ವೇದವ್ಯಾಸರು : ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು ವೇದವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ ವೇದವ್ಯಾಸ ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು. ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ.
ಇದರ ಪ್ರಕಾರ: ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.
ಇದರ ಪ್ರಕಾರ: ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವ ಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.
ವೇದವ್ಯಾಸರು
ವೇದವನ್ನು ಇಪ್ಪತ್ತೆಂಟು ಬಾರಿ ವೈವಸ್ವತ ಮನ್ವಂತರದ ಮಹರ್ಷಿಗಳಿಂದ ವಿಂಗಡಿಸಲಾಗಿದೆ. ಆದ್ದರಿಂದ ಇಪ್ಪತ್ತೆಂಟು ವ್ಯಾಸರು ಬಂದು ಹೋಗಿದ್ದಾರೆ. ಇದರಲ್ಲಿ ಪ್ರಥಮವಾಗಿ ವೇದವನ್ನು ವಿಂಗಡಿಸಿದ ಸ್ವಯಂಭೂ (ಬ್ರಹ್ಮ); ಅದರ ನಂತರ ವೇದವನ್ನು ವಿಂಗಡಿಸಿದ್ದು ಪ್ರಜಾಪತಿ... (ಹೀಗೇ ಇಪ್ಪತ್ತೆಂಟು ಬಾರಿ).*****
ಕರ್ಣ:
ಕರ್ಣ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ ಕುಂತಿಯ ಮೊದಲ ಪುತ್ರ ಮತ್ತು ದುರ್ಯೋಧನನ ಆಪ್ತ ಮಿತ್ರ. ಇವನ ತಂದೆ ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು ಅಂಗ ದೇಶದ ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ.ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ (ತೈಲವರ್ಣಚಿತ್ರ) ಕೃಪೆ : ವಿಕಿಪೀಡಿಯ
ಕರ್ಣನ ಅವಸಾನ (ಮರಣ) ಸನ್ನಿವೇಶ ಕೃಪೆ : ವಿಕಿಪೀಡಿಯ
******
ಇನ : ಸೂರ್ಯ, ರವಿ, ಅರ್ಕ, ನೇಸರ, ಭಾಸ್ಕರ, ದಿನಮಣಿ, ದಿನಪ
******
ತನುಜ (ತನೂಜ) : ಮಗ, ಪುತ್ರ.
******
ಕೃಷ್ಣ : (ಪಾಠದಲ್ಲಿ ಬಂದಿರುವ ಹೆಸರುಗಳು) ದನುಜರಿಪು, ಮುರಾರಿ, ಶೌರಿ, ದಾನವ ಸೂದನ, ಮಾಧವ,
ದನುಜರಿಪು : ದನುಜರನ್ನು ಸಂಹರಿಸಿದವನಾದ್ದರಿಂದ ಕೃಷ್ಣನಿಗೆ ದನುಜರಿಪು ಎಂಬ ಹೆಸರಿದೆ. (ರಾಕ್ಷಸರ ಶತ್ರು (ದನುಜ= ರಾಕ್ಷಸ, ರಿಪು=ಶತ್ರು))
ಮುರಾರಿ : ಮುರ+ಅರಿ; ಮುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದ ಕೃಷ್ಣನಿಗೆ 'ಮುರಾರಿ' ಎಂಬ ಹೆಸರು ಬಂತು.
ಶೌರಿ : ಕೃಷ್ಣನು ಶೂರಸೇನನ ವಂಶದವನಾದ್ದರಿಂದ ಅವನನ್ನು 'ಶೌರಿ' ಎಂದು ಕರೆಯುವರು.
ದಾನವಸೂದನ : ದಾನವರನ್ನು ಸಂಹರಿಸಿದವನಾದ್ದರಿಂದ ಕೃಷ್ಣನಿಗೆ 'ದಾನವಸೂದನ' ಎಂಬ ಹೆಸರಿದೆ. (ರಾಕ್ಷಸರ ಶತ್ರು (ದಾನವ= ರಾಕ್ಷಸ, ಸೂದನ=ಸಂಹಾರ))
******
ಇನ : ಸೂರ್ಯ,
ಯಾದವರು - ಯದುವಿನ ವಂಶಸ್ಥರು. ಶ್ರೀಕೃಷ್ಣನು ಯದುವಂಶಕ್ಕೆ ಸೇರಿದವನು. ಶ್ರೀಕೃಷ್ಣನ ನಿರ್ಣಯಾನುಸಾರ ಯಾದವರು ಕುರುಕ್ಷೇತ್ರ ಯುದ್ಧದಲ್ಲಿ ದುರ‍್ಯೋಧನನ ಪರವಾಗಿ ಹೋರಾಡಿದರು.
ಮಾದ್ರಿ - ಪಾಂಡುರಾಜನ ಎರಡನೆಯ ಹೆಂಡತಿ. ಮದ್ರದೇಶದ ರಾಜಕುಮಾರಿ. ಕುಂತಿಯಿಂದ ಪಡೆದ ಮಂತ್ರದ ಬಲದಿಂದ ಅಶ್ವಿನಿ ದೇವತೆಗಳನ್ನು ಪ್ರಾರ್ಥಿಸಿ ನಕುಲ ಸಹದೇವರೆಂಬ ಅವಳಿ ಮಕ್ಕಳನ್ನು ಪಡೆದವಳು.
ಚತುರಂಗಬಲ - ಆನೆ, ಕುದುರೆ, ರಥ, ಕಾಲಾಳುಗಳನ್ನೊಳಗೊಂಡ ಸೈನ್ಯ ಸಮೂಹ.
ರಾಜೀವ ಸಖ - ರಾಜೀವ-ಕಮಲ (ತಾವರೆ); ಸಖ-ಗೆಳೆಯ - ತಾವರೆಯ ಗೆಳೆಯ - ಸೂರ‍್ಯ
ಮಾಧವ - ಮಾ-ಲಕ್ಷ್ಮೀ, ಧವ-ಪತಿ, ಒಡೆಯ, ಧರಿಸಿದವ, ಲಕ್ಷ್ಮೀಯನ್ನು ಎದೆಯಲ್ಲಿ ಧರಿಸಿದವ-ವಿಷ್ಣು-ಇಲ್ಲಿ ಕೃಷ್ಣ (ಕೃಷ್ಣನು ವಿಷ್ಣುವಿನ ಅವತಾರ)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ