ಪುಟಗಳು

13 ಸೆಪ್ಟೆಂಬರ್ 2019

ಏನು ಇಲ್ಲ!


ಬೆತ್ತಲೆ ಜನಗಳ
ಕತ್ತಲೆ ಲೋಕದಿ
ಮನ್ನಣೆ ಎಂಬುದೇ ಇಲ್ಲ

ಹೊಗಳಿಕೆ ಎಂಬ
ನರ್ತನವಿಲ್ಲಿ ಜಗವ
ಕಾಣುವ ಮನಗಳೆ ಇಲ್ಲ

ಶಿಕ್ಷಕರುಂಟುಶಿಷ್ಯರೇ ಇಲ್ಲ
ಶಿಕ್ಷಣವೆಂಬ ಗುರಿಯುಂಟು
ಶಿಕ್ಷ ಶಿಕ್ಷಣವಿಲ್ಲ

ಮೂಡರು ಎಂಬ
ಮೂಡರ ಊರೋಳು
ಮೂರ್ಖರೇ ಕಂಡಿಹರಲ್ಲ

ಕಷ್ಟದಿ ದುಡಿಯುವ
ಕೈಗಳು ಕಮ್ಮಿ
ಹೋಲಿಕೆಯ ಬಾಯ್ಗಳೇಯಲ್ಲ

ಸಂಬಂಧವೆಂಬ ಬಂಧನದಲ್ಲಿ
ತೊರ್ಪಡೆಯುಂಟು
ಬಂಧದ ಮೌಲ್ಯವೇ ತಿಳಿದಿಲ್ಲ

ಇಲ್ಲ ! ಇಲ್ಲ ! ಇಲ್ಲ!
ಜಗದಲಿ ಎಲ್ಲವು ಇದ್ದು
ಬೆಸುಗೆಯ ಸಾಧನ ವಿಲ್ಲ

--ಲಕ್ಷ್ಮೀಶ ಡಿ ಜಿ
  ಸಹ ಶಿಕ್ಷಕ 
  ಜೈನಬಿಯಾ ಶಾಲೆ 
  ಹೊಳವನಹಳ್ಳಿ 
  ಕೊರಟಗೆರೆ ತಾಲ್ಲೂಕು 
  ಮಧುಗಿರಿ ಶೈಕ್ಷಣಿಕ ಜಿಲ್ಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ