ಪುಟಗಳು

28 ಏಪ್ರಿಲ್ 2020

ಕ್ಲಾಸ್ ರೂಮಿನ ಕವಿತೆಗಳು

ಡಸ್ಟರ್ ರಬ್ಬರ್ ತರ ಏನಾದರೂ ಒಂದು ವಸ್ತುವಿರವಾರದಿತ್ತೆ ಸಂಭಂದಗಳಿಗೂ, ಕೋಪ ತಾಪವ ಕೆಟ್ಟ ಗಳಿಗೆಗಳ ಅಳಿಸಿ ಹೇಗಾದರೂ ಸರಿ ಮಾಡಿ‌ ಸಂಭಂಧ ಉಳಿಸಿಕೊಳ್ಳಲು. ಅಬ್ಬಬ್ಬ!!! ಕಪ್ಪು ಹಲಗೆಯೊಂದಿಗೆ ಬಳಪಗಳು ಅದೆಷ್ಟು ಮಾತನಾಡುತ್ತವೆಂದರೆ ಕೇಳುವವರಿರಬೇಕು ಅಷ್ಟೇ. ಕೇಳುವವರಿಗೆ ಬೇಕಾದ್ದು ಕಿವಿಯಂತು ಅಲ್ಲವೇ ಅಲ್ಲ!! ಹೃದಯ ಬೇಕು. ಹೃದಯ!!! ಶಾಲೆಯಲ್ಲಿ ಡೆಸ್ಕಿನಷ್ಟು ನೆರವಾದ ಗೆಳೆಯ ಮತ್ತೊಬ್ಬರಿಲ್ಲ. ಮಲಗಬೇಕೆಂದಾಗ ತೊಟ್ಟಿಲಾಗಿದೆ. ಬರೆಯಬೇಕೆಂದಾಗ ನಮ್ಮ ಮೊದಲ ಸ್ಲೇಟಾಗಿದೆ. ನಾವು ಶಿಲ್ಪಿಗಳಾಗಬೇಕೆಂದಾಗ ಕೆತ್ತಿದ್ದೂ ಇದೆ ಡೆಸ್ಕ್ ಮೇಲೆಯೇ! ಕಿಟಕಿಯ ತುಟಿಗಳು‌ ಅದೆಷ್ಟು ಕಂಪಿಸುತ್ತವೆ ಗಾಳಿಯೆಂಬ ಗೆಳೆಯನ ಕಂಡು. ಹೃದಯದ ಬಡಿತವೆ ತುಟಿಯಲಿ ತೋರಿಸುತ್ತಿವೆ ಡಬಡಬವೆಂದು. ಗೆಳೆಯನ ಬಾಚಿ ಬಾಚಿ ತಬ್ಬಿ ಇನ್ನೂ ಶಬ್ದ ಹೊರಡುಸುತ್ತಲಿದೆ ಮುತ್ತುಗಳ‌ ಡಬಡಬವೆಂದೆ ಕೊಟ್ಟು.

- 13. 1ನೇ ಅಡ್ಡ ರಸ್ತೆ.
1ನೇ ಮುಖ್ಯ ರಸ್ತೆ.
ಕಂಠೀರವ ನಗರ.
ನಂದಿನಿ ಬಡಾವಣೆ.
ಬೆಂಗಳೂರು-560096

3 ಕಾಮೆಂಟ್‌ಗಳು: