ಪುಟಗಳು

27 ಜುಲೈ 2018

-: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ :-

           ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು 2006-07ನೇ ಸಾಲಿನಿಂದ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಾರೋಗ್ಯ ತಪಾಸಣೆಯನ್ನು ಕೈಗೊಳ್ಳಲಾಗುತ್ತದೆ. ಸರ್ವ ಶಿಕ್ಷಣ ಅಭಿಯಾನ ಎನ್.ಆರ್.ಹೆಚ್.ಎಂ. ವತಿಯಿಂದ ಹೆಲ್ತ್ ಕಾರ್ಡ್ ಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸಿದೆ. ವಾಹನದ ಇಂಧನ ವೆಚ್ಚಕ್ಕಾಗಿ ಪ್ರತಿ ತಾಲ್ಲೂಕಿಗೆ ರೂ.69318/- ದಂತೆ ರೂ.122.00 ಲಕ್ಷಗಳನ್ನು ಮಧ್ಯಾಹ್ನ ಉಪಹಾರ ಯೋಜನೆಯ ಲೆಕ್ಕ ಶೀರ್ಷಿಕೆಯಡಿ ಭರಿಸಲಾಗಿದೆ. 2010-11ನೇ ಸಾಲಿನಲ್ಲಿ ತಪಾಸಣೆಗೊಳಪಟ್ಟ ವಿದ್ಯಾರ್ಥಿಗಳ ಸಂಖ್ಯೆ 86,08,998(93.34%) ಇದರಲ್ಲಿ 2538 ವಿದ್ಯಾರ್ಥಿ ಗಳಿಗೆ ತೀವ್ರತರವಾದ ಖಾಯಿಲೆಗಳಿಗೆ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಚಿಕಿತ್ಸೆ ನೀಡಲಾಗಿದೆ. ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ವತಿಯಿಂದ ರೂ.778.53 ಲಕ್ಷ ಖರ್ಚು ಭರಿಸಲಾಗಿದೆ.
2011-12ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸುವರ್ಣ ಆರೋಗ್ಯ ಮಾಸಾಚರಣೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡು ಮಾರ್ಚ್-2012ರ ಅಂತ್ಯಕ್ಕೆ ಶೇ.95.72 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1241 ವಿದ್ಯಾರ್ಥಿಗಳಿಗೆ ತೀವ್ರತರ ಖಾಯಿಲೆಗಳನ್ನು ಗುರ್ತಿಸಿ ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ಯೋಜನೆಯಡಿಯಲ್ಲಿ ರೂ.630.42 ಲಕ್ಷಗಳ ಖರ್ಚು ಭರಿಸಲಾಗಿದೆ.
2012-13ನೇ ಸಾಲಿನ ಆಗಸ್ಟ್ ತಿಂಗಳಿನಲ್ಲಿ ಸುವರ್ಣ ಆರೋಗ್ಯ ಮಾಸಾಚರಣೆಯನ್ನು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡು ಮಾರ್ಚ್-2013ರ ಅಂತ್ಯಕ್ಕೆ ಶೇ.91.51 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಅಗತ್ಯವಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1219 ವಿದ್ಯಾರ್ಥಿಗಳಿಗೆ ತೀವ್ರತರ ಖಾಯಿಲೆಗಳನ್ನು ಗುರ್ತಿಸಿ ಇದಕ್ಕೆ ತಗಲುವ ಪೂರ್ಣ ವೆಚ್ಚವನ್ನು ಎನ್.ಆರ್.ಹೆಚ್.ಎಂ. ಯೋಜನೆಯಡಿಯಲ್ಲಿ ರೂ.703.71 ಲಕ್ಷಗಳ ಖರ್ಚು ಭರಿಸಲಾಗಿದೆ.
 ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳಲ್ಲಿ ಮಾಸಾಚರಣೆಯನ್ನಾಗಿ ಹಮ್ಮಿಕೊಳ್ಳಲಾಗುತ್ತಿದೆ. 2013-14ನೇ ಸಾಲಿನಿಂದ ವರ್ಷಪೂರ್ತಿ ತಪಾಸಣಾ ಕಾರ್ಯಕ್ರಮವು 1 ರಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಮುಂದುವರೆಸಲಾಗುತ್ತದೆ. ಎನ್.ಆರ್.ಹೆಚ್.ಎಂ.ನಡಿ ಪ್ರತಿ ತಾಲ್ಲೂಕಿನಲ್ಲಿ ಒಬ್ಬರು ವೈದ್ಯಾಧಿಕಾರಿ ಹಾಗೂ ಒಬ್ಬ ನರ್ಸ್ ಒಳಗೊಂಡಂತೆ 2 ತಂಡಗಳನ್ನು ರಚಿಸಿಕೊಂಡು ಮಕ್ಕಳ ತಪಾಸಣೆ ನಡೆಸಲಾಗುತ್ತದೆ.
2013-14 ನೇ ಸಾಲಿನಲ್ಲಿ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಒಟ್ಟು 92,02,031 ಮಕ್ಕಳ ಗುರಿ ಹೊಂದಿದ್ದು, 31,86,441 ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದರಲ್ಲಿ ಅಗತ್ಯವಿರುವ 1744 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಇದಕ್ಕೆ ಒಟ್ಟಾರೆ ರೂ.851.87 ಲಕ್ಷಗಳ ವೆಚ್ಚ ಭರಿಸಲಾಗಿದೆ.
2014-15 ನೇ ಸಾಲಿನಿಂದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವರ್ಷಪೂರ್ತಿ ತಪಾಸಣಾ ಕಾರ್ಯಕ್ರಮವು 1 ರಿಂದ 10ನೇ ತರಗತಿಯ ಸರ್ಕಾರಿ, ಅನುದಾನಿತ, ಮತ್ತು ಅನುದಾನ ರಹಿತ ಶಾಲೆಗಳಿಗೆ ಮುಂದುವರೆಸಲಾಗುತ್ತಿದೆ. ಎನ್.ಆರ್.ಹೆಚ್.ಎಂ ನಡಿ ಪ್ರತೀ ತಾಲ್ಲೂಕಿನಲ್ಲಿ ಒಬ್ಬರು ವೈದ್ಯಾಧಿಕಾರಿ ಹಾಗೂ ಒಬ್ಬ ನರ್ಸ್ ಒಳಗೊಂಡಂತೆ ಎರಡು ತಂಡಗಳನ್ನು ರಚಿಸಿಕೊಂಡು ಮಕ್ಕಳ ತಪಾಸಣೆ ನಡೆಸಲಾಗುತ್ತಿದೆ.


********ಮಾಹಿತಿ ಕೃಪೆ: ವಿಕಾಸ್‌ಪೀಡಿಯಾ*******

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ