ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ.
ಒಳಿತು x ಕೆಡುಕು
ಸಮಷ್ಟಿ x ವ್ಯಷ್ಟಿ
ಪುಣ್ಯ x ಪಾಪ
ಬೆಳಕು x ಕತ್ತಲು
ಧರ್ಮ x ಅಧರ್ಮ
ಎರಡು ಅಥವಾ ಅನೇಕ ಪದಗಳನ್ನು ಅರ್ಥಕ್ಕನುಸಾರವಾಗಿ ಸೇರಿಸಿ (ಅರ್ಥಕ್ಕೆ ಲೋಪ ಬಾರದ ರೀತಿಯಲ್ಲಿ) ಒಂದೇ ಪದವನ್ನಾಗಿ ಮಾಡುವ ಪ್ರಕ್ರಿಯೆಯನ್ನು ಸಮಸ್ತಪದ ಅಥವಾ ಸಮಾಸ ಎಂದು ಕರೆಯುವರು.
ಸಮಸ್ತಪದ ಅಥವಾ ಸಮಾಸದ ಮೊದಲ ಪದವು ಪೂರ್ವಪದವೆಂತಲೂ ಕೊನೆಯ ಪದವು ಉತ್ತರ ಪದವೆಂತಲೂ ಕರೆಯಲ್ಪಡುತ್ತದೆ. ಸಮಸ್ತಪದವನ್ನು ಬಿಡಿಸಿ ಬರೆಯುವುದನ್ನು ’ವಿಗ್ರಹವಾಕ್ಯ’ ಎಂದು ಕರೆಯುತ್ತಾರೆ.
ಸಮಾಸ ರಚನೆ ಮಾಡುವಾಗ ಸಂಸ್ಕೃತ ಪದಕ್ಕೆ ಸಂಸ್ಕೃತ ಪದವನ್ನೇ ಸೇರಿಸಬೇಕು ಹೊರತು ಸಂಸ್ಕೃತಕ್ಕೆ ಕನ್ನಡ ಅಥವಾ ಕನ್ನಡಕ್ಕೆ ಸಂಸ್ಕೃತ ಪದಗಳನ್ನು ಸೇರಿಸಬಾರದು. ಹಾಗೆ ಸೇರಿಸಿದರೆ ಅದು 'ಅರಿಸಮಾಸ' ಎನಿಸುತ್ತದೆ. ಆದರೆ ಪೂರ್ವದ ಕವಿಗಳ ಪ್ರಯೋಗಗಳಲ್ಲಿ, ಬಿರುದಾವಳಿಗಳಲ್ಲಿ, ಗಮಕ ಮತ್ತು ಕ್ರಿಯಾ ಸಮಾಸಗಳಲ್ಲಿ ಮಾಡಿದ್ದರೆ ದೋಷವಿಲ್ಲ.
ಸಮಾಸಗಳಲ್ಲಿ ಪೂರ್ವಪದ ಅರ್ಥಪ್ರಧಾನ ಸಮಾಸ. ಉತ್ತರಪದ ಅರ್ಥಪ್ರಧಾನ ಸಮಾಸ, ಉಭಯಪದ ಅರ್ಥಪ್ರಧಾನ ಸಮಾಸ, ಅನ್ಯಪದ ಅರ್ಥಪ್ರಧಾನ ಸಮಾಸ ಎಂಬ ಪ್ರಭೇದಗಳಿವೆ. ಈ ಪ್ರಭೇದಗಳ ಆಧಾರದಿಂದ ಕನ್ನಡದಲ್ಲಿ ಒಟ್ಟು ಎಂಟು ವಿಧದ ಸಮಾಸಗಳು ಬಳಕೆಯಲ್ಲಿವೆ.
ತತ್ಪುರುಷ,
ಕರ್ಮಧಾರಯ,
ದ್ವಿಗು,
ಬಹುವ್ರೀಹಿ,
ಅಂಶಿ,
ದ್ವಂದ್ವ,
ಕ್ರಿಯಾ
ಗಮಕ
ಎಂದು ಹೆಸರಿಸಲಾಗಿದೆ.
ಉದಾಹರಣೆಗಳು:
ತತ್ಪುರುಷಸಮಾಸ :
ಬೆಟ್ಟದ + ತಾವರೆ = ಬೆಟ್ಟದಾವರೆ
ತಲೆಯಲ್ಲಿ + ನೋವು = ತಲೆನೋವು
ತಲೆಯಲ್ಲಿ + ನೋವು = ತಲೆನೋವು
ವಯಸ್ಸಿನಿಂದ + ವೃದ್ಧ = ವಯೋವೃದ್ಧ
ಕರ್ಮಧಾರಯ ಸಮಾಸ :
ಇನಿದು + ಮಾವು = ಇಮ್ಮಾವು
ಮೆಲ್ಲಿತು + ಮಾತು = ಮೆಲ್ವಾತು
ಹೊಸದು + ಕನ್ನಡ = ಹೊಸಗನ್ನಡ
ಮೆಲ್ಲಿತು + ಮಾತು = ಮೆಲ್ವಾತು
ಹೊಸದು + ಕನ್ನಡ = ಹೊಸಗನ್ನಡ
ದ್ವಿಗುಸಮಾಸ :
ಮೂರು + ಗಾವುದ = ಮೂಗಾವುದ
ಮೂರು + ಕಣ್ಣು = ಮುಕ್ಕಣ್ಣು
ಸಪ್ತಗಳಾದ + ಸ್ವರಗಳು = ಸಪ್ತಸ್ವರಗಳು
ಮೂರು + ಕಣ್ಣು = ಮುಕ್ಕಣ್ಣು
ಸಪ್ತಗಳಾದ + ಸ್ವರಗಳು = ಸಪ್ತಸ್ವರಗಳು
ಬಹುವ್ರೀಹಿಸಮಾಸ :
ಹಣೆಯಲ್ಲಿ ಕಣ್ಣು ಉಳ್ಳವನು ಆವನೋ ಅವನು - ಹಣೆಗಣ್ಣ - ಶಿವ.
ಮೂರು ಕಣ್ಣು ಉಳ್ಳವನು ಆವನೋ ಅವನು - ಮುಕ್ಕಣ್ಣ - ಶಿವ.
ಚಕ್ರವು ಪಾಣಿಯಲ್ಲಿ ಆವನಿಗೋ ಅವನು - ಚಕ್ರಪಾಣಿ - ವಿ?
ಅಂಶಿಸಮಾಸ :
ಕೈಯ + ಅಡಿ = ಅಂಗೈ
ತಲೆಯ + ಹಿಂದು = ಹಿಂದಲೆ
ಕಣ್ಣ + ಕಡೆ = ಕಡೆಗಣ್ಣು
ದ್ವಂದ್ವಸಮಾಸ :
ಗಿರಿಯೂ + ವನವೂ + ದುರ್ಗವೂ = ಗಿರಿವನದುರ್ಗಗಳು
ಕರಿಯೂ + ತುರಗವೂ + ರಥವೂ = ಕರಿತುರಗರಥ
ಕ್ರಿಯಾಸಮಾಸ :
ಮೈಯನ್ನು + ಮುಚ್ಚು = ಮೈಮುಚ್ಚು
ಕಣ್ಣಂ + ತೆರೆ = ಕಣ್ದೆರೆ
ಕಣ್ಣಿನಿಂದ + ಕೆಡು = ಕಂಗೆಡು
ಗಮಕಸಮಾಸ :
ಅದು + ಕಲ್ಲು = ಆಕಲ್ಲು
ಇದು + ಬೆಕ್ಕು = ಈಬೆಕ್ಕು
ನೆಯ್ದುದು + ವಸ್ತ್ರ = ನೆಯ್ದವಸ್ತ್ರ
********
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ