ಪುಟಗಳು

10 ಜುಲೈ 2020

ರತ್ನಾಕರವರ್ಣಿ

ರತ್ನಾಕರವರ್ಣಿ
ರತ್ನಾಕರ ವರ್ಣಿಯ ಕಾಲ್ಪನಿಕ ಚಿತ್ರ (ಕೃಪೆ: www.icarelive.com)
  • ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬನಾದ ರತ್ನಾಕರವರ್ಣಿ ಕಾಲ ಸುಮಾರು ಕ್ರಿ.೧೫೫೭. (೯ನೇ ತರಗತಿ ಪಠ್ಯಪುಸ್ತಕದಲ್ಲಿ ಈತನ ಕಾಲ ಸು.ಕ್ರಿ..೧೫೬೦ ಎಂದಿದೆ)
  • ಈತನ ತಂದೆಯ ಹೆಸರು ದೇವರಾಜದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ
  • ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದ ಕವಿ.
  • ರತ್ನಾಕರವರ್ಣಿ ರಚಿಸಿದ ಕೃತಿಗಳು:
  • ಭರತೇಶ ವೈಭವ - ರತ್ನಾಕರವರ್ಣಿಯ ಮೇರು ಕೃತಿ.
  • ತ್ರಿಲೋಕ ಶತಕ
  • ಅಪರಾಜಿತೇಶ್ವರ ಶತಕ
  • ರತ್ನಾಕರಾಧೀಶ್ವರ ಶತಕ
  • ಸೋಮೇಶ್ವರ ಶತಕ (ಕೆಲ ವಿದ್ವಾಂಸರ ಪ್ರಕಾರ ರತ್ನಾಕರವರ್ಣಿಯು  ಕೃತಿಯನ್ನು ತನ್ನ ಬದುಕಿನ ಸಂದಿಗ್ಧ ಘಟ್ಟವೊಂದರಲ್ಲಿ ಮತಾಂತರಗೊಂಡಾಗ ರಚಿಸಿದ್ದಾನೆ)
  • ಅಣ್ಣನ ಪದಗಳು

ಘಟನೆ
ಕಾಲ
ಜನನ
೧೫೩೨
ತ್ರಿಲೋಕಶತಕದ ರಚನೆ
೧೫೫೭
ಭರತೇಶವೈಭವದ ರಚನೆ
೧೫೬೭
ವೀರಶೈವನಾದುದು
೧೫೭೨
ಮತ್ತೆ ಜೈನನಾದುದು
೧೫೭೫
ರತ್ನಾಕರಶತಕದ ರಚನೆ
೧೫೭೭
ಅಪರಾಜಿತಶತಕದ ರಚನೆ
೧೫೮೨
ಅಧ್ಯಾತ್ಮಗೀತದ ರಚನೆ
೧೫೮೭
ಮರಣ
೧೬೦೦ರ ಮೇಲೆ
              ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿಇದು ರತ್ನಾಕರವರ್ಣಿಯ ಮೇರು ಕೃತಿಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.
(ಮಾಹಿತಿ ಕೃಪೆ: ವಿಕಿಪೀಡಿಯಾ)
 ************************

4 ಕಾಮೆಂಟ್‌ಗಳು:

  1. ಕರ್ನಾಟಕವು ಜೈನ ಕಾಶಿಯಾಗಿರುವುದು ಸಾಮ್ರಾಟ್ ಅಶೋಕನ ಕಾಲದಲ್ಲಿ ಬೌದ್ಧರ ಸ್ಥಾನಮಾನ ಘನತೆ ಗೌರವಗಳಿಗೆ ಸದಾವಕಾಶದ ನೆಲೆವೀಡಾದುದು ನಮ್ಮ ನಮ್ಮೆಲ್ಲರ ಜೀವಜೀವಾಳ.

    ಪ್ರತ್ಯುತ್ತರಅಳಿಸಿ