ಪುಟಗಳು

13 ಸೆಪ್ಟೆಂಬರ್ 2019

"ಬಡ ಮಗು ತಂದೆಗೆ ಹೇಳುವ ಸನ್ನಿವೇಶ "

ಬಿಗು ಅಪ್ಪುಗೆಯ ನಿನ್ನ ಬಡತನದಲ್ಲಿ ಜೊತೆಯಾಗುವ ಎನ್ನಾ
 ಬಿಡದಿರು ನನ್ನ, ಬಿಡಿಸುವೆ ನಿನ್ನ ಬಡತನವನ್ನ.
ನಿಮ್ಮ ಮಡಿಲಲ್ಲಿ ಜನಿಸಿದೆನು ಕೇಳಾರಿಯದೆ ನಿನ್ನ
 ಹೆಣ್ಣು ಮಗು ಆದರೆ ಬಿಸಾಡದಿರಲಿ ಈ ನಿನ್ನ ಮನ.
 ನಿಮ್ಮಾಸಿವಿನ ಕಣ್ಣೀರಲಿ ನೆನೆಸಿ ಮೊಳಕೆ ಕಟ್ಟಿದ ಕನಸು ನಾ
ಚೆಂದದಿ ಚಿಗುರೊಡೆದು ಬೆಳೆದು ನಿಂತು ನಿಮ್ಮ್ ಆಸೆಗಳನ್ನ್ ನನಸಾಗಿಸುವೆ ನಾ
ಬಿಗು ಅಪ್ಪುಗೆಯ ನಿನ್ನ ಬಡತನದಲ್ಲಿ ಜೊತೆಯಾಗುವ ಎನ್ನಾ
 ಬಿಡದಿರು ನನ್ನ, ಬಿಡಿಸುವೆ ನಿನ್ನ ಬಡತನವನ್ನ.
 
ಬಿಗು ಅಪ್ಪುಗೆಯ ನಿನ್ನ ಬಡತನದಲ್ಲಿ ಜೊತೆಯಾಗುವ ಎನ್ನಾ
 ಬಿಡದಿರು ನನ್ನ, ಬಿಡಿಸುವೆ ನಿನ್ನ ಬಡತನವನ್ನ.
ಬೆತ್ತಲೆ ಬೆನ್ನಲ್ಲಿ ಕಾಡಿದ ವರುಷದ ವಸ್ತ್ರ
ನಾ ಕಾಡೆನು ನಿನ್ನ ಬೆಡೆನು, ನಿನ್ನ ನೂರ್ದಾಂಗಿಯ ಕಂಡು ಕಣ್ಣ
ನಟಿಸಲಾಗದ ಬೆವರ ಹನಿ ಅಪ್ಪನ ಈ ನೋವಿನ ಧ್ವನಿ
ನಾ ತೀರಿಸುವ ನಿನ್ನ ಋಣವ, ಮರೆಯದಿರು ಬಡತನದ ಗುಣವಾ......
ಬಿಗು ಅಪ್ಪುಗೆಯ ನಿನ್ನ ಬಡತನದಲ್ಲಿ ಜೊತೆಯಾಗುವ ಎನ್ನಾ
 ಬಿಡದಿರು ನನ್ನ, ಬಿಡಿಸುವೆ ನಿನ್ನ ಬಡತನವನ್ನ
 
ಬಿಗು ಅಪ್ಪುಗೆಯ ನಿನ್ನ ಬಡತನದಲ್ಲಿ ಜೊತೆಯಾಗುವ ಎನ್ನಾ
 ಬಿಡದಿರು ನನ್ನ, ಬಿಡಿಸುವೆ ನಿನ್ನ ಬಡತನವನ್ನ
ನಿನ್ನ ಶ್ರಮ ಸ್ರವಿಕೆಯಲಿ ಉಪಚರಿಸುವೆ ಎನ್ನಾ
ನನ್ನ ಭರವಸೆಯಲಿ ವಿಸ್ತರಿಸುವೆ ನಿನ್ನ ಆಯಸ್ಸನ್ನ
ಹೇಳದಿರು ನನ್ನ ಚಿಗುರುತನದಲಿ ಬೆಳೆಸಲಾಗದು ಎಂದು
ನಾ ಹೆಮ್ಮರವಾಗಿ ನಿನ್ನ ಬಡತನವನ್ನು ಬಗಿಯುವೆ ಅಂದು
ಬಿಗು ಅಪ್ಪುಗೆಯ ನಿನ್ನ ಬಡತನದಲ್ಲಿ ಜೊತೆಯಾಗುವ ಎನ್ನಾ
 ಬಿಡದಿರು ನನ್ನ, ಬಿಡಿಸುವೆ ನಿನ್ನ ಬಡತನವನ್ನ.
          -ಮಂಜುನಾಥ ಬಿ ಎಸ್
                         ದೊಡ್ಡಬಳ್ಳಾಪುರ

 @@@@@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ