ಪುಟಗಳು

13 ಸೆಪ್ಟೆಂಬರ್ 2019

ಕರೆ ಬಂದಿದೆ


ಗಡಿಯಾಚೆಯ ರಣಭೂಮಿಗೆ
ಕರೆ ಬಂದಿದೆ ನನಗೆ
ತಡೆ ತಡೆದು ಹರಿದು ಬರುವ ಕಣ್ಣೀರಿನ
ತೊರೆ ಬಂದಿದೆ ನನಗ
          ಕಣ್ಣೀರು ಹಾಕದಿರು ತಾಯಿ ತೊರೆದು ಹೋಗುವೆ ಎಂದು
          ಮತ್ತೆ ಹುಟ್ಟಿ ಬರುವೆ ನಿನ್ನ ಮಡಿಲಿಗೆಂದು
          ಬಿಕ್ಕುತ್ತ ತಂಗೆಮ್ಮ ಏಕಮ್ಮ ಅಳುವೆ
          ನೀ ಕಟ್ಟಿದ ರಾಖಿಯ ಬಣ್ಣವ ತೊಳೆವೆ
ಧೈರ್ಯ ತಾಳಬೇಕು ತಂಗಿ ನೀನು ಎಂದೆಂದೂ
ತಮ್ಮನಿಲ್ಲವೆಂಬ ಕೊರಗು ನನಗೆ ಬರದಂತೆ
ಬರದೇ ಹೋದರೆ ಮರಳಿ ನಾನು ನೋಡಿಕೊಳ್ಳಬೇಕು ನೀನು
ಅಪ್ಪ ಅಮ್ಮನನ್ನು ಒಬ್ಬ ಗಂಡು ಮಗನಂತೆ
          ಗಡಿಯಾಚೆಯ ಆತಂಕದ ಕೊಳಕನ್ನು ತೊಳೆವೆನು ನಾನು
          ಗಡಿಯೊಳಗಿನ ಕೊಳಕನ್ನು ತೊಳೆವರು ಯಾರು?
          ಈ ಕೊಳಕಿನಲ್ಲೂ ಬದುಕಿ ಬಾಳಿ ತೋರಬೇಕು ನೀನು
          ಹೆಣ್ಣು ಮಗಳಲ್ಲ, ಗಂಡು ಮಗನಿಗೆ ಕಮ್ಮಿಲ್ಲ ಎಂದು ಸಾರಬೇಕು ನೀನು.
ತಂಗಿ ನಿನ್ನ ಬಿಟ್ಟು ಹೋಗಬೇಕಾಗಿದೆ ನನಗೆ
ಹಡೆದವರ ಹೊಣೆಯನ್ನು ಹೊರಬೇಕಾಗಿದೆ ನಿನಗೆ
ಭೂಮಿತಾಯಿ ರಕ್ಷಣೆಗೆ ಕರೆ ಬಂದಿದೆ ನನಗೆ
ತಡೆ ತಡೆದು ಹರಿದು ಬರುವ ಕಣ್ಣೀರಿನ ತೊರೆ ಬಂದಿದೆ ನನಗ.
                  ರಚನೆ:- ದಿನೇಶ ಚವ್ಹಾಣ

                                   Babalad Tq. Akkalkot Dist Solapur

*********







ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ