ಪುಟಗಳು

20 ಜನವರಿ 2018

ನನ್ನಕನಸು

ನನ್ನಕನಸು 
ಮೂಡನ ಸೂರ್ಯನ ರಂಗಿನ ಹೊಳೆಯಲಿ
ಕಾಂತಿಯ ಬೆಳಕಿನ ಕವಿ ಕಾವ್ಯದ ಸೊಬಗಲಿ
ಪಸರಿಪ ನಾಡಿನ ಕರುನಾಡ ತಾಯ ಮಡಿಲಲಿ
ನಿರ್ಮಲ ಚಿತ್ತದ ಚಿತ್ರಿಪ ಕವಿ ತೃಷೆಯಲಿ

ಅಲ್ಲಿ ನೋಡಲು ಕೆನರ ಭಾಗದ ತನುವಲಿ
ಇಲ್ಲಿ ನೋಡಲು ಬಯಲ ಸೀಮೆಯ ಮೃದುತತೆಯಲಿ
ಮೇಲೆ ನೋಡಲು ವೀರಶೂರರ ಪ್ರಾಣತ್ಯಾಗದಲಿ
ಇತ್ತಲೆ ನೋಡಲು ಗಡಿ ತಾಯಿ ಸೋದರಿಯ ಸೆರಗಲಿ

ಇಸಿಲನಾಡು ಹೆಸರು ಪಡೆದಿಹ ನಾಡಲಿ
ಸಂಭ್ರಮದ ಪ್ರತಿದಿನ ಮುಂಗೋಳಿಕೂಗಲಿ
ಮಿರಿಮಿರಿ ಮಿಂಚುವ ವನದೇವಿಯ ನೆರಳಲಿ
ಬದುಕು ಸಾಗಿಪ ಜನರ ನಡು ನಡುವಲಿ

ಸಾಗಿದೆ ಮನಮರೆಸುವ ಜೀವನ ರಸದಲಿ
ಹುಟ್ಟಿ ಧನ್ಯತೆ ಪಡೆದೆ ನಾ ಈ ನಾಡಲಿ
ಮರಳಿ ಹುಟ್ಟುವಾಸೆ ಇಸಿಲತಾಯಿಯ ಮಡಿಲಲಿ
ಹರಸುವಳು ನನ್ನ ತಾಯಿ ತನ್ನ ಮನದಲಿ
 *******
ಮರೆಯಾದ ಗೆಳೆಯನ ಗೆಳೆತನ 
ನಂಬಿಕೆಯ ನಗುವಲ್ಲಿ
ನಗುಮೊಗದ ಮೊಗದಲ್ಲಿ
ಮರೆಯಾದೆನಾ , ನಾನು ?

ಮನಸ್ಸಿಗೆ ಸಾಂತ್ವಾನ
ನೀಡುವ , ಮನಸ್ಸಿಂದ
ಮರೆಯಾದೆನಾ , ನಾನು?

ಎಲ್ಲರಂತಲ್ಲ ನನಗೆಳೆಯ
ಎಲ್ಲರಿಗಿಂತ ಮುಂದು
ಮುಂದೋಗುವನು ಬಿಟ್ಟು
ಮರೆಯಾದೆನಾ , ನಾನು ?

ಮರೆತಿಲ್ಲ ಮಿತ್ರನ
ಮರೆಯೋಲ್ಲ ನನ್ನ ಎಂದಿದ್ದೀ
ಮರೆಯಾದೆನಾ , ನಾನು ?
******
ಮನದನ್ನೆ ಮಂದಾರ ಪುಷ್ಪದ ಮನದನ್ನೆ 
ಮರಸಿದಳು ಮನದ ನೋವನ್ನೆ 
ಮಲ್ಲಿಗೆಯ ಮುಗುಳ್ನಗೆಯ ತೋರಿಮನದನ್ನೆ 
ಮೆರೆದಳು ಮನದ ಸಿರಿಯನ್ನೆ 

ಮಧುಕರವ ನೀಡುವಳು ಮನದನ್ನೆ 
ಮಧುವಾಗಿ ವಧುವಾಗಿ ನೆನೆದಳು ನನ್ನನ್ನೆ 
ಮಾಮರದ ಕೋಗಿಲೆಯ ಕಂಠವನು ನಾಚಿಸಿದಳು ಮನದನ್ನೆ 
ಮರೆಮಾಡಿದಳು ವಸಂತನ ಸೊಬಗನ್ನೆ 

ಮಣಭಾರ ಪ್ರೀತಿಯ ಹೊತ್ತಳು ಮನದನ್ನೆ 
ಮಮ್ಮಲ ಮರುಗಿದಳು ಕಾಣದೆ ನನ್ನನ್ನೆ 
ಮನದನಿನ್ನಾರಾಜ್ಯದ ಒಡತಿನಾನೆಂದಳು ಮನದನ್ನೆ 
ಮನದೊಳಗೆ ಸುಳಿಯಲು ಬಿಡಳು ಸವತಿಯ ನೆರಳನ್ನೆ 

ಮನಃಶ್ಯಾಂತಿ ಪಡೆಯೆ ಬಾಯೆಂದಳು ಮನದನ್ನೆ 
ಮನರಂಜಿಪಳು ನೀಡುತಾ ತನ್ನನ್ನೆ 
ಮಗುವಿನ ಮುಗ್ಧನಗೆಯ ಬೀರುವಳು ಮನದನ್ನೆ 
ಮನದನ್ನೆಗೆ ನೀಡಿದೆನು ಸಂಪೂರ್ಣ ನನ್ನ ಮನವನ್ನೆ
********
ವಾರಿದಿಯಾದ ಗುರು
ಗುರುವು ಸರಿದಾರಿ ತೋರುವ ವಾರಿಧಿ
ಗುರುವು ಗುರಿ ತೋರುವ ಸಾರಥಿ
 ಗುರುವು ಜೀವನದ ಸಾರಾಂಶದ ಸನ್ನಿಧಿ
ಗುರುವು ಕನಸು ಕಲ್ಪನೆಯ ಗುಣನಿಧಿ

ಗುರುವು ಅಂಗೈಲಿ ಆಕಾಶವಿರುವಂತಾಗಿಸೋ ದಿವ್ಯ
ಗುರುವು ಸಕಲಗಳ ಪರಿಣತಿಯ ಭವ್ಯ
ಗುರುವು ಮಮತೆಯ ಅನನ್ಯ
ಗುರುವು ಸ್ಪೂರ್ತಿಯ ಚೈತನ್ಯ

ಗುರುವು ಉದ್ದೇಶಗಳ ಆಗರ ಗುರುವು
ಕೈವಲ್ಯದ ಮಹಾಪೂರ ಗುರುವು
ಸಂಕೇತದ ಸಾಗರ ಗುರುವು
ಭಾವನೆಯ ಹರಿಕಾರ ಗುರುವು

ಸಂಕಲ್ಪದ ಸಂರಕ್ಷಕ ಗುರುವು
ದುರ್ಗುಣಗಳ ಸಂಶಿಕ್ಷಕ ಗುರುವು
ಧರ್ಮಗಳ ಸಂಸೇವಕ ಗುರುವು
ವಿವರಣೆಯ ಸಂಸ್ಕಾರಕ
********
ಹೊಸತನ 
ಹೊಸವರುಷದ ಆದಿಯಲಿ 
ಹೊಸತನದ ದಾರಿಯಲಿ 
ಹೊಸದೀವಟಿಗೆಯ ಹಿಡಿದು 
ಹೊಸಹುರುಪು ತುಂಬುವ ಹೊಸತನ 

ಹೊಸದಾದ ನವದಿನದ 
ಶುಭಾರಂಭದ ಸಮಯದಲಿ 
ಕಾತುರದ ನಭಗಳಾಚೆಯ 
ನಕ್ಷತ್ರಗಳ ಬೆಳಕಿನ ಕನಸಲಿ ಹೊಸತನ 

ಹೊಸರಾಗದ ಹೊಸಸ್ನೇಹದ 
ಕೆಳೆಯರ ಕೂಟದಲಿ 
ಹೊಸತನ ಬರುವ ನಿಮಿಷಗಳ 
ಎಣಿಸುತ ಶುಭಾಷಯಗಳ ಸಲ್ಲಿಕೆಯಲಿ ಹೊಸತನ 

ಹೊಸದೆಂಬುದು ಆರಂಭವಾಗದೆ 
ಅದು ನಿರಂತರ ದಿನ, ದಿನಪನ 
ಆಗಮನದಲ್ಲೂ ಹೊಸಹುರುಪು 
ತುಂಬುತಲಿ ಮಾಂಗಲ್ಯದಿನವಾಗಲಿ ಹೊಸತನ

ಕರ್ತೃ:
ಲಕ್ಷ್ಮೀಶ ಡಿ ಜಿ (ಡಿ ಜಿ ಎಲ್)
9844237322
ಜೈನಬಿಯ ಖಾಸಗಿ ವಿದ್ಯಾಸಂಸ್ಥೆ ಹೊಳವನಹಳ್ಳಿ , 
ಕೊರಟಗೆರೆ ಮಧುಗಿರಿ ಶೈಕ್ಷಣಿಕ (ಜಿ) 
ಕೊರಟಗೆರೆ (ತಾ) ತುಮಕೂರು (ಜಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ