ಪುಟಗಳು

19 ಅಕ್ಟೋಬರ್ 2013

ಗಾದೆಗಳ ಸಂಗ್ರಹ

ಗಾದೆಗಳ ಸಂಗ್ರಹ


  1. ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು
  2. ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ
  3. ಅಂಕೆಯಲ್ಲಿದ್ದ ಹೆಣ್ಣು, ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡೊಲ್ಲ
  4. ಅಂಗಾಂಗದಲ್ಲಿ ಪಾಪ ಮಡಗಿಕೊಂಡು ಗಂಗೇಲಿ ಮಿಂದು ಬಂದ
  5. ಅಂಗೈ ತೋರಿಸಿ ಅವಲಕ್ಷಣ ಅಂತ ಅನ್ನಿಸಿಕೊಂಡರಂತೆ
  6. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
  7. ಅಂಜುತ್ತಾ ಅಳುಕುತ್ತಾ ತಿಂದ ಅಮೃತ ನಂಜು
  8. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
  9. ಅಂದು ಬಾ ಅಂದ್ರೆ ಮಿಂದು ಬಂದ
  10. ಅಂಬಲಿ ಕುಡಿಯುವವನಿಗೆ, ಮೀಸೆ ಹಿಡಿಯುವವನೊಬ್ಬ
  11. ಅಂಬಲಿಗೆ ಗತಿ ಇಲ್ಲದವ ಕಟ್ಟಾಣಿ ರಂಬೆಯ ಬಯಸಿದ
  12. ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
  13. ಅಕ್ಕ ನನ್ನವಳಾದ್ರೆ ಬಾವ ನನ್ನವನೇನು
  14. ಅಕ್ಕ ಬರಬೇಕು ಅಕ್ಕಿ ಮುಗೀಬಾರದು
  15. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೆ ?
  16. ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು
  17. ಅಕ್ಕನ ಹಗೆ ಬಾವನ ನೆಂಟು
  18. ಅಕ್ಕರ ಕಲ್ತು ತನ್ನ ಒಕ್ಕಲನ್ನೇ ತಿನ್ನೊದ್ ಕಲ್ತ
  19. ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು
  20. ಅಕ್ಕಸಾಲಿ ಅಕ್ಕನ ಚಿನ್ನಾನೂ ಬಿಡ
  21. ಅಕ್ಕಸಾಲಿಗನ ಮಗ ಚಿಮ್ಮಟ ಹಿಡಿಯುತ್ತಲೇ ಹೊನ್ನ ಕದ್ದ
  22. ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ
  23. ಅಕ್ಕಿ ತಿದವರಿಗೆ ಅನ್ನಿಲ್ಲ, ಮೊಟ್ಟೆ ತಿದವರಿಗೆ ಮರಿ ಇಲ್ಲ.
  24. ಅಕ್ಕಿ ಮೇಲೆ ಆಸೆ, ನೆಂಟರ ಮೆಲೆ ಪ್ರೀತಿ
  25. ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು
  26. ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
  27. ಅಕ್ಕಿಲ್ಲ ಬ್ಯಾಳಿಲ್ಲ ಅಕ್ಕನ್ನ ಕರತರಬೇಕು
  28. ಅಕ್ಷರ ಕಲಿಯುವುದಕ್ಕೆ ಬೇಧಭಾವ ಬೇಡ.
  29. ಅಗ ತೋರಿಸಿ ಅರ್ಧಾಗಿಯಾದಳು.
  30. ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ
  31. ಅಗಸನ ಸಿಟ್ಟು ಅನ್ಯರ ವಸ್ತ್ರದ ಮೇಲೆ.
  32. ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ
  33. ಅಗಳದಾಗೆ ಒದ್ದು ಅಡಿಗೆ ಮನೆಯಲ್ಲಿ ಕಾಲು ಹಿಡಿದ.
  34. ಅಗ್ಗದ ಆಸೆಗೆ ಗೊಬ್ಬರ ತಗೊಂಡರು
  35. ಅಗ್ಗದ ಮಾಲು;ಮುಗ್ಗಿದ ಜೋಳ
  36. ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ್ಮವುಂಟೆ?
  37. ಅಜ್ಜ! ಮದುವೆ ಅಂದ್ರೆ ನನಗೋ ಅಂದ
  38. ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡಿದಾರಕ್ಕೆ.
  39. ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು
  40. ಅಜ್ಜಿಗೆ ಅಕ್ಕಿ ಚಿತೆಯಾದರೆ ಮೊಮ್ಮಗಳಿಗೆ ಮೂಗುತಿ ಚಿತೆ
  41. ಅಜ್ಜಿಗೆ ಅರಿವೆ ಚಿಂತೆ ಮೊಮ್ಮಗಳಿಗೆ ಮಿಂಡನ ಚಿಂತೆ
  42. ಅಟ್ಟ ಮೇಲೆ ಒಲೆ ಉರಿಯಿತು, ಕೆಟ್ಟ ಮೇಲೆ ಬುದ್ಧಿ ಬಂತು
  43. ಅಟ್ಟದ ಮೇಲಿಂದ ಬಿದ್ದವನಿಗೆ ದಡಿಗೆ ತಗೊಂಡು ಹೇರಿದರಂತೆ
  44. ಅಟ್ಟದಿಂದ ಬಿದ್ದವನನ್ನು ದಡಿಗೆ ತೆಗೆದುಕೊಂಡು ಚಚ್ಚಿದರು.
  45. ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು
  46. ಅಡಕೆ ಕದ್ದು ಹೋದ ಮಾನ ಆನೆ ಕೊಟ್ಟರೂ ಬರದು
  47. ಅಡವಿಯ ದೊಣ್ಣೆ ಪರದೇಸಿಯ ತಲೆ
  48. ಅಡಿ ಅನ್ನಕ್ಕೆ ಅವಳೇ ಇಲ್ಲೆ ; ಪಿಳ್ಳೆ ಪೇರು ರಾಮಕೃಷ್ನ !( ಇದು ತಮಿಳು ಭಾಷೆಯ ಗಾದೆಯಾದರೂ ಕನ್ನಡಿಗರಲ್ಲಿ ಹೆಚ್ಚು ಪ್ರಚಲಿತವಿದೆ)
  49. ಅಡಿಕೆ ಕದ್ದ ಮಾನ ಆನೆ ಕೊಟ್ರೂ ಬರೊಲ್ಲ
  50. ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
  51. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
  52. ಅಡಿಗೆ ಬಿದ್ಫರೂ ಮೀಸೆ ಮೇಲೆ
  53. ಅಡುಗೆ ಮಾಡಿದವಳಿಗಿಂತ ಬಡಿಸಿದವಳೇ ಮೇಲು
  54. ಅಡೆ ಮಡಕೆಯಲ್ಲ ಇಡೆ ಸಟ್ಟುಗವಲ್ಲ
  55. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
  56. ಅಡ್ಡಮಡ್ಡೆ ದೇವರಿಗೆ ಕುದಿಹಿಟ್ಟಿನ ಆರತಿ.
  57. ಅಣ್ಣ ಹುಸಿಯಾದರೂ ತಮ್ಮ ತಂಪು ತರದೇ ಹೋಗಲ್ಲ.( ಪೂರ್ವಾಷಾಢ , ಉತ್ತರಾಷಾಢ ಮಳೆಗಳು )
  58. ಅಣ್ಣಿಗೇರ‍್ಯಾಗ ಎಣ್ಣೆ ಮೊಣಕಾಲ ಮಟ್ಟ
  59. ಅತಿ ಆಸೆ ಗತಿ ಕೇಡು
  60. ಅತಿ ಸ್ನೇಹ ಗತಿ ಕೇಡು
  61. ಅತಿಯಾದರೆ ಅಮೃತವೂ ವಿಷ
  62. ಅತೀ ಬುದ್ಧಿ, ಅಡು ಚಪ್ಪಟೆ!
  63. ಅತ್ತ ದರಿ; ಇತ್ತ ಪುಲಿ
  64. ಅತ್ತು ಹೆದರಿಸೋನೊಬ್ಬ ;ಹೇ.. ಹೆದರಿಸೋನೊಬ್ಬ
  65. ಅತ್ತೂ ಕರೆದೂ ಔತಣ ಮಾಡಿಸಿಕೊಂಡಂತೆ
  66. ಅತ್ತೂ ಕರೆದೂ ಔತಣ ಹೇಳಿಸಿಕೊಂಡರು
  67. ಅತ್ತೆ ಆಸ್ತೀನ ಅಳಿಯ ದಾನ ಮಾಡಿದ
  68. ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ
  69. ಅತ್ತೆ ಮಾಡಿದ್ದು ಅಡಕಲಗೂಡಿಗೆ ಸೊಸೆ ಮಾಡಿದ್ದು ಬೆಳಕಿಗೆ
  70. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
  71. ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
  72. ಅತ್ತೆಯ ಮನಿಯಾಗ ಮುತ್ತಾಗಿ ಇರಬೇಕು
  73. ಅತ್ಯಾಶ ಬಹುದುಃಖಾಯ ಅತಿ ಸರ್ವತ್ರ ವರ್ಜಯೇತ್
  74. ಅದ್ನೇ ಉಂಡೇನ್ ಅತ್ತೆಮ್ನೋರೇ,ಕದ ತೆಗೀರಿ ಮಾವ್ನೋರೇ ಅಂದ್ರಂತೆ
  75. ಅಧರಕ್ಕೆ ಕಹಿ ಉದರಕ್ಕೆ ಸಿಹಿ
  76. ಅನುಕೂಲ ಸಿಂಧು; ಅಭಾವ ವೈರಾಗ್ಯ
  77. ಅನುಭವಿಗೆ ಬೇರೆ ಮತವಿಲ್ಲ
  78. ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
  79. ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ
  80. ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
  81. ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು
  82. ಅಪಕೀರ್ತಿ ತರುವ ಮಗನಿಗಿಂತ, ಸತ್ಕೀರ್ತಿ ತರುವ ಆಳೇ ಮೇಲು.
  83. ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
  84. ಅಪಾಯ ತೀರಿತು, ದೇವರನ್ನು ಮರೆತಾಯಿತು.
  85. ಅಪ್ಪ ಗುಡಿ ಕಟ್ಟಿದರೆ ಮಗ ಕಳಸ ಇಟ್ಟ
  86. ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ.
  87. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ
  88. ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ
  89. ಅಪ್ಪಂಥೋನಿಗೆ ಇಪ್ಪಂತ್ತೊಂದು ಕಾಯಿಲೆ
  90. ಅಪ್ಪನ ಕಾಲಕ್ಕೆ ಅರಮನೆ, ಮಗನ ಕಾಲಕ್ಕೆ ಬರೀಮನೆ.
  91. ಅಪ್ಪನ ಬಟ್ಟೆಯಾದರು ಚಿಪ್ಪಿಗ ಬಿಡ
  92. ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ
  93. ಅಪ್ಪನ ಮಾತು ಕೇಳದವನು ಅಮ್ಮನ ಮಾತು ಕೇಳಿಯಾನೆ?
  94. ಅಪ್ಪನ ಸಾಲಕ್ಕೆ ಮಗನನ್ನು ತಿಪ್ಪೆ ಮೇಲೆ ಎಳೆದರು.
  95. ಅಪ್ಪನ್ನೇ ಅಪ್ಪ ಅನ್ನದೋನು,ಚಿಕ್ಕಪ್ಪನ್ನ ಅಪ್ಪಾ ಅಂತ ಕರೀತಾನಾ?
  96. ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು
  97. ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ
  98. ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನ ಹಾಗೆ.
  99. ಅಮ್ಮನವರು ಪಟ್ಟಕ್ಕೆ ಬಂದಾಗ,ಅಯ್ಯನವರು ಚಟ್ಟಕ್ಕೇರಿದರು
  100. ಅಯ್ಯಾ ಎಂದರೆ ಸ್ವರ್ಗ; ಎಲವೋ ಎಂದರೆ ನರಕ
  101. ಅಯ್ಯೋ ಅಂದರೆ ಅರೆ ವಯಸ್ಸು
  102. ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ
  103. ಅಯ್ಯೋ ಪಾಪ ಅಂದ್ರೆ ಅರ್ಧ ಆಯುಸ್ಸು
  104. ಅರಗಿನಂತೆ ತಾಯಿ, ಮರದಂತೆ ಮಕ್ಕಳು
  105. ಅರಣೆ (= ಹಾವು ರಾಣಿ) ಕಡಿದರೆ ಭರಣಿ (=ಪಿಂಗಾಣಿ ಮಡಿಕೆ) ಮದ್ದು ಸಾಲದು
  106. ಅರಮನೆಗಿಂತ ನೆರೆ ಮನೆ ಲೇಸು.
  107. ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ
  108. ಅರವತ್ತಕ್ಕೆ ಅರಳು ಮರಳು
  109. ಅರವಲ್ಲದ್ದು (ಧರ್ಮವಲ್ಲದ್ದು) ಮಾಡಿದರೂ ತರವಲ್ಲದ್ದು ಮಾಡಬಾರದು
  110. ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು
  111. ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ
  112. ಅರಸು ಒಲಿದರೆ ಸಿರಿ ದೆಸೆಯಾಯ್ತು
  113. ಅರಿತರೆ ಮಾತನಾಡು, ಮರೆತರೆ ಕೂತು ನೋಡು.
  114. ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ
  115. ಅರಿತೂ ಮಾಡಿದ ಪಾಪ ವಜ್ರದ ಸೆರೆಯಂತೆ
  116. ಅರಿವಿನ ಹಾದಿ ಬೇರೆ
  117. ಅರುಗೆಟ್ಟ ನಿದ್ದೆ (=ಅರಿವಿಲ್ಲದೆ ಮಲಗಿರುವುದು) ಇರಗೆಟ್ಟು (=ಇರವು ಗೆಟ್ಟು) ಸತ್ತಂತೆ
  118. ಅರೆಗೊಡದ ಅಬ್ಬರವೇ ಬಹಳ.
  119. ಅರೆಪಾವಿನವರ ಅಬ್ಬರ ಬಹಳ
  120. ಅರ್ತಿಗೆ ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ
  121. ಅರ್ಧ ಆದ ಕೆಲಸವನ್ನು ಅರಸನಿಗೂ ತೋರಿಸಬೇಡ
  122. ಅರ್ಧ ಕಲಿತವನ ಆಬ್ಬರ ಹೆಚ್ಚು.
  123. ಅಲಗಿನ ಗಾಯಕ್ಕಿಂತ ಗಲಗಿನ ಗಾಯ ಹೆಚ್ಚು
  124. ಅಲಾ ಬಲಾ ಪಾಪಿ ತಲೀ ಮ್ಯಾಲೆ
  125. ಅಲ್ಪ ವಿದ್ಯಾ ಮಹಾಗರ್ವಿ
  126. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದನಂತೆ
  127. ಅಲ್ಪರ ಸಂಗ ಅಭಿಮಾನ ಭಂಗ.
  128. ಅಲ್ಲದವನ ಒಡನಾಟ ಮೊಳಕೈಗೆ ಕಲ್ಲು ಬಡಿದಂತೆ
  129. ಅಲ್ಲುಂಟೆ, ಇಲ್ಲುಂಟೆ, ಕಲ್ಲಲ್ಲುಂಟೆ, ಶಿವದಾನ.
  130. ಅವರವರ ತಲೆಗೆ ಅವರವರದೇ ಕೈ
  131. ಅವರು ಚಾಪೆ ಕೆಳಗೆ ತೂರಿದರೆ ನೀನು ರಂಗೋಲಿ ಕೆಳಗೆ ತೂರು.
  132. ಅಶ್ವಥ ಸುತ್ತೆ ಮಕ್ಕಳಾಗುತ್ತೆ ಅದ್ರೆ ಸುತ್ತು ಸುತ್ತಿಗೂ ಹೊಟ್ಟೆ ಮುಟ್ಟಿ ನೋಡಿಕೊಡಳತೆ.
  133. ಅಶ್ವಿನೀ ಸಸ್ಯನಾಶಿನೀ.
  134. ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
  135. ಅಹಂಕಾರಕ್ಕೆ ಉದಾಸೀನವೇ ಮಟ್ಟು.
  136. ಅಳಿದೂರಿಗೆ ಉಳಿದವನೇ ಗೌಡ
  137. ಅಳಿಯ ಅಲ್ಲ,ಮಗಳ ಗಂಡ
  138. ಅಳಿಯ ಮನೆ ತೊಳಿಯ
  139. ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
  140. ಅಳಿಯನಿಗೆ ದೀಪಾವಳಿ ಮಾವನಿಗೆ ಕೋಪಾವಳಿ.
  141. ಅಳಿಲ ಸೇವೆ, ಮಳಲ ಭಕ್ತಿ
  142. ಅಳಿಲು ಏರಿದರೆ ಅರಳಿಮರ ಅಲ್ಲಾಡೀತೆ ?
  143. ಅಳಿವುದೇ ಕಾಯ ಉಳಿವುದೇ ಕೀರ್ತಿ
  144. ಅಳೋ ... ಮೇಲೆ ಗಳು ಬಿತ್ತು
  145. ಆಕಳ ಹೊಟ್ಟೆಯಲ್ಲಿ ಅಚ್ಚೇರು ಬಗಾರ.
  146. ಆಕಳಿದ್ದವನಿಗೆ ವ್ಯಾಕುಲವಿಲ್ಲ.
  147. ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
  148. ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.
  149. ಆಕಾಶ ನೋಡೊದಕ್ಕೆ ನೂಕುನುಗ್ಗಲೆ ?
  150. ಆಕಾಶ ಹರಿದು ಬೀಳುವಾಗ ಕೈ ಅಡ್ಡ ಹಿಡಿಯಬಹುದೇ ?
  151. ಆಕಾಶಕ್ಕೆ ಏಣಿ ಹಾಕಿದ ಹಾಗೆ
  152. ಆಕೆಗೆ ಬುದ್ಧಿ ಹೇಳಕ್ಕೆ ಆತನ್ನ ಕರೆಸಿದರೆ,ಆತ ಆಕೇನ ಬಿಟ್ಟು ಆರು ವರ್ಷ ಆಗಿತ್ತಂತೆ.
  153. ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು
  154. ಆಗ-ಭೋಗ ಸೂಳೆ ಪಾಲು , ಗೂರಲು ಉಬ್ಬಸ ಹೆಂಡತಿ ಪಾಲು.
  155. ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ
  156. ಆಗುವ (ಅಡುವ) ವರೆಗಿದ್ದು ಆರುವ ವರೆಗೆ ಇರಲಾರರೇ
  157. ಆಗೊದೆಲ್ಲ ವೊಳ್ಳೆದಕ್ಕೆ
  158. ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ
  159. ಆಗೋದೆಲ್ಲಾ ಒಳ್ಳೇದಕ್ಕೆ
  160. ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ
  161. ಆಟ ಕೆಟ್ಟರೆ ದೀವಟಿಗೆಯವನ ಸುತ್ತ
  162. ಆಟಕ್ಕುಂಟು,ಲೆಕ್ಕಕ್ಕಿಲ್ಲ
  163. ಆಡಿ ಉಂಡ ಮೈ ಅಟ್ಟು ಉಂಡೀತೇ?
  164. ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ
  165. ಆಡಿ ಪೋಕರಿ ಅನ್ನಿಸಿಕೊಳ್ಳುವುದಕಿಂತ ಆಡದೆ ಮೂಗ ಅನ್ನಿಸಿಕೊಳ್ಳುವುದು ಮೇಲು.
  166. ಆಡಿಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ
  167. ಆಡು ಮುಟ್ಟದ ಸೊಪ್ಪಿಲ್ಲ
  168. ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ
  169. ಆಡೋಕಾಗಲ್ಲ,ಅನುಭವಿಸಕ್ಕಾಗಲ್ಲ
  170. ಆಡೋಣ ಬಾ ಕೆಡಿಸೋಣ ಬಾ
  171. ಆಡೋದು ಮಡಿ ಉಂಬೋದು ಮೈಲಿಗೆ
  172. ಆತುರಕ್ಕೆ ಅಜ್ಜಿ ಮೈನೆರೆದಳು
  173. ಆತುರಗಾರನಿಗೆ ಬುದ್ಧಿ ಮಟ್ಟ
  174. ಆತ್ಮೀಯವಾದ ಪ್ರೇಮ ಅಮರವಾದದ್ದು.
  175. ಆದ ಕೆಲಸಕ್ಕೆ ಅತ್ತೆಗಳು ಬಂದಂತೆ
  176. ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
  177. ಆದರೆ ಒಂದಡಿಕೆ ಮರ, ಹೋದರೆ ಒಂದು ಗೋಟು.
  178. ಆದರೆ ಹಬ್ಬ, ಇಲ್ಲದಿದ್ದರೆ ಬರಗಾಲ.
  179. ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ
  180. ಆನೆ ದಾನ ಮಾಡಿದವನು ಸರಪಣಿಗೆ ಜಗಳಾಡುವನೆ ?
  181. ಆನೆ ಬರುವುದಕ್ಕು ಮುನ್ನ ಗಂಟೆ ಸದ್ದು
  182. ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ
  183. ಆನೆ ಹೋದದ್ದು ದಾರಿ ಹಾವು ಹರಿದದ್ದು ಅಡ್ಡದಾರಿ
  184. ಆನೆಗೂ ಅಡಿ ತಪ್ಪೀತು
  185. ಆನೆಗೆ ಚಡ್ಡಿ ಹೊಲಿಸಿದ ಹಾಗೆ
  186. ಆನೆಯ ಹೊಟ್ಟೆಗೆ ಅಂಬಲಿ ಬಿಟ್ಟ ಹಾಗೆ
  187. ಆನೆಯಂಥದೂ ಮುಗ್ಗರಿಸ್ತದೆ
  188. ಆಪತ್ತಿಗಾದವನೇ ನಿಜವಾದ ಗೆಳೆಯ.
  189. ಆಪತ್ತಿಗಾದವನೇ ನೆಂಟ ಕೆಲಸಕ್ಕಾದವನೇ ಭಂಟ
  190. ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು
  191. ಆಫೀಸಿನಲ್ಲಿ ಆಫೀಸರ್, ಮನೆಯಲ್ಲಿ ಕುಕ್ಕರ್.
  192. ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ
  193. ಆರಕ್ಕೆ ಹೆಚ್ಚಿಲ್ಲ; ಮೂರಕ್ಕೆ ಕಡಿಮೆಯಿಲ್ಲ
  194. ಆರಕ್ಕೇರಲ್ಲ, ಮೂರಕ್ಕಿಳಿಯಲ್ಲ
  195. ಆರಿದೋಗರಕ್ಕೆ ಮೊಸರಿಕ್ಕಿ ಕಾಗೆಗೆ ಸೂರೆಕೊಟ್ಟರು
  196. ಆರಿದ್ರಾ ಮಳೆ ಆರದೇ ಹುಯ್ಯುತ್ತೆ.
  197. ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
  198. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
  199. ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ
  200. ಆಲಸಿ-ಮುಂಡೇದ್ಕೆ ಎರಡು ಖರ್ಚು, ಲೋಭಿ-ಮುಂಡೇದ್ಕೆ ಮೂರು ಖರ್ಚು
  201. ಆಲಸ್ಯಂ ಅಮೃತಂ ವಿಷಂ
  202. ಆವು ಕಪ್ಪಾದ್ರೆ ಹಾಲು ಕಪ್ಪೇನು
  203. ಆಶ್ಲೇಷ ಮಳೆ , ಈಸಲಾರದ ಹೊಳೆ.
  204. ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ
  205. ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
  206. ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು.
  207. ಆಸೆ ಮಾತು ಕೊಟ್ಟು ಬಾಸೆ ತಪ್ಪಬಾರ‍್ದು
  208. ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು
  209. ಆಸೆಗೆ ಕೊನೆಯಿಲ್ಲ
  210. ಆಸೆಗೆ ತಕ್ಕ ಪರಿಶ್ರಮ ಬೇಕು.
  211. ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.
  212. ಆಸೆಯಿದ ಅಳಿಯ ಬದ್ರೆ ಮಗಳು ಹೊರಗಾಗಿರೋದೇ?
  213. ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
  214. ಆಸೆಯೇ ಜೀವನ, ಜೀವನವೇ ಆಸೆ.
  215. ಆಸೆಯೇ ದು:ಖಕ್ಕೆ ಮೂಲ
  216. ಆಳ್ ಮೇಲ್ ಆಳ್ ಬಿದ್ದು ಗೋಣು ಬರಿದಾಯ್ತು
  217. ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
  218. ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
  219. ಆಳಾಗಬಲ್ಲವನು ಅರಸಾಗಬಲ್ಲ
  220. ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು
  221. ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು
  222. ಇಂಗು ತೆಂಗು ಇದ್ದರೆ ಮಂಗಮ್ಮನೂ ಅಡಿಗೆ ಮಾಡ್ತಾಳೆ.
  223. ಇಂದಿನ ಸೋಲು ನಾಳಿನ ಗೆಲುವು.
  224. ಇಂಬರಿತು ಕೊಡುವಳೆ ರಂಭೆ
  225. ಇಕ್ಕಟ್ಟಾದರೂ ತನ್ನ ಗುಡಿಲೇ ಚಂದ
  226. ಇಕ್ಕಲಾರದ ಕೈ ಎಂಜಲು
  227. ಇಕ್ಕುವಳು ನಮ್ಮವಳಾದ್ರೆ ಕೊಟ್ಟಿಗೆಯಲ್ಲಾದರೂ ಉಣಲಕ್ಕು
  228. ಇಕ್ಕೇರಿ ತನಕ ಬಳಗ, ಮಾನ ಮುಚ್ಚಲಿಕ್ಕೆ ಅರಿವೆ ಇಲ್ಲ
  229. ಇಚ್ಚೆಯ ಅರಿತು ಕೊಟ್ಟ ನುಚ್ಚೊಂದು ಮಾಣಿಕ್ಯ
  230. ಇಟ್ಟ ವಿಭೂತಿ ಪಟ್ಟದಂತೆ ಇಟ್ಟ ವಿಭೂತಿ ಅಳಿದರೆ ಚಟ್ಟ ಹತ್ತಿದಂತೆ
  231. ಇಟ್ಟ ಶಾಪ ಕೊಟ್ಟವನಿಗೆ ತಟ್ಟೀತು
  232. ಇಟ್ಟುಕೊಂಡಾಕಿ ಇರೂತನ ಕಟ್ಟಿಕೊಂಡಾಕಿ ಕಡೀತನ
  233. ಇಡಿಯ ಮುಳುಗಿದವನಿಗೆ ಚಳಿಯೇನು?ಮಳೆಯೇನು?
  234. ಇಡೀ ಮುಳುಗಿದರೂ ಮೂಗು ಮೇಲೆ
  235. ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
  236. ಇತ್ತಿತ್ತ ಬಾ ಅಂದ್ರೆ ಇದ್ದ ಮನೇನೂ ಕಿತ್ತುಕೊಂಡ
  237. ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
  238. ಇದ್ದ ಊರ ಸುದ್ದಿ ಇದ್ದಲ್ಲಿ ತೆಗೆಯ ಬಾರದು, ಬೇವೂರ ಸುದ್ದಿ ಹೋದಲ್ಲಿ ತೆಗೆಯ ಬಾರದು
  239. ಇದ್ದ ಕಾಲದಲ್ಲಿ ಅಟ್ಟುಣ್ಣ ಬೇಕು
  240. ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋ ದೇವರೇ ಅಂದಂತೆ
  241. ಇದ್ದದ್ದು ಇದ್ದ ಹಾಗೆ ಹೇಳಿದ್ರೆ, ಎದ್ದು ಬಂದು ಎದೆಗೆ ಒದ್ದನಂತೆ
  242. ಇದ್ದದ್ದು ಹೇಳಿದರೆ ಹದ್ದಿನಂತ ಮೋರೆ ಆಯಿತು
  243. ಇದ್ದದ್ದು ಹೋಯಿತು ಮದ್ದಿನ ಗುಣದಿಂದ
  244. ಇದ್ದಲ್ಲಿ ಗವುಡ ಹೋದಲ್ಲಿ ಕಿವುಡ
  245. ಇದ್ದವರು ಇದ್ದಹಾಗೆ ಸಿದ್ಧಾ ದೇವಿಗೆ ಸಿಡಿಲು ಬಡೀತು
  246. ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ.
  247. ಇದ್ದಾಗ ಹಿರಿಯಣ್ಣ ಇಲ್ಲದಾಗ ತಿರಿಯಣ್ಣ
  248. ಇದ್ದುದ ಉಣ್ಣದವನ ಬಾಯಾಗೆ ಕಡೆಗೆ ಮಣ್ಣು ಬಿತ್ತು
  249. ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?
  250. ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
  251. ಇಬ್ಬರ ಜಗಳ ಮೂರನೆಯವನಿಗೆ ಲಾಭ
  252. ಇಬ್ಬರ ನ್ಯಾಯ, ಮೂರನೇಯವನಿಗೆ ಆದಾಯ
  253. ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
  254. ಇಮ್ಮನದಿಂದ ಸುಮ್ಮನೆ ಕೆಟ್ಟೆ (ಕೇಡು)
  255. ಇರಲಾರದೆ ಇರುವೆ ಬಿಟ್ಟುಕೊಂಡು ಕಿರುಗೂರಿಗೆ ಹೋದರಂತೆ ಕಣಿ ಕೇಳುವುದಕ್ಕೆ
  256. ಇರುವೆಗೆ ಇರುವೆ ಮೈ ಭಾರ,ಆನೆಗೆ ಆನೆ ಮೈ ಭಾರ
  257. ಇರುಳು ಕಂಡ ಭಾವೀಲಿ ಹಗಲು ಬಿದ್ದರು
  258. ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
  259. ಇಲಿ ಬಂತು ಎಂದರೆ ಹುಲಿ ಬಂತು ಎಂದರು
  260. ಇಲಿ ಬೇಟೆಗೆ ತಮಟೆ ಬಡಿದಂಗೆ.
  261. ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
  262. ಇಲಿ ಹೆಚ್ಚಿದವೆಂದು, ಮನೆಗೆ ಉರಿ ಇಡ ಬಾರದು
  263. ಇಲಿಯ ವ್ಯಾಜ್ಯಕ್ಕೆ ಬೆಕ್ಕು ಸಾಕ್ಷಿ
  264. ಇಲಿಯಾಗಿ ನೂರುದಿನ ಬಾಳೋದಕ್ಕಿಂತ ಹುಲಿಯಾಗಿ ಮೂರು ದಿನ ಬಾಳೋದು ಲೇಸು
  265. ಇಲ್ಲದ ಕಾಲಕ್ಕೆ ಕಲ್ಲೆದೆ ಬೇಕು
  266. ಇಲ್ಲದ ಬದುಕು ಮಾಡಿ ಇಲಿಗೆ ಚಣ್ಣ ಹೊಲಿಸಿದರು
  267. ಇಲ್ಲು ಪೋಗಂಡ ಅಲ್ಲು ಪೋಗಂಡ
  268. ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ,ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
  269. ಈಚಲ ಮರದ ಕೆಲಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ
  270. ಈರಣ್ಣನ ಮುಂದೆ ಬಸ್ಸಣ್ಣ ಕುಂತಂತೆ
  271. ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.
  272. ಈಸಿ ನೋಡು , ಇದ್ದು ಜೈಸಿ ನೋಡು
  273. ಉಚ್ಚೆ ಕುಡಿದರೂ ತನ್ನಿಚ್ಚೇಲಿರಬೇಕು
  274. ಉಂಡ ಮನೆ ಜಂತೆ ಎಣಿಸಬಾರದು
  275. ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ
  276. ಉಂಡದ್ದೇ ಉಗಾದಿ , ಮಿಂದದ್ದೇ ದೀವಳಿಗೆ , ಹೊಟ್ಟೆಗಿಲ್ಲದ್ದೇ ಏಕಾದಶಿ.
  277. ಉಂಡರೆ ಉಬ್ಬಸ, ಹಸಿದರೆ ಸಂಕಟ .
  278. ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
  279. ಉಂಡೂ ಹೋದ; ಕೊಂಡೂ ಹೋದ
  280. ಉಂಬಾಗ ಉಡುವಾಗ ಊರೆಲ್ಲ ನೆಂಟರು
  281. ಉಂಬುವ ಜಂಗಮ ಬಂದರೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನ ಹಿಡಿಯೆಂಬರು
  282. ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ
  283. ಉಕ್ಕಿದರೆ ಸಾರಲ್ಲ ; ಸೊಕ್ಕಿದರೆ ಹೆಣ್ಣಲ್ಲ.
  284. ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
  285. ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ
  286. ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
  287. ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.
  288. ಉಟ್ಟರೆ ತೊಟ್ಟರೆ ಪುಟ್ಟಕ್ಕ ಚೆನ್ನ
  289. ಉಟ್ಟು ಉಡಲಾರ ಕೊಟ್ಟು ಸೈರಿಸಲಾರ
  290. ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ
  291. ಉಣಬೇಕು- ಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
  292. ಉಣವಲ್ಲ ಉಡವಲ್ಲದವನ ಒಡವೆ ಕಂಡವರ ಪಾಲಾಯ್ತು
  293. ಉಣ್ಣು ಬಾ ಅಂದ್ರೆ,ಇರಿ ಬಾ ಅಂದ್ರಂತೆ
  294. ಉಣ್ಣುವಾಗ ಎರಡು ತುತ್ತು ಕಡಿಮೆ ಉಣ್ಣು.
  295. ಉಣ್ಣೋಕಿಲ್ಲದಿದ್ದರೂ ಸಣ್ಣಕ್ಕಿ ಅನ್ನ ತಿಂದರು ; ಉಡೋಕಿಲ್ಲದಿದ್ದರೂ ಪಟ್ಟೆ ಸೀರೆ ಉಟ್ಟರು
  296. ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ
  297. ಉತ್ತಮನು ಎತ್ತ ಹೋದರೂ ಶುಭವೇ
  298. ಉತ್ತಮವಾದ ನಗು ನೇಸರನ ಮಗು.
  299. ಉತ್ತರನ ಪೌರುಷ ಒಲೆ ಮುಂದೆ;ನಿನ್ನ ಪೌರುಷ ನನ್ನ ಮುಂದೆ
  300. ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
  301. ಉತ್ತರೆ ಹೊಲ ಚಂದ ಬಿತ್ತರೆ ಬೆಳೆ ಚಂದ
  302. ಉತ್ತುಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು
  303. ಉದ್ದರಿ ಕೊಟ್ಟು ಸೆಟ್ಟಿ ಕೆಟ್ಟ, ಕಡ ಸಿಕ್ಕು ಬಡವ ಕೆಟ್ಟ.
  304. ಉದ್ದುದ್ದ ಮಾತಿನವರ ಮೊಳಕೈ ಮೊಂಡ.
  305. ಉದ್ಯೋಗವೇ ಗಂಡಸಿಗೆ ಲಕ್ಷಣ
  306. ಉಪಕಾರಕ್ಕೋಗಿ ಉಪದ್ರ ಬಂತು
  307. ಉಪವಾಸ ಇರಬಹುದು , ಉಪದ್ರವ ತಾಳಲಾರದು.
  308. ಉಪಾಸ ಇದ್ರೂ ಉಪದ್ರ ಇರಬಾರ‍್ದು
  309. ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೆಕು
  310. ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ
  311. ಉಪ್ಪು ತಿಂದ ಮನೆಗೆ ಎರಡು ಬಗೆಯ ಬಂದ
  312. ಉಪ್ಪು ಹಪ್ಪಳಕ್ಕೆ ಊರಿತು ; ಸಂಡಿಗೆಗೆ ಏರಿತು.
  313. ಉರಗಕ್ಕೆ ಹಾಲೆರೆದರೆ ಅದು ತನ್ನ ಗರಳ್ವ ಬಿಡಬಲ್ಲುದೇ
  314. ಉರವಣಿಸಿ ಬರೋ ದುಃಖಕ್ಕೆ ಪರಿಣಾಮ ವೈರಿ
  315. ಉರಿಯೋ ಗಾಯಕ್ಕೆ ಉಪ್ಪು ಸವರಿದಂತೆ
  316. ಉರಿಯೋ ಬೆಂಕಿಗೆ ತುಪ್ಪ ಸುರಿದ ಹಾಗೆ
  317. ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ
  318. ಉರುಳುವ ಕಲ್ಲಿಗೆ ಏನೂ ಅಂಟುವುದಿಲ್ಲ.
  319. ಉಸ್ ಎಂದರೆ ಉಸಳಿ ಬೇಡಿದ್ದನಂತೆ
  320. ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
  321. ಉಳೋ ಎತ್ತಾದರೆ ಇರೋ ಊರಿನಲ್ಲಿ ಬೆಲೆಯಾಗದೇ.
  322. ಊಟ ತನ್ನಿಚ್ಚೆ, ನೋಟ ಪರರಿಚ್ಚೆ
  323. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ
  324. ಊಟಕ್ಕಿಲ್ಲದ ಉಪ್ಪಿನಕಾಯಿ ಶಾಟಕ್ಕೆ ಸಮಾನ
  325. ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.
  326. ಊಟಕ್ಕೇಳೋ ಗುಂಡ ಅದ್ರೆ ಯಾವಕ್ಕಿ ಬೇಯಿಸಿದ್ದೀ ಅದ.
  327. ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
  328. ಊಟವೆಂದರೆ ಊರು ಬಿಟ್ಟುಹೋದಂತೆ.
  329. ಊಡದ ಆವಿಗೆ ಉಣ್ಣದ ಕರುವ ಬಿಟ್ಟಂತೆ
  330. ಊರ ದನ ಕಾದು ದೊಡ್ಡ ಬೋರೇಗೌಡ ಅನ್ನಿಸಿಕೊಂಡ
  331. ಊರಿಗಾಗದ ಗೌಡ, ಮೇಲೆರಗುವ ಗಿಡುಗ
  332. ಊರಿಗೆ ಅರಸನದರೂ ತಂದೆ ತಾಯಿಗೆ ಮಗನೇ.
  333. ಊರಿಗೆ ಉಪಕಾರಿ, ಮನೆಗೆ ಮಾರಿ
  334. ಊರಿಗೆ ಊರ ಚಿಂತೆಯಾದರೆ ಅಜ್ಜಿಗೆ ಅರಿವೆ ಚಿಂತೆಯತೆ
  335. ಊರಿಗೆ ದಾರೀಯ ಯಾರು ತೋರಿದರೇನು
  336. ಊರಿಗೆ ದೊರೆ ಆದರೂ ತಾಯಿಗೆ ಮಗನೆ.
  337. ಊರಿಗೆ ಬಂದವಳು ನೀರಿಗೆ ಬರದೆ ಇರುತ್ತಾಳೆಯೆ?
  338. ಊರಿಗೆಲ್ಲಾ ಒಬ್ಬಳೇ ಪದ್ಮಾವತಿ
  339. ಊರಿಗೊಂದು ದಾರಿಯಾದ್ರೆ,ಎಡವಟ್ಟಂಗೆ ಅವನದ್ದೇ ದಾರಿ
  340. ಊರು ಅಂದ ಮೇಲೆ ಹೊಲಗೇರಿ ಇಲ್ಲದೆ ಇರುತ್ತದೆಯೇ?
  341. ಊರು ದೂರಾಯಿತು ಕಾಡು ಹತ್ತರಾಯಿತು
  342. ಊರು ನೋಡಿ ಬಾ ಅಂದರೆ ತೋರಣ ಕಟ್ಟಿ ಬಂದ.
  343. ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು
  344. ಊರು ಸುಟ್ಟರೂ ಹನುಮಂತರಾಯ ಹೊರಗೆ
  345. ಊರು ಸೂರೆ ಹೋದ ಮೇಲೆ ಕೋಟೆ ಬಾಗಿಲು ಹಾಕಿದರಂತೆ
  346. ಊರು ಹೋಗು ಅನ್ನುತ್ತೆ; ಕಾಡು ಬಾ ಅನ್ನುತ್ತೆ
  347. ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
  348. ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
  349. ಎಂಜಲ ತಿಂದರೂ ಅಂಜದೆ ತಿನ್ನು
  350. ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
  351. ಎಂಟು ವರ್ಷಕ್ಕೆ ನನ್ನ ಮಗ ದಂಟಾದ
  352. ಎಂಟು ಹೊನ್ನು ಘನವಾದ ನಂಟು ತಂತು
  353. ಎಂಥೆಂಥ ದೇವರಿಗೇ ಅಂತರಾಟ ಆಗಿರುವಾಗ ಕಾಲ್ಮುರುಕ ದೇವರಿಗೆ ಕೈಲಾಸವೇ
  354. ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
  355. ಎಟ್ಟ್ (ಹಟಮಾರಿ) ಗಂಡಗೆ ಖೊಟ್ಟಿ ಹೆಂಡತಿ
  356. ಎಡಗಣ್ಣು ಹೊಡೆದರೆ ನಾರಿಗೆ ಶುಭ.
  357. ಎಡದ ನೆತ್ತಿಗೆ ಬಡಿದರೆ ಬಲದ ನೆತ್ತಿಗೆ ತಾಕಿತು
  358. ಎಡವಿದ ಕಾಲೇ ಎಡವುದು ಹೆಚ್ಚು.
  359. ಎಣ್ಣೆ ಚೆಲ್ಲಿದವನೂ ಅತ್ತ, ಕಾಯಿ ಚೆಲ್ಲಿದವನೂ ಅತ್ತ.
  360. ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
  361. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
  362. ಎಣ್ಣೆ ಬರುವಾಗ ಗಾಣ ಮುರೀತು.
  363. ಎತ್ತ ಹೋದರೂ ಬಿಡದು ಒತ್ತಿ ಕಾಡುವ ವಿಧಿ
  364. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
  365. ಎತ್ತು ಈಯಿತು ಅಂದರೆ ಕೊಟ್ಟಿಗೆಗೆ ಕಟ್ಟು ಅಂದರಂತೆ
  366. ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
  367. ಎತ್ತು ಚಲೋದಾದರೆ ಇದ್ದ ಊರಲ್ಲೇ ಗಿರಾಕಿ.
  368. ಎತ್ತು ಮಾರಿದವಗೆ ಹಗ್ಗದ ಆಸೆಯೇ
  369. ಎತ್ತು ಹೊರಬಲ್ಲ ಭಾರವನ್ನು ಕರು ಹೊರಬಲ್ಲುದೆ ?
  370. ಎತ್ತೂ ಕೋಣಕ್ಕೆ ಎರಡು ಕೋಡು, ನಮ್ಮ ಅಯ್ಯಂಗಾರ್ಗೆ ಮೂರು ಕೋಡು
  371. ಎದೆ ಸೀಳಿದ್ರೆ ಮೂರಕ್ಷರಾನೂ ಇಲ್ಲ
  372. ಎದ್ದರೆ ಆಳಲ್ಲ
  373. ಎದ್ದವನು ಗೆದ್ದಾನು
  374. ಎದ್ದೋಗೋ ಮಾತು ಬಿದ್ದೋಗಲಿ
  375. ಎರಡು ದಾಸರ ನಂಬಿ ಕುರುಡು ದಾಸ ಕೆಟ್ಟ
  376. ಎರಡೂ ಕೈ ಸೇರಿದರೆ ಚಪ್ಪಾಳೆ
  377. ಎರವಿನವರು ಎರವು ಕಸಗೊಂಡರೆ ಕೆರವಿನಂತಾಯಿತು ಮೋರೆ
  378. ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
  379. ಎಲೆ ಎತ್ತೋ ಜಾಣ ಅಂದರೆ ಉಂಡೋರೆಷ್ಟು ಮಂದಿ ಅಂದನಂತೆ
  380. ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
  381. ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
  382. ಎಲ್ಲಮ್ಮನ ಗುಡ್ಡದಾಗ ಮುಲ್ಲಾಂದೇನು
  383. ಎಲ್ಲರ ಮನೆಯ ದೋಸೆಯೂ ತೂತೆ !
  384. ಎಲ್ಲರ ಹಲ್ಲೊಳಗೆ ನುರಿದು ಹೋಗೋದಕ್ಕಿಂತ ಒಣಗಿದ ಹುಲ್ಲೊಳಗೆ ಉರಿದು ಹೋಗೋದು ವಾಸಿ
  385. ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
  386. ಎಲ್ಲರು ಆಸೆ ಬಿಟ್ಟರೆ ಇಲ್ಲಿಯೇ ಕೈಲಾಸ, ಎಲ್ಲವ ಬಯಸಿ ಭ್ರಮಿಸಿದರೆ ಇಲ್ಲಿಯೇ ನರಕ
  387. ಎಲ್ಲರೂ ನಗ್ತಾರೆ ಅಥ ಕಿವುಡ ತಾನೂ ನಕ್ಕ.
  388. ಎಲ್ಲರೂ ಪಾಲಕೀಲಿ ಕೂತರೆ ಹೊರೋರು ಯಾರು
  389. ಎಲ್ಲವೂ ತಾನಗ ಬಲ್ಲರೆ ಅದುವೇ ಯೋಗ
  390. ಎಲ್ಲಾ ಜಾಣ; ತುಸ ಕೋಣ
  391. ಎಲ್ಲಾ ಬಣ್ಣ ಮಸಿ ನುಂಗಿತು
  392. ಎಲ್ಲಾ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
  393. ಎಳ್ಳಿನಲ್ಲಿ ಎಣ್ಣೆ ಅಡಕ ಹಾಲಿನಲ್ಲಿ ಬೆಣ್ಣೆ ಅಡಕ
  394. ಏಕಾದಶಿಯ ಮನೆಗೆ ಶಿವರಾತ್ರಿ ಬಂದ ಹಾಗೆ
  395. ಏತಿ ಅಂದರೆ ಪ್ರೇತಿ ಅಂದಂತೆ
  396. ಏನಾದರೂ ಆಗು ಮೊದಲು ಮಾನವನಾಗು.
  397. ಏನಾದರೇನು ತಾನು ತಾನಾಗದ ವರೆಗೆ
  398. ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
  399. ಏನೂ ಇಲ್ಲದವಗೆ ಭಯವಿಲ್ಲ
  400. ಏರಿ ಮ್ಯಾಗಿನ ಪಂಜು ನೀರೊಳಗೆ ಉರಿಯಿತು
  401. ಏರಿದವ ಇಳಿದಾನು
  402. ಏಳರಲ್ಲಿ ಬರಲೋ? ಎಪ್ಪತ್ತರಲ್ಲಿ ಬರಲೋ?
  403. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ
  404. ಐದು ಬೆರಳೂ ಒಂದೇ ಸಮ ಇರೋಲ್ಲ
  405. ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
  406. ಒಂದಕ್ಕೆರಡು ದಂಡ,ಹೆಂಡಕ್ಕೆ ರಾಗಿ ದಂಡ
  407. ಒಂದರ ಮೊದಲೊಳಗೆ ಬಂದಿದೆ ಜಗವೆಲ್ಲ
  408. ಒಂದು ಒಳ್ಳೇ ಮಾತಿಗೆ ಸುಳ್ಳೇ ಪ್ರಧಾನ
  409. ಒಂದು ಕಣ್ಣಿಗೆ ಬೆಣ್ಣೆ; ಮತ್ತೊಂದು ಕಣ್ಣಿಗೆ ಸುಣ್ಣ
  410. ಒಂದು ದುಡ್ಡು ಕೊಡುವೆ ಹಾಡು ದಾಸಯ್ಯ ಎರಡು ದುಡ್ಡು ಕೊಡುವೆ ಬಿಡು ದಾಸಯ್ಯ
  411. ಒಂದು ಬಿಟ್ಟು ಇನ್ನೊಂದು ಕಟ್ಕೊಂಡ್ರಂತೆ
  412. ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವನ ಎತ್ತುಕೊಂಡು ಹೋಗಿ
  413. ಒಂದೊಂದು ಕಾಲಕ್ಕೆ ಒಂದೊಂದು ಪರಿ
  414. ಒಂದೊಂದು ಹನಿ ಬಿದ್ದು ನಿಂತಲ್ಲಿ ಮಡುವಾಯ್ತು
  415. ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
  416. ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ
  417. ಒಕ್ಕುವುದು ರೈತನ ಗುಣ ನೆಕ್ಕುವುದು ನಾಯಿಯ ಗುಣ
  418. ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
  419. ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?
  420. ಒಡೆದ ಹಾಲು ಹೆಪ್ಪಿಗೆ ಬಂದೀತೇ
  421. ಒಡೆಯನಿಗೆ ಹಾಲಿಲ್ಲವೆದು ಎಮ್ಮೆ ಈಯುತ್ಯೇ?
  422. ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು.
  423. ಒನಕೆ ಮುಂಡು ಚಿಗುರಿದಂತೆ
  424. ಒಪ್ಪದಾ ಮಾತಾಡಿ ಕೋಪಕ್ಕೆ ತುತ್ತಾದ
  425. ಒಪ್ಪವಿಲ್ಲದ ಮಾತು ತುಪ್ಪವಿಲ್ಲದ ಊಟ
  426. ಒಪ್ಪವಿಲ್ಲದವಳ ನಗೆ ನುಡಿ ನೋಟ ಎಂದೂ ಸಪ್ಪಗೆ
  427. ಒಪ್ಪೊತ್ತು ಕೂಳು ತಪ್ಪಿ ಕಣ್ಣು ಕಾಣಾಕ್ಕಿಲ್ಲ ಕಿವಿ ಕೇಳಾಕ್ಕಿಲ್ಲ
  428. ಒಬ್ಬನ ಗಡ್ಡಕ್ಕೆ ಬೆಂಕಿ ಹತ್ತಿದಾಗ, ಮತ್ತೊಬ್ಬ ಕೈ ಕಾಯಿಸಿದ.
  429. ಒಬ್ಬರ ಕೂಳು ಇನ್ನೊಬ್ಬರ ಕುತ್ತು.
  430. ಒಲಿದರೆ ನಾರಿ ಮುನಿದರೆ ಮಾರಿ
  431. ಒಲುಮೆಗೆ ನೋಟಬೇಟವೇ ಮೊದಲು
  432. ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.
  433. ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು
  434. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು
  435. ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
  436. ಒಳ್ಳಿಹ ಬಳ್ಳಿ ಕಳ್ಳಿಯ ಹಬ್ಬಿತು
  437. ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
  438. ಒಳ್ಳೇ ರಸವಳ್ಳಿ ಕಳ್ಳೀಗಿಡವನ್ನ ಹಬ್ಬಿತು
  439. ಒಳ್ಳೇರ ಒಡನಿದ್ದು ಕಳ್ಳ ಒಳ್ಳೇನಾದ
  440. ಒಳ್ಳೊಳ್ಳೆಯವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳಂತೆ
  441. ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
  442. ಓಡಿ ಹೋಗೋ ಬಡ್ಡಿ ಹಾಲು ಹೆಪ್ಪಿಟ್ಟಾಳೆ?
  443. ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
  444. ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
  445. ಓತಿಕ್ಯಾತಕ್ಕೆ ಬೇಲಿ ಗೂಟ ಸಾಕ್ಷಿ
  446. ಓದಿ ಓದಿ ಮರುಳಾದ ಕೂಚು ಭಟ್ಟ
  447. ಓದಿ ಬರೆಯೋ ಕಾಲದಲ್ಲಿ ಆಡಿ ಮಣ್ಣು ಹುಯ್ಕೊಂಡರು
  448. ಓದಿದ ಓದೆಲ್ಲ ಮೇದ ಕಬ್ಬಿನ ಹಿಪ್ಪೆ, ಓದಿದರ ಅರಿವು ಮೇದ ಕಬ್ಬಿನ ರಸ
  449. ಓದುವಾಗ ಓದು; ಆಡುವಾಗ ಆಡು
  450. ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ
  451. ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು
  452. ಕಂಕುಳಲ್ಲಿ ದೊಣ್ಣೆ; ಕೈಯಲ್ಲಿ ಶರಣಾರ್ಥಿ
  453. ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲ ಹುಡುಕಿದರಂತೆ
  454. ಕಂಗಾಲನ ಮನೀಗೆ ಕಂಗಾಲ ಹೋದರೆ ಗಂಗಾಳ ನೆಕ್ಕು ಅಂತಂತೆ
  455. ಕಂಗಾಲಾದರೂ ಹಂಗಾಳಾಗಬಾರದು
  456. ಕಂಚು ಕಡೆಯಲ್ಲ, ಹಂಚು ದ್ರವ್ಯವಲ್ಲ.
  457. ಕಂಡ ಕಳ್ಳ ಜೀವ ಸಹಿತ ಬಿಡ
  458. ಕಂಡ ಮನೆಗೆ ಕಳ್ಳ ಬಂದ , ಉಂಡ ಮನೆಗೆ ನೆಂಟ ಬಂದ
  459. ಕಂಡದ್ದನ್ನು ಕಂಡಹಾಗೆ ಹೇಳಿದರೆ ಕೆಂಡದಂಥಾ ಕೋಪವಂತೆ
  460. ಕಂಡದ್ದು ಕಾಣೆ ಉತ್ತಮ ಕಂಡದ್ದು ಕಂಡೆ ಮಧ್ಯಮ, ಕಾಣದ್ದು ಕಂಡೆ ಅಧಮ
  461. ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು
  462. ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು
  463. ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ
  464. ಕಂಡೋರ ಆಸ್ತಿಗೆ ನೀನೇ ಧಣಿ
  465. ಕಂಡೋರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ
  466. ಕಂಡೋರ ಮನೆ ರೊಟ್ಟಿಗೆ ಗಿಣ್ಣು ಹಾಲು ಕಾಯಿಸಿದರಂತೆ
  467. ಕಂತೆಗೆ ತಕ್ಕ ಬೊಂತೆ
  468. ಕಚ್ಚೋ ನಾಯಿ ಬೊಗಳುವುದಿಲ್ಲ
  469. ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.
  470. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ
  471. ಕಟ್ಟಲಿಲ್ಲ ಬಿಚ್ಚಲಿಲ್ಲ ಹಿಡಿಕೊಳ್ಳೋಕೆ ಹೊತ್ತಾಯ್ತು ಅದಳು.
  472. ಕಟ್ಟಿಕೊಂಡವಳು ಕಡೇ ತನಕ; ಇಟ್ಟುಕೊಂಡವಳು ಇರೋ ತನಕ
  473. ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ, ಹುಟ್ಟಿದ ಮನೆಗೆ ಬೇರೆ(ಪಾಲಗುವುದು) ತಪ್ಪಲ್ಲ
  474. ಕಟ್ಟಿದ ಗೂಟ , ಹಾಕಿದ ಹಲ್ಲು.
  475. ಕಡಗ ನೋಡಲಿ ಅತ ಗುಡಿಸಲು ಸುಟ್ಕೊಡ ಹಾಗೆ.
  476. ಕಡಲಲ್ಲಿ ಪುಟಿದ ತೆರೆ ಕಡಲಲ್ಲೇ ಕರಗಿ ಹೋಯ್ತು
  477. ಕಡಲೆ ತಿಂದು ಕೈತೊಳೆದ ಹಾಗೆ.
  478. ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
  479. ಕಡವರ ಮನೇಲಿ ನೋಡು ನನ್ನ ಕೈ ಧಾರಾಳವ!
  480. ಕಡು ಕೋಪ ಬಂದಾಗ ತಡಕೊಂಡವನೇ ಜಾಣ
  481. ಕಡ್ಡೀನ ಗುಡ್ಡ ಮಾಡು.
  482. ಕಣ ಕಾಯಬಹುದು, ಹೆಣ ಕಾಯಾಕೆ (ಬೇಸರದಿಂದ ಹೊತ್ತು ಕಳೆಯಲಿಕ್ಕೆ) ಆಗೊದಿಲ್ಲ
  483. ಕಣ್ಣರಿಯದಿದ್ದರೂ ಕರುಳರಿಯುತ್ತದೆ
  484. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು
  485. ಕಣ್ಣಿಗೂ ಮೂಗಿಗೂ ಮೂರು ಗಾವುದ.
  486. ಕಣ್ಣಿಗೆ ಒಪ್ಪವಿಲ್ಲದ ಹೆಣ್ಣು ಸಪ್ಪಗೆ ಕಂಡಳು
  487. ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
  488. ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ
  489. ಕಣ್ಣು ಕುರುಡಾದರೆ ಬಾಯಿ ಕುರುಡೇ
  490. ಕಣ್ಣೆರಡಾದರೂ ನೋಟ ಒಂದೇ
  491. ಕತೆ ಹೇಳೋಕೆ ಹ್ಞುಂ-ಗುಟ್ಟೋರಿರಬೇಕು, ನೆಟ್ಟಗೆ ಬಾಳೋಕೆ ಛೀ-ಗುಟ್ಟೋರಿರಬೇಕು
  492. ಕತ್ತಿ ಬಂಗಾರದ್ದಾಗಿದೆಯೆಂದು ಕತ್ತು ಕೊಯ್ದುಕೊಳ್ಳಲು ಸಾಧ್ಯವೇ?
  493. ಕತ್ತಿ ವೈರಿ ಕೈಯಲ್ ಕೊಟ್ಟು ಬೆನ್ನ ಮಾಡಿ ನಿಂತನಂತೆ
  494. ಕತ್ತೆ ತಪ್ಪಿಸಿಕೊಡರೆ ಹುಡುಕುತಾರ‍್ಯೇ?
  495. ಕತ್ತೆಗೆ ತಿಪ್ಪೆಯೇ ತವರುಮನೆ.
  496. ಕತ್ತೆಗೆ ಯಾಕೆ ಹತ್ತಿಕಾಳು?
  497. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ.
  498. ಕತ್ತೆಯ ಕಾಲು ಮುರಿದರೇನು ? ನಾಯಿಯ ಹಲ್ಲು ಮುರಿದರೇನು?
  499. ಕತ್ತೆಯ ಹಿಂದೆ ಹೋಳಿಹುಣ್ಣಿಮೆಯಲ್ಲಿ ಮಾತ್ರ ಹೋಗು.
  500. ಕತ್ತೆಯಂಥ ಅತ್ತೆ ಬೇಕು ಮುತ್ತಿನಂಥ ಗಂಡ ಬೇಕು
  501. ಕತ್ತೆಯಾಗಬೇಡ ಕಾಗೆಯಾಗು.
  502. ಕದ ತಿನ್ನೋವನಿಗೆ ಹಪ್ಪಳ ಈಡಲ್ಲ
  503. ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ.
  504. ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ
  505. ಕನಿಗೇಡಿಗೆ(ಸ್ವಾರ್ಥಿಗೆ) ಗತಿ ಇಲ್ಲ
  506. ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?
  507. ಕಪ್ಪರ ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ
  508. ಕಪ್ಪೆ ತಕ್ಕಡೀಲಿ ಹಾಕಿದ ಹಾಗೆ
  509. ಕಬ್ಬಿಣ ಕಾದಿರುವಾಗಲೇ ಬಡಿಯಬೇಕು
  510. ಕಬ್ಬು ಡೊಂಕಾದರೆ ಸಿಹಿ ಡೊಂಕೆ ?
  511. ಕಬ್ಬು ಡೊಂಕಾದ್ರೆ ಸವಿ ಡೊಂಕೇ
  512. ಕಯ್ಯಾರೆ ಮಾಡುವ ಧರ್ಮ ಲೇಸು
  513. ಕರಣಗಳ ತಡೆದು ನಿಲಬಾರದು
  514. ಕರುಬಿದವರ ಮನೆ ಬರಿಮನೆ
  515. ಕರೆದು ಹೆಣ್ಣು ಕೊಟ್ಟರೆ ಮಲ್ಲೋಗರ ಬಂತಂತೆ.
  516. ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
  517. ಕರೆಯದವರ ಮನೆಗೆ ಕಳಸಗಿತ್ತಿಯಾಗು
  518. ಕರ್ಪೂರವ ತಿಪ್ಪೇಲಿಟ್ರೂ ತನ್ನ ಸುವಾಸನೆ ಬಿಡದು.
  519. ಕರ್ಮ ಕಳೆಯುವವರೆಗೆ ಮರ್ಮದಲ್ಲಿರು
  520. ಕಲಹವೇ ಕೇಡಿಗೆ ಮೂಲ.
  521. ಕಲಿತವನಿಗಿಂತ ನುರಿತವನೇ ಮೇಲು.
  522. ಕಲ್ತ ಕೈ ಕದ್ದಲ್ಲದೆ ಬಿಡದು
  523. ಕಲ್ಲ ನಾಗರ ಕಂದರೆ ಹಾಲೆರೆವರು ದಿಟ ನಾಗರ ಕಂಡರೆ ಕೊಲ್ಲೆಂಬರು
  524. ಕಲ್ಲಾದರು ಕರಗಬಹುದು, ಕಪಟಿಯ ಮನಸ್ಸು ಕರಗದು.
  525. ಕಲ್ಲಿನಲ್ಲಿ ಕಳೆಯ ನಿಲ್ಲಿಸಿದ ಗುರುವಿನ ಸೊಲ್ಲಿನಲ್ಲೇ ದೈವ
  526. ಕಲ್ಲು ಇದ್ದಾಗ ನಾಯಿ ಇಲ್ಲ ನಾಯಿ ಇದ್ದಾಗ ಕಲ್ಲು ಇಲ್ಲ
  527. ಕಷ್ಟ ಪಟ್ಟರೆ ಫಲವುಂಟು
  528. ಕಷ್ಟಗಳು ಹೇಳದೆ ಕೇಳದೆ ಬರೋ ನೆಂಟರ ಹಾಗೆ.
  529. ಕಷ್ಟದಂತೆ ಫಲ, ಮನದಂತೆ ಮಹಾದೇವ.
  530. ಕಸದಲ್ಲಿ ಮಲಗಿ ಅರಮನೆ ಕನಸು ಕಂಡಂತೆ.
  531. ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
  532. ಕಳೆದ ದಿನಗಳು ಬರೆದ ಪುಟಗಳಂತೆ.
  533. ಕಳೆದುಕೊಂಡ ವಸ್ತುವನ್ನು ಕಳೆದುಹೋದ ಜಾಗದಲ್ಲೇ ಹುಡುಕು
  534. ಕಳ್ಳ ಹೊಕ್ಕ ಮನೆಗೆ ಎಣ್ಣೆ ದಂಡ.
  535. ಕಳ್ಳನ ಕಾವಲಿಟ್ಟ ಹಾಗೆ
  536. ಕಳ್ಳನ ಕೈಯಲ್ಲಿ ಕೀಲಿಕೈ ಕೊಟ್ಟಂತೆ
  537. ಕಳ್ಳನ ನಂಬಿದರೂ ಕುಳ್ಳನ್ನ ನಂಬಬೇಡ
  538. ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ
  539. ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ
  540. ಕಳ್ಳನ ಹೆಜ್ಜೆ ಕಳ್ಳನೇ ಬಲ್ಲ
  541. ಕಳ್ಳನಿಗೊಂದು ಪಿಳ್ಳೆ ನೆವ
  542. ಕಳ್ಳನ್ನ ನಂಬಿದ್ರೂ ಕುಳ್ಳನ್ನ ನಂಬಬಾರದು
  543. ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
  544. ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
  545. ಕಾಡಿಗೆ ಗಣ್ಣ ಚೆಲುವೆ ಮನೆಗೆ ಕೇಡು ತಂದಳು
  546. ಕಾಡಿಗೆ ಹೋಗೋ ವಯಸ್ಸಿನಲ್ಲಿ ಬ್ರಾಹ್ಮಣ ಓಂ ಕಲಿತ
  547. ಕಾಣದಿರೋ ದೇವರಿಗಿಂತ ಕಾಣೋ ಭೂತಾನೇ ವಾಸಿ
  548. ಕಾಮಾಲೆ ಕಣ್ಣಿನವನಿಗೆ ಲೋಕವೆಲ್ಲಾ ಹಳದಿಯಂತೆ
  549. ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ
  550. ಕಾಯಕವನ್ನು ಸದಾ ಮಾಡು, ಸೋಮಾರಿತನವನ್ನು ಬಿಡು.
  551. ಕಾಯಕವೇ ಕೈಲಾಸ
  552. ಕಾಯಿಲೆ ಬಿದ್ದಾಗಿನ ಅನ್ನ ಎದ್ದಾಗ ತೆಗೆ.
  553. ಕಾರ್ಯವಾಸಿ ಕತ್ತೆ ಕಾಲು ಕಟ್ಟು
  554. ಕಾಲ ತಪ್ಪಿದ ಬಳಿಕ ನೂರು ಮಾಡಿದರು ಹಾಳು
  555. ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
  556. ಕಾಲಿಗೆ ಬಿದ್ದು ಕಾಲುಂಗರ ಉಚ್ಚಿಕೊಂಡರಂತೆ
  557. ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
  558. ಕಾಲಿನದು ಕಾಲಿಗೆ; ತಲೆಯದು ತಲೆಗೆ
  559. ಕಾವಿ ಉಟ್ಟವರೆಲ್ಲಾ ಸನ್ಯಾಸಿಗಳಲ್ಲ ಬೂದಿ ಬಳಿದವರೆಲ್ಲ ಬೈರಾಗಿಗಳಲ್ಲ
  560. ಕಾಸಿಗೆ ತಕ್ಕ ಕಜ್ಜಾಯ.
  561. ಕಾಸಿಗೊಂದು,ಕೊಸರಿಗೆರಡು
  562. ಕಾಸಿದ್ರೆ ಕೈಲಾಸ
  563. ಕಾಸು ಕೊಟ್ಟು ಬ್ರಹ್ಮೇತಿ ತಗೊಂಡರು
  564. ಕಾಸೂ ಹಾಳು ತಲೆಯೂ ಬೋಳು.
  565. ಕಿಡಿ ಇಲ್ಲದೆ ಬೆಂಕಿಯಿಲ್ಲ ;ಕಾರಣ ಇಲ್ಲದೆ ಜಗಳವಿಲ್ಲ
  566. ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
  567. ಕಿಡಿಯಿಂದ ಕಾಡ ಸುಡ ಬಹುದು
  568. ಕೀಟ ಸಣ್ಣದಾದರೂ ಕಾಟ ಬಹಳ.
  569. ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ
  570. ಕೀಲು ಸಣ್ಣದಾದರೂ ಗಾಲಿ ನಡೆಸುತ್ತದೆ
  571. ಕೀಳನ ಕೆಣಕಬೇಡ, ಮೇಗಾಲು ತುರಿಸಬೇಡ.
  572. ಕುಂಟನಿಗೆ ಎಂಟು ಚೇಷ್ಟೆ, ಕುರುಡನಿಗೆ ನಾನಾಚೇಷ್ಟೆ
  573. ಕುಂತು ತಿಂದರೆ, ಕುಡಿಕೆ ಹೊನ್ನೂ ಸಾಲದು
  574. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡ್ಕಂಡನಂತೆ
  575. ಕುಂಬಾರಂಗೆ ವರುಷ; ದೊಣ್ಣೆಗೆ ನಿಮಿಷ
  576. ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
  577. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
  578. ಕುಚ ಹೇಮ ಶಸ್ತ್ರ ಸೋಂಕಿದಾಗ ಶುಚಿ ವೀರ ಧೀರರು ಅಚಲಿತರಾದರು
  579. ಕುಚುಕು ಬುದ್ಧಿ ಹೊಕ್ಕವನು ಕೆಟ್ಟ
  580. ಕುಡಿಗೆ ಕುಂಬಳಕಾಯಿ ಭಾರವೇ?
  581. ಕುಡಿಯೋ ನೀರಿನಲ್ಲಿ ಬೆರಳಾಡಿಸೋ ಬುದ್ಧಿ (ಕುಡಿಯೋ ನೀರಿನಲ್ಲಿ ... ಅದ್ದುವ ಬುದ್ಧಿ)
  582. ಕುಡಿಯೋದು ಅಂಬಲಿ ಮುಕ್ಕಳಿಸೋದು ಪನ್ನೀರು.
  583. ಕುಣಿಯಲಾರದವಳು ನೆಲ ಡೊಂಕು ಅಂದಳಂತೆ
  584. ಕುಣೀಲಾರದ ಸೂಳೆ ನೆಲ ಡೊಂಕು ಅಂದ್ಳಂತೆ
  585. ಕುದಿಯುವ ಎಣ್ಣೆಯಿಂದ ಕಾದ ತವದ ಮೇಲೆ ಬಿದ್ದ ಹಾಗೆ
  586. ಕುದಿಯುವುದರೊಳಗಾಗಿ ಮೂರು ಸಾರಿ ಹಳಸಿದಂತೆ
  587. ಕುದುರೆ ಕಂಡರೆ ಕಾಲುನೋವು
  588. ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
  589. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ
  590. ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ
  591. ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
  592. ಕುರು ಮೇಲೆ ಬರೆ ಎಳೆದ ಹಾಗೆ
  593. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
  594. ಕುರುಡು ಕಣ್ಣಿಗಿಂತ ಮೆಳ್ಳೆ ಗಣ್ಣು ವಾಸಿ
  595. ಕುಲ ಬಿಟ್ಟರೂ ಛಲ ಬಿಡಬೇಡ.
  596. ಕುಲ ಸೋಸಿ ಹೆಣ್ಣು ತಗೊಂಡು ಬಾ ; ಜಲ ಸೋಸಿ ನೀರು ತಗೊಂಡು ಬಾ
  597. ಕುಲಗೇಡಿ ಮಗ ಹುಟ್ಟಿ ಕುಲಕ್ಕೇ ಮಸಿ ಬಳಿದ
  598. ಕೂಟಸ್ಥ ಇಲ್ದೋನ ಓದು ಗಿಳಿ ಕಲ್ತ ಪಾಠದಂತೆ
  599. ಕೂಡಿದ ಗಂಡನನ್ನಾದರೂ ಬಿಟ್ತೇನು ಕಲ್ತದ್ದ ಬಿಡಲಾರೆ
  600. ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು
  601. ಕೂತುಕೊಂಡು ಹೇಳುವವನ ಕೆಲಸ ಊರು ಮಾಡಿದರೂ ಸಾಲದು
  602. ಕೂರೆಗೆ ಹೆದರಿ ಸಂತೆಯಲ್ಲಿ ಸೀರೆ ಬಿಚ್ಚಿದರಂತೆ
  603. ಕೂರೆಗೆ ಹೆದರಿ ಸೀರೆ ಬಿಚ್ಚೆಸೆದರು
  604. ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದರಂತೆ
  605. ಕೂಳಿಗೆ ಕೇಡು ಭೂಮಿಗೆ ಭಾರ
  606. ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
  607. ಕೃಷಿತೋನಾಸ್ತಿ ದುರ್ಭಿಕ್ಷಂ
  608. ಕೆಟ್ಟ ಅಡಿಗೆ ಅಟ್ಟವಳೇ ಜಾಣೆ
  609. ಕೆಟ್ಟ ಕಾಲ ಬಂದಾಗ ಕಟ್ಟಿಕೊಂಡವಳೂ ಕೆಟ್ಟವಳು
  610. ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರಿಯಿತು
  611. ಕೆಟ್ಟ ಮೇಲೆ ಲೊಟ್ಟ
  612. ಕೆಟ್ಟದಲ್ಲದ ಮೇಲೆ ಪಿಸುಗುಟ್ಟೋದು ಯಾಕೆ?
  613. ಕೆಟ್ಟದ್ದನ್ನು ಬಯಸಬೇಡ, ಒಳ್ಳೆಯದನ್ನು ಬಿಡಬೇಡ.
  614. ಕೆಟ್ಟು ಪಟ್ಟಣ ಸೇರು ಇಟ್ಟು ಹಳ್ಳಿ ಸೇರು
  615. ಕೆಟ್ಟು ಬದುಕಬಹುದು ಬದುಕಿ ಕೆಡಬಾರದು
  616. ಕೆಟ್ಟು ಸೈರಿಸಬಲ್ಲೆ ಕೊಟ್ಟು ಸೈರಿಸಲಾರೆ
  617. ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ
  618. ಕೆಡುವವರು ಮನೇಲಿದ್ರು ಕೆಡುತ್ತಾರೆ.
  619. ಕೆತ್ತೆಂದರೆ ಕೆತ್ತು ಮೆತ್ತೆಂದರೆ ಮೆತ್ತು
  620. ಕೆರೆಗೆ ತೊರೆ ಕೂಡಿ ಸರೋವರ ವಾಯ್ತು
  621. ಕೆರೆಯ ನೀರ ಕೆರೆಗೆ ಚೆಲ್ಲಿ ವರ ಪಡೆದುಕೊಂಡಂತೆ
  622. ಕೆಲಸವಿಲ್ಲದ ಆಚಾರಿ ಮಗನ ತಲೆ ಕೆತ್ತಿದನಂತೆ
  623. ಕೆಲಸವಿಲ್ಲದ ಕುಂಬಾರ ಮಕ್ಕಳ ಅಂಡು ತಟ್ಟಿದ
  624. ಕೆಲಸವಿಲ್ಲದ ಬಡಗಿ ಮಗುವಿನ ಅಂಡು ಕೆತ್ತಿದ
  625. ಕೆಲಸವಿಲ್ಲದ ಶಾನುಭೋಗ ಹಳೆ ಲೆಕ್ಕ ನೋಡಿದ ಹಾಗೆ.
  626. ಕೆಲಸಿಲ್ಲದ ಗಂಡು ಕರೀ ಒನಕೆ ತುಂಡು
  627. ಕೇಡು ಬರೋ ಕಾಲಕ್ಕೆ ನಂಟೆಲ್ಲ ಹಗೆಯಾಯ್ತು
  628. ಕೇಡು ಬರೋ ಕಾಲಕ್ಕೆ ಬುದ್ಧಿಗೇಡು
  629. ಕೇಳುವವರ ಮುಂದೆ ಹೇಳುವವರು ದಡ್ಡರು.
  630. ಕೈ ಕೆಸರಾದರೆ ಬಾಯಿ ಮೊಸರು
  631. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಂಡರಂತೆ
  632. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.
  633. ಕೈಗೆಟುಕದ ದ್ರಾಕ್ಷಿ ಹುಳಿ
  634. ಕೈಯಲ್ಲಿ ಶರಣಾರ್ಥಿ, ಕಂಕುಳಲ್ಲಿ ದೊಣ್ಣೆ
  635. ಕೈಯೆತ್ತಿ ಕೊಡಲಿಲ್ಲ ಮೈಯ್ಯ ದಂಡಿಸಲಿಲ್ಲ ಪುಣ್ಯದ ಪಾಲು ನನಗಿರಲಿ ಅಂದ
  636. ಕೈಯ್ಯಲ್ಲೆ ಬೆಣ್ಣೆ ಇಟ್ಟುಕೊಂಡು,ತುಪ್ಪಕ್ಕೆ ಊರೆಲ್ಲ ಅಲೆದರಂತೆ
  637. ಕೈಲಾಗದೋನು ಮೈ ಪರಚಿಕೊಂಡ
  638. ಕೈಲಾದವರು ಮಾಡುತ್ತಾರೆ ಕೈಲಾಗದವರು ಆಡುತ್ತಾರೆ
  639. ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
  640. ಕೊಂಕಿಗೆ ಕೊಂಕೇ ಮದ್ದು
  641. ಕೊಂಡಾಡುತ್ತ ಜಗದ ಇಚ್ಚೆಯನ್ನೆ ನುಡಿದರೆ ಜಗವೆಲ್ಲ ತನ್ನ ಮುದ್ದಾಡುತಿತ್ತು
  642. ಕೊಂಡು ಕೊಟ್ಟದ್ದೂ ಇಲ್ಲ ಹಂಚಿ ಉಂಡದ್ದೂ ಇಲ್ಲ ಸ್ವರ್ಗ ಬೇಕು ಅಂದ
  643. ಕೊಂದ ಪಾಪ ತಿಂದು ಪರಿಹಾರ
  644. ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ
  645. ಕೊಟ್ಟ ಹೆಣ್ಣು ಕುಲದಿಂದ ಹೊರಗೆ
  646. ಕೊಟ್ಟದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ
  647. ಕೊಟ್ಟು ಕೆಟ್ಟವರಿಲ್ಲ, ತಿಂದು ಬದುಕಿದವರಿಲ್ಲ.
  648. ಕೊಟ್ಟುಣ್ಣದ ಗಂಟು ಪರರಿಗೆ ಬಿಟ್ಟು ಹೋದಂತೆ
  649. ಕೊಟ್ಟೆ ಅಂತ ಹೇಳಿ ಕೊಡದವನ ಮಾತು ಬೆನ್ನಿಗೆ ಚೂರಿ ಇರಿದಂತೆ
  650. ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಈರಭದ್ರ
  651. ಕೊಡದ ಲೋಭಿ ಮಾತು ಕೊಡಲಿ ಪೆಟ್ಟು
  652. ಕೊಡಲಾರದ ಹೆಣ್ಣಿಗೆ ತೆರವು ಕೇಳಿದರಂತೆ
  653. ಕೊಡಲಿ ಕಾವು ಕುಲಕ್ಕೆ ಸಾವು
  654. ಕೊಡುವ ದೇವರು ಬಡವನೇ?
  655. ಕೊಡುವವನ ಕೈ ಯಾವಾಲು ಮೇಲೆ
  656. ಕೊಡುವವರದು ಕೊಟ್ಟರೆ ನನಗೇನು ಉಳಿಯಿತು ಅಂದನಂತೆ.
  657. ಕೊಡೋದು ಕೊಳ್ಳೋದು ಗಂಡಂದು, ಮಜ ಮಾಡೋದು ಹೆಂಡ್ರುದ್ದು
  658. ಕೊಣನಿಗೆ ಕೊಸೆಯೋ ಸಂಕಟ, ಎಮ್ಮೆಗೆ ಈಯೋ ಸಂಕಟ
  659. ಕೊಲ್ಲದಿರುವುದೇ ಧರ್ಮ ಬಲ್ಲವರಿಗೆ ಅದೇ ಸಮ್ಮತ
  660. ಕೋ ಅನ್ನೋದು ಕುಲದಲ್ಲಿಲ್ಲ ,'ತಾ' ಅನ್ನೋದು ತಾತರಾಯನ ಕಾಲದ್ದು
  661. ಕೋಟಿ ಕೊಟ್ಟರೂ ಕೂಟ ಕರ್ಮಿಯ ದುಂದುಗವೇ ಬೇಡ
  662. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು
  663. ಕೋಟಿಗೆ ಒಬ್ಬ ಕುಬೇರ, ನೋಟಕ್ಕೆ ಒಬ್ಬ ಸುಂದರ.
  664. ಕೋಡಗ ಲಂಕೆಯ ಸುಡುವಾಗ ರಾವಣ ನಾಡ ಕಾಯ್ದಿದ್ದ
  665. ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ
  666. ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
  667. ಕೋಣನಿಗೆ ಏನು ಗೊತ್ತು ಲತ್ತೆ ಪೆಟ್ಟು.
  668. ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತು (ರಾಘವಾಂಕ)
  669. ಕೋಣೆಯ ಕೂಸು ಕೊಳೆಯಿತು; ಓಣಿಯ ಕೂಸು ಬೆಳೆಯಿತು
  670. ಕೋತಿ ಕಜ್ಜಾಯ ಹಂಚಿದ ಹಾಗೆ.
  671. ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆ
  672. ಕೋತಿ ತಾನು ಮೊಸರನ್ನ ತಿಂದು ಮೇಕೆ ಬಾಯಿಗೆ ಒರೆಸಿತಂತೆ
  673. ಕೋತಿಗೆ ಹೆಂಡ ಕುಡಿಸಿದಂತೆ
  674. ಕೋತಿಯಂಥೋನು ಕೆಣಕಿದ, ಮೂತಿಗೆ ಹೆಟ್ಟಿಸಿಕೊಂಡು ತಿಣಕಿದ
  675. ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
  676. ಕೋಪ ಪಾಪ ತಂತು ಪಾಪ ತಾಪ ತಂತು
  677. ಕೋಪ ಬೀವುದೇ ಸಮತೆ
  678. ಕೋಪದಲ್ಲಿ ಕೊಯ್ದ ಮೂಗು ಶಾಂತವಾದ ಮೇಲೆ ಬರುತ್ತದೆಯೆ ?
  679. ಕೋಮಟಿ ಕೊಡ;ಜೈನಿಗ ಬಿಡ
  680. ಕೋರಿ (=ಚೆಂದುಳ್ಳಿ ಚೆಲುವೆ) ಒಲುಮೆ ತನಗೆ ಅನ್ನೋ ಮಾರನಿಗೆ (=ಚೆಲುವಾಂತನಿಗೆ) ಮಾರಿ ಹಿಡಿಯಿತು.
  681. ಕೋಳೀ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರೋದು ಬಿಟ್ಟೀತೆ?
  682. ಕ್ರಮ ಕಾಣದ ನಾಯಿ ಕಪಾಳೆ ನೆಕ್ತು
  683. ಖಂಡಿತ ವಾದಿ,ಲೋಕ ವಿರೋಧಿ
  684. ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
  685. ಗಂಜಿ ಕುಡಿಯೋನಿಗೆ,ಮೀಸೆ ಹಿಡಿಯುವವನೊಬ್ಬ
  686. ಗಂಜಿಯ ಕುಡಿದರೂ ಗಂಡನ ಮನೆ ಲೇಸು
  687. ಗಂಟೂ ಹೋಯ್ತು;ನಂಟೂ ಹೋಯ್ತು
  688. ಗಂಡ ಸರಿಯಿದ್ರೆ ಗುಂಡೂ ಪಾವನ
  689. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
  690. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು.
  691. ಗಂಡನಿಗೆ ಹೊರಸು ಆಗದು , ಹೆಂಡತಿಗೆ ನೆಲ ಆಗದು!
  692. ಗಂಡಸರ ಕೈಯಲ್ಲಿ ಕೂಸು ನಿಲ್ಲದು ಹೆಂಗಸರ ಕೈಯಲ್ಲಿ ಮಾತು ನಿಲ್ಲದು
  693. ಗಂಡಸಿಗೇಕೆ ಗೌರಿ ದು:ಖ ?
  694. ಗಂಡಸು ಕೂತು ಕೆಟ್ಟ ;ಹೆಂಗಸು ತಿರುಗಿ ಕೆಟ್ಟಳು
  695. ಗಂಧ ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೂ ಬಳಿದುಕೊಂಡರಂತೆ
  696. ಗಂಧದ ಮರವನ್ನು ಸುಟ್ಟು ಬೂದಿಯ ತಂದು ಪೂಸಿದ
  697. ಗಡ ಪಟ್ಟೆ ಸೀರೆ ತರುತ್ತಾನೆದು ಇದ್ದ ಬಟ್ಟೆ ಸುಟ್ಟಳತೆ.
  698. ಗಡ್ಡಕ್ಕೆ ಬೇರೆ ಸೀಗೇಕಾಯಿ
  699. ಗಣೇಶನನ್ನು ಮಾಡಲು ಹೋಗಿ ಅವರ ಅಪ್ಪನನ್ನು ಮಾಡಿದಂತೆ
  700. ಗದ್ದೆ ಸುಟ್ಟರೂ ಹಾಳಾಗದು ಗಾದೆ.
  701. ಗವುಜಿ ಗದ್ದಲ ಏನೂ ಇಲ್ಲ, ಗೋವಿಂದ ಭಟ್ಟ ಬಾವೀಲಿ ಬಿದ್ದ
  702. ಗಳಕ್ಕನೇ ಉಂಡವ ರೋಗಿ ಗಳಿಗೆ ಉಂಡವ ಭೋಗಿ
  703. ಗಾಜಿನ ಮನೇಲಿರೋವ್ರು ಅಕ್ಕಪಕ್ಕದ ಮನೇ ಮೇಲೆ ಕಲ್ಲೆಸೆಯಬಾರದು
  704. ಗಾಣವಾಡದೆ ಎಣ್ಣೆ ಬಂದೀತೇ
  705. ಗಾಣಿಗಿತ್ತಿ ಅಯ್ಯೋ ಅಂದರೆ ನೆತ್ತಿ ತಂಪಾದೀತೇ?
  706. ಗಾಯದ ಮೇಲೆ ಬರೆ ಎಳೆದಂತೆ
  707. ಗಾಳಿ ಗುದ್ದಿ ಮೈ ಕೈ ನೋಯಿಸಿಕೊಂಡಂತೆ
  708. ಗಾಳಿ ಬಂದಾಗ ತೂರಿಕೊ, ಧಾರಣೆ ಬಂದಾಗ ಮಾರಿಕೊ
  709. ಗಿಡ ಮೂರು ಮೊಳ, ಕಾಯಿ ಆರು ಮೊಳ.
  710. ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
  711. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು.
  712. ಗುಂಪಿನಲ್ಲಿ ಗೋವಿಂದ
  713. ಗುಡಿಸಿದ ಮೇಲೆ ಕಸವಿರಬಾರದು ಬಡಿಸಿದ ಮೇಲೆ ಹಸಿವಿರಬಾರದು
  714. ಗುಡ್ಡ ಕಡಿದು ಹಳ್ಳ ತುಂಬಿಸಿ ನೆಲ ಸಮ ಮಾಡಿದ ಹಾಗೆ
  715. ಗುಡ್ಡದ ಮೇಲೆ ಕಪಿ ಸತ್ತರೆ ಊರಿಗೆಲ್ಲಾ ಸೂತಕ.
  716. ಗುಣಗೇಡಿ ಒಡನಾಟ ಯಾವಾಲು ದುಃಖದೇಲ್ ಇದ್ದಂತೆ
  717. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ
  718. ಗುರಿಯಿಟ್ಟು ಗುಂಡು ಹಾಕು, ಸಮಯ ಸಾಧಿಸಿ ಬೇಟೆಯಾಡು.
  719. ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?
  720. ಗುರುವಿಗೇ ತಿರುಮಂತ್ರ
  721. ಗುರುವಿಲ್ಲದೇ ಮಠವಿಲ್ಲ, ಹಿರಿಯರಿಲ್ಲದೆ ಮನೆಯಿಲ್ಲ.
  722. ಗೆದ್ದವ ಸತ್ತ ಸೋತವ ಸತ್ತ
  723. ಗೆದ್ದೆತ್ತಿನ ಬಾಲ ಹಿಡಿದ ಹಾಗೆ
  724. ಗೋರ್ಕಲ್ಲ ಮೇಲೆ ಮಳೆಗರೆದಂತೆ
  725. ಗೌರಿ ಹಬ್ಬಕ್ಕೆ ಬಂದ ಗತಿಗೆಟ್ಟ ಅಳಿಯ
  726. ಗ್ರಾಮ ಶಾಂತಿಗೆ ತಳವಾರ ತಲೆ ಬೋಳಿಸಿಕೊಂಡನತೆ.
  727. ಘಟಾ (ದೇಹ ) ಇದ್ದರೆ ಮಠಾ ಕಟ್ಟಿಸಬಹುದು.
  728. ಚಂಡಾಲ ದೇವರಿಗೆ ಚಪ್ಪಲಿ ಸೇವೆ
  729. ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
  730. ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
  731. ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
  732. ಚಿಂತೆ ಇಲ್ಲದವನಿಗೆ ಸತೇಯಲ್ಲೂ ನಿದ್ದೆ.
  733. ಚಿಂತೆ ಮಾಡಿದರೆ ಸಂತೆ ಸಾಗೀತೆ?
  734. ಚಿತ್ತದ ಕಳವಳ ನಿಲ್ಲಿಸಿದವರೇ ಉತ್ತಮರು
  735. ಚಿತ್ತವಿಲ್ಲದವಳ ಒಡಗೂಟ ನಾಯ್ ಹೆಣಾನ ಹತ್ತಿ ತಿನ್ನುವಂತೆ
  736. ಚಿತ್ತಾ ಮಳೆ ವಿಚಿತ್ರ ಬೆಳೆ!
  737. ಚಿತ್ತಾರದ ಅಂದವನ್ನು ಮಸಿ ನುಂಗಿತು
  738. ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
  739. ಚೆಲ್ಲಿದ ಹಾಲಿಗೆ ಅತ್ತು ಪ್ರಯೋಜನವಿಲ್ಲ
  740. ಚೇಳಿಗೆ ಪಾರುಪತ್ಯ ಕೊಟ್ಟರೆ ಮನೆಯವರಿಗೆಲ್ಲಾ ಮುಟ್ಟಿಸಿತಂತೆ.
  741. ಚೇಳಿಗೊಂದೇ ಬಸಿರು ; ಬಾಳೆಗೊಂದೇ ಗೊನೆ
  742. ಚೌಲದಾಗ ದೌಲು ಮಾಡು
  743. ಛತ್ರದಲ್ಲಿ ಊಟ ಮಠದಲ್ಲಿ ನಿದ್ರೆ
  744. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
  745. ಜಟ್ಟಿ ಜಾರಿದರೆ ಅದೂ ಒಂದು ಪಟ್ಟು
  746. ಜನ ಮರುಳೋ ಜಾತ್ರೆ ಮರುಳೋ
  747. ಜನಕ್ಕಂಜದಿದ್ದರೂ ಮನಕ್ಕಂಜಬೇಕು
  748. ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ
  749. ಜರಡಿ ಸೂಜಿಗೆ ಹೇಳಿತಂತೆ: ನಿನ್ನ ಬಾಲದಲ್ಲಿ ತೂತು
  750. ಜಲ ನೋಡಿ ಬಾವಿ ತೆಗೀಬೇಕು, ಕುಲ ನೋಡಿ ಹೆಣ್ಣು ತರಬೇಕು.
  751. ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
  752. ಜಾಣನಿಗೆ ಮಾತಿನ ಪೆಟ್ಟು; ದಡ್ಡನಿಗೆ ದೊಣ್ಣೆಯ ಪೆಟ್ಟು
  753. ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ.
  754. ಜಾತಿ ಜಾತಿಗೆ ವೈರಿ, ನಾಯಿ ನಾಯಿಗೆ ವೈರಿ.
  755. ಜಾತಿ ನೀತಿಯಿಲ್ಲ, ಮಾರಿಗೆ ಕರುಣೆ ಇಲ್ಲ.
  756. ಜಾರುವುದು ತಪ್ಪಿದರೆ ಏರುವುದು ಸಾಧ್ಯ.
  757. ಜಿನ ಧರ್ಮವೇ ಜೀವಧರ್ಮ
  758. ಜೀನ ಗಳಿಸಿದ ;ಜಾಣ ತಿಂದ
  759. ಜೀವ ಜೀವವ ತಿಂದು ಜೀವಿಸುತಿದೆ ಜಗವೆಲ್ಲ
  760. ಜೋಡಿದ್ದರೆ ನಾಡು ತಿರುಗಬಹುದು.
  761. ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
  762. ಜ್ಯೋತಿಯ ನೆಲೆ ಅರಿತವನೇ ಯೋಗಿ
  763. ಟೊಳ್ಳು ಮಾತು ಸುಳ್ಳಿಗಿಂತ ಕಡೆ.
  764. ಠಕ್ಕು ಇರುವವನಿಗೆ ಠಿಕಾಣಿ ಸಿಗದು.
  765. ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು ನನ್ನ ಹೆಂಡ್ರನ್ನ ಕೇಳು
  766. ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ
  767. ತಂದೆ, ತಾಯಿ ಸತ್ತರೂ ಸೋದರ ಮಾವ ಇರಬೇಕು.
  768. ತಕ್ಕಡಿ ಬಲ್ಲದೇ ಮನೆಯ ಬಡತನವ
  769. ತಕ್ಕಡಿ ಸ್ವರೂಪ ತಕ್ಕವನೇ ಬಲ್ಲ
  770. ತಕ್ಕವನಲ್ಲಿ ಹೊಕ್ಕಿದ್ದರೆ ತಕ್ಕಷ್ಟಾದರೂ ಸಿಕ್ಕುವುದು
  771. ತಕ್ಕುದನ್ನು ಅರಿಯದ ಓದು ಲಕ್ಷ ಓದಿದರೇನು
  772. ತಕ್ರ (=ಮಜ್ಜಿಗೆ) ಶಕ್ರನಿಗೆ(=ಇಂದ್ರ) ಸಹಾ ದುರ್ಲಭ
  773. ತಗಣೇ ಉಪದ್ರವ ಮಗಳಿಗೂ ಬಿಡಲಿಲ್ಲ
  774. ತಗಲಿದವನಿಗೆ ಹಗಲಿರುಳೇನು?
  775. ತಗಲುಗಾರನಿಗೆ (= ದಗಲ್ ಬಾಜ್) ಬಗಲ ಮೇಲೆ ಜ್ಞಾನ
  776. ತಗ್ಗಿದವ ಎಂದಿಗೂ ನುಗ್ಗಾಗ
  777. ತಗ್ಗು ಗದ್ದೆಗೆ ಮೂರು ಬೆಳೆ ಎತ್ತರದ ಗದ್ದೆಗೆ ಒಂದೇ ಬೆಳೆ
  778. ತಗ್ಗು ದವಸಕ್ಕಾಗಿ ಹಗ್ಗ ಕೊಂಡು ಕೊಂಡ
  779. ತಟಕಿನಿಂದ ತಟಪಟವಾಯಿತು
  780. ತಟಕು ಬಿದ್ದು ಮಠಾ ಕೆಡಿಸಿತು
  781. ತಟದಲ್ಲಾಗಲೀ ಮಠದಲ್ಲಾಗಲೀ ಹಟದ ಜಂಗಮನ ಕಾಟ ತಪ್ಪುವುದಿಲ್ಲ
  782. ತಟಸ್ಥನಾದವನಿಗೆ ತಂಟೆಯೇನು?
  783. ತಟ್ಟನೆ ಆಡಿದರೆ ಕೊಟ್ಟಷ್ಟು ಫಲ
  784. ತಟ್ಟನೆ ಬಾ ಅಂದ್ರೆ ತುಟಿ ಬಿಟ್ಟನಂತೆ
  785. ತಟ್ಟಿ ಬೈಸಿಕೊಂಡರೂ ತಟ್ಟೇ ಹುಳಿ ಚೆನ್ನಾಗಿದೆ
  786. ತಟ್ಟಿನಲ್ಲಿ ಬಿದ್ದಾಗ್ಯೆ ಗಟ್ಟಿ ಆಗಲಾರ
  787. ತಟ್ಟು ಇದ್ದರ‍ೇ ತಟಾಯಿಸಿ ನಡದಾನು
  788. ತಡವ ಮಾಡುವವನ ಗೊಡವೆ ಬೇಡ
  789. ತಡವಿದರೆ ಮಡಿ ಸಹಾ ಕೆಡುವುದು
  790. ತಡೇ ಕಟ್ಟುವವನ ಮುಂದೆ ಮುಡಿಯೇನು
  791. ತಣ್ಣಗಿದ್ದರೆ ಮಣ್ಣಾದರೂ ಅಸಾಧ್ಯ
  792. ತಣ್ಣೀರು ಆದರೂ ಪುಣ್ಯದಿಂದ ದೊರಕಬೇಕು
  793. ತತ್ರಬಿತ್ರಿಯ (ತಂತ್ರಗಾರ) ಮುಂದೆ ಕತ್ತೆಯ ಹಾಗೆ ಆದ
  794. ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
  795. ತತ್ವಮಸಿ ಅಂತ ಅನ್ನೋದ್ ಕಲಿ ಅಂದ್ರೆ ತುತ್ತು ಸವಿ ಅಂತ ಉಣ್ನೋದ್ ಕಲ್ತ
  796. ತನಗಿಲ್ಲದ್ದು ಎಲ್ಲಿದ್ದರೇನು
  797. ತನಗೆ ಇಲ್ಲ ಕೂಸಿಗೇನು ಹೊದ್ದಿಸಲಿ
  798. ತನಗೆ ಇಲ್ಲದ ಮಾರಿ ತಮ್ಮಡಿಗೆ (ತಮ್ಮಡಯ್ಯನಿಗೆ) ವರಾ ಕೊಟ್ಟೀತೇ?
  799. ತನಗೆ ಇಲ್ಲದವಳು ಮಕ್ಕಳಿಗೆ ಏನು ಹೊದಿಸ್ಯಾಳು
  800. ತನಗೆ ಬಂದ ಹಾನಿ ದುಡ್ಡಿನಿಂದ ಹೋಯಿತು
  801. ತನಗೇ ಇಲ್ಲದವ ಪರರಿಗೆ/ಮಂದಿಗೆ ಏನು ಕೊಟ್ಟಾನು
  802. ತನಗೇ ಜಾಗವಿಲ್ಲ; ಕೊರಳಲ್ಲಿ ಡೋಲು ಬೇರೆ
  803. ತನುವರಿಯದ ನೋವಿಲ್ಲ ಮನವರಿಯದ ತಾಪವಿಲ್ಲ
  804. ತನ್ನ ಅಕ್ಕನ ಅರಿಯದವಳು ನೆರೆಮನೆ ಬೊಮ್ಮಕ್ಕನ ಬಲ್ಲಳೇ?
  805. ತನ್ನ ಎಲೇಲಿ ಕತ್ತೆ ಸತ್ತು ಬಿದ್ದಿದ್ರೆ , ಪಕ್ಕದ ಎಲೇಲಿ ನೊಣ ಹೊಡೆಯಕ್ಕೆ ಹೋದ
  806. ತನ್ನ ಓಣೀಲಿ ನಾಯಿಯೇ ಸಿಂಹ
  807. ತನ್ನ ಕಾಲಿಗೆ ತಾನೇ ಶರಣು ಮಾಡಿ ಹರಸಿಕೊಂಡ ಹಾಗೆ
  808. ತನ್ನ ತಾ ತನ್ನಿಂದಲೇ ಅರಿಯಬೇಕು
  809. ತನ್ನ ತಾ ತಿಳಿದು ತಾನು ತಾನಾದುದೆ ಉನ್ನತಿ
  810. ತನ್ನ ತಾ ಬಲ್ಲವನೆ ಬಲ್ಲವ
  811. ತನ್ನ ತಾನರಿತರೆ ತನ್ನರಿವೆ ಗುರು
  812. ತನ್ನ ತಾನರಿತರೆ ತಾನ್‍ಆದಾನು ತನ್ನ ತಾ ಮರೆತರೆ ತಾ ಹೋದಾನು
  813. ತನ್ನ ತಾನರಿತರೆ ಸುಜ್ಞಾನಿ
  814. ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು
  815. ತನ್ನ ನೆರಳಿಗೆ ತಾನಂಜಿ ನಡೆಯಬೇಕು
  816. ತನ್ನ ನೆರಳು ತಾ ಕಂಡು ನರಳುವವ ಮರುಳನಲ್ಲವೇ?
  817. ತನ್ನ ಬೆನ್ನು ತಾನೇ ತಟ್ಟಿಕೊಂಡ ಹಾಗೆ
  818. ತನ್ನ ಮನೆ ಉಪ್ಪು ಇಲ್ಲ ಬೆನ್ನ ಹಿಂದೆ ಉರಿಯೋ
  819. ತನ್ನ ಮರ‍್ಯಾದೆ ಕೆಟ್ಟವ ಪರರ ಮರ‍್ಯಾದೆ ಇಟ್ಟಾನೆ?
  820. ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
  821. ತನ್ನ ಯಂತ್ರಕ್ಕೆ ಎಣ್ಣೆ ಹಾಕಲೂ ಆಗದವ ಇನ್ನೊಬ್ಬರಿಗೆ ಉಪದೇಶ ನೀಡಿದಂತೆ.
  822. ತನ್ನ ಸುಖವೇ ಲೋಕದ ಸುಖ, ತನ್ನ ಕಷ್ಟವೇ ಲೋಕದ ಕಷ್ಟ
  823. ತನ್ನ ಹಲ್ಲು ತಾ ಮರಕೊಂಡು ಇನ್ನೊಬ್ಬನ ಮೇಲೆ ದೂರು ಹೇಳಿದ
  824. ತನ್ನ ಹೊಟ್ಟೆ ತಾ ಹೊರೆಯದವ ಮುನ್ನಾರ ಸಲಹುವ?
  825. ತನ್ನೂರಲಿ ರಂಗ, ಪರೂರಲಿ ಮಂಗ
  826. ತಪಸ್ಸಿಗೆಂತ ಹೋಗಿ ಕುಪ್ಪಸಾ ಕಳಕೊಂಡ
  827. ತಪಸ್ಸು ಇದ್ದವನೇ ಗಭಸ್ತಿ (=ಕಾಂತಿ) ಉಳ್ಳವನು
  828. ತಪ್ಪನೆ ಬಾ (=ತಕ್ಷಣ ಬಾ ) ಅಂದ್ರೆ ತಬ್ಬಲಿಕ್ಕೆ ಬಂದ ಹಾಗೆ
  829. ತಪ್ಪಲೇಲಿ ಇದ್ದದ್ದು ಹೋದರೆ ಕಪಾಲದಲ್ಲಿ ಇದ್ದದ್ದು ಹೋದೀತೇ
  830. ತಪ್ಪಿ ಬಿದ್ದವನಿಗೆ ತೆಪ್ಪ (=ದೋಣಿ) ಏನು ಮಾಡೀತು
  831. ತಪ್ಪಿದವನಿಗೆ ಒಪ್ಪು ಇಲ್ಲ
  832. ತಪ್ಪು ಹೊರಿಸಿದವನಿಗೆ ಒಪ್ಪುವವನು ಯಾರು
  833. ತಫಾವತುಗಾರ (=ಹಣ ತಿಂದು ಹಾಕುವವ) ತಪ್ಪಿದರೆ ತಿಪ್ಪಯ್ಯಗೆ ಏನು ಕೋಪ
  834. ತಬ್ಬಲಿ ತಬಕು (ಎಲೆ ಅಡಿಕೆ ತಟ್ಟೆ, ತಂಬಾಕು ತಟ್ಟೆ) ಕದ್ದು ಜಗಲೀಲಿ ಸಿಕ್ಕಿಬಿದ್ದ
  835. ತಬ್ಬಲಿಯಾದವನು ಬೊಬ್ಬೆ ಹಾಕಿ ಹೆಬ್ಬುಲಿಯ ಓಡಿಸ್ಯಾನೆ?
  836. ತಬ್ಬಳಿ ದೇವರಿಗೆ ತಂಗಳ ನೈವೇದ್ಯ
  837. ತಮ್ಮ ಒಳ್ಳೆಯವನೇ ಸರಿ ಒಮ್ಮಾನಕ್ಕಿಗೆ ಮಾರ್ಗವಿಲ್ಲ
  838. ತಮ್ಮ ಕಲಹಕ್ಕೆ ಐವರು, ಪರರ ಕಲಹಕ್ಕೆ ನೂರಾ ಐವರು. (ಸುಳಿವು ಪಾಂಡವಕೌರವರು)
  839. ತಮ್ಮ ಕೋಳಿ ಕೂಗಿದ್ದರಿಂದಲೇ ಬೆಳಗಾಯಿತು ಎಂದುಕೊಂಡರು
  840. ತಮ್ಮ ನಮ್ಮವನಾದರೂ ನಾದಿನಿ ನಮ್ಮವಳಲ್ಲ
  841. ತಮ್ಮ ಸಂಗಡ ತಂಗಿಯ ಗಂಡ ದೂರು ಹೇಳಿದರೆ ನಿನಗೇನಪ್ಪ
  842. ತಮ್ಮನ ಸಂಗಡ ತಿಮ್ಮ ಬಂದರೆ ತಂಗಳನ್ನವೇ ಗತಿ
  843. ತಮ್ಮನೇಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಬೇರೇ ಮನೇ ಸತ್ತ ನೊಣದ ಕಡೆಗೆ ಬೆಟ್ಟು ಮಾಡಿದರು
  844. ತರಗು (=ಒಣಗಿದ ಎಲೆ) ತಿಂಬುವುದೇ ಪರಮ ಸುಖ
  845. ತರಗು (ಮರದಿಂದ ಬಿದ್ದ ಒಣ ಎಲೆಗಳು)ಮೊರದಲ್ಲಿ ಹಿಡಿಯದು
  846. ತರಗು ತಿಂಬವನಿಗೆ ಒರಗೊಂದು ಕೇಡು
  847. ತರಗು ತಿನ್ನುವವನ ಮನೆಗೆ ಹಪ್ಪಳಕ್ಕೆ ಹೋದರು
  848. ತರಗು ಲಡ್ಡಿಗೆ ಡೊಳ್ಳು ಗಣಪತಿಯೇ ಶ್ರೇಷ್ಠ
  849. ತರಗೆಲೆ ಅಡಿಕೆ ತಿರಿದು ತಿನ್ನಬೇಕೆ
  850. ತರತರವಾಗಿ ಹೇಳಿದ್ದು ಮರೆತರೆ ಮರಕ್ಕಿಂತಾ ಕಡೆ
  851. ತರಬಲ್ಲವನ ಹೆಂಡತಿ ಅಡಜಾಣೆ (ಅಡಕವಾದ ಜಾಣ್ಮೆ ಉಳ್ಳವಳು)
  852. ತರಲಿಲ್ಲ ಬರಲಿಲ್ಲ ಬರ ಹ್ಯಾಗೆ ಹಿಂಗೀತು
  853. ತರಲೆ ಕೇಳುವವ ಮರುಳಗಿಂತ ಕಡೆ
  854. ತರವಲ್ಲದ ಮಾತು ಮರ ಏರಿದರೆ ಆದೀತೇ
  855. ತರಹರಿಸಾಳಾರದವಳು ಮರಣಕ್ಕೆ ಪಾತ್ರಳು
  856. ತರುಬಿ ಹೋಗುವನ್ನ ಕರುಬಿ (=ಅಸೂಯೆ) ಮಾಡುವುದೇನು?
  857. ತರುಬಿದವಗೂ (=ಅಡ್ಡಕಟ್ಟು, ಹೊಡೆ) ಓಡಿದವಗೂ ಸರಿಪಾಲು ಕಷ್ಟ
  858. ತರುಬಿಲ್ಲದ ಒಡ್ಡನು, ಬಿರಿಸಿಲ್ಲದ ಹುರಿಯು
  859. ತರುಬು ಇದ್ದರೆ ಹರುಬು ನಿಂತೀತೇ
  860. ತರುವವ ಮರೆತರೆ ಮೊರ ಏನು ಮಾಡೀತು
  861. ತರುವವ ಹೋದಮೇಲೆ ಮರಗುವವರುಂಟೇ
  862. ತರ್ಕಾ ಮಾಡುವವ ಮೂರ್ಕನಿಂದ ಕಡೆ
  863. ತಲೆ ಗಟ್ಟಿ ಇದೆ ಅಂತ ಕಲ್ಲಿಗೆ ಹಾಯಬಾರದು
  864. ತಲೆ ಚೆನ್ನಾಗಿದ್ದರೆ ಮುಂಡಾಸು ನೂರು ಕಟ್ಟಬಹುದು
  865. ತಲೆ ತಾಗಿದ್ದಲ್ಲದೆ ಬುದ್ಧಿ ಬಾರದು
  866. ತಲೆ ಬಲಿಯಿತು ಅಂತ ಕಲ್ಲಿಗೆ ಹಾಯಬಾರದು
  867. ತಲೆ ಸೀಳಿದರೆ ಎರಡಕ್ಷರ ಇಲ್ಲ
  868. ತಲೆ ಹೋಗುವುದಕ್ಕೆ ಕಾಲು ಹೊಣೆಯಾದ ಹಾಗೆ
  869. ತಲೆಗೆ ಎಣ್ಣೆ ಇಲ್ಲ ತನು ಮೃಗನಾಭಿ ಬೇಡಿತು
  870. ತಲೆಗೆ ಒಂದು ಕಡ್ಡೀಯಾದರೆ ಒಂದು ತಲೆಯ ಹೊರೆ
  871. ತಲೆಗೆ ಬಿದ್ದ ನೀರು ಕಾಲಿಗೆ ಬೀಳದೆ ಇರುತ್ತದೆಯೇ?
  872. ತಲೆಗೆಲ್ಲಾ ಒಂದೇ ಮಂತ್ರವಲ್ಲ
  873. ತಲೇ ಒಡೆದವನೂ ಸಮ ಲೇಪ ಹಚ್ಚಿದವನೂ ಸಮ
  874. ತಲೇ ಕೂದಲಿದ್ದರೆ ಎತ್ತ ಬೇಕಾದರು ತುರುಬು ಹಾಕಿಕೊಳ್ಳಬಹುದು
  875. ತಲೇ ಕೂದಲಿಲ್ಲದವಳು ತುರುಬು ಬಯಸಿದಳಂತೆ
  876. ತಲೇ ಕೂದಲು ಉದ್ದವಿದ್ದವಳು ಹ್ಯಾಗೆ ಕಟ್ಟಿದರೂ ಚಂದ
  877. ತಲೇ ಕೂದಲು ನೆರೆಯಾದ ಮೇಲೆ ತಬ್ಬಿಕೊಂಡ ತಬ್ಬಲಿ ಮುರವ (=ತಿರುಕ)
  878. ತಲೇ ಮೂರು ಸುತ್ತು ತಿರುಗಿದರೂ ತುತ್ತು ಬಾಯಿಲೇ
  879. ತಲೇ ಮೇಲಣ ಬರಹ ಎಲೆಯಿಂದ ಒರೆಸಿದರೆ ಹೋದೀತೇ
  880. ತಲೇ ಸಿಡಿತಕ್ಕೆ ಮಲಶೋಧನೇ ಕೊಂಡ ಹಾಗೆ
  881. ತವಕ ಪಟ್ಟವ ತಬ್ಬರಿಸಿ ಬಿದ್ದ
  882. ತವಡು ತಿಂದರು ಮುರುಕು (ಬೆಡಗು, ಕೊಂಕು) ಘನ
  883. ತವಡು ತಿಂಬುವನಿಗೆ ವಯ್ಯಾರ ಯಾಕೆ
  884. ತವಡು ತಿಂಬುವವ ಹೋದರೆ ಉಮ್ಮಿ ತಿಂಬುವವ ಬತ್ತಾನೆ
  885. ತವರೂರಿನ ದಾರೀಲಿ ಕಲಿಲ್ಲ ಮುಳ್ಳಿಲ್ಲ
  886. ತಳಮಳ ತೀರಲಿಲ್ಲ, ಕಳವಳ ಕಳಿಯಲಿಲ್ಲ
  887. ತಳವಾರನಿಗೆ ಪಟ್ಟ ಕಟ್ಟಿದರೆ ಕುಳವಾರು (ಒಕ್ಕಲಿಗರ ಸಮೂಹ) ಹೋದೀತೋ?
  888. ತಳಾ ಬಿಟ್ಟು ಬಂಡಿ ಹಾರದು
  889. ತಳಿಗೆ ಚಂಬು ಹೋದ ಮೇಲೆ ಮಳಿಗೇ ಬಾಗಿಲು ಮುಚ್ಚಿದ ಹಾಗೆ
  890. ತಾ ಅನ್ನೋದು ನಮ್ಮ ತಲತಲಾಂತರಕ್ಕೂ ಇರಲಿ, ಕೊ ಅನ್ನೋದು ನಮ್ಮ ಕುಲಕೋಟಿಗೂ ಬೇಡ
  891. ತಾ ಕಳ್ಳೆ ಪರರ ನಂಬಳು, ಹಾದರಗಿತ್ತಿ ಗಂಡನ ನಂಬಳು
  892. ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
  893. ತಾ ಕೋಡಗ ಪರರ ಅಣಕಿಸಿತು
  894. ತಾ ನೊಂದಂತೆ ಬೇರೇರ ನೋವನ್ನೂ ಅರಿಯಬೇಕು
  895. ತಾ ಬಲವೋ ಜಗ ಬಲವೋ
  896. ತಾ ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು
  897. ತಾಗದೆ ಬಾಗದು ಬಿಸಿಯಾಗದೆ ಬೆಣ್ಣೆ ಕರಗದು
  898. ತಾಟುಗಾರ (ಗರ್ವದ ಮನುಷ್ಯ) ಆಟಕ್ಕೆ ಹೋಗಿ ಮೋಟಗಾರನಾಗಿ (ತನ್ನಿಂದಲೇ ತಾ ಮೂರ್ಕನಾಗುವುದು) ಬಿದ್ದ
  899. ತಾತಾಚಾರ‍್ಯರ ಮನೆಗೆ ಏನಪ್ಪಣೆ?
  900. ತಾನಾಗಿ ಬೀಳುವ ಮರಕ್ಕೆ ಕೊಡಲಿ ಇಕ್ಕಿದ ಹಾಗೆ
  901. ತಾನಾಗಿ ಬೀಳುವ ಮರಕ್ಕೆ ಕೊದಲಿ ಏಟು ಹಾಕಿದ ಹಾಗೆ .
  902. ತಾನು ಕಳ್ಳ ,ಪರರ ನಂಬ
  903. ತಾನು ಕೋತಿಯಾಗಿ ರತಿಯನ್ನು ಬಯಸುವುದೇ?
  904. ತಾನು ಗರತಿ ಆದರೆ ಸೂಳೆಗೇರೀಲಿ ಮನೆ ಕಟ್ಟು
  905. ತಾನು ಜಾರಿಬಿದ್ದು ಉಣ್ಣೆಯಂತ ನೆಲ ಅಂದ
  906. ತಾನು ತಿಂದದ್ದು ಮಣ್ಣು ಹೆರರಿಗೆ ಕೊಟ್ಟದ್ದು ಹೊನ್ನು
  907. ತಾನು ತಿಂಬೋದು ಪಲ್ಲೆ ಸೊಪ್ಪು ಹಿರೇ ಕುದರೆ ಚೇಷ್ಟೆ
  908. ತಾನು ನೆಟ್ಟ ಬೀಳು (ಬಳ್ಳಿ) ತನ್ನ ಎದೆಗೆ ಹಬ್ಬಿತು
  909. ತಾನು ಬಾಳಲಾರದೆ ವಿಧಿಯ ಬೈದಂತೆ
  910. ತಾನು ಮಾಡುವುದು ಉತ್ತಮ; ಮಗ ಮಾಡುವುದು ಮಧ್ಯಮ; ಆಳು ಮಾಡುವುದು ಹಾಳು
  911. ತಾನು ಸಾಯಬೇಕು ಸ್ವರ್ಗಾ ಪಡೆಯಬೇಕು
  912. ತಾನು ಸಾಯುವ ತನಕ ತನ್ನನ್ನು ಜೋಪಾನ ಮಾಡಿದರೆ ತತ್ತಿಯಷ್ಟು ಬಗಾರ ಕೊಟ್ಟೇನು ಅನ್ನುತ್ತತೆ ಕೋಳಿ.
  913. ತಾನು ಹೋದರೆ ಮಜ್ಜಿಗೆ ಇಲ್ಲ ಮೊಸರಿಗೆ ಚೀಟು
  914. ತಾನು ಹೋದರೆ ಮಜ್ಜಿಗೆ ಇಲ್ಲ ಹೇಳಿ ಕಳಿಸಿದರೆ ಮೊಸರು ಕೊಟ್ಟಾರೆ
  915. ತಾನುಂಟೋ? ಮೂರು ಲೋಕವುಂಟೋ?
  916. ತಾನೂ ಕುಡಿಯ ಕುಡಿಯಲೀಸ
  917. ತಾನೂ ತಿನ್ನ; ಪರರಿಗೂ ಕೊಡ
  918. ತಾನೊಂದೆಣಿಸಿದರೆ ದೈವವೊಂದೆಣಿಸಿತು
  919. ತಾನೊಲಿದ ಮಂಕು ಮಾಣಿಕ್ಯ
  920. ತಾಪತ್ರಯದವನಿಗೆ ತಾಪೆ/ಚಾಪೆ ಯಾಕೆ
  921. ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್‌ತಂತೆ
  922. ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು
  923. ತಾಯಂತೆ ಕರು ನಾಯಂತೆ ಬಾಲ
  924. ತಾಯಿ ಒಂದಾದರೂ ಬಾಯಿ ಬೇರೆ
  925. ತಾಯಿ ಕಲಿಸಿದ ಊಟ ತಂದೆ ಕಲಿಸಿದ ಬುದ್ಧಿ
  926. ತಾಯಿ ಬೇಕು ಇಲ್ಲವೇ ಬಾಯಿ ಬೇಕು.
  927. ತಾಯಿ ಮಾಡಿದ ಹೊಟ್ಟೆ; ಊರು ಮಾಡಿದ ಕೊಳಗ
  928. ತಾಯಿ ಮಾರಿಯಾದರೆ ತರಳನು ಎಲ್ಲಿ ಹೋದಾನು
  929. ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
  930. ತಾಯಿಗೆ ಕಂಡರೆ ತಲೆ ನೋವು
  931. ತಾಯಿಗೆ ಕುಲವಿದ್ದರಷ್ಟೇ ಮಗಳಿಗೂ ಕುಲ
  932. ತಾಯಿಗೆ ಸೇರದ್ದು ನಾಯಿಗೂ ಸೇರದು
  933. ತಾಯಿದ್ದರೆ ತವರು ಮನೆ ನೀರಿದ್ದರೆ ಕೆರೆ ಬಾವಿ
  934. ತಾಯಿನ್ನ ನೋಡಿ ಮಗಳನ್ನ ತಕ್ಕೋ ಹಾಲನ್ನ ನೋಡಿ ಎಮ್ಮೇನ್ನ ತಕ್ಕೋ
  935. ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
  936. ತಾಯಿಯ ಹತ್ತಿರ ತರ್ಕವಲ್ಲ ಗುರುವಿನ ಹತ್ತಿರ ವಿದ್ಯೆಯಲ್ಲ
  937. ತಾಯಿಯಂತೆ ಮಗಳು ನೂಲಿನಂತೆ ಸೀರೆ
  938. ತಾಯಿಯನ್ನು ನಿಂದಿಸಬೇಡ, ಒಳ್ಳೆಯವರನ್ನು ಬಂಧಿಸಬೇಡ.
  939. ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
  940. ತಾಯಿಲ್ಲದ ತವರು ಕಾಟಕದಿದ್ದ ಅಡವಿ
  941. ತಾಯೀನೇ ತಿಂದೋಳು,ಅತ್ತೇನ ಬಿಟ್ಟಾಳೆಯೇ?
  942. ತಾರಕ್ಕೆ (ಎರಡು ಕಾಸಿನ ನಾಣ್ಯ) ಮೂರು ಸೇರು ಉಪ್ಪಾದರೂ ತರುವುದಕ್ಕೆ ಗತಿ ಬೇಡವೋ
  943. ತಾರಕ್ಕೊಂದು ಸೀರೆಯಾದರೂ ನಾಯಿ ತಿಕ ಬೆತ್ತಲೆ
  944. ತಾರತಮ್ಯ ಅರಿಯದವ ದೊರೆಯಲ್ಲ ಮಾತು ಮೀರಿದವ ಸೇವಕನಲ್ಲ
  945. ತಾರು ಮಾರು ಮಾಡುವವನಿಗೆ ಯಾರು ತಾನೆ ನಂಬ್ಯಾರು
  946. ತಾರುಣ್ಯವೇ ರೂಪು ಕಾರುಣ್ಯವೇ ಗುಣ
  947. ತಾರೇ ಬಡ್ಡೀ ನೀರಾ ಅಂದ್ರೆ ತರುವೆನು ನಿಲ್ಲೊ ತಿರುಕ ಮುರವ
  948. ತಾರೇಮರದ ಕಾಯಾದರೂ ಕರೆದರೆ ಬಂದೀತೇ
  949. ತಾವು ಮಾಡುವುದು ಗಂಧರ್ವರು ಮಾಡಿದರು
  950. ತಾಸಿಗೊಂದು ಕೂಸು ಹೆತ್ತರೆ ಈಸೀಸು ಮುತ್ತು
  951. ತಾಸಿನ ಗೊತ್ತು ದಾಸಿಗೆ ತಿಳಿದೀತೇ?
  952. ತಾಸಿನ ಬಟ್ಟಲು ನೀರ ಕುಡಿದರೆ ತಾಸಿಗೆ ಕೊಡತೀ ಪೆಟ್ಟು
  953. ತಾಳ ತಪ್ಪಿದ ಬಾಳು, ತಾಳಲಾರದ ಗೋಳು
  954. ತಾಳ ತಪ್ಪಿದರೆ ಕುಣಿಯೊದು ತಪ್ಪುವುದಿಲ್ಲ
  955. ತಾಳಕ್ಕೆ ತಕ್ಕ ಮೇಳ
  956. ತಾಳದಲ್ಲಿ ಜಾಣನಾದರೆ ತಾಳಿಕೆ ಇದ್ದೀತೇ
  957. ತಾಳಲಾರದ ವಿರಹ ತಿಣಕಿದರೆ ಹೋದೀತೇ?
  958. ತಾಳಿಕೆ (ತಾಳ್ಮೆ) ಉಳ್ಳವನಲ್ಲಿ ಕೇಳಿದರೆ ಕಾಳು ಸಿಕ್ಕುವುದು
  959. ತಾಳಿದವನು ಬಾಳಿಯಾನು
  960. ತಾಳು ಬಡಿದರೆ ಕಾಳು ಸಿಕ್ಕೀತೇ
  961. ತಾಳೆ ಹೂವು ಶಿವನಿಗೆ ಆಗದು ಸಂಪಿಗೆಯ ಹೂ ಸಾಲಿಗ್ರಾಮಕೆ ಆಗದು
  962. ತಾಳೆಮರ ಉದ್ದವಾದರೆ ಕೋಳಿಗೆ ಬಂದದ್ದೇನು
  963. ತಾಳೆಮರ ದೊಡ್ಡದಾದರೂ ತಾಳೆ ಹೂವಿಗೆ ಸರಿಯಾದೀತೇ
  964. ತಾಳೇ ಹಣ್ಣು ತಾನೇ ಬಿದ್ದರೂ ಬಾಳಾದ ಮುರವಗೆ ಬಾಯಿ ಮುಚ್ಚಿತು
  965. ತಾಳ್ಮೆ ಇದ್ದ ಪುರುಷರಲ್ಲಿ ಬೀಳು ಬಿದ್ದರೆ ಬಾಳ್ಯಾನು
  966. ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ
  967. ತಿಕ ಮಕ ಒಂಡೇ ತಿಪ್ಪಾಭಟ್ಟರಿಗೆ
  968. ತಿಗಳಗಿತ್ತಿಯ ಬಾಯಿ ಕೆಣಕಬೇಡ ಬಗಳೊ ನಾಯಿ ಬಡಿಯಬೇಡ
  969. ತಿಗಳಾ ತಾ ಕೆಡುತ್ತಾ ಏಳು ನೆರೆ ಕೆಡಿಸಿದ
  970. ತಿಗುಳಗೆ ತುತ್ತಿಗೆ ತತ್ವಾರವಾದರೂ ನೆತ್ತಿತುಂಬಾ ನಾಮಕ್ಕೆ ಕಡಿಮೆ ಇಲ್ಲ
  971. ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
  972. ತಿನ್ನೋದು ತವಡು ನಡೆಯೋದು ವೈಯಾರ
  973. ತಿಪ್ಪಯ್ಯಗೆ ಸೂಜಿ ಮೇಲು ಕಳ್ಳಗೆ ಬಾಯಿ ಮೇಲು
  974. ತಿಪ್ಪೆಯ ಮೇಲೆ ಕುಂಡ್ರುವವಗೆ ತಕ್ಯೆ ಯಾತಕ್ಕೆ
  975. ತಿಪ್ಪೇ ಮೇಲಣ ಅರಿವೆಯಾದರೂ ಕಾಲಿಗೆ ಕಟ್ಟಿದರೆ ಬಿರುದು
  976. ತಿಪ್ಪೇ ಮೇಲಣ ದೀಪ ಉಪ್ಪರಿಗೆಯ ಮೇಲೆ ಬಂದೀತೋ?
  977. ತಿಪ್ಪೇ ಮೇಲೇ ಮುಪ್ಪಾದ ಕುಂಬಾರ ತಿಪ್ಪ
  978. ತಿಪ್ಪೇ ಮ್ಯಾಲೆ ಮಲಗಿ ಉಪ್ಪರಿಗೆ ಕನಸು ಕಂಡ ಹಾಗೆ
  979. ತಿಮರು (=ಕಡಿತ, ನವೆ) ತುರಿಸಿದರೆ ಅರಸಿನ ಹಾಗೆ
  980. ತಿರಿಚಿನಾಪಳ್ಳಿಗೆ ತಿರಿದುಂಬೊದಕ್ಕೆ ಇಲ್ಲಿಂದ ಕೈ ಸವರಿಸಬೇಕೆ
  981. ತಿರಿತಿರಿಗಿ ಗೋಕರ್ಣಕ್ಕೆ ಹೋಗಿ ತುರಕನಿಂದ ದೆಬ್ಬೆ ತಿಂದ
  982. ತಿರಿತಿರಿಗಿ ತಿಮ್ಮಪ್ಪನ ಹತ್ತರ ಹೋದರೆ ತಿರಿದುಂಬೋದು ತಪ್ಪೀತೇ?
  983. ತಿರಿದುಂಬುವ ಭಟ್ಟ ದಕ್ಷಿಣೆಯಾದರೂ ಬಿಟ್ಟಾನು ಭೊಜನ ಸಿಕ್ಕಿದರೆ ಬಿಡಲೊಲ್ಲ
  984. ತಿರುಕನ ಬಳಿಗೆ ತಿರುಕ ಹೋದರೆ ಮರುಕ ತಾ ಬರುವುದೇ?
  985. ತಿರುಕನಿಗೆ ಮುರುಕು (ಬೆಡಗು ಕೊಂಕು) ಇದ್ದಾಗ್ಯೂ ತಿರಿದುಂಬುವುದು ತಪ್ಪದು
  986. ತಿರುದುಂಬುವುದಕ್ಕೆ ಬೀದಿ ಹಂಚಿಕೊಂಡ ಹಾಗೆ
  987. ತಿರುಪತಿ ಕ್ಷೌರಿಕರು ತಲೆ ಬೋಳಿಸಿದ ಹಾಗೆ
  988. ತಿರುಪದ ಪುಟ್ಟಿಯಲ್ಲಿ ಶನೀಶ್ವರ ಕೂತ
  989. ತಿರುಪಿನಂತೆ ಇರಬೇಕು ತಿಳಿದವ
  990. ತಿರುಳು ತಿಂದರೂ ಮರುಳು ಹೋಗಲಿಲ್ಲ
  991. ತಿರುಳು ಹೋಗಿ ಬೆಂಡು ಉಳೀತು
  992. ತಿರೋಕಲ್ಲು ಗಾಳಿಯಿಂದ ಹಾರುವುದೋ
  993. ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ
  994. ತಿವಾಸಿ ಯಾತಕ್ಕೆ ತಿಪ್ಪೇ ಮೇಲಣವಗೆ
  995. ತಿವಿದುಕೊಂಡರೆ ಬಂದೀತೇ ತಿಮ್ಮಪ್ಪನ ದಯೆ
  996. ತಿಳಿದ ಕಳ್ಳ ತಿರಿಗಿದರೂ ಬಿಡ
  997. ತಿಳಿದವ ಮಾಡ್ಯಾನು ನಳಪಾಕವ
  998. ತಿಳಿದವನಾದರೂ ಮಲಮೂತ್ರ ಬಿಟ್ಟೀತೇ?
  999. ತಿಳಿದು ಒಡ್ಡೋ ತೀರು ಬಾಣವ
  1000. ತಿಳಿಯಕ್ಕಿಲ್ಲ ನೋಡಕ್ಕಿಲ್ಲ ಹುಚ್ಚು ಮೂಕನ ಆಟ
  1001. ತೀಟೆ ಆದರೆ ತಾನೆ ಬರುತ್ತಾನೆ
  1002. ತೀಟೆಗೆ ಮಕ್ಕಳ ಹೆತ್ತು ತಿರುಮಲ ದೇವರ ಹೆಸರಿಟ್ಟ ಹಾಗೆ
  1003. ತೀರಕ್ಕೆ ಬಂದ ಮೇಲೆ ತೆರೆಯ ಭಯವೇ
  1004. ತೀರದ ಕಾರ್ಯ ಹಾರಿದರೂ ಆಗದು
  1005. ತೀರದಲ್ಲಿರುವ ಮರಕ್ಕೆ ನೀರು ಯಾತಕ್ಕೆ
  1006. ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
  1007. ತೀರ್ಥಕ್ಕೆ ಥಂಡಿ, ಪ್ರಸಾದಕ್ಕೆ ಅಜೀರ್ಣ , ಮಂಗಳಾರತಿಗೆ ಉಷ್ಣ (ನಾಜೂಕು ದೇಹಸ್ಥಿತಿ)
  1008. ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
  1009. ತುಂತುರು ಮಳೆಯಿಂದ ತೂಬು ಒಡೆದೀತೆ?
  1010. ತುಂಬಿದ ಕೊಡ ತುಳುಕುವುದಿಲ್ಲ.
  1011. ತುಂಬೆ ಗಿಡಕ್ಕೆ ಏಣಿ ಹಾಕಿದಂತೆ
  1012. ತುಟಿ ಸುಮ್ಮನಿದ್ದರೂ ಹೊಟ್ಟೆ ಸುಮ್ಮನಿರದು
  1013. ತುಟ್ಟಿಯಾದರೂ ಹೊಟ್ಟೆ ಕೇಳದು
  1014. ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
  1015. ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
  1016. ತೂಕ ಸರಿಯಿದ್ದರೆ ವ್ಯಾಪಾರ.
  1017. ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ
  1018. ತೂತು ಗತ್ತಲೇಲಿ ತಾತನ ಮದುವೆ
  1019. ತೆಂಗು ಬೆಳೆದವನಿಗೂ ಗಂಡು ಹೆಡೆದವಳಿಗೂ ಚಿಂತೆಯಿಲ್ಲ.
  1020. ತೇಗಿ ತೇಗಿ ಬೀಗಿ ಬಿದ್ದ
  1021. ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು
  1022. ತೇರಾದ ಮೇಲೆ ಜಾತ್ರೆ ಸೇರಿತು.
  1023. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು
  1024. ತೊಳೀಲಿಲ್ಲ ಬಳೀಲಿಲ್ಲ ಮೂಗೇಕೆ ಮಸಿಯಾಯ್ತು
  1025. ತೋಟ ಮಾಡಿದವನಿಗೆ ಕೋಟಲೆಯಿಲ್ಲ.
  1026. ತೋಟ ಶೃಂಗಾರ, ಒಳಗೆ ಗೋಣಿ ಸೊಪ್ಪು
  1027. ತೋಟದ ಕಬ್ಬಿಗಿಂತ, ಪೋಟೆಯ ಜೇನಿಗಿಂತ, ಬಲ್ಲವಳ ಕೂಟ ಲೇಸು
  1028. ತೋಟದ ಬೇಲಿಯನ್ನು ದಾಟಿ ನೋಡದವರಾರು
  1029. ತೋಳ ಬಿದ್ದರೆ ಆಳಿಗೊಂದು ಕಲ್ಲು
  1030. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
  1031. ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಇನ್ನು ನಿನ್ನ ಗಳಗಂಟೆಗೆ
  1032. ದಕ್ಷಿಣೆಗಾದರೆ ಮಾತು ಹಿಡಿದಾನು, ಮಂತ್ರಕ್ಕಾದರೆ ಬೆನ್ನು ತೋರ್ಸಿಯಾನು.
  1033. ದಕ್ಷಿಣೆಗೆ ತಕ್ಕ ಪ್ರದಕ್ಷಿಣೆ
  1034. ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
  1035. ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
  1036. ದನ ತಿನ್ನುವವನಿಗೆ ಗೊಬ್ಬರದ ಆಣೆ
  1037. ದನಿಯಿದ್ದವರೂ ಅತ್ತರೂ ಚಂದ ನಕ್ಕರೂ ಚಂದ
  1038. ದಯವಿಲ್ಲದ ಧರ್ಮವಿಲ್ಲ.
  1039. ದರಿದ್ರ ಏಳಗೊಡುವುದಿಲ್ಲ, ಆಲಸ್ಯ ಉಣಗೊಡುವುದಿಲ್ಲ.
  1040. ದಾಕ್ಷಿಣ್ಯಕ್ಕೆ ಬಸಿರಾಗೋದು
  1041. ದಾಕ್ಷಿಣ್ಯವತ ದೇಶಕ್ಕೆ ಹೋದರೆ ದಕ್ಷಿಣೆ ಸಿಕ್ಕೀತೇ!
  1042. ದಾನ ಮಾಡೋಕೆ ಕನಲುವ ಮಾನವ ದಂಡ ಚಕಾರ ಎತ್ತದೆ ತೆರುವ
  1043. ದಾನಿಗೆ ದೀನತನ ಸಲ್ಲ, ಗ್ನಾನಿಗೆ ಮೌನ ಸಲ್ಲ
  1044. ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ
  1045. ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು
  1046. ದಾರಿಯಲ್ಲಿ ಹೋಗುತ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊಂಡಂತೆ
  1047. ದಿಟವೇ ಪುಣ್ಯದ ಪುಂಜ ಸಟೆಯೇ ಪಾಪದ ಬೀಜ
  1048. ದಿನಾ ಸಾಯೋರಿಗೆ ಅಳೋರ್ ‍ಯಾರು?
  1049. ದೀನನ ಬೇಡಿ ಬಳಲಿದರೆ ಆತ ಏನು ಕೊಟ್ಟಾನು
  1050. ದೀಪಕ್ಕೆ ಎಣ್ಣೆಯ ಹುಯ್ಯ್ ಅಂತ ಸುರಿಯುತ್ತಾರೇ
  1051. ದೀಪದ ಕೆಳಗೆ ಯಾವತ್ತೂ ಕತ್ತಲೇ
  1052. ದುಡಿದದ್ದು ಉಂಡೆಯೋ ಪಡೆದದ್ದು ಉಂಡೆಯೋ
  1053. ದುಡಿಮೆಯೇ ದುಡ್ಡಿನ ತಾಯಿ
  1054. ದುಡಿಮೆಯೇ ದೇವರು
  1055. ದುಡಿಯೋ ತನಕ ಮಡದಿ.
  1056. ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
  1057. ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
  1058. ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ?
  1059. ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಂಡ ಹಾಗೆ
  1060. ದುಡ್ಡೇ ದೊಡ್ಡಪ್ಪ, ಬುದ್ಧಿ ಅದರಪ್ಪ
  1061. ದುರುಳನಿಂದಲೇ ದುರುಳುತನ.
  1062. ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತೆ
  1063. ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
  1064. ದುಷ್ಟರಿಂದ ದೂರವಿರು
  1065. ದೂಫ ಹಾಕಿದರೆ ಪಾಪ ಹೋದೀತೇ
  1066. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ
  1067. ದೂರವಿದ್ದ ಮಗನಿಗೂ, ಹತ್ತಿರವಿದ್ದ ಮಗನಿಗೂ ಸರಿಬಾರದು.
  1068. ದೇವನೊಬ್ಬ ನಾಮ ಹಲವು
  1069. ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?
  1070. ದೇವರಿಲ್ಲದ ಗುಡಿ;ಯಜಮಾನನಿಲ್ಲದ ಮನೆ ಎರಡೂ ಒಂದೇ
  1071. ದೇವರು ಒಲಿದರೂ ಪೂಜಾರಿ ಒಲಿಯೊಲ್ಲ.
  1072. ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ
  1073. ದೇವಸ್ಥಾನದಲ್ಲಿ ಊದಿನ ಕಡ್ಡಿ ಹಚ್ಚದಿದ್ದರೂ ಚಿಂತೆಯಿಲ್ಲ; ... ಬಿಡಬೇಡ
  1074. ದೇಶ ತಿರುಗಬೇಕು, ಭಾಷೆ ಕಲಿಯಬೇಕು.
  1075. ದೇಶ ಸುತ್ತು ; ಕೋಶ ಓದು.
  1076. ದೇಹಕ್ಕೆ ಮುಪ್ಪಾದರೇನಾಯ್ತು, ಅಧ್ಯಯನಕ್ಕೆ ಮುಪ್ಪಿದೆಯೇ?
  1077. ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು
  1078. ದೈವ ಒಲ್ಲದೆ ಆಗೋದಿಲ್ಲ ದೈವ ಒಲಿದರೆ ಹೋಗೋದಿಲ್ಲ
  1079. ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
  1080. ದೈವದ ಸೊಲ್ಲು ಹರಟುವಾತ ಭವದೊಳಗೆ ತೇಲಾಡುತಿದ್ದ
  1081. ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
  1082. ದೊಡ್ಡ ಗೌಡನ ಮನೇಲಿ ದೊಡ್ಡ ಗುಡಾಣ ಎತ್ತಿದರೆ ಏನೂ ಇಲ್ಲ.
  1083. ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ
  1084. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು
  1085. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಿಗೆ ಹೋಗಿ ಮೊಳ ಹಾಕಿದರು
  1086. ಧರ್ಮದ ಹಾದಿ ತಿಳಿದವನಿಗೆ ಓದು ವಾದಗಳೇಕೆ
  1087. ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?
  1088. ಧೈರ್ಯವಿದ್ದವನಿಗೆ ದೈವವೂ ಅನುಕೂಲ.
  1089. ನಕ್ಕು ನುಡಿದವರು ಕಡೆಗೆ ಅಡವಿಯಲಿಕ್ಕಿ ಬರುವರು
  1090. ನಗುವ ಹೆಂಗಸು, ಅಳುವ ಗಂಡಸು ಇಬ್ಬರನ್ನೂ ನಂಬಬಾರದು
  1091. ನಗುವೇ ಆರೋಗ್ಯದ ಗುಟ್ಟು.
  1092. ನಗೋ ಗಂಡಸನ್ನೂ ಅಳೋ ಹೆಂಗಸನ್ನೂ ನಂಬಬೇಡ
  1093. ನಚ್ಚುವುದು ಬೇರೆ ಹೆಣ್ಣು ಒಬ್ಬನ ಮೆಚ್ಚುವುದು ಬೇರೆ
  1094. ನಡತೆ ಕಲಿಯೋದು ಏರುಬಂಡೆ ನಡತೆ ಕೆಡೋದು ಜಾರುಬಂಡೆ
  1095. ನಡೆದಷ್ಟು ನೆಲ, ಪಡೆದಷ್ಟು ಫಲ.
  1096. ನಡೆವರ್ ಎಡವದೇ ಕುಳಿತವರ್ ಎಡವುವರೇ
  1097. ನದೀನೇ ನೋಡದೆ ಇರೋನು ಸಮುದ್ರ ವರ್ಣನೆ ಮಾಡಿದ ಹಾಗೆ
  1098. ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
  1099. ನನ್ನ ಮಗ ಎಂಟು ವರ್ಷಕ್ಕೆ ದಂಟು ಎಂದ
  1100. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
  1101. ನಮಾಜು ಮಾಡಲು ಹೋಗಿ ಮಸೀದಿ ಕೆಡವಿಕೊಂಡ ಹಾಗೆ
  1102. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
  1103. ನಮ್ಮ ದೇವರ ಸತ್ಯ ನಮಗೆ ಗೊತ್ತು.
  1104. ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.
  1105. ನಯಶಾಲಿ ಆದವನು ಜಯಶಾಲಿ ಆದಾನು
  1106. ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
  1107. ನರಿ ಕೂಗು ಗಿರಿ ಮುಟ್ಟುತ್ತದೆಯೆ ?
  1108. ನರಿಗೆ ಹೇಳಿದರೆ ನರಿ ತನ್ನ ಬಾಲಕ್ಕೆ ಹೇಳಿತಂತೆ
  1109. ನಲ್ಲೆ ಮುಂದೆ ಸುಳಿದರೆ ಲೋಕದೊಳಗೆ ಒಲ್ಲದವರಾರು
  1110. ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿತಂತೆ
  1111. ನವಿಲಾಡಿತು ಅಂತ ಕೆಂಬೂತ ಪುಕ್ಕ ತೆರೆಯಿತು
  1112. ನಾ ಬಡವ ವಾಲಗ ಸಾವಕಾಶ ಊದು ಅಂದಂತೆ
  1113. ನಾ ಬಲ್ಲೆ ಅನ್ನೊ ಮಾತು ಎಲ್ಲರಿಗು ಸಲ್ಲದು
  1114. ನಾಚಿಕೆ ಬಿಟ್ಟವ ಊರಿಗೇ ದೊಡ್ಡವ.
  1115. ನಾಡಳಿದು ನಾಡೊಡೆಯನಿಗೆ ಕೇಡು ನಾಡೊಡೆಯ ಅಳಿದು ನಾಡಿಗೆಲ್ಲ ಕೇಡು
  1116. ನಾಡೆಂದ್ರ ಕಾಡನ್ನ ಸುಡುವಾಗ ದೇವೇಂದ್ರ ಗಾಳೀನ್ನ ನೋಡೊಕೆ ಕಳಿಸಿದ
  1117. ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
  1118. ನಾಮವಿದ್ದವನಿಗೆ ಕಾಮ ಕಡಿಮೆಯೇ?
  1119. ನಾಯಿ ಬಾಲ ಡೊಂಕು
  1120. ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ ಹಾಗೆ
  1121. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೆ ?
  1122. ನಾಯಿ ಮೊಲೇಲಿ ಖಂಡುಗ ಹಾಲಿದ್ದರೇನು, ದೇವರಿಗಿಲ್ಲ ದಿಂಡರಿಗಿಲ್ಲ
  1123. ನಾಯಿ ಹೆಸರು'ಸಂಪಿಗೆ'ಅಂತ
  1124. ನಾಯಿಗೆ ಕೆಲಸಿಲ್ಲ, ನಿಲ್ಲೋಕೆ ಹೊತ್ತಿಲ್ಲ
  1125. ನಾಯಿಗೆ ವಯಸ್ಸಾದ್ರೆ ಅಜ್ಜ ಅಂತಾರಾ?
  1126. ನಾಯಿಗೆ ಹೊತ್ತಿಲ್ಲ; ನಿಲ್ಲಕ್ಕೆ ನೆಲೆಯಿಲ್ಲ
  1127. ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
  1128. ನಾಯಿಯ ಕನಸೆಲ್ಲ ಮೂಳೇನೇ.
  1129. ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ?
  1130. ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
  1131. ನಾಯೀನ ತಗೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿದರೆ ಹೇಲು ಕಂಡು ಇಳಿಬಿತ್ತು
  1132. ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
  1133. ನಾವೂ ನೀವೂ ನೆಂಟರು , ಗಂತಿಗೆ ಮಾತ್ರ ಕೈ ಹಚ್ಚಬೇಡಿ.
  1134. ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
  1135. ನಾಳೆ ಯಾರೋ ನಾನು ಯಾರೋ!
  1136. ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ, ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
  1137. ನಿಜ ಆಡಿದರೆ ನಿಷ್ಠೂರ
  1138. ನಿಜವ ಹಿಡಿ ಘಟವ ನೆಚ್ಚದಿರು
  1139. ನಿದ್ದೆ ಗೈಯೋನ ಹೊತ್ತು ನುಂಗ್ತು
  1140. ನಿದ್ದೆಗೆ ಮದ್ದಿಲ್ಲ, ವಜ್ರಕ್ಕೆ ಬೆಲೆಯಿಲ್ಲ.
  1141. ನಿನ್ನ ಹಿತು(ಮುದ್ದು),ನನ್ನ ತಿಂತು
  1142. ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
  1143. ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
  1144. ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
  1145. ನಿನ್ನಿಂದ ಆದ ಪಾಪ, ಅದೇ ನಿನಗೆ ಶಾಪ.
  1146. ನಿಯತ್ತಿಲ್ಲದೋರಿಗೆ ಬರಕತ್ತಿಲ್ಲ
  1147. ನಿಷ್ಠೆ ಇದ್ದಲ್ಲಿ ದೈವ ಕಲ್ಲುಗುಂಡೊಳಗೆ ಅಡಗಿತ್ತು
  1148. ನಿಷ್ಠೆ ಇಲ್ಲದವನಿಗೆ ದೈವ ಬಟ್ಟಬಯಲು
  1149. ನಿಷ್ಠೆ ಇಲ್ಲದೆ ಎಷ್ಟು ಪೂಜೆ ಮಾಡಿದರೂ ನಷ್ಟ
  1150. ನಿಸ್ಸಹಾಯಕರ ಮೇಲೆ ಹುಲ್ಲುಕಡ್ಡಿ ಸಹ ಭುಸುಗುಡುತ್ತದೆ
  1151. ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ
  1152. ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
  1153. ನೀನು ಮೊಳ ಬಿಟ್ಟರೆ, ನಾನು ಮಾರು ಬಿಡುತ್ತೇನೆ.
  1154. ನೀರಿನಲ್ಲಿ ಹೋಮ ಮಾಡಿದಂತೆ
  1155. ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ
  1156. ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು (ಮುದ್ದಣ)
  1157. ನೀರುಗಣ್ಣಿನ ಹೆಂಗಸು ಊರು ಹಾಳು ಮಾಡಿದಳಂತೆ.
  1158. ನೀರೆ ನಿನ್ನ ಮಾತು ನಿಜವೇನೆ ನೀರ ಕಡಿದರೆ ಬೆಣ್ಣೆ ಬಂದಾದೇನೆ
  1159. ನೀರೆಯ ಓರೆಗಣ್ಣ ನೋಟಕ್ಕೆ ನಾಡೆಲ್ಲ ಇರಿದಾಡಿತು
  1160. ನುಡಿಯಲಿ ಸಲ್ಲನದಾವುದಕೂ.
  1161. ನುಡಿಯಿರದವನಿಗೆ ಇಲ್ಲವು ನಾಡೂ
  1162. ನುಡಿಯೊಳು ಕಪಿಡುವುದು ಬದುಕು
  1163. ನುಡಿಯೊಳು ಹೊಳೆವುದು ನಾಡಿನ ನಡವಳಿ.
  1164. ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
  1165. ನೂರು ಜನಿವಾರ ಒಟ್ಟಿಗಿರಬಹುದು; ಮೂರು ಜಡೆ ಒಟ್ಟಿಗಿರುವುದಿಲ್ಲ
  1166. ನೂಲಿನಂತೆ ಸೀರೆ, ಬೀಜದಂತೆ ವೃಕ್ಷ.
  1167. ನೂಲಿನಂತೆ ಸೀರೆ; ತಾಯಿಯಂತೆ ಮಗಳು
  1168. ನೆಂಟ ನೆರವಲ್ಲ ಕುಂಟ ಜೊತೆಯಲ್ಲ
  1169. ನೆಂಟರನ್ನು ಲಕ್ಷಿಸದಿರಲು, ಸ್ನೇಹಿತರನ್ನು ಅಲಕ್ಷಿಸದಿರು.
  1170. ನೆಂಟರಿಗೆ ದೂರ ; ನೀರಿಗೆ ಹತ್ತಿರ
  1171. ನೆಂಟರೆಲ್ಲ ಖರೆ, ಕಂಟಲೆ ಚೀಲಕ್ಕೆ ಕೈ ಹಾಕಬೇಡ
  1172. ನೆಂಟ್ರು ಮನೆಗೆ ಮೂಲ, ಕುಂಟೆತ್ತು ಹೊಲಕ್ಕೆ ಮೂಲ.
  1173. ನೆಚ್ಚಿನೆಮ್ಮೆ ಕೋಣನನ್ನೀಯಿತು
  1174. ನೆತ್ತರು ಉಕ್ಕಿದರೆ ಜೀವ ತೊಡಕೀತು
  1175. ನೆತ್ತಿಯಲ್ಲಿ ಅಮೃತ ಹೊತ್ತು ಸಾವಿಗಂಜಿ ಜಗವೆಲ್ಲ ಸುತ್ತಾಡಿದ
  1176. ನೆರೆದ ಸಿರಿ ಜಾವಕ್ಕೆ ಹರಿದು ಹೋಯಿತು
  1177. ನೆಲಕ್ಕೆ ಬಿದ್‍ದ್ರೂ ಮೀಸೆ ಮಣ್ಣಾಗಿಲ್ಲ
  1178. ನೇಮ ಉಳ್ಳವನ ಕಂಡರೆ ಯಮನಿಗೂ ಭಯ
  1179. ನೇಯುವ ಕಾಲ ತಪ್ಪಿದರೂ, ಸಾಯುವ ಕಾಲ ತಪ್ಪದು.
  1180. ನೇರಲೆ ಹಣ್ಣು ಬಲು ಕಪ್ಪು ತಿಂದು ನೋಡಿದರೆ ಬಲು ಸವಿ
  1181. ನೋಡಿ ನಡೆದವನಿಗೆ ಕೇಡಿಲ್ಲ.
  1182. ನೋಡಿ ನಡೆದವರಿಗೆ ಕೇಡಿಲ್ಲ.
  1183. ನೋಡಿ ನಡೆದಾಗ ಎಡವೋದು ತಪ್ಪುತ್ತೆ.
  1184. ಪಂಗಡವಾದವ ಸಂಗಡ ಬಂದಾನೆ?
  1185. ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?
  1186. ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ
  1187. ಪಡಿತಿಂದು ಗುಡಿಯಲ್ಲಿ ಉರುಳಾಡಿದ.
  1188. ಪಡುವಣ ಮನೆಗೆ ಮೂಡಣ ದೀಪ
  1189. ಪದದೊಳಿಲ್ಲ ತಾನರ್ಥದೊಳಿಲ್ಲವು
  1190. ಪದವಿ ಬಂದ ಬಳಿಕ ಮದವೂ ಬರತಕ್ಕದ್ದೆ.
  1191. ಪದವೂ ಮುಗಿಯಿತು, ತಂತಿಯೂ ಹರಿಯಿತು.
  1192. ಪದಾರ್ಥ ಸಘಾತದೊಳಿಲ್ಲ
  1193. ಪರರ ಹಂಗಿಸಿ ಮಂಗ ಅನಿಸಿಕೊಂಡ
  1194. ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.
  1195. ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.
  1196. ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ ಕೆಟ್ಟರು
  1197. ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು
  1198. ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊ, ಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.
  1199. ಪಾಪ ಅಂದ್ರೆ ಕರ್ಮ ಬರ್ತದೆ
  1200. ಪಾಪ ಅನ್ನೋದಕ್ಕೆ ಕೋಪವೇ ನೆಲೆಗಟ್ಟು
  1201. ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.
  1202. ಪಾಪಿ ಚಿರಾಯು
  1203. ಪಾಪಿ ಚುನಾವಣೆಗೆ ನಿಂತರೆ ಮೂರೇ ಓಟು.
  1204. ಪಾಪಿ ಧನ ಪ್ರಾಯಶ್ಚಿತ್ತಕ್ಕೆ
  1205. ಪಾಪಿ ಸಮುದ್ರ ಹೊಕ್ಕರು ಮೊಣಕಾಲುದ್ದ ನೀರು
  1206. ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು
  1207. ಪಾಯಸ ಮಾಡಿ ನಾಯಿ ಬಾಲದಲ್ಲಿ ತೊಳಸಿದ ಹಾಗೆ
  1208. ಪಾಲಿಗೆ ಬಂದದ್ದು ಪಂಚಾಮೃತ
  1209. ಪಿಶಾಚಿ ಬಿಟ್ಟರೂ ನಿಶಾಚರ ಬಿಡ
  1210. ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
  1211. ಪುಣ್ಯ ಉಂಡು (=ಸುಖ ಅನುಭೋಗಿಸಿ) ತೀರಿತು, ಪಾಪ ತಿಂದು (=ಕಷ್ಟ ಅನುಭವಿಸಿ) ತೀರಿತು
  1212. ಪುರಾಣ ಹೇಳೊಕೆ; ಬದನೆಕಾಯಿ ತಿನ್ನೋಕೆ
  1213. ಪುಷ್ಪ ಡೊಂಕಾದರೇನು, ಪರಿಮಳ ಡೊಂಕೇ?
  1214. ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.
  1215. ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
  1216. ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ
  1217. ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
  1218. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
  1219. ಪ್ರಥಮ ಚುಂಬನೇ ದಂತ ಭಗ್ನಮ್
  1220. ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು
  1221. ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
  1222. ಪ್ರಸ್ತಕ್ಕಿಲ್ಲದ ಮಾತು ಹತ್ತುಸಾವಿರವಿದ್ದೇನು
  1223. ಪ್ರಾಮಾಣಿಕತೆಯಿಂದಲೇ ಪಾರಮಾರ್ಥ.
  1224. ಪ್ರಾರಬ್ಧ ಬಂದ ಕಾಲಕ್ಕೆ ಒಂದಲ್ಲ ಒಂದು ಕೇಡು
  1225. ಪ್ರೀತಿಗೊಂದು ಮುತ್ತು, ಹಸಿವಿಗೊಂದು ತುತ್ತು.
  1226. ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
  1227. ಬಂಗಾರಕ್ಕೆ ಕುಂದಣವಿಟ್ಟಂತೆ
  1228. ಬಂಟರ ಅಬ್ಬರ ಸೇವಿನ ಗೊಬ್ಬರ
  1229. ಬಂಡಾಟದ ನಡೆ ಚೆಂದ ಮಿಂಡಾಟದ ನುಡಿ ಚೆಂದ
  1230. ಬಂದ ಅಥಿತಿಗೆ ಅನ್ನ ಇಕ್ಕದ ಬದುಕು ಯಾತಕ್ಕು ಬೇಡ
  1231. ಬಂದ ದಾರಿಗೆ ಸುಂಕವಿಲ್ಲ
  1232. ಬಂದರು ಬಾ ಅನ್ನದ ದರ್ಪಕುರುಡರ ಸಾವಸವೇ ಬೇಡ
  1233. ಬಂಧುಗಳಿಲ್ಲದಿರೊ ಬಡತನ ಎಂದಿಗೂ ಬೇಡ
  1234. ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
  1235. ಬಗ್ಗಿದವನಿಗೆ ಒಂದು ಗುದ್ದು ಜಾಸ್ತಿ
  1236. ಬಚ್ಚಿಟ್ಟ ಆಸ್ತಿ ಹೊಂಚುತ್ತಿದ್ದವರ ಪಾಲಾಯ್ತು
  1237. ಬಡ ದೇವರನ್ನು ಕಂಡರೆ ಬಿಲ್ಪತ್ರೇನೂ 'ಭುಸ್' ಅಂತಂತೆ
  1238. ಬಡವ ನೀ ಮಡಗಿದ ಹಾಗಿರು
  1239. ಬಡವ ನೀ ಸೆಣಸಿ ಕೆಡಬೇಡ
  1240. ಬಡವನ ಕೋಪ ದವಡೆಗೆ ಮೂಲ
  1241. ಬಡವನಿಗೆ ಉಳಿದಷ್ಟೆ ಅಭಿಮಾನ
  1242. ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
  1243. ಬಡವರ ಮನೆ ಊಟ ಚೆನ್ನ, ದೊಡ್ಡವರ ಮನೆ ನೋಟ ಚೆನ್ನ
  1244. ಬಡವರ ಮಾತು ನುಡಿನುಡಿಗೂ ಬೇಸರ
  1245. ಬಡವೆ ಸೀರೆ ಉಡದೆ ಮಾಸಿತು
  1246. ಬಡ್ಡಿ ಬಾಯಿಗಂಜ್ತೀಯೋ,ದೊಡ್ಡೆತ್ತಿನ ಕೋಡಿಗಂಜ್ತೀಯೋ
  1247. ಬಣ ಬಣ ಬೆಳಕು ಹರಿದಾಗ ಕತ್ತಲು ಎತ್ತಲೊ
  1248. ಬನ್ನ ಪಟ್ಟುಣ್ಣೋ ಬಿಸಿ ಅನ್ನಕ್ಕಿಂತ ತಂಗುಳೇ ಲೇಸು
  1249. ಬರಗಾಲದಲ್ಲಿ ಅಧಿಕಮಾಸ ಬಂದ ಹಾಗೆ.
  1250. ಬರಿಗೆಟ್ಟ ಬದುಕಿಗಿಂತ ಕೊಂದು ತಿನ್ನೊ ಮಾರಿ ಲೇಸು
  1251. ಬರಿಗೈಯವರ ಬಡಿವಾರ ಬಹಳ.
  1252. ಬರೀ ಕೈಗಿಂತ ವಾಸಿ ಹಿತ್ತಾಳೆ ಕಡಗ
  1253. ಬರೀ ಮಾತಾಡಿ ಬೈಯ್ಯಿಸಿಕೊಂಡ
  1254. ಬರೋಳನ್ನು ನೆಚ್ಚಿ ಇರೋಳನ್ನು ಬಿಟ್ಟ
  1255. ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು
  1256. ಬಲ್ಲವನೇ ಬಲ್ಲ ಬೆಲ್ಲದ ರುಚಿಯ
  1257. ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು
  1258. ಬಲ್ಲಿದವನಿಗೆ ಕಬ್ಬು.
  1259. ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
  1260. ಬಸವನ ಹಿಂದೆ ಬಾಲ, ಸೂಜಿ ಹಿಂದೆ ದಾರ
  1261. ಬಸುರಲ್ಲಿ ಬಂದ ಕೂಸು ಮುದ್ದು
  1262. ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ
  1263. ಬಳ್ಳಿಗೆ ಕಾಯಿ ಭಾರವೇ
  1264. ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.
  1265. ಬಾಡಿಗೆ ಎತ್ತೆಂದು ಬಡಿದು ಬಡಿದು ಹೂಡಬೇಕೆ
  1266. ಬಾಣಲೆಯಿಂದ ಬೆಂಕಿಗೆ
  1267. ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
  1268. ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
  1269. ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ
  1270. ಬಾಯಲ್ಲಿ ಬೆಣ್ಣೆ; ಬಗಲಲ್ಲಿ ದೊಣ್ಣೆ.
  1271. ಬಾಯಲ್ಲಿ ಬೆಲ್ಲ ಕರುಳು ಕತ್ತರಿ
  1272. ಬಾಯಿ ಬಂಗಾರ, ಮನ ಅಂಗಾರ.
  1273. ಬಾಯಿ ಬಿಟ್ಟರೆ ಬಣ್ಣಗೇಡು
  1274. ಬಾಯಿದ್ದೋರು ಬರಗಾಲದಲ್ಲೂ ಬದುಕಿದರು
  1275. ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.
  1276. ಬಾಯಿಯಿದ್ದ ಮಗ ಬದುಕುವನು.
  1277. ಬಾಲ ಸುಟ್ಟ ಬೆಕ್ಕಿನ ಹಾಗೆ
  1278. ಬಾಲೇರ ಮನಸ್ಸು ನೆಲೆಯಿಲ್ಲ
  1279. ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.
  1280. ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು.
  1281. ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.
  1282. ಬಾಳಿಕೆಗೆಟ್ಟು ಬೆಸಲಾದ ಚೇಳಿನಂತಾದ
  1283. ಬಾಳಿ ಬದುಕಿದವ ಕಲಿ(=ವಿದ್ಯೆ)ಕಲಿತ, ಬಾಳಲಾರದವ ಪಾಠ ಕಲಿತ
  1284. ಬಾಳಿ ಬದುಕುವರಿಗೆ ಹಾಳೂರ ಸುದ್ದಿ ಯಾಕೆ
  1285. ಬಾಳೆ ಬೆಳೆದವ ಬಾಳಿಯಾನು.
  1286. ಬಾಳೆಂಬ ಬಂಧನದಲ್ಲಿ ಈಜಬೇಕು, ಸಂಸಾರ ಎಂಬ ಸಾಗರದಲ್ಲಿ ತೇಲಬೇಕು.
  1287. ಬಾಳೆಗೊಂದು ಗೊನೆ, ಬಾಳಿಗೊಂದು ಮಾತು.
  1288. ಬಿಟ್ಟವರ ಕಂಡು ಬಿಟ್ಟು ಬಾಳುಗೆಟ್ಟ
  1289. ಬಿಟ್ಟಿ ಬಂದದ್ದಾದರೆ ನನಗೂ ಇರಲಿ,ನಮ್ಮ ತಾತಂಗೂ ಇರಲಿ.
  1290. ಬಿಡಿಯಕ್ಕೆ ಬಸಿರಾದರೆ ಹಡೆಯೋದು ಕಷ್ಟ
  1291. ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
  1292. ಬಿದ್ದ ಪೆಟ್ಟಿಗಿಂತ ನಕ್ಕ ಪೆಟ್ಟು ಹೆಚ್ಚು
  1293. ಬಿದ್ದರೂ ಮೀಸೆ ಮಣ್ಣಾಗಲಿಲ್ಲ
  1294. ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು
  1295. ಬಿದ್ದಿನ (=ಅತಿಥಿ, ನೆಂಟ) ಬಂದು ಹಾಳು ಮನೇ ಯಜಮಾನ (ಮನೆಯೊಡೆಯ) ಕುಂತು ಹಾಳು
  1296. ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು
  1297. ಬಿರಿಯಾ ಉಂಡ ಬ್ರಾಹ್ಮಣ ಭಿಕ್ಷೆ ಬೇಡಿದ
  1298. ಬಿಸಿ ತುಪ್ಪ; ನುಂಗೋದಕ್ಕೂ ಆಗೊಲ್ಲ; ಉಗುಳೋದಕ್ಕೂ ಆಗೊಲ್ಲ
  1299. ಬಿಸಿಯಾದರೆ ಮಾತ್ರ ಬೆಣ್ಣೆ ಕರಗುವುದು.
  1300. ಬಿಳಿ ಆನೆ ಸಾಕಿದ ಹಾಗೆ
  1301. ಬೀಜ ಸಣ್ಣದಾದರೆ ಮರ ಸಣ್ಣದೋ
  1302. ಬೀಜದಂತೆ ವೃಕ್ಷ, ವೃಕ್ಷದಂತೆ ಬೀಜ.
  1303. ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು
  1304. ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ
  1305. ಬೀಳು ಭೂಮಿಗೆ ಬೀಜ ದಂಡ
  1306. ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
  1307. ಬುದ್ಧಿ ಉಳ್ಳವನಿಗೆ ಕರ್ಮ ತಿದ್ದಿ ಕೊಡುತಿತ್ತು
  1308. ಬುದ್ಧಿಗಳ್ಳನಿಗೆಲ್ಲಿ ಸತ್ಯ, ಸದಾಚಾರ!
  1309. ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
  1310. ಬೆಂಕಿ ಇಲ್ಲದೆ ಹೊಗೆ ಏಳಲ್ಲ
  1311. ಬೆಂಕಿಗೆ ಕರಗದ್ದು ಬಿಸಿಲಿಗೆ ಕರಗೀತೇ
  1312. ಬೆಂದ ಮನೇಲಿ ಹಿರಿದದ್ದೇ ಲಾಭ
  1313. ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ
  1314. ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ
  1315. ಬೆಕ್ಕಿನ ಕನಸಿನಲ್ಲಿ ಬರೀ ಇಲಿಗಳೇ
  1316. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ
  1317. ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
  1318. ಬೆಟ್ಟ ಅಗೆದು ಇಲಿ ಹಿಡಿದಂತೆ
  1319. ಬೆಟ್ಟ ಮಹಮ್ಮದನ ಬಳಿ ಬರಲ್ಲ,ಮಹಮ್ಮದನೇ ಬೆಟ್ಟದ ಬಳಿ ಹೋಗಬೇಕು
  1320. ಬೆಣ್ಣೆಯೊಳಗಿನ ಕೂದಲು ತೆಗೆದಂತೆ
  1321. ಬೆಣ್ಣೇಲಿ ಕೂದಲು ತೆಗೆದ ಹಾಗೆ
  1322. ಬೆನ್ನಹಿಂದೆ ಬಿದ್ದು (ಓಡಿ)ಬನ್ನ ಪಟ್ಟ
  1323. ಬೆರಳು ತೋರುದ್ರೆ ಅಂಗೈನೇ ನುಂಗಿದಂತೆ
  1324. ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
  1325. ಬೆಲ್ಲದ ಸಿಪಾಯಿ ಮಾಡಿ ಇರುವೆ ಹತ್ತರ ಕಳಿಸಿದ
  1326. ಬೆಲ್ಲವಿದ್ದಲ್ಲಿ ನೊಣ, ಕೆಂಡವಿದ್ದಲ್ಲಿ ಕಾವು.
  1327. ಬೆಲ್ಲವಿಲ್ಲದಿದ್ದರೆ ಬೆಲ್ಲದಂಥ ಮಾತೂ ಇಲ್ಲವೇ?
  1328. ಬೆಳಗೂ ಹೆತ್ತ ಮಗೂನ ನಾಯಿ ಕೊಂಡೊಯ್ಯಿತಂತೆ
  1329. ಬೆಳೆಯುವ ಪೈರು ಮೊಳಕೆಯಲ್ಲಿ
  1330. ಬೆಳ್ಳಗಿರೋದೆಲ್ಲ ಹಾಲಲ್ಲ
  1331. ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
  1332. ಬೆಳ್ಳಗಿರೋದೆಲ್ಲಾ ಹಾಲಲ್ಲ
  1333. ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ
  1334. ಬೇಕಾದ ಮಾತು, ಬೆಲ್ಲಕ್ಕಿಂತ ಸವಿ.
  1335. ಬೇಕೆಂಬುದು ಬಾಳು ಸಾಕೆಂಬುದು ಸಾವು
  1336. ಬೇಡಿದರೆ ಇಲ್ಲ ಅನ್ನೋದ್ ಕಷ್ಟ ನೀಡುವರ ಬೇಡ ಅನ್ನೋದ್ ಕಷ್ಟ
  1337. ಬೇಲಿಯೇ ಎದ್ದು ಹೊಲ ಮೇದಂತೆ
  1338. ಬೇವು ಕಾಗೆಗೆ ಇಂಪು ಮಾವು ಕೋಗಿಲೆಗೆ ಇಂಪು
  1339. ಬೇಸರವಿರಬಾರದು, ಅವಸರ ಮಾಡಬಾರದು.
  1340. ಬೈದು ಹೇಳಿದವರು ಬದುಕಕ್ಕೆ ಹೇಳಿದರು
  1341. ಬೊಗಳುವ ನಾಯಿ ಕಚ್ಚುವುದಿಲ್ಲ
  1342. ಬೋನದ ಬುತ್ತಿ ತಪ್ಪಿ ಚಿತ್ತವಲ್ಲಭೆಯನ್ನು ಮರೆಸಿತ್ತು
  1343. ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ
  1344. ಭಂಗಿ ರಸ ನೆತ್ತಿಗೇರಿ ಬಿಂಗಿಯಂತಾದ
  1345. ಭಂಗಿ ರಸ ನೆತ್ತಿಗೇರಿ ಬಿಂಗಿಯಂತೆ ಆಡಿದ
  1346. ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ
  1347. ಭರಣಿ ಮಳೆ ಧರಣಿ ಬೆಳೆ.
  1348. ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ
  1349. ಭಾರವಾದ ಪಾಪಕ್ಕೆ ಘೋರವಾದ ನರಕ.
  1350. ಭಾವಿಗೆ ಬಿದ್ರೆ,ಸಾಲಿಗ್ರಾಮ ಸಿಗ್‌ತಂತೆ
  1351. ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು.
  1352. ಭಾಷೆ ಕೊಟ್ಟವನು ಪೋಷಣೆ ಮಾಡನೇ?
  1353. ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
  1354. ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
  1355. ಭೂಮಿಯಿಂದ ಆಕಾಶಕ್ಕೆ ಏಣಿಯನ್ನು ಇಟ್ಟ.
  1356. ಭೋಗಿ ಭೋಗದಲ್ಲಿ ನೆರೆದು ರೋಗಿಯಾದ, ಯೋಗಿ ಯೋಗದಲ್ಲಿ ನೆರೆದು ಯೋಗವಾದ
  1357. ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
  1358. ಮಂಗನ ಕೈಗೆ ಮಾಣಿಕ್ಯ ಕೊಟ್ಟ ಹಾಗೆ
  1359. ಮಂಡಕ್ಕಿ ತಿಂದ ಮಗ ಮದ್ದಾನೆ ತರುಬಿದ ಮೃಷ್ಟಾನ್ನ ತಿಂದ ಮಗ ನೊಣ ಝಾಡಿಸಿದ
  1360. ಮಂತ್ರ ತಂತ್ರ ದೈವ ಒಲ್ಲದೆ ತನಗೆ ಸ್ವಂತವಲ್ಲ
  1361. ಮಂತ್ರ ಸ್ವಲ್ಪ, ಉಗುಳೇ ಬಹಳ.
  1362. ಮಂತ್ರಕ್ಕಿಂತ ಉಗುಳೇ ಹೆಚ್ಚು.
  1363. ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?
  1364. ಮಂತ್ರಿಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ
  1365. ಮಂದಾಳಿಗೊಂದು ಮುಂದಾಳು
  1366. ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು
  1367. ಮಕ ನೋಡಿ ಮಾರು ಹೋದ, ಗುಣ ನೋಡಿ ದೂರ ಹೋದ
  1368. ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
  1369. ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ
  1370. ಮಕ್ಕಳಿಸ್ಕೂಲ್ ಮನೇಲಲ್ವೇ? (ಕೈಲಾಸಂ)
  1371. ಮಗ ಸಣ್ಣವನಾದರೂ, ಮಾತು ಸಣ್ಣದಲ್ಲ.
  1372. ಮಗೂನ ಚಿವುಟೋದು, ತೊಟ್ಟಿಲು ತೂಗೋದು
  1373. ಮಘೆ ಮಳೆ ಬಂದಷ್ಟೂ ಒಳ್ಳೇದು, ಮನೆ ಮಗ ಉಂಡಷ್ಟೂ ಒಳ್ಳೇದು
  1374. ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
  1375. ಮದುವೆ ಆಗೋ ಗಂಡಿಗೆ ಅದೇ ಇಲ್ಲ ಅಂದಗೆ.
  1376. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು
  1377. ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
  1378. ಮದುವೆ ಸಾಲ ಮಸಣಾದವರೆಗೂ.
  1379. ಮದುವೆಯಾಗೋ ಗುಂಡ ಅಂದರೆ ನೀನೇ ನನ್ನ ಹೆಂಡತಿಯಾಗು ಅಂದ ಹಾಗೆ
  1380. ಮದುವೇಲಿ ಗಂಡು, ಸ್ಮಶಾನ ಯಾತ್ರೇಲಿ ಹೆಣವಾಗೋ ಬಯಕೆ
  1381. ಮದ್ದು ಬುದ್ಧಿ ದೈವ ಒಲ್ಲದೆ ತಿದ್ದವು
  1382. ಮಧ್ಯಾಹ್ನದ ಊಟವಾದಮೇಲೆ ಮುಳ್ಳಿನ ಮೇಲಾದರೂ ಮಲಗು, ರಾತ್ರಿ ಊಟವಾದ ಮೇಲೆ ಅರ್ಧ ಮೈಲಿ ನಡೆ.
  1383. ಮನಸ್ಸಿದ್ದರೆ ಮಾರ್ಗ.
  1384. ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
  1385. ಮನಸ್ಸಿಲ್ಲದವಳ ಒಡನಾಟ ಮಾತುಮಾತಿಗು ಬೇಸರ
  1386. ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
  1387. ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!
  1388. ಮನೆ, ಮನ ಓಡೆದರೆ ಅಂಟಿಸಲಾಗದ ಕನ್ನಡಿಯಂತೆ.
  1389. ಮನೆ ಗೆದ್ದು ಮಾರು ಗೆಲ್ಲು.
  1390. ಮನೆ ತುಂಬ ಮುತ್ತಿದ್ದರೆ ...ಗೂ ಪೋಣಿಸಿಕೊಂಡರಂತೆ
  1391. ಮನೆ ದೇವರನ್ನ ಮೂಲೆಗಿಟ್ಟು ಬೆಟ್ಟದ ದೇವರಿಗೆ ಬುತ್ತಿ ಹೊತ್ತಂತೆ.
  1392. ಮನೆ ಬೆಳಗಲಿ ದೀಪ ಬೇಕು, ಮಾನವ ಬೆಳಗಲು ಅಕ್ಷರ ಬೇಕು.
  1393. ಮನೆ ಮಕ್ಕಳು ಮಾಣಿಕ್ಯ, ನೆರೆಮನೆ ಮಕ್ಕಳು ಕಸಿವಿಸಿ.
  1394. ಮನೆ ಮಗ ಉಂಡಷ್ಟೂ ಒಳ್ಳೇದು, ಮಗೆ ಮಳೆ ಬದಷ್ಟೂ ಒಳ್ಳೇದು.
  1395. ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ
  1396. ಮನೆಗೆ ಮಾರಿ, ಊರಿಗೆ ಉಪಕಾರಿ.
  1397. ಮನೆಗೆ ಮಾರಿ, ಪರರಿಗೆ ಉಪಕಾರಿ
  1398. ಮನೆಯ ಕಷ್ಟಕ್ಕೆ ನೆರೆಮನೆಯವರು ಹೊಣೆ ಏನು?
  1399. ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
  1400. ಮನೆಯಲ್ಲಿ ರಾಮಣ್ಣನಂತೆ, ಬೀದಿಯಲ್ಲಿ ಕಾಮಣ್ಣನಂತೆ.
  1401. ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
  1402. ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
  1403. ಮನೇಗೆ ಬೆಂಕಿ ಬಿದ್ದಾಗ ಭಾವಿ ತೋಡಕ್ಕೆ ಶುರು ಮಾಡಿದರಂತೆ
  1404. ಮನೇಲಿ ಇಲಿ,ಬೀದೀಲಿ ಹುಲಿ
  1405. ಮನೇಲಿ ಕತ್ತಲೆ, ಪರರಿಗೆ ದೀಪ ದಾನ ಮಾಡಿದ.
  1406. ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
  1407. ಮರ ಕಡಿದು ಮೈಮೇಲೆ ಹಾಕಿಕೊಂಡ್ರಂತ
  1408. ಮರ ನೆಟ್ಟು ಪಾಪವನ್ನು ಕಳೆದುಕೋ.
  1409. ಮರಗಿಣಿಯ ಕೂಡೆ ಆಡಿ ಅರಗಿಣಿ ಕೇಟ್ಟಿತು
  1410. ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
  1411. ಮಲ್ಲಿಗೆ ವನದಲ್ಲಿ ತುರುಬಿಲ್ಲದಾಕೆ ಸುಳಿದಂತೆ
  1412. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ
  1413. ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
  1414. ಮಳೆ ಹುಯ್ದರೆ ಕೇಡಲ್ಲ; ಮಗ ಉಂಡರೆ ಕೇಡಲ್ಲ
  1415. ಮಳೆಗಾಲದ ಮಳೆ ನಂಬಲಾಗದು ; ಮನೆ ಹೆಂಡ್ತಿ ನಗೆ ನಂಬಲಾಗದು.
  1416. ಮಳೆಗಾಲದೇಲಿ ಚಿಗಿಯೂದಿಲ್ಲ ಬೇಸಿಗೇಲಿ ಒಣಗೂದಿಲ್ಲ
  1417. ಮಳೇ ನೀರ ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದಂತೆ
  1418. ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ
  1419. ಮಾಘ ಕಾವ್ಯ ಮಗನಿಗೆ ಬೇಡ
  1420. ಮಾಟ ಮಾಡಿದೋನ ಮನೆ ಹಾಳು.
  1421. ಮಾಡಬಾರದ್ದು ಮಾಡಿದರೆ, ಆಗಬಾರದ್ದು ಆಗತ್ತೆ
  1422. ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
  1423. ಮಾಡಿದ ಕರ್ಮ ಬೆನ್ನಾಡಿ ಬಂತು
  1424. ಮಾಡಿದ ಕರ್ಮ ಹಿಡಿದೊಯ್ಯದೆ ಬಿಡದು
  1425. ಮಾಡಿದ ಪಾಪ ದಾನದಿಂದ ಹೋದೀತೆ
  1426. ಮಾಡಿದ ರಾಗಿ ಕೊಟ್ರೂ ಮೂರ್ಖನ ಸಹವಾಸ ಬೇಡವೆಂದಂತೆ.
  1427. ಮಾಡಿದರೆ ಮನೆ ; ಹೂಡಿದರೆ ಒಲೆ
  1428. ಮಾಡಿದುಣ್ಣೊ ಮಾರಾಯ
  1429. ಮಾಡಿದೋರ ಪಾಪ ಆಡಿದೋರ ಬಾಯಲ್ಲಿ
  1430. ಮಾಡಿದ್ದುಣ್ಣೋ ಮಹರಾಯ
  1431. ಮಾಡಿದ್ದುಣ್ಣೋ ಮಾರಾಯ
  1432. ಮಾಡುವವ ಉತ್ತಮ ಆಡಿ ಮಾಡದವ ಅಧಮ
  1433. ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
  1434. ಮಾಡೋರನ್ನು ಕಂಡರೆ ನೋಡು ನನ್ನ ಸಿರೀನ
  1435. ಮಾತಿಂದಲೇ ಉಪಚಾರ ಮಾತಿಂದಲೇ ಅಪಚಾರ
  1436. ಮಾತಿಂದಲೇ ನಗೆನುಡಿ ಮಾತಿಂದಲೇ ಹಗೆಕೊಲೆ
  1437. ಮಾತಿಗೆ ನೆಲೆಯಿಲ್ಲ, ಪ್ರೇಮಕ್ಕೆ ಬೆಲೆಯಿಲ್ಲ.
  1438. ಮಾತಿಗೆ ಮಾತುಗಳ ಓತು ಸಾಸಿರ ಉಂಟು
  1439. ಮಾತಿಗೆ ಸಾಯದೇ ಇದ್ದೋನೂ ಏಟಿಗೂ ಸಾಯುವುದಿಲ್ಲ.
  1440. ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.
  1441. ಮಾತಿಗೊಂದು ಮಾತು ಬಂತು ವಿಧಿ ಬಂದು ಆತುಕೊಣ್ತು
  1442. ಮಾತಿನ ಬೊಮ್ಮ ತೂತಾದ ಮಡಕೆಯ ಪರಿ
  1443. ಮಾತು ಅಂಗಾರ ಮೌನ ಬಂಗಾರ
  1444. ಮಾತು ಆಡಿದರೆ ಮುತ್ತಿನ ಹಾರದಂತಿರಬೇಕು.
  1445. ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು
  1446. ಮಾತು ಚಿಕ್ಕದಾಗಿರಲಿ, ಕೆಲಸ ಚೊಕ್ಕವಾಗಿರಲಿ.
  1447. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
  1448. ಮಾತು ಬೆಳ್ಳಿ; ಮೌನ ಬಂಗಾರ
  1449. ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು
  1450. ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
  1451. ಮಾನ ಹೋದ ಮೇಲೆ ಮರಣ ಬಂದ ಹಾಗೆ.
  1452. ಮಾನವನಾದ ಮೇಲೆ ಮೂರು ಆಕ್ಷರ ಮೊದಲು ಕಲಿ.
  1453. ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ
  1454. ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ್ ಕಣ್ಣು ಕುರಿ ಮ್ಯಾಲೆ.
  1455. ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ
  1456. ಮಾರಿಯ ಹೋತ ತೋರಣದ ಚಿಗುರು ಬಯಸಿತಂತೆ
  1457. ಮಾವನು ಇಲ್ಲದ ಮನೆಯೇಕೆ, ಹೆಂಡತಿಯಿಲ್ಲದ ಒಡವೆಯೇಕೆ?
  1458. ಮಾಳಿಗೆ ಮನೆ ಬೇಕು ಜೋಳಿಗೆ ಹಣ ಬೇಕು ಮಾದೇವನಂಥಾ ಮಗ ಬೇಕು ಗೌರಿಯಂಥಾ ಸೊಸೆ ಬೇಕು
  1459. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?
  1460. ಮಿಂದರೆ ಮೈಯ ಕೊಳೆ ಹೋಯ್ತು
  1461. ಮಿಂದು ಮೈಲಿಗೆ ಉಡೊದಾದ್ರೆ ಜಳಕದ ದಂದುಗವೇಕೆ
  1462. ಮೀಸೆ ಬಂದಾಗ ದೇಶ ಕಾಣದು ಮೊ.. ಬಂದಾಗ ನೆಲ ಕಾಣದು
  1463. ಮೀಸೆ ಬದವಗೆ ದೇಶ ಕಾಣದು, ಮೊಲೆ ಬದವಳಿಗೆ ನೆಲ ಕಾಣದು.
  1464. ಮುಂದೆ ಬರೋ ಕೋಡಿಗಿಂತ ಹಿಂದೆ ಬರೋ ಬಾಲಾನೇ ವಾಸಿ
  1465. ಮುಖ ನೋಡಿ ಮಣೆ ಹಾಕು
  1466. ಮುಖ ನೋಡಿ ಮನ ತಿಳಿ.
  1467. ಮುಖಕ್ಕೆ ಮೂಗು ಚೆಂದ, ಮೂಗಿಗೆ ಮೇಲೆರಡು ಕಣ್ಣು ಚೆಂದ.
  1468. ಮುಚ್ಚಿ ಹೇಳಿದರೆ ಒಗಟು ಬಿಚ್ಚಿ ಹೇಳಿದರೆ ಒರಟು
  1469. ಮುಟ್ಟಿದೋರ ಮೇಲೆ ಬಿಟ್ಟೆ ನನ್ನ ಪ್ರಾಣ
  1470. ಮುಡೆಯ ಮದುವೆಯಲ್ಲಿ ಉಡೋನೆ ಜಾಣ.
  1471. ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
  1472. ಮುತ್ತು ಚಿಪ್ಪಲ್ಲಿ ಹುಟ್ಟಿ ಮುಕುಟದ ಮಣಿಯಾಯ್ತು
  1473. ಮುತ್ತು ಹೆಚ್ಚಾಯ್ತು ಅಂತ ಎಲ್ಲೆಲ್ಲಿಗೋ ತೊಟ್ರಂತೆ.
  1474. ಮುದ ಹರಡುವ ಕಲೆ ಋಷಿ ಬಲ್ಲ.
  1475. ಮುದಿ ... ಮಹಾ ಪತಿವ್ರತೆ (ವೃದ್ಧ ನಾರೀ ಪತಿವ್ರತಾ)
  1476. ಮುದುಕರಿಗೆ ಮುದ್ದೆ ಕೇಡು ಹಳೇ ಬಟ್ಟೆಗೆ ನೂಲು ಕೇಡು
  1477. ಮುದುಕೀ ನಿನ್ನಾಟ ಮುಂದೈತಿ
  1478. ಮುದ್ದು ಮುದ್ದು ತೊಗಲೆ ಬಿದ್ದು ಬಿದ್ದು ನಗಲೆ
  1479. ಮುಲಾಜಿಗೆ ಬಸುರಾಗಿ ಹೇರೋಕೆ ತಾವಿಲ್ಲ
  1480. ಮುಸುಕಿನೊಳಗೆ ಗುದ್ದಿಸಿಕೊಂಡಂತೆ
  1481. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ
  1482. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
  1483. ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
  1484. ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
  1485. ಮೂಕ ಪ್ರಾಣಿಯ ಕೊಲ್ಲದ್ದು ಜೀವಧರ್ಮ
  1486. ಮೂಕವೇದನೆಯು ಸತ್ಯಕ್ಕಿಂತ ಮೇಲು.
  1487. ಮೂಗಿಗಿಂತ ಮೂಗುತಿ ಭಾರ
  1488. ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು
  1489. ಮೂರು ಕಾಸಿನ ಮಾಂಸವಿಲ್ಲದಿದ್ದರೂ, ಮಾತು ಮಾತ್ರ ಜೋರು.
  1490. ಮೂರು ವರ್ಷಕ್ಕೆ ಬಂದಿದ್ದು ಮೂವತ್ತು ವರ್ಷಕ್ಕೆ ಬಂತು
  1491. ಮೂರು ವರ್ಷದ ಬುದ್ಧಿ ನೂರು ವರುಷದ ತನಕ.
  1492. ಮೂರೂ ಬಿಟ್ಟೋನು,ಊರಿಗೆ ದೊಡ್ಡೋನು
  1493. ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು
  1494. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
  1495. ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು
  1496. ಮೃತ್ಯು ಬಂದ ಮೇಲೆ ವೈದ್ಯ ಬಂದ.
  1497. ಮೆತ್ತಗಿದ್ದಲ್ಲಿ ಮತ್ತೊಂದು ಗುದ್ದಲಿ
  1498. ಮೆತ್ತಗಿದ್ದವರನ್ನು ಮೊಣಕೈಯಲ್ಲಿ ಗುದ್ದಿದರು
  1499. ಮೆತ್ತಗಿದ್ರೆ ತುಳೀತಾರೆ, ಜೋರಾಗಿದ್ರೆ ಹೆದ್ರತಾರೆ.
  1500. ಮೆಲ್ಲಗೆ ಹರಿಯೋ ನೀರು ಕಲ್ಲ ಕೊರೆದಿತ್ತು
  1501. ಮೇಯುವುದಕ್ಕೆ ಮುಂದೆ ;ಮೀಯುವುದಕ್ಕೆ ಹಿಂದೆ
  1502. ಮೇಲೆ ಬಸಪ್ಪ ಒಳಗೆ ವಿಷಪ್ಪ
  1503. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ
  1504. ಮೇಲೆ ಬಿದ್ದು ಬಂದೋಳು ಮೂರು ಕಾಸಿಗೂ ಕಡೆ
  1505. ಮೈತುಂಬ ಕಣ್ಣಿರಲಿ, ಕೈಯಲ್ಲಿ ಪೆನ್ನಿರಲಿ.
  1506. ಮೊಂಡ ಕೊಡಲಿ ರಟ್ಟೆಗೆ ಮೂಲ
  1507. ಮೊಂಡ ಮಾವನಿಗೊಬ್ಬ ಭಂಡ ಅಳಿಯ
  1508. ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು
  1509. ಮೊದಲು ಕಣ್ಣು ಬಿಡು, ನಂತರ ಕೈ ಮಾಡು.
  1510. ಮೊಲ ಎಬ್ಬಿಸಿ ...ಕ್ಕೆ ಕೂತರು
  1511. ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು
  1512. ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
  1513. ಮೋಕ್ಷಕ್ಕೆ ಗ್ನಾನ ಬೇಕು ಯೋಗಕ್ಕೆ ಧ್ಯಾನ ಬೇಕು
  1514. ಮೋಕ್ಷಮಂತ್ರ ತಿಳಿದವನಿಗೆ ವೇದಮಂತ್ರದ ಗೊಡವೆಯೆ?
  1515. ಮೋಟಾಳಿಗೊಂದು ಚೋಟಾಳು
  1516. ಯಂಕ,ಸೀನ,ನೊಣ ಅಂತ ಮನೇಲಿ ಮೂರೇ ಜನ
  1517. ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ
  1518. ಯಥಾ ರಾಜಾ ತಥಾ ಪ್ರಜಾ
  1519. ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು
  1520. ಯಾದವೇಂದ್ರ ದನ ಕಾದ, ರಾಘವೇಂದ್ರ ರಾಜ್ಯವಾಳಿದ.
  1521. ಯಾರ ತೋಟದ ಹುಲ್ಲು ಮೇದಾದ್ರೂ ನಮ್ಮ ಕರು ದೊಡ್ಡದಾಗಲಿ.
  1522. ಯಾರ ಹೆಡ್ತಿ ಎಲ್ಲಿಯಾದರೂ ಹೋಗಲಿ ನಮ್ಮ ಹೆಡ್ತಿ ನಮ್ಮನೇಲಿರಲಿ
  1523. ಯಾರದೊ ದುಡ್ಡಿನಲ್ಲಿ ಯೆಲ್ಲಮನ್ನ ಜಾತ್ರೆ
  1524. ಯಾರದೊ ದುಡ್ಡು ಎಲ್ಲಮ್ಮನ ಜಾತ್ರೆ.
  1525. ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ
  1526. ಯಾರನ್ನ ನಂಬಿದರು ಆರೈದು ನಂಬಬೇಕು
  1527. ಯಾರಿಗೂ ತೋರದಂತೆ ದೈವ ತನ್ನೊಳಗೆ ಸಾರಿಹುದು
  1528. ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ
  1529. ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ
  1530. ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು
  1531. ಯಾವ ದೇವರು ವರ ಕೊಟ್ಟರೂ ಗಡನಿಲ್ಲದೆ ಮಕ್ಕಳಾಗದು.
  1532. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೊ
  1533. ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ
  1534. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ
  1535. ಯೋಗ ಇದ್ದಷ್ಟೇ ಭೋಗ
  1536. ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ
  1537. ಯೋಗಿಗೆ ರಾಗ ಇರಬಾರದು ಭೋಗಿಗೆ ರೋಗ ಇರಬಾರದು
  1538. ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ
  1539. ರಂಗನ ಮುಂದೆ ಸಿಂಗನೆ ? ಸಿಂಗನ ಮುಂದೆ ಮಂಗನೆ ?
  1540. ರಂಭೆಯಂಥ ಹೆಣ್ತೀನ ಬಿಟ್ಟು ದೊಂಬಿತಿಯ ಹಿಂದೆ ಹೋದ
  1541. ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು
  1542. ರತ್ನ ತಗೊಂಡು ಹೋಗಿ ಗಾಜಿನ ತುಂಡಿಗೆ ಹೋಲಿಸಿದರು
  1543. ರವಿ ಕಾಣದ್ದನ್ನು ಕವಿ ಕಂಡ
  1544. ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ
  1545. ರಸವಳ್ಳಿ ಹೆಣ್ಣಿಗೆ ರಸಪೂರಿ ಹಣ್ಣಿಗೆ ಮನ ಸೋಲದವರಿಲ್ಲ
  1546. ರಸವಳ್ಳಿ ಹೆಣ್ಣು ಒಲಿವಂತೆ ಮಾಡುವುದು ಎಳ್ಳ ತಿಂದ ಋಣ
  1547. ರಸಿಕನ ನುಡಿ ತಿಂಗಳ ಬೆಳಕಿನಂತೆ
  1548. ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?
  1549. ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ
  1550. ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ
  1551. ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು
  1552. ರಾಜ ಇರೋತನಕ ರಾಣಿ ಭೋಗ
  1553. ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮಂಗೂ ಸೀತೆಗೂ ಏನು ಸಂಬಂಧ ಅಂದ್ರಂತೆ
  1554. ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ
  1555. ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ
  1556. ರಾಮ ರಾಜ್ಯ ಬಂದರೂ ರಾಗಿ ಬೀಸೋದು ತಪ್ಪಲಿಲ್ಲ
  1557. ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ .
  1558. ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ
  1559. ರಾಯ ಸತ್ತರೂ ಹೆಣ ; ನಾಯಿ ಸತ್ತರೂ ಹೆಣ .
  1560. ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
  1561. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
  1562. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು
  1563. ರೈತನ ಮುಗ್ಗು ನಾಡಿನ ಕುಗ್ಗು.
  1564. ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
  1565. ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ.
  1566. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ
  1567. ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ
  1568. ರೋಹಿಣಿ ಮಳೆ ಓಣಿಯೆಲ್ಲಾ ಕೆಸರು.
  1569. ಲಂಘನಮ್ ಪರಮೌಷಧಮ್
  1570. ಲಂಚ ಕೊಟ್ಟು ಮಂಚ ಏರು ವಂಚನೆ ಮಾಡಿ ಕೈಲಾಸ ಏರು
  1571. ಲಕುಮಿ ತೊಲಗಿದ ಬಳಿಕ ಕುಲ ವೀರವಿದ್ದು ಫಲವಿಲ್ಲ
  1572. ಲಕ್ಕಿ ಸೊಪ್ಪಾದರೂ ಲೆಕ್ಕದ ಮುದ್ದೆ ಉಣಬೇಕು
  1573. ಲಕ್ಷ್ಮಿ ಚಂಚಲೆ
  1574. ಲಂಚ ಕೊಡದವನಿಗೆ ಕೊಂಚವೂ ಸಿಗದು.
  1575. ಲಲನೆಯರ ಒಲುಮೆ ತೊಲಗಿದರೆ ಇಲ್ಲ
  1576. ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
  1577. ಲಾಭವಿಲ್ಲದ ವ್ಯಾಪಾರ ಕತ್ತೆ ಮೈ ಪರಚಿದಂಗೆ
  1578. ಲಾಲಿಸಿದರೆ ಮಕ್ಕಳು ; ಪೂಜಿಸಿದರೆ ದೇವರು
  1579. ಲಾಲಿಸಿದರೆ ಮಕ್ಕಳು ಪೂಜಿಸಿದರೆ ದೇವರು
  1580. ಲಿಂಗ ಹರಿದ ಮೇಲೆ ಜಂಗಮನ ಹಂಗೇನು
  1581. ಲೆಕ್ಕಕ್ಕಿಂತ ಹೆಚ್ಚು ಹೊರಬಾರದು, ಲೆಕ್ಕಕ್ಕಿಂತ ಹೆಚ್ಚು ದೂರೆಬಾರದು.
  1582. ಲೇ ಅನ್ನಲು ಅವಳೇ ಇಲ್ಲ ಮಗನ ಹೆಸರು ಮುದ್ದುರಗ.
  1583. ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು
  1584. ಲೋಕ ತಿಳೀಬೇಕು ಲೆಕ್ಕ ಕಲೀಬೇಕು.
  1585. ವಜ್ರಕ್ಕೆ ಸಾಣಿ ಹಿಡಿದಂತೆ
  1586. ವಯಸ್ಸಿಗೆ ತಕ್ಕ ಬುದ್ಧಿ ಕಲಿ.
  1587. ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು
  1588. ವಶಗೆಡದೆ ಹಸಗೆಡಲ್ಲ
  1589. ವಿದ್ಯಾವಂತನಾದರೆ ಜಗತ್ತಿನ ಆಡಳಿತವನ್ನೇ ನಡೆಸಬಹುದು.
  1590. ವಿದ್ಯೆ ಇಲ್ಲದವನ ಮೊರೆ ಹಾಳೂರ ಹದ್ದಿನಂತೆ
  1591. ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ
  1592. ವಿದ್ಯೆ ಬಲ್ಲವ ಇದ್ದಲ್ಲು ಸಲ್ಲುವ ಹೋಗಿದ್ದಲ್ಲು ಸಲ್ಲುವ
  1593. ವಿದ್ಯೆ ಬಲ್ಲವ ಎಲ್ಲಿದ್ದರು ಸಲ್ಲುವ
  1594. ವಿಧಿ ಕಾಣದ ಎಡೆಗಳಿಲ್ಲ
  1595. ವಿಧಿ ಮುನಿದರೆ ಸರಿ ಬೆಸವಾಯ್ತು
  1596. ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.
  1597. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
  1598. ವಿನಾಶ ಕಾಲೇ ವಿಪರೀತ ಬುದ್ಧಿ
  1599. ವಿರೂಪಾಕ್ಷ ಹಪೆ ಬಿಡ, ವಿಘ್ನೇಶ್ವರ ಕೊಪೆ ಬಿಡ.
  1600. ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
  1601. ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
  1602. ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
  1603. ವೇದ ಸುಳ್ಳಾದರು ಗಾದೆ ಸುಳ್ಳಾಗದು.
  1604. ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
  1605. ವೈದ್ಯರ ಹತ್ತಿರ, ವಕೀಲರ ಹತ್ತಿರ ಸುಳ್ಳು ಹೇಳಬೇಡ
  1606. ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
  1607. ವೈರವಿದ್ದವನ ಕರೆದು ಮುಖಕ್ಷೌರ ಮಾಡಿಸಿಕೊಡಹಾಗೆ.
  1608. ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
  1609. ವ್ರತ ಕೆಟ್ಟರೂ ಸುಖ ಪಡಬೇಕು
  1610. ಶಂಖದಿಂದ ಬಂದರೇ ತೀರ್ಥ
  1611. ಶಂಖದಿಂದ ಬಿದ್ದರೆ ತೀರ್ಥ
  1612. ಶರಣರ ಬದುಕನ್ನು ಅವರ ಮರಣದಲ್ಲಿ ನೋಡು
  1613. ಶರಣು ಆದವನಿಗೆ ಮರಣವಿಲ್ಲ.
  1614. ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
  1615. ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
  1616. ಶಿವಪೂಜೇಲಿ ಕರಡಿ/ಕರಡಿಗೆ ಬಿಟ್ಟ ಹಾಗೆ
  1617. ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ
  1618. ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ
  1619. ಶಿಸ್ತುಗಾರ ಪುಟ್ಟಶಾಮಿ
  1620. ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ
  1621. ಶುಭ ನುಡಿಯೋ ಸೋಮ ಅಂದರೆ ಗೂಬೆ ಕಾಣ್ತಲ್ಲೋ ಮಾಮ ಅಂದ ಹಾಗೆ
  1622. ಶೆಟ್ಟಿ ಬಿಟ್ಟಲ್ಲೆ ಪಟ್ಣ
  1623. ಶೆಟ್ಟಿ ಶೃಂಗಾರ ಆಗೋದ್ರಲ್ಲಿ ಪಟ್ಣ ಕೆಡ್ತು
  1624. ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು
  1625. ಶ್ಯಾನುಭೋಗರ ಸಬಳ ಸತೋಷ ಕೇಳಬೇಡಾ.
  1626. ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
  1627. ಸಂಕಟ ಬಂದಾಗ ವೆಂಕಟರಮಣ
  1628. ಸಂಕೋಚ ಮಾಡಿದರೆ ಸಂಕಪಾಷಾಣವೂ ಸಿಗದು.
  1629. ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು
  1630. ಸಂತೆ ಸೂಳೆ ನೆಚ್ಚಿಕೊಂಡು ಮನೆ ಹೆಂಡಿರನ್ನ ಬಿಟ್ಟರಂತೆ.
  1631. ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು
  1632. ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ
  1633. ಸಂತೆಗೂ ಮುಂಚೆ ಗಂಟು ಕಳ್ಳರು ನೆರೆದರಂತೆ
  1634. ಸಂತೇಲಿ ಮಂತ್ರ ಹೇಳಿದಂಗೆ
  1635. ಸಂತೇಲಿ ಮನೇ ಮಾಡಿ ಸದ್ದಿಗಂಜೂದೇ
  1636. ಸಂತೋಷವೇ ಯೌವನ, ಚಿಂತೆಯೇ ಮುಪ್ಪು.
  1637. ಸಂದೀಲಿ ಸಮಾರಾಧನೆ ಮಾಡ್ದಂಗೆ
  1638. ಸಂಸಾರ ಗುಟ್ಟು; ವ್ಯಾಧಿ ರಟ್ಟು
  1639. ಸಂಸಾರದಲ್ಲಿ ಸುಖವಿದೆ, ಬಾಳೆಂಬ ಬಂಧನದಲ್ಲಿ ಕಷ್ಟವಿದೆ.
  1640. ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ
  1641. ಸಗಣಿಯವನೊಡನೆ ಸ್ನೇಹಕ್ಕಿಂತ ಗಂಧದವನ ಜೊತೆ ಗುದ್ದಾಟ ಮೇಲು
  1642. ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
  1643. ಸಜ್ಜನರ ಸಂಗ ಹೆಜ್ಜೇನು ಸವಿದಂತೆ
  1644. ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ
  1645. ಸಣ್ಣದಿರುವಾಗ ಕತ್ತೆಯೂ ಬಹಳ ಸುಂದರ.
  1646. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ
  1647. ಸತ್ತ ಮೇಲಿನ ಸೊರ್ಗಕ್ಕಿಂತ ಇದ್ದ ನರಲೋಕ ವಾಸಿ
  1648. ಸತ್ತವರಿಗೆ ಸಂಗವಿಲ್ಲ, ಕೆಟ್ಟವರಿಗೆ ನೆಂಟರಿಲ್ಲ.
  1649. ಸತ್ತು ಕೊಳ್ಳೋ ಸೊರ‍್ಗಕ್ಕಿಂತ ಬದುಕಿ ಕೊಳ್ಳೋ ನರಕ ಲೇಸು
  1650. ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ
  1651. ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ
  1652. ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
  1653. ಸದಾಶಿವನಿಗೆ ಅದೇ ಧ್ಯಾನ
  1654. ಸನ್ಯಾಸಿ ಬೆಕ್ಕು ಸಾಕಿದ ಹಾಗೆ
  1655. ಸನ್ಯಾಸಿ ಸಂಸಾರ ಕಟ್ಟಿಕೊಂಡ ಹಾಗೆ
  1656. ಸಬಳ ಸಾರಿಗೆ ಏನಿಲ್ಲದಿದ್ದರೂ ನನ್ನ ಗಡನ್ನ ಸುಬೇದಾರ ಅದರೆ ಎಷ್ಟೋ ಹೆಚ್ಚಳ ಅದಳತೆ.
  1657. ಸಮತೆ ತೊಟ್ಟು(=ಧರಿಸಿ) ಪದವಿ ಮುಟ್ಟು
  1658. ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು
  1659. ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ
  1660. ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ)
  1661. ಸಮಯಕ್ಕೆ ಬಾರದ ಬುದ್ಧಿ, ಸಾವಿರ ಇದ್ದರು ಲದ್ದಿ,
  1662. ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ
  1663. ಸಮುದ್ರ ದಾಟಿದವನಿಗೆ ಹಸುವಿನ ಹೆಜ್ಜೆ ದೊಡ್ಡದೆ
  1664. ಸಮುದ್ರದ ನೆಂಟಸ್ತನ ; ಉಪ್ಪಿಗೆ ಬಡತನ
  1665. ಸಮುದ್ರದ ಮದ್ಯೆ ಇದ್ದರೂ ಉಪ್ಪಿಗೆ ಬರವಂತೆ
  1666. ಸರಿದರೆ ಒತ್ತಣ್ಣ ಒತ್ತಿದರೆ ಸರಿಯಣ್ಣ
  1667. ಸರಿಮನೆಯಾಕೆ ಸರಿಗೆ ಹಾಕಿಕೊಡರೆ ನೆರೆಮನೆಯಾಕೆ ಉರ್ಲು ಹಾಕಿಕೊಳ್ಳಬೇಕೆ?
  1668. ಸರಿಯಾದ ಎಚ್ಚರಿಕೆ ಇಲ್ಲದೆ ಹರಕೆಯ ಕುರಿಯಾದ
  1669. ಸರಿಸರಿಯಾಗಿದ್ರೆ,ಪರಿಪರಿ ನೆಂಟರು
  1670. ಸರಿಸುಮಾರಾಗಿ ಸಮಾನಾರ್ಥಕ ಗಾದೆಗಳು
  1671. ಸಲಿಗೆ ಕೊಟ್ಟ ಸೊಣಗ ಸಟ್ಟುಗ ನೆಕ್ಕಿತಂತೆ
  1672. ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
  1673. ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ
  1674. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ
  1675. ಸಾದೆತ್ತಿಗೆ ಎರಡು ಹೇರು (ಹೊರೆ)
  1676. ಸಾಮವೇದದ ಗಾನ ಭೂಮಿ ದಾನದ ಫಲವ ಜಂಬೂದ್ವೀಪದವರೇ ಬಲ್ಲರು
  1677. ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ
  1678. ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
  1679. ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ
  1680. ಸಾಯ್ತೀನಿ ಸಾಯ್ತೀನಿ ಅಂದೋಳು ಸಾವಿರ ಮುದ್ದೆ ನುಂಗಿದಳಂತೆ.
  1681. ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ
  1682. ಸಾಲ ಕೊಳ್ಳುವಾಗ ಒಂದುರಾಗ, ಸಾಲ ಹೊಳ್ಳಿ ಕೊಡುವಾಗ ನಾನಾರಾಗ
  1683. ಸಾಲ ಕೊಳ್ಳುವಾಗ ಹಾಲು ಕುಡಿದಂತೆ, ಸಾಲ ತಿರುಗಿ ಕೊಡುವಾಗ ಕಿಬ್ಬದಿ ಕೀಲು ಮುರಿದಂತೆ
  1684. ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ
  1685. ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು
  1686. ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
  1687. ಸಾಲ್ಗಾರ ಸುಮ್ಮನಿದ್ರು ಸಾಕ್ಷಿಗಾರ ಸುಮ್ಮನಿರ.
  1688. ಸಾವಿರ ಉಳಿ ಪೆಟ್ಟು,ಒಂದು ಚಿತ್ತಾರ
  1689. ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ
  1690. ಸಾವಿರ ಕುದುರೆ ಸರದಾರ, ಮನೆ ಹೆಂಡತಿ ಕಾಸ್ತಾರ
  1691. ಸಾವಿರ ಕೊಟ್ಟರೂ ಸವತಿ ಮನೆ ಬೇಡ
  1692. ಸಾವಿರ ಚಿತ್ತಾರ ಮಸಿ ನುಂಗಿತು
  1693. ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ
  1694. ಸಾವಿರ ಸುಳ್ಳು ಹೇಲಿ ಒಂದು ಮದುವೆ ಮಾಡು
  1695. ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
  1696. ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು
  1697. ಸಿಡಿಲು ಬಡಿದರೆ ಅಂಗೈಲಿ ಹಿಡಿದ ಕೊಡೆ ಕಾಪಾಡಿತೇ
  1698. ಸಿದ್ದಿಗಿಂತ ಬಲವಿಲ್ಲ ಬುದ್ಧಿಗಿಂತ ಹಿರಿದಿಲ್ಲ
  1699. ಸಿರಿ ಬಂದ ಕಾಲದಲಿ ಕರದಲಿ ಧರ್ಮ ಬೇಕು
  1700. ಸಿರಿ ಸೋಂಕಿದವರ ಪರಿ ಬೇರೆ
  1701. ಸಿರಿತನ ಇರೂತನ ಪಿರಿಪಿರಿ ಸಿರಿಹೋದ ಮರುದಿನ ಕಿರಿಕಿರಿ
  1702. ಸಿರಿತನ ಇರೂತನ ಹಿರಿತನ ಘನ
  1703. ಸಿರಿತನ ಇರೂತನ ಹಿರಿತನ ಸಿರಿಹೋದ ಮರುದಿನ ಕಿರಿತನ
  1704. ಸಿರಿಯಣ್ಣ ಉಳ್ಳನಕ ಹಿರಿಯಣ್ಣ ಇಲ್ಲಾದಗ ನಡಿಯಣ್ಣ
  1705. ಸಿರಿಯವ್ವನದ ಹೆಣ್ಣು ಸಕ್ಕರೆ ಬೊಂಬೆಯಂತೆ
  1706. ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
  1707. ಸೀರೆ ಗಂಟು ಬಿಚ್ಚೋವಾಗ ದಾರದ ನಂಟು ಯಾರಿಗೆ ಬೇಕು?
  1708. ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ
  1709. ಸುಡುಗಾಡಿನಲ್ಲಿ ಕುಳಿತು ಸುಖ ಬಯಸಿದಂತೆ.
  1710. ಸುಡುವ ಮನೆಯ ಗಳ ಹಿರಿದಂತೆ
  1711. ಸುಣ್ಣ ತಿಂದ ಮಂಗ ಹಲ್ಲು ಕಿಸಿದಂತೆ.
  1712. ಸುದರ ಪುರುಷನೆಲ್ಲೆ ಸುಪಣಾತಿ ಅದ್ರೆ ಸೂಳೆ ಮನೇಲಿ ಸುಖನಿದ್ರೇಲವ್ರೆ ಎದಳು.
  1713. ಸುಳ್ಳನ ಮಾತು ಕೆಸರೊಳಗೆ ಮುಳ್ಳು ತುಳಿದಂತೆ
  1714. ಸುಳ್ಳು ದೇವರಿಗೆ ಕಳ್ಳ ಪೂಜಾರಿ
  1715. ಸುಳ್ಳು ಹೇಳಿದರೂ ನಿಜದ ತಲೆಯ ಮೇಲೆ ಹೊಡೆದಂಗೆ ಹೇಳಬೇಕು
  1716. ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
  1717. ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ
  1718. ಸೂಳೆ ಕೈಯಲ್ಲಿ ಜೋಳ ಕುಟ್ಟಿಸಿದ ಹಾಗೆ
  1719. ಸೂಳೆ ಪಾಪ ಸನ್ಯಾಸಿಗೆ
  1720. ಸೂಳೆ ಮುಪ್ಪಾಗಿ ಗೊರವಿತ್ತಿಯಾದಳು
  1721. ಸೂಳೆಗೆ ಮದುವೆ ಮಾಡಿದ ಹಾಗೆ
  1722. ಸೆಗಣಿ ಮೇಲೆ ಕಲ್ಲು ಹಾಕಿ, ಮುಖಕ್ಕೆ ಸಿಡಿಸಿಕೊಂಡಂತೆ.
  1723. ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು
  1724. ಸೇರಿಗೆ ಸವ್ವಾ ಸೇರು
  1725. ಸೇರಿಗೆ ಸವ್ವಾಸೇರು
  1726. ಸೊಕ್ಕಿದ್ದವನಿಗೆ ಯಾಣ, ರೊಕ್ಕಿದ್ದವನಿಗೆ ಪಟ್ಟಣ.
  1727. ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ್ತದೆ
  1728. ಸೊಕ್ಕುವುದು ಕೆಕ್ಕರಿಸಿ ನೋಡುವುದು ಸೇರಕ್ಕಿಯ ಗುಣ
  1729. ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು
  1730. ಸೊಲ್ಲಿನ ಬೇದ ತಿಳಿದ ಕಿರಿಯ ಎಲ್ಲರಿಗೂ ಹಿರಿಯ
  1731. ಸೋದರ ಮಾವನ ಚಾಳು ತುಂಡಪುಂಡರ ಪಾಲು
  1732. ಸೋಲಿಲ್ಲದ ಸರದಾರನಿಲ್ಲ, ಸಂಗಮವಿಲ್ಲದ ಸಾವಿಲ್ಲ.
  1733. ಸ್ಟ್ಯಾಪಿರುವಷ್ಟು ನಾಲಗೆ ಚಾಚು.
  1734. ಸ್ನೇಹ ಎಂಬ ಸಂಪಿಗೆ ಸುಮಧುರವಾದದ್ದು.
  1735. ಸ್ವತಂತ್ರವೋ,ಸ್ವರ್ಗಲೋಕವೋ
  1736. ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
  1737. ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.
  1738. ಸ್ವಾತಿ ಮಳೆ ಮುತ್ತಿನ ಬೆಳೆ.
  1739. ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
  1740. ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
  1741. ಹಂಗಿನರಮನೆಗಿಂತ ಕುಂದಣದ ಗುಡಿ ಲೇಸು
  1742. ಹಂಗು ತೊರೆದ ಮೇಲೆ ಲಿಂಗದ ಪರಿವೆ ಏನು
  1743. ಹಂಚಿದವರಿಗೆ ಹಲ್ಲು ಬಾಯಿ
  1744. ಹಂಚು ಕಾಣದ ಕೈ ಕಂಚು ಕಾಣ್ತು
  1745. ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು
  1746. ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
  1747. ಹಂಪ್ಯಾಗ ಇರೂದಕ್ಕಿಂತ ತನ್ನ ಕೊಂಪ್ಯಾಗ ಇರೂದ್ ಲೇಸು
  1748. ಹಕ್ಕಿ ತೆನೆ ತಿಂದು ಹಿಕ್ಕೆ ಇಕ್ಕಿ ಹೋಯ್ತು
  1749. ಹಗಲು ಅರಸನ ಕಾಟ ಇರುಳು ದೆವ್ವದ ಕಾಟ
  1750. ಹಗೆ ಬಿತ್ತಿ ಬೆಂಕಿ(ಹೊಗೆ) ಬೆಳೆದ
  1751. ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ
  1752. ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು
  1753. ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ
  1754. ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ
  1755. ಹಟದಿಂದ ಹೆಣ್ಣು ಕೆಟ್ಟಳು ಚಟದಿಂದ ಗಂಡು ಕೆಟ್ಟ
  1756. ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು.
  1757. ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
  1758. ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ
  1759. ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ
  1760. ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ
  1761. ಹಣ ಇಲ್ಲದವ ಹೆಣಕ್ಕಿಂತ ಕಡೆ
  1762. ಹಣ ಎರವಲು ತಂದು ಮಣ ಉರುವಲು ಕೊಂಡ
  1763. ಹಣದಲ್ಲಿ ಬಡವನಾದರೂ ಬುದ್ಧಿಯಲ್ಲಿ ಬಡವನಾಗಬಾರದು.
  1764. ಹಣವಿದ್ದ ಗಂಡನನ್ನು ಮದುವೆಯಾದರೂ ಋಣವಿದ್ದಷ್ಟೇ
  1765. ಹಣವಿಲ್ಲದ ಮನುಷ್ಯ, ರೆಕ್ಕೆ ಇಲ್ಲದ ಪಕ್ಷಿಯಂತೆ.
  1766. ಹಣ್ಣು ತಿಂದವನು ನುಣುಚಿಕೊಂಡ; ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ
  1767. ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ
  1768. ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು
  1769. ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
  1770. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೊಲ್ಲ
  1771. ಹತ್ತಿರಕ್ಕೆ ಬಂದರೆ ಹಡಿಕ್ ನಾತ
  1772. ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
  1773. ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ
  1774. ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
  1775. ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ
  1776. ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ
  1777. ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ
  1778. ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
  1779. ಹತ್ತೋಕ್ ಮೊದ್ಲು ಕುದರೆ ನೋಡು, ಬಿತ್ತೊಕ್ ಮೊದ್ಲು ಹೊಲ ನೋಡು.
  1780. ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು
  1781. ಹದರಿದವರ ಮೇಲೆ ಕಪ್ಪೆ ಎಸೆದರು
  1782. ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
  1783. ಹನುಮಂತನೇ ಹಗ್ಗ ತಿನ್ನುವಾಗ ಪೂಜಾರಿಗೆ ಶ್ಯಾವಿಗೆ ಬೇಕಂತೆ
  1784. ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
  1785. ಹಪೆಗೆ ಹೋಗದಿದ್ದರೆ ಸಪಿಗೆ ನೋಡಲಿಲ್ಲವೇ?
  1786. ಹಬ್ಬಕ್ಕೆ ಹೋಗಿ ತಬ್ಬಿಬ್ಬನಾದ
  1787. ಹಬ್ಬದ ದಿನವೂ ಹಳೇ ಗಂಡನೇ ?
  1788. ಹರ ಮುನಿದರೆ ಗುರು ಕಾಯ್ವ
  1789. ಹರಕಿನಲ್ಲಿ ಇಲಿ ಕಡಿಯಿತು
  1790. ಹರಯದಲ್ಲಿ ಹಂದಿ ಕೂಡ ಚೆನ್ನಾಗಿರುತ್ತೆ.
  1791. ಹರಿದಿದ್ದೇ ಹಳ್ಳ, ನಿಂತಿದ್ದೇ ತೀರ್ಥ.
  1792. ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ
  1793. ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ
  1794. ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ
  1795. ಹರೆಯಕ್ಕೆ ಬಂದಾಗ ಹಂದಿನೂ ಚಂದ
  1796. ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ
  1797. ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು
  1798. ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.
  1799. ಹಲ್ಲಿದ್ದಾಗ ಕಡ್ಲೆ ಇಲ್ಲ; ಕಡ್ಲೆ ಇದ್ದಾಗ ಹಲ್ಲಿಲ್ಲ
  1800. ಹಲ್ಲಿದ್ರೆ ಕಡಲೆ ಇಲ್ಲ;ಕಡಲೆ ಇದ್ರೆ ಹಲ್ಲಿಲ್ಲ
  1801. ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
  1802. ಹಲ್ಲಿಲ್ಲದಿದ್ದರೂ ಚಕ್ಕುಲಿ ತಿನ್ನೋ ಚಪಲ.
  1803. ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು
  1804. ಹಸನಾದ ಮಾತಿಗೆ ಜೀವ ಬೆಸನಾಯ್ತು
  1805. ಹಸಿ ಗೋಡೆ ಮೇಲೆ ಹರಳು ಎಸೆದಂತೆ
  1806. ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು
  1807. ಹಸಿದವನಿಗೆ ಹಳಸಿದ್ದೇ ಪಾವನ.
  1808. ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
  1809. ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು
  1810. ಹಸಿದು ಹಲಸು, ಉಂಡು ಮಾವು
  1811. ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
  1812. ಹಳೆ ಚಪ್ಪಲಿ, ಹೊಸಾ ಹೆಂಡತಿ ಕಚ್ಚೊಲ್ಲ
  1813. ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ
  1814. ಹಳೆಯ ಕೋಟು ಧರಿಸಿ, ಹೊಸ ಪುಸ್ತಕ ಕೊಳ್ಳಿ.
  1815. ಹಳೇ ಗಂಡನ ಪಾದವೇ ಗತಿ
  1816. ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲ, ಬರಿಗಾಲಲ್ಲಿ ನಡೀಬೇಡ.
  1817. ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
  1818. ಹಾಕು ಮಣೆ,ನೂಕು ಮಣೆ,ತಳ್ಳು ಮಣೆ
  1819. ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ
  1820. ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ
  1821. ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ
  1822. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
  1823. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
  1824. ಹಾಡಿದ್ದೇ ಹಾಡಿದ ಕಿಸಬಾಯಿ ದಾಸ
  1825. ಹಾಡ್ತಾ ಹಾಡ್ತಾ ರಾಗ; ಉಗುಳ್ತಾ ಉಗುಳ್ತಾ ರೋಗ
  1826. ಹಾಡ್ತಾ ಹಾಡ್ತಾ ರಾಗ , ನರಳ್ತಾ ನರಳ್ತಾ ರೋಗ
  1827. ಹಾದರ ಹಾಲು ಸಕ್ಕರೆಯಂತೆ,ಬಯಲಾದರೆ, ಬೇವಿನ ಸಾರದಂತೆ
  1828. ಹಾದಿ ತಪ್ಪಿದವನಿಗೆ ಹದಿನೆಂಟು ಹಾದಿ
  1829. ಹಾದಿ ಹಣವಡ್ಡ ಹಾದರಗಿತ್ತಿ ಮನೆ ಯಾವುದು.
  1830. ಹಾದೀಲಿ ಹೋಗುವವನ ಕೆಣಕ ಅವನು ಬಂದು ನಿನ್ನ ತದಕ
  1831. ಹಾಯೋ ಎತ್ತು ಹಾಯ್ದರೂ ಬಂತು ಬಿಟ್ಟರೂ ಬಂತು
  1832. ಹಾಯ್ದೆ ಇದ್ದರೂ ಎತ್ತಿನ ಕೊಂಬು ಉದ್ದ
  1833. ಹಾರ‍್ಸೋನೋ ತೀರ‍್ಸೋನೋ.
  1834. ಹಾರದ ಕೋತಿಗೆ ಮುಪ್ಪಾಗ ಬೆಲ್ಲ ತಿನ್ನಿಸಿದರಂತೆ
  1835. ಹಾರಾಡೋ ಅಪ್ಪುಂಗೆ ತೂರಾಡೋ ಮಗ ಹುಟ್ದಂಗೆ
  1836. ಹಾರುವ ಆಳಲ್ಲ, ಬಾಳೆ ದಡಿಯಲ್ಲ
  1837. ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
  1838. ಹಾರುವಯ್ಯನಿಗೆ ಹರಕೆ ಕಟ್ಟಿದಕ್ಕೆ ಹಳೇ ಪರಕೇಲಿ ಹೋಡ್ದ ಹಾಗೆ
  1839. ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ
  1840. ಹಾರುವರ ಮೋರೆಯಾದರೂ ನೀರಿನಲ್ಲಿ ತೊಳೆಯದಿದ್ದರೆ ನಾರದೆ ಇದ್ದೀತೆ.
  1841. ಹಾರೋ ಹಕ್ಕಿ ಪುಕ್ಕ ಎಣಿಸಿದಂತೆ
  1842. ಹಾರೋ ಹಕ್ಕಿಗೆ ಹಾದರ ಕಟ್ಟಿದರು.
  1843. ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ
  1844. ಹಾಲಲ್ಲಾದ್ರೂ ಅದ್ದು, ನೀರಲ್ಲಾದ್ರೂ ಅದ್ದು.
  1845. ಹಾಲಿಗಿಂತ ಕೆನೆ ರುಚಿ
  1846. ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
  1847. ಹಾಲಿದ್ದ ಕಡಲ್ಲಿ ಬೆಕ್ಕು ಹೇಲು ಕಡಲ್ಲಿ ನಾಯಿ
  1848. ಹಾಲಿದ್ದಾಗ ಹಬ್ಬ ;ನೀರಿದ್ದಾಗ ನೇಮ
  1849. ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು
  1850. ಹಾಲಿನ ದುಡ್ಡು ಹಾಲಿಗೆ;ನೀರಿನ ದುಡ್ಡು ನೀರಿಗೆ
  1851. ಹಾಲಿನಲ್ಲಿ ಹುಳಿ ಹಿಂಡಿದಂತೆ
  1852. ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ
  1853. ಹಾಲು ಕಾಯಿಸ್ಕೊಂಡು ನಾನಿದ್ದೆ ಹಲ್ಲು ಕಿರ‍್ಕೊಂಡು ನೀ ಬಂದೆ.
  1854. ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ
  1855. ಹಾಲು ಕುಡಿದು ಹಾಗಲಕಾಯಿ ತಿಂದಂತೆ.
  1856. ಹಾಲು ಬಿಟ್ಟವರ ಮನೆಗೆ ಸೀಬಿ ಅಂದಂಗೆ.
  1857. ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ
  1858. ಹಾಲುಕ್ಕಿದ ಮನೇಲಿ ಮೇಲ್‍ಗರೀಲಿ.
  1859. ಹಾವಿಗೆ ಹಾಲೆರೆದರೇನು ಫಲ
  1860. ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ
  1861. ಹಾಸಿಗೆ ಇದ್ದಷ್ಟು ಕಾಲು ಚಾಚು
  1862. ಹಾಳೂರಿಗೆ ಉಳಿದವನೇ ಗೌಡ
  1863. ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ
  1864. ಹಿಂದಲ ಮಾತು ಮರಿ ಮುಂದಲ ಬಾಳು ಅರಿ
  1865. ಹಿಟ್ಟೂ ಹಳಸಿತ್ತು ನಾಯಿಯೂ ಹಸಿದಿತ್ತು
  1866. ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
  1867. ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
  1868. ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು
  1869. ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ
  1870. ಹಿತ್ತಿಲ ಗಿಡ ಮದ್ದಲ್ಲ
  1871. ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.
  1872. ಹಿರಿದು ಪಾಪ ಮಾಡಿ ಗಂಗೆಗೆ ಹರಿದರು
  1873. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
  1874. ಹಿರಿಯರ ಮಾತಿಗೆ ಕಿವಿಗೊಡು, ಚುಚ್ಚುಮಾತಿಗೆ ಬೆನ್ನು ಕೊಡು.
  1875. ಹಿರಿಯರಿಗೆ ಶಿರಬಾಗು, ಗುರುವಿಗೆ ತಲೆಬಾಗು.
  1876. ಹಿರೀಮಗ ಆಗಬೇಡ,ಹಿತ್ತಿಲ ಕದ ಆಗಬೇಡ
  1877. ಹೀನ ಸುಳಿ ಬೋಳಿಸಿದರೂ ಹೋಗೋದಿಲ್ಲ
  1878. ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
  1879. ಹುಚ್ಚಲ್ಲ,ಬೆಪ್ಪಲ್ಲ,ಶಿವಲೀಲೆ
  1880. ಹುಚ್ಚು ಬಿಟ್ಟ ಹೊರತು ಮದುವೆ ಆಗೋಲ್ಲ; ಮದುವೆ ಆದ ಹೊರತು ಹುಚ್ಚು ಬಿಡಲ್ಲ
  1881. ಹುಚ್ಚು ಮನಸಿಗೆ ಹತ್ತು ಹಲವು ಮುಖಗಳು
  1882. ಹುಚ್ಚು ಹೊಳೇ ಬರುವಾಗ ಹೂವಿನ ತೋಟ ಇದಿರೇ
  1883. ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ
  1884. ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
  1885. ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ
  1886. ಹುಟ್ಟಿದವಗೆ ಸಾವು ತಪ್ಪದು
  1887. ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು
  1888. ಹುಟ್ಟಿನಿಂದಲೇ ವಕ್ರವಾದದ್ದು, ಪೋಷಣೆಯ ಮೂಲಕ ಸರಿಯಾದಂತೆ.
  1889. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೆ ?
  1890. ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ
  1891. ಹುಟ್ಟು ಸಾವು ದಿಟವೇ ಆದರೂ ಹೆಜ್ಜೆ ಹೆಜ್ಜೆಗೆ ಅಂಜೂದ್ ತಪ್ಪಲಿಲ್ಲ
  1892. ಹುಟ್ಟುವವನ ಅಣ್ಣ ಬೆಳೆಯುವವನ ತಮ್ಮ
  1893. ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು
  1894. ಹುಡುಕುತ್ತಿದ್ದ ಬಳ್ಳಿ ಕಾಲಿಗೇ ತೊಡರಿಕೊಂಡಿತು
  1895. ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ
  1896. ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
  1897. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೆ ? ಆಕಳು ಕಪ್ಪಾದರೂ ಹಾಲು ಕಪ್ಪೆ ?
  1898. ಹುಣ್ಣಿನ ಮೇಲೆ ಉಪ್ಪು ಸವರಿದಂತೆ
  1899. ಹುಣ್ಣಿಮೆ ಬರುವನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು
  1900. ಹುಣ್ಣು ಮಾದರೂ ಕಲೆ ಮಾದೀತೇ
  1901. ಹುತ್ತ ಬಡಿದರೆ ಹಾವು ಸಾಯುವುದೇ
  1902. ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ
  1903. ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ.
  1904. ಹುಯ್ಯಂತ ಕೊಡ ಬೇಡ ಸುಮ್ಮನೆ ಕೂರಲು ಬೇಡ
  1905. ಹುಲಿ ಹಸಿದಾಗ ಹುಲ್ಲು ತಿಂದೀತೆ?
  1906. ಹುಲಿಗಲ್ಲ, ಸಿಂಹಕ್ಕಲ್ಲ, ಮನೆಯ ಹೆಂಡತಿಯ ನೆರಳಿಗಂಜಿದ.
  1907. ಹುಲಿಗೆ ಹುಣ್ಣು ಎದ್ದ ಹಾಗೆ
  1908. ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
  1909. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ
  1910. ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ್ಣ ಕೇಳಿದಂಗೆ
  1911. ಹೂ-ದವರು ‌ಯಾರು ಅಂದರೆ ಮಾಸಿದ ಸೀರೆಯವರು.
  1912. ಹೂಡಿದರೆ ಒಲೆ, ಮಡಿದರೆ ಮನೆ.
  1913. ಹೂವ ತರುವ ಮನೆಗೆ ದೇವ ಹುಲ್ಲು ಹೊರುವ
  1914. ಹೂವಿನ ಜೊತೆ ದಾರ ಮುಡಿಯೇರಿತು
  1915. ಹೂವಿನಿಂದ ನಾರಿಗೂ ಸ್ವರ್ಗ
  1916. ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು
  1917. ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ
  1918. ಹೆಂಗಸರ ಬುದ್ಧಿ ಸೊಂಟದಿಂದ ಕೆಳಗೆ
  1919. ಹೆಂಡ ಕುಡಿದ ಕಪಿಗೆ ಚೇಳು ಕಡಿದ ಹಾಗೆ
  1920. ಹೆಂಡ ಕುಡಿಯುವ ದೇವರಿಗೆ ಹೇ.. ತಿನ್ನುವ ಪೂಜಾರಿ
  1921. ಹೆಂಡತಿ ಮುಂದಿರಬೇಕು, ಮಗ ಹಿಂದಿರಬೇಕು.
  1922. ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
  1923. ಹೆಂಡತಿಯಿಲ್ಲದ ಮನೆ ತಂತಿಯಿಲ್ಲದ ವೀಣೆ
  1924. ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ
  1925. ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ
  1926. ಹೆಂದತಿಯಿಲ್ಲದ ಮನೆ ದೇವರಿಲ್ಲದ ಗುಡಿ
  1927. ಹೆಗಸಿನ ಬುದ್ಧಿ ಮೊಣಕಾಲ ಕೆಳಗೆ
  1928. ಹೆಡ್ಡಾಳಾದ್ರೂ ದೊಡ್ಡಾಳು ಮೇಲು
  1929. ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ
  1930. ಹೆಣ್ಣಿಂದ ರಾವಣ ಕೆಟ್ಟ ಮಣ್ಣಿಂದ ಕೌರವ ಕೆಟ್ಟ
  1931. ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
  1932. ಹೆಣ್ಣಿಗೆ ಹೆಣ್ಣೇ ವೈರಿ
  1933. ಹೆಣ್ಣಿದ್ದ ಮನೆಗೆ ಎಡತಾಕಿ ಅಣ್ಣಯ್ಯ ಮಣ್ಣಾಗಿ ಹೋದ
  1934. ಹೆಣ್ಣಿನ ಬಗೆ/ಮನಸ್ಸ ಬಲ್ಲೋರಿಲ್ಲ
  1935. ಹೆಣ್ಣಿನ ಬಾಳು ಕಣ್ಣೀರಿನ ಗೋಳು
  1936. ಹೆಣ್ಣಿನ ಸೊಬಗನು ಕಣ್ಣಾರೆ ಕಂಡು ಬಯಸದ ಅಣ್ಣಗಳು ಅದಾರು
  1937. ಹೆಣ್ಣು ಉರಿಸಿದ ಮನೆಯ ಹೆಗ್ಗಂಬ ಉರಿಯಿತು
  1938. ಹೆಣ್ಣು ಚಂದ,ಕಣ್ಣು ಕುರುಡು
  1939. ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ
  1940. ಹೆಣ್ಣು ಜಲ್ಮಕ್ಕೆ ಹೆಜ್ಜೆಗೊಂದು ಮುಳ್ಳು
  1941. ಹೆಣ್ಣು ಹಡೆದವರ ಮನೆ ನುಣ್ಣಗೆ ಗಂಡು ಹಡೆದವರ ಮನೆ ತಣ್ಣಗೆ
  1942. ಹೆಣ್ಣು ಹುಟ್ಟಿದರೊಂದು ಹುಣ್ಣು ಹುಟ್ಟಿದ ಹಾಗೆ
  1943. ಹೆಣ್ಣು ಹೊನ್ನು ಮಣ್ಣು ಇನ್ನೊಬರ ಕೈ ಸೇರಿದರೆ ಹೋದಂತೆ
  1944. ಹೆಣ್ಮಕ್ಕಳಿಗೆ ತಾಯಿ ಶಿಕ್ಷೆ,, ಗಂಡ್ಮಕ್ಕಳ್ಳಿಗೆ ತಂದೆ ಶಿಕ್ಷೆ.
  1945. ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ
  1946. ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು
  1947. ಹೆತ್ತವರಿಗೆ ಹೆಗ್ಗಣ ಮುದ್ದು.
  1948. ಹೆತ್ತವರು ಹೆಸರಿಕ್ಕ ಬೇಕು
  1949. ಹೆತ್ತೋರ್ಗೆ ಹೆಗ್ಗಣ ಮುದ್ದು, ಕಟ್ಗೊಂಡೋರ್ಗೆ ಕೋಡಂಗಿ ಮುದ್ದು.
  1950. ಹೆದರುವವರ ಮೇಲೆ ಕಪ್ಪೆ ಎಸೆದಂತೆ
  1951. ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ
  1952. ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ
  1953. ಹೆಸರು ಸಂಪತ್ತು, ಕೂಳಿಗಿಲ್ಲ ಒಪ್ಪತ್ತು.
  1954. ಹೆಸರು ಚೆಂದ ; ಉಸುಡಿ ಕೋಡಂಗಿ
  1955. ಹೆಸರು ಸರಸ್ವತಿ, ಎಡಗೈ ಹೆಬ್ಬೆಟ್ಟಿನ ಸಹಿ.
  1956. ಹೇಮಗೇಡಿ ನೇಮ ಬೆಳಗಿದ
  1957. ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ
  1958. ಹೇಳೊದು ವೇದ ಹಾಕೊದು ಗಾಳ
  1959. ಹೇಳೋದು ಶಾಸ್ತ್ರ, ಹಾಕೋದು ಗಾಣ
  1960. ಹೇಳೋದು ಶಾಸ್ತ್ರ,ತಿನ್ನೋದು ಬದನೆಕಾಯಿ
  1961. ಹೇಳೋರು ಹೆಡ್ಡರಾದರೆ ,ಕೇಳೋರು ಕಿವುಡರೇ?
  1962. ಹೊಕ್ಕು ಬಳಸಿದರೆ ನಂಟು
  1963. ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ
  1964. ಹೊಟ್ಟೆ ತುಂಬಿದ ಮೇಲೆ ಕಜ್ಜಾಯವೂ ವಿಷ
  1965. ಹೊಟ್ಟೆ ತುಂಬಿದ ಮೇಲೆ ಹಿಟ್ಟೂ ಕಲ್ಲು
  1966. ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
  1967. ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
  1968. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು
  1969. ಹೊಟ್ಟೇಲಿರೋ ಸಿಟ್ಟು ರಟ್ಟೇಲಿಲ್ಲ
  1970. ಹೊತ್ತನ್ನು ಕೊಲ್ಲುವ ಮೈಗಳ್ಳಗಿಂತ ಸತ್ತ ಹೆಣ ಲೇಸು
  1971. ಹೊತ್ತಿಗಿಲ್ಲದ ಗಾದೆ, ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ.
  1972. ಹೊತ್ತಿರುವಾಗಲೇ ಗೊತ್ತು ಸೇರಬೇಕು
  1973. ಹೊತ್ತು ಕಳೆದರೆ ಮತ್ತೆ ಬಾರದು
  1974. ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು
  1975. ಹೊನ್ನಿನ ಶೃತಿ ಕೇಳಿ ಎಂಥೆಂಥಾವರೆಲ್ಲ ಭ್ರಮೆಗೆ ಬಿದ್ದರು
  1976. ಹೊರಗೆ ಝಗ ಝಗ, ಒಳಗೆ ಭಗ ಭಗ.
  1977. ಹೊರಗೆ ಥಳುಕು, ಒಳಗೆ ಹುಳುಕು
  1978. ಹೊರಗೆ ಬೆಳಕು ಒಳಗೆ ಕೊಳಕು
  1979. ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ
  1980. ಹೊಲಬನರಿತು ನುಡಿದ ಮಾತು ಫಲ ಪಕ್ವವಾದಂತೆ
  1981. ಹೊಲಬನರಿಯದ (ರೀತಿಯಲ್ಲದ) ಮಾತು ತಲೆ ಬೇನೆ
  1982. ಹೊಸ ಡಾಕ್ಟರ್‌ಗಿಂತ ಹಳೇ ಕಾಂಪೌಂಡರ್ ವಾಸಿ
  1983. ಹೊಸ ಮಂಜು ಹಳೆಯದನ್ನು ಕೊಚ್ಚದಿದ್ದೀತೆ.
  1984. ಹೊಸ ವೈದ್ಯನಿಗಿಂತ ಹಳೆ ರೋಗಿಯೇ ಮೇಲು
  1985. ಹೊಸದರಲ್ಲಿ ಅಗಸ ಗೋಣಿಯನ್ನು ಎತ್ತಿ ಎತ್ತಿ ಒಗೆದನಂತೆ
  1986. ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ
  1987. ಹೊಳೆ ನೀರಿಗೆ ದೊಣೆನಾಯ್ಕನ ಅಪ್ಪಣೆ ಏಕೆ ?
  1988. ಹೊಳೆಗೆ ಸುರಿದರೂ ಅಳೆದು ಸುರಿ
  1989. ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ
  1990. ಹೊಳೆಯುವುದೆಲ್ಲಾ ಚಿನ್ನವಲ್ಲ
  1991. ಹೊಳೆಯುವುದೆಲ್ಲಾ ಚಿನ್ನವಲ್ಲ.
  1992. ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
  1993. ಹೋದ ಪುತ್ತ ಬಂದ ಪುತ್ತ ಪುಟ್ಟನ ಕಾಲಿಗೆ ನೀರಿಲ್ಲ
  1994. ಹೋದ ಬದುಕಿಗೆ ಹನ್ನೆರಡು ದೇವರು
  1995. ಹೋದರೆ ಶಾಟ, ಬದರೆ ಬೆಟ್ಟ.
  1996. ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ
  1997. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ
  1998. ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು
  1999. ಹೌದಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು ?
  2000. ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ

*********

12 ಕಾಮೆಂಟ್‌ಗಳು:

  1. ತುಂಬಾ ಅದ್ಬೂತವಾಗಿ ಒಟ್ಟುಗೂಡಿಸಿದ್ದಿೀರಿ
    ಅಭಿನಂದನೆಗಳು

    ಪ್ರತ್ಯುತ್ತರಅಳಿಸಿ
  2. ನಿಮ್ಮ ಸತತಾಭ್ಯಾಸ, ಅವಿರತ ಪರಿಶ್ರಮ, ಕನ್ನಡ ಭಾಷಾಭಿಮಾನಗಳು ನಿಮ್ಮ ಈ ಕನ್ನಡ ನುಡಿಸೇವೆಯಲ್ಲಿ ಎದ್ದು ಕಾಣುತ್ತಿವೆ. ನಿಮ್ಮ ಈ ನಿಸ್ವಾರ್ಥ ಸೇವೆಗೆ ನನ್ನದೊಂದು ವಯಕ್ತಿಕ ಹೃದಯಪೂರ್ವಕ ಶುಭ ಹಾರೈಕೆಗಳೊಂದಿಗೆ ಅಭಿನಂದನೆಗಳು ಗುರೂಜಿ.

    ಪ್ರತ್ಯುತ್ತರಅಳಿಸಿ
  3. ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಾದೆಗಳು ಹೇಳಿ ದಯವಿಟ್ಟು

    ಪ್ರತ್ಯುತ್ತರಅಳಿಸಿ