ಪುಟಗಳು

06 ಅಕ್ಟೋಬರ್ 2015

೧೭) ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಕ೧)

ಜನಪದ ನುಡಿಗಟ್ಟುಗಳ ಕೋಶ: ನುಡಿಗಟ್ಟುಗಳ ವಿಶ್ವಕೋಶ (ಕ೧)
೪೮೦. ಕಕಮಕ ಹಿಡಿ = ತಬ್ಬಿಬ್ಬಾಗು, ಕಂಗೆಡು
ಪ್ರ : ಕವಲು ಹಾದಿಯಲ್ಲಿ ನಿಂತು ಕಕಮಕ ಹಿಡಿದಂತಾಯ್ತು
೪೮೧. ಕಕ್ಕಟ್ಟೆ ಕಾರ ಇಕ್ಕಟ್ಟೆ ಇಸವಾಗು = ತಿನ್ನಲು ಅಸಾಧ್ಯವಾಗು
(ಕಕ್ಕಟ್ಟೆ < ಕರ + ಕಟು = ಹೆಚ್ಚು ಕಟುವಾದ ; ಇಕ್ಕಟ್ಟೆ < ಇರ್ + ಕಟ್ಟು = ಎರಡು ಪಟ್ಟು; ಇಸ < ವಿಷ))
ಪ್ರ : ಕಕ್ಕಟ್ಟೆ ಕಾರ ಇಕ್ಕಟ್ಟೆ ಇಸ – ಉಣ್ಣೋದು ಹೆಂಗೆ ಈ ಎಸರಿನಲ್ಲಿ?
೪೮೨. ಕಕ್ಕರ ಕಾದಂತೆ ಕಾಯು = ಒಂದೇ ಸಮನೆ ಮೈಯೆಲ್ಲ ಕಣ್ಣಾಗಿ ನೋಡುತ್ತಿರು, ಕಣ್ಣು ಮಿಟುಕಿಸದೆ ಕಾಯುತ್ತಿರು.
(ಕರ್ಕರ = ಕಕ್ಕರ < ಕೊಕ್ಕರೆ?) ಕುರ್ಕುರ (ನಾಯಿ) ದಿಂದ ಕಕ್ಕರ ಶಬ್ದ ಮೂಡಿರಬಹುದಾದ ಸಾಧ್ಯತೆಯಿದ್ದರೂ ಕಕ್ಕರ (< ಕರ್ಕರ) ಒಂದು ಪಕ್ಷಿ ವಿಶೇಷ ಎಂಬುದನ್ನು ಕನಕದಾಸರು ತಮ್ಮ ಮೋಹನತರಂಗಿಣಿಯಲ್ಲಿ ದಾಖಲಿಸಿದ್ದಾರೆ – “ಹಲುಬುವ ಗೌಜು ಕರ್ಕರ ಕರ್ಪರಸೆಟ್ಟಿ ‘ಚೆಲುವ ಪೆರ್ಬೆಳವ ಕುಕ್ಕುಟಿಗ’ ಕಲುಕುಟುಕಾದಿ ತೋಟದ ಪಕ್ಷಿಗಳ ಕೊರ’ ಲುಲುಹಾದುದಾ ತಪೋವನದಿ” ಆದ್ದರಿಂದ ಮೀನಿಗೆ ಕಾಯುವ ಕೊಕ್ಕರೆಯ ಚಿತ್ರ ಬರುತ್ತದೆ.
ಪ್ರ : ಮನೆ ಬಾಗಿಲಲ್ಲಿ ಕಕ್ಕರೆ ಕಾದಂತೆ ಕಾದು ನಿಂತುಬಿಟ್ಟ, ಅತ್ತಿತ್ತ ಅಡ್ಡಾಡಲಿಲ್ಲ.
೪೮೩. ಕಕ್ಕರನಂತೊಕ್ಕರಿಸು = ನಾಯಿಯಂತೆ ಬೆನ್ನು ಬೀಳು
(ಕಕ್ಕರ < ಕುಕ್ಕರ < ಕುರ್ಕುರ = ನಾಯಿ) ಬೆನ್ನು ಬಿದ್ದ ನಾಯನ್ನು ಬೇಡವೆಂದು ಹಿಂದಕ್ಕೆ ಅಟ್ಟಿದಷ್ಟೂ ಬೆನ್ನು ಬೀಳುವುದು ಜಾಸ್ತಿ. ಜೊತೆಯಲ್ಲಿ ಬರುವಂತೆ ಕರೆದಷ್ಟೂ ಅದು ಹಿಂದಕ್ಕೆ ಓಡುವುದು ಜಾಸ್ತಿ – ನೆನಪಿನ ಹಾಗೆ.
ಪ್ರ : ಇವನೊಬ್ಬ ನನಗೆ ಕಕ್ಕರನಂತೊಕ್ಕರಿಸಿದ, ಬಾ ಅಂದ್ಕಡೆ ಬರಲ್ಲ, ಬೇಡ ಅಂದ್ಕಡೆ ಬರದೆ ಇರಲ್ಲ.
೪೮೪. ಕಕ್ಕರುಪಕ್ಕರಾಗಿರು = ಕುರೂಪಿಯಾಗಿರು, ನಾಜೂಕಿಲ್ಲದಿರು
(ಕಕ್ಕರುಪಕ್ಕರು < ಕಂಕರುಪಂಕರು = ತಂಟರು ಪಂಟರು)
ಪ್ರ : ಕಕ್ಕರು ಪಕ್ಕರಾಗಿದ್ರೂ ಕರಾರುವಾಕ್ಕಾಗಿ ನಡೆದುಕೊಳ್ಳೋ ಮನುಷ್ಯ ಅವನು
೪೮೫. ಕಕ್ಕಲಾತಿ ಕಟ್ಟಿಕೊಳ್ಳು = ಕೆಟ್ಟ ಸ್ವಭಾವದವಳನ್ನು ಮದುವೆಯಾಗು
(ಕಕ್ಕಲಾತಿ < ಕಕ್ಕುಲತೆ = ದುರಾಸೆ, ಲೋಭ)
ಪ್ರ : ಕಕ್ಕಲಾತಿ ಕಟ್ಕೊಂಡು ಪಡಬಾರದ ಹಿಂದೆ ಪಡೆಬೇಕಾಗಿದೆ.
೪೮೬. ಕಕ್ಕಿಸು = ಬಲಾತ್ಕಾರವಾಗಿ ವಸೂಲ್ ಮಾಡು
(ಕಕ್ಕಿಸು = ವಾಂತಿ ಮಾಡಿಸು)
ಪ್ರ : ನಿಂತ ಹೆಜ್ಜೇಲಿ ಕಕ್ಕಸಿದೆ, ನಾನು ಯಾರು ಕಾಣೆ ನೀನು
೪೮೭. ಕಕುಜಗಿರಿ ಭಕ್ತನಾಗು = ದುರ್ವ್ಯಸನಗಳ ದಾಸನಾಗು
(ಕಕುಜಗಿರಿ < ಕಕುದ್‌ಗಿರಿ = ಶಿವಗಂಗೆ ಬೆಟ್ಟ ) ಬೆಂಗಳೂರು ತುಮಕೂರು ರಸ್ತೆಯ ಸೋಮಪುರ (ಡಾಬಸ್‌ಪೇಟೆ) ಪಕ್ಕದಲ್ಲಿ ಎದ್ದು ಕಾಣುವ ಶಿವಗಂಗೆ ಬೆಟ್ಟ ಮೂಡಲ ದಿಕ್ಕಿಗೆ ಬಸವ ಮಲಗಿದಂತೆ ಕಾಣುತ್ತದೆ, ತನ್ನ ಮುಸುಡಿಯನ್ನು ಹಿಣಲಿನ (ಭುಜದ) ಕಡೆಗೆ ತಿರುಗಿಸಿಕೊಂಡು, ಹಿಣಲಿಗೆ ಸಂಸ್ಕೃತದಲ್ಲಿ ಕಕುದ್ ಎಂಬ ಶಬ್ದವಿದೆ. ಆದ್ದರಿಂದ ಅದಕ್ಕೆ ಕಕುದ್‌ಗಿರಿ ಎಂಬ ಹೆಸರುಂಟು. ಅದು ಲಿಂಗಾಯಿತ ಧರ್ಮದ ಕೇಂದ್ರಗಳಲ್ಲೊಂದು. ಹನ್ನೆರಡನೆಯ ಶತಮಾನದಲ್ಲಿ ಪಂಚಾಚಾರ್ಯರಲ್ಲಿ ಒಬ್ಬರಾದ ರೇವಣಸಿದ್ಧೇಶ್ವರ, ಅವರ ಮಗ ರುದ್ರಮುನಿ, ಸೊನ್ನಲಿಗೆಯ ಸಿದ್ಧರಾಮೇಶ್ವರ ಅಲ್ಲಿ ತಂಗಿ ವೀರಶೈವ ಧರ್ಮ ಪ್ರಚಾರ ಮಾಡಿದರೆಂದು ಪ್ರತೀತಿ. ಬೆಟ್ಟದಲ್ಲಿರುವ ‘ಮೇಗಳಗವಿ ಮಠ’ ಅವರ ವಾಸ್ತವ್ಯದ ತಾಣ ಅಂಥ ಕುಕುದ್‌ಗಿರಿ ಜನರ ಬಾಯಲ್ಲಿ ಕಕುಜಗಿರಿ ಆಗಿದೆ. ದಕಾರಕ್ಕೆ ಜಕಾರ ಬರುವುದು ಕನ್ನಡದಲ್ಲಿ ಸರ್ವೇ ಸಾಮಾನ್ಯ ಉದಾಹರಣೆಗೆ ಗೆದ್ದಲು > ಗೆಜ್ಜಲು, ಇದ್ದಲು > ಇಜ್ಜಲು ಇತ್ಯಾದಿ. ಕುಮಾರವ್ಯಾಸ ಭಾರತ, ಜೈಮಿನಿ ಭಾರತಗಳ ವಾಚನ ಹಳ್ಳಿಗಾಡಿನಲ್ಲಿ ಜರುಗುತ್ತಿತ್ತು. ಜೊತೆಗೆ ಯಕ್ಷಗಾನ ಬಯಲಾಟಗಳ ಪ್ರಾಚುರ್ಯವೂ ಇತ್ತು. ಆ ಕ್ಷೇತ್ರದಲ್ಲಿ ಪಾಂಡಿತ್ಯಗಳಿಸಿಕೊಂಡವರು ಕುಕುದ್‌ಗಿರಿಯನ್ನು ಕುಕುಜಗಿರಿ ಮಾಡಿ ಅದಕ್ಕೆ ವಿಶೇಷಾರ್ಥ ಸಂದಾಯವಾಗುವಂತೆ ಮಾಡಿದ್ದಾರೆ. ಬಹುಶಃ ಯಕ್ಷಗಾನ ಬಯಲಾಟಗಳನ್ನು ಆಡುತ್ತಾ, ಆಡಿಸುತ್ತಾ ಊರೂರು ತಿರುಗುವ ಭಾಗವತರು, ಪಾತ್ರಧಾರಿಗಳು ನುಡಿಗಟ್ಟು ಇದು. ಇಲ್ಲಿ ಕ ಎಂದರೆ ಕಡಿತ (ಮಾಂಸ) ಕು ಎಂದರೆ ಕುಡಿತ (ಮದ್ಯ) ಜ ಎಂದರೆ ಜಡಿತ (ಸಂಭೋಗ). ಆದ್ದರಿಂದ ಕುಕುಜಗಿರಿ ಭಕ್ತ ಎಂದರೆ ಶಿವಭಕ್ತ ಎಂದು ತಿಳಿಯಬೇಡಿ, ಕಡಿತ ಕುಡಿತ ಜಡಿತಗಳ ಭಕ್ತ ಎಂಬ ವ್ಯಂಗ್ಯ ಇಲ್ಲಿ ಎದ್ದು ಕಾಣುತ್ತದೆ.
ಪ್ರ : ಅವನು ಕುಕುಜಗಿರಿ ಭಕ್ತನಾಗಿ ಎಷ್ಟೋ ತಿಂಗಳಾದವು, ನಿನಗೆ ಗೊತ್ತಿಲ್ಲ
೪೮೮. ಕಗ್ಗ ಹೇಳು = ಅನಗತ್ಯ ಪುರಾಣ ಹೇಲು, ಅಪ್ರಸ್ತುತವಾದುದನ್ನು ಹೇಲು.
ಪ್ರ : ನೀನು ಕಗ್ಗ ಹೇಳಬೇಡ, ಇಲ್ಲಿ ಕೇಳೋಕೆ ಯಾರೂ ತಯಾರಿಲ್ಲ.
೪೮೯. ಕಗ್ಗಲಿ ಮರದಂತಿರು = ಗುಟ್ಟಿಮುಟ್ಟಾಗಿರು, ಚಟ್ಟುಗಲ್ಲಿನಂತಿರು
(ಕಗ್ಗಲಿ = ಒಂದು ವೃಕ್ಷವಿಶೇಷ)
ಪ್ರ : ಗಾದೆ – ಬಾಳೆ ಕಡಿಯಾಕೆ ನನ್ನ ಗಂಡ ಗೂಳಿಯಂಗೆ ಕಗ್ಗಲಿ ಕಡಿಯಾಕೆ ನನ್ನ ಗಂಡ ತಬ್ಬಲಿಯಂಗೆ
೪೯೦. ಕಚ್ಚೆ ಕಟ್ಟದಿರು = ಮಾತು ಕೇಳದಿರು, ಲೆಕ್ಕಕ್ಕಿಡದಿರು
(ಕಚ್ಚೆ = ಲಂಗೋಟಿ)
ಪ್ರ : ಮಗ ಕಚ್ಚೆ ಕಟ್ಟದೆ ಇದ್ದಾಗ, ಅಪ್ಪ ಮನೆಯಿಂದ ಒದ್ದು ಓಡಿಸಿದ.
೪೯೧. ಕಚ್ಚೇರವೆ ಕಟ್ಟೋಕೆ ಬರದಿರು = ಏನೂ ತಿಳಿಯದಿರು
(ಕಚ್ಚೇರವೆ < ಕಚ್ಚೆ + ಅರಿವೆ = ಲಂಗೋಟಿ ಬಟ್ಟೆ)
ಪ್ರ : ಕಟ್ಟೇರವೆ ಕಟ್ಟೋಕೆ ಬರದೋರೆಲ್ಲ ಯಜಮಾನಿಕೆ ಮಾಡಿದರೆ ಅಧ್ವಾನ ಆಗದೆ ಇನ್ನೇನಾಗ್ತದೆ?
೪೯೨. ಕಟೆಕಟೆ ಮಾಡು = ಸತಾಯಿಸು, ತೊಂದರೆ ಮಾಡು
(ಕಟಕಟೆ = ನ್ಯಾಯಾಸ್ಥಾನದಲ್ಲಿ ಅಪರಾಧಿ ನಿಲ್ಲುವ ಸ್ಥಳ)
ಪ್ರ : ಹಿಂಗೆ ಕಟಕಟೆ ಮಾಡಿದ್ರೆ, ಕುಟುಂಬ ಹೆಪ್ಪಾಗಿರೋಕೆ ಸಾಧ್ಯವ?
೪೯೩. ಕಟಬಾಯಿ ಕಿಸಿದು ಉಗಿ = ಸಿಕ್ಕಾಪಟ್ಟೆ ಬಯ್ಯು, ಅವಮಾನಿಸು
(ಕಟಬಾಯಿ = ಬಾಯಿಯ ಕೊನೆ, ದವಡೆ ; ಕಿಸಿ = ಅಗಲಿಸು)
ಪ್ರ : ಕಟಬಾಯಿ ಕಿಸಿದು ಉಗಿದು ಬರಾಕಿಲ್ವ, ಆ ಬಾಂಚೋತ್‌ಗೆ
೪೯೪. ಕಟಾವು ಮಾಡಿಸು = ಕ್ಷೌರ ಮಾಡಿಸು
(ಕಟಾವು = ಕೊಯ್ಲು)
ಪ್ರ : ತಿಂಗಳು ಬೆಳೆ ಕಟಾವು ಮಾಡಿಸೋಕೆ ಹೋಗಿದ್ದೆ.
೪೯೫. ಕಟ್ಟರೆಯಾಗು = ಸಿಕ್ಕಾಪಟ್ಟೆ = ಸಿಕ್ಕಾಪಟ್ಟೆ ತಿಂದು ಅಜೀರ್ಣವಾಗು, ಕಮುರುದೇಗು ಬರು
(ಕಟ್ಟರೆ < ಕಟ್ಟರವೆ < ಕಡು + ಅರವೆ = ಹೆಚ್ಚು ಅಜೀರ್ಣ; ಅರವೆ = ಅಜೀರ್ಣ)
ಪ್ರ : ಅವನಿಗೇನು ಕಟ್ಟರೆಯಾಗುವಷ್ಟು ತಿಂದು ಮೆಟ್ಟರೆ ಹಿಸಗೋಕೆ ಬರ್ತಾನೆ.
೪೯೬. ಕಟ್ಟಳೇಲುಣ್ಣು = ಗಟ್ಟಿ ಮಜ್ಜಿಗೆಯಲ್ಲಿ ಅನ್ನ ಉಣ್ಣು; ಹಾಳತವಾಗಿ ಉಣ್ಣು
(ಕಟ್ಟಳೆ < ಕಡು + ಅಳೆ = ಮಂದನ ಮಜ್ಜಿಗೆ ; ಅಳೆ = ಮಜ್ಜಿಗೆ (ಮಜ್ಜಿಗೆಯಿಂದ ಮಾಡುವ ಸಾರಿಗೆ ಹಸಾಳೆ (<ಹಸಿ+ಅಳೆ) ಎಂದು ಹೆಸರು)
ಪ್ರ : ಕಟ್ಟಳೇಲುಣ್ಣು ಅಂದ್ರೆ, ನಾನು ಯಾವ ಕಟ್ಟಳೆಗಿಟ್ಟಳೆ ಪಾಲಿಸೋನಲ್ಲ ಅಂದ.
೪೯೭. ಕಟ್ಟಿಕೊಂಡು ಹೇಳು = ಹುಟ್ಟು ಹಾಕಿಕೊಂಡು ಹೇಳು, ಸೃಷ್ಟಿಸಿಕೊಂಡು ಹೇಳು
(ಕಟ್ಟು = ಸೃಷ್ಟಿಸು, ಕಲ್ಪಿಸು)
ಪ್ರ : ನಡೆದದ್ದನ್ನು ಹೇಳೋದು ಬಿಟ್ಟು, ನೂರೆಂಟು ಕಟ್ಕೊಂಡು ಹೇಳಿದ್ರೆ, ಯಾರು ನಂಬ್ತಾರೆ?
೪೯೮. ಕಟ್ಟುಪಾಸದಲ್ಲಿರು = ಉಗ್ರ ಉಪವಾಸದಲ್ಲಿರು, ಅನ್ನಪಾನಾದಿಗಳನ್ನು ತ್ಯಜಿಸಿರು
(ಕಟ್ಟುಪಾಸ < ಕಡು + ಉಪವಾಸ ; ಕಡು = ಉಗ್ರ, ತೀಕ್ಷ್ಣ, ಹೆಚ್ಚು)
ಪ್ರ :ರಾಜಕಾರಣಿಗಳ ಕಳ್ಳುಪಾಸಕ್ಕೂ, ನೇಮನಿಷ್ಠರ ಕಟ್ಟುಪಾಸಕ್ಕೂ ವ್ಯತ್ಯಾಸ ಇಲ್ಲವಾ?
೪೯೯. ಕಟ್ಟು ಹರಿದ ಪಂಜಾಗು = ಬಾಳು ಚುಪ್ಪಾನುಚೂರಾಗು, ಹಿಡಿತ ತಪ್ಪಿ ಹಾಳಾಗು
ಮಾರುದ್ಧದ ಕೋಲಿಗೆ ಚಿಂದಿ ಬಟ್ಟೆಯನ್ನು ಸುತ್ತಿ, ಅಚು ಕಳಚಿಕೊಳ್ಳದ ಹಾಗೆ ಸುತ್ತಲೂ ಹುರಿಯಿಂದ ಬಿಗಿದು, ಅದರ ನೆತ್ತಿಗೆ, ಎಣ್ಣೆ ಬಿಟ್ಟು, ಹೊತ್ತಿಸಿ, ಬೆಳಕನ್ನು ಮೂಡಿಸುವ ಸಾಧನಕ್ಕೆ ಪಂಜು ಎಂದು ಹೆಸರು. ಹಿಂದೆ ಮದುವೆ ಮುಂಜಿಗಳಲ್ಲಿ ಪಂದು ಹಚ್ಚಿ ಹಿಡಿಯುವ ಕಾಯಕ ಅಗಸರದಾಗಿತ್ತು. ಇಂದು ಪೆಟ್ರೋಮ್ಯಾಕ್ಸ್ ವಿದ್ಯುದ್ವೀಪಗಳ ಆಗಮನದಿಂದ ಪಂಜುಗಳ ಸ್ಥಾನ ಗೌಣವಾಗಿದ್ದರೂ ಶಾಸ್ತ್ರಕ್ಕೆ ಪಂಜು ಇರಲೇಬೇಕು. ಪಂಜು ಶಬ್ದಕ್ಕೆ ಪರ್ಯಾಯವಾಗಿ ಪತ್ತು ಎಂಬ ಶಬ್ದವೂ ಬಳಕೆಯಲ್ಲಿದೆ.
ಪ್ರ : ಕುಟುಂಬ ಕಟ್ಟು ಹಾಕಿದ ಪಂಜಿನಂತೆ ಬೆಳಕು ನೀಡಬೇಕೇ ವಿನಾ, ಕಟ್ಟು ಹರಿದ ಪಂಜಿನಂತೆ ದಹನಕಾರಿ ದಮನಕಾರಿ ಆಗಬಾರದು.
೫೦೦. ಕಡಜದ ಕಡಿತದಂತಿರು = ಹೆಚ್ಚು ಉರಿಯುತ್ತಿರು, ಚುರುಚುರು ಎನ್ನು
(ಕಡಜ = ಕೀಟವಿಶೇಷ)
ಪ್ರ : ಕಡಜನ ಕಡಿತ, ಬಿದಿರು ಮುಳ್ಳಿನ ತುಳಿತ ಬಾಯ್ಬಾಯಿ ಬಡಿಸುಕೊಳ್ಳುವಂತೆ ಮಾಡುತ್ತವೆ.
೫೦೧. ಕಡತ ಬಿಚ್ಚು = ವಿವರಕ್ಕೆ ಹೋಗು, ಹಳೆಯ ಪ್ರತಾಪವನ್ನು ತೋಡಿಕೊಳ್ಳು
ಕಾಗದ ಬರುವುದಕ್ಕೆ ಮೊದಲು ಗ್ರಂಥಗಳನ್ನು ಓಲೆಯ ಗರಿಯ ಮೇಲೆ ಕಂಠದಿಂದ ಬರೆದಿಡುತ್ತಿದ್ದರು. ಆದರೆ ದೈನಂದಿನ ಲೆಕ್ಕ ಪತ್ರಗಳಿಗೆ ಕಡತವನ್ನು ಬಳಸುತ್ತಿದ್ದರು. ಬಟ್ಟೆಗೆ ಹುಣಿಸೆ ಬೀಜದ ‘ಸರಿ’ ಬಳಿದು ಗಟ್ಟಿಗೊಳಿಸಿ ಅದಕ್ಕೆ ಕಪ್ಪು ಬಣ್ಣ ಬಳಿದು, ಬಳಪದ ಕಲ್ಲಿನಿಂದ ಶ್ಯಾನುಭೋಗರು ಅದರ ಮೇಲೆ ಲೆಕ್ಕ ಬರೆಯುತ್ತಿದ್ದರು. ಅದನ್ನು ಮಡಿಕೆ ಮಡಿಕೆಯಾಗಿ ಮಡಿಚಿ ಇಡುತ್ತಿದ್ದರು. ಮತ್ತೆ ಬೇಕಾದಾಗ ಆಂಜನೇಯನ ಬಾಲದಂತಿರುವ ಅದನ್ನು ಬಿಚ್ಚಿ ವಿವರಗಳನ್ನು ಹೇಳುತ್ತಿದ್ದರು. ಅದಕ್ಕೆ ಕಡತ ಎಂದು ಹೆಸರು.
ಪ್ರ: ನೀನು ಕಡತ ಬಿಚ್ಚಿದರೆ, ಇಲ್ಲಿ ಯಾರಿಗೂ ತರಡು ನಡುಗಲ್ಲ, ಮೊದಲದನ್ನು ತಿಳ್ಕೋ.
೫೦೨. ಕಡತಿ ಕ್ಯಾಕರಿಸುತ್ತಿರು ಹುಂಜ ಜೂಗರಿಸುತ್ತಿರು = ಸಮಾನ ವಯಸ್ಸಿನ ಜೋಡಿಯಾಗದಿರು, ಕನ್ನೆ ಹುಡುಗಿಗೆ ಕನ್ನಹುಡುಗ ಸಿಕ್ಕದೆ ಕಾಯಿಲೆ ಮುದುಕ ಸಿಗು
(ಕಡತಿ = ಹ್ಯಾಟೆ < ಹೇಂಟೆ = ಮೊದಲ ಬಾರಿಗೆ ಬೆದೆಗೊಂಡು ಹುಂಜ ಮೆಟ್ಟುವುದಕ್ಕಾಗಿ ಕಾತರಿಸುವ ಪಡ್ಡೆಕೋಳಿ; ಕ್ಯಾಕರಿಸು < ಕೇಕರಿಸು = ಲೊಕ್ ಲೊಕ್ ಎಂದು ಕಾಮತೃಷೆಯಿಂದ ಹುಂಜಕ್ಕೆ ಕರೆಕೊಡುವ ಧ್ವನಿ ಮಾಡು ಜೂಗರಿಸು = ಕಾಯಿಲೆ ಕಸಾಲೆಯಿಂದ ಲವಲವಿಕೆಯಿಲ್ಲದೆ ತೂಗಡಿಸು)
ಪ್ರ : ಕಡತಿ ಕ್ಯಾಕರಿಸ್ತದೆ, ಹುಂಜ ಜೂಗರಿಸ್ತದೆ, ಏನು ಮಾಡೋದು ಎಂದು ನಕ್ಕ, ಯುವಕ.
೫೦೩. ಕಡಬನಂತಿರು = ತುಂಬಾ ಗಟ್ಟಿಮುಟ್ಟಾಗಿರು, ಮರದ ತುಂಡಿನಂತಿರು
(ಕಡಬ < ಕಡಬೆ = ಗಂಡು ಕುದುರೆ)
ಪ್ರ : ಕಡಬನಂಗೇನೋ ಅವನೇ, ಕೈಲೇನೂ ಕಿಸಿಯಲ್ಲ.
೫೦೪. ಕಡಸೇರೆ ಬಂದು ಕಡೆದು ಹೋಗು = ಸಂಜೆ ಬಂದು ಇರದೆ ಹೊರಟು ಹೋಗು
(ಕಡಸೇರೆ < ಕಡಶೇರೆ = ಸಂಜೆ ; ಕಡೆ = ಹೊರಡು, ನಿಲ್ಲದಿರು)
ಪ್ರ : ತೀರ ಕಡಸೇರೆ ಬಂದೋನು, ಇರು ಅಂದ್ರೂ ಕೇಳದೆ, ಹಂಗೆ ಕಡೆದು ಹೋಗಿಬಿಟ್ಟ.
೫೦೫. ಕಡಾಣಿಯಾಗಿರು = ಬೀಳದಂತೆ ಹಿಡಿದಿರು, ಕಾಪಾಡುವ ಕೆಲಸ ಮಾಡು
(ಕಡಾಣಿ = ಗಾಡಿಯ ಚಕ್ರ ಬೀಳದಂತೆ, ಅಚ್ಚಿನ ತುದಿಯ ರಂದ್ರಕ್ಕೆ ಹಾಕಿರುವ ಕಬ್ಬಿಣದ ಸಲಾಖೆ)
ಪ್ರ : ನಿನಗೆ ನಾನು ಕಟ್ಟಾಣಿಯಾಗದಿರಬಹುದು, ಆದರೆ ನೀನು ಕೆಳಗೆ ಬಿದ್ದು ಹಾಳಾಗದಂತೆ ಕಾಪಾಡುವ ಕಡಾಣಿಯಂತೂ ಆಗಿದ್ದೇನೆ ಅನ್ನೋದು ಊರಿಗೆಲ್ಲ ಗೊತ್ತು
೫೦೬. ಕಡಾಸು ಹೆಗಲ ಮೇಲೆ ಹಾಕು = ಹೊರಡು, ಊರಿಂದ ಊರಿಗೆ ಅಲೆ.
(ಕಡಾಸು < ಕಡವಸು < ಕಡವೆ + ಹಾಸು = ಜಿಂಕೆ ಚರ್ಮ)
ಪ್ರ : ಗಾದೆ – ಎದ್ದ ಜೋಗಿ ಅಂದ್ರೆ ಕಡಾಸು ಹೆಗಲ ಮೇಲೆ
೫೦೭. ಕಡಿತ ಕಡಿ = ಕೆಲಸ ಮಾಡು, ಶ್ರಮಿಸು
(ಕಡಿತ = ಕತ್ತರಿಸುವಿಕೆ, ಗುದ್ದಲಿಯಿಂದ ಅಗೆಯುವುದು, ಕಡಿ = ಕತ್ತರಿಸು)
ಪ್ರ : ನೀನು ಕಡಿತ ಕಡಿದಿರೋದು ಅಷ್ಟ್ರಲ್ಲೇ ಇದೆ, ಏನೂ ಕೊಚ್ಚಿಕೊಳ್ತಿ ಸುಮ್ನಿರು
೫೦೮. ಕಡಿದಾದರೂ ಕಷ್ಟವಾಗು ಬಳಿದಾದರೂ ಕಷ್ಟವಾಗು = ಅತಿರೇಕ ಅನಾನುಕೂಲವಾಗು.
ಹೊಲ ಉಳಲು ನೇಗಿಲು ಕಟ್ಟುವ ರೈತ ನೇಗಿಲಿನ ಈಚವನ್ನು ಎತ್ತುಗಳ ಹೆಗಲ ಮೇಲಿರುವ ನೊಗಕ್ಕೆ ಉಳೋ ಹಗ್ಗದಲ್ಲಿರುವ ಕೊರಡಿಗೆಯ ಸಹಾಯದಿಂದ ಬಿಗಿಯಾಗಿ ಕಟ್ಟುತ್ತಾನೆ. ಹಾಗೆ ಕಟ್ಟುವಾಗ ಈಚದ ತುದಿಗೆ ಕಟ್ಟಿದರೆ ನೇಗಿಲಿನ ಗುಳದ ಭಾಗ ನೆಲಕ್ಕೆ ಮುಖ ಮಾಡಿ, ನೇಗಿಲನ ಅಂಡು ಮತ್ತು ಮೇಣಿಯ ಭಾಗ ಮೇಲಕ್ಕೇಳುವುದರಿಂದ ಉಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಡಿದಾಯ್ತು ಎನ್ನುತ್ತಾರೆ. ಆಗ ರೈತ ಈಚವನ್ನು ನೊಗದ ಮೇಲಕ್ಕೆ ಇನ್ನೂ ಹೆಚ್ಚಿಗೆ ಸರಿಸಿ ಕಟ್ಟಿದರೆ ನೇಗಿಲಿನ ಅಂಡಿನ ಭಾಗ ನೆಲಕ್ಕೆ ಕೂತು, ಗುಳದ ಭಾಗ ನೆಲಕ್ಕೆ ತಾಕದೆ ಮೇಲೇಳುವುದರಿಂದ ಉಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಬಳಿದಾಯ್ತು ಎನ್ನುತ್ತಾರೆ. ಆದ್ದರಿಂದ ಕಡಿದು ಮತ್ತು ಬಳಿದು ಎಂಬ ಶಬ್ದಗಳು ಬೇಸಾಯದ ಹಿನ್ನೆಲೆಯಲ್ಲಿ ಮೂಡಿರುವಂಥವು. ಯಾವುದೇ ಅತಿರೇಕ ಅನಾನುಕೂಲ. ಸಮತೂಕ ಅನುಕೂಲ ಎಂಬುದನ್ನು ಧ್ವನಿಸುತ್ತದೆ.
ಪ್ರ : ನೇಗಿಲನ್ನು ಸರಿಯಾಗಿ ಕಟ್ಟಬೇಕು, ಕಡಿದಾದರೂ ಉಳೋಕಾಗಲ್ಲ ಬಳಿದಾದರೂ ಉಳೋಕಾಗಲ್ಲ ಎಂಬ ನಿಗಾ ಇಟ್ಕೊಂಡು
೫೧೦. ಕಡಿದು ಕಟ್ಟೆ ಹಾಕು = ಶ್ರಮಿಸು, ಕೆಲಸ ಮಾಡು
ಪ್ರ : ನೀನು ಹೊತ್ತಾರೆಯಿಂದ ಕಡಿದು ಕಟ್ಟೆ ಹಾಕಿರೋದು ಎಷ್ಟು ಅನ್ನೋದು ಕಾಣ್ತಾ ಇದೆಯಲ್ಲ. ಹೆಚ್ಚಿಗೆ ಕೊಚ್ಚಿಕೊಳ್ಳಬೇಕಿಲ್ಲ.
೫೧೧. ಕಡಿದು ದಬ್ಬಾಕು = ಕೆಲಸ ಮಾಡು, ದುಡಿ
(ದಬ್ಬಾಕು < ದಬ್ಬ + ಹಾಕು = ಬೋರಲು ಹಾಕು, ಮಗುಚಿಹಾಕು)
ಪ್ರ : ನೀನು ಕಡಿದು ದಬ್ಬಾಕಿರೋದ್ಕೆ ಈ ತಿಪ್ಪೇನೆ ಸಾಕ್ಷಿ
೫೧೨. ಕಡಿದು ಯಾರಾಕು = ಶ್ರಮಿಸು, ದುಡಿ
(ಯಾರಾಕು < ಯಾರು + ಹಾಕು < ಏರು + ಹಾಕು = ರಾಶಿ ಹಾಕು.)
ಪ್ರ : ನಿನ್ನೆಯಿಂದ ನೀನು ಕಡಿದು ಯಾರಾಕಿರೋದು ಎಷ್ಟು ಅಂತ ತನ್ನಷ್ಟಕ್ಕೆ ತಾನೇ ಗೊತ್ತಾಗ್ತದೆ.
೫೧೩. ಕಡ್ಡಿ ಮುದಿದಂತೆ ಹೇಳು = ಖಂಡತುಂಡವಾಗಿ ಹೇಳು
ಪ್ರ : ಕಡ್ಡಿ ಮುರಿದಂತೆ ಹೇಳಿದೆ ಬಡ್ಡಿಹೈದನಿಗೆ, ನನ್ನ ಮಾತ್ನ ಕಿವಿಗೆ ಹಾಕಿಕೊಳ್ಳಲಿಲ್ಲ, ಈಗ ಅನುಭವಿಸಲಿ.
೫೧೪. ಕಡ್ಡಿ ಗುಡ್ಡ ಮಾಡು = ಸಣ್ಣದನ್ನು ದೊಡ್ಡದು ಮಾಡಿ ಹೇಳು
(ಗುಡ್ಡ = ಸಣ್ಯ ಬೆಟ್ಟ, ಮರಡಿ)
ಪ್ರ : ಕಡ್ಡೀನ ಗುಡ್ಡ ಮಾಡೋದ್ರಲ್ಲಿ ಇವನು ಎತ್ತಿದ ಕೈ.
೫೧೫. ಕಣ್ಕಟ್ಟು ಮಾಡು = ಜಾದೂ ಮಾಡು, ನೋಡಿ ಮಾಡು
ಪ್ರ : ಅದೇನು ಕಣ್ಕಟ್ಟು ಮಾಡಿದಳೋ, ಅವಳ ಬೆನ್ನಾಡಿ ಹೋದೋನು ಹಿಂದಿರುಗಲೇ ಇಲ್ಲ.
೫೧೬. ಕಣ್‌ಕಿಸುರಾಗು = ಅಸೂಯೆಯಾಗು
(ಕಿಸುರು = ಗೀಜು, ಮತ್ಸರ)
ಪ್ರ : ಅಣ್ಣ ಬಲಕಾಯಿಸಿದನಲ್ಲ ಅಂತ ತಮ್ಮನಿಗೆ ಕಣ್ ಕಿಸುರಾಯ್ತು
೫೧೭. ಕಣ್ ಮಿಣಕ್ ಎನ್ನು = ಅಧಿಕ ಶ್ರಮವಾಗು
ಪ್ರ : ಒಂದ್ಹೊತ್ತಿನ ಊಟ ಹುಟ್ಟಿಸಬೇಕಾದ್ರೆ ಬಡವರು ಕಣ್ಣು ಮಿಣಕ್ ಅಂತವೆ.
೫೧೮. ಕಣಕ್ಕಿಳಿ = ಶಕ್ತಿ ಪ್ರದರ್ಶನಕ್ಕಿಳಿ, ಮಾತು ಬಿಟ್ಟು ಕೃತಿಗಿಳಿ
(ಕಣ = ರಣರಂಗ, ಕುಸ್ತಿಯ ಅಖಾಡ)
ಪ್ರ: ಕಣಕ್ಕಿಳೀಲಿ, ಹೆಂಗೆ ಅಂಗಾತ ಮಾಡಬೇಕು ಅನ್ನೋದು ನನಗೆ ಗೊತ್ತು
೫೧೯. ಕಣ ಮಾಡು = ಬೆಳೆಯನ್ನು ಒಕ್ಕಣೆ ಮಾಡು
(ಕಣ = ಒಕ್ಕಣೆ ಮಾಡಲು ಭೂಮಿಯನ್ನು ಸಮತಟ್ಟಾಗಿ ಕೆತ್ತಿ, ಸಗಣಿ ಹಾಕಿ ಸಾರಿಸಿ, ಮಧ್ಯೆ ಮೇಟಿ ನೆಟ್ಟು ಸಿದ್ಧಮಾಡಿದ ವೃತ್ತಾಕಾರದ ಜಾಗ)
ಪ್ರ : ಕಣ ಮಾಡಿದ ಮೇಲೆ ಕಡೆಗಣದಲ್ಲಿ ಬಂದ ಭಿಕ್ಷುಕರಿಗೆ ಧಾನ್ಯ ಕೊಡೋದು ಲಾಗಾಯ್ತಿನಿಂದ ಬಂದ ಪದ್ಧತಿ.
೫೨೦. ಕಣ ಮುಯ್ಯಿ ಮಾಡು = ರವಕೆಯನ್ನು ಕಾಣಿಕೆಯಾಗಿ ಕೊಡು
(ಕಣ = ರವಕೆ; ಮುಯ್ಯಿ = ಕೊಟ್ಟವರಿಗೆ ಪ್ರತಿಯಾಗಿ ಕೊಡುವುದು) ಸಾಮಾನ್ಯವಾಗಿ ಹಳ್ಳಿಗಾಡಿನಲ್ಲಿ ಒಬ್ಬರ ಹೊಲದ ಕುಯ್ಲಿನ ಸಂದರ್ಭದಲ್ಲಿ ಬೇರೆಯ ಮನೆಯ ಆಳುಗಳು ಬಂದಿರುತ್ತಾರೆ. ಅವರಿಗೆ ಕೂಲಿ ಕೊಡುವುದಿಲ್ಲ. ಅವರನ್ನು ಮುಯ್ಯಾಳುಗಳು ಎಂದು ಕರೆಯುತ್ತಾರೆ. ಏಕೆಂದರೆ ಅವರ ಹೊಲದ ಕುಯ್ಲಿನ ಸಂದರ್ಭದಲ್ಲಿ ಇವರ ಆಳುಗಳು ಹೋಗೇ ತೀರಬೇಕು. ಕಡ್ಡಾಯವಾಗಿ. ಇದರ ಆಧಾರದ ಮೇಲೆ ಬೇರೆಯವರು ತಮ್ಮ ಮನೆಯ ಮದುವೆಯ ಸಂದರ್ಭದಲ್ಲಿ ಹೆಣ್ಣಿಗೋ ಗಂಡಿಗೋ ಕಾಣಿಕೆಯನ್ನು ಸಲ್ಲಿಸಿದರೆ, ಅವರ ಮನೆಯ ಮದುವೆಯಲ್ಲಿ ಇವರು ಕಾಣಿಕೆಯನ್ನು ಸಲ್ಲಿಸುವುದು ಕಡ್ಡಾಯ ಎಂಬ ಅರ್ಥದಲ್ಲಿ ಮುಯ್ಯಿ ಎಂಬ ಶಬ್ದ ಬಳಕೆಯಲ್ಲಿದೆ.
ಪ್ರ : ನಮ್ಮ ಮಗಳ ಮದುವೆಯಲ್ಲಿ ಅವರು ಕಣ ಮುಯ್ಯಿ ಮಾಡಿದ್ದರು. ಇವತ್ತು ಅವರ ಮನೆ ಮದುವೇಲಿ ನಾವು ಮುಯ್ಯಿ ಮಾಡದಿದ್ರೆ ತಪ್ಪಾಗ್ತದೆ.
೫೨೧. ಕಣ್ಣಲ್ಲಿ ಇಕ್ಕೊಂಡು ಸಾಕು = ಮುದ್ದಿನಿಂದ ಸಾಕು, ಪ್ರೀತಿಯಿಂದ ಸಾಕು
(ಇಕ್ಕೊಂಡು < ಇಕ್ಕಿಕೊಂಡು=ಇಟ್ಟುಕೊಂಡು) ಕಣ್ಣು ದೇಹದಲ್ಲಿ ತುಂಬ ಸೂಕ್ಷ್ಮವಾದ ಅಂಗ. ಅದನ್ನು ತುಂಬ ಜೋಪಾನವಾಗಿ ನೋಡಿಕೊಳ್ಳುತ್ತೇವೆ. ಧೂಳು ಕಸಕಡ್ಡಿ ಬೀಳದ ಹಾಗೆ, ಏಟು ತಾಕದೆ ಹಾಗೆ ಎಚ್ಚರ ವಹಿಸುತ್ತೇವೆ. ಅಷ್ಟೇ ಅಲ್ಲ ಅದು ಸೂಕ್ಷ್ಮವೆಂದೇ, ಪ್ರಕೃತಿ ಅದಕ್ಕೆ ರೆಪ್ಪೆಗಳನ್ನು ನೀಡಿದೆ, ಒಳಕ್ಕೆ ಧೂಳು ಬೀಳದಂತೆ ಮುಚ್ಚಿಕೊಳ್ಳಲಿ ಎಂದು ಆದ್ದರಿಂದ ಮಗುವನ್ನು ಕಣ್ಣೊಳಗೆ ಮುಚ್ಚಿಕೊಂಡು ಸಾಕಿದರು ಎಂದರೆ ಪ್ರೀತಿ ಮುತುವರ್ಜಿ ತನಗೆ ತಾನೇ ವ್ಯಕ್ತವಾಗುತ್ತದೆ. ಇದು ನಮ್ಮ ಅವಿದ್ಯಾವಂತ ಜನಪದರ ಸೃಜನಪ್ರತಿಭೆಯನ್ನು ಸಾಬೀತುಪಡಿಸುತ್ತದೆ.
ಪ್ರ : ಅವರು ನನ್ನನ್ನು ಕಣ್ಣಲ್ಲಿ ಇಕ್ಕೊಂಡು ಸಾಕಿದ್ದಾರೆ ಅಂತ ಊರಿಗೆ ಊರೇ ಹೇಳ್ತದೆ. ಅಂಥವರಿಗೆ ನಾನು ಎರಡು ಬಗೆದರೆ, ದೇವರು ನನಗೆ ಅನ್ನ ಕೊಡ್ತಾನ?
೫೨೨. ಕಣ್ಣಲ್ಲಿ ಕಣ್ಣಿಟ್ಟು ನೋಡು = ತುಂಬ ಎಚ್ಚರಿಕೆಯಿಂದ, ಏಕಾಗ್ರತೆಯಿಂದ ನೋಡು
ಪ್ರ : ಕರಡನ್ನು ತುಂಬಾ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ, ಮುದ್ರಣವಾದ ಮೇಲೆ ಒಂದೆರಡು ತಪ್ಪುಗಳು ಉಳಿದುಕೊಂಡಿರುವುದು ಕಂಡು ಬರುತ್ತದೆ.
೫೨೩. ಕಣ್ಣಲ್ಲಿ ಕಂಡುಗ ಸುರಿಸು = ಗೊಳೋ ಎಂದು ಅಳು, ಧಾರಾಕಾರವಾಗಿ ಕಣ್ಣೀರು ಸುರಿಸು
(ಕಂಡುಗ = ಧಾನ್ಯದ ಒಂದು ಅಳತೆಯ ಪ್ರಮಾಣ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಬೆಂಗಳೂರು ಜಿಲ್ಲೆಯ ಮಾಗಡಿ ತಾಲ್ಲೂಕಿನ ನನ್ನ ಊರಿನ ಸುತ್ತಮುತ್ತ ಮುನ್ನೂರ ಇಪ್ಪತ್ತು ಸೇರಿಗೆ ಕಂಡುಗ ಎಂದು ಕರೆಯುತ್ತಾರೆ)
ಪ್ರ :ಅಪ್ಪನ ಮುಖ ಕಂಡ ತಕ್ಷಣ, ಮಗಳು ಕಣ್ಣಲ್ಲಿ ಕಂಡುಗ ಸುರಿಸಿದಳು.
೫೨೪. ಕಣ್ಣಲ್ಲಿ ಜೀವ ಹಿಡಕೊಂಡಿರು = ಸಾವಿನೊಡನೆ ಹೋರಾಡು, ಯಮನೊಡನೆ ಚೌಕಾಸಿ ಮಾಡುತ್ತಿರು.
ಸಾಮಾನ್ಯವಾಗಿ ಮನುಷ್ಯ ಸಾಯುವಾಗ ಜೀವ (ಪ್ರಾಣ) ಬಾಯಿಯ ಮೂಲಕ ಹಾರಿ ಹೋಗುತ್ತದೆ ಎಂದೂ, ಕಣ್ಣಿನ ಮುಖಾಂತರ ಹಾರಿ ಹೋಗುತ್ತದೆ ಎಂದು ಜನಪದರ ನಂಬಿಕೆ. ಹಾಗೆ ಹಾರಿ ಹೋಗುವಾಗ ಅವು ವಿಕಾರ ರೂಪು ತಾಳುತ್ತವೆ ಎಂದೇ ಹೆಣದ ಕಣ್ಣಿಗೆ ಬಾಯಿಗೆ ಅಕ್ಕಿಕಾಳನ್ನು ತುಂಬುತ್ತಾರೆ ಅಥವಾ ತಂಬುಲವನ್ನು ಇಡುತ್ತಾರೆ. ನಂಬಿಕೆ ಮೂಲವಾದ ನುಡಿಗಟ್ಟಿದು.
ಪ್ರ : ದೂರದಲ್ಲಿರೋ ಮಗ ಬರಲಿ ಅಂತ ಕಣ್ಣಲ್ಲಿ ಜೀವ ಹಿಡಕೊಂಡಿದ್ದ ನಿಮ್ಮಪ್ಪ.
೫೨೫. ಕಣ್ಣಲ್ಲಿ ರಕ್ತ ಬರಿಸು = ಚಿತ್ರ ಹಿಂಸೆ ಕೊಡು
ಪ್ರ : ಅತ್ತೆ ಮಾವ ನಾದಿನಿ ಕೂಡಿಕೊಂಡು, ಕಣ್ಣೀರಿಗೆ ಬದಲಾಗಿ ನನ್ನ ಕಣ್ಣಲ್ಲಿ ರಕ್ತ ಬರಿಸಿದರು.
೫೨೬. ಕಣ್ಣಾಗೆ ನೋಡದಿರು ಕೈಯಾಗೆ ಹಿಡಿಯದಿರು = ಅನಾದರದಿಂದ ಕಾಣು, ಅಲಕ್ಷಿಸು
(ಕಣ್ಣಾಗೆ < ಕಣ್ಣೊಳಗೆ, ಕೈಗಾಗೆ < ಕೈಯೊಳಗೆ)
ಪ್ರ : ಆ ತಬ್ಬಲಿ ಮಗಾನ ಯಾರೂ ಕಣ್ಣಾಗೆ ನೋಡಲಿಲ್ಲ, ಕೈಯಾಗೆ ಹಿಡೀಲಿಲ್ಲ.
೫೨೭. ಕಣ್ಣಾಗೆಬಾಯಾಗೆನೀರುಕಿತ್ತುಕೊಳ್ಳು = ತಡೆದುಕೊಳ್ಳಲಾಗದಷ್ಟುಖಾರವಿರು
ಪ್ರ : ಉತ್ತರಕರ್ನಾಟಕದಕಡೆಯಸಾರಿನಲ್ಲಿನಾವುಉಂಡ್ರೆಕಣ್ಣಾಗೆಬಾಯಾಗೆನೀರುಕಿತ್ತುಕೊಳ್ತದೆ.
೫೨೮. ಕಣ್ಣಾಡಿಸು = ಸ್ಥೂಲವಾಗಿನೋಡು
ಪ್ರ: ನಾನುಒಂದುಸರಿಕಣ್ಣಾಡಿಸಿದ್ದೇನೆ. ನೀನುಒಂದುಸಾರಿಕಣ್ಣಾಡಿಸುಬೇಕಾದರೆ.
೫೨೯. ಕಣಿಕೇಳು = ಶಾಸ್ತ್ರಕೇಳು, ಭವಿಷ್ಯಕೇಳು.
ಸಾಮಾನ್ಯವಾಗಿಕೊರವಂಜಿಗಳುಕಣಿಹೇಳುತ್ತಾರೆ. ಅವರುಕೊರಮಜನಾಂಗಕ್ಕೆಸೇರಿದವರು, ತಮಿಳುನಾಡಿನಮೂಲದವರು.
ಪ್ರ: ಗಾದೆ: ಹೆಣಹೊತ್ಕೊಂಡುಕಣಿಕೇಳಿದ್ಹಂಗೆ
೫೩೦. ಕಣಿಹೇಳು = ಪುರಾಣಹೇಳು, ಅಪ್ರಸ್ತುತವಾದುದನ್ನುಹೇಳು.
ಪ್ರ. ನನ್ನಹತ್ರಆಕಣಿಹೇಳಬೇಡ, ನಾನುಕೇಳೋಕೆತಯಾರಿಲ್ಲ.
೫೩೧. ಕಣ್ಣಿಅಗಡುಬಿಚ್ಚು = ಎತ್ತುಗಳನ್ನುನೊಗದಿಂದಬೇರೆಮಾಡು.
ಉಳುವುದಕ್ಕೋಅಥವಾಗಾಡಿಎಳೆಯುವುದಕ್ಕೋಎತ್ತುಗಳಹೆಗಲಮೇಲೆನೊಗವನ್ನಿಟ್ಟು, ನೊಗದಎರಡುಕಡೆಯಲ್ಲಿಯೂಇರುವಒಳ್ಳಂಗೂಟಗಳಒಳಭಾಗದಲ್ಲಿನೇತುಬಿದ್ದಿರುವಕಣ್ಣಿಅಗಡನ್ನುಎತ್ತಿನಕೊರಳಸುತ್ತತಂದುಅದರತುದಿಯನ್ನುಒಳ್ಳಂಗೂಟಕ್ಕೆಮಲಕುಅಥವಾಚಿಮರಹಾಕುತ್ತಾರೆ. ಈಕಣ್ಣಿಅಗಡಿಗೆಮಂಡ್ಯಜಿಲ್ಲೆಯಲ್ಲಿಜೊತ್ತಿಗೆಇನ್ನುತ್ತಾರೆ. ಈಕಣ್ಣಿಅಗಡುಎತ್ತಿನಕೊರಳನ್ನುಕೊಯ್ಯಬಹುದುಎಂದುಹಿಮ್ಮೇಣಿ (ರೂಪಾಯಿನಾಣ್ಯಗಳನ್ನುತುಂಬಿಸೊಂಟದಸುತ್ತಸುತ್ತಿಕೊಳ್ಳುತ್ತಿದ್ದಚೀಲ) ಅಥವಾಪಟ್ಟಣಿ (Belt) (ಪೋಲೀಸರುಹೆಗಲಮೇಲಿಂದಎದೆಯಮೇಲೆಹಾಕಿಕೊಂಡಿರುವಪಟ್ಟಿಯಂತೆಅಗಲವಾಗಿರುವಹೆಣೆಗೆಯಜಡೆಹಗ್ಗವಿರುತ್ತದೆ. ಒಳ್ಳಂಗೂಟಕ್ಕೆಚಿಮರಹಾಕಲುಅನುವಾಗುವಂತೆತುದಿಯಲ್ಲಿಮಾತ್ರಹುರಿಯಂತಹಸಣ್ಣಹಗ್ಗವಿರುತ್ತದೆ. ಅದಕ್ಕೆಉಕ್ಕಡಎನ್ನುತ್ತಾರೆ. ಆದ್ದರಿಂದಕಣ್ಣಿಉಕ್ಕಡಎಂಬುದೇಕಣ್ಣಿಅಗಡುಆಗಿರಬಹುದುಎಂದುಊಹಿಸುವಂತಾಗುತ್ತದೆ. ಆದರೆಕನಕದಾಸರುತಮ್ಮಮೋಹತರಂಗಿಣಿಯಲ್ಲಿಹಗ್ಗಎನ್ನುವಅರ್ಥದಲ್ಲಿಹಂಗಡಎಂಬಶಬ್ದಬಳಸಿದ್ದಾರೆ. ಆದ್ದರಿಂದಕಣ್ಣಿಹಂಗಡಎಂಬಜೋಡುನುಡಿಯೇಕ್ರಮೇಣಕಣ್ಣಿಅಗಡಾಗಿರಬೇಕುಎಂಬುದುಹೆಚ್ಚುಸಂಭವನೀಯವಾಗಿತೋರುತ್ತದೆ, ಸಹಜವೂವಿಹಿತವೂಎನ್ನಿಸುತ್ತದೆ.
ಪ್ರ: ನೊಗದಲ್ಲೇಬಿಡಬೇಡ, ಕಣ್ಣಿಅಗಡುಬಿಚ್ಚಿ, ತಂದುಒಳಗಿಕ್ಕು.
೫೩೨. ಕಣ್ಣಿಗೆಎಣ್ಣೆಹುಯ್ಕೊಂಡು = ಅವಿರತವಾಗಿಓದು, ಕಣ್ಣಿರಿಬರುವಷ್ಟುಓದು.
ಉರಿಯುವಕಣ್ಣುತಣ್ಣಗಾಗಲೆಂದುಕಣ್ಣಿಗೆಹರಳೆಣ್ಣೆಯನ್ನುಹಚ್ಚಿಕೊಳ್ಳುವಪದ್ಧತಿಹಳ್ಳಿಗಳಲ್ಲಿಉಮಟು. ಕಣ್ಣುರಿಬಂದರೂಅಧ್ಯಯನವನ್ನುನಿಲ್ಲಿಸದೆ, ಕಣ್ಣಿನಕುಣಿಕೆಗೆಎಣ್ಣೆಹಚ್ಚಿಕೊಂಡುಓದನ್ನುಮುಂದುವರಿಸುವಮುತುವರ್ಜಿಅಥವಾದೃಢಸಂಕಲ್ಪವನ್ನುನಾವಿಲ್ಲಿಕಾಣುತ್ತೇವೆ.
ಪ್ರ: ಅವನುಕಣ್ಣಿಗೆಎಣ್ಣೆಹುಯ್ಕೊಂಡುಓದಿಮುಂದೆಬಂದಿದ್ದಾರೆಅನ್ನೋದುಊರ್ಗೇಗೊತ್ತು.
೫೩೩. ಕಣ್ಣಿಗೊತ್ತಿಕೊಳ್ಳುವಂತಿರು = ತುಂಬಸುಂದರವಾಗಿರು, ಪವಿತ್ರವಾಗಿರು.
ದೇವರಪ್ರಸಾದವನ್ನುಪವಿತ್ರವೆಂದುಭಕ್ತಿಯಿಂದಕಣ್ಣಿಗೆಒತ್ತಿಕೊಂಡುಬಳಿಕಬಾಯಿಗೆಹಾಕಿಕೊಂಡುತಿನ್ನುವಪರಿಪಾಠವಿದೆ. ಆಹಿನ್ನಲೆಈನುಡಿಗಟ್ಟಿಗೆಮೂಲ.
ಪ್ರ: ಅಂಥತಿದ್ದಿದಗೊಂಬೆಯಂಥಹೆಣ್ಣುಸಿಕ್ಕಿದರೆಕಣ್ಣಿಗೊತ್ತಿಕೊಂಡುಮದುವೆಯಾಗಬಹುದು.
೫೩೪. ಕಣ್ಣಿಗೆಅಚ್ಚೊತ್ತಿದಂತಿರು = ಚೆನ್ನಾಗಿನೆನಪಿರು (ಅಚ್ಚೊತ್ತು = ಮುದ್ರೆಯೊತ್ತು)
ಪ್ರ: ಜಾತ್ರೆಯಲ್ಲಿಮೊದಲಬಾರಿಗೆನಿನ್ನನ್ನುನೋಡಿದ್ದುಇವತ್ತಿಗೂಕಣ್ಣಿಗೆಅಚ್ಚೊತ್ತಿದಂತಿದೆ.
೫೩೫. ಕಣ್ಣಿಗೆಹಬ್ಬವಾಗು = ಸಂತೋಷವಾಗು, ಸಡಗರವಾಗು.
ಪ್ರ: ಅವಳೇಎದುರುಸಿಕ್ಕಿದಾಗನಮ್ಮಕಣ್ಣಿಗೆಹಬ್ಬವಾಯ್ತು.
೫೩೬. ಕಣ್ಣಿಹಾಕು = ಕಳಚಿಕೊಳ್ಳು, ಸಹಕರಿಸದಿರು.
(ಕಣ್ಣಿ = ಹಗ್ಗ) ನೇಗಿಲಿಗೆಅಥವಾಗಾಡಿಗೆಕಟ್ಟಿದಎತ್ತುಗಳಕೊರಳಿಗೆಕಣ್ಣಿಅಗಡಿನಿಂದಸುತ್ತಿನೊಗದಒಳ್ಳಂಗೂಟಕ್ಕೆಮಲಕುಹಾಕುತ್ತಾರೆ. ಎಳೆಯಲಾರದಎತ್ತುಗಳುಸಾಹಸಪಟ್ಟುನೊಗವನ್ನುಹೆಗಲಿನಿಂದಕೆಳಕ್ಕೆಹಾಕಿನಿಂತುಬಿಡುತ್ತವೆ. ಇದಕ್ಕೆಕಣ್ಣಿಹಾಕುವುದುಎಂದುಹೇಳುತ್ತಾರೆ. ಅಂದರೆಸಹಕರಿಸದಿರು, ಹದಿಯದಿರುಎಂಬುದುಇದರಿಂದವ್ಯಕ್ತವಾಗುತ್ತದೆ. ರೈತಾಪಿಜನರವ್ಯವಸಾಯದಹಿನ್ನಲೆಈನುಡಿಗಟ್ಟಿನಬೆನ್ನಿಗಿದೆ.
ಪ್ರ: ಮೊದಲಿಂದಲೂ ನಮ್ಮ ಪರ ಇದ್ದೋನು, ಇವತ್ತು ಇದ್ದಕ್ಕಿದ್ದ ಹಾಗೆ ಕಣ್ಣಿ ಹಾಕಿಬಿಟ್ಟ.
೫೩೭. ಕಣ್ಣೀರಿನಲ್ಲಿ ಕೈತೊಳಸು = ಹಿಂಸಿಸು, ಗೋಳು ಹುಯ್ದುಕೊಳ್ಳು
ಪ್ರ : ನನ್ನನ್ನು ಕಣ್ಣೀರಿನಿಂದ ಕೈತೊಳಿಸಿದ ನಮ್ಮತ್ತೆ, ಈಗ ಮಗಳನ್ನು ಕಳೆದುಕೊಂಡು ತಾನೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾಳೆ.
೫೩೮. ಕಣ್ಣುರಿ ಬರು = ಹೊಟ್ಟೆಕಿಚ್ಚುಂಟಾಗು
ಪ್ರ : ಒಬ್ಬರು ಬದುಕಿದರೆ ಒಬ್ಬರಿಗೆ ಕಣ್ಣುರಿ ಬರ್ತದೆ, ಏನು ಮಾಡೋದು?
೫೩೯. ಕಣ್ಣು ಕಣ್ಣು ಬಿಡು = ಅಸಾಹಯತೆಯಿಂದ ನರಳು, ಗೊತ್ತಾಗದೆ ಪರದಾಡು
ಪ್ರ : ಅವನು ಪ್ರಶ್ನೆ ಹಿಂದೆ ಪ್ರಶ್ನೆ ಹಾಕಿದಾಗ, ನಾನು ಕಣ್ಣು ಕಣ್ಣು ಬಿಡುವಂತಾಯ್ತು.
೫೪೦. ಕಣ್ಣು ಕುಕ್ಕು = ಕೋರೈಸು, ಕಣ್ಣಿಗೆ ರಾಚು
ಪ್ರ : ಕಣ್ಣು ಕುಕ್ಕುವ ಆ ವೈಭವ ಕಂಡು ಒಮ್ಮೆಗೇ ಕುಕ್ಕುರುಬಿದ್ದ
೫೪೧. ಕಣ್ಣು ಕೆಂಪಾಗು = ಸಿಟ್ಟು ಬರು
ಪ್ರ : ಮಗನ ವರ್ತನೆಯನ್ನು ಕಂಡು ಅಪ್ಪನ ಕಣ್ಣು ಕೆಂಪಗಾದವು.
೫೪೨. ಕಣ್ಣು ಗುಡ್ಡೆ ಮೇಲಕ್ಕೆ ಹೋಗು = ಗುಟುಕು ಜೀವವಾಗು, ಸಾವು ಸನ್ನಿಹಿತವಾಗು
ಪ್ರ : ಅದನ್ನೆಲ್ಲ ಮಾಡಿ ಮುಗುಸುವಾಗ್ಗೆ, ಕಣ್ಣುಗುಡ್ಡೆ ಮೇಲಕ್ಕೆ ಹೋದವು,.
೫೪೩. ಕಣ್ಣು ನಗರೆ ಹಣ್ಣಾಗು = ಕೋಪದಿಂದ ಕಣ್ಣು ಕೆಂಪಗಾಗು
(ನಗರೆ ಹಣ್ಣು = ಫಲವಿಶೇಷ)
ಪ್ರ : ಮಗನೇ ಎದುರು ಬಿದ್ದಾಗ ಅಪ್ಪನ ಕಣ್ಣು ನಗರೆ ಹಣ್ಣಾದವು.
೫೪೪. ಕಣ್ಣು ಬಾಯಿ ಬಿಡು = ಇಕ್ಕಟ್ಟಿನಿಂದ ಒದ್ದಾಡು, ದೈನ್ಯತೆಯಿಂದ ನರಳು
ಪ್ರ : ಇಷ್ಟರಲ್ಲೇ ಅವನು ಕಣ್ಣು ಬಾಯಿ ಬಿಡುವಂಥ ಸ್ಥಿತಿಗೆ ಬರದಿದ್ರೆ ಕೇಳು
೫೪೫. ಕಣ್ಣು ಬಿಟ್ರೆ ಬಾಯಿ ಬಿಡು = ಭಯಪಡು, ತಗ್ಗಿಬಗ್ಗಿ ನಡೆ
ಪ್ರ : ಕಣ್ಣು ಬಿಟ್ರೆ ಬಾಯಿ ಬಿಡೋ ಹಾಗೆ ಮಕ್ಕಳನ್ನು ಹದ್‌ಬಸ್ತಿನಲ್ಲಿ ಬೆಳಸಿದ್ದಾನೆ.
೫೪೬. ಕಣ್ಣು ಬಿಡದಿರು = ಅನುಭವ ಇಲ್ಲದಿರು
ತಾಯಿಯ ಗರ್ಭದಿಂದ ಹೊರ ಬಂದ ಮಗು ಕೂಡಲೇ ಕಣ್ಣು ಬಿಡುವುದಿಲ್ಲ ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಇನ್ನೂ ಸರಿಯಾಗಿ ಕಣ್ಣು ಬಿಟ್ಟಿಲ್ಲ, ತಲೆಯೆಲ್ಲ ಮಾತಾಡ್ತಾನೆ.
೫೪೭. ಕಣ್ಣು ಬಿಡು = ಕೃಪೆ ತೋರು, ಅನುಗ್ರಹಿಸು,
ಪ್ರ : ದೇವರು ಕಣ್ಣು ಬಿಟ್ಟ, ನನ್ನ ಕಷ್ಟ ದೂರಾಯ್ತು
೫೪೮. ಕಣ್ಣು ಮಿಟುಕಿಸೋದರೊಳಗೆ ಮಣ್ಣು ಮುಕ್ಕಿಸು = ಕ್ಷಣಾರ್ಧದದಲ್ಲಿ ಮೋಸ ಮಾಡು.
ಪ್ರ : ಅಲ್ಲಿ ನೋಡು ಅಂತ ತೋರಿಸಿ ಕಣ್ಣು ಮಿಟುಕಿಸೋದರೊಳಗೆ ಮಣ್ಣು ಮುಕ್ಕಿಸಿದ.
೫೪೯. ಕಣ್ಣು ಮುಚ್ಚಾಲೆಯಾಟವಾಡು = ಮರೆಮಾಜು, ಕಣ್ಣುತಪ್ಪಿಸಿ ದ್ರೋಹ ಬಗೆ
ಇದು ಮಕ್ಕಳ ಆಟ. ಒಬ್ಬರ ಕಣ್ಮುಚ್ಚೆ, ಉಳಿದ ಮಕ್ಕಳೆಲ್ಲ ಅವಿತುಕೊಂಡ ಮೇಲೆ “ಕಣ್ಣಾಮುಚ್ಚೇ ಕಾಡಾಗೊಡೆ, ಉದ್ದಿನ ಮೂಟೆ ಉರುಳೇ ಹೋಯ್ತು…. ಬಿಟ್ಟೇ ಬಿಟ್ಟೆ” ಎಂದು ಹಾಡು ಹೇಳುತ್ತಾ ಮುಚ್ಚಿದ ಕೈಯನ್ನು ತೆಗೆದು, ಬಚ್ಚಿಟ್ಟುಕೊಂಡವರನ್ನು ಹುಡುಕಲು ಕಳಿಸುವ ಆಟ.
ಪ್ರ : ನೀನು ಆಡ್ತಿರೋ ಕಣ್ಣು ಮುಚ್ಚಾಲೆಯಾಟ ನನಗೆ ಗೊತ್ತಿಲ್ಲ ಅಂದ್ಕೊಂಡಿರಬಹುದು, ಆದರೆ ನನಗೆಲ್ಲ ಗೊತ್ತು

1 ಕಾಮೆಂಟ್‌: