ಸರ್ವಾಂಗಿಣ ವ್ಯಕ್ತಿತ್ವ ವಿಕಸನಕ್ಕೆದೈಹಿಕ ಶಿಕ್ಷಣ
ಶಾರೀರಿಕ ಅಭಿವೃದ್ಧಿಗಾಗಿ: ಸಾಹಸದ ಆಟಗಳು, ದ್ವಂದ್ವಕ್ರೀಡೆಗಳು ಸ್ವರ್ಧಾತ್ಮಕ
ಆಟಗಳು ಕಷ್ಟ ಸಹಿಷ್ಣತೆಯ ಆಟಗಳು, ರಿಲೇ ಓಟಗಳು, ಶಕ್ತಿಯ ಆಟಗಲು ಸೇರಿಕೊಂಡಿವೆ.
ಮಾನಸಿಕ ಅಭಿವೃದ್ಧಿಗಾಗಿ : ಮನರಂಜನೆಯ ಆಟಗಳು, ಸ್ವತಂತ್ರ ಚಲನಾ ಆಟಗಳು, ಏಕಾಗ್ರತೆಯ ಆಟಗಳು, ಶಿಸ್ತಿನ ಆಟಗಳು, ಒಳಾಂಗಣ ಆಟಗಳು, ಪ್ರಾಣಾಯಾಮ ಧ್ಯಾನ, ಪ್ರಾಥನೆ ಮತ್ತು "ಓಂ" ಕಾರ ಧ್ವನಿಯೂ ಸೇರಿಕೊಂಡಿದೆ.
ಬೌದ್ಧಿಕ ಅಭಿವೃದ್ಧಿಗಾಗಿ : ಮಗ್ಗಿ ಸುಗ್ಗಿ ತರ್ಕಬದ್ದ ಆಟಗಳು ಜ್ಞಾಪಕ ಶಕ್ತಿಯ ಆಟಗಳು, ವಿನೋದ, ಗಣಿತ ಸೇರಿದಂತೆ ಶಾರೀರಿಕ ವಲಯದಲ್ಲಿರುವ ದ್ವಂದ್ವ ಕ್ರೀಡೆಗಳು ಸಹ ಇಲ್ಲಿ ಸೇರಿಕೊಂಡಿದೆ.
ಭಾವನಾತ್ಮಕ ಅಭಿವೃದ್ಧಿಗಾಗಿ : ರಾಷ್ಟ್ರಗೀತೆ ಮಾಡಗೀತೆ, ದೇಶಭಕ್ತಿಗೀತೆ , ಸಾಭಿನಯ ನೃತ್ಯಗಳು ಸೇರಿಕೊಂಡಿದೆ. ಮೇಲಿನ ಆಟಗಳು ಸಹ ಇದಕ್ಕೆ ಸೇರಿಕೊಂಡಿದೆ.
ನೈತಿಕ ವಲಯದಲ್ಲಿ ಅಷ್ಠಾಂಗಯೋಗ, ಮೌಲ್ಯ ಶಿಕ್ಷಣ, ವ್ಯಾಯಾಮಗಳು, ಪದ್ ಕವಾಯಿತು, ಇವು ನೈತಿಕ ಶಿಕ್ಷಣಕ್ಕೆ ಸೇರಿವೆ.
ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಆಟದ ಬಗ್ಗೆ ತಿಳಿಸುವುದು. ಅನಾರೋಗ್ಯದ ವಿದ್ಯಾರ್ಥಿಗಳನ್ನು ಒಂದೆಡೆ ಕೂರಿಸಿ ಅವರನ್ನು ಆಟ ವಿಕ್ಷೀಸಲು ತಿಳಿಸುವುದು. ಸಮವಸ್ತ್ರದ ಕಡೆ ಗಮನಹರಿಸುವುದು. ಮೂರು/ನಾಲ್ಕನೇ ತರಗತಿ ಮಕ್ಕಳಿದ್ದರೆ ಹಾಜರಾತಿ ತೆಗೆದುಕೊಳ್ಳಬಹುದು.
ಮಾನಸಿಕ ಅಭಿವೃದ್ಧಿಗಾಗಿ : ಮನರಂಜನೆಯ ಆಟಗಳು, ಸ್ವತಂತ್ರ ಚಲನಾ ಆಟಗಳು, ಏಕಾಗ್ರತೆಯ ಆಟಗಳು, ಶಿಸ್ತಿನ ಆಟಗಳು, ಒಳಾಂಗಣ ಆಟಗಳು, ಪ್ರಾಣಾಯಾಮ ಧ್ಯಾನ, ಪ್ರಾಥನೆ ಮತ್ತು "ಓಂ" ಕಾರ ಧ್ವನಿಯೂ ಸೇರಿಕೊಂಡಿದೆ.
ಬೌದ್ಧಿಕ ಅಭಿವೃದ್ಧಿಗಾಗಿ : ಮಗ್ಗಿ ಸುಗ್ಗಿ ತರ್ಕಬದ್ದ ಆಟಗಳು ಜ್ಞಾಪಕ ಶಕ್ತಿಯ ಆಟಗಳು, ವಿನೋದ, ಗಣಿತ ಸೇರಿದಂತೆ ಶಾರೀರಿಕ ವಲಯದಲ್ಲಿರುವ ದ್ವಂದ್ವ ಕ್ರೀಡೆಗಳು ಸಹ ಇಲ್ಲಿ ಸೇರಿಕೊಂಡಿದೆ.
ಭಾವನಾತ್ಮಕ ಅಭಿವೃದ್ಧಿಗಾಗಿ : ರಾಷ್ಟ್ರಗೀತೆ ಮಾಡಗೀತೆ, ದೇಶಭಕ್ತಿಗೀತೆ , ಸಾಭಿನಯ ನೃತ್ಯಗಳು ಸೇರಿಕೊಂಡಿದೆ. ಮೇಲಿನ ಆಟಗಳು ಸಹ ಇದಕ್ಕೆ ಸೇರಿಕೊಂಡಿದೆ.
ನೈತಿಕ ವಲಯದಲ್ಲಿ ಅಷ್ಠಾಂಗಯೋಗ, ಮೌಲ್ಯ ಶಿಕ್ಷಣ, ವ್ಯಾಯಾಮಗಳು, ಪದ್ ಕವಾಯಿತು, ಇವು ನೈತಿಕ ಶಿಕ್ಷಣಕ್ಕೆ ಸೇರಿವೆ.
ಆಟದ ಪಾಠದ ಬೋಧನಾ ವಿಧಾನ ತಂತ್ರಗಳು
ತರಗತಿ ಕೋಣೆಯಿಂದ ಮಕ್ಕಳು ಪರಿಕರಗಳನ್ನು ಒಂದೆಡೆ ಇರಿಸಿ ಸಾಲಾಗಿ ಕರೆತರುವುದು. ಅವರ ನಿತ್ಯ ಕ್ರಿಯೆಗೆ ಅವಕಾಶ ಮಾಡಿಕೊಡುವುದು. ನಂತರ ಸಾಮರ್ಥ್ಯ ವಿಭಾಗದಲ್ಲಿರುವ ಸಾಮರ್ಥ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಆಟದ ಪಾಠವನ್ನು ಪ್ರಾರಂಭಿಸುವುದು.- ಸಾಮರ್ಥ್ಯ : ಆಟದ ಪಾಠದ ಗುರಿ ಮತ್ತು ಉದ್ದೇಶಗಳೇ ಇದಾಗಿವೆ. ಈ ಭಾಗವು ಕೇವಲ ಮುಖ್ಯ ಚಟುವಟಿಕೆಯಿಂದ ಮಗುವಿನ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳು ಯಾವ ಅಭಿವೃದ್ಧಿಯಲ್ಲಿ ಎಷ್ಟಿದೆ ಎಂಬುವುದನ್ನು ತಿಳಿಸುವ ಪ್ರಯತ್ನವ್ಕನ್ನು ಇದರಲ್ಲಿ ಮಾಡಿದೆ. ಉಳಿದ ಚಟುವಟಿಕೆಯಿಂದಲೂ (ಸ್ವಾತಂತ್ರ ಪ್ರಾರಂಭಿಕ, ಶಿಸ್ತಿನ ಚಟುವಟಿಕೆಗಳು ಮತ್ತು ವಿಶ್ರಾಂತಿ, ಆರೋಗ್ಯ ಭಾಗದಲ್ಲಿರುವ ಚಟುವಟಿಕೆಗಳು ) ಇನ್ನಷ್ಟು ಅಂಶಗಳು ಮಕ್ಕಳಿಗೆ ಪ್ರಾಯೋಗಿಕ ಅನುಭವಗಳ ಮೂಲಕ ಅನುಕೂಲಗಳು ದೊರೆಯ್ಯುತ್ತದೆ. ಆದರೆ ಇದೊಂದು ಹೊಸ ಪ್ರಯತ್ನವನ್ನು ಇದರಲ್ಲಿ ಮಾಡ್ಲಾಗಿದ್ದು, ಇಲ್ಲಿ ಮುಖ್ಯ ಚಟುವಟಿಕೆಯನ್ನು ಆಟದ ಪಾಠದ ಮುಖ್ಯ ಕೇಂದ್ರ ಬಿಂದುವನ್ನಾಗಿಸಿ ಕೊಂಡಿದೆ. ಆದುದರಿಂದ ಈ ಚಟುವಟಿಕೆಯಿಂದ ಮಗುವಿಗೆ ಇಂತಹ ಕನಿಷ್ಠ ಸಾಮರ್ಥ್ಯವಾದರೂ ದೊರೆತು ತಿಳಿಯುವಂತಾಗಲಿ ಎಂದು ತಿಳಿಸಿದೆ. ಇನ್ನುಳಿದ ಚಟುವಟಿಕೆಗಳಲ್ಲಿ ಶಿಕ್ಷಕರೇ ಅಂತಹ ಸಾಮರ್ಥ್ಯಗಳನ್ನು ಪತ್ತೆ ಹಚ್ಚಿ ಮಕ್ಕಳಲ್ಲಿ ಬೆಳೆಯುವಂತೆ ಮಾಡಬೇಕಾಗಿದೆ. ಈ ಸಾಮರ್ಥ್ಯಗಳು ಭಾಗದಲ್ಲಿ ತಿಳಿಸಿರುವ ಸಾಮರ್ಥ್ಯಗಳಷ್ಟೇ ಅಲ್ಲದೇ ಒಳ್ಳೇಯ ಸಾಮರ್ಥ್ಯಗಳು ಮಕ್ಕಳಲ್ಲಿ ಬೆಳೆಯುವಂತೆ ಮಾಡುವ ಜವಾಬ್ದಾರಿ ಮತ್ತು ಕರ್ತವ್ಯ ಈ ಆಟದ ಪಾಠದ ಶಿಕ್ಷಕನಿಗಿರುತ್ತದೆ.
ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಆಟದ ಬಗ್ಗೆ ತಿಳಿಸುವುದು. ಅನಾರೋಗ್ಯದ ವಿದ್ಯಾರ್ಥಿಗಳನ್ನು ಒಂದೆಡೆ ಕೂರಿಸಿ ಅವರನ್ನು ಆಟ ವಿಕ್ಷೀಸಲು ತಿಳಿಸುವುದು. ಸಮವಸ್ತ್ರದ ಕಡೆ ಗಮನಹರಿಸುವುದು. ಮೂರು/ನಾಲ್ಕನೇ ತರಗತಿ ಮಕ್ಕಳಿದ್ದರೆ ಹಾಜರಾತಿ ತೆಗೆದುಕೊಳ್ಳಬಹುದು.
- ಪ್ರಾರಭಿಕ ಚಟುವಟಿಕೆ : ಚಟುವಟಿಕೆಯನ್ನು ಪಾಠದಲ್ಲಿ ತಿಳಿಸಿರುವಂತೆ ಸರಳವಾಗಿ ಸುಲಭವಾಗಿ ಹೇಳಿಕೊಟ್ಟು ಮಕ್ಕಳು ಸೀಟಿಗೆ ಅಜ್ಞೆಗೆ ಸ್ಪಂಧಿಸುವಂತೆ ಮಾಡುವುದು. ಇಂತಹ ಚಟುವಟಿಕೆಗಳೇ ಸ್ವಾತಂತ್ರ್ಯ ಚಲನೆಯ ಚಟುವಟಿಕೆಗಳು ಆಗಿರುತ್ತದೆ. ಇದು ಮುಖ್ಯ ಚಟುವಟಿಕೆಯ ಕಡೆ ಮಕ್ಕಳನ್ನು ಆಕರ್ಷಿಸಿ ಸಿದ್ಧತೆಗೊಳಿಸುವುದಕ್ಕೋಸ್ಕರವಾಗಿದೆ.
- ಉಪಕರಣ : ಆಟದ ಪಾಠಕ್ಕೆ ಬಳಸುವ ಉಪಕರಣಗಳನ್ನು ಆಟದ ಮೈದಾನದಲ್ಲಿ ಜೋಡಿಸಿ ಇಟ್ಟಿರುವುದು ಮತ್ತು ಆಟದ ನಂತರ ಉಪಕರಣಗಳನ್ನು ಮತ್ತೇ ಸಂಬಂಧಿಸಿದ ಪೆಟ್ಟಿಗೆ ಅಥವಾ ಅದರ ಜಾಗದಲ್ಲಿ ಜೋಪಾನವಾಗಿ ಜೋಡಿಸಿಟ್ಟುಕೊಳ್ಳುವುದು.
- ಆಟದ ರಚನೆ : ಈ ವಿಭಾಗದಲ್ಲಿ ಮಕ್ಕ್ಳು ಮುಖ್ಯ ಚಟುವಟಿಕೆಗೆ ಪೂರಕವಾಗುವಂತೆ ಹೇಗೆ ತಂಡದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಮತ್ತು ತಂಡದ ರಚನೆಯನ್ನು ಅವಶ್ಯಕವಿದ್ದರೆ ಹೆಣ್ಣು-ಗಂಡಿಗೆ ಬೇರೆ ಬೇರೆಯಾಗಿ ಆಡಿಸುವ ವ್ಯವಸ್ಥೆಯನ್ನು ಸೂಚಿಸುತ್ತದೆ. ಹಾಗೂ ಆಟದ ರಚನೆಯಲ್ಲಿ ಗುರುತುಗಳನ್ನು ಮಾಡಿಕೊಳ್ಳುವ ವ್ಯವಸ್ಥೆಯನ್ನು ಈ ವಿಭಾಗದಲ್ಲಿ ತಿಳಿಸುತ್ತದೆ. ಈ ವಿಭಾಗದಲ್ಲಿರುವ ನಿಯಮದಂತೆ ಆಟದ ರಚನೆಯನ್ನು ಮಾಡಿಕೊಂಡರೆ ಮಾತ್ರ ಮುಖ್ಯ ಆಟವನ್ನು ಆಡಿಸಲೂ ಬರುವುದು.
- ಮುಖ್ಯ ಚಟುವಟಿಕೆ : ಈ ಭಾಗವು ಆಟದ ಪಾಠದ ಪ್ರಧಾನ ವಿಷಯವಾಗಿದ್ದೂ, ಇಲ್ಲಿ ಶಿಕ್ಷಕನು ವಿದ್ಯಾರ್ಥಿಗಳಿಗೆ ಆಟದ ಸ್ವರೂಪ ನೀತಿ ನಿಯಮಗಳನ್ನು ತಿಳಿಸಿ, ಒಮ್ಮೆ ಮಾಡಿ ತೋರಿಸಿ ನಂತರ ಮಕ್ಕಳು ಚಟುವಟಿಕೆಯಲ್ಲಿ ತೊಡಗಿಸಿ ತಪ್ಪುಗಳನ್ನು ತಿದ್ದುತ್ತಾ ಸರಿಪಡಿಸಿ ಶಿಸ್ತಿನಿಂದ ಮಕ್ಕಳಿಗೆ ಮನರಂಜನೆ ಸಿಗುವಂತೆ ಮಾಡಿ ಗೆದ್ದವರನ್ನು ಅಭಿನಂಧಿಸಬೇಕಾಗಿದೆ. ಸೋತವರನ್ನು ಸಹ ಮುಂದಿನ ಆಟದಲ್ಲಿ ಗೆಲ್ಲಲು ಪ್ರೋತ್ಸಾಹಿಸಬೇಕಾಗಿದೆ. ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಆಟದ ಯಾವುದಾದರೊಂದು ಪಾತ್ರ ವಹಿಸುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂತವರಿಗೆ ಸಹಾಯ ಮಾಡುವಾಗ ಇತರೆ ಮಕ್ಕಳಿಗೆ ತಿಳಿದಿರುವಂತೆಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಶಿಕ್ಷಕನು ಉತ್ತಮ ತೀರ್ಪೂಗಾರನಾಗಿಯೂ ಕೆಲಸ ಮಾಡಿ ತಿಳಿಸಿರುವ ಸಾಮರ್ಥ್ಯಗಳು ಮಕ್ಕಳಲ್ಲಿ ಬೆಳೆಯುವಂತೆ ವ್ಯವಸ್ಥೆ ಮಾಡಬೇಕಾಗಿದೆ. ತರಗತಿ ಶಿಸ್ತಿನಿಂದ ನಡೆಯುವಂತೆ ಆಟದ ನಿಯಮಗಳನ್ನು ಪಾಲಿಸುವಮ್ತೆ ಹೇಳಿಕೊಡಬೇಕು, ಈ ಮುಖ್ಯ ಚಟುವಟಿಕೆಯಲ್ಲಿ ಅನೇಕ ವಿಧದ ಚಟುವಟಿಕೆಗಳು ಅಣ್ದರೆ ಮಾನಸಿಕ ಆಟಗಳು,ಸಾಹಸದ ಆಟಗಳು, ದೈಹಿಕ ಸಾಮರ್ಥ್ಯ ವರ್ಧಿಸುವ ಆಟಗಳು, ಸ್ವಾತಂತ್ರ್ಯ ಚಲನಾ ಆಟಗಳು, ಅನುಕರಣಾ ಆಟಗ್ಳು, ಮನರಂಜನ ಆಟಗಳು, ಶಿಸ್ತಿನ ಆಟಗಳು ಇತ್ಯಾದಿಗಳು ಸೇರಿಕೊಂಡಿರುವಷ್ಟೇ ಅಲ್ಲದೇ ಯೋಗ ಮತ್ತು ಆರೋಗ್ಯ ಶಿಕ್ಷವು ಮೂರು ಮತ್ತು ನಾಲ್ಕನೆಯ ತರಗತಿಯ ಮಕ್ಕಳಿಗೆ ಸೇರಿರುತ್ತದೆ. ಈ ಚಟುವಟಿಕೆಗಳನ್ನು ದಿನಕ್ಕೆ ಹತ್ತರಿಂದ ಹದಿನೈದು ನಿಮಿಷದವರೆವಿಗೆ ಮಾಡಿ ಮುಗಿಸುವುದು. ಹೆಚ್ಚು ವೇಳೆ ಆಡಿಸುವುದರಿಂದ ಆಯಾಸ ಮತ್ತು ಬೇಸರ ಸಹ ಮೂಡಬಹುದು ಅತಿ ಕಡಿಮೆ ವೇಳೆ ಆಡಿಸುವುದರಿಂದ ನಿರಾಸೆ ಹಾಗೂ ಅವಕಾಶಗಳಿಂದ ವಂಚಿತರಾಗಬಹುದು. ಕೆಲವು ಚಟುವಟಿಕೆಗಳನ್ನು ಸಂದರ್ಭಾನುಸಾರ ಕೊಠಡಿಯ ಒಳಗೂ ಸಹ ಆಡಿಸಬಹುದಾಗಿದೆ.
- ಸೂಚನೆಗಳು : ಈ ಭಾಗವು ಮುಖ್ಯ ಚಟುವಟಿಕೆಗಳ ಯಶಸ್ವಿಗೆ ಬಹಳ ಮಹತ್ವದ್ದಾಗಿದೆ. ಸೂಚನಾ ವಿಭಾಗದಲ್ಲಿ ತಿಳಿಸಿರುವ ನಿಯಮಗಳ ಹಾಗೂ ಸಲಹೆಗಳನ್ನು ಅಟ ಆಡಿಸುವಾಗ ಬಳಸಿಕೊಳ್ಳಬೇಕಾಗುತ್ತದೆ. ಅದರಂತೆ ತಕ್ಕ ವ್ಯವಸ್ಥೆಯನ್ನು ಸಹ ಮಾಡಿಕೊಳ್ಳ್ಳಬೇಕಾಗುತ್ತದೆ.
- ಶಿಸ್ತಿನ ಚಟುವಟಿಕೆ : ಶಾಲೆಯಲ್ಲಿ ಶಿಸ್ತು ಕಲಿಸುವುದು ಬಹಳ ಮುಖ್ಯ ಈ ಚಟುವಟಿಕೆಗಳನ್ನು ನೇರವಾಗಿ ಕಲಿಸುವುದರಿಂದ ಮಕ್ಕಳಲ್ಲಿ ಇದೊಂದು ದಂಡನೆ ಎಂಬ ಭಾವನೆ ಬರಬಾರದು. ಆದುದರಿಂದ ಮುಖ್ಯ ಚಟುವಟಿಕೆಯಾದ (ಸಂತೋಷಗೊಂಡಿರುವ ಸಮಯದ)ನಂತರ ಮಾಡಿಸುವುದರಿಂದ ಉತ್ತನ ಪ್ರತಿಫಲ ದೊರಕುವುದು. ಅದುದರಿಂದಮುಖ್ಯ ಚಟುವಟಿಕೆಯ ನಂತರ ಈ ಚಟುವಟಿಕೆಗಳನ್ನು ಮಾಡಲು ವಿಭಾಗಿಸಲಾಗಿದೆ. ಇದನ್ನು ಏಳರಿಂದ ಹತ್ತು ನಿಮಿಷಗಳರೆಗೆ ಚಟುವಟಿಕೆ ಮಾಡಿ ಮುಗಿಸುವುದು ಬಹಳ ಅನುಕೂಲಕರವಾಗಿರುತ್ತದೆ. ಈ ಚಟುವಟಿಕೆಗಳು ಮೂಲಭೂತ ಚಟುವಟಿಕೆಗಳಾಗಿವೆ. ಹಾಗೂ ತಾಳಬದ್ಧ ಚಟುವಟಿಕೆಗಳು ಇದರಲ್ಲಿ ಸೇರಿಕೊಂಡಿದೆ.
- ಇಲ್ಲಿ ಶಿಸ್ತಿನ ಚಟುವಟಿಕೆಗಳೆಂದರೆ ಸಾವ್ ...ದಾನ್,ವಿಶ್,,,,ರಾಮ್, ದಹಿನೇ/ಬಾಯೇ/ಪೀಚೆ ಮೂಡ್, ದಹಿನೇ/ಬಾಯೇ/ಹಾಗೆ ಪೀಚೆ ಚಲ್, ಹಾಗೆ ಚಲ್,ಪೀಚ್ ಚಲ್, ಸಲಾಮಿದೇ, ಗಿಂತೀಕರ್, ದಹಿನೇ/ಬಯೇ ದೇಖ್, ಸಾಮ್ನೇ ದೇಖ್, ಕದಂ ಥಾಲ್, ತೇಜ್...ಚಲ್, ಏಕ್ ಲೈನ್ ಬನ್, ತೀನ್ ಲೈನ್ ಬನ್ ಇಂತಹ ಪದ ಕವಾಯಿತುಗಳನ್ನು ಶಿಸ್ತಿನ ಈ ಚಟುವಟಿಕೆಗಳಲ್ಲೂ ಹೇಳುತ್ತ. ಈ ಭಾಗದಲ್ಲಿ ಸೇರಿಸಲಾಗಿದೆ. ಇವುಗಳನ್ನು ಕಲಿತಯುವಲ್ಲಿ ಮಕ್ಕಳಿಗೆ ಭಯ ಆಂತಕ ಬರದೇ ಚಟುವಟಿಕೆಯನ್ನು ಶಿಸ್ತಾಗಿ ಕಲಿಯುವಂತೆ ಮಾಡುವ ಉದ್ದೇಶದಿಂದ ಅವುಗಳನ್ನು ಪ್ರಾರಂಭದಿಂದಲೇ (ಒಂದನೇ ತರಗತಿಯಿಂದಲೇ ) ಶ್ರಮವಿಲ್ಲದೇ ಸ್ವಲ್ಪ ಸ್ವಲ್ಪವಾಗಿ ಹಂತ ಹಂತವಾಗಿ ಹೇಳಿಕೊಡಲು ಮನೆಕೆಲಸ , ಹಾಡು, ನೃತ್ಯ, ಇವುಗಳನ್ನು ಬಳಸಿದ್ದು . ಪಾಠದ ಪ್ರಾರಂಭದಿಂದ ಕೊನೆಯವರೆಗೂ ಕೊಂಡಿಯ ಮಾದರಿಯಲ್ಲಿ ಕಲಿಸುತ್ತಾ ಹೋಗುವ ಯೋಜನೆಯು ಶಿಕ್ಷಕರು ಪಾಠವನ್ನು ಸಂಪೂರ್ಣ ಮುಗಿಸಿದ ನಂತರ ಆದರ ಪ್ರತಿಫಲ ಆಶ್ಚರ್ಯಕರವಾಗಿ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಈ ತಂತ್ರವನ್ನು ಮಾಡಲಾಗಿದೆ. ಇವುಗಳನ್ನು ಮಾಡಿಸಲು ಕೆಲವೊಮ್ಮೆ ವಿಷಯದಲ್ಲಿ ಸೂಚಿಸಿರುವ ತಂತ್ರಗಳಿಗಿಂತ ಬೇರೆಯ ತಂತ್ರಗಳಿದ್ದರೂ ಬಳಸಲು ಹಿಂಜರಿಯಬೇಕಾಗಿಲ್ಲ. ಈ ಚಟುವಟಿಕೆಗಳು ದಿನನಿತ್ಯ ಶಾಲೆಯಲ್ಲಿ ಮಕ್ಕಳನ್ನು ಶಿಸ್ತಿಗೆ ಒಳಪಡಿಸಲು ಬಳಸುತ್ತಿರುತ್ತೇವೆ. ಹಾಗಾಗಿ ಇದೊಂದು ನಿರಂತರವಾಗಿ ರೂಢಿಯಲ್ಲಿರುವ ಚಟುವಟಿಕೆಗಳಾಗಿವೆ. ಇವುಗಳ ಸಾಮರ್ಥ್ಯಗಳನ್ನು ಗುರುತಿಸಲು ಶಿಕ್ಷಕರು ಪ್ರಯತ್ನಿಸಬೇಕಾಗುತ್ತದೆ.
- ವಿಶ್ರಾಂತಿ : ಇದು ಸರಳ ಯೋಗದ ಭಾಗವು ಸಹ ಆಗಿರುತ್ತದೆ.
ಅಂದರೆ ಓಂಕಾರ ಧ್ವನಿ ಮಾಡುವುದು. ಸರಳ ಪ್ರಾಣಾಯಾಮಕ್ಕಾಗಿ
ದಂಡಾಸನ/ಸುಖಾಸನ/ಪದ್ಮಾಸನದಲ್ಲಿ ಕುಳಿತು ವಿಶ್ರಾಂತಿ ಪಡೆಯುವ ವಿಧಾನವು ಇದಾಗಿದೆ. ಕಾರಣ
ಆಟ, ವ್ಯಾಯಾಮಗಳನ್ನು ಮಾಡಿದ ನಂತರ ಮಕ್ಕಳಿಗೆ ವಿಶ್ರಾಂತಿ ಬಹಳ ಅವಶ್ಯಕವಾಗಿರುತ್ತದೆ.
ಇಲ್ಲದಿದ್ದರೆ ಪಠ್ಯದ ಪಾಠಕ್ಕೆ ಮಕ್ಕಳು ಪೂರಕವಾಗಿ ಸ್ಪಂಧಿಸಲಾರರು. ಆದಕಾರಣ ಮಕ್ಕಳನ್ನು
ಒಂದು ಮರದ ಕೆಳಗೆ/ವರಾಂಡ/ಕೊಠಡಿ ಒಳಗೆ ಸಾವಾಕಾಶವಾಗಿ ಕೂರಿಸಿ ವಿಶ್ರಾಂತಿಯನ್ನು
ಕೊಡಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಶ್ಯಬ್ಧತೆಯನ್ನು ಕಾಯ್ದುಕೊಂಡು ಪ್ರಶಾಂತ
ವಾತಾವರಣವನ್ನು ಕಲ್ಪಿಸಿ ಶರೀರದ ಅಂಗಾಂಗಗಳನ್ನು ವಿಶ್ರಾಂತಗೊಳಿಸುವ ತಂತ್ರವನ್ನು
ಮಕ್ಕಳಿಗೆ ತಿಳಿಸುವುದು ಅವಶ್ಯಕವಾಗಿದೆ. ಈ ಚಟುವಟಿಕೆಯನ್ನು ನಾಲ್ಕರಿಂದ ಆರು
ನಿಮಿಷಗಳವರೆಗೆ ಮಾಡಿದರೆ ಸಾಕಾಗಬಹುದು. ಈ ವಿಭಾಗಕ್ಕೆ ಬಂದಾಗ ಹೊರಗುಳಿದ ಮಕ್ಕಳನ್ನು
ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಾಗಿರುತ್ತದೆ.
ಆರೋಗ್ಯ ಶಿಕ್ಷಣ : ದೈಹಿಕ ಶಿಕ್ಷಣವೆಂದರೆ ಕೇವಲ ಚಟುವಟಿಕೆಯಲ್ಲ. ಮಗುವಿನ ಸಂಪೂರ್ಣ ಆರೋಗ್ಯವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣದಲ್ಲಿ ಆರೋಗ್ಯ ಶಿಕ್ಷಣ,ನೈತಿಕ ಶಿಕ್ಷಣ, ಪ್ರಥಮ ಚಿಕಿತ್ಸೆ ಇವುಗಳ ಬೌದ್ಧಿಕ ಬೋಧನೆಯು ಸೇರಿಕೊಂಡಿರುತ್ತದೆ. ಆದರೆ ಇವುಗಳನ್ನು ಸೀಮಿತ ಅವಧಿಯಲ್ಲಿ ಪಾಠಮಾಡಿ ಮಕ್ಕಳಿಗೆ ತಿಳಿಸಿದರೆ ಸಾಮಾನ್ಯವಾಗಿ ಮಕ್ಕಳು ಅವುಗಳನ್ನು ಮುಂದೆ ಮರೆಯುವ ಸಾಧ್ಯತೆಗಳಿರುವುದರಿಂದ ಈ ಆರೋಗ್ಯ ಶಿಕ್ಷಣ ಎಂಬುವುದು ನಿರಂತರವಾಗಿ ರೂಢಿಯಲ್ಲಿ ಬರಬೇಕಾಗಿದೆ. ಹಾಗಾದರೆ ಮಾತ್ರ ಆರೋಗ್ಯ ಶಿಕ್ಷಣದ ಗುರಿಯನ್ನು ಶಿಕ್ಷಣದಲ್ಲಿ ಈಡೇರಿಸಲು ಸಾಧ್ಯವಾಗುತ್ತದೆ. ಬೆಳೆಯುವ ಪೈರು ಮೊಳಕೆಯಲ್ಲಿಯೇ ಎಂಬಂತೆ ಆ ಮಕ್ಕಳನ್ನು ಉತ್ತಮ ಆರೋಗ್ಯದ ರೂಢಿಯಲ್ಲಿ ಬೆಳೆಯುವ ಮ್ತ ವಾತಾವರಣವನ್ನು ನಿರ್ಮಿಸಿಕೊಡುವುದು, ಶಾಲೆ, ಮನೆ, ಪರಿಸರದ ಜವಾಬ್ಧಾರಿ ಆದರೂ ಸಹ ಹೆಚ್ಚಿನ ಜವಾಬ್ಧಾರಿ ಶಾಲೆಯದಾಗಿದೆ. ಆದಕಾರಣ ಮರವಾಗಿ ಬಗ್ಗದ್ದನ್ನು ಗಿಡವಾಗಿಯೇ ಬಗ್ಗಿಸಿ ಸರಿಪಡಿಸುವ ಉದ್ದೇಶದಿಂದ ಆಟದ ಚಟುವಟಿಕೆಗಳು ಮುಗಿದ ನಂತರ ಮಕ್ಕಳಿಗೆ ದಿನಕ್ಕೆ ಒಂದೆರೆಡು ಆರೋಗ್ಯದ ರೂಢಿಗಳನ್ನು ಮಾಡಿಸಿ ಅದರ ಮೇಲ್ವಿಚಾರಣೆಯನ್ನು ಶಿಕ್ಷಕರು ದಿನ ಮಾಡುತ್ತಿರಬೇಕಾಗಿರುತ್ತದೆ. ಇದು ಅನಿವಾರ್ಯವೂ, ಅವಶ್ಯಕತೆಯೂ ಆಗಿರುವುದರಿಂದ ದಿನದ ಐದರಿಂದ ಹತ್ತು ನಿಮಿಷಗಯು ವಿಶ್ರಾಂತಿ ನಂತರ ವಿಷಯದಲ್ಲಿ ತಿಳಿಸಿರುವ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದರ ಮೂಲಕ ಅಲ್ಲಿಯ ಪರಿಸರಕ್ಕೆ ಹೊಂದಿಕೆಯಾಗುವಂತೆ ಮಕ್ಕಳಿಗೆ ತಿಳಿಸಿ ರೂಢಿಸಬೇಕಾಗುತ್ತದೆ. ದೈಹಿಕ ಚಟುವತಿಕೆಯ ಸಮಯ ಹೆಚ್ಚು ಹಿಡಿದರೆ ಮಾರನೆಯ ದಿನದ ಸಮಯವನ್ನು ಈ ವಿಷಯಕ್ಕೆ ಕಾದಿರಿಸಿಕೊಂಡು ತಿಳಿಸಬೇಕಾಗುತ್ತದೆ. ಹಾಗೂ ಹದಿನೈದು ದಿನಕ್ಕೆ ಒಂದು ಸಾರಿ ಆರೋಗ್ಯದ ವಿಷಯದಲ್ಲಿ ತಿಳಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ಮಾಡುವುದರ ಜೊತೆಗೆ ಪುನರಾವರ್ತನೆ ಮಾಡುವುದರಿಂದ ಉತ್ತಮ ಫಲ ದೊರೆಯಬಹುದಾಗಿದೆ. ಇದರ ಮೌಲ್ಯ ಮಾಪನವನ್ನು ಈ ಪಠ್ಯದ ಮಾರ್ಗಸೂಚಿಯಲ್ಲಿ ನೋಡುವುದು. - ಆಟದ ಪಾಠ : ಮಕ್ಕಳು ಆಟವಾಡಿದ ನಂತರ ಆಟದಿಂದ ಏನು ಕಲಿತಿದ್ದೀವಿ ಹಾಗೂ ಈ ಆಟದಲ್ಲಿ ಕೆಲವು ಸಂದರ್ಭಗಳು ಜೀವನದಲ್ಲಿ ಯಾವ ರೀತಿ ಉಪಯೋಗಕ್ಕೆ ಬರುತ್ತದೆ.? ಹಾಗೂ ಅಂತಹ ಉತ್ತಮ ವಿಷಯಗಳನ್ನು ಜೀವನದಲ್ಲಿ ಹೇಗೆ ಸಮನ್ವಯ ಗೊಳಿಸಿಕೊಂಡು ಹೋಗುವುದೆಂಬ ಅರಿವು ಮೂಡಿಸಬೇಕಾದದ್ದು ಬಹಳ ಮುಖ್ಯವಾಗಿದೆ. ಹಾಗಾದರೆ ಮಾತ್ರ ಆತವು ಒಂದು ನೈತಿಕ ಪಾಠದಂತೆ ಇತರೆ ಬೋಧನ ವಿಷಯಗಳಿಗೆ ಸರಿ ಸಮಾನವಾದುದ್ದು ಎಂದು ಸಾದರಪಡಿಸುವಲ್ಲಿ ಸಹಕಾರಿಯಾಗಬೇಕಾಗಿದೆ. ಆದುದರಿಂದ ವಿಷಯದಲ್ಲಿ ತಿಳಿಸಿರುವ ಆಟಗಳು ಯಾವ ನೀತಿಯನ್ನು ತಿಳಿಸುತ್ತದೆ. ಎಂದು ಸಾಧ್ಯವಾದಷ್ಟು ಮಟ್ಟಿಗೆ ಹೇಳಲು ಪ್ರಯತ್ನಿಸಿದೆ. ಆದರೆ ಶಿಕ್ಷಕರು ಮತ್ತಷ್ಟು ನೀತಿಗಳನ್ನು ಮಕ್ಕಳಿಗೆ ತಿಳಿಸುವುದು ಅವಶ್ಯಕವಾಗಿದೆ. ಹಾಗೂ ಈ ನೀತಿಗಳನ್ನು ಆಟ ಮುಗಿದ ನಂತರ ಮಕ್ಕಳಿಗೆ ಪ್ರಶ್ನೆ ಕೇಳುವುದರ ಜೊತೆಗೆ ತಿಳಿಸುವುದು ಇಲ್ಲವೇ ಇತರೇ ಯಾವುದಾದರೂ ಉಪಯುಕ್ತ ಸಂದರ್ಭದಲ್ಲಿ ಇಲ್ಲವೇ ಆರೋಗ್ಯ ಶಿಕ್ಷಣ ಬೋಧನೆಯ ನಂತರ ಮಕ್ಕಳಿಗೆ ತಿಳಿಸಿ ಪಾಠದ ಮೌಲ್ಯವನ್ನು ಹೆಚ್ಚಿಸುವುದಾಗಿದೆ.
- ಮನೆಕೆಲಸ : ಶಿಕ್ಷಕರು ಕೆಲವೊಮ್ಮೆ ವಿಷಯಗಳನ್ನು ಮಕ್ಕಳಿಗೆ ತಿಳಿಸಿದಾಗ ಮಕ್ಕಳು ಹೆದರಿಕೆ ಇಲ್ಲವೇ ಹಿಂಜರಿಕೆ ಭಾವನೆಯಿಂದ ಕಲಿಯದೇ ಇರಬಹುದು ಅಥವಾ ಹೇಳಿ ಕೊಡುವುದು ಅವ್ರಿಗೆ ಅರ್ಥವಾಗದೇ ಇರಬಹುದು. ಹಾಗಾಗಿ ಕೆಲವು ವಿಚಾರಗಳನ್ನು ಮನೆಯ ವಾತಾವರಣ ಹಾಗೂ ಸ್ನೇಹಿತರೊಂದಿಗೆ ಕೇಳಿ ತಿಳಿದುಕೊಳ್ಳುವುದರಿಂದ ಶಿಕ್ಷಕರು ಚಟುವಟಿಕೆಯನ್ನು ಮಾಡಿಸಲು ಸುಲಭವಾಗುತ್ತದೆ. ಆದ್ದರಿಂದ ಶಿಕ್ಷಕರು ಸಾವದಾನವಾಗಿ ತಮ್ಮ ಚಟುವಟಿಕೆಯನ್ನು ಕಲಿಸಲು ಮಕ್ಕಳಿಗೆ ವಿಶಃಅಯದಲ್ಲಿ ತಿಳಿಸಿರುವ ಸರಳ ಚಟುವಟಿಕೆಯನ್ನು ಕಲಿತು ಬರಲು ತಿಳಿಸುವುದು ಅವಶ್ಯಕವಾಗಿದೆ ಮತ್ತು ತಿಳಿದು ಬಂದದ್ದನ್ನು ಮಕ್ಕಳಿಂದ ಕೇಳಿದರೆ ಉತ್ತರ ಸಗಬಹುದು ಇಲ್ಲವೇ ಮತ್ತಷ್ಟು ಕಾಲಾವಕಾಶ ಬೇಕಾಗುತ್ತದೆ ಎಂಬುದನ್ನು ತಿಳಿದು ಚಟುವಟಿಕೆಯನ್ನು ಮಾಡಿಸಬಹುದು.
- ಚಟುವಟಿಕೆ ವಿಭಾಗ : ಇದೊಂದು ಅನೌಪಚಾರಿಕ ಚಟುವಟಿಕೆಯಾದರೂ ಸಹ ಬಿಡುವಿನ ವೇಳೆಯಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸುವುದು ಹಾಗೂ ಅವಕಾಶಗಳನ್ನು ಕಲ್ಪಿಸಿಕೊಡುವುದು ಅವಶ್ಯಕವಾಗಿದೆ. ಇಲ್ಲಿರುವ ಚಟುವಟಿಕೆಗಳು ಪಾಠಕ್ಕೆ, ಆಟಕ್ಕೆ ಪೂರಕವಾಗಿದ್ದು, ಮತ್ತೆ ಕೆಲವು ಪಾಠದಲ್ಲಿ ಕಲಿಸಲಾಗದಿರುವುದನ್ನು ಸ್ವತಂತ್ರವಾಗಿ ಕಲಿತು ಬಿಡುವಿನ ವೇಳೆಯನ್ನು ಸದುಉಪಯೋಗಪಡಿಸಿಕೊಳ್ಳುವಂತಹ ಚಟುವಟಿಕೆಗಳು ಇದರಲ್ಲಿ ಇರುವುದಾಗಿ. ಅಮ್ತಹುಗಳನ್ನು ಶಿಕ್ಷಕರು ಮಕ್ಕಳು ಮಾಡುವಂತ್ ಪ್ರೇರೇಪಿಸಬೇಕಾಗಿದೆ.
- ಮರಳಿ ಕೊಠಡಿಗೆ : ಈ ವಿಭಾಗದಲ್ಲಿ ಅಂದಿನ ಪಾಠಕ್ಕೆ ಸಂಬಂಧಿಸಿದ ಒಂದು ಗಾದೆ ಅಥವಾ ನೀತಿಯನ್ನು ಎಲ್ಲಾ ಮಕ್ಕಳು ಒಟ್ಟಾಗಿ ವಿನೋದವಾಗಿ ಹೇಳುವಂತೆ ಮಾಡಬೇಕು. ಹಾಗೂ ಮಕ್ಕಳು ಕೊಠಡಿಯಿಂದ ಹೊರ ಬರುವಾಗ ಅಥವಾ ಕೊಠಡಿಗೆ ಹೋಗುವಾಗ ಪ್ರತಿದಿನ ಸಾಲಾಗಿ ಹೋಗುವ ರೂಢಿಯನ್ನು ಮಾಡಿಸಬೇಕಾಗುತ್ತದೆ. ಹಾಗೂ ಈ ವೇಳೆಯಲ್ಲಿ ಹಾಜರಾತಿಯನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ.
- ಪಠ್ಯಕ್ಕೆ ಪೂರಕವಾದ ಅಂಶಗಳು : ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಮುಖ್ಯ ಚಟುವಟಿಕೆಯಿಂದ ಪಠ್ಯದ ವಿಷಯಗಳಿಗೆ ಪೂರಕವಾದ ಅಂಶಗಳನ್ನು ವಿಷಯವಾರು ಹೊರ ತೆಗೆದು ಈ ಪಠ್ಯ ಪುಸ್ತಕದಲ್ಲಿ ನೀಡಲಾಗಿದೆ. ಇವು ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಬೇರೆ ಆಟಗಳಿಂದಲೂ ಸಹ ಪಠ್ಯಕ್ಕೆ ಪೂರಕವಾದ ಅಂಶಗಳೆಷ್ಟಿದೆ ಎಂಬುವುದನ್ನು ತಿಳಿದು ಪಾಠದಲ್ಲಿ ಅವುಗಳ ಉಪಯೋಗವನ್ನು ಪಡೆದುಕೊಳ್ಳುವುದರಿಂದ ಆಟದ ಪಾಠದ ನಿಜವಾದ ಉದ್ದೇಶವನ್ನು ಈಡೇರಿಸಿದಂತಾಗುವುದು. ಶಿಕ್ಷಕರು ಹಾಗೂ ಮಕ್ಕಳು ಅಲ್ಲಿರುವ ಚಟುವಟಿಕೆಗಳಿಂದ ಪಠ್ಯಕ್ಕೆ ಮತ್ತಷ್ಟು ಪೂರಕ ಅಂಶಗಳನ್ನು ಹೊರತೆಗೆಯಲು ಕ್ರಿಯಾಶೀಲರಾಗುವರು.
- ಪ್ರಶ್ನಿ ವಿಭಾಗ : ಒಂದನೇ ತರಗತಿ ಮಕ್ಕಳಿಗೆ ಆಯಾ ಪಾಠದ ಕೊನೆಯಲ್ಲಿ ಪ್ರಶ್ನೆಗಳನ್ನು ನೀಡಲಾಗಿದೆ. ಈ ಪ್ರಶ್ನೆಗಳಿಗೆ ಉತ್ತರವು ಚಟುವಟಿಕೆಯನ್ನು ಮಾದಿ ಕಲಿತಾಗ ಮಾತ್ರ ಮಕ್ಕಳು ಉತ್ತರಿಸಲು ಸಾಧ್ಯವಾಗುವುದು. ಎಲ್ಲಾ ಮಕ್ಕಳು ಆಟದ ಪಾಠದ ಚಟುವಟಿಕೆಯಲ್ಲಿ ವಾಗವಹಿಸುವುದು ಅನಿವಾರ್ಯವಾಗಿದೆ.
- ಎರಡೆನೇ ತರಗತಿ ಮಕ್ಕ್ಳಿಗೆ ಪಠ್ಯದ ಕೊನೆಯಲ್ಲಿ ಪ್ರಶ್ನೆಗಳನ್ನು ನೀಡಲಾಗಿದೆ.
- ಮೂರು ಮತ್ತು ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಆಯಾ ಪಾಠದ ಕೊನೆಯಲ್ಲಿ ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳಲ್ಲಿ ಕೆಲವು ತಪ್ಪು ಪ್ರದರ್ಶನ ಮಾಡಿ ತೋರಿಸುವಂತೆ ಮತ್ತು ನಿಯಮಗಳನ್ನು ಸರಿ, ತಪ್ಪು ಯಾವುದೆಂದು ಗುರುತಿಸುವಂತೆ ಹಾಗೂ ಪ್ರಶ್ನೆಗಳಿಗೆ ಉತ್ತರಿಸುವಂತೆ ಪ್ರಶ್ನಾವಿಭಾಗವನ್ನು ರಚಿಸಲಾಗಿದೆ. ಇವುಗಳನ್ನು ಮಕ್ಕಳು ಪ್ರದರ್ಶನ ಮಾಡಿ ತೋರಿಸಬೇಕಾದರೆ ಮತ್ತು ಪ್ರಶ್ನೆಗಳಿಗೆ ಉತ್ತರವನ್ನು ಹೇಳಬೇಕಾದರೆ ಆಟದ ಪಾಠ ಚಟುವಟಿಕೆಯಲ್ಲಿ ಪಾಲ್ಗೊಂಡಿರಬೇಕಾಗಿರುತ್ತದೆ.
****************ಮಾಹಿತಿ ಕೃಪೆ: ವಿಕಾಸ್ ಪೀಡಿಯಾ*****************
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ