ಪುಟಗಳು

01 ಸೆಪ್ಟೆಂಬರ್ 2018

ಪ್ರಕಾರಗಳು, ಆಟಗಳು ಇತ್ಯಾದಿ...

  • ಪ್ರಕಾರಗಳು
  • ಆಟಗಳು
  • ಮೇಲಾಟಗಳು
  • ಅಥ್ಲೆಟಿಕ್ಸ್

  • ಪ್ರಕಾರಗಳು

    ದೈಹಿಕ ಶಿಕ್ಷಣ ಅನೇಕ ಪ್ರಕಾರದ ವಿವಿಧ ಸ್ಫರ್ಧಾತ್ಮಕವಾದ ಚಟುವಟಿಕೆಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ. ಅವುಗಳೆಂದರೆ:
    1. ಆಟೋಟಗಳು
    2. ಮನರಂಜನಾ ಆಟಗಳು
    3. ವ್ಯಾಯಾಮಗಳು
    4. ಪದ್ ಕವಾಯಿತ್
    5. ಯೋಗ
    6. ನಾಟ್ಯಗಳು
    7. ಕಸರತ್ತುಗಳು
    8. ಸಾಹಸದ ಕ್ರೀಡೆಗಳು
    9. ಸ್ಲೈಕ್ಲಿಂಗ್
    10. ಒಂಳಾಗಣ ಬೌದ್ಧಿಕ ಆಟಗಳು
    11. ಈಜು
    12. ಜೇಮ್ನಾಸ್ಟಿಕ್ ಕ್ರೀಡೆಗಳು
    13. ಪರ್ವತಾರೋಹಣ
    14. ಸ್ಕೇಟಿಂಗ್
    15. ಬಿಲ್ಲುಗಾರಿಕೆ ಇತ್ಯಾದಿ

    ದೈಹಿಕ ಶಿಕ್ಷಣ ಬೋಧನಾ ವಿಷಯಗಳು ಮತ್ತು ರೂಢಿಗಳನ್ನು ಹೊಂದಿದೆ

    1. ಆರೋಗ್ಯ ಶಿಕ್ಷಣ
    2. ಮೌಲ್ಯ ಶಿಕ್ಷಣ
    3. ಪ್ರಥಮ ಚಿಕಿತ್ಸೆ
    4. ಸುರಕ್ಷತಾ ಶಿಕ್ಷಣ
    5. ಆರೋಗ್ಯ ರೂಢಿಗಳು (ಜೀವನದಲ್ಲಿ ಶಿಸ್ತು)
    6. ಸೇವೆ ಮತ್ತು ಸಂರಕ್ಷಣೆ
    7. ಶರೀರ ರಚನೆ ಮತ್ತು ಚಲನಾಶಾಸ್ತ್ರ
    8. ಯೋಗ ಶಿಕ್ಷಣ
    9. ದೈಹಿಕ ಶಿಕ್ಷಣ (ಕ್ರೀಡೆ)





    ಆಟಗಳು

    ಮನುಷ್ಯನ ಮೂಲ ಪ್ರವೃತ್ತಿಗಳಲ್ಲಿ ಆಟವು ಒಂದು ಆಟಗಳು ವ್ಯಕ್ತಿಗೆ ಸ್ವಾತಂತ್ರ್ಯವನ್ನು ಮತ್ತು ಸಂತೋಷವನ್ನು ನೀಡುತ್ತದೆ. ಎಂ.ಸಿ. ಡಾಗಲ್ ರವರ ಪ್ರಕಾರ ಆಟಗಳು ವ್ಯಕ್ತಿಯ ಬೆಳವಣಿಗೆ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಅತಿ ಮುಖ್ಯ ...ಆಟವು ಮನುಷ್ಯನಲ್ಲಿ ಅಷ್ಟೆಯಲ್ಲದೆ ಇತರ ಪ್ರಾಣಿಗಳಲ್ಲಿಯೂ ಕೂಡ ಕಾಣಿಸುವ ಕ್ರಿಯೆಯಾಗಿದೆ. ಆಟಗಳು ಕೇವಲ ದೇಹದ ಹೊರ ಭಾಗಗಳಿಂದ ಪ್ರಕಟಿಸುವ ಭಾವನೆಗಳಾಗಿರದೆ ಅದು ನಮ್ಮ ಅಂತರಾಳದಲ್ಲಿ ಹೊರಡುವ ಭಾವನೆಯಾಗಿದೆ. ಆಟಗಳೂ ತಕ್ಷಣಾ ಸಂತೋಷವನ್ನು ಕೊಡುವಂತಹ ಚಟುವಟಿಕೆಗಳಾಗಿದೆ. ಆದ್ದರಿಂದ ಮಕ್ಕಳು ಹೆಚ್ಚಾಗಿ ಆಟಗಳಲ್ಲಿ ಭಾಗವಹಿಸುತ್ತಾರೆ. ಹಾಗೂ ಜೀವನ ಕೌಶಲ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆಟಗಳೇ ಮಗುವಿಗೆ ಮೊದಲ ಮೆಟ್ಟಿಲಾಗಿದೆ. ಆಟಗಳು ಎಲ್ಲಾ ವ್ಯಕ್ತಿಗಳ ಮಾನಸಿಕ ಬಿಗಿತನವನ್ನು ಹೋಗಲಾಡಿಸಿ ಸಂತೋಷವನ್ನು ನೀಡುತ್ತದ್ದೆ.
    ಅನೇಕ ಶಿಕ್ಷಣ ತಜ್ಞರುಗಳು ಆಟಗಳು (ದೈಹಿಕ ಶಿಕ್ಷಣ) ಶಿಕ್ಷಣದ ಪ್ರಕ್ರ್ತಿಯೆಯಲ್ಲಿ ಒಂದು ಮಹಾತ್ವದ ಭಾಗ. ಶಿಕ್ಷಣದ ಅವಿಭಾಜ್ಯ ಅಂಗ. ಆದ್ದರಿಂದ ಇದನ್ನು ಕಡ್ಡಾಯ ಶಿಕ್ಷಣವಾಗಿರಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
    ಆಟಗಳು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಪ್ರಬಲರನ್ನಾಗಿಸುವಲ್ಲಿ ಮಹತ್ವದಾಗಿದೆ. ಆಟಗಳು ದೇಹಕ್ಕೆ ಬಳಶಃಟು ವ್ಯಾಯಮವನ್ನು ಕೊಡುತ್ತದೆ. ಅದುದರಿಂದ ಮಾಂಸಖಂಡಗಳು ಮತ್ತು ನರಗಳು ಶಕ್ತಿಯುತವಾಗಿ ಬೆಳೆದು ಒಂದಕ್ಕೊಂದು ಹೊಂದಾಣಿಕೆಯಿಂದ ಕೆಲಸ ಮಾಡುತ್ತದೆ.
    ಆಟಗಳು ವ್ಯಕ್ತಿಗೆ ಸಮಸ್ಯಾತ್ಮಕ ಸನ್ನಿವೇಶಗಳನ್ನು ಒದಗಿಸಿ ಅವಿಗಳ ಪರಿಹಾರಕ್ಕಾಗಿ ಜಾಣತನದ ನಿರ್ಣಯವನ್ನು ಕೈಗೊಳ್ಳುವಂತೆ ಪ್ರಚೋದಿಸಿ, ಬುದ್ಧಿಶಕ್ತಿಯ ಬೆಳೆವಣಿಗೆ ಬಹಳಷ್ಟು ಸಹಾಯಕವಾಗಿದೆ.
    ಉದಾ:ಕಬಡ್ಡಿ, ಖೋ ಖೋ, ವಾಲೀಬಾಲ್, ಫುಟ್ ಬಾಲ್, ಹಾಕಿ, ಥ್ರೋಬಾಲ್, ಬ್ಯಾಸ್ಕೆಟ್ ಬಾಲ್,

    ದೈಹಿಕ ಶಿಕ್ಷಣದಲ್ಲಿ ಆಟೋಟಗಳು

    “ಆಟೋಟಗಳೆಂದರೆ ಮನರಂಜನೆಯನ್ನು ನೀಡಿ ಸ್ಪರ್ಧಾತ್ಮಕ ಗುಣಗಳನ್ನು ಹೊಂದಿದ್ದು ಪರಿಶುದ್ಧವಾದ ನೀತಿ ನಿಯಮಗಳನ್ನು ಹೊಂದಿ ವಿಹೇತರನ್ನು ನಿರ್ಣಯಿಸಲು ಸುಲಭವಾಗುವ ದೈಹಿಕ ಚಟುವಟಿಕೆಗಳನ್ನು ಆಟೋಟಗಳೆನ್ನುವರು.


    ಮೇಲಾಟಗಳು

    ಈ ಮೇಲಾಟಗಳು ವ್ಯಯಕ್ತಿಕ ಸ್ಪರ್ಧೆಯನ್ನು ಹೊಂದಿರುವುಗಳು ಇವು ಹೊರಾಂಗಣದಲ್ಲಿಯೇ ನಡೆಯುವಂತಹದ್ದೂ ರಿಲೇ ಸ್ಪರ್ಧೆಯೊಂದು ಮಾತ್ರ ಮೇಲಾಟದಲ್ಲಿರುವ ಗುಂಪಿನ ಓಟವು ಸಹ ಆಗಿದೆ.
    ಮೇಲಾಟವು ಅತಿವೇಗ, ಅತಿ ಎತ್ತರ, ಅತಿದೂರ ಎಂಬ ಮೂರು ತತ್ವಗಳನ್ನು ಹೊಂದಿದೆ. ಈ ತತ್ವಗಳ ಆಧಾರದ ಮೇಲೆ ಮೇಲಾಟಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

    ಗುಡ್ಡುಗಾಡು ಓಟ(CROSS CONTRY)

    ಗುಡ್ಡಾಗಾಡು ಓಟ ಇದೊಂದು ವಿಶೇಷ ತರಬೇತಿ ವಿಧಾನ ಹಾಗೂ ಸ್ಪರ್ಧೆ ಚಟುವಟಿಕೆಗಳಾಗಿದೆ. ಇದನ್ನು ಮಾಮೂಲಿ ಟ್ರಾಕಿನಲ್ಲಿ ಓಡಿಸದೆ ಹೊರಗೆ ಬಯಲು ಪ್ರದೇಶದ ಹುಲ್ಲುಗಾವಲುರೆಂಟೆ ಹೊಡೆದ ಹೊಂಟೆ ಹಳ್:ಳ ದಿನ್ನೆಗಳು ಸೇರಿರುತ್ತದೆ. ಮೊದಲು ೧೫೦ ಮೀಟರ್ ವರೆಗೆ ಯಾವುದೇ ಆಡವಣೆಯಾಗದಿರುವ ರೀತಿ ವ್ಯವಸ್ಥೆ ಇರುತ್ತದೆ.
    ನಂತರ ಹಾದಿಯಲ್ಲಿ ಪ್ರತಿ ೧೨೦ ಮೀಟರ್ ಗೆ ಒಮ್ಮೆ ಎಡಗಡೆ ಕೆಂಪು ಬಾವುಟ ಮತ್ತು ಬಲಗಡೆ ಬಿಳಿಯ ಬಾವುಟ ನೆಟ್ಟಿರುತ್ತಾರೆ. ಓಟದ ಹಾದಿ ಯಾವುದೇ ಗಂಡಾಂತಕಾರಿ ಯಾಗದಿರುವ ರೀತಿ ವ್ಯವಸ್ಥೆ ಮಾಡಿರುತ್ತದೆ.
    ಶಾಲಾ ಮಕ್ಕಳಿಗೆ ಈ ವ್ಯವಸ್ಥೆ ಇಲ್ಲದಿರುವುದರಿಂದ ಕೆಲವೊಮ್ಮೆ ರಸ್ತೆ ಅಥವಾ ಓಟದ ಮೈದಾನಗಳನ್ನೆ ಉಪಯೋಗಿಸಿ ಸ್ಪರ್ಧೆ ನಡೆಸುವುದುಂಟು. ಜ್ಯೂನಿಯರ್‍ಸಗೆ ೨೦ರಿಂದ ೧೦ ಕಿ.ಮೀ. ಸಬ್ ಜ್ಯೂನಿಯರ್‍ಸಗೆ ೨ ರಿಂದ ೫ ಕಿ.ಮೀ. ಹೆಂಗಸರಿಗೆ ೨ ರಿಂದ ೫ ಕಿ.ಮೀ ದೂರವುರುತ್ತದೆ. ಗೆದ್ದವರಿಗೆ ಸಾಮಾನ್ಯವಾಗಿ ೫ ರಿಂದ ೬ ಜನರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನನೀಡುವ ಪದ್ಧತಿ ಇದೆ ಹಾಗೂ ತಂಡಗಳಿಂದ ಭಾಗವಹಿ9ಸಿದರೆ ತಂಡದ ಬಹುಮಾನ ಸಹ ಸಿಗುತ್ತದೆ. ೧ ರಿಂದ ೪ ನೇ ತರಗತಿ ವಿದ್ಯಾರ್ಥಿಗಳಿಗೆ ಈ ಓಟ ಇರುವುದಿಲ್ಲ.

    ಮೆರೆಥಾನ್ ಓಟ

    ಮೆರಥಾನ್ ಸ್ಪರ್ಧೆಯು ಇತ್ತೀಚಿನ ದಿನಗಳಲ್ಲಿ ವಿಶೇಷ ಪ್ರತಿಷ್ಠೆಯ ಸ್ಪರ್ಧೆಯಾಗಿದೆ. ಇದರ ದೂರ ೪೨ ಸಾವಿರದ ೧೯೫ ಮೀಟರ್‍ಸ್ (೨೬ ಮೈಲಿ ೩೮೫ ಯಾಡ್)ಅನ್ನು ಹೊಂದಿದೆ.
    ಈ ಸ್ಪರ್ಧೆಯನ್ನು ರಸ್ತೆ ಬದಿಯಲ್ಲಿ ಪುಟ್ ಪಾತ್ ನಲ್ಲಿ ಏರ್ಪಡಿಸಿರುತ್ತಾರೆ. ಇದರಲ್ಲಿ ಭಾಗವಹಿಸುವವರು ಮೊದಲೇ ಆರೋಗ್ಯ ತಪಸಣೆಗೆ ಒಳಪಟ್ಟು ಅದರ ನೀತಿ ನಿಯಮಗಳಿಗೆ ಬದ್ಧರಾಗಿರಬೇಕು.
    ಸಂಘಟನಕಾರರು ಓಟಾಗಾರರಿಗೆ ಪ್ರತಿ ೫ ಕಿ.ಮೀ ದೂರದಲ್ಲಿ ಒಂದು ಉಪಹಾರ ಕೇಂದ್ರವನ್ನು ತೆರೆದಿರುತ್ತಾರೆ. ಓಟಾಗಾರರು ಮೊದಲೇ ತಮ್ಮ ಉಪಹಾರದ ಬಗ್ಗೆ ಮಾಹಿತಿ ನೀಡಿರುವಂತೆ ಸುಲಭವಾಗಿ ಆಹಾರ ಪಡೆದು ತಮ್ಮ ಓಟವನ್ನು ಮುಂದುವರೆಸುವರು.ಇದು ೧ ರಿಂದ ೪ ನೇ ತರಗತಿ ಮಕ್ಕಳಿಗೆ ಈ ಓಟ ಇರುವುದಿಲ್ಲ.
    ಇದರ ಹೆಸರೇ ಹೇಳುವಂತೆ ಇದರ ಮುಖ್ಯ ಉದ್ದೇಶವು ಸಹ ಮನರಂಜನೆಯಾಗಿದೆ. ಇದು ಬಹಳ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಆದರೆ ದೈಹಿಕ ಶಿಕ್ಷಣ ಮತ್ತು ಶಿಕ್ಷಣದ ಮೂಲ ಉದ್ದೇಶವನ್ನು ಈಡೇರಿಸುವ ಆಟಗಳನ್ನು ವಿಂಗಡಿಸಿ ಅವುಗಳ ಅನುಕೂಲವನ್ನು ಅರಿತು ಇಲ್ಲಿ ಜೋಡಿಸಲಾಗಿದೆ.
    ಇವು ಆಟದ ಪಾಠದ ಮೂಲ ವಸ್ತುವಾಗಿದೆ. ದೈಹಿಕ ಶಿಕ್ಷಣದಲ್ಲಿ ಇವುಗಳನ್ನು ಕಿರು ಆಟಗಳು ಮತ್ತು ಮುಖ್ಯ ಆಟಗಳಿಗೆ ಪೂರಕ ಆಟಗಳೆಂದು ಕರೆಯುತ್ತೇವೆ. ಇವುಗಳನ್ನು ತರಬೇತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಹ ಶಿಕ್ಷಕರುಗಳೂ ಸಹ ಇದರ ಬಗ್ಗೆ ಸ್ವಲ್ಪ ತರಬೇತಿಯ ನಂತರ ಸರಳವಾಗಿ ಆಡಿಸಿ ಮಕ್ಕಳಲ್ಲಿ ಮನರಂಜನೆ, ಶಿಸ್ತು ಮತ್ತು ದೈಹಿಕ ವ್ಯಾಯಾಮಗಳನ್ನುಂಟು ಮಾಡುವಲ್ಲಿ ಯಶಸ್ವಿಯಾಗಬಹುದಾಗಿದೆ.
    ಇಂತಹ ಸಣ್ಣ ಆಟಗಳು ದೈಹಿಕ ಶಿಕ್ಷಣಕ್ಕೆಷ್ಟೆಯಲ್ಲದೆ ಪಠ್ಯಕ್ಕೆ ಪೂರಕವಾದ ಅಂಶಗಳನ್ನು ನೀಡುವಲ್ಲಿ ಇವುಗಳ ಪ್ರಾತ್ರ ಬಹಳಷ್ಟಿರುವುದರಿಂದಲೇ ಆಟಗಳ ಜೊತೆಯಲ್ಲಿ ಕಲಿಕೆಯಾಗಬೇಕೆಂಬ ಉದ್ದೇಶದಿಂದಲೂ ಸಹ ಇವುಗಳನ್ನು ೧ ರಿಂದ ೪ ನೇ ತರಗತಿ ಮಕ್ಕಳಿಗೆ ಪಠ್ಯದ ರೂಪದಲ್ಲಿ ಹೊರತರಲು ಪ್ರಯತ್ನಿಸಿದೆ.
    ಇಂತಹ ಆಟಗಳನ್ನು ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯದೊಂದಿಗೆ ಬೋಧಿಸುವ ವ್ಯವಸ್ಥೆಯನ್ನು ಪ್ರಸಿದ್ಧ ಶೀಕ್ಷಣ ತಜ್ಞರುಗಳಾದ ಶ್ರೀ ಪ್ರೋಬೆಲ್ಲನು ಕಿಂಡರ್ ಗಾರ್ಡನ್ ಶಿಕ್ಷಣ ಪದ್ಧತಿಯಲ್ಲಿ ಹಾಗೂ ಮಾಂಟಸರಿ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಲಾಗಿತ್ತು. ಇಂತೆಲ್ಲಾ ಮಹತ್ವ ಉಳ್ಳದ್ದಾಗಿರುವುದಿಂದಲೇ ಇದರ ಬೋಧನೆಗೆಂದು ಶಾಲಾ ವೇಳಾಪಟ್ಟಿಯಲ್ಲಿ ವೇಳೆಯನ್ನು (ಅವಧಿಗಳನ್ನು) ಮೀಸಲಿಟ್ಟಿರುವುದನ್ನು ನೋಡುತ್ತೇವೆ. ಕಿರು ಆಟಗಳಿಂದ ಮಕ್ಕಳಲ್ಲಿ ಬೆಳೆಯುವ ಒಳ್ಳೆಯ ಗುಣಗಳು ಮತ್ತು ಪ್ರಯೋಜನ ದೈಹಿಕವಾಗಿಒ ದೇಹಕ್ಕೆ ಶಕ್ತಿ, ಬಲ, ಕಷ್ಟಸಹಿಷ್ಣುತೆ, ನರಸ್ನಾಯು ಹೊಂದಾಣಿಕೆ, ವೇಗ ಮುಂತಾದ ಗುಣಗಳು ಬೆಳೆಯುತ್ತದೆ.
    ಮಾನಸಿಕವಾಗಿ, ಏಕಾಗ್ರತೆ ಸಂಕಲ್ಪ ಶಕ್ತಿ, ಪ್ತಶಾಂತತೆ ಉಂಟಾಗುತ್ತದೆ.
    ಬೌದ್ಧಿಕವಾಗಿ, ತರ್ಕಶಕ್ತಿ ನಾಯಕತ್ವದ ಗುಣ , ತೀರ್ಮಾನ ಕೈಗೊಳ್ಳುವ ಶಕ್ತಿಬರುತ್ತದೆ.
    ಭಾವನಾತ್ಮಕವಾಗಿ, ಪ್ರತಿ,ಸಹಕಾರ, ಸಹೋದರತ್ವ, ನಂಬಿಕೆ ತ್ಯಾಗ ಸ್ನೇಹ,ಸಹನೆ, ವಿನಯದಂತಹ ಗುಣಗಳು ಬೆಳೆಯುತ್ತದೆ.
    ಸಾಮಜಿಕವಾಗಿ, ಸಾಂಗಿಕ ಭಾವನೆ,ಭಾತೃತ್ವ, ಸಹೋದರತ್ವದಂತಹ ಸಾಮಾಜಿಕ ಗುಣಗಳು ಬೆಳೆಯುತ್ತದೆ.
    ನೈತಿಕವಾಗಿ ಕರ್ತವ್ಯ ಪ್ರಜ್ಞೆ, ಪರಿಶ್ರಮ, ಬದ್ಧತೆ, ಪ್ರಮಾಣಿಕತೆ, ಕೃತಜ್ಞತಾಭಾವ, ಸಮಯ ಪ್ರಜ್ಞೆ, ಗೌರವ,ಅತಿಥ್ಯ, ಸರಳತೆ ಸ್ವಾವಲಂಬನೆ, ಸೌಂದರ್ಯೋಪಾಸನೆ, ದಿನಚರಿ, ಉತ್ತಮ ಹವ್ಯಾಸಗಳು ಬೆಳೆಯುತ್ತದೆ ಮತ್ತು ಸಮಾಜದಲ್ಲಿ ಸತ್ಪ್ರಜೆಯಾಗುವ ಗುಣಗಳು ಬೆಳೆಯುತ್ತದೆ.



    ಅಥ್ಲೆಟಿಕ್ಸ್


    ಶಾರೀರಿಕ ಚಟುವಟಿಕೆಗಳಾದ ನಡಿಗೆ, ಓಟ, ಎಸೆತ ಮತ್ತು ನೆಗೆತ ಮಾನವನ ಜೀವನದೊಂದಿಗೆ ಹಾಸುಹೊಕ್ಕಾಗಿ ಉಳಿದುಕೊಂಡುಬಂದಿವೆ. ಆದಿ ಕಾಲದಲ್ಲಿ ಜೀವನಾಧಾರವೆನಿಸಿದ್ದ ಇವುಗಳು ಮುಂದಿನ ಕಾಲ ಘಟ್ಟಗಳಲ್ಲಿ ಸಾಂಘಿಕ ಜೀವನಕ್ಕೆ, ನಂತರ ಸಮಾಜ, ರಾಜ್ಯ-ರಾಷ್ಟ್ರಗಳ ನಿರ್ಮಾಣ ಮತ್ತು ನಿರ್ವಹಣೆಗೆ ನೆರವಾಗಿವೆ.
    ಐತಿಹಾಸಿಕ ಕಾಲದಲ್ಲಿ ಶ್ರೇಷ್ಠ ಮಟ್ಟದ ಶಾರೀರಿಕ ಸಾಮಥ್ರ್ಯವು ಅತ್ಯವಶ್ಯಕವೆನಿಸಿದ್ದು, ಕಠಿಣ ತೆರನಾದ ಶಾರೀರಿಕ ಚಟುವಟಿಕೆಗಳು ಅಂದು ಗೌರವಾದರಗಳಿಗೆ ಪಾತ್ರವಾಗಿದ್ದವು. ವಿಜ್ಞಾನ- ತಂತ್ರಜ್ಞಾನಗಳ ಬೆಳವಣಿಗೆಗಳಿದಾಗ ಪ್ರಸ್ತುತ ಕಾಲದಲ್ಲಿ ಜನರು ಶ್ರಮದಾಯಕ ಶಾರೀರಿಕ ಚಟುವಟಿಕೆಗಳಿಂದ ಬಹುತೇಕ ವಂಚಿತರಾಗಿರುವುದರಿಂದ ತತ್ಫಲವಾದ ಸ್ವಾಸ್ಥ್ಯ ಸಂಬಂಧಿ ಉಪಾದಿಗಳು ಜನರನ್ನು ಕಾಡದಂತೆ ಎಚ್ಚರಿಕೆವಹಿಸಲು ಹಾಗೂ  ಬಾಧಿತರಿಗೆ ಪರಿಹಾರ ಒದಗಿಸಲು ಶಾರೀರಿಕ ಚಟುವಟಿಕೆಗಳು ಇಂದು ಅಗತ್ಯವೆನಿಸಿವೆ.
    ಇಂತಹ ಅಮ್ಯೂಲ್ಯವಾದ ಶಾರೀರಿಕ ಚಟುವಟಿಕೆಗಳನ್ನು ಮಾನವನ ಹಿತದೃಷ್ಟಿಯಿಂದ ಚಿರಂತನವಾಗಿ ಉಳಿಸಿಕೊಂಡು ಹೋಗುವಂತಾಗಲು ದಾರ್ಶನಿಕರು ಅವುಗಳಿಗೆ ಸ್ಪರ್ಧೆಗಳ ರೂಪಕೊಟ್ಟು ಕ್ರೀಡೆಗಳನ್ನಾಗಿ ಪರಿವರ್ತಿಸಿದ್ದಾರೆ.
    ಇವುಗಳಲ್ಲಿ “ಅಥ್ಲೆಟಿಕ್ಸ್” ಅಥವಾ ಬಹಳ ಸ್ಫುಟವಾಗಿ “ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪೋಟ್ರ್ಸ್” ಎಂಬುದು ಕ್ರೀಡೆಗಳಲ್ಲಿಯೇ ಮಾತೃಸದೃಶವಾದದ್ದು. ಶಾರೀರಿಕ ಸಾಮಥ್ರ್ಯ ಬೆಳೆಸಿ-ಉಳಿಸಿಕೊಂಡು ಹೋಗಲು ಮತ್ತು ಆರೋಗ್ಯ ಕಾಪಾಡಿಕೊಂಡು ಹೋಗಲು ಮಾತ್ರವಲ್ಲದೆ ಜೀವನ ಮೌಲ್ಯಗಳನ್ನು ಅರಿತು ನಡೆಯಲು, ಮಾನ-ಸನ್ಮಾನಗಳಿಸಿಕೊಳ್ಳಲು, ರಾಷ್ಟ್ರಗೌರವ ವರ್ಧಿಸಲು, ಸಮಾಜದಲ್ಲಿ ಏಕತೆ-ಐಕ್ಯತೆ ಆವಿರ್ಭವಿಸಲು ಸಹ ಅಥ್ಲೆಟಿಕ್ಸ್ ಕ್ರೀಡೆ ಬಹುವಾಗಿ ನೆರವಾಗುತ್ತದೆ.
    ವಿಶ್ವದಾದ್ಯಂತ ಹಲವಾರು ಕ್ರೀಡಗಳು ಪ್ರಚಲಿತವಿದ್ದು, ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ತೆರನಾದ ಕ್ರೀಡಾ ಚಟುವಟಿಕೆಗಳು ಜನಮನ್ನಣೆಗಳಿಸಿವೆಯಾದರೂ, ಅತಿ ಪುರಾತನವಾದ “ಆಥ್ಲೆಟಿಕ್ಸ್ ಕ್ರೀಡೆ” ಸರ್ವೇ ಸಾಮಾನ್ಯವಾಗಿ ಸರ್ವ ಜನಾಂಗದ ಸಂಪರ್ಕದಲ್ಲಿದೆ. ಮಾನವನ ಜೀವನದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಶಾರೀರಿಕ ಚಟುವಟಿಕೆಗಳನ್ನು ಅಪ್ಯಾಯಮಾನವಾದ ಸ್ಪರ್ಧಾತ್ಮಕ ಕ್ರೀಡೆಗಳನ್ನಾಗಿ ರೂಪಾಂತರಿಸಿದುದರ ಗರಿಮೆ ಪುರಾತನ ಗ್ರೀಕರಿಗೆ ಸಲ್ಲುತ್ತದೆ.
    ಭಾರತ ದೇಶದಲ್ಲಿ ಪರಂಪರಾನುಗತವಾಗಿ ಪುರಾಣ ಪುನ್ಯಪುರುಷರ ಹೆಸರಿನಲ್ಲಿ ವಿವಿಧ ಹಬ್ಬಗಳನ್ನು ಆಚರಿಸಿದಂತೆಯೇ ಪುರಾತನ ಗ್ರೀಕರೂ ಕೂಡ ತಮ್ಮ ನಂಬುಗೆಯ ದೇವತೆ-ದೈವಗಳ ಹೆಸರಿನಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದುದುಂಟು. ಅವುಗಳಲ್ಲಿ ಇಸ್ತ್‍ಮಿಯನ್, ನೇಮಿಯನ್, ಪೈಥಿಯನ್ ಮತ್ತು ಒಲಂಪಿಕ್ ಎಂಬ ನಾಲ್ಕು ಹಬ್ಬಗಳು ರಾಷ್ಟ್ರೀಯ ಹಬ್ಬಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದವು.
    ಧಾರ್ಮಿಕ ಚಟುವಟಿಕೆಗಳ ಆಚರಣೆ, ಬಂಧು-ಮಿತ್ರರ ಮಿಲನ, ಉಂಡು-ಉಡುವುದರ ಜೊತೆಗೆ ಮನರಂಜನೆ-ಸ್ಪರ್ಧೆಗಳನ್ನೊಳಗೊಂಡ ಶಾರೀರಿಕ ಚಟುವಟಿಕೆಗಳ ವೀಕ್ಷಣೆ ಮತ್ತು ಅವುಗಳಲ್ಲಿ ಸಮರ್ಥರು ಭಾಗವಹಿಸುವಿಕೆ ಈ ಹಬ್ಬಗಳ ವೈಶಿಷ್ಟ್ಯವಾಗಿದ್ದಿತು.
    ಕಾಲಾನುಕ್ರಮದಲ್ಲಿ ಕ್ರೀಡೆಗಳ ಸ್ವರೂಪ ಪಡೆದ ಶಾರೀರಿಕ ಚಟುವಟಿಕೆಗಳು ಹಬ್ಬಗಳ ಸಂದರ್ಭದ ಇತರ ಚಟುವಟಿಕೆಗಳಿಗಿಂತಲೂ ಅಪ್ಯಾಯಮಾನವೆನಿಸಿದುವು. ಒಂದು ಗಮನಾರ್ಹ ಸಂಗತಿಯೆಂದರೆ ಗ್ರೀಸ್ ದೇಶದ ಎಲಿನ್ ಪ್ರಾಂತ್ಯದಲ್ಲಿನ ಒಲಂಪಿಯಾ ಎಂಬ ಸ್ಥಳದಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಒಲಂಪಿಕ್ ಹಬ್ಬ ಕ್ರಿ.ಪೂ.776ರಲ್ಲು ಮರುಹುಟ್ಟು ಪಡೆದದ್ದು. ಹೀಗೆ ಮರುಹುಟ್ಟು ಪಡೆದ ಪುರಾತನ ಕಾಲದ ಮೊದಲ ಒಲಂಪಿಕ್‍ನಲ್ಲಿ ಒಂದು ಸ್ಟೇಡ್ (606 3/4 ಅಡಿ) ಓಟ ಸ್ವರ್ಧೆ ಮಾತ್ರ ಇದ್ದು, ಕಾಲಾನುಕ್ರಮದಲ್ಲಿ ಇನ್ನಿತರ ದೂರದ ಓಟ ಸ್ಪರ್ಧೆಗಳಲ್ಲದೆ, ನೆಗೆತ, ಎಸೆತ, ಕುಸ್ತಿ, ಬಾಕ್ಸಿಂಗ್, ಇತ್ಯಾದಿಗಳು ಸೇರ್ಪಡೆಗೊಂಡವು. ಸಾಹಿತ್ಯ, ಶಿಲ್ಪಕಲೆ, ವಿನ್ಯಾಸಕಲೆ, ಸಂಗೀತ, ನೃತ್ಯ ಇತ್ಯಾದಿ ಚಟುವಟಿಕೆಗಳಲ್ಲಿಯೂ ಸ್ಪರ್ಧೆಗಳು ನಡೆಯುತ್ತಿದ್ದವಾದರೂ ಒಲಂಪಿಕ್ಸ್‍ನಲ್ಲಿ ಅಥ್ಲೆಟಿಕ್ಸ್ ಕ್ರೀಡೆಗೆ ಅಗ್ರಪೂಜೆ ಸಲ್ಲುತ್ತಿತ್ತು.
    ಗ್ರೀಕರ ಉಳಿದೆಲ್ಲ ರಾಷ್ಟ್ರೀಯ ಕ್ರೀಡೆಗಳನ್ನು ಮೀರಿ ಬೆಳೆದ ಒಲಂಪಿಕ್ ಕ್ರೀಡೆ, ಬಲಿಷ್ಟ ಚಕ್ರಾಧಿಪತ್ಯವಾಗಿ ರೂಪುಗೊಂಡ ರೋಮ್‍ನ ಅವಕೃಪೆಗೆ ಪಾತ್ರವಾಗಿ ಕ್ರಿ.ಪೂ 334ರಲ್ಲಿ ಸ್ಥಗಿತಗೊಂಡಿತಾದರೂ ಜನಮಾನಸದಿಂದ ಸಂಪೂರ್ಣವಾಗಿ ಮರೆಯಾಗಿರಲಿಲ್ಲ.
    ಫ್ರಾನ್ಸ್‍ದೇಶದ ಶಿಕ್ಷಣ ತಜ್ಞ ಹಾಗೂ ದಾರ್ಶನಿಕ ಬೇರನ್ ಡಿ ಕೊಬರ್ಟಿನ್‍ನ ಪ್ರಯತ್ನದ ಫಲವಾಗಿ ಒಲಂಪಿಕ್ ಕ್ರೀಡೆಗಳೂ ಕ್ರಿ.ಶ.1896ರಲ್ಲಿ ಮತ್ತೊಮ್ಮೆ ಪುನರುಜ್ಜೀವನಗೊಂಡು 1916, 1940 ಮತ್ತು 1944ರ ಒಲಂಪಿಕ್ಸ್ ಹೊರತು ಪಡಿಸಿ ನಿರಂತರವಾಗಿ ನಾಲ್ಕು ವರ್ಷಕ್ಕೊಮ್ಮೆ ನಡೆದುಕೊಂಡು ಬರುತ್ತಿವೆ.
    100 ಮೀಟರ್ ಓಟದಿಂದ ಹಿಡಿದು ಮ್ಯಾರಥಾನ್ ಓಟದವರೆಗಿನ ವಿವಿಧ ದೂರದ ಓಟಗಳು, ಅಡೆತಡೆ ಓಟ, ವಿವಿಧ ಎಸೆತದ ಸ್ಪರ್ಧೆಗಳು, ನೆಗೆತದ ಸ್ಪರ್ಧೆಗಳು, ಡೆಕಾಥ್ಲಾನ್ ಮತು ಹೆಪ್ಟಾಥ್ಲಾನ್ ಸ್ಪರ್ಧೆಗಳು, ನೆಗೆತದ ಸ್ಪರ್ಧೆಗಳು, ಥೆಕಾಥ್ಲಾನ್ ಮತ್ತು ಹೆಪ್ಟಾಥ್ಲಾನ್‍ನಂತಹ ಕಂಬೈಂಡ್ ಸ್ಪರ್ಧೆಗಳು, ನಡಿಗೆ ಸ್ಪರ್ಧೆ ಇತ್ಯಾದಿಗಳನ್ನೊಳಗೊಂಡ ಅಥ್ಲೆಟಿಕ್ಸ್ ಸ್ಪರ್ಧೆಗಳು ಒಲಂಪಿಕ್ಸ್‍ನಲ್ಲಿ ಅತಿರಂಜನೀಯ ಮತ್ತು ಹೆಚ್ಚು ಕ್ರೀಡಾಸಕ್ತರ ಗಮನ ಸೆಳೆಯುವ ಚಟುವಟಿಕೆಯಾಗಿದೆ.
    ಅಪೇಕ್ಷಿತ ಮೌಲ್ಯಗಳನ್ನು ಬೆಳೆಸುವ ಹಾಗೂ ಸರಳ ಸ್ಪರ್ಧೆಗಳನ್ನೊಳಗೊಂಡ ಅಥ್ಲೆಟಿಕ್ಸ್‍ನ್ನು ಪ್ರಾಥಮಿಕ ಶಾಲಾ ಮಟ್ಟದಿಂದ ವಿಶ್ವವಿದ್ಯಾನಿಲಯ ಮಟ್ಟದವರೆಗೆ, ತಾಲ್ಲೂಕು ಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ವಿಶ್ವದಾದ್ಯಂತ ಆಯೋಜಿಸಲಾಗುತ್ತಿದೆ. ವಿಶೇಷ ಅಗತ್ಯವಿರುವವರು ಹಾಗೂ ವಿಕಲ ಚೇತನರಿಗೂ ಪ್ರತ್ಯೇಕ ಅಥ್ಲೆಟಿಕ್ಸ್ ಸ್ಪರ್ಧೆಗಳಿವೆ.
    ವಯಸ್ಕರು ಮತ್ತು ವಯೋವೃದ್ಧರು ದೈಹಿಕ ಸಾಮಥ್ರ್ಯ ಬೆಳೆಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ನೆರವಾಗುವಂತೆ ಹಿರಿಯರ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಕೂಡ ಆಯೋಜಿಸಲಾಗುತ್ತಿದ್ದು, ಶತಾಯುಷಿಗಳನೇಕರು ಸಹ ಇದರಲ್ಲಿ ಸ್ವಯಂ ಸ್ಫೂರ್ತಿಯಿಂದ ಭಾಗವಹಿಸುತ್ತಿದ್ದಾರೆ. ಒಟ್ಟಾರೆ ವಿವಿಧ ವಯೋಮಾನದ ಮಹಿಳೆಯರು ಮತ್ತು ಪುರುಷರು ಆಸಕ್ತಿಯಿಂದ ಭಾಗವಹಿಸಲಿಚ್ಛಿಸುವ ಅಥ್ಲೆಟಿಕ್ಸ್ ಕ್ರೀಡೆ ಮನುಕುಲದ ಆಸ್ತಿ.
    ಬನ್ನಿ! ನಡೆಯಿರಿ, ಓಡಿ, ಎಸೆಯಿರಿ, ನೆಗೆಯಿರಿ, ನಲಿಯಿರಿ, ಸ್ವಾಸ್ಥ್ಯ ಮತ್ತು ಸಾಮಥ್ರ್ಯವೆಂಬ ಆಸ್ತಿಗಳಿಸಿಕೊಳ್ಳಿ! ಅಥ್ಲೆಟಿಕ್ಸ್ ಕ್ರೀಡೆಯ ಮೂಲಕ ಬಲಿಷ್ಠ ಭಾರತ ಕಟ್ಟೋಣ!

    1 ಕಾಮೆಂಟ್‌:

    1. ನಮಸ್ಕಾರ ಸರ್ ನಿಮ್ಮಿಂದ ನನಗೆ ಸಹಾಯಕವಾಯಿತು ಥ್ಯಾಂಕ್ಯು ಸರ್ ಇನ್ನು ಸಂಪುಟ ಸಂಪುಟಗಳಷ್ಟು ಕಲಿಸುವಿರ ಸರ್ ನನ್ನ ಅಭಿನಂದನೆಗಳು

      ಪ್ರತ್ಯುತ್ತರಅಳಿಸಿ