ಕೇಂದ್ರ ಪ್ರಾಯೋಜಿತ ಯೋಜನೆಯಾದ "ರಾಷ್ಟ್ರೀಯ ಮೀನ್ಸ್-ಕಮ್-ಮೆರಿಟ್
ವಿದ್ಯಾರ್ಥಿವೇತನ ಯೋಜನೆ (NMMSS)" ಮೇ 2008 ರಲ್ಲಿ ಆರಂಭಿಸಲಾಯಿತು. ಈ ಯೋಜನೆಯ
ಮುಖ್ಯ ಉದ್ದೇಶ 8ನೇ ತರಗತಿಯ ನಂತರ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆಯನ್ನು
ತಡೆಯುವುದು ಹಾಗೂ 8 ರಿಂದ 12ನೇ ತರಗತಿಯವರೆಗೆ ನಿರಂತರ ವ್ಯಾಸಂಗ ಮುಂದುವರೆಯುವಂತೆ
ಮಾಡುವುದಾಗಿದೆ.
ತರಗತಿಯಲ್ಲಿ ಓದುತ್ತಿರುವ ಆಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 6000 / - ವಾರ್ಷಿಕ (ರೂ .500 / - ಪ್ರತಿ ತಿಂಗಳು)
IX ತರಗತಿ ಇಂದ XII ತರಗತಿ ವರೆಗೆ ವಿದ್ಯಾರ್ಥಿವೇತನ ನೀಡುವ ಯೋಜನೆ
ಯೋಜನೆಯ ಸಂಪೂರ್ಣ ವಿವರಗಳಿಗಾಗಿ , ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಥಿವೇತನ ಪ್ರಮಾಣ
ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರೌಢ ಶಾಲೆಗಳಲ್ಲಿ 8 ನೇತರಗತಿಯಲ್ಲಿ ಓದುತ್ತಿರುವ ಆಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 6000 / - ವಾರ್ಷಿಕ (ರೂ .500 / - ಪ್ರತಿ ತಿಂಗಳು)
IX ತರಗತಿ ಇಂದ XII ತರಗತಿ ವರೆಗೆ ವಿದ್ಯಾರ್ಥಿವೇತನ ನೀಡುವ ಯೋಜನೆ
ಅರ್ಹತಾ ಮಾನದಂಡಗಳು
- ಪೋಷಕರ ವಾರ್ಷಿಕ ವರಮಾನ ರೂ.1,50,000ಗಳ ಮಿತಿಯೊಳಗಿರಬೇಕು, ರಾಜ್ಯ ಸರ್ಕಾರದ ಮೀಸಲಾತಿ ನೀತಿ ಗಳು ಅನ್ವಯವಾಗುತ್ತದೆ
- ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡುವ ವಿದ್ಯಾರ್ಥಿಗಳು ೭ನೇ ತರಗತಿ ಯಲ್ಲಿ ಕನಿಷ್ಠ 55% ಅಂಕಗಳನ್ನು (ಎಸ್ಸಿ / ಎಸ್ಟಿ ವರ್ಗ ದವರಿಗೆ ೫% ವಿನಾಯತಿ) ಪಡೆದಿರಬೇಕು
- ವಿದ್ಯಾರ್ಥಿಗಳು ಸರ್ಕಾರದ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಸರ್ಕಾರದ ಅನುದಾನಿತ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರಬೇಕು.
- "ಕೇಂದ್ರೀಯ ವಿದ್ಯಾಲಯ ಮತ್ತು" ಜವಾಹರ್ ವಿದ್ಯಾಲಯ ದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿರುವುದಿಲ್ಲ. ಹಾಗೆಯೇ, ರಾಜ್ಯ ಸರ್ಕಾರಿ ಸಂಸ್ಥೆಗಳು, ನಡೆಸುತ್ತಿರುವ ವಸತಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಶಿಕ್ಷಣ ಸೌಲಭ್ಯಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಅಧ್ಯಯನ ವಿದ್ಯಾರ್ಥಿಗಳು ಈ ಯೋಜನೆಯಡಿ ವಿದ್ಯಾರ್ಥಿ ವೇತನ ಅರ್ಹರಾಗಿರುವುದಿಲ್ಲ.
- ವಿದ್ಯಾರ್ಥಿವೇತನಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ೭ನೇ ತರಗತಿ ಯಲ್ಲಿ ಕನಿಷ್ಠ 55% ಅಂಕಗಳನ್ನು (ಎಸ್ಸಿ / ಎಸ್ಟಿ ವರ್ಗ ದವರಿಗೆ ೫% ವಿನಾಯತಿ) ಪಡೆದಿರಬೇಕು
- ಭಾರತದಲ್ಲಿ ಅಧ್ಯಯನ ಮಾಡುವ ವಿದ್ಯಾಥಿಗಳಿಗೆ ತರಗತಿ IX ರಿಂದ XII ವರೆಗೆ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಹಂತದ ವರೆಗೆ ಗರಿಷ್ಠ ನಾಲ್ಕು ವರ್ಷಗಳಕಾಲದ ವರಗೆ ಮಾತ್ರ ನೀಡಲಾಗುವುದು
ಆಯ್ಕೆ ಪ್ರಕ್ರಿಯೆ
ವಿದ್ಯಾರ್ಥಿವೇತನವನ್ನು ಪ್ರಶಸ್ತಿಗೆ ವಿದ್ಯಾರ್ಥಿಗಳನ್ನು ಆಯಾ ರಾಜ್ಯ ಸರ್ಕಾರಗಳು ನಡೆಸುವ ಪರೀಕ್ಷೆಯ ಫಲಿತಂಶದ ಮೂಲಕ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ (ಎರಡನೇ ಹಂತ) ಪರೀಕ್ಷೆ NCERT ನಡೆಸುವ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ನಾಮಕರಣ ಮಾಡುವ ಕಾರ್ಯವನ್ನು ನಿರ್ವಹಿಸುತ್ತಿವೆ. ಅದೇ ರೀತಿ ಪರೀಕ್ಷೆಯನ್ನು ಮೀನ್ಸ್-ಕಮ್-ಮೆರಿಟ್ ವಿದ್ಯಾರ್ಥಿವೇತನಗಳ ಪ್ರಶಸ್ತಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಮಾಡಲಾಗುತ್ತದೆ.ಯೋಜನೆಯ ಸಂಪೂರ್ಣ ವಿವರಗಳಿಗಾಗಿ , ಇಲ್ಲಿ ಕ್ಲಿಕ್ ಮಾಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ