ಬಾಲ್ಯ ವಿವಾಹ ನಿಷೇಧ ಕಾಯ್ದೆ
ಓದಲು ಈ ಕೆಳಗಿನ ಅಂಶಗಳನ್ನು ಆರಿಸಿ ....
ಒಬ್ಬ ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿಯಾಗಿ ಬೆಳೆಯುವ ಹಕ್ಕು ಇದೆ. ಬಾಲ್ಯ ವಿವಾಹ ಈ ಎಲ್ಲಾ ಹಕ್ಕುಗಳನ್ನು ಅಸಹನೀಯವಾಗಿ ಉಲ್ಲಂಘಿಸುತ್ತದೆ.
ದೈಹಿಕ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು:-
ಮಕ್ಕಳನ್ನು ಮದುವೆಯಾಗುವ ಯಾವುದೇ ವಯಸ್ಕ ವ್ಯಕ್ತಿ.
ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ, ನೆರವೇರಿಸುವ ಮತ್ತು ಕುಮ್ಮಕ್ಕು ನೀಡುವ ಯಾವುದೇ ವ್ಯಕ್ತಿ/ಸಂಸ್ಥೆ.
ಮಗುವನ್ನು ಹೆತ್ತವರು/ಪೋಷಕರು/ಸಂರಕ್ಷಕರು.
ಮಗುವಿನ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ/ಸಂಸ್ಥೆಯ ನಿರ್ಲಕ್ಷ್ಯತೆಯಿಂದ ಬಾಲ್ಯ ವಿವಾಹವನ್ನು ತಡೆಯಲು ವಿಫಲರಾದವರು
ಬಾಲ್ಯ ವಿವಾಹದಲ್ಲಿ ಭಾಗವಹಿಸುವವರು/ಭಾಗವಹಿಸಿದವರು/ ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು.
ಓದಲು ಈ ಕೆಳಗಿನ ಅಂಶಗಳನ್ನು ಆರಿಸಿ ....
- ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು
- ಮಾನಸಿಕ ದುಷ್ಪರಿಣಾಮಗಳು
- ಬಾಲ್ಯ ವಿವಾಹದಲ್ಲಿ ಈ ಕೆಳಗಿನವರು ತಪ್ಪಿತಸ್ಥರಾಗಿರುತ್ತಾರೆ
- ಬಾಲ್ಯ ವಿವಾಹ ಅನೂರ್ಜಿತ/ಅಸಿಂಧು/ಶೂನ್ಯವಾಗುವ ಸಂದರ್ಭಗಳು
- ಬಾಲ್ಯ ವಿವಾಹದಲ್ಲಿ ಹೆಣ್ಣು ಮಗುವಿಗಿರುವ ಅವಕಾಶಗಳು
- ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ಇರುವ ಅವಕಾಶಗಳು
- ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು
- ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಪಾತ್ರ
ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು
ಮಕ್ಕಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಎಲ್ಲಾ ಮಕ್ಕಳಿಗೆ ಆರೈಕೆ ಮತ್ತು ಸುರಕ್ಷೆ:-ಒಬ್ಬ ಪರಿಪೂರ್ಣ ಹಾಗೂ ಸಮಗ್ರ ವ್ಯಕ್ತಿಯಾಗಿ ಬೆಳೆಯುವ ಹಕ್ಕು ಇದೆ. ಬಾಲ್ಯ ವಿವಾಹ ಈ ಎಲ್ಲಾ ಹಕ್ಕುಗಳನ್ನು ಅಸಹನೀಯವಾಗಿ ಉಲ್ಲಂಘಿಸುತ್ತದೆ.
ದೈಹಿಕ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು:-
- ವಯಸ್ಸಿಗೆ ಮೀರಿದ ಜವಾಬ್ದಾರಿ ಹೇರಿಸಿದಂತಾಗುತ್ತದೆ.
- ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ.
- ವಿಕಲಾಂಗ ಮಕ್ಕಳ ಜನನವುಂಟಾಗುತ್ತದೆ.
- ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ.
- ಲೈಂಗಿಕ ಖಾಯಿಲೆಗಳಿಂದ ಹೆಚ್.ಐ,ವಿ./ಏಡ್ಸ್ ಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.
- ರಕ್ತ ಹೀನತೆ ಉಂಟಾಗುತ್ತದೆ ಹಾಗೂ ಕಡಿಮೆ ತೂಕದ ಮಗುವಿನ ಜನನದ ಸಾಧ್ಯತೆ ಇರುತ್ತದೆ.
- ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತದೆ.
- ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ.
- ಗರ್ಭಪಾತ ಹೆಚ್ಚಾಗುತ್ತದೆ.
- . ಗರ್ಭ ಚೀಲಕ್ಕೆ ಪೆಟ್ಟು ಬೀಳುತ್ತದೆ.
- ಬಾಲ್ಯ ವಿವಾಹಕ್ಕೆ ಒಳಗಾದ ಮಕ್ಕಳು ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ.
- ಖಿನ್ನತೆ ಕಂಡು ಬರುತ್ತದೆ.
- ಭಯಭೀತ ವಾತಾವರಣ ಕಲ್ಪಸಿದಂತಾಗುತ್ತದೆ.
- ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವುದು.
ಮಾನಸಿಕ ದುಷ್ಪರಿಣಾಮಗಳು
- ಈ ಕಾಯ್ದೆಯು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೇರಿ ಹೊರತು ಪಡಿಸಿ ಭಾರತದ ಎಲ್ಲಾ ನಾಗರೀಕರಿಗೆ ಅನ್ವಯಿಸುತ್ತದೆ.
- ಈ ಕಾಯ್ದೆಯಡಿ ಬಾಲ್ಯ ವಿವಾಹವು ಜಾಮೀನು ರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿರುತ್ತದೆ.
ಬಾಲ್ಯ ವಿವಾಹದಲ್ಲಿ ಈ ಕೆಳಗಿನವರು ತಪ್ಪಿತಸ್ಥರಾಗಿರುತ್ತಾರೆ
- ಬಾಲ್ಯ ವಿವಾಹ ಅಪರಾಧಕ್ಕೆ ನಿಗದಿಪಡಿಸಿದ ಶಿಕ್ಷೆ:-
- ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ 1 ಲಕ್ಷ ರೂ. ವರೆಗೆ ದಂಡ ಅಥವಾ ಎರಡೂ
- ಅಪರಾಧಿ ಮಹಿಳೆಯಾದಲ್ಲಿ ಜೈಲು ಶಿಕ್ಷೆ ವಿಧಿಸುವಂತಿಲ್ಲ
ಬಾಲ್ಯ ವಿವಾಹ ಅನೂರ್ಜಿತ/ಅಸಿಂಧು/ಶೂನ್ಯವಾಗುವ ಸಂದರ್ಭಗಳು
ಬಾಲ್ಯ ವಿವಾಹದಲ್ಲಿ ಹೆಣ್ಣು ಮಗುವಿಗಿರುವ ಅವಕಾಶಗಳು
ಬಾಲ್ಯ ವಿವಾಹದಿಂದ ಜನಿಸಿದ ಮಕ್ಕಳಿಗೆ ಇರುವ ಅವಕಾಶಗಳು
ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು
ಈ ಅಧಿನಿಯಮದ ಸೆಕ್ಷನ್ -16(1) ರನ್ವಯ ನೇಮಕವಾದ ಅಧಿಕಾರಿಗಳು:-
ರಾಜ್ಯ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
- ನಿರ್ದೇಶಕರು, ಯೋಜನಾ ನಿರ್ದೇಶಕರು, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
- ಡೈರಕ್ಟರ್ ಜನರಲ್ ಆಫ್ ಪೋಲೀಸ್, ಇನ್ ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್.
- ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.
- ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ.
- ನಿರ್ದೇಶಕರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ.
- ಆಯುಕ್ತರು, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
- ಆಯುಕ್ತರು, ಕಾರ್ಮಿಕ ಇಲಾಖೆ.
- ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ.
- ನಿರ್ದೇಶಕರು, ಟ್ರೈಬಲ್ ವೆಲ್ ಫೇರ್ ಡಿಪಾರ್ಟಮೆಂಟ್.
- ಜಿಲ್ಲಾಧಿಕಾರಿಗಳು.
- ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು.
- ಹಿರಿಯ ಮಕ್ಕಳ ಅಭಿವೃದ್ಧಿ ಅಧಿಕಾರಿ, ಸ್ಪೆಷಲ್ ಜುವೆನೈಲ್ ಪೋಲೀಸ್ ಯೂನಿಟ್, ಪೋಲೀಸ್ ಇಲಾಖೆ.
- ಉಪ ನಿರ್ದೇಶಕರು, ನಿರೂಪಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
- ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.
- ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ.
- ಜಿಲ್ಲಾ ಅಧಿಕಾರಿ, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
- ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ.
- ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ.
- ಪ್ರಾಜೆಕ್ಟ್ ಡೆವಲಪ್ ಮೆಂಟ್ ಆಫೀಸರ್ ಟ್ರೈಬಲ್ ವೆಲ್ ಫೇರ್ ಡಿಪಾರ್ಟ ಮೆಂಟ್.
- ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ, ಐಸಿಪಿಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
- ತಹಶಿಲ್ದಾರರು.
- ಕಾರ್ಮಿಕಾಧಿಕಾರಿಗಳು, ಕಾರ್ಮಿಕ ಇಲಾಖೆ
- ಕ್ಷೇತ್ರ ಶಿಕ್ಷಣಾಧಿಕಾರಿಗಳು
- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಂರಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.
- ತಾಲ್ಲೂಕು ವೈದ್ಯಾಧಿಕಾರಿ, ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ.
- ಸರ್ಕಲ್ ಇನ್ ಸ್ಪೆಕ್ಟರ್, ಪೋಲೀಸ್ ಇಲಾಖೆ.
- ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ.
- ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ,
- ವಿಸ್ತರಣಾಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದ್ದಿ ಇಲಾಖೆ.
- ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಪೋಲೀಸ್ ಸಬ್ ಇನ್ ಸ್ಪೆಕ್ಟರ್.
ಗ್ರಾಮ ಪಂಚಾಯಿತಿ ಮಟ್ಟದ/ನಗರ ಸಭೆ/ಪುರ ಸಭೆ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು:-
- ಶಾಲಾ ಮುಖ್ಯೋಪಾಧ್ಯಾಯರು, ಕಂದಾಯ ನಿರೀಕ್ಷಕರು(ರೆವೆನ್ಯೂ ಇನ್ ಸ್ಪೆಕ್ಟರ್), ಹೆಲ್ತ್ ಇನ್ ಸ್ಪೆಕ್ಟರ್, ಕಾರ್ಮಿಕಾಧಿಕಾರಿ, ಗ್ರಾಮ ಲೆಕ್ಕಿಗರ, ಕಂದಾಯಾಧಿಕಾರಿಗಳು.
ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ಪಾತ್ರ
- ವರದಿಯಲ್ಲಿ ಮಾಡಲಾಗಿರುವ ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ:ಮಮಇ 501 ಎಸ್ ಜೆಡಿ 2011 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಲ್ಲಿ 1 ಉಪ ನಿರ್ದೇಶಕರು, 1 ಸಹಾಯಕ ನಿರ್ದೇಶಕರು, 02 ಪ್ರಥಮ ದರ್ಜೆ ಸಹಾಯಕರು, 02 ಗಣಕ ಯಂತ್ರ ಸಹಾಯಕರು ಮತ್ತು 1 ಸೇವಕರನ್ನೊಳಗೊಂಡಂತೆ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ.
- ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅನುಷ್ಠಾನಕ್ಕಾಗಿ 2012-13ನೇ ಸಾಲಿನಲ್ಲಿ ರೂ.150.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರೂ.110.62 ಲಕ್ಷಗಳನ್ನು ಇದುವರೆಗೆ ವಿವಿಧ ಕಾರ್ಯಕ್ರಮಗಳಿಗಾಗಿ ವೆಚ್ಚ ಮಾಡಲಾಗಿದೆ.
- ಬಾಲ್ಯ ವಿವಾಹ ನಿಷೇಧ ಕುರಿತಂತೆ ಆಕಾಶವಾಣಿಯಲ್ಲಿ "ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ" ಎಂಬ ಸರಣಿ ಕಾರ್ಯಕ್ರಮವನ್ನು ಪ್ರತಿ ಶುಕ್ರವಾರ ಬೆಳಿಗ್ಗೆ 7-15 ನಿಮಿಷದಿಂದ 7-30 ರವರೆಗೆ ಹಾಗೂ ಎಫ್.ಎಂ.ರೈನ್ ಬೋದಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 8-45 ರಿಂದ 9-00 ರವರೆಗೆ ಪ್ರಸಾರ ಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ರೂ.10,80,517/- ಗಳನ್ನು ಬಿಡುಗಡೆ ಮಾಡಲಾಗಿದೆ.
- ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿರುವ ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ ಕಾರ್ಯಕ್ರಮದಲ್ಲಿ ಪ್ರತಿವಾರ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶೋತೃಗಳಿಗೆ ರೂ.500/- ರಂತೆ ಬಹುಮಾನ ನೀಡಲಾಗುತ್ತಿದೆ.
- 01-04-2012 ರಿಂದ 31-03-2013 ರವರೆಗೆ 147 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ.
- 17 ಜಿಲ್ಲೆಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಬೀದಿ ನಾಟಕ, ಕಲಾ ಜಾಥಾ ಮತ್ತು ಸೈಕಲ್ ಜಾಥಾಗಳ ಮೂಲಕ ಹಮ್ಮಿಕೊಂಡು ಯಶಸ್ವಿಯಾಗಿ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ರೂ.7,14,000/- ಗಳನ್ನು ಬಿಡುಗಡೆ ಮಾಡಲಾಗಿದೆ.
- ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳು ಮತ್ತು ಶಿಕ್ಷೆಗಳು ಕುರಿತು ಗೋಡೆ ಬರಹಗಳನ್ನು ರಾಜ್ಯಾದ್ಯಂತ ಬರೆಯಿಸಲಾಗಿದೆ. ಅನುದಾನ ರೂ.10,75,000/- ಬಿಡುಗಡೆ ಮಾಡಲಾಗಿದೆ.
- ಕೋರ್ ಕಮಿಟಿಯ ವರದಿಯನ್ನು ಕನ್ನಡದಲ್ಲಿ ಭಾಷಾಂತರಿಸಲು ರೂ. 1,15,000/- ವೆಚ್ಚ ಮಾಡಲಾಗಿದೆ. 10,000 ಪ್ರತಿಗಳನ್ನು ಮುದ್ರಿಸಲಾಗಿದೆ. ರೂ. 7,94,885/- ಗಳನ್ನು ವೆಚ್ಚ ಮಾಡಲಾಗಿದೆ.
- ಶಾಲಾ/ಕಾಲೇಜುಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಲು ಪ್ರೌಢಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ರೂ.17,04,900/- ಬಿಡುಗಡೆ ಮಾಡಲಾಗಿದೆ.
- ಬಾಲ್ಯ ವಿವಾಹ ನಿಷೇಧ ಕುರಿತು ಬ್ರೋಷರ್ಗಳು, ಏಫ್ಎಕ್ಯೂಗಳನ್ನು ಮುದ್ರಿಸಿ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.
- ಬಾಲ್ಯ ವಿವಾಹ ನಿಷೇಧ ಕುರಿತು ಸ್ಟಿಕ್ಕರ್ ಗಳ ಮುದ್ರಣಕ್ಕಾಗಿ ರೂ.30,29,920/-ಗಳನ್ನು ಬಿಡುಗಡೆ ಮಾಡಲಾಗಿದೆ.
- 30 ಜಿಲ್ಲೆಗಳ ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ.
- ಯೂನಿಸೆಫ್ ವತಿಯಿಂದ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಲು 5 ಬಗೆಯ ಪೋಸ್ಟರ್ ಗಳನ್ನು ಮುದ್ರಸಿ, ಜಿಲ್ಲೆಗಳಿಗೆ ವಿತರಿಸಲಾಗಿದೆ.
- ಜಿಲ್ಲೆಗಳ ತಾಲ್ಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ತರಬೇತಿಗಳನ್ನು ನಡೆಸಲು ರೂ.2.69 ಲಕ್ಷ ವೆಚ್ಚ ಮಾಡಲಾಗಿದೆ. ಉಳಿದ ಜಿಲ್ಲೆಗಳಿಗೆ ತರಬೇತಿ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.
- ಬಾಲ್ಯ ವಿವಾಹ ನಿಷೇಧ ಕುರಿತು ಕಮಲಿ ಎಂಬ ಸಾಕ್ಷ್ಯಚಿತ್ರ ತಯಾರಿಸಿದ್ದು, ಇದಕ್ಕಾಗಿ ರೂ.1.50 ಲಕ್ಷ ವೆಚ್ಚ ಮಾಡಲಾಗಿದೆ.
- ರಾಜ್ಯದ ವಾರ್ತಾ ಇಲಾಖೆಯ ವಿವಿಧ ಸ್ಥಳಗಳಲ್ಲಿ 300 ಫಲಕಗಳಲ್ಲಿ (ಹೋರ್ಡಿಂಗ್ಸ್) ಬಾಲ್ಯವಿವಾಹದ ವಿರುದ್ಧ ಜಾಹೀರಾತು ಪ್ರದರ್ಶಿಸಲಾಗಿದೆ. ಇದಕ್ಕಾಗಿ ರೂ.21,15,000/- ವೆಚ್ಚ ಮಾಡಲಾಗಿದೆ.
******* ಮಾಹಿತಿ ಕೃಪೆ : ವಿಕಾಸ್ಪೀಡಿಯಾ **********
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ