಶವು ಮಗುವಿನ ಹಕ್ಕುಗಳನ್ನು
ಗೌರವಿಸುವುದಲ್ಲದೆ ಸಂರಕ್ಷಿಸಲೇ ಬೇಕು.
ಘನತೆ ಮತ್ತು ಅಭಿವ್ಯಕ್ತಿ
- ನನ್ನ ಹಕ್ಕುಗಳ ಬಗ್ಗೆ ತಿಳಿಯಲು ನನಗೆ ಹಕ್ಕಿದೆ (ಅಧಿನಿಯಮ 42)
- ನಾನು ಯಾರಾದರಾಗಿರಲಿ, ಎಲ್ಲೇ ಜೀವಿಸುತ್ತಲಿರಲಿ, ನನ್ನ ತಂದೆ ತಾಯಿ ಯಾರೇ ಆಗಲಿ, ನಾನು ಯಾವುದೇ ಭಾಷೆಯವನಾಗಿರಲಿ, ನಾನು ಯಾವ ಧರ್ಮಕ್ಕಾದರೂ ಸೇರಿದವನಾಗಿರಲೀ, ನಾ ಒಬ್ಬ ಹುಡುಗನಾಗಲೀ, ಹುಡುಗಿಯಾಗಲೀ, ಯಾವುದೇ ಸಂಸ್ಕೃತಿಗೆ ಸೇರಿರಲಿ, ನಾನು ವಿಕಲಚೇತನನಾಗಿರಲೀ, ನಾನು ಶ್ರೀಮಂತನಾಗಲೀ, ಬಡವನಾಗಲೀ, ಮಗುವಾಗಿ ನನಗೆ ಹಕ್ಕುಗಳಿವೆ.
- ಯಾವುದೇ ಕಾರಣದಿಂದಲೂ ನನ್ನನ್ನು ಅನುಚಿತವಾಗಿ ನಡೆಸಿಕೊಳ್ಳಬಾರದು. ಎಲ್ಲರಿಗೂ ಇದನ್ನು ತಿಳಿದಿರುವ ಜವಾಬ್ದಾರಿ ಇದೆ (ಅಧಿನಿಯಮ 2)
- ನನ್ನ ಅಭಿಪ್ರಾಯವನ್ನು ಮುಕ್ತವಾಗಿ ಹೇಳುವ ಹಕ್ಕು ನನಗಿದೆ ಮತ್ತು ಅದನ್ನು ಗುರುತರವಾಗಿ ತೆಗೆದುಕೊಳ್ಳಬೇಕು ಮತ್ತು ಎಲ್ಲರಿಗೂ ಇತರರು ಹೇಳುವುದನ್ನು ಆಲಿಸುವ ಹೊಣೆಗಾರಿಕೆಯಿದೆ (ಅಧಿನಿಯಮ 12, 13)
- ನನಗೆ ತಪ್ಪು ಮಾಡುವ ಹಕ್ಕು ಇದೆ ಮತ್ತು ನಮ್ಮ ತಪ್ಪಿನಿಂದಾಗಿ ನಾವು ಕಲಿಯುತ್ತೇವೆ ಎಂದು ಒಪ್ಪಿಕೊಳ್ಳುವ ಹೊಣೆಗಾರಿಕೆ ಎಲ್ಲರಿಗೂ ಇದೆ.
- ನನ್ನ ಸಾಮರ್ಥ್ಯಗಳೇನೇ ಇದ್ದರೂ, ನಾನು ಎಲ್ಲರೊಂದಿಗೆ ಸೇರಿಕೊಳ್ಳುವ ಹಕ್ಕು ನನಗಿದೆ ಮತ್ತು ಇತರರನ್ನು ಅವರ ಭಿನ್ನತೆಗಾಗಿ ಗೌರವಿಸಬೇಕೆಂಬ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ.
- ನನಗೆ ಉತ್ತಮ ಶಿಕ್ಷಣದ ಹಕ್ಕು ಇದೆ ಮತ್ತು ಎಲ್ಲ ಮಕ್ಕಳೂ ಶಾಲೆಗೆ ಹೋಗಬೇಕೆಂದು ಪ್ರೋತ್ಸಾಹಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 23, 28, 29)
- ನನಗೆ ಉತ್ತಮ ಆರೋಗ್ಯ, ಆರೈಕೆಗೆ ಹಕ್ಕು ಇದೆ ಮತ್ತು ಇತರರ ಉತ್ತಮ ಆರೋಗ್ಯ ಆರೈಕೆ ಮತ್ತು ಸುರಕ್ಷಿತ ನೀರು ಪಡೆಯಲು ಸಹಾಯ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 24)
- ನನಗೆ ಉತ್ತಮ ಆಹಾರದ ಹಕ್ಕು ಇದೆ ಮತ್ತು ಜನರು ಉಪವಾಸವಿರುವುದನ್ನು ನಿವಾರಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 24)
- ನನಗೆ ಉತ್ತಮ ಪರಿಸರದ ಹಕ್ಕು ಇದೆ ಮತ್ತು ಅದನ್ನು ಮಲಿನಗೊಳಿಸದೇ ಇರುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 29)
- ನನಗೆ ಆಟವಾಡುವ ಮತ್ತು ವಿಶ್ರಮಿಸುವ ಹಕ್ಕು ಇದೆ (ಅಧಿನಿಯಮ 31)
- ಪೋಷಣೆ ಹಾಗೂ ಸಂರಕ್ಷಣೆ
- ನನಗೆ ಪ್ರೀತಿಸಲ್ಪಡುವ ಹಕ್ಕು ಇದೆ ಮತ್ತು ಅಪಾಯ ಹಾಗೂ ದುರುಪಯೋಗದಿಂದ ರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ಪ್ರತಿಯೊಬ್ಬರಿಗೂ ಇತರರನ್ನು ಪ್ರೀತಿಸುವ ಮತ್ತು ಆದರಿಸುವ ಹೊಣೆಗಾರಿಕೆ ಇದೆ (ಅಧಿನಿಯಮ 19)
- ನನಗೆ ಒಂದು ಕುಟುಂಬದ ಮತ್ತು ಸುರಕ್ಷಿತ, ಅನುಕೂಲವಾದ ಮನೆ ಹೊಂದುವ ಹಕ್ಕು ಇದೆ ಮತ್ತು ಎಲ್ಲ ಮಕ್ಕಳೂ ಒಂದು ಕುಟುಂಬ ಹಾಗೂ ಮನೆ ಹೊಂದಿರುವುದನ್ನು ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 9, 27)
- ನನ್ನ ಪರಂಪರೆ ಮತ್ತು ನಂಬಿಕೆಗಳ ಪ್ರತಿ ನಾನು ಹೆಮ್ಮೆ ಪಡುವ ಹಕ್ಕು ನನಗಿದೆ ಮತ್ತು ಇತರರ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಗೌರವಿಸುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ (ಅಧಿನಿಯಮ 29, 30)
- ನಾನು ಹಿಂಸೆ ಮತ್ತು ದಂಡನೆ (ವಾಕ್, ದೈಹಿಕ ಮತ್ತು ಭಾವನಾತ್ಮಕ) ರಹಿತ ಜೀವನ ನಡೆಸುವ ಹಕ್ಕು ಹೊಂದಿದ್ದೇನೆ ಮತ್ತು ಇತರರನ್ನು ಹಿಂಸಿಸದೇ ಇರುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 2, 28, 37, 39)
- ನನಗೆ ಆರ್ಥಿಕ ಹಾಗೂ ಲೈಂಗಿಕ ಶೋಷಣೆಯಿಂದ ಸಂರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ಯಾವುದೇ ಮಗು ದುಡಿಯಲು ಬಲಾತ್ಕರಿಸದೇ ಮುಕ್ತವಾದ ರಕ್ಷಿತ ಪರಿಸರ ಹೊಂದಲು ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ. (ಅಧಿನಿಯಮ 32, 34)
- ನನಗೆ ಎಲ್ಲ ರೀತಿಯ ಶೋಷಣೆಗಳಿಂದ ಸಂರಕ್ಷಿಸಲ್ಪಡುವ ಹಕ್ಕು ಇದೆ ಮತ್ತು ನನ್ನನ್ನು ಹೇಗೆ ಬೇಕಾದರೂ ಉಪಯೋಗಿಸಕೊಳ್ಳದಂತೆ ಖಾತ್ರಿ ಪಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರಿಗೂ ಇದೆ
- ಮಕ್ಕಳನ್ನು ಕುರಿತಾಗಿ ತೆಗೆದುಕೊಳ್ಳುವ ಎಲ್ಲ ಕ್ರಮಗಳಲ್ಲಿಯೂ ಮಕ್ಕಳ ಅನುಕೂಲವೇ ಪ್ರಾಥಮಿಕವಾಗಿ ಪರಿಗಣಿಸಲ್ಪಡಬೇಕು.
- ಮಕ್ಕಳ ಹಕ್ಕುಗಳ ಮೇಲಿನ ಸಂಯುಕ್ತರಾಷ್ಟ್ರಗಳ ಸಮ್ಮೇಳನ 1989 ರಲ್ಲಿ ಈ ಎಲ್ಲ ಹಕ್ಕು ಮತ್ತು ಹೊಣೆಗಾರಿಕೆಗಳುಉಲ್ಲೇಖಿಸಲ್ಪಟ್ಟಿವೆ.
- ಪ್ರಪಂಚದೆಲ್ಲೆಡೆ ಮಕ್ಕಳು ಹೊಂದಿರುವ ಎಲ್ಲ ಹಕ್ಕುಗಳನ್ನೂ ಇದು ಹೊಂದಿದೆ. ಭಾರತ ಸರ್ಕಾರವು 1992 ರಲ್ಲಿ ಈ ದಾಖಲೆಗೆ ಸಹಿಹಾಕಿತು.
***********ಮಾಹಿತಿ ಕೃಪೆ: ವಿಕಾಸ್‌ಪೀಡಿಯಾ***********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ