ಭರತ ಕ್ಷೇತ್ರ : ಭಾರತ, ಭರತ ವರ್ಷ
ಪೊೞಲ್ = ಪಟ್ಟಣ
ಪರದ = ವ್ಯಾಪಾರಿ
ಕಸವರ = ಚಿನ್ನ, ಆಭರಣ
ಸೆಟ್ಟಿ = ಶ್ರೇಷ್ಠಿ, ವ್ಯಾಪಾರಿ
ಭಾರ್ಯೆ = ಹೆಂಡತಿ
ನಿದಾನಂ = ಸಂಪತ್ತು
ತಪಂಬಟ್ಟಂ = ತಪಂ + ಪಟ್ಟಂ, ವಕಾರಾದೇಶ; ತಪಸ್ಸನ್ನು ಹೊಂದಿದನು.
ಬಳ್ಳಿ ಮಾಡ = ಸುಂದರವಾದ ಬಳ್ಳಿಗಳನ್ನು ಹಬ್ಬಿಸಿ ಬೆಳೆಸಿದ ದೊಡ್ಡ ಬಂಗಲೆ / ಮನೆ
ವಿಭ್ರಮ = ಬೆಡಗು, ಅಂದ, ಸೌಂದರ್ಯ
ದೇವಗಣಿಕೆ = ದೇವತಾ ಸ್ತ್ರೀ
ಪಂಚರತ್ನಗಳು = ನೀಲ, ವಜ್ರ, ಪದ್ಮರಾಗ, ಮುತ್ತು, ಹವಳ ಎಂಬ ಐದು ಬಗೆಯ ರತ್ನಗಳು.
ನೈಮಿತ್ತಿಕ = ಜೋಯಿಸ, ಜ್ಯೋತಿಷಿ, ಭವಿಷ್ಯ ಹೇಳುವವನು
ಪುಗಲೀಯದಂತು = ಪ್ರವೇಶಿಸದಂತೆ
ಕಾಪಿನವರು = ಕಾವಲುಗಾರರು
ದೀನಾರ = ೧೦ನೆಯ ಶತಮಾನದಲ್ಲಿ ಚಲಾವಣೆಯಲ್ಲಿದ್ದ ಹಣ, ಮಹಮದೀಯರ ಆಳ್ವಿಕೆಯಲ್ಲಿ ಭಾರತಕ್ಕೆ ಬಂದಿತು.
ಮಹಾದೇವಿ = ರಾಣಿ, ಹೆಂಡತಿ
ಬೆಸಗೊಳು = ತಿಳಿಸು, ಹೇಳು
ಓರೊಂದರೊಳಂ = ಒಂದರೊಳಗೊಂದು
ನಾಲ್ಕು ಖಂಡ = ತುಂಡು, ಚೂರು
ಪಚ್ಚುಗೊಡು = ಹಂಚಿಕೊಡು
ಕೆರ್ಪು = ಪಾದರಕ್ಷೆ, ಚಪ್ಪಲಿ
ತಗುಳ್ಚು = ಸಿಕ್ಕಿಸು, ಸೇರಿಸು
ಚೋದ್ಯ = ಆಶ್ಚರ್ಯ
ವಿಭೂತಿ = ಐಶ್ವರ್ಯ, ವೈಭವ
ಬರ್ಪ = ಬರುವ
ಬಟ್ಟೆ = ದಾರಿ, ಮಾರ್ಗ
ನೇತ್ರವಟ್ಟು = ರೇಷ್ಮೆ ಬಟ್ಟೆ (ನೇತ್ರ ದುಕೂಲ)
ಪಾಸಿ = ಹಾಸಿ
ಹೇಮಮುಕ್ತಾಹಾರ = ರತ್ನಖಚಿತವಾದ ಚಿನ್ನದ ಹಾರ
ಬರವಂ = ಬರುವಿಕೆಯನ್ನು
ಪಾರುತ್ತಿರೆ = ನೋಡುತ್ತಿರೆ
ಸುರೇಂದ್ರ ಭವನ = ಇಂದ್ರನ ಅರಮನೆ
ಪ್ರಾಸಾದ = ಮನೆ
ಶಯ್ಯಾತಳ = ಹಾಸಿಗೆ
ಕರಂ ಸಾದು = ಬಹಳ ಸಾದು / ಬಹಳ ಮೃದು ಸ್ವಭಾವದ
ಬೞಿಯನಟ್ಟಿ = ಹತ್ತಿರಕ್ಕೆ / ಪಕ್ಕಕ್ಕೆ ಕರೆಸಿ
ನಮ್ಮನಾಳ್ವರುಮೊಳರೆ = ನಮ್ಮನಾಳುವವರೂ ಇರುವರೆ?
ಮಾರ್ಕೊಳಲಾರದೆ = ಮೀರಲಾರದೆ
ಕಣ್ಪೆತ್ತ = ಕಣ್ಣು ಪಡೆದ
ಸಿದ್ಧಾರ್ಥ = ಬಿಳಿಸಾಸುವೆ
ಸೇಸೆ = ಅಕ್ಷತೆ
ಕಟಿ = ಸೊಂಟ
ಸೊಡರ್ = ದೀಪ
ಬ್ಯಾದಿ = ವ್ಯಾದಿ, ರೋಗ
ಮಜ್ಜನ = ಸ್ನಾನ
ಸನ್ನಿಭ = ಸಮಾನವಾದ
ಮಣಿಕುಟ್ಟಿಮ = ಮಣಿಗಳಿಂದ ನಿರ್ಮಿತವಾದ
ಮಾಣಿಕದುಂಗುರ = ಮಾಣಿಕ್ಯದ ಉಂಗುರ
ಛಿದ್ರಕದ್ವಾರ = ತೂಬು, ನೀರನ್ನು ಹೊಗೆ ಬಿಡುವ ರಂದ್ರ
ಆರೋಗಣೆ = ಊಟ
ಪರಿಯಣ = ಹರಿವಾಣ, ಊಟದ ಬಟ್ಟಲು/ ತಟ್ಟೆ
ಇನಿಯವಪ್ಪುಣಿಸುಗಳು = ರುಚಿಯಾದ ತಿನಿಸುಗಳು
ಕುತ್ತಂ = ತೊಂದರೆ
ಸಮೆದ ಬೞಿಕ್ಕೆ = ಮುಗಿದ ನಂತರ
ಮಾಲ್ಯ = ಹೂವಿನ ಹಾರ
ಪಸದನ = ಅಲಂಕಾರ
ಅರುಚಿ = ರುಚಿ ಇಲ್ಲದಿರುವಿಕೆ
ಮರ್ದು = ಔಷಧ
ಕಮಳನೀಳೋತ್ಪಲ = ನೈದಿಲೆಯ ಪನ್ನೀರು
ವಾಸಿಸಿದ = ನೆನೆಸಿದ
ಪೆಱವಕ್ಕಿ = ಬೇರೆ ಅಕ್ಕಿ
ಕೂೞು = ಅನ್ನ
ಸರ್ ಸರ್ ಶಿವಕೋಟ್ಯಾಚಾರ್ಯ ಹುಟ್ಟಿದ್ದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಳ್ಳಿಖೇಡ ಎಂಬ ಗ್ರಾಮದಲ್ಲಿ ಜನಿಸಿದರು
ಪ್ರತ್ಯುತ್ತರಅಳಿಸಿಸಾರಂಶ
ಪ್ರತ್ಯುತ್ತರಅಳಿಸಿ