ಪುಟಗಳು

13 ಸೆಪ್ಟೆಂಬರ್ 2019

ಶ್ರೀ ವಿಜಯನ ಮಾರ್ಗದಲ್ಲಿ


ಶ್ರೀ ವಿಜಯನ ಮಾರ್ಗದಲ್ಲಿ
ಬೆಳೆದು ಬಂದ ಕನ್ನಡ
ಪಂಪ ರನ್ನ ಭಾರತದಿ
ಬೆಳೆದು ಬಂದ ಕನ್ನಡ
ಅಕ್ಕನ ವಚನದಲ್ಲಿ
ಅಚ್ಚ ಅಚ್ಚ ಕನ್ನಡ
ಮಲೆನಾಡ ಬನಗಳಲ್ಲಿ
ಮಲೆತು ಬಂದ ಕನ್ನಡ
ಬೇಂದ್ರೆ ಯವರ ಬಾಳಿನಲ್ಲಿ
ಬೆಂದು ಬಂದ ಕನ್ನಡ
ಕಾರಂತರ ಕೈಗಳಲ್ಲಿ
ಕಂಗೊಳಿಸಿದ ಕನ್ನಡ
ಮಾಸ್ತಿಯವರ ಮಾತಿನಲ್ಲಿ
ಮಸ್ತು ಮಸ್ತು ಕನ್ನಡ
ದುರ್ಗಾಸ್ತಮಾನ ದಲ್ಲಿ
ಘರ್ಜಿಸಿದ ಕನ್ನಡ
ಬಾ ಅಣ್ಣ ನೋಡು ಇಲ್ಲಿ
ನನ್ನ ಕೈಲಿ ಕುಣಿದಾಡುವ ಕನ್ನಡ


-ಮಧು, 
ಚಿತ್ರದುರ್ಗ ಜಿ
ಚಳ್ಳಕೆರೆ ತಾ
ಡಿ. ಉಪ್ಪಾರಹ ಟ್ಟಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ