ಪುಟಗಳು

27 ಏಪ್ರಿಲ್ 2018

ನನ್ನ ಅಜ್ಜಿ

ನನ್ನ ಅಜ್ಜಿ
ನನ್ನನ್ನೇಕೆ ಅಗಲಿದೆ
ತೊಟ್ಟೆ ಹರಕು ಬಟ್ಟೆ, ಹೊಟ್ಟೆ, ಗಂಜಿ
ಬೆಂದೆ ನೀನು ಉರಿಬಿಸಿನಲಿ
ಆದರೆ ನೀನು ಬಯಸಿದೆ
ನಾನು ನೆರಳಿನಲ್ಲಿ ಸುಖವಾಗಿ ಇರಲು ಕಳಿಸಿದೆ
ಕಲಿಯಲು ಎರಡು ಅಕ್ಷರವ
ಆದರೆ ನೀನು ಬೆಂದುಹೋದೆ ಬಡತನದಿ

ನನ್ನ ಅಜ್ಜಿ
ನನ್ನನ್ನೇಕೆ ಅಗಲಿದೆ
ಕಣ್ಣುಗಳಲ್ಲಿ ಕಣ್ಣೀರು ಧಾರೆಬಾರದು
ಆದರೆ ಅಂತರಂಗದಲ್ಲಿ
ಕಣ್ಣೀರು ಹರಿಯುತ್ತಿದೆ ನದಿಯಾಗಿ
ನೀನು ನಕ್ಷತ್ರಗಳಲ್ಲಿ ಸೇರಿದೆ
ನಾನು ಯಾವಾಗ ನಿನ್ನ ಗೂಡು ಸೇರಲಿ
ಯಾವಾಗ ನಿನ್ನ ಪ್ರೀತಿಯ ಪಡೆಯಲಿ
ನಿನ್ನ ನೆನಪುಗಳ ಸರಮಾಲೆಯಲ್ಲಿ
ಬೇಯುತ್ತಿರುವೆ ಅಜ್ಜಿ
ನನ್ನ ಅಜ್ಜಿ ನನ್ನನೇಕೆ ಅಗಲಿದೆ ನೀ

ರಚನೆ: - ಮಧು.ಎಂ,     ಚಿತ್ರದುರ್ಗ



**********

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ