ಪುಟಗಳು

13 ಸೆಪ್ಟೆಂಬರ್ 2019

ಮಮತೆಯ ಚಿಲುಮೆ ನನ್ನಮ್ಮ


ಕಾಮಧೇನು ಕಲ್ಪವೃಕ್ಷ ನನ್ನಮ್ಮ
ಜನ್ಮನೀಡಿದಳು ನನಗೆ ನನ್ನಮ್ಮ
ನೀಡಿದಳು ತನ್ನ ಎದೆಯಾಲು ನನ್ನಮ್ಮ
ಮಮತೆಯ ತ್ಯಾಗ ಮೂರ್ತಿಯಾದಳು ನನ್ನಮ್ಮ

ಮಗನ ತೊದಲು ನುಡಿ ಕೇಳಿ ನಲಿದಳು ನನ್ನಮ್ಮ ಮಗನು ಅಂಬೇಗಾಲನ್ನು ಇಡುವುದನು ಕಂಡು ಕುಣಿದಳು ನನ್ನಮ್ಮ
ಮಗನು ಅತ್ತಾಗ ನೊಂದಳು ನನ್ನಮ್ಮ
ಮಮತೆಯ ಆಗರವಾದಳು ನನ್ನಮ್ಮ

ಮಗನ ಹೇಳ್ಗೆಗೆ ಹರಕೆಯ ಹೊತ್ತಳು ನನ್ನಮ್ಮ ಮಗನಿಗಾಗಿ ಚಂದದ ಜೋಡಿ ನೀಡಿದಳು ನನ್ನಮ್ಮ ಮಗನ ಮಗನ ಎತ್ತಿ ಆಡಿಸಿದಳು ನನ್ನಮ್ಮ
ಮಮತೆಯ ಅವನಿ ಧನ್ಯಳಾದಳು ನನ್ನಮ್ಮ

ಋಣಭಾರ ಹೊರಿಸಿದಳು ಎನ್ನ ಮೇಲೆ ನನ್ನಮ್ಮ ತೀರಿಸಲಾಗದು ಜನುಮ ಜನುಮ ಕಳೆದರು ನನ್ನಮ್ಮ ಪಾದ ಕಮಲಗಳ ಸೇವೆಯ ನೀಡಿದಳು ನನ್ನಮ್ಮ ಮಮತೆಯ ಚಿಲುಮೆಯಾದಳು ನನ್ನಮ್ಮ


-ಲಕ್ಷ್ಮೀಶ ಡಿ ಜಿ., ಸಹ ಶಿಕ್ಷಕ
ಜೈನಬಿಯಾ ಶಾಲೆ
ಹೊಳವನಹಳ್ಳಿ
ಕೊರಟಗೆರೆ ತಾಲ್ಲೂಕು
ಮಧುಗಿರಿ ಶೈಕ್ಷಣಿಕ ಜಿಲ್ಲೆ 
*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ