* ನಿಜ ಜನ್ಮಭೂಮಿ : ಹುಟ್ಟೂರು, ಸ್ವಂತ ಊರು
* ಬಹಿರುದ್ಯಾನ : ಬಹಿರ್ ಎಂದರೆ ಹೊರಗೆ, ಬಹಿರುದ್ಯಾನ ಎಂದರೆ ಊರಿನ ಹೊರಗಿರುವ ಉದ್ಯಾನವನ
* ತನ್ನ ಮನದನ್ನ : ತನ್ನ ಮನಸ್ಸಿನಂತೆಯೇ ಯೋಚಿಸುವನು, ಹಿತೈಷಿ
* ಅತಿಕುಟಿಲ ಮನಂ : ಬಹಳ ಮೋಸದ ಮನಸ್ಸು
* ಧನಲುಬ್ಧತೆ : ಹಣದ ದುರಾಸೆ, ಹಣದ ಲೋಭತನ
* ತಸ್ಕರಸ್ಯಾನೃತಂಬಲಂ : ತಸ್ಕರಸ್ಯ + ಅನೃತಂ + ಬಲಂ, ಅಂದರೆ "ಕಳ್ಳನಿಗೆ ಸುಳ್ಳೇ ಬಲ" ಎಂದರ್ಥ
* ತತ್ಕೂರ್ಮೆಗಿಡಲ್ನುಡಿದು : ತತ್ + ಕೂರ್ಮೆ+ಕಿಡಲ್ + ನುಡಿದು, ತತ್ = ಆ, ಕೂರ್ಮೆ = ಪ್ರೀತಿ, ಕಿಡಲ್= ಕೆಡಲು, ಅಂದರೆ ಅವರಿಬ್ಬರ ಸ್ನೇಹ ಕೆಡುವಂತೆ ಮಾತನಾಡಿ ಎಂದರ್ಥ.
* ಧರ್ಮಾಧಿಕರಣರು : ಧರ್ಮವನ್ನು ಹೇಳುವವರು ಅಂದರೆ ನ್ಯಾಯ ತೀರ್ಮಾನ ಮಾಡುವವರು
* ಸುಕೃತದುಷ್ಕೃತಗಳು : ಸುಕೃತ = ಒಳ್ಳೆಯ ಕೆಲಸ, ದುಷ್ಕೃತ = ಕೆಟ್ಟ ಕೆಲಸ
* ಪರಮಗಹನ : ಬಹಳ ಗಂಭೀರವಾದ, ಬಹಳ ಕಷ್ಟಕರವಾದ, ತಿಳಿಯಲು ಬಹಳ ಕಷ್ಟಕರವಾದ
* ಕಟ್ಟೇಕಾಂತ : ಬಹಳ ಏಕಾಂತ, ಬಹಳ ಗುಟ್ಟಾದ ಮತ್ತು ಯಾರೂ ಇಲ್ಲದ ಸ್ಥಳ
* ವಚನ : ಮಾತು
* ಪರಧನಹರಣ : ಪರ = ಬೇರೆಯವರ, ಧನ = ಹಣ, ಸಂಪತ್ತು, ಹರಣ = ಕಳ್ಳತನ, ಅಂದರೆ "ಬೇರೆಯವರ ಹಣ ಅಥವಾ ಸಂಪತ್ತನ್ನು ಕದಿಯುವುದು.
* ವಿಶ್ವಾಸಘಾತುಕ : ನಂಬಿಕೆ ದ್ರೋಹ
* ಸ್ವಾಮಿದ್ರೋಹ : ಸ್ವಾಮಿ ಎಂದರೆ ಒಡೆಯ; ಆದ್ದರಿಂದ ಡೆಯನಿಗೆ ಮಾಡುವ ದ್ರೋಹ
* ನಿನ್ನ ಪೞುವಗೆ ನಮ್ಮ ಕುಲಮನೆಲ್ಲಮನೞಿವ ಬಗೆ : ಪೞು = ಕೆಟ್ಟ, ಮೋಸದ, ಬಗೆ= ಮನಸ್ಸು, ಆಲೋಚನೆ, ಅೞಿ = ನಾಶಮಾಡು. ಆದ್ದರಿಂದ - ನಿನ್ನ ಕೆಟ್ಟ ಆಲೋಚನೆಗಳು ನಮ್ಮ ಕುಲವನ್ನೆಲ್ಲ ನಾಶ ಮಾಡುವ ಯೋಚನೆಯಾಗಿದೆ.
* ಅಪರಗಿರಿ : ಅಪರ = ಪಶ್ಚಿಮ, ಗಿರಿ = ಬೆಟ್ಟ; ಆಂದರೆ ಪಶ್ಚಿಮ ಬೆಟ್ಟ
* ಉದಾತ್ತನಭೋವಿಭಾಗ : ಉದಾತ್ತ = ಉನ್ನತ, ವಿಶಾಲ; ನಭ = ಆಕಾಶ; ಆದ್ದರಿಂದ - "ವಿಶಾಲವಾದ ಆಕಾಶದ ವಿಭಾಗ
* ದಿಙ್ಮುಖ : ದಿಕ್ಕಿನ ಮುಂಭಾಗ, ದಿಗಂತ
* ಅಖಿಲ ದೃಷ್ಟಿಪಥ : ಅಖಿಲ = ಸಮಗ್ರ, ವಿಶಾಲ; ದೃಷ್ಟಿಪಥ = ನೋಟ, ಅಂದರೆ ವಿಶಾಲವಾದ ನೋಟ, ನೋಡುವವರೆಗೂ
* ಭೃಂಗೋದರ : ಭೃಂಗ = ದುಂಬಿ, ಉದರ = ಹೊಟ್ಟೆ, ದುಂಬಿಯ ಹೊಟ್ಟೆ
* ಪ್ರಕರಾಂಜನ ಪುಂಜ : ಪ್ರಕರ = ಗಾಢವಾದ; ಅಂಜನ= ಕಪ್ಪು; ಪುಂಜ = ಗೊಂಚಲು, ರಾಶಿ; ಅಂದರೆ - ಬಹಳ ಗಾಢವಾದ ಕಪ್ಪಿನ ರಾಶಿ (ಕಡುಗಪ್ಪು)
* ಅಷ್ಟವಿಧಾರ್ಚನೆ : ಅಕ್ಷತೆ, ಜಲ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲಗಳಿಂದ ಕೂಡಿದ ಎಂಟು ಬಗೆಯ ಅರ್ಚನೆ
* ಯಕ್ಷಾದಿ ದಿವ್ಯ ದೇವತೆಗಳು : ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ಅಪ್ಸರ, ಖೇಚರ ಮಂತಾದ ಶ್ರೇಷ್ಠವಾದ ದೇವತೆಗಳು
* ಧರ್ಮಶ್ರವಣ : ಧಾರ್ಮಿಕ ಪ್ರವಚನ, ಧರ್ಮದ ಮಾತುಗಳು
* ಬಲವಂದು : ದೇವಾಲಯವೇ ಮೊದಲಾದ ಪವಿತ್ರ ಸ್ಥಳಗಳಲ್ಲಿ ಬಲಭಾಗದಿಂದ ಪ್ರದಕ್ಷಿಣೆ ಹಾಕುವುದು.
* ಹುಸಿಯದ ಬೇಹಾರಿಯೇ ಇಲ್ಲ : ಸುಳ್ಳು ಹೇಳದಿರುವ ವ್ಯಾಪಾರಿಯೇ ಇಲ್ಲ.
* ಕಂಠಗತಪ್ರಾಣ : ಉಸಿರುಗಟ್ಟಿದ ಸ್ಥಿತಿ, ಮೂರ್ಛಾಸ್ಥಿತಿ,
********
ಅತ್ಯುತ್ತಮವಾಗಿದೆ
ಪ್ರತ್ಯುತ್ತರಅಳಿಸಿಮಾಳಿಂಗರಾಯ ನವಲಿ
ಪ್ರತ್ಯುತ್ತರಅಳಿಸಿMaalingaraya navali
ಪ್ರತ್ಯುತ್ತರಅಳಿಸಿMaalingaraya navali
ಪ್ರತ್ಯುತ್ತರಅಳಿಸಿ